Tag: money collection

  • ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ

    ಮತ್ತೆ ಕೋಟ್ಯಧೀಶನಾದ ಮಲೆ ಮಹದೇಶ್ವರ – ಹುಂಡಿಯಲ್ಲಿ 2.27 ಕೋಟಿ ರೂ. ಸಂಗ್ರಹ

    ಚಾಮರಾಜನಗರ: ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಕೋಟಿ ಕೋಟಿ ಹಣ ಹರಿದು ಬಂದಿದ್ದು, ಬರೋಬ್ಬರಿ 2.27 ಕೋಟಿ ರೂ. ಸಂಗ್ರಹವಾಗಿದೆ.

    ದೇವಸ್ಥಾನದ ಹುಂಡಿ ಎಣಿಕೆ ಕಾರ್ಯವು ಬುಧವಾರ ಬೆಳಗ್ಗೆಯಿಂದ ರಾತ್ರಿವರೆಗೂ ನಡೆದಿದ್ದು, ಈ ತಿಂಗಳಿನಲ್ಲಿ ಬರೋಬ್ಬರಿ 2,27,66,834 ರೂ. ನಗದು ಜೊತೆಗೆ 59 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿಯನ್ನು ಭಕ್ತರು ಮಾದಪ್ಪನಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ್ದಾರೆ. ಅಷ್ಟಾಗಿ ಯಾವುದೇ ಸೇವೆ ಮತ್ತು ರಥೋತ್ಸವ ಜರುಗದೇ ಇದ್ದರೂ ಭಕ್ತರು ಕಾಣಿಕೆ ರೂಪದಲ್ಲಿ ಹಣದ ಹೊಳೆಯನ್ನೇ ಹರಿಸುವ ಮೂಲಕ ಮತ್ತೆ ಮಾದಪ್ಪನನ್ನು ಕೋಟ್ಯಧೀಶನನ್ನಾಗಿಸಿದ್ದಾರೆ. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನ ಹುಂಡಿಯಲ್ಲಿ 2.62 ಕೋಟಿ ಸಂಗ್ರಹ

    ಈ ಮುನ್ನ ಅಕ್ಟೋಬರ್‌ನಲ್ಲಿ ಕೊರೊನಾ ಇದ್ದರೂ ಸಹ 2.62 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಈ ವೇಳೆ 170 ಗ್ರಾಂ ಚಿನ್ನ, 3.7 ಕೆಜಿ ಬೆಳ್ಳಿ ಸೇರಿದಂತೆ ಒಟ್ಟು 2,62,76,718 ರೂ. ಗಳಿಕೆಯಾಗಿತ್ತು. ಇದನ್ನೂ ಓದಿ: ರಾಜ್ಯದ 58 ಪುರಸಭೆ, 57 ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಇಂದು

  • ವೋಟು, ನೋಟು ಎರಡು ನೀವೇ ಕೊಡಿ- ಎಸ್‍ಯುಸಿಐ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ವೋಟು, ನೋಟು ಎರಡು ನೀವೇ ಕೊಡಿ- ಎಸ್‍ಯುಸಿಐ ಅಭ್ಯರ್ಥಿಯಿಂದ ವಿಭಿನ್ನ ಪ್ರಚಾರ

    ಧಾರವಾಡ: ಚುನಾವಣೆ ಅಂದ್ರೆ ಎಲ್ಲ ಕಡೆ ಹಣ, ಮದ್ಯ ಹಂಚೋದು ನೋಡಿರುತ್ತೀರಾ. ಆದ್ರೆ ಧಾರವಾಡದಲ್ಲಿ ಎಸ್‍ಯುಸಿಐ ಕಮ್ಯೂನಿಸ್ಟ [ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆ ಇಂಡಿಯಾ (ಕಮ್ಯುನಿಸ್ಟ್)] ಪಕ್ಷದ ಅಭ್ಯರ್ಥಿಯೊಬ್ಬರು ವಿಭಿನ್ನ ರೀತಿಯಲ್ಲಿ ಪ್ರಚಾರ ನಡೆಸಿ ಜನರ ಗಮನ ಸೆಳೆದಿದ್ದಾರೆ.

    ಧಾರವಾಡ ಕ್ಷೇತ್ರದ ಎಸ್‍ಯುಸಿಐ ಅಭ್ಯರ್ಥಿಯಾದ ಗಂಗಾಧರ್ ಬಡಿಗೇರ ಅವರು ಜನರಿಂದಲೇ ಹಣ ಸಂಗ್ರಹಿಸುವ ಮೂಲಕ ಚುನಾವಣಾ ಪ್ರಚಾರ ಮಾಡಿದ್ದಾರೆ. 25 ವರ್ಷಗಳಿಂದ ಜನರು ನಮಗೆ ಬೆಂಬಲ ನೀಡಿದ್ದು, ಚುಣಾವಣೆಗೆ ಜನರೇ ವೋಟು ಹಾಗೂ ನೋಟು ಕೊಡಬೇಕು ಎಂದು ಮನವಿ ಮಾಡಿದರು.

    ಎಲ್ಲಾ ಪಕ್ಷಗಳು ಒಬ್ಬರ ಮೇಲೊಬ್ಬರು ಕೆಸರೆರಚಾಟ ನಡೆಸಿವೆ. ಆದರೆ ನಮ್ಮ ಪಕ್ಷ ಜನರ ಸಮಸ್ಯೆಗಳಿಗೆ ಸ್ಪಂದನೆ ಮಾಡಲಿದೆ ಎಂದ ಅಭ್ಯರ್ಥಿ ಲೋಕಸಭೆಯಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಪ್ರಚಾರ ಮಾಡಿದರು.

    ಹಾಗೆಯೇ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‍ನಂಥ ಪಕ್ಷಗಳಿಗೆ ಅದಾನಿ ಅಂಬಾನಿಯಂತಹ ಜನರು ಚುನಾವಣಾ ಖರ್ಚಿಗೆ ಹಣ ಕೊಡುತ್ತಾರೆ. ಬಳಿಕ ಅದೇ ಹಣ ಅವರು ವಸೂಲಿ ಮಾಡುತ್ತಾರೆ ಎಂದು ಎಸ್‍ಯುಸಿಐ ಅಭ್ಯರ್ಥಿ ಕಿಡಿಕಾರಿದರು.