Tag: Money seize

  • ʻಕೈʼ ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣ – ಜೈಲಾ, ಬೇಲಾ; ಇಂದು ನಿರ್ಧಾರ?

    ʻಕೈʼ ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣ – ಜೈಲಾ, ಬೇಲಾ; ಇಂದು ನಿರ್ಧಾರ?

    ಬೆಂಗಳೂರು: ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ಪ್ರಕರಣದಲ್ಲಿ (Online Betting Case) ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಕೆಸಿ ವಿರೇಂದ್ರ ಪಪ್ಪಿಗೆ (KC Veerendra Puppy) ಜೈಲಾ, ಬೇಲಾ ಅನ್ನೋದು ಇಂದು ನಿರ್ಧಾರವಾಗಲಿದೆ.

    ಮೊದಲ ಬಾರಿಗೆ 5 ದಿನ 2ನೇ ಬಾರಿಗೆ 6 ದಿನ ಇಡಿ ಕಸ್ಟಡಿಗೆ ಪಡೆದಿತ್ತು. ಇಂದು ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಿದೆ. ಒಂದು ವೇಳೆ ಇಡಿ ಕಸ್ಟಡಿಗೆ ಪಡೆಯದಿದ್ದರೆ ಜೈಲಿಗೆ ತೆರಳುವ ಸಾಧ್ಯತೆ ಇದೆ. ಇದನ್ನೂ ಓದಿ: ‘ಕೈ’ ಶಾಸಕ ವೀರೇಂದ್ರ ಪಪ್ಪಿ ಮನೆ ಮೇಲೆ ಮತ್ತೆ ಇ.ಡಿ ದಾಳಿ – ಆರು ಐಷಾರಾಮಿ ಕಾರುಗಳು ವಶಕ್ಕೆ

    55 ಕೋಟಿ ರೂ. ನಗದು ಫ್ರೀಜ್:
    ಈಗಾಗಲೇ ಪಪ್ಪಿ ಬ್ಯಾಂಕ್‌ ಖಾತೆಯಿಂದ 55 ಕೋಟಿ ನಗದು ಫ್ರೀಜ್‌ ಮಾಡಿರುವುದಾಗಿ ಇಡಿ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ ಕೆ.ಸಿ ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳಲ್ಲಿ ಅಂದಾಜು 40.69 ಕೋಟಿ ನಗದು ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. (ಅಂದಾಜು) ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.

    ಜೊತೆಗೆ 5 ಐಷಾರಾಮಿ ಕಾರುಗಳನ್ನೂ ಸೀಜ್‌ ಮಾಡಲಾಗಿದೆ. ಹೀಗಾಗಿ ಹಣದ ಮೂಲ ಪತ್ತೆಗಾಗಿ ಮತ್ತೆ ಕಸ್ಟಡಿಗೆ ಕೇಳಲು ಇಡಿ ಪ್ಲ್ಯಾನ್‌ ಮಾಡಿಕೊಂಡಿದೆ. ಒಂದು ವೇಳೆ ಕಸ್ಟಡಿಗೆ ಕೇಳದಿದ್ರೆ ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಕಳಿಸಲಿದೆ. ಇದನ್ನೂ ಓದಿ: ಕೊಲೆ, ಸುಲಿಗೆ ಸೇರಿ 18 ಪ್ರಕರಣದಲ್ಲಿ ಬೇಕಾಗಿದ್ದ ಬಿಹಾರದ ಶಂಕಿತ ನಕ್ಸಲ್‌ ರಾಯಚೂರಲ್ಲಿ ಅರೆಸ್ಟ್‌

    ಏನಿದು ಪ್ರಕರಣ?
    ಗೇಮಿಂಗ್ ಆ್ಯಪ್‌ಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ, ಅಕ್ರಮ ಆಸ್ತಿ ಮತ್ತು ತೆರಿಗೆ ವಂಚನೆ ಆರೋಪ ಪಪ್ಪಿ ವಿರುದ್ಧ ಕೇಳಿಬಂದಿತ್ತು. ಈ ಕುರಿತು ಗೋವಾದಲ್ಲಿ 2 ಪ್ರಕರಣ ದಾಖಲಾಗಿತ್ತು. ಇದನ್ನಾಧರಿಸಿ ಇಡಿ ದಾಳಿ (ED Raid) ನಡೆಸಿತ್ತು. ಇದನ್ನೂ ಓದಿ: ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅರೆಸ್ಟ್

  • ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣ – 55 ಕೋಟಿ ರೂ. ನಗದು ಫ್ರೀಜ್ ಮಾಡಿದ ಇ.ಡಿ

    ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣ – 55 ಕೋಟಿ ರೂ. ನಗದು ಫ್ರೀಜ್ ಮಾಡಿದ ಇ.ಡಿ

    ಬೆಂಗಳೂರು: ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ (Online Betting) ಜಾರಿ ನಿರ್ದೇಶನಾಲಯದಿಂದ (ED) ಶಾಸಕ ಕೆ ಸಿ ವಿರೇಂದ್ರ (KC Veerendra Pappi) ಬಂಧನ ಪ್ರಕರಣ ಸಂಬಂಧ ಬರೋಬ್ಬರಿ 55 ಕೋಟಿ ರೂ. ನಗದು ಫ್ರೀಜ್ ಮಾಡಲಾಗಿದೆ.

    ಈ ಬಗ್ಗೆ ಇಡಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಮಂಗಳವಾರ ಚಳ್ಳಕೆರೆ, ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿ ವೇಳೆ ವೀರೆಂದ್ರಗೆ ಸೇರಿದ ಕೋಟ್ಯಂತರ ರೂ. ಹಣ ಹಾಗೂ ಐಷಾರಾಮಿ ಐದು ಕಾರುಗಳನ್ನ ಫ್ರೀಜ್ ಮಾಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: Bengaluru| ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ಒಂದೂವರೆ ವರ್ಷದ ಮಗು ದುರ್ಮರಣ

    ಅಲ್ಲದೇ ಕೆ.ಸಿ. ವೀರೇಂದ್ರ ಅವರ 9 ಬ್ಯಾಂಕ್ ಖಾತೆಗಳಲ್ಲಿ ಅಂದಾಜು 40.69 ಕೋಟಿ ರೂ. ಪತ್ತೆಯಾಗಿದ್ದು, 262 ಮ್ಯೂಲ್ ಖಾತೆಗಳಲ್ಲಿ ಒಟ್ಟು 14.46 ಕೋಟಿ ರೂ. (ಅಂದಾಜು) ಸೇರಿದಂತೆ 55 ಕೋಟಿ ರೂ. ಹಣವನ್ನು ಇಡಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ಇದನ್ನೂ ಓದಿ: ಇಫ್ತಾರ್ ಕೂಟಕ್ಕೆ ಸಿಎಂ ಟೋಪಿ ಧರಿಸಿ ಹೋಗುವುದಿಲ್ಲವೇ? – ಸಿದ್ದರಾಮಯ್ಯಗೆ ಜೋಶಿ ತಿರುಗೇಟು

  • ‘ಕೈ’ ನಾಯಕರಿಗೆ ಸೇರಿದ ಕಾರಿನಲ್ಲಿ 2 ಕೋಟಿಗೂ ಅಧಿಕ ಹಣ ಪತ್ತೆ – ಕಾರು ಸಮೇತ ಹಣ ಸೀಜ್

    ‘ಕೈ’ ನಾಯಕರಿಗೆ ಸೇರಿದ ಕಾರಿನಲ್ಲಿ 2 ಕೋಟಿಗೂ ಅಧಿಕ ಹಣ ಪತ್ತೆ – ಕಾರು ಸಮೇತ ಹಣ ಸೀಜ್

    ಕಲಬುರಗಿ: ಜಿಲ್ಲೆಯಲ್ಲಿ ಕುರುಡು ಕಾಂಚಾಣ ಭಾರೀ ಸದ್ದು ಮಾಡಿದ್ದು, ಆದಾಯ ತೆರಿಗೆ (Income Tax) ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ‘ಕೈ’ (Congress) ನಾಯಕರಿಗೆ ಸೇರಿದ ಕಾರಿನಲ್ಲಿ ಪತ್ತೆಯಾದ 2 ಕೋಟಿಗೂ ಅಧಿಕ ಹಣವನ್ನು ಸೀಜ್ (Money Seize) ಮಾಡಿದ್ದಾರೆ.

    ಕಲಬುರಗಿ (Kalaburagi) ರೈಲ್ವೆ ನಿಲ್ದಾಣದಿಂದ ಹಣ ಸಾಗಾಟ ಮಾಡುತ್ತಿದ್ದ ವೇಳೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೇರೆ ರಾಜ್ಯದಿಂದ ರೈಲು ಮೂಲಕ ಕಲಬುರಗಿ ರೈಲು ನಿಲ್ದಾಣಕ್ಕೆ ಹಣ ಬಂದಿತ್ತು. ರೈಲ್ವೆ ನಿಲ್ದಾಣದಿಂದ ಇನ್ನೋವಾ ಕಾರಿನಲ್ಲಿ ಹಣ ಸಾಗಾಟಕ್ಕೆ ಯತ್ನಿಸಿದ ಸಂದರ್ಭ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್‌ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ

    ಖಚಿತ ಮಾಹಿತಿಯ ಮೇರೆಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಕಾರು ಸಮೇತ ಹಣವನ್ನು ಸೀಜ್ ಮಾಡಿದ್ದು, ಕಲಬುರಗಿಯ ಖರ್ಗೆ ಸರ್ಕಲ್ ಬಳಿ ಇರುವ ಆದಾಯ ತೆರಿಗೆ ಇಲಾಖೆಯ ಕಚೇರಿಯಲ್ಲಿ ಹಣದ ಸಮೇತ ವಾಹನ ಸೀಜ್ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಯಲ್ಲಿ ಸೈನಿಕರು ಸತ್ತಾಗ ಮಂಗಳಸೂತ್ರ ಕಿತ್ತುಕೊಂಡಿದ್ಯಾರು: ಬಿ.ಕೆ ಹರಿಪ್ರಸಾದ್ ಪ್ರಶ್ನೆ

  • ಬೆಂಗಳೂರಿನ ಪ್ರತ್ಯೇಕ ಕಡೆ ಭರ್ಜರಿ ಬೇಟೆ; 5.20 ಲಕ್ಷ ನಗದು, 302 ಕುಕ್ಕರ್‌ ವಶಕ್ಕೆ

    ಬೆಂಗಳೂರಿನ ಪ್ರತ್ಯೇಕ ಕಡೆ ಭರ್ಜರಿ ಬೇಟೆ; 5.20 ಲಕ್ಷ ನಗದು, 302 ಕುಕ್ಕರ್‌ ವಶಕ್ಕೆ

    ಬೆಂಗಳೂರು: ಲೋಕಸಭಾ ಚುನಾವಣೆ ಹೊತ್ತಲ್ಲಿ ಚುನಾವಣಾ ಅಧಿಕಾರಿಗಳಿಂದ ಭರ್ಜರಿ ಬೇಟೆ ನಡೆಯುತ್ತಿದೆ. ರಾಜಧಾನಿಯ ಎರಡು ಪ್ರತ್ಯೇಕ ಕಡೆಗಳಲ್ಲಿ ಲಕ್ಷಾಂತರ ರೂ. ಹಣ ಮತ್ತು ನೂರಾರು ಕುಕ್ಕರ್‌ ವಶಕ್ಕೆ ಪಡೆಯಲಾಗಿದೆ.

    ಬೆಂಗಳೂರು ಹೊರವಲಯದ ಆನೇಕಲ್‌ ತಾಲೂಕಿನ ಜಿಗಣಿ ಬನ್ನೇರುಘಟ್ಟ ಮುಖ್ಯ ರಸ್ತೆಯ ಕೊಪ್ಪ ಚೆಕ್‌ಪೋಸ್ಟ್‌ ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 5.20 ಲಕ್ಷ ರೂ. ಹಣವನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸೇತುವೆಯಿಂದ ಬಸ್‌ ಕೆಳಗೆ ಬಿದ್ದು 5 ಮಂದಿ ಸಾವು

    ನಿನ್ನೆ ಚುನಾವಣೆ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಮಧು ಎಂಬವರು ಬ್ಯಾಂಕ್‌ನಿಂದ ಡ್ರಾ ಮಾಡಿ ಹಣ ತೆಗೆದುಕೊಂಡು ಹೋಗುತ್ತಿದ್ದರು. ಅತ್ತಿಬೆಲೆಯ ಜೆ.ಕೆ ಇಂಡಸ್ಟ್ರೀಸ್‌ಗೆ ತೆಗೆದುಕೊಂಡು ಹೋಗುತ್ತಿದ್ದ ಹಣ ಎನ್ನಲಾಗಿದೆ.

    ಚುನಾವಣೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಮಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಹಣ ಇತ್ತು. ಹಣಕ್ಕೆ ಸೂಕ್ತ ದಾಖಲೆ ನೀಡಿದ ಹಿನ್ನೆಲೆ ವಶಕ್ಕೆ ಪಡೆಯಲಾಗಿದೆ. ಜಿಗಣಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಹಣವನ್ನು ಸೀಜ್‌ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಬೆಂಗಳೂರಿನ ಕಂಪನಿಯಿಂದ ‘ಸೂರ್ಯ ತಿಲಕ ಯಂತ್ರ’ ಕೊಡುಗೆ – ಏನಿದರ ವೈಶಿಷ್ಟ್ಯ?

    ಮತ್ತೊಂದೆಡೆ, ಚುನಾವಣೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಕುಕ್ಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ನೆಲಮಂಗಲದ ಜಾಸ್‌ ಟೋಲ್‌ ಚೆಕ್‌ಪೋಸ್ಟ್‌ನಲ್ಲಿ 302 ಕುಕ್ಕರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

    ವಸ್ತುಗಳನ್ನು ಬೆಂಗಳೂರಿನಿಂದ ಹುಬ್ಬಳ್ಳಿಗೆ ಕ್ಯಾಂಟರ್ ವಾಹನ ಮೂಲಕ ಸಾಗಿಸಲಾಗುತ್ತಿತ್ತು. ಚಾಲಕ ಈರಣ್ಣ ಎಂಬಾತನನ್ನು ಪೊಲೀಸರು ವಿಚಾರಣೆ ನಡೆಸಿ, ಸುಮಾರು 4 ಲಕ್ಷ ರೂ. ಮೌಲ್ಯದ ಕುಕ್ಕರ್ ವಶಪಡಿಸಿಕೊಂಡಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ; ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ!

    ರಾಮನಗರಲ್ಲಿ 30 ಕೆಜಿಗೂ ಅಧಿಕ ಪ್ರಮಾಣದ ಚಿನ್ನ; ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ, ವಜ್ರ ಜಪ್ತಿ!

    ರಾಮನಗರ: ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಫುಲ್‌ ಅಲರ್ಟ್‌ ಆಗಿರುವ ಚುನಾವಣಾಧಿಕಾರಿಗಳು ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಕೋಟಿ ಕೋಟಿ ರೂ. ಬೆಲೆ ಬಾಳುವ ಚಿನ್ನ, ವಜ್ರ ಆಭರಣವನ್ನು ಜಪ್ತಿ ಮಾಡಿದ್ದಾರೆ. ರಾಮನಗರ, ದಾವಣಗೆರೆ ಜಿಲ್ಲೆಗಳಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ (Gold Jewelry), ಕಚ್ಚಾ ಚಿನ್ನ ಹಾಗೂ ವಜ್ರಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ರಾಮನಗರದ ಹೆಜ್ವಾಲ ಚೆಕ್‌ಪೋಸ್ಟ್‌ (Ramanagara Hejwala Checkpost) ಬಳಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ, 30 ಕೆಜಿಗೂ ಹೆಚ್ಚು ಚಿನ್ನ, 10 ಕೆಜಿಯಷ್ಟು ಬೆಳ್ಳಿಯನ್ನ ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಬಾಡೂಟ ವಶಕ್ಕೆ ಪಡೆದ FST ಟೀಂ- ರಸ್ತೆಬದಿ ಚೆಲ್ಲಿದ ಊಟವನ್ನೇ ತಿಂದ ಕೆಲವರು!

    ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಮಲಬಾರ್‌ ಗೋಲ್ಡ್‌ & ಡೈಮಂಡ್‌ ಕಂಪನಿಗೆ ಸೇರಿದ್ದು ಎನ್ನಲಾದ ವಾಹನದಲ್ಲಿ ಚಿನ್ನ, ಬೆಳ್ಳಿ ಪತ್ತೆಯಾಗಿದೆ. ಸೂಕ್ತ ದಾಖಲೆ ಇಲ್ಲದಿದ್ದರಿಂದ ಅಧಿಕಾರಿಗಳು ಚಿನ್ನವನ್ನ ಜಪ್ತಿ ಮಾಡಿದ್ದಾರೆ. ಸೂಕ್ತ ದಾಖಲೆ ತೋರಿಸಿ, ಹಿಂಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Bengaluru: ಫ್ಲೈಓವರ್ ಮೇಲಿಂದ ಜಿಗಿದು ಕರ್ನಾಟಕ ವಿದ್ಯುತ್ ಕಾರ್ಖಾನೆ ಗುತ್ತಿಗೆ ನೌಕರ ಆತ್ಮಹತ್ಯೆ!

    ದಾವಣಗೆರೆಯಲ್ಲಿ 12.50 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸೀಜ್‌:
    ಮತ್ತೊಂದು ಪ್ರಕರಣದಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 12.50 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ವಜ್ರವನ್ನು ದಾವಣಗೆರೆಯ ನಗರದ ಲೋಕಿಕೆರೆ ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದಿದ್ದಾರೆ. ವಿವಿಧ ಆಭರಣ ಅಂಗಡಿಗಳಿಗೆ ಸಾಗಿಸುತ್ತಿದ್ದ ಚಿನ್ನಾಭರಣವನ್ನು ಸೂಕ್ತ ದಾಖಲೆಗಳಿಲ್ಲದ ಕಾರಣ ವಶಕ್ಕೆ ಪಡೆಯಲಾಗಿದೆ. ಚುನಾವಣಾ ಅಧಿಕಾರಿ ರೇಣುಕಾ, ಕಮರ್ಷಿಯಲ್ ಟ್ಯಾಕ್ಸ್ ನ ಇಲಾಖೆ ಉಪ ಆಯುಕ್ತ ಮಂಜುನಾಥ್ ನೇತೃತ್ವದಲ್ಲಿ ಜಪ್ತಿ ಮಾಡಲಾಗಿದೆ.

  • ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    ಸಿಇಎನ್ ಪೊಲೀಸರ ಭರ್ಜರಿ ಬೇಟೆ – 2.93 ಕೋಟಿ ರೂ. ನಗದು ಜಪ್ತಿ

    – ಇಬ್ಬರು ವಶಕ್ಕೆ, ಟೊಯೊಟಾ ಕಾರು, ಮೊಬೈಲ್ ಜಪ್ತಿ

    ವಿಜಯಪುರ: ಚುನಾವಣಾ ನೀತಿ ಸಂಹಿತೆ (Code of Election Conduct) ಜಾರಿ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ವಿಜಯಪುರದಲ್ಲಿ (Vijayapura) ಸಿಇಎನ್ ಪೊಲೀಸರು (CEN Police) ಭರ್ಜರಿ ಬೇಟೆ ಆಡಿ ಒಂದಲ್ಲ, ಎರಡಲ್ಲ ಬರೋಬ್ಬರಿ 2.93 ಕೋಟಿ ರೂ. ನಗದನ್ನು ಜಪ್ತಿ ಮಾಡಿದ್ದಾರೆ.

    ಲೋಕಸಭಾ ಚುನಾವಣೆ (Lok Sabha Electon) ಹಿನ್ನೆಲೆ ಹೈದರಾಬಾದ್‌ನಿಂದ (Hyderabad) ಹುಬ್ಬಳ್ಳಿಗೆ ಟೊಯೊಟಾ ಕಾರಿನಲ್ಲಿ ಹಣ ಸಾಗಿಸಲಾಗುತ್ತಿತ್ತು. ಈ ವೇಳೆ ವಿಜಯಪುರ ನಗರದ ಸಿಂದಗಿ ಬೈಪಾಸ್ ಬಳಿ ತಪಾಸಣೆ ನಡೆಸಿ ನಗದನ್ನು ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಹನುಮಾನ್‌ ಚಾಲೀಸಾ ಕೇಸ್‌ – ಹಲ್ಲೆಗೆ ಒಳಗಾದ ಅಂಗಡಿ ಮಾಲೀಕನನ್ನೇ ವಶಕ್ಕೆ ಪಡೆದ ಪೊಲೀಸರು

    ಅಲ್ಲದೇ ಬಾಲಾಜಿ ನಿಕ್ಕಂ, ಸಚಿನ್ ಮೋಯಿತೆ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದವರಿಂದ 2.93 ಕೋಟಿ ರೂ. ನಗದು, ಟೊಯೊಟಾ ಕಾರು, ಎರಡು ಮೊಬೈಲ್ ಜಪ್ತಿಗೈದಿದ್ದಾರೆ. ಈ ಕುರಿತು ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಶ್ಚಿತಾರ್ಥದ ಬಳಿಕ ಮದುವೆಗೆ ನಕಾರ – ವಿಷ ಕುಡಿಸಿ ಯುವತಿಯ ಹತ್ಯೆಗೈದ ಮಾವ

  • ಬೆಂಗಳೂರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್‌

    ಬೆಂಗಳೂರಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣ ಸೀಜ್‌

    ಬೆಂಗಳೂರು: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಲಕ್ಷ ಲಕ್ಷ ಹಣವನ್ನು ಬೆಂಗಳೂರು ಪೊಲೀಸರು ಸೀಜ್‌ ಮಾಡಿದ್ದಾರೆ. ಉದ್ಯಮಿಯೊಬ್ಬರು ತಡರಾತ್ರಿ ಸಾಗಿಸುತ್ತಿದ್ದ ಹಣವನ್ನು ಚೆಕ್‌ಪೋಸ್ಟ್‌ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹೊಸೂರು ಮೂಲದ ನಾರಾಯಣ್ ಎಂಬ ವ್ಯಕ್ತಿಯಿಂದ ಹಣ ಸೀಜ್ ಮಾಡಲಾಗಿದೆ. ಕೋಳಿ ವ್ಯಾಪಾರ ಮಾಡುತ್ತಿದ್ದು, ಅಂಗಡಿಗಳಿಂದ ಹಣ ಕಲೆಕ್ಟ್ ಮಾಡಿಕೊಂಡು ಹೋಗುತ್ತಿದ್ದಾಗ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರ ಮುಂದೆ ನಾರಾಯಣ್ ಹೇಳಿಕೊಂಡಿದ್ದಾನೆ.

    ಸುಮಾರು 12.16 ಲಕ್ಷ ರೂ. ಹಣವನ್ನು ಅಶೋಕ್ ನಗರ ಠಾಣಾ ವ್ಯಾಪ್ತಿಯಲ್ಲಿ ಸೀಜ್ ಮಾಡಲಾಗಿದೆ. ಘಟನೆ ಸಂಬಂಧ ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಣ ಸಂಗ್ರಹ ಮಾಡಿರುವ ಬಗ್ಗೆ ದಾಖಲೆಗಳು ಇಲ್ಲದ ಕಾರಣ ಹಣ ಸೀಜ್ ಮಾಡಲಾಗಿದೆ. ನೆಲಮಂಗಲ ಟೌನ್ ಸ್ಟೇಷನ್ ವ್ಯಾಪ್ತಿಯಲ್ಲೂ ಹಣ ಸೀಜ್ ಆಗಿದೆ. ದಾಖಲೆ ಇಲ್ಲದ ಎಂಟು ಲಕ್ಷ ಹಣವನ್ನು ನೆಲಮಂಗಲ ಟೌನ್ ಸ್ಟೇಷನ್ ವ್ಯಾಪ್ತಿಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • ಐಟಿ ಭರ್ಜರಿ ಬೇಟೆ- ಬಾಕ್ಸ್‌ಗಳಲ್ಲಿ ಕಂತೆ ಕಂತೆ ಸಂಗ್ರಹಿಸಿಟ್ಟಿದ್ದ 42 ಕೋಟಿ ರೂ. ಸೀಜ್

    ಐಟಿ ಭರ್ಜರಿ ಬೇಟೆ- ಬಾಕ್ಸ್‌ಗಳಲ್ಲಿ ಕಂತೆ ಕಂತೆ ಸಂಗ್ರಹಿಸಿಟ್ಟಿದ್ದ 42 ಕೋಟಿ ರೂ. ಸೀಜ್

    ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಆದಾಯ ತೆರಿಗೆ ಇಲಾಖೆಯ (IT Raid in Bengaluru) ಅಧಿಕಾರಿಗಳಿಂದ ಭರ್ಜರಿ ಕಾರ್ಯಾಚರಣೆ ನಡೆದಿದೆ.

    ಬಿಬಿಎಂಪಿ (BBMP) ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಆರ್.ಅಂಬಿಕಾಪತಿ ಹಾಗೂ ಮಾಜಿ ಕಾರ್ಪೊರೇಟರ್ ಅಶ್ವಥಮ್ಮ ದಂಪತಿ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, 23 ಬಾಕ್ಸ್‍ಗಳಲ್ಲಿದ್ದ 42 ಕೋಟಿ ರೂಪಾಯಿ ಸೀಜ್ ಮಾಡಿದ್ದಾರೆ. ಅಶ್ವಥಮ್ಮ ಅವರು ವಾರ್ಡ್ ನಂಬರ್ 95ರಲ್ಲಿ ಕಾರ್ಪೋರೇಟರ್ ಆಗಿದ್ದು, ಇದೀಗ ಅವರ ಸುಲ್ತಾನ್ ಪಾಳ್ಯದ (Sultan Palya) ಮನೆಯ ಮೇಲೆ ಐಟಿ ದಾಳಿಯಾಗಿದೆ.

    ದಾಳಿ ವೇಳೆ ಮನೆಯ ಬೆಡ್‍ರೂಂನಲ್ಲಿ 42 ಕೋಟಿ ಹಣ ಸಿಕ್ಕಿದೆ. ಬಾಕ್ಸ್ ಗಳಲ್ಲಿ ಗರಿ ಗರಿ 500 ರೂಪಾಯಿ ನೋಟಿನ ಕಂತೆಯೇ ಪತ್ತೆಯಾಗಿದೆ. 23 ಬಾಕ್ಸ್ ನಲ್ಲಿ 42 ಕೋಟಿ ಹಣ ಸಿಕ್ಕಿದ್ದು, ಒಂದೊಂದು ಬಾಕ್ಸ್ ಅಲ್ಲೂ 1ಕೋಟಿ 65 ಲಕ್ಷ ಹಣ ಕೂಡಿಡಲಾಗಿತ್ತು. ಜಸ್ಟ್ 1 ಗಂಟೆ ಕಳೆದಿದ್ದರೆ ಹಣದ ಸಮೇತ ಎಸ್ಕೇಪ್ ಆಗುತ್ತಿದ್ದರು. ಕಾರಿನಲ್ಲಿ ತಮಿಳುನಾಡಿಗೆ (Tamilnadu) ಹಣ ಸಾಗಾಟ ಮಾಡಲು ತಯಾರು ಮಾಡಿದ್ದರು. ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ವಾಹನ ತಪಾಸಣೆ – 50 ಲಕ್ಷ ರೂ. ಎಗರಿಸಿದ ಕಳ್ಳರು

    ಸದ್ಯ ಐಟಿ ಅಧಿಕಾರಿಗಳು 42 ಕೋಟಿ ಹಣ ಸೀಜ್ ಮಾಡಿದ್ದು, ಇಡಿ (ED) ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಅಡಿ ಪ್ರಕರಣ ದಾಖಲಿಗೆ ಇಡಿ ತಯಾರಿ ನಡೆಸುತ್ತಿದೆ. ಕೆಲ ದಿನಗಳ ಹಿಂದಷ್ಟೇ ಸಿಎಂ ಭೇಟಿ ಆಗಿ ಬಾಕಿ ಬಿಲ್ ಬಿಡುಗಡೆಗೆ ಮನವಿ ಮಾಡಲಾಗಿತ್ತು. ಆಗಸ್ಟ್ 8 ರಂದು ಆರ್.ಅಂಬಿಕಾಪತಿಯವರು ಸಿದ್ದರಾಮಯ್ಯ (Siddaramaiah) ಭೇಟಿಯಾಗಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ATM ವಾಹನಗಳಲ್ಲಿ ಸಾಗುಸುತ್ತಿದ್ದ 4.75 ಕೋಟಿ ಹಣ ಸೀಜ್

    ATM ವಾಹನಗಳಲ್ಲಿ ಸಾಗುಸುತ್ತಿದ್ದ 4.75 ಕೋಟಿ ಹಣ ಸೀಜ್

    ಬೆಂಗಳೂರು: ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಎಟಿಎಂ ವಾಹನಗಳಲ್ಲಿ ಸಾಗಿಸುತ್ತಿದ್ದ 4.75 ಕೋಟಿ ರೂ. ಹಣವನ್ನು ಹೆಬ್ಬಗೋಡಿ ಪೊಲೀಸರು ಸೀಜ್ ಮಾಡಿದ್ದಾರೆ.

    ರೈಟರ್ಸ್ ಕಂಪನಿಯ ಮೂರು ವಾಹನಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ 10 ಲಕ್ಷದಷ್ಟು ಹೆಚ್ಚುವರಿ ಹಣ ಸಾಗಾಟ ಹಿನ್ನೆಲೆ ದೂರು ದಾಖಲಾಗಿತ್ತು. ಹಣ ಸಾಗಿಸಲು ಆರ್‌ಬಿಐ (RBI) ಮಾರ್ಗಸೂಚಿಯನ್ನು ಪಾಲನೆ ಮಾಡಿಲ್ಲ. ನಿಯಮ ಉಲ್ಲಂಘಿಸಿದ ಪರಿಣಾಮ ಎಟಿಎಂ ವಾಹನಗಳನ್ನು ವಶಕ್ಕೆ ಪಡೆದು ಹಣವನ್ನು ಸೀಜ್ ಮಾಡಲಾಗಿದೆ. ಇದನ್ನೂ ಓದಿ: ಪೊಲೀಸರ ಭರ್ಜರಿ ಭೇಟೆ – ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

    ಆರ್‌ಬಿಐ ಮಾರ್ಗಸೂಚಿ ಮೀರಿ ಹಲವು ಬ್ಯಾಂಕ್‌ಗಳ ಹಣವನ್ನು ಎಟಿಎಂ ವಾಹನಗಳಲ್ಲಿ ಸಾಗಿಸಲಾಗುತ್ತಿತ್ತು. ವೀರಸಂದ್ರ ಸಿಗ್ನಲ್ ಬಳಿಯ ಚೆಕ್‌ಪೋಸ್ಟ್ ಬಳಿ ಹಣವನ್ನು ಸೀಜ್ ಮಾಡಲಾಗಿದೆ.

    ಆರ್‌ಬಿಐ ಕ್ರಮದ ಪ್ರಕಾರ, ಒಟ್ಟು ಮೊತ್ತದ ಸ್ಕ್ಯಾನ್ ಜನರೇಟ್ ಆಗಿರಬೇಕು. ಆದರೆ ಇಲ್ಲಿ ಸಾಗಿಸುತ್ತಿದ್ದ ಮೂರು ವಾಹನಗಳಿಗೂ ಮೊತ್ತದ ಸ್ಕ್ಯಾನರ್ ಜೆನರೇಟ್ ಆಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಎಂಗೇಜ್ಮೆಂಟ್ ಆಗಿದ್ದವಳಿಂದಲೇ ಹತ್ಯೆಗೆ ಯತ್ನ- ಪ್ರಾಣಾಪಾಯದಿಂದ ಯುವಕ ಪಾರು

  • ಹುಣಸೂರಲ್ಲಿ ದಾಖಲೆಯಿಲ್ಲದೆ ಸಾಗಿಸ್ತಿದ್ದ 2 ಕೋಟಿ ರೂ. ಜಪ್ತಿ

    ಹುಣಸೂರಲ್ಲಿ ದಾಖಲೆಯಿಲ್ಲದೆ ಸಾಗಿಸ್ತಿದ್ದ 2 ಕೋಟಿ ರೂ. ಜಪ್ತಿ

    ಮೈಸೂರು: ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಚುನಾವಣಾಧಿಕಾರಿಗಳು ಅಕ್ರಮ ಹಣ, ಮದ್ಯ, ವಸ್ತುಗಳು ಸಾಗಿಸಬಾರದೆಂದು ವಾಹನಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ನಡುವೆ ಹುಣಸೂರು ಮನುಗನಹಳ್ಳಿ ಚೆಕ್ ಪೋಸ್ಟ್ ನಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 2 ಕೋಟಿ ರೂ. ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

    ಬೊಲೆರೋ ವಾಹನದಲ್ಲಿ ಈ ಹಣವನ್ನು ಸಾಗಿಸಲಾಗುತ್ತಿತ್ತು. ವಾಹನದಲ್ಲಿ 3 ಚೀಲಗಳಲ್ಲಿ ಹಣವನ್ನು ಇಟ್ಟುಕೊಂಡು ಕೊಂಡೊಯ್ಯಲಾಗುತ್ತಿತ್ತು. ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರು ಹಣದ ಜೊತೆ ಪ್ರಯಾಣ ಮಾಡುತ್ತಿದ್ದರು. ಪಿರಿಯಾಪಟ್ಟಣ ಬ್ಯಾಂಕಿಗೆ ಇದನ್ನು ಸಾಗಿಸುತ್ತಿರುವುದಾಗಿ ಬ್ಯಾಂಕ್ ನೌಕಕರು ಪೊಲೀಸರಿಗೆ ಹೇಳಿದ್ದಾರೆ.

    ಬ್ಯಾಂಕಿಗೆ ಹಣ ಸಾಗಿಸುವ ಮುನ್ನ ಚುನಾವಣಾಧಿಕಾರಿಗಳ ಅನುಮತಿ ಯಾಕೆ ಪಡೆಯಲಿಲ್ಲ? ಅದರಲ್ಲೂ ಗನ್ ಮ್ಯಾನ್ ಇಲ್ಲದೆ ಅಪಾರ ಪ್ರಮಾಣದ ಹಣ ಸಾಗಾಟ ಮಾಡುತ್ತಿರುವುದು ತಪ್ಪು. ಬ್ಯಾಂಕಿಗೆ ಸೇರಿದ ಹಣವನ್ನು ಚೀಲಗಳಲ್ಲಿ ಸಾಗಿಸುವ ಅವಶ್ಯಕತೆ ಏನು, ಸೂಕ್ತ ದಾಖಲೆ ಇಲ್ಲದೆ ಯಾಕೆ ಹಣ ಸಾಗಿಸುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಹಣ ಬಹುಶಃ ಉಪಚುನಾವಣೆಗೆ ಹಂಚಲು ಸಾಗಿಸುತ್ತಿದ್ದಾರಾ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

    ಈ ಸಂಬಂಧ ಎಂ.ಡಿ.ಸಿ.ಸಿ ಬ್ಯಾಂಕಿನ ಇಬ್ಬರು ನೌಕರರಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಈ ಹಣಕ್ಕೆ ಸೂಕ್ತ ದಾಖಲೆ ಒದಗಿಸುವಂತೆ ಚುನಾವಣಾಧಿಕಾರಿಗಳು ಸೂಚಿಸಿದ್ದಾರೆ.