Tag: mohan dhanraj

  • `ಮೋಕ್ಷ’ ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

    `ಮೋಕ್ಷ’ ಟ್ರೇಲರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಸುದೀಪ್

    ಬೆಂಗಳೂರು: ಹೊಸಬರ ವಿನೂತನ ಪ್ರಯತ್ನ ಇರುವ `ಮೋಕ್ಷ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸ್ಯಾಂಡಲ್‍ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ `ಮೋಕ್ಷ’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಚಿತ್ರದ ಟ್ರೇಲರ್ ಇಂಟ್ರಸ್ಟಿಂಗ್ ಆಗಿ ಮೂಡಿ ಬಂದಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಕಳೆದ ವರ್ಷ ಟೀಸರ್ ಬಿಡುಗಡೆ ಮಾಡಿ ಚಿತ್ರದ ಬಗ್ಗೆ ಗಮನ ಸೆಳೆದಿದ್ದ `ಮೋಕ್ಷ’ ಚಿತ್ರತಂಡ ಇದೀಗ ಕುತೂಹಲ ಭರಿತ ಟ್ರೇಲರ್ ಮೂಲಕ ಎಲ್ಲರ ಚಿತ್ತ ಸೆಳೆದಿದೆ. ಸೈಕಲಾಜಿಕಲ್ ಸಸ್ಪೆನ್ಸ್, ಥ್ರಿಲ್ಲರ್ ಕಥಾನಕ ಹೊಂದಿರುವ ಈ ಸಿನಿಮಾವನ್ನು ಸಮರ್ಥ್ ನಾಯಕ್ ನಿರ್ದೇಶನ ಮಾಡಿದ್ದಾರೆ. ಐಟಿ ಕ್ಷೇತ್ರದ ಸಮರ್ಥ್ ನಾಯಕ್ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು ತಾವೇ ಕಥೆ ಬರೆದು ನಿರ್ದೇಶನ ಮಾಡಿದ್ದು, ತಾಂತ್ರಿಕವಾಗಿಯೂ ಚೆಂದವಾಗಿ ಮೂಡಿ ಬಂದಿರುವ `ಮೋಕ್ಷ’ ಸಿನಿಮಾ ಏಪ್ರಿಲ್ 16ರಂದು ಬಿಡುಗಡೆಯಾಗುತ್ತಿದೆ.

    ಕಥೆಯೇ ಹೀರೋ ಆಗಿರೋ ಸಿನಿಮಾದಲ್ಲಿ ಮೋಹನ್ ಧನರಾಜ್, ಆರಾಧ್ಯ ಲಕ್ಷ್ಮಣ್ ನಾಯಕ ಹಾಗೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಮಾಸ್ಕ್ಮ್ಯಾನ್ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾನೆ. ರೋಚಕ ತಿರುವುಗಳನ್ನು ಒಳಗೊಂಡಿರುವ ಈ ಚಿತ್ರಕ್ಕೆ ಕಿಶನ್ ಮೋಹನ್, ಸಚಿನ್ ಬಾಲು ಸಂಗೀತ ನಿರ್ದೇಶನವಿದೆ. ಗುರು ಪ್ರಶಾಂತ್ ರಾಜ್, ಜೋಮ್ ಜೋಸೆಫ್, ಕಿರಣ್ ಹಂಪಾಪುರ ಮೂವರು ಕ್ಯಾಮೆರಾಮ್ಯಾನಗಳು ಛಾಯಾಗ್ರಾಹಕರಾಗಿ ದುಡಿದಿದ್ದಾರೆ. ಹಾಸನ, ಕಾರವಾರ, ಗೋಕಾಕ್, ಗೋವಾ, ಸೇರಿದಂತೆ ಹಲವು ಭಾಗಗಳಲ್ಲಿ `ಮೋಕ್ಷ’ ಸಿನಿಮಾ ಸೆರೆ ಹಿಡಿಯಲಾಗಿದೆ. ಚಿತ್ರದಲ್ಲಿ ತಾರಕ್ ಪೊನ್ನಪ್ಪ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದು, ಭೂಮಿ, ಪ್ರಶಾಂತ್ ಸೇರಿದಂತೆ ಹಲವು ಕಲಾವಿದರು ಚಿತ್ರದ ತಾರಾಬಳಗದಲ್ಲಿದ್ದಾರೆ. ಎಸ್‍ಜಿಎನ್ ಎಂಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಏಪ್ರಿಲ್ 16ರಂದು ಸುಂದರ ಬದುಕಿನ ಶಾಂತಿ ಕದಡಿದ ಸೈಕೋ ಕಥೆ `ಮೋಕ್ಷ’ ಚಿತ್ರಮಂದಿರಕ್ಕೆ ಬರಲಿದೆ.

  • ಇದು ಕಾರ್ಪೋರೇಟ್ ಮಂದಿಯ ಕನಸಿನ ಮೋಕ್ಷಾ!

    ಇದು ಕಾರ್ಪೋರೇಟ್ ಮಂದಿಯ ಕನಸಿನ ಮೋಕ್ಷಾ!

    ಮೋಕ್ಷ, ಸ್ಯಾಂಡಲ್‍ವುಡ್ ನಲ್ಲಿ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಮೂಡಿಸ್ತಿರೋ ಸಿನಿಮಾ. ಕಾರ್ಪೊರೇಟ್ ಕಂಪೆನಿಗಳಲ್ಲಿ ಜಾಹೀರಾತುಗಳನ್ನು ರೂಪಿಸುತ್ತಾ ಆ ವಲಯದಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕ್ರಿಯಾಶೀಲ ತಂಡವೊಂದು ಮೋಕ್ಷ ಚಿತ್ರದ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದೆ. ಸದ್ಯ ಈ ಚಿತ್ರದ ಟೀಸರ್ ರಿಲೀಸ್ ಆಗ್ತಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನ ಡಬ್ಬಲ್ ಮಾಡಿದೆ.

    ರವಿಶಂಕರ್ ವಾಯ್ಸ್ ನಲ್ಲಿ ಮೂಡಿ ಬಂದಿರೋ ಟೀಸರ್ ನಲ್ಲಿ ಸಿನಿಮಾದ ಸ್ವಲ್ಪವೂ ಇಂಟು ಬಿಟ್ಟು ಕೊಟ್ಟಿಲ್ಲ. ಭಾರೀ ಡೈಲಾಗ್ ನಿಂದಲ್ಲೇ ಶುರುವಾಗೋ ಟೀಸರ್ ನಲ್ಲಿ ಯಾರದ್ದು ಮುಖ ರಿವೀಲ್ ಮಾಡಿಲ್ಲ. ಇದು ಸಿನಿಪ್ರೇಕ್ಷಕರಿಗೆ ಸಿನಿಮಾದ ಮೇಲಿನ ಕಾತುರ ಹೆಚ್ಚಾಗುವಂತೆ ಮಾಡಿದೆ.

    ಅಂದಹಾಗೇ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಸಮರ್ಥ್ ನಾಯಕ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಮೋಹನ್ ಧನರಾಜ್ ಹೀರೋ ಆಗಿ ಬಣ್ಣ ಹಚ್ಚಿದ್ರೆ, ಮೋಹನ್‍ಗೆ ಜೋಡಿಯಾಗಿ ಆರಾಧ್ಯ ಲಕ್ಷ್ಮಣ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಮೋಕ್ಷ ಚಿತ್ರಕ್ಕೆ ಗುರುಪ್ರಶಾಂತ್ ರೈ, ಜೋನ್ ಜೋಸೆಫ್ ಹಾಗೂ ಕಿರಣ್ ಹಂಪಾಪುರ್ ಛಾಯಾಗ್ರಹಣವಿದೆ.