Tag: Money Laundering

  • ಮನಿ ಲಾಂಡರಿಂಗ್ ಬೆದರಿಕೆ – ಶಿವಮೊಗ್ಗದ ವ್ಯಕ್ತಿಗೆ 26 ಲಕ್ಷ ವಂಚನೆ

    ಮನಿ ಲಾಂಡರಿಂಗ್ ಬೆದರಿಕೆ – ಶಿವಮೊಗ್ಗದ ವ್ಯಕ್ತಿಗೆ 26 ಲಕ್ಷ ವಂಚನೆ

    ಶಿವಮೊಗ್ಗ: ಮನಿ ಲಾಂಡರಿಂಗ್ (Money Laundering) ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬೆದರಿಕೆ ಹಾಕಿ, ಸೈಬರ್ ವಂಚಕರು (Cyber Fraud Case) ಶಿವಮೊಗ್ಗದ (Shivamogga) ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 26 ಲಕ್ಷ ರೂ. ವಂಚಿಸಿದ್ದಾರೆ.

    ವಂಚನೆಗೊಳಗಾದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡಿ, ತಾವು ಟೆಲಿಕಮ್ಯೂನಿಕೇಷನ್ ಸಂಸ್ಥೆಯಿಂದ ಮಾತನಾಡುತ್ತಿರುವುದಾಗಿ ಹೇಳಿದ್ದಾರೆ. ನಂತರ, ಸಿಮ್ ಕಾರ್ಡ್ ಬ್ಲಾಕ್ ಮಾಡುವುದಾಗಿ ಹೆದರಿಸಲಾಗಿದೆ. ಇದರ ಬೆನ್ನಲ್ಲೇ, ಅವರ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ. ಮನಿ ಲಾಂಡರಿಂಗ್ ಮತ್ತು ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಬೆದರಿಸಿದ್ದಾರೆ. ಬಳಿಕ ಮತ್ತೊಂದು ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ವಿಡಿಯೋ ಕರೆ ಬಂದಿದೆ. ಈ ಕರೆಯಲ್ಲಿ ಮಾತನಾಡಿದ ವ್ಯಕ್ತಿ, ತಾನು ಮುಂಬೈನ ಕೋಲಾಬಾ ಪೊಲೀಸ್ ಠಾಣೆಯಿಂದ ತನಿಖಾ ಅಧಿಕಾರಿ ಎಂದು ನಟಿಸಿ ಅರೆಸ್ಟ್ ಮಾಡುವ ಬೆದರಿಕೆ ಹಾಕಿದ್ದಾನೆ. ಇದನ್ನೂ ಓದಿ: ಆಂಧ್ರ ಬಸ್‌ ದುರಂತಕ್ಕೂ ಮುನ್ನ ಅಜಾಗರೂಕತೆಯಿಂದ ಬೈಕ್‌ ಚಾಲನೆ – ಎಣ್ಣೆ ಮತ್ತಲ್ಲಿದ್ನಾ ಸವಾರ?

    ಮತ್ತೊಬ್ಬ ವಂಚಕ ತಾನು ಇಡಿ ಅಧಿಕಾರಿಯೆಂದು ಪರಿಚಯಿಸಿಕೊಂಡು, ಜಡ್ಜ್ ರವರೊಂದಿಗೆ ಆನ್‌ಲೈನ್ ಮೀಟಿಂಗ್ ಮಾಡಿಸುವುದಾಗಿ ತಿಳಿಸಿದ್ದಾನೆ. ವಿಡಿಯೋ ಕರೆಯಲ್ಲಿ ಭಾಗಿಯಾದ ನ್ಯಾಯಾಧೀಶರ ಸೋಗಿನ ವ್ಯಕ್ತಿ, ತನಿಖೆಗಾಗಿ ಎಫ್‌ಡಿ ಮತ್ತು ಉಳಿತಾಯ ಖಾತೆಯಲ್ಲಿರುವ ಹಣವನ್ನು ‘ಸರ್ಕಾರಿ ಖಜಾನೆ’ ಖಾತೆಗೆ ವರ್ಗಾವಣೆ ಮಾಡುವಂತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚಿಸಿದ್ದಾನೆ. ಸೈಬರ್ ವಂಚಕರು ಹಣ ವರ್ಗಾವಣೆಗೆ ನಿರ್ದೇಶಿಸಿ, ʻಬ್ಯಾಂಕ್ ಖಾತೆಯ ವ್ಯವಹಾರ ಸರಿಯಾಗಿದ್ದರೆ, ನಿಮ್ಮ ಹಣವು ವಾಪಸ್ ಬರುತ್ತದೆ, ಇಲ್ಲದಿದ್ದರೆ ಬರುವುದಿಲ್ಲʼ ಎಂದು ನಂಬಿಸಿದ್ದಾರೆ.

    ಬ್ಯಾಂಕ್‌ನಲ್ಲಿ ಹಣ ವರ್ಗಾವಣೆ ಬಗ್ಗೆ ಪ್ರಶ್ನಿಸಿದರೆ, ʻಪಾರ್ಟನರ್‌ಶಿಪ್‌ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದೇನೆʼ ಎಂದು ಹೇಳುವಂತೆ ವಂಚಕರು ಸಲಹೆ ನೀಡಿದ್ದಾರೆ.
    ವಂಚಕರ ಸೂಚನೆಯಂತೆ, ದಿನಾಂಕ: 03-10-2025 ಮತ್ತು 04-10-2025 ರಂದು ಆರ್‌ಟಿಜಿಎಸ್ (RTGS) ಮೂಲಕ ಹಣವನ್ನು ವರ್ಗಾಯಿಸಿದ್ದಾರೆ. ತಾನು ನಿರಪರಾಧಿ ಎಂದು ಸಾಬೀತಾದರೆ ಹಣ ವಾಪಸ್ ಬರುತ್ತದೆ ಎಂದು ನಂಬಿಸಿ ಭದ್ರತಾ ಬಾಂಡ್ ಸಹ ನೀಡಿದ್ದಾರೆ. ಈ ರೀತಿ, ಪೊಲೀಸ್, ಇಡಿ ಅಧಿಕಾರಿ ಹಾಗೂ ನ್ಯಾಯಾಧೀಶರ ಸೋಗಿನಲ್ಲಿ ವಂಚಕರು ಒಟ್ಟು 26,00,000 ರೂ. ಹಣವನ್ನು ಮೋಸದಿಂದ ಹಣ ವರ್ಗಾಯಿಸಿಕೊಂಡಿದ್ದಾರೆ.

    ಬಳಿಕ ಯಾರಿಂದಲೂ ಸ್ಪಷ್ಟನೆ ಬರದೇ ಇದ್ದಿದ್ದರಿಂದ ಹಾಗೂ ಹಣ ವಾಪಸ್‌ ಆಗದೇ ಇದ್ದಿದ್ದರಿಂದ ಪರಿಶೀಲಿಸಿದಾಗ ವಂಚನೆಗೊಳಗಾಗಿದ್ದು ಗೊತ್ತಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತೆಯ ಖಾಸಗಿ ವೀಡಿಯೋ ಕದ್ದು ಹಂಚಿ ಬ್ಲ್ಯಾಕ್‌ಮೇಲ್‌ ಆರೋಪ; ಕಿರುತೆರೆ ನಟಿ ವಿರುದ್ಧ FIR

  • ಪೊಲೀಸ್ ಸೋಗಿನಲ್ಲಿ ಸುಲಿಗೆ – ನಕಲಿ ಪೊಲೀಸ್ ಅರೆಸ್ಟ್

    ಪೊಲೀಸ್ ಸೋಗಿನಲ್ಲಿ ಸುಲಿಗೆ – ನಕಲಿ ಪೊಲೀಸ್ ಅರೆಸ್ಟ್

    – ಇಬ್ಬರಿಂದ ಚಿನ್ನದ ಸರ, ರಿಂಗ್, 10,000 ರೂ. ನಗದು ಡ್ರಾ

    ಬೆಂಗಳೂರು: ಪೊಲೀಸ್ ಎಂದು ಹೇಳಿಕೊಂಡು ರಾಜಧಾನಿಯ ಯುವಕ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ ನಕಲಿ ಪೊಲೀಸ್‌ನನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.

    ಆಸೀಫ್ ಬಂಧಿತ ಆರೋಪಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಆಸೀಫ್ ಪೊಲೀಸ್ ಎಂದು ಹೇಳಿಕೊಂಡು ಬಂದು ಹಣ ವಸೂಲಿ ಮಾಡುತ್ತಿದ್ದ. ಪಾರ್ಕ್‌ನಲ್ಲಿರುವವರನ್ನು ಟಾರ್ಗೆಟ್ ಮಾಡಿಕೊಂಡು ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ. ಇದನ್ನೂ ಓದಿ: ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

    ಆಸಿಫ್ ಇಬ್ಬರಿಂದ 12 ಗ್ರಾಂನ ಚಿನ್ನದ ಸರ ಹಾಗೂ 5 ಗ್ರಾಂನ ರಿಂಗ್ ಹಾಗೂ 10,000 ರೂ. ಹಣ ಡ್ರಾ ಮಾಡಿಸಿಕೊಂಡು ಎಸ್ಕೇಪ್ ಆಗಿದ್ದ. ಪೋಲಿಸ್ ಎಂದು ಹೇಳಿ ಪಾರ್ಕ್‌ನಲ್ಲಿ ಕೂರುವವರಿಂದ ಸುಲಿಗೆ ಮಾಡುತ್ತಿದ್ದ ಆಸೀಫ್, ಇದೇ ರೀತಿ ಸಾಕಷ್ಟು ಪ್ರಕರಣಗಳಲ್ಲಿ ಭಾಗಿಯಾಗಿರುವ ಅನುಮಾನ ವ್ಯಕ್ತವಾಗಿದೆ. ಇದೀಗ ಆರೋಪಿಯನ್ನು ಜಯನಗರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಗು ಹಠ ಮಾಡ್ತಿದೆ ಎಂದು ಕೈಗೆ ಬರೆ, ಡೈಪರ್‌ಗೆ ಖಾರದ ಪುಡಿ ಹಾಕಿ ವಿಕೃತಿ

  • ದೆಹಲಿ ಚುನಾವಣೆಗೂ ಮುನ್ನವೇ ಕೇಜ್ರಿವಾಲ್‌ಗೆ ದೊಡ್ಡ ಸಂಕಷ್ಟ – ಇಡಿ ತನಿಖೆಗೆ ರಾಜ್ಯಪಾಲರು ಅಸ್ತು

    ದೆಹಲಿ ಚುನಾವಣೆಗೂ ಮುನ್ನವೇ ಕೇಜ್ರಿವಾಲ್‌ಗೆ ದೊಡ್ಡ ಸಂಕಷ್ಟ – ಇಡಿ ತನಿಖೆಗೆ ರಾಜ್ಯಪಾಲರು ಅಸ್ತು

    ನವದೆಹಲಿ: ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ನಡೆದಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್‌ ಅವರನ್ನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರಾದ ವಿ.ಕೆ ಸಕ್ಸೆನಾ (VK Saxena), ಜಾರಿ ನಿರ್ದೇಶನಾಲಯಕ್ಕೆ (ED) ಅನುಮತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಲೋಕಸಭೆ ಚುನಾವಣೆ ಸೋಲಿನ ಬಳಿಕ ಅಗ್ನಿಪರೀಕ್ಷೆಯಾಗಿರುವ ದೆಹಲಿ ವಿಧಾನಸಭಾ ಚುನಾವಣೆಗೆ (Delhi elections) ಇನ್ನೆರಡು ತಿಂಗಳು ಬಾಕಿಯಿದೆ. ಈ ಹೊತ್ತಿನಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

    ಕೇಜ್ರಿವಾಲ್‌ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಆರೋಪದಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು, ಆದರೆ ವಿಚಾರಣೆ ಆರಂಭವಾಗಿರಲಿಲ್ಲ. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸರ್ಕಾರಿ ಹುದ್ದೆ ಹೊಂದಿರುವ ವ್ಯಕ್ತಿಗಳನ್ನ ವಿಚಾರಣೆಗೆ ಒಳಪಡಿಸಲು ರಾಜ್ಯಪಾಲರ ಅನುಮೋದನೆಯನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದ ನಂತರ, ಇಡಿ ಅನುಮತಿ ಕೋರಿ ಪತ್ರ ಬರೆದಿತ್ತು. ಇದನ್ನೂ ಓದಿ: ರಾಜ್ಯದಲ್ಲಿ ಏನಾದ್ರೂ ನಾನೇ ಕಾರಣನಾ? ನನಗೂ ಸಿ.ಟಿ ರವಿ ಬಗ್ಗೆ ಸಿಂಪತಿ ಇದೆ – ಡಿಕೆಶಿ

    ಕೇಜ್ರಿವಾಲ್ ಸರ್ಕಾರದ ವಿರುದ್ಧ ಪ್ರತಿಪಕ್ಷ ಬಿಜೆಪಿ ಮಾಡಿದ ಬಹುದೊಡ್ಡ ಆರೋಪಗಳಲ್ಲಿ ಮದ್ಯ ನೀತಿ ಹಗರಣವೂ ಒಂದಾಗಿದೆ. ಹಗರಣಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ಇಡಿ, ಮಾರ್ಚ್ 21 ರಂದು ಕೇಜ್ರಿವಾಲ್ ಅವರನ್ನ ಬಂಧಿಸಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಎಪಿ ಮುಖ್ಯಸ್ಥರು ಸೆಪ್ಟೆಂಬರ್‌ನಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಜೈಲಿಂದ ಬಿಡುಗಡೆಯಾದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2025ರ ಚುನಾವಣೆಯಲ್ಲಿ ಜನರು ತಮ್ಮ ಪಕ್ಷವನ್ನು ಮರು ಆಯ್ಕೆ ಮಾಡಿದ ಬಳಿಕವೇ ಉನ್ನತ ಹುದ್ದೆಗಳಿಗೆ ಮರಳುವುದಾಗಿ ಪ್ರತಿಜ್ಞೆ ಮಾಡಿದ್ದರು.

    ಇನ್ನೂ ಕೇಜ್ರಿವಾಲ್‌ ಮತ್ತು ಆಪ್‌ ಪಕ್ಷದ ವಿರುದ್ಧ ಇಡಿ ಸಲ್ಲಿಸಿದ ಕೊನೆಯ ಚಾರ್ಜ್‌ಶೀಟ್‌ನಲ್ಲಿ ಕೇಜ್ರಿವಾಲ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಹಗರಣದ ಕಿಂಗ್‌ಪಿನ್‌ ಎಂದು ಹೆಸರಿಸಿತ್ತು. ಸಿಸೋಡಿಯಾ ಸಹ ಮದ್ಯನೀತಿ ಹಗರಣದಲ್ಲಿ 18 ತಿಂಗಳು ಜೈಲು ವಾಸ ಅನುಭವಿಸಿ, ಕಳೆದ ಆಗಸ್ಟ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದರು. ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

    https://youtu.be/YlG_OlaLqTs?si=3RuOGm_tcymnxqzA

    ಇ.ಡಿ ಆರೋಪ ಏನು?
    ಕೇಜ್ರಿವಾಲ್‌ ಮತ್ತು ಸಿಸೋಡಿಯಾ ಅವರು 100 ಕೋಟಿ ಲಂಚ ಪಡೆಯುವ ಸಲುವಾಗಿ 2021-22ನೇ ಸಾಲಿನ ಅಬಕಾರಿ ನೀತಿಯಲ್ಲಿ ಬದಲಾವಣೆ ತಂದಿದ್ದರು. ಇದರಲ್ಲಿ 45 ಕೋಟಿ ರೂ.ಗಳನ್ನ ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದರು ಎಂಬುದು ಇ.ಡಿ ಆರೋಪ. ಈಗಾಗಲೇ ಚಾರ್ಜ್‌ಶೀಟ್ ರದ್ದುಗೊಳಿಸುವಂತೆ ಅರವಿಂದ್ ಕೇಜ್ರಿವಾಲ್ ದೆಹಲಿ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಶುಕ್ರವಾರ (ಡಿ.20) ದೆಹಲಿ ಹೈಕೋರ್ಟ್‌ ಇ.ಡಿಗೆ ನೋಟಿಸ್‌ ನೀಡಿದೆ.

  • PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್

    PMLA ಪ್ರಕರಣಗಳಲ್ಲೂ ಜಾಮೀನು ಒಂದು ನಿಯಮ, ಜೈಲು ಒಂದು ವಿನಾಯಿತಿ – ಸುಪ್ರೀಂಕೋರ್ಟ್

    ನವದೆಹಲಿ: ಮನಿ ಲಾಂಡರಿಂಗ್ (Money Laundering) ಅಥವಾ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿಯೂ ಸಹ ಜಾಮೀನು ಒಂದು ನಿಯಮ ಮತ್ತು ಜೈಲು ಒಂದು ವಿನಾಯಿತಿ ಎಂದು ಸುಪ್ರೀಂಕೋರ್ಟ್ (Supreme Court) ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.

    ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಅಕ್ರಮ ಗಣಿಗಾರಿಕೆ ಸಂಬಂಧಿತ ಪ್ರಕರಣದಲ್ಲಿ ಜಾರ್ಖಂಡ್ (Jharkhand) ಮುಖ್ಯಮಂತ್ರಿ ಹೇಮಂತ್ ಸೋರೆನ್ (Hemant Soren) ಅವರ ಸಹಾಯಕನಿಗೆ ಜಾಮೀನು ನೀಡುವ ವೇಳೆಯಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಇದನ್ನೂ ಓದಿ: ಬೈರತಿ ಸುರೇಶ್ ಪುತ್ರನೊಂದಿಗೆ ಎಸ್ ವಿಶ್ವನಾಥ್ ಪುತ್ರಿ ನಿಶ್ಚಿತಾರ್ಥ -ಊಟದಲ್ಲಿ ಜೊತೆಯಾದ ಡಿಕೆಶಿ, ಗೆಹ್ಲೋಟ್

    ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿರುವ ಪ್ರಕರಣಗಳಲ್ಲಿಯೂ ಸಹ “ಜಾಮೀನು ಒಂದು ನಿಯಮವಾಗಿದೆ ಮತ್ತು ಜೈಲು ಒಂದು ಅಪವಾದವಾಗಿದೆ” ಎಂದು ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ (B R Gavai) ಮತ್ತು ಕೆವಿ ವಿಶ್ವನಾಥನ್ (K. V. Viswanathan) ಅವರಿದ್ದ ದ್ವಿಸದಸ್ಯ ಪೀಠ ತಿಳಿಸಿದೆ.

    ದೆಹಲಿಯ (Delhi) ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಅವರನ್ನು ಒಳಗೊಂಡಿರುವ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಪ್ರಕರಣಗಳ ತೀರ್ಪನ್ನು ಆ.9ರಂದು ಉಲ್ಲೇಖಿಸಿದ ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ವ್ಯಕ್ತಿಯ ಸ್ವಾತಂತ್ರ‍್ಯ ಯಾವಾಗಲೂ ನಿಯಮವಾಗಿದೆ ಮತ್ತು ಕಾನೂನಿನಿಂದ ಸ್ಥಾಪಿಸಲಾದ ಕಾರ್ಯವಿಧಾನದಿಂದ ಅದನ್ನು ಕಳೆದುಕೊಳ್ಳುವುದು ಅಪವಾದವಾಗಿದೆ. ಯಾವುದೇ ವ್ಯಕ್ತಿಯ ಸ್ವಾತಂತ್ರ‍್ಯವನ್ನು ಕಸಿದುಕೊಳ್ಳಬಾರದು ಎಂದು ಪೀಠ ತಿಳಿಸಿದೆ.ಇದನ್ನೂ ಓದಿ: ಸೆ.9ವರೆಗೆ ದರ್ಶನ್‌ಗೆ ನ್ಯಾಯಾಂಗ ಬಂಧನ – ಇಂದೇ ಶಿರಾ ಮಾರ್ಗವಾಗಿ ಬಳ್ಳಾರಿ ಜೈಲಿಗೆ ಶಿಫ್ಟ್‌

    ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ ಇಡಿ ಸೋರೆನ್ ಅವರ ಆಪ್ತ ಸಹಾಯಕ ಪ್ರೇಮ್ ಪ್ರಕಾಶ್‌ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾರ್ಖಂಡ್ ಹೈಕೋರ್ಟ್ ಮಾ.22 ರಂದು ಜಾಮೀನು ನಿರಾಕರಿಸಿದ ಹಿನ್ನೆಲೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

  • ಬಂಧಿತ ಅಧಿಕಾರಿ ಸಚಿನ್ ಜೊತೆ ನಟಿ ನವ್ಯಾಗೆ ಸ್ನೇಹ: ತನಿಖಾಧಿಕಾರಿಗೆ ಶಾಕ್

    ಬಂಧಿತ ಅಧಿಕಾರಿ ಸಚಿನ್ ಜೊತೆ ನಟಿ ನವ್ಯಾಗೆ ಸ್ನೇಹ: ತನಿಖಾಧಿಕಾರಿಗೆ ಶಾಕ್

    ನಿಲ್ಯಾಂಡರಿಂಗ್ (Money Laundering) ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನವಾಗಿರುವ (Arrest) ಐ.ಆರ್.ಎಸ್ ಅಧಿಕಾರಿ ಸಚಿನ್ ಸಾವಂತ್ (Sachin Sawant) ಜೊತೆ ಮಲಯಾಳಂ ಖ್ಯಾತ ನಟಿ ನವ್ಯಾ ನಾಯರ್ (Navya Nair) ಸ್ನೇಹ ಹೊಂದಿದ್ದರು ಎನ್ನುವ ಅಂಶ ತನಿಖೆಯಲ್ಲಿ ಬಯಲಾಗಿದೆ. ಈ ಸ್ನೇಹಕ್ಕಾಗಿ ನವ್ಯಾ ಅವರಿಗೆ ಭಾರೀ ಮೊತ್ತದ ಉಡುಗೊರೆಯನ್ನೇ ಸಚಿನ್ ನೀಡಿದ್ದರು ಎಂದು ಹೇಳಲಾಗುತ್ತಿದೆ.

    ತನಿಖೆಯ ವೇಳೆ ನಟಿ ನವ್ಯಾ ನಾಯರ್ ಅವರಿಗೆ ಅಧಿಕಾರಿ ಸಚಿನ್ ಅವರು ಚಿನ್ನದ ಉಡುಗೊರೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದು, ಇಡಿ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ನವ್ಯಾ ಅವರನ್ನು ಮುಂಬೈಗೆ ಕರೆಯಿಸಿಕೊಂಡು ವಿಚಾರಣೆ ಮಾಡಿದ್ದಾರೆ. ನಟಿಯ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್- ದೊಡ್ಮನೆ ಆಟಕ್ಕೆ ಮುಹೂರ್ತ ಫಿಕ್ಸ್

    ನವ್ಯಾ ಭೇಟಿಗಾಗಿ ಸಚಿನ್ ಹಲವು ಬಾರಿ ಕೊಚ್ಚಿನ್ ಗೂ ಹೋಗಿದ್ದರು ಎಂದು ತನಿಖೆಯಿಂದ ಬಯಲಾಗಿದೆ. ತನಿಖೆ ವೇಳೆ ಅಧಿಕಾರಿಯ ಮೊಬೈಲ್, ವಾಟ್ಸಪ್ ಡೇಟಾ ಪರಿಶೀಲಿಸಿದಾಗ ಇವೆಲ್ಲವೂ ಪತ್ತೆ ಆಗಿವೆ. ಈ ಕುರಿತು ನವ್ಯಾ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದು, ನಾವಿಬ್ಬರೂ ಸ್ನೇಹಿತರು ಅಷ್ಟೇ. ಅದರಾಚೆ ಬೇರೆ ಏನೂ ಇಲ್ಲ ಎಂದು ಹೇಳಿದ್ದಾರಂತೆ. ಸ್ನೇಹದ ಸಂಕೇತವಾಗಿ ಚಿನ್ನದ ಉಡುಗೊರೆ ಕೊಟ್ಟಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಚಿನ್ ಮತ್ತು ನವ್ಯಾ ನೆರೆಹೊರೆಯವರು ಅನ್ನುವ ಕಾರಣಕ್ಕಾಗಿ ಪರಿಚಯವಾಗಿತ್ತು. ಈ ಅಧಿಕಾರಿಯು ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದಾಗ, ನವ್ಯಾ ಅವರಿಗೆ ಭೇಟಿಯ ವ್ಯವಸ್ಥೆ ಮಾಡಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅಕ್ರಮ ಹಣ ವರ್ಗಾವಣೆ ಕೇಸ್‌- ಸುಪ್ರೀಂನಿಂದ ರಾಣಾ ಅಯ್ಯೂಬ್‌ ಅರ್ಜಿ ವಜಾ

    ಅಕ್ರಮ ಹಣ ವರ್ಗಾವಣೆ ಕೇಸ್‌- ಸುಪ್ರೀಂನಿಂದ ರಾಣಾ ಅಯ್ಯೂಬ್‌ ಅರ್ಜಿ ವಜಾ

    ನವದೆಹಲಿ: ಗಾಜಿಯಾಬಾದ್ ನ್ಯಾಯಾಲಯದಲ್ಲಿ ತನ್ನ ವಿರುದ್ಧ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ಪ್ರಕರಣವನ್ನು ಪ್ರಶ್ನಿಸಿ ಪತ್ರಕರ್ತೆ ರಾಣಾ ಅಯ್ಯೂಬ್ (Rana Ayyub) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ವಜಾಗೊಳಿಸಿದೆ.

    ತನ್ನ ರಿಟ್ ಅರ್ಜಿಯಲ್ಲಿ ಅಯ್ಯೂಬ್ ಅವರು ಮುಂಬೈನಲ್ಲಿ ಅಕ್ರಮ ಹಣ ವರ್ಗಾವಣೆಯ(Money Laundering) ಅಪರಾಧ ನಡೆದಿರುವುದರಿಂದ ಗಾಜಿಯಾಬಾದ್‌ ನ್ಯಾಯವ್ಯಾಪ್ತಿಯಲ್ಲಿ ವಿಚಾರಣೆಗೆ ಬರುವುದಿಲ್ಲ. ಹೀಗಾಗಿ ವಿಚಾರಣೆ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾ. ವಿ ರಾಮಸುಬ್ರಮಣಿಯನ್ ಮತ್ತು ಜೆಬಿ ಪರ್ದಿವಾಲಾ ಅವರ ದ್ವಿಸದಸ್ಯ ಪೀಠ ಈ ಅರ್ಜಿಯನ್ನು ವಜಾಗೊಳಿಸಿದ್ದು ರಾಣಾ ಅಯ್ಯೂಬ್‌ಗೆ ಹಿನ್ನಡೆಯಾಗಿದೆ.

    ಕಳೆದ ವರ್ಷ ನವೆಂಬರ್ 29 ರಂದು, ಗಾಜಿಯಾಬಾದ್‌ನ ವಿಶೇಷ ಪಿಎಂಎಲ್‌ಎ (PMLA) ನ್ಯಾಯಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿತ್ತು. ಸಮನ್ಸ್ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಅಯ್ಯೂಬ್‌ ಸುಪ್ರೀಂ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಸುಪ್ರೀಂ ಇಂದಿಗೆ ತೀರ್ಪನ್ನು ಕಾಯ್ದಿರಿಸಿತ್ತು. ಇದನ್ನೂ ಓದಿ: ಮತ್ತೆ ಪಾಕ್‌ನಿಂದ ದುರ್ಬುದ್ಧಿ – ಟರ್ಕಿಗೆ ಹೊರಟಿದ್ದ NDRF ವಿಮಾನಕ್ಕೆ ನಿರ್ಬಂಧ

    SUPREME COURT

    ಏನಿದು ಪ್ರಕರಣ?
    ಕೋವಿಡ್(Covid) ಪರಿಹಾರಕ್ಕಾಗಿ ಮೂರು ಅಭಿಯಾನಗಳಿಂದ 2.69 ಕೋಟಿ ರೂ. ಹಣವನ್ನು ಸಂಗ್ರಹಿಸಿ ಅದನ್ನು ವೈಯಕ್ತಿಕ ಖಾತೆಗೆ ವರ್ಗಾವಣೆ ಮಾಡಿ ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಪತ್ರಕರ್ತೆ ರಾಣಾ ಅಯ್ಯೂಬ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದೆ.

    ಭಾರತೀಯ ದಂಡ ಸಂಹಿತೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಕಪ್ಪುಹಣ ಕಾಯ್ದೆಯ ವಿವಿಧ ಸೆಕ್ಷನ್‌ ಅಡಿ ಕೇಸ್‌ ದಾಖಲಿಸಿ ತನಿಖೆ ನಡೆಸಿದ ಇಡಿ ಗಾಜೀಯಾಬಾದ್‌ನಲ್ಲಿರುವ ಪಿಎಂಎಲ್‌ಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿದೆ. ಒಟ್ಟು ಸಂಗ್ರಹವಾದ 2,69,44,680 ರೂ. ಹಣದಲ್ಲಿ ಕೇವಲ 29 ಲಕ್ಷ ರೂ. ಮಾತ್ರ ಪರಿಹಾರ ನಿಧಿಗೆ ಬಳಕೆಯಾಗಿದ್ದು ಉಳಿದ ಹಣ ಬಳಕೆಯಾಗಿಲ್ಲ ಎಂದು ಉಲ್ಲೇಖಿಸಿದೆ.

    ವೃತ್ತಿಯಲ್ಲಿ ಪತ್ರಕರ್ತರಾಗಿರುವ ಅಯ್ಯೂಬ್ ಅವರು ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯ(FCRA) ಅಡಿಯಲ್ಲಿ ನೋಂದಣಿ ಮಾಡದೇ ವಿದೇಶದಿಂದ ದೇಣಿಗೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

    ಸಂಗ್ರಹವಾದ ಹಣವನ್ನು ತಂದೆ ಮತ್ತು ಸಹೋದರಿಯ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಈ ಪೈಕಿ 50 ಲಕ್ಷ ರೂ. ಹಣವನ್ನು ಎಫ್‌ಡಿ ಇಟ್ಟರೆ, 50 ಲಕ್ಷ ರೂ. ಹಣವನ್ನು ಹೊಸದಾಗಿ ತೆರೆದ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಲಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

    ಪರಿಹಾರ ಕಾರ್ಯಕ್ಕೆ ಕೇವಲ 29 ಲಕ್ಷ ರೂಪಾಯಿ ಬಳಸಲಾಗಿದೆ. ಅಷ್ಟೇ ಅಲ್ಲದೇ ಪರಿಹಾರ ಕೆಲಸಕ್ಕೆ ಹೆಚ್ಚಿನ ವೆಚ್ಚ ಪಡೆಯಲು ಅಯ್ಯೂಬ್‌ ನಕಲಿ ಬಿಲ್‌ ಸಲ್ಲಿಸಿದ್ದಾರೆ ಎಂದು ಇಡಿ ಹೇಳಿದೆ.

    ತನ್ನ ವೈಯಕ್ತಿಕ ವಿಮಾನ ಪ್ರಯಾಣದ ಟಿಕೆಟ್‌ ದರವನ್ನು ಪರಿಹಾರ ಕಾರ್ಯದ ವೆಚ್ಚಕ್ಕೆ ಅಯ್ಯೂಬ್‌ ಸೇರಿಸಿದ್ದಾರೆ. ಜನರಿಂದ ಹಣವನ್ನು ಸಂಗ್ರಹಿಸಿ ವಂಚನೆ ಮಾಡಲೆಂದೇ ರಾಣಾ ಅಯ್ಯೂಬ್‌ ದೇಣಿಗೆ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದರು ಎಂದು ಇಡಿ ಆರೋಪಿಸಿದೆ.

    ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್-‘ಕೆಟ್ಟೋ’ದಲ್ಲಿಏಪ್ರಿಲ್ 2020 ರಿಂದ ನಿಧಿ ಸಂಗ್ರಹ ಅಯ್ಯೂಬ್‌ ಅಭಿಯಾನವನ್ನು ಪ್ರಾರಂಭಿಸಿದ್ದರು. ಕೊಳೆಗೇರಿ ನಿವಾಸಿಗಳು ಮತ್ತು ರೈತರಿಗೆ ನಿಧಿ ಸಂಗ್ರಹಿಸಲು ಸಹಾಯ, ಅಸ್ಸಾಂ, ಬಿಹಾರ ಮತ್ತು ಮಹಾರಾಷ್ಟ್ರದಲ್ಲಿ ಪರಿಹಾರ ಕಾರ್ಯ, ಭಾರತದಲ್ಲಿ ಕೋವಿಡ್ 19 ನಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡಲು ಅಯ್ಯೂಬ್‌ ನಿಧಿ ಸಂಗ್ರಹ ಮಾಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ

    ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪಾಕ್ ಪ್ರಧಾನಿಗೆ ಸಮನ್ಸ್ ಜಾರಿ

    ಇಸ್ಲಾಮಾಬಾದ್: 16 ಬಿಲಿಯನ್ ಮನಿ ಲಾಂಡರಿಂಗ್ ಪ್ರಕರಣದ ದೋಷಾರೋಪಣೆಗಾಗಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಶನಿವಾರ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರ ಪುತ್ರ ಹಮ್ಜಾ ಶೆಹಬಾಜ್‍ಗೆ ಸಮನ್ಸ್ ಜಾರಿ ಮಾಡಿದೆ.

    2020ರ ನವೆಂಬರ್‌ನಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಶೆಹಬಾಜ್(70) ಅವರ ಮಕ್ಕಳಾದ ಹಮ್ಜಾ(47) ಮತ್ತು ಸುಲೇಮಾನ್(40) ವಿರುದ್ಧ ಪ್ರಕರಣ ದಾಖಲಾಗಿತ್ತು. ಲಾಹೋರ್‌ನ ವಿಶೇಷ ನ್ಯಾಯಾಲಯವು ಈ ಹಿಂದೆ ಶೆಹಬಾಜ್‍ಗೆ ಬಂಧನ ಪೂರ್ವ ಜಾಮೀನು ನೀಡಿತ್ತು. ಈ ಹಿನ್ನೆಲೆ ಶನಿವಾರ ನ್ಯಾಯಾಲಯವು ಶೆಹಬಾಜ್ ಷರೀಫ್ ಮತ್ತು ಅವರ ಪುತ್ರ ಹಮ್ಜಾ ಶೆಹಬಾಜ್ ಅವರಿಗೆ ಸೆಪ್ಟೆಂಬರ್ 7 ರಂದು ಸಮನ್ಸ್ ನೀಡಿದೆ. ಇದನ್ನೂ ಓದಿ: ಶಿಕ್ಷಕಿ ವೃತ್ತಿಯಿಂದ ನಿವೃತ್ತಿಗೊಂಡ ತಾಯಿಯನ್ನು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದ ಮಗ! 

    ಶೆಹಬಾಜ್ ಮತ್ತು ಹಮ್ಜಾ ಇಬ್ಬರೂ ವಿಚಾರಣೆಯ ಸಮಯದಲ್ಲಿ ಗೈರುಹಾಜರಾಗಿದ್ದರು. ಅದಕ್ಕೆ ಶೆಹಬಾಜ್ ಅವರ ವಕೀಲ ಅಮ್ಜದ್ ಪರ್ವೈಜ್ ಅವರು ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ಅವರು ಆರೋಗ್ಯವಾಗಿಲ್ಲದ ಕಾರಣ ವೈದ್ಯರು ಅವರಿಗೆ ಪ್ರಯಾಣಿಸದಂತೆ ಸಲಹೆ ನೀಡಲಾಗಿದೆ ಎಂದು ಹೇಳಿದರು. ಹಮ್ಜಾ ಅವರ ವಕೀಲ ರಾವ್ ಔರಂಗಜೇಬ್ ಅವರು, ತಮ್ಮ ಕಕ್ಷಿದಾರರಿಗೆ ತೀವ್ರವಾದ ಬೆನ್ನುನೋವು ಮತ್ತು ವಿಶ್ರಾಂತಿಯ ಅಗತ್ಯವಿದೆ ಎಂದು ತಿಳಿಸಿದರು. ಈ ಹಿನ್ನೆಲೆ ಸೆಪ್ಟೆಂಬರ್‌ವರೆಗೂ ವಿಚಾರಣೆಯನ್ನು ವಿಸ್ತರಿಸಲಾಗಿದೆ.

    ಈ ವೇಳೆ ಶೆಹಬಾಜ್ ಅವರ ಎರಡನೇ ಪುತ್ರ ಸುಲೇಮಾನ್ ಶೆಹಬಾಜ್ ಅವರ 19 ಬ್ಯಾಂಕ್ ಖಾತೆಗಳ ದಾಖಲೆಯನ್ನು ನಾವು ಪಡೆದುಕೊಂಡಿದ್ದೇವೆ. ಇನ್ನೂ ಏಳು ದಾಖಲೆಗಳನ್ನು ಪಡೆಯಬೇಕಾಗಿದೆ ಎಂದು ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ತಿಳಿಸಿದರು. ಇದನ್ನೂ ಓದಿ:  ನಾನು ಸಂದರ್ಶನ ಕೊಡಲು ಶುರು ಮಾಡಿದ್ರೆ ಭೂಕಂಪವಾಗುತ್ತೆ: ಉದ್ಧವ್‍ಗೆ ಶಿಂಧೆ ಟಾಂಗ್ 

    Live Tv
    [brid partner=56869869 player=32851 video=960834 autoplay=true]

  • ಸತ್ಯೇಂದ್ರ ಜೈನ್ ಸಹಚರರ ಮನೆ ಮೇಲೆ ಇಡಿ ದಾಳಿ – ನೋಟಿನ ಕಂತೆಗಳನ್ನೇ ಬಳಸಿ `ED’ ವಿನ್ಯಾಸ

    ಸತ್ಯೇಂದ್ರ ಜೈನ್ ಸಹಚರರ ಮನೆ ಮೇಲೆ ಇಡಿ ದಾಳಿ – ನೋಟಿನ ಕಂತೆಗಳನ್ನೇ ಬಳಸಿ `ED’ ವಿನ್ಯಾಸ

    ನವದೆಹಲಿ: ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರ ಪತ್ನಿ ಪೂನಂ ಜೈನ್ ಹಾಗೂ ಸಹಚರರ ಮನೆಗಳಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಶೋಧ ಕಾರ್ಯ ನಡೆಸಿ, 2.85 ಕೋಟಿ ರೂ. ನಗದು ಹಾಗೂ 1.8 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ.

    ಸತ್ಯೇಂದ್ರ ಜೈನ್ ತಮ್ಮ ಪತ್ನಿ, ಪುತ್ರಿಯರು, ಸ್ನೇಹಿತರು ಹಾಗೂ ಸಹಚರರ ಸಹಾಯದಿಂದ 16 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪ ಹೊತ್ತಿದ್ದಾರೆ. ಮೇ 20 ರಂದು ಸತ್ಯೇಂದ್ರ ಜೈನ್ ಅವರನ್ನು ಇಡಿ ಬಂಧಿಸಿತ್ತು. ಪ್ರಸ್ತುತ ಸತ್ಯೇಂದ್ರ ಜೈನ್ ಇಡಿ ವಶದಲ್ಲಿದ್ದಾರೆ. ಇದನ್ನೂ ಓದಿ: ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಹೊಸ ತಕರಾರು

    ಶೋಧ ಕಾರ್ಯದ ವೇಳೆ ಸಿಕ್ಕಿರುವ 500 ಹಾಗೂ 2,000 ರೂ. ಮುಖಬೆಲೆಯ ಕಂತೆ ಕಂತೆ ನೋಟುಗಳನ್ನು ಜೋಡಿಸಿ `ಇಡಿ’ ಎಂದು ವಿನ್ಯಾಸಗೊಳಿಸಲಾಗಿದೆ. ನೋಟಿನ ಕಂತೆಗಳಿಂದಲೇ ಇಡಿ ಎಂದು ವಿನ್ಯಾಸಗೊಳಿಸಿ ತೆಗೆದಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.

    2015 ಫೆಬ್ರವರಿಯಿಂದ 2017ರ ಮೇ ತಿಂಗಳಿನ ವರೆಗೆ ದೆಹಲಿ ಸರ್ಕಾರದ ಸಚಿವರಾಗಿದ್ದ ಸತ್ಯೇಂದ್ರ ಜೈನ್ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ ಆರೋಪಿಸಿ, 2018ರಲ್ಲಿ ಪ್ರಕರಣ ದಾಖಲಿಸಿತ್ತು. ಇದೀಗ ಇಡಿ, ಸಿಬಿಐ ದಾಖಲಿಸಿರುವ ಎಫ್‌ಐಆರ್ ಆಧಾರದ ಮೇಲೆ ಐಪಿಸಿ ಸೆಕ್ಷನ್ 109 ಹಾಗೂ ಸೆಕ್ಷನ್ 13(2)ರ ಅಡಿ ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ಆಮ್ ಆದ್ಮಿ ಪಾರ್ಟಿ ಸೇರಿಕೊಂಡ ‘ಮುಖ್ಯಮಂತ್ರಿ’

  • ನಕಲಿ ಅಧಿಕಾರಿಗಳಿಂದ ಹಣ ವಸೂಲಿ – ಕರೆ ಬಂದರೆ ದೂರು ದಾಖಲಿಸುವಂತೆ ಎಸಿಬಿ ಪ್ರಕಟಣೆ

    ನಕಲಿ ಅಧಿಕಾರಿಗಳಿಂದ ಹಣ ವಸೂಲಿ – ಕರೆ ಬಂದರೆ ದೂರು ದಾಖಲಿಸುವಂತೆ ಎಸಿಬಿ ಪ್ರಕಟಣೆ

    ರಾಯಚೂರು: ಜಿಲ್ಲೆಯ ಸರ್ಕಾರಿ ಅಧಿಕಾರಿಗಳಿಗೆ ನಕಲಿ ಎಸಿಬಿ ತಂಡ ಹಣದ ಬೇಡಿಕೆ ಇಟ್ಟು ಬೆದರಿಕೆ ಕರೆ ಮಾಡಿರುವ ಬಗ್ಗೆ ಪಬ್ಲಿಕ್ ಟಿವಿ ಸವಿಸ್ತಾರವಾದ ವರದಿಯನ್ನ ಪ್ರಸಾರ ಮಾಡುವ ಮೂಲಕ ಜಾಗೃತಿಯನ್ನ ಮೂಡಿಸಿತ್ತು. ವರದಿ ಬಳಿಕ ಈಗ ಭ್ರಷ್ಟಾಚಾರ ನಿಗ್ರಹ ದಳದ ಅಪರ ಪೊಲೀಸ್ ಮಹಾ ನಿರ್ದೇಶಕರು ನಕಲಿ ಎಸಿಬಿಯಿಂದ ಎಚ್ಚರಿಕೆ ಅಂತ ಪ್ರಕಟಣೆ ಹೊರಡಿಸಿದ್ದಾರೆ.

    ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲೂ ಇದೇ ಮಾದರಿಯಲ್ಲಿ ಅಧಿಕಾರಿಗಳಿಗೆ ದಾಳಿ ಮಾಡುವುದಾಗಿ ಬೆದರಿಕೆ ಕರೆಗಳು ಬಂದಿವೆ. ನಿಮ್ಮ ಮೇಲೆ ದೂರು ಬಂದಿದೆ ದಾಳಿ ಮಾಡದೇ ಇರಲು ಹಣ ಕೊಡಿ ಅಂತ ಬೇಡಿಕೆ ಇಡಲಾಗಿದೆ. ಈ ಬಗ್ಗೆ ಎಚ್ಚರ ವಹಿಸುವಂತೆ ಎಸಿಬಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: ಮರಾಠಾ ಸಮುದಾಯದ ಶ್ರೀಮಂತ್ ಪಾಟೀಲ್ ಇಲ್ಲವೆ ನನಗೆ ಸಚಿವ ಸ್ಥಾನ ಬೇಕು: ಅನಿಲ್ ಬೆನಕೆ

    ಎಸಿಬಿ ಅಧಿಕಾರಿಗಳ ಹೆಸರಿನಲ್ಲಿ ಸರ್ಕಾರಿ ನೌಕರರಿಗೆ ಬೆದರಿಕೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿರುವ ಆರೋಪದಲ್ಲಿ ರಾಯಚೂರು ಸೇರಿ ವಿವಿಧ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿವೆ. ನಕಲಿ ಎಸಿಬಿ ತಂಡದ ಹೆಸರಿನಲ್ಲಿ ಈ ವರೆಗೆ ರಾಜ್ಯದ ವಿವಿಧೆಡೆ ಒಟ್ಟು 26 ಪ್ರಕರಣ ದಾಖಲಾಗಿವೆ. ಈ ಪೈಕಿ 6 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದಿದ್ದು ಉಳಿದ 20 ಪ್ರಕರಣಗಳು ತನಿಖಾ ಹಂತದಲ್ಲಿವೆ. ಇದೇ ಮಾದರಿಯಲ್ಲಿ ಹಣ ವಸೂಲಿಗೆ ಬೇಡಿಕೆ ಇಟ್ಟರೆ ಕೂಡಲೇ ಸ್ಥಳೀಯ ಎಸಿಬಿ ಅಧಿಕಾರಿಗಳಿಗೆ ದೂರು ನೀಡಲು ಪ್ರಕಟಣೆಯಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆ ‘ನಾಳೆ ಬಾ’ ಎಂಬಂತಿದೆ: ಅಭಯ್ ಪಾಟೀಲ್ ವ್ಯಂಗ್ಯ

  • ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿಲ್ಲ- ರಿಯಾಗೆ ರಿಲೀಫ್?

    ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿಲ್ಲ- ರಿಯಾಗೆ ರಿಲೀಫ್?

    – ಕುಟುಂಬಸ್ಥರ ತಪ್ಪು ಗ್ರಹಿಕೆಯಿಂದ ದೂರು ದಾಖಲು
    – ಸುಶಾಂತ್ ಗೆಳತಿ ರಿಯಾ ಮತ್ತಷ್ಟು ನಿರಾಳ

    ಮುಂಬೈ: ಮೃತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಬ್ಯಾಂಕ್ ಖಾತೆಗಳಿಂದ ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿರುವ ಬಗ್ಗೆ ಖಾಸಗಿ ಪತ್ರಿಕೆ ವರದಿ ಮಾಡಿದೆ.

    ಸುಶಾಂತ್ ಸಿಂಗ್ ರಜಪೂತ್ ನಿಗೂಢ ಸಾವು ಪ್ರಕರಣ ಅಕ್ರಮ ಹಣ ವರ್ಗಾವಣೆಯ ಆಯಾಮವನ್ನು ಪಡೆದುಕೊಂಡಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿಯನ್ನ ಮೂರು ಬಾರಿ ವಿಚಾರಣೆಗೆ ಒಳಪಡಿಸಿತ್ತು. ರಿಯಾ ವಿಚಾರಣೆ ಬಳಿಕ ಇಡಿ ತನಿಖೆಯ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿರಲಿಲ್ಲ. ಇದೀಗ ಪತ್ರಿಕೆಯೊಂದರ ಪ್ರಕಾರ ಸುಶಾಂತ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆಯಾಗಿಲ್ಲ ಎಂಬ ತೀರ್ಮಾನಕ್ಕೆ ಇಡಿ ಬಂದಿದೆ ಎನ್ನಲಾಗಿದೆ. ಸುಶಾಂತ್ ಕುಟುಂಬಸ್ಥರು ತಪ್ಪು ಗ್ರಹಿಕೆಯಿಂದಾಗಿ ದೂರು ದಾಖಲಿಸಿದ್ದಾರೆ. ಸುಶಾಂತ್ ಪರಿವಾರಕ್ಕೆ ನಟನ ಆರ್ಥಿಕ ವ್ಯವಹಾರಗಳ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಇಡಿ ಹೇಳಿದೆ. ಇದನ್ನೂ ಓದಿ: 5 ವರ್ಷದಲ್ಲಿ ಸುಶಾಂತ್ ಗಳಿಸಿದ್ದು 70 ಕೋಟಿ-ರಿಯಾಗಾಗಿ ಖರ್ಚು ಮಾಡಿದೆಷ್ಟು?

    ತನಿಖೆ ಹಿನ್ನೆಲೆ ಜಾರಿ ನಿರ್ದೇಶನಾಲಯ ಸುಶಾಂತ್ ಬ್ಯಾಂಕ್ ಖಾತೆ ಮತ್ತು ಆರ್ಥಿಕ ವ್ಯವಹಾರಗಳನ್ನು ಆಡಿಟ್ ಮಾಡಿಸಲಾಗಿತ್ತು. ಆಡಿಟ್ ನಲ್ಲಿ ತಮ್ಮ ಆದಾಯಕ್ಕೆ 2.78 ಕೋಟಿ ತೆರಿಗೆ ಸಹ ಪಾವತಿಸಿದ್ದಾರೆ. ಚಿಕ್ಕ ಪುಟ್ಟ ವ್ಯವಹಾರಗಳ ತೆರಿಗೆ ಬಾಕಿ ಇರೋದು ಮಾತ್ರ ಇಡಿ ಗಮನಕ್ಕೆ ಬಂದಿದ್ದು, ಉಳಿದೆಲ್ಲ ಆರ್ಥಿಕ ಚಟುವಟಿಕೆಗಳು ಪಾರದರ್ಶಕವಾಗಿ ಎಂದ ಪತ್ರಿಕೆ ಬಿತ್ತರಿಸಿದೆ. ಇದನ್ನೂ ಓದಿ: ಜೈಲಿನಲ್ಲಿದ್ದ 28 ದಿನದ ರಿಯಾ ದಿನಚರಿ ಬಿಚ್ಚಿಟ್ಟ ವಕೀಲ

    ಕೆಲ ದಿನಗಳ ಹಿಂದೆ ಸುಶಾಂತ್ ಬಳಸುತ್ತಿದ್ದ ಬ್ಯಾಂಕ್ ಖಾತೆಯ ವ್ಯವಹಾರದ ಪ್ರತಿಯೊಂದನ್ನ ಮಾಧ್ಯಮ ರಿವೀಲ್ ಮಾಡಿತ್ತು. ಐದು ವರ್ಷದಲ್ಲಿ ಸುಶಾಂತ್ 70 ಕೋಟಿ ಹಣ ಗಳಿಸಿದ್ದು, ಪ್ರೇಯಸಿ ರಿಯಾಗಾಗಿ 55 ಲಕ್ಷ ರೂ. ಖರ್ಚು ಮಾಡಿರುವ ವಿಷಯ ತಿಳಿದು ಬಂದಿತ್ತು. ಇನ್ನುಳಿದಂತೆ ಸುಶಾಂತ್ ಹೆಚ್ಚಿನ ಹಣವನ್ನು ಪ್ರವಾಸ, ಗಿಫ್ಟ್ ಮತ್ತು ಸ್ಪಾಗಾಗಿ ಖರ್ಚು ಮಾಡಿರುವ ವಿಚಾರ ಹೊರ ಬಂದಿತ್ತು. ಇದನ್ನೂ ಓದಿ: ಸುಶಾಂತ್ ಸಾವಿಗೆ ಭೂಗತ ಲೋಕದ ಲಿಂಕ್: ಸುಬ್ರಮಣಿಯನ್ ಸ್ವಾಮಿ

    ಜುಲೈ 31ರಂದು ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅಕ್ರಮ ಹಣ ವರ್ಗಾವಣೆ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಿಹಾರ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಕೆ.ಕೆ.ಸಿಂಗ್ ನೀಡಿದ ದೂರನಿನ್ವಯ ಇಡಿ ತನಿಖೆಗೆ ಮುಂದಾಗಿತ್ತು. ಈ ಸಂಬಂಧ ನಟಿ ರಿಯಾ ಚಕ್ರವರ್ತಿ, ಸೋದರ ಶೌವಿಕ್ ಚಕ್ರವರ್ತಿ, ತಂದೆ ಇಂದ್ರಜಿತ್ ಚಕ್ರವರ್ತಿ, ಸುಶಾಂತ್ ಹೌಸ್ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ ಮತ್ತು ಮ್ಯಾನೇಜರ್ ಶೃತಿ ಮೋದಿ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಪ್ರಕರಣ ದಾಖಲಾಗಿತ್ತು. ಇಡಿ ಈಗಾಗಲೇ 24ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿದೆ.  ಇದನ್ನೂ ಓದಿ: ಸುಶಾಂತ್ ಕೇಸ್- ಅದು ಕೊಲೆಯಲ್ಲ, ಆತ್ಮಹತ್ಯೆ: ಏಮ್ಸ್ ವೈದ್ಯ

    ಎಲ್ಲ ಆರೋಪಿಗಳ ಮಗನ ಖಾತೆಯಿಂದ ಸುಮಾರು 15 ಕೋಟಿ ರೂ. ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾಗಿರುವ ಖಾತೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಆರೋಪಿಸಿದ್ದರು. ಇದೀಗ ಇಡಿಗೆ ಯಾವುದೇ ಅಕ್ರಮ ಕಂಡು ಬರದ ಹಿನ್ನೆಲೆ ರಿಯಾ ಚಕ್ರವರ್ತಿ ಮತ್ತಷ್ಟು ನಿರಾಳವಾಗುವ ಸಾಧ್ಯತೆಗಳಿವೆ. ಕೆಲ ದಿನಗಳ ಹಿಂದೆ ಸುಶಾಂತ್ ವೈದ್ಯಕೀಯ ವರದಿ ನೀಡಿದ್ದ ಏಮ್ಸ್ ವೈದ್ಯ ಸುಧೀರ್ ಗುಪ್ತಾ, ಇದೊಂದು ಆತ್ಮಹತ್ಯೆ. ಕೊಲೆಯಲ್ಲ ಎಂಬ ಸ್ಫೋಟಕ ಹೇಳಿಕೆ ನೀಡಿದ್ದರು. ಡ್ರಗ್ಸ್ ಪ್ರಕರಣದಲ್ಲಿ ಜೈಲಿನಲ್ಲಿದ್ದ ರಿಯಾ ಚಕ್ರವರ್ತಿಗೆ ಬಾಂಬೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ದನ್ನೂ ಓದಿ: ಸುಶಾಂತ್ ರೀತಿಯಲ್ಲಿ ಮತ್ತೋರ್ವ ನಟನ ಅನುಮಾನಾಸ್ಪದ ಸಾವು