Tag: Mohan Foundation

  • ವಿಶ್ವ ಅಂಗಾಂಗ ದಿನ-ಮೋಹನ್ ಫೌಂಡೇಶನ್ ನಿಂದ ಜನ ಜಾಗೃತಿ

    ವಿಶ್ವ ಅಂಗಾಂಗ ದಿನ-ಮೋಹನ್ ಫೌಂಡೇಶನ್ ನಿಂದ ಜನ ಜಾಗೃತಿ

    ಬೆಂಗಳೂರು: ವಿಶ್ವ ಅಂಗಾಂಗ ದಿನ ಪ್ರಯುಕ್ತ ಮೋಹನ್ ಫೌಂಡೇಶನ್ (ಅಂಗಾಂಗ ದಾನ) ವತಿಯಿಂದ ನಗರದಲ್ಲಿ ಜನ್ರಿಗೆ ಜಾಗೃತಿ ಮೂಡಿಸಲಾಯಿತು.

    ನಗರದ ವಿವಿಧಡೆ ಜಾಗೃತಿ ಮೂಡಿಸಿ, ಅಂಗಾಂಗ ದಾನ ಎಷ್ಟು ಮುಖ್ಯ ಯಾರಿಗೆ ಅವಶ್ಯಕತೆ ಇರುತ್ತದೆ. ಅವಶ್ಯಕತೆ ಇದ್ದವರಿಗೆ ಹೇಗೆ ಅಂಗಾಂಗ ದಾನಗಳನ್ನ ಮಾಡಬೇಕೆಂಬ ಕಾನೂನಾತ್ಮಕ ಪ್ರಕ್ರಿಯೆಗಳನ್ನ ತಿಳಿಸಲಾಯಿತು.

    ನಗರದ ಖಾಸಗಿ ಕಾಲೇಜಿಗೆ ಭೇಟಿ ನೀಡಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಾನವನ ಅಂಗಾಂಗ ದಾನ ಪ್ರಕ್ರಿಯೆ ಹಾಗೂ ಉಪಯುಕ್ತತೆಯ ಬಗ್ಗೆ ಅರಿವು ಮೂಡಿಸಲಾಯಿತು. 700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಅಂಗಾಂಗ ದಾನದಿಂದ ಏನು ಪ್ರಯೋಜನ, ಯಾಕೆ ಮಾಡಬೇಕು, ಇನ್ನೊಬ್ಬರ ಜೀವನಕ್ಕೆ ಹೇಗೆ ಸಹಾಯಕಾರಿಯಾಗಲಿದೆ ಎಂದು ಮೋಹನ್ ಫೌಂಡೇಶನ್‍ನ ಪ್ರಾಜೆಕ್ಟ್ ಮ್ಯಾನೆಜರ್ ರಂಜಿನಿ ಶಂಕರ್ ಕಾರ್ಯಕ್ರಮದಲ್ಲಿ ಭಾಗಿಯಾದವರಿಗೆ ಜಾಗೃತಿ ಮೂಡಿಸಿದ್ದಾರೆ.

    ಮೋಹನ್ ಫೌಂಡೇಶನ್ ಎಂಬುದು, ಸರ್ಕಾರದ ಅಧಿನದಲ್ಲಿ ಬರುವ ಬಹು ಅಂಗಾಂಗಗಳನ್ನ ದಾನ ಮಾಡುವ ಸಂಸ್ಥೆಯಾಗಿದೆ. ಈ ಸಂಸ್ಥೆ ಸರ್ಕಾರದ ಜೀವ ಸಾರ್ಥಕತೆಯ ತಂಡದೊಂದಿಗೆ ಸೇರಿ ಹಲವರಿಗೆ ಬಹು ಅಂಗಾಂಗಗಳನ್ನ ಜೋಡಣೆ ಮಾಡಿ, ಜೀವವನ್ನ ಉಳಿಸಿದ್ದಾರೆ

  • ವಿಶ್ವ ಅಂಗಾಂಗ ದಾನ ದಿನ – ಮೋಹನ್ ಫೌಂಡೇಶನ್ ನಲ್ಲಿ 156 ಜನ ನೋಂದಣಿ

    ವಿಶ್ವ ಅಂಗಾಂಗ ದಾನ ದಿನ – ಮೋಹನ್ ಫೌಂಡೇಶನ್ ನಲ್ಲಿ 156 ಜನ ನೋಂದಣಿ

    ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನದ ಪ್ರಯುಕ್ತ, ಮೋಹನ್ ಫೌಂಡೇಶನ್ ಬಹು ಅಂಗಾಂಗ ಹಾರ್ವೆಸ್ಟಿಂಗ್ ನೆಟ್ ವರ್ಕ್ ಏಡ್ ತಂಡದಿಂದ ಸಾರ್ವಜನಿಕರಿಗೆ ವಿಶೇಷ ಜಾಗೃತಿಯನ್ನ ಮೂಡಿಸಲಾಯಿತು.

    ನಗರದ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ, ಅಂಗಾಂಗ ದಾನ ಮಾಡಲು ಹಾಗೂ ದಾನ ಪಡೆಯಲು ಹೇಗೆ ನೋಂದಣಿ ಮಾಡಬೇಕು? ಮತ್ತೊಬ್ಬರ ಜೀವಕ್ಕೆ ಅಂಗಾಂಗಗಳು ಹೇಗೆ ಉಪಯೋಗವಾಗಲಿದೆ? ಅಂಗಾಂಗಗಳನ್ನ ಪಡೆಯಲು ಸರ್ಕಾರದಿಂದ ಸಿಗುವ ಸೌಲಭ್ಯಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ಆಸ್ಪತ್ರೆಯ ಕೆಳ ವರ್ಗದ ಆರೋಗ್ಯ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾಹಿತಿ ಪಡೆದು, 156 ಜನ ಅಂಗಾಂಗಗಳನ್ನ ದಾನ ಮಾಡಲು ಮೋಹನ್ ಫೌಂಡೇಶನ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.

    ಮೋಹನ್ ಫೌಂಡೇಶನ್ ನ ಪ್ರಾಜೆಕ್ಟ್ ಮ್ಯಾನೇಜರ್ ರಂಜಿನಿ ಶಂಕರ್ ಮಾತನಾಡಿ, ಅಂಗಾಂಗ ದಾನ ಮಾಡುವ ಮೂಲಕ ಮತ್ತೊಬ್ಬರ ಜೀವವನ್ನ ಉಳಿಸಿ ಬದುಕಿನ ಸಾರ್ಥಕತೆ ಮೆರಯಬಹುದು. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಮಧ್ಯಮ ವಯಸ್ಕರಿಗೆ ಬಹು ಅಂಗಾಂಗ ಕಾಯಿಲೆಗಳಿವೆ. ಆದ್ರೆ ಸೂಕ್ತ ಸಮಯಕ್ಕೆ ಅಂಗಾಂಗಗಳನ್ನ ಹೇಗೆ ದಾನ ಪಡೆಯಬೇಕು ಎಂಬ ಮಾಹಿತಿಯ ಕೊರತೆಯಿದೆ ಎಂದ್ರು.

    ಮೋಹನ್ ಫೌಂಡೇಶನ್ ಬಹು ಅಂಗಾಂಗ ಹಾರ್ವೆಸ್ಟಿಂಗ್ ನೆಟ್ ವರ್ಕ್ ಏಡ್ ತಂಡ ಇವರೆಗೆ 20ಕ್ಕಿಂತ ಹೆಚ್ಚು ಜನರಿಗೆ ವಿವಿಧ ಅಂಗಾಂಗಳನ್ನ ದಾನ ಪ್ರಕ್ರಿಯೆ ಮಾಡಿ, ಸಾವಿನ ಅಂಚಿನಲ್ಲಿದ್ದವರನ್ನ ಬದುಕಿಸಿದೆ. ಕರ್ನಾಟಕ ಸರ್ಕಾರದ ಜೀವ ಸಾರ್ಥಕತೆಯ ತಂಡದದ ಜೊತೆಗೂಡಿಯೂ ಮೋಹನ್ ಫೌಂಡೇಶನ್ ಕಾರ್ಯನಿರ್ವಹಿಸ್ತಿದೆ.