Tag: Mohan Charan Majhi

  • ಉಕ್ಕು ವಲಯ ಅಭಿವೃದ್ಧಿ – ಒಡಿಶಾ ಮುಖ್ಯಮಂತ್ರಿ ಜೊತೆ ಹೆಚ್‌ಡಿಕೆ ಚರ್ಚೆ

    ಉಕ್ಕು ವಲಯ ಅಭಿವೃದ್ಧಿ – ಒಡಿಶಾ ಮುಖ್ಯಮಂತ್ರಿ ಜೊತೆ ಹೆಚ್‌ಡಿಕೆ ಚರ್ಚೆ

    – ರೂರ್ಕೆಲಾ ಉಕ್ಕು ಸ್ಥಾವರ, ಕಬ್ಬಿಣದ ಅದಿರು ಅಭಿವೃದ್ಧಿ ವಿಸ್ತರಣೆಗೆ ಸಮಾಲೋಚನೆ
    – ಉದ್ಯೋಗ ಸೃಷ್ಟಿ, ಹೂಡಿಕೆ ಬಗ್ಗೆ ವಿಸ್ತೃತ ಮಾತುಕತೆ

    ನವದೆಹಲಿ: ಒಡಿಶಾದ ರೂರ್ಕೆಲಾ ಉಕ್ಕು ಸ್ಥಾವರದ (Rourkela Steel Plant) ಅಭಿವೃದ್ಧಿ, ಉಕ್ಕು ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗವಕಾಶ ಸೃಷ್ಟಿ ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಬಗ್ಗೆ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಹಜಿ (Mohan Charan Majhi) ಅವರು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

    ನವದೆಹಲಿಯ ತಮ್ಮ ನಿವಾಸಕ್ಕೆ ಆಗಮಿಸಿದ ಒಡಿಶಾ (Odisha) ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಬರ ಮಾಡಿಕೊಂಡ ಕೇಂದ್ರ ಸಚಿವರು, ಆ ರಾಜ್ಯದ ಉಕ್ಕು ಕ್ಷೇತ್ರದ ಆಮೂಲಾಗ್ರ ಅಭಿವೃದ್ಧಿ ಮತ್ತು ವಿವಿಧ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು. ಇದನ್ನೂ ಓದಿ: ಮಗಳಿದ್ದಾಳೆ, ಜಾಮೀನು ರದ್ದು ಮಾಡಬೇಡಿ: ಸುಪ್ರೀಂಗೆ ಪವಿತ್ರಾ ಗೌಡ ಮನವಿ

    ವಿಕಸಿತ ಒಡಿಶಾ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಅಭಿವೃದ್ಧಿಗೆ ಉಕ್ಕು ಕ್ಷೇತ್ರ ಅತಿದೊಡ್ಡ ಕೊಡುಗೆ ನೀಡುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸಹಕಾರ ಅತ್ಯಗತ್ಯವಾಗಿದೆ ಎಂದು ಮಾಹಜಿ ಅವರು ಕೋರಿದರು. ಇದನ್ನೂ ಓದಿ: ಮದುವೆ, ಅಕ್ರಮ ಸಂಬಂಧ, ಚಿತ್ರಹಿಂಸೆ, ಗರ್ಭಪಾತ; ಪತಿಯ ಕಿರುಕುಳಕ್ಕೆ ನೊಂದಿದ್ದ ಗೃಹಿಣಿ ಸಾವು

    ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು, ಉಕ್ಕು ಉತ್ಪಾದನೆಯಲ್ಲಿ ಒಡಿಶಾ ಮಹತ್ವದ ಕೊಡುಗೆ ನೀಡುತ್ತಿದೆ. ಈಗಾಗಲೇ ಭಾರತೀಯ ಉಕ್ಕು ಪ್ರಾಧಿಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರೂರ್ಕೆಲಾ ಉಕ್ಕು ಸ್ಥಾವರ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಉತ್ಪಾದನೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಇನ್ನೂ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲು ಬದ್ಧರಾಗಿದ್ದೇವೆ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರವು ಸದಾ ಸಹಕಾರ ನೀಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಕಾರವಾರ ಇಳಕಲ್ ರಾಷ್ಟ್ರೀಯ ಹೆದ್ದಾರಿ ಶೀಘ್ರ ಕಾಮಗಾರಿ ಆರಂಭಿಸಲು ಗಡ್ಕರಿಗೆ ಸಂಸದ ಬೊಮ್ಮಾಯಿ ಮನವಿ

    ಭಾರತೀಯ ಉಕ್ಕು ಕ್ಷೇತ್ರದ ಪರಿವರ್ತನಾತ್ಮಕ ಅಭಿವೃದ್ಧಿಗೆ ನಾಯಕತ್ವ ವಹಿಸುವ ಶಕ್ತಿ ಒಡಿಶಾಗೆ ಇದೆ ಎಂದು ಹೇಳಿದ ಕೇಂದ್ರ ಸಚಿವರು, ರಾಜ್ಯ ಸರ್ಕಾರದೊಂದಿಗೆ ಮೂಲಸೌಕರ್ಯ, ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಇನ್ನಿತರ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುವ ನಿಟ್ಟಿನಲ್ಲಿ ಕೇಂದ್ರವು ಸಹಕಾರ ನೀಡುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿದ ಸಿಎಂ

    ಕೈಗಾರಿಕಾ ಬೆಳವಣಿಗೆ, ಖನಿಜ ಅಭಿವೃದ್ಧಿ ಮತ್ತು ಉಕ್ಕಿನ ಶ್ರೇಷ್ಠತೆಯಲ್ಲಿ ಒಡಿಶಾವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಬಗ್ಗೆ ಆ ರಾಜ್ಯದ ಮುಖ್ಯಮಂತ್ರಿಗಳಿಗೆ ಸ್ಪಷ್ಟ ಭರವಸೆ ನೀಡಿದ ಸಚಿವರು, ಆತ್ಮನಿರ್ಭರ ಭಾರತ, 2047ರ ವೇಳೆಗೆ ವಿಕಸಿತ ಭಾರತ ಸಾಕಾರ ಹಾಗೂ 2030ರ ವೇಳೆಗೆ ಪ್ರಧಾನಿ ಮೋದಿಯವರ ಗುರಿಯಂತೆ ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಒಡಿಶಾ ಸರ್ಕಾರದ ಜೊತೆ ನಿಕಟವಾಗಿ ಕೆಲಸ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಉಕ್ಕು ಸಚಿವಾಲಯ ಹಾಗೂ ಒಡಿಶಾ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: 2-3 ದಿನಗಳಲ್ಲಿ SEP ವರದಿ ಸಿಎಂಗೆ ಸಲ್ಲಿಕೆ – ಡಾ.ಸುಧಾಕರ್

  • ಒಡಿಶಾ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ಮುಟ್ಟಿನ ರಜೆ ಘೋಷಣೆ

    ಒಡಿಶಾ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ಮುಟ್ಟಿನ ರಜೆ ಘೋಷಣೆ

    ಭುವನೇಶ್ವರ್: ಒಡಿಶಾ (Odisha) ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೆ 1 ದಿನ ಮುಟ್ಟಿನ ರಜೆಯನ್ನು ಘೋಷಣೆ ಮಾಡಿದೆ.

    ಮಹಿಳೆಯರು ವಾರ್ಷಿಕವಾಗಿ ಪ್ರಸ್ತುತ ಪಡೆಯುವ 15 ದಿನಗಳ ಸಾಂದರ್ಭಿಕ ರಜೆ (CL) ಹೊರತಾಗಿ ವಾರ್ಷಿಕವಾಗಿ 12 ದಿನಗಳ ಹೆಚ್ಚುವರಿ ರಜೆ ಸಿಗಲಿದೆ ಎಂದು ಸಿಎಂ ಕಚೇರಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದ ಹಂತಕರು

    ಮಹಿಳಾ ಉದ್ಯೋಗಿಗಳು ತಿಂಗಳಿಗೆ ಒಂದು ದಿನದ ವೇತನ ಸಹಿತ ಋತುಚಕ್ರದ ರಜೆಗೆ ಅರ್ಹರಾಗಿರುತ್ತಾರೆ ಎಂದು ಸ್ವಾತಂತ್ರ‍್ಯ ದಿನದಂದು ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಘೋಷಣೆಯನ್ನು ಮಾಡಿದ್ದರು. ಅದರನ್ವಯ ಸರ್ಕಾರ ಈಗ ಜಾರಿ ಮಾಡಿದೆ. ಇದನ್ನೂ ಓದಿ: ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು, ಇದು ಸಾಧ್ಯತೆಯ ಕಲೆ: ಡಿಕೆ ಶಿವಕುಮಾರ್‌

    ಹಿಂದಿನ ಬಿಜೆಡಿ ಸರ್ಕಾರವು ಕುಟುಂಬದ ಜವಾಬ್ದಾರಿಗಳು ಮತ್ತು ಮಹಿಳೆಯರ ವಿವಿಧ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸಿತ್ತು. ಈಗ, ಮಹಿಳೆಯರಿಗೆ ಸಿಎಲ್‌ಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಇದನ್ನೂ ಓದಿ: ಆಪರೇಷನ್ ಆಲೌಟ್ ಜೆಡಿಎಸ್ – ಸಿಎಂ ಮುಂದೆ ಡಿಕೆಶಿ ಶಪಥ

    ಒಡಿಶಾ ಸರ್ಕಾರದ ಎಲ್ಲಾ ಮಹಿಳಾ ಉದ್ಯೋಗಿಗಳು ಪ್ರಸ್ತುತ ಪಡೆಯುವ 15 ದಿನಗಳನ್ನು ಹೊರತುಪಡಿಸಿ ವಾರ್ಷಿಕವಾಗಿ ಹೆಚ್ಚುವರಿ ಸಿಎಲ್‌ಗಳನ್ನು ಪಡೆಯಬಹುದು ಎಂದು ಅಧಿಕೃತ ಟಿಪ್ಪಣಿಯಲ್ಲಿ ಸರ್ಕಾರ ಮಂಗಳವಾರ ತಿಳಿಸಿದೆ. ಈ ಕುರಿತು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ (Mohan Charan Majhi) ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಕೋಲಾರ | ಎಂಜಿನಿಯರಿಂಗ್ ಬಿಟ್ಟು ವ್ಯವಸಾಯದಲ್ಲಿ ತೊಡಗಿದ್ದ ರೈತನ 9 ಎಕರೆ ಬೆಳೆ ನಾಶ

    ಈಗ, ಮಹಿಳಾ ಉದ್ಯೋಗಿಗಳಿಗೆ ಸಿಎಲ್‌ಗಳ ಸಂಖ್ಯೆ 27 ದಿನಗಳಾಗಿದ್ದು, ಪುರುಷರು 15 ದಿನಗಳ ಸಿಎಲ್ ಅರ್ಹರಾಗಿರುತ್ತಾರೆ. ಇದನ್ನೂ ಓದಿ: ಧಾರವಾಡ| ನದಿಯಲ್ಲಿ ಕೊಚ್ಚಿ ಹೋಯ್ತು ಕಾರು- ಮರ ಏರಿದ್ದ ಚಾಲಕನ ರಕ್ಷಣೆ

  • ಪುರಿಯ ಜಗನ್ನಾಥ ದೇವಾಲಯದ ಎಲ್ಲಾ 4 ದ್ವಾರಗಳು ಓಪನ್

    ಪುರಿಯ ಜಗನ್ನಾಥ ದೇವಾಲಯದ ಎಲ್ಲಾ 4 ದ್ವಾರಗಳು ಓಪನ್

    – ಒಡಿಶಾ ಬಿಜೆಪಿ ಸರ್ಕಾರದಿಂದ ಭರವಸೆ ಈಡೇರಿಕೆ

    ಭುವನೇಶ್ವರ: ಪುರಿಯ ಜಗನ್ನಾಥ ದೇವಾಲಯದ (Puri Jagannath Temple) ಎಲ್ಲಾ ನಾಲ್ಕು ದ್ವಾರಗಳನ್ನು ಇಂದು (ಜೂ.13) ತೆರೆಯಲಾಗಿದೆ.

    ಚುನಾವಣೆಗೂ ಮುನ್ನ ಬಿಜೆಪಿ (BJP) ಗೆದ್ದರೆ ದೇವಾಲಯದ ಎಲ್ಲಾ ದ್ವಾರಗಳನ್ನು ಭಕ್ತರಿಗಾಗಿ ತೆರೆಯುವುದಾಗಿ ಹೆಳಿತ್ತು. ಇದೀಗ ನೂತನವಾಗಿ ರಚನೆಯಾದ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯನ್ನು ನೆರವೇರಿಸಿದೆ. ಬೆಳಗ್ಗೆ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ (Mohan Charan Majhi), ಪುರಿ ಸಂಸದ ಸಂಬಿತ್ ಪಾತ್ರ ಸೇರಿದಂತೆ ಬಿಜೆಪಿಯ ನಾಯಕರು ತೆರಳಿ ದೇವಾಲಯದ ದ್ವಾರಗಳನ್ನು ತೆರೆಯುವ ಮಹತ್ವದ ಕ್ಷಣದಲ್ಲಿ ಭಾಗಿಯಾಗಿದ್ದರು.

    ಮಾಂಝಿ ಅವರು ಬುಧವಾರದ ತಮ್ಮ ಮೊದಲ ಕ್ಯಾಬಿನೆಟ್ ಸಭೆಯಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಮುಚ್ಚಲ್ಪಟ್ಟಿರುವ ಪವಿತ್ರ ದೇಗುಲದ ಎಲ್ಲಾ ದ್ವಾರಗಳನ್ನು ಭಕ್ತರಿಗಾಗಿ ಮತ್ತೆ ತೆರೆಯುವ ಪ್ರಸ್ತಾಪವನ್ನು ಅನುಮೋದಿಸಿದರು. ಅಲ್ಲದೇ 12ನೇ ಶತಮಾನದ ಈ ದೇಗುಲದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 500 ಕೋಟಿ ರೂ. ಮೌಲ್ಯದ ಕಾರ್ಪಸ್ ನಿಧಿಯನ್ನು ಸ್ಥಾಪಿಸುವುದಾಗಿ ಕ್ಯಾಬಿನೆಟ್ ಘೋಷಿಸಿತು. ಇದನ್ನೂ ಓದಿ: ನೀಟ್‌ ಯುಜಿ ವಿವಾದ – 1563 ವಿದ್ಯಾರ್ಥಿಗಳಿಗೆ ನೀಡಲಾಗಿದ್ದ ಗ್ರೇಸ್‌ ಅಂಕ ರದ್ದು

    ಪುರಿಯ ಜಗನ್ನಾಥ ದೇವಾಲಯದಲ್ಲಿ ನಾಲ್ಕು ದ್ವಾರಗಳಿವೆ. ಅವುಗಳೆಂದರೆ ಸಿಂಹದ್ವಾರ, ಅಶ್ವದ್ವಾರ, ವ್ಯಾಘ್ರದ್ವಾರ, ಮತ್ತು ಹಸ್ತಿದ್ವಾರ. ಈ ದ್ವಾರಗಳು ದೇವಾಲಯದ ನಾಲ್ಕು ಬದಿಗಳಲ್ಲಿದೆ. ಕೋವಿಡ್ ಹರಡುತ್ತಿದ್ದ ಸಮಯದಲ್ಲಿ ಈ ಬಾಗಿಲುಗಳನ್ನು ಮುಚ್ಚಲಾಗಿತ್ತು. ನಂತರ, ಭಕ್ತರಿಗೆ ಸಿಂಹದ್ವಾರದ ಮೂಲಕ ದೇವಾಲಯಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಭಾರೀ ಜನದಟ್ಟಣೆಯಿಂದ ಭಕ್ತರು ಸಂಕಷ್ಟಪಡುವಂತಾಗಿತ್ತು. ಈ ಎಲ್ಲಾ ದ್ವಾರಗಳನ್ನು ತೆರೆಯುವುದು ಬಿಜೆಪಿಯ ದೊಡ್ಡ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು.

    ಬುಧವಾರ (ಜೂ.12) ಭುವನೇಶ್ವರದಲ್ಲಿ ಒಡಿಶಾದ (Odisha) ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮಾಝಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಭಾಗವಹಿಸಿದ್ದರು. ಇದನ್ನೂ ಓದಿ: ಕೇಂದ್ರ ಸಚಿವರಾಗಿ ಮೊದಲ ಕಡತಕ್ಕೆ ಹೆಚ್‌ಡಿಕೆ ಸಹಿ!

  • ಒಡಿಶಾದ ಮೊದಲ ಬಿಜೆಪಿ ಸಿಎಂ ಆಗಿ ಮೋಹನ್‌ ಚರಣ್‌ ಪ್ರಮಾಣವಚನ ಸ್ವೀಕಾರ

    ಒಡಿಶಾದ ಮೊದಲ ಬಿಜೆಪಿ ಸಿಎಂ ಆಗಿ ಮೋಹನ್‌ ಚರಣ್‌ ಪ್ರಮಾಣವಚನ ಸ್ವೀಕಾರ

    ಭುವನೇಶ್ವರ: ಒಡಿಶಾದ ಮೊದಲ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಮೋಹನ್ ಚರಣ್ ಮಾಝಿ (Mohan Charan Majhi) ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಈ ವೇಳೆ ಉಪಸ್ಥಿತರಿದ್ದರು.

    ಒಡಿಶಾದ (Odisha) ಭುವನೇಶ್ವರದ ಜನತಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಮಾಝಿ ಜೊತೆಗೆ ಕನಕ್ ವರ್ಧನ್ ಸಿಂಗ್ ದೇವ್ ಮತ್ತು ಪ್ರವತಿ ಪರಿದಾ ಅವರು ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಪೆಮಾ ಖಂಡು ಸತತ 3ನೇ ಅವಧಿಗೆ ಅರುಣಾಚಲ ಪ್ರದೇಶ ಸಿಎಂ

    ಒಡಿಶಾದ ರಾಜ್ಯಪಾಲ ರಘುಬರ್ ದಾಸ್ ಅವರು ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿ ಹಾಗೂ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. 24 ವರ್ಷಗಳ ಕಾಲ ಒಡಿಶಾ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಬಿಜು ಜನತಾ ದಳ (ಬಿಜೆಡಿ) ನಾಯಕ ನವೀನ್ ಪಟ್ನಾಯಕ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

    ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಶ್ವಿನಿ ವೈಷ್ಣವ್ ಮತ್ತು ನಿತಿನ್ ಗಡ್ಕರಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ, ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ, ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: ಕುವೈತ್ ಅಗ್ನಿ ದುರಂತದಲ್ಲಿ 40 ಮಂದಿ ಭಾರತೀಯರ ದುರ್ಮರಣ – ಮೋದಿ ಸಂತಾಪ

    ಈಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಬಿಜೆಡಿ ಹೀನಾಯ ಸೋಲನುಭವಿಸಿತು. ಚುನಾವಣೆಯಲ್ಲಿ ಬಹುಮತ ದಾಖಲಿಸಿದ ಬಿಜೆಪಿ (BJP) ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿದೆ. ಆ ಮೂಲಕ 24 ವರ್ಷಗಳ ಬಿಜೆಡಿ ಆಡಳಿತಕ್ಕೆ ಬ್ರೇಕ್‌ ಬಿದ್ದಿದೆ.

  • ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಸಿಎಂ

    ಬಿಜೆಪಿಯ ಮೋಹನ್ ಚರಣ್ ಮಾಝಿ ಒಡಿಶಾದ ನೂತನ ಸಿಎಂ

    ಭುವನೇಶ್ವರ: ಒಡಿಶಾದ (Odisha) ನೂತನ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಶಾಸಕರಾಗಿರುವ ಮೋಹನ್ ಚರಣ್ ಮಾಝಿ (Mohan Charan Majhi) ಅವರನ್ನು ಬಿಜೆಪಿ (BJP) ಮಂಗಳವಾರ ಆಯ್ಕೆ ಮಾಡಿದೆ. ಕೆ.ವಿ.ಸಿಂಗ್‌ದೇವ್ ಮತ್ತು ಪ್ರವತಿ ಪರಿದಾ ಅವರನ್ನು ಉಪಮುಖ್ಯಮಂತ್ರಿಗಳು ಎಂದು ಹೆಸರಿಸಲಾಗಿದೆ.

    ಮಾಝಿ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಘೋಷಿಸಿದ್ದಾರೆ. ಇದನ್ನೂ ಓದಿ: ಮಾಹಿತಿ , ಪ್ರಸಾರ ಖಾತೆ ಸಚಿವರಾಗಿ ಅಶ್ವಿನಿ ವೈಷ್ಣವ್ ಅಧಿಕಾರ ಸ್ವೀಕಾರ

    ಈಚೆಗೆ ನಡೆದ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಕಿಯೋಂಜಾರ್ ಕ್ಷೇತ್ರದಿಂದ ಮಾಝಿ ಗೆಲುವು ಸಾಧಿಸಿದ್ದರು. ಬಿಜು ಜನತಾ ದಳದ ಮಿನಾ ಮಾಝಿ ಅವರನ್ನು 11,577 ಮತಗಳ ಅಂತರದಿಂದ ಸೋಲಿಸಿದ್ದರು.

    ಒಡಿಶಾ ವಿಧಾನಸಭೆಯಲ್ಲಿ 147 ಸ್ಥಾನಗಳಲ್ಲಿ 78 ಸ್ಥಾನಗಳನ್ನು ಬಿಜೆಪಿ ಗೆಲುವು ದಾಖಲಿಸಿತ್ತು. ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ ಹೀನಾಯ ಸೋಲನುಭವಿಸಿತು. ಒಡಿಶಾದಲ್ಲಿ ತನ್ನ ಚೊಚ್ಚಲ ಸರ್ಕಾರವನ್ನು ರಚಿಸಲು ಸಜ್ಜಾಗಿರುವ ಬಿಜೆಪಿಯು ಜೂನ್ 12 ರಂದು ನಡೆಯಲಿರುವ ಪ್ರಮಾಣ ವಚನ ಸಮಾರಂಭಕ್ಕೆ ಬಿಜೆಡಿ ಅಧ್ಯಕ್ಷ ಮತ್ತು ನಿರ್ಗಮಿತ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನೂ ಆಹ್ವಾನಿಸಿದೆ. ಇದನ್ನೂ ಓದಿ: ಅನಗತ್ಯ ಹೇಳಿಕೆಗಳನ್ನು ನೀಡಬೇಡಿ, ಸರಿಯಾಗಿ ಸಮಯ ಪಾಲನೆ ಮಾಡಿ: ಸಚಿವರಿಗೆ ಮೋದಿ ಪಾಠ