Tag: mohan bhagawat

  • RSS ಮುಖ್ಯಸ್ಥ ಮೋಹನ್ ಭಾಗವತ್ ಮೇಲೆ ದಾಳಿ ಎಚ್ಚರಿಕೆ

    RSS ಮುಖ್ಯಸ್ಥ ಮೋಹನ್ ಭಾಗವತ್ ಮೇಲೆ ದಾಳಿ ಎಚ್ಚರಿಕೆ

    ಪಾಟ್ನಾ: ಬಿಹಾರ ಭೇಟಿ ವೇಳೆ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‍ಐ ಹಾಗೂ ಇಸ್ಲಾಮಿಕ್ ಭಯೋತ್ಪಾದಕರಿಂದ ಆರ್ ಎಸ್‍ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagawat) ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ.

    ಮೋಹನ್ ಭಾಗವತ್ ಅವರು ಈಗಾಗಲೇ ಝಡ್ ಮಾದರಿಯ ಭದ್ರತೆಯನ್ನು ಹೊಂದಿದ್ದಾರೆ. ಆದರೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲೆಂದು ಎರಡು ದಿನಗಳ ಭೇಟಿಗಾಗಿ ಪಾಟ್ನಾಗೆ ಆಗಮಿಸಿರುವ ಭಾಗವತ್ ಅವರಿಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

    ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗಲ್ಪುರದಲ್ಲಿ ಪ್ರತಿಯೊಂದು ವಾಹನ, ವಸತಿಗೃಹ, ಜನದಟ್ಟಣೆ ಪ್ರದೇಶಗಳಲ್ಲಿ ಪ್ರತಿಯೊಬ್ಬರನ್ನೂ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಗುಪ್ತಚರ ಇಲಾಖೆಯ ಎಚ್ಚರಿಕೆಯಿಂದಾಗಿ ಮೋಹನ್ ಭಾಗವತ್ ಅವರಿಗೆ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸಲಾಗುತ್ತಿದೆ ಎಂದು ಬಿಹಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

  • ದೇಶದ ಎಲ್ಲಾ ಯೂನಿವರ್ಸಿಟಿಯಲ್ಲಿ RSS ಕಾರ್ಯಕರ್ತರನ್ನ ಸಿಂಡಿಕೇಟ್ ಮಾಡ್ಕೊಂಡಿದ್ದಾರೆ: ಹೆಚ್‍ಡಿಕೆ

    ದೇಶದ ಎಲ್ಲಾ ಯೂನಿವರ್ಸಿಟಿಯಲ್ಲಿ RSS ಕಾರ್ಯಕರ್ತರನ್ನ ಸಿಂಡಿಕೇಟ್ ಮಾಡ್ಕೊಂಡಿದ್ದಾರೆ: ಹೆಚ್‍ಡಿಕೆ

    ರಾಮನಗರ: ದೇಶದಲ್ಲಿರುವ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರನ್ನು ಸಿಂಡಿಕೇಟ್ ಮಾಡಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

    ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆರ್‍ಎಸ್‍ಎಸ್ ವಿರುದ್ಧ ಮತ್ತೆ ಗುಡುಗಿದ ಅವರು, ಯಾವುದೇ ಕೆಲಸವಾಗಬೇಕು ಅಂದ್ರೆ 1 ರಿಂದ 2 ಲಕ್ಷ ಡಿಮಾಂಡ್ ಮಾಡಿಕೊಂಡು ಕೂತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

    40 ವರ್ಷದ ಆರ್‍ಎಸ್‍ಎಸ್ ಬೇರೆ ಈಗಿನ ಆರ್‍ಎಸ್‍ಎಸ್ ಬೇರೆ. ವಿಜಯದಶಮಿ ದಿನ ಭಾಗವತ್ ನವರು ಹೇಳಿಕೆ ಕೊಟ್ಟಿದ್ದಾರೆ. ದೇಶ ಒಡೆಯುವ ಇದು, ಇವರಿಗೆ ನಾವು ಗುತ್ತಿಗೆ ಕೊಟ್ಟಿದ್ದೀವಾ. ಎಲ್ಲಾ ಹಿಂದೂ ದೇವಾಲಯಗಳನ್ನ ಇವರ ಸುಪರ್ದಿಗೆ ಕೊಡಬೇಕಂತೆ, ಇವರ ಅಕೌಂಟ್ ಎಲ್ಲಿಟ್ಟಿದ್ದಾರೆ. 1989 – 1991 ರವರೆಗೆ ಅಡ್ವಾನಿಯವರು ರಥಯಾತ್ರೆ ಮಾಡಿದ್ರಲ್ಲ. ಇಟ್ಟಿಗೆ, ಹಣ ಸಂಗ್ರಹ ಮಾಡಿದ್ರಲ್ಲ. ಅದರ ಬಗ್ಗೆ ಮಾಹಿತಿ ಎಲ್ಲಿದೆ, ಹಣ ಎಷ್ಟು, ಬಡ್ಡಿ ಎಷ್ಟು, ಎಲ್ಲಿದೆ ಆ ಹಣ . ಇವಾಗಲೂ ಸಹ ಸಂಗ್ರಹ ಮಾಡಿದ್ದಾರೆ, ಅದರ ಲೆಕ್ಕ ಎಲ್ಲಿದೆ ಎಂದು ಹೆಚ್‍ಡಿಕೆ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್

    ರಾಮಮಂದಿರ ನಿರ್ಮಾಣದ ಹಣದ ವಿಚಾರದಲ್ಲಿ ಶೇ.200 ಲೋಪ ಆಗಿದೆ. ರಾಮನ ಹೆಸರಿನಲ್ಲಿ ಆಗಿರುವ ದುರುಪಯೋಗದ ಬಗ್ಗೆ ಹೇಳಿದ್ದೇನೆ. ಅವರು ಹೇಳಬಹುದು ನೀವ್ಯಾರು ಕೇಳೋಕೆ ಅಂತಾ, ಆದರೆ ರಾಮನ ಹೆಸರಿನಲ್ಲಿ ದುರುಪಯೋಗ ಆಗಿದೆ ಎಂದು ಗಂಭೀರ ಆರೋಪ ಮಾಡಿದರು. ಇದನ್ನೂ ಓದಿ: ಕುಮಾರಸ್ವಾಮಿ ಮಾತು ವೇದವಾಕ್ಯ ಅಲ್ಲ: ಸಿದ್ದರಾಮಯ್ಯ

  • ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ಮೋಹನ್ ಭಾಗವತ್

    ಸಂಸ್ಕೃತ ಗ್ರಾಮ ಮತ್ತೂರಿನಲ್ಲಿ ಮೋಹನ್ ಭಾಗವತ್

    ಶಿವಮೊಗ್ಗ: ಪ್ರಶಾಂತವಾಗಿ ಹರಿಯುತ್ತಿದ್ದ ತುಂಗೆಗೆ ಆರತಿ ಬೆಳಗಲಾಯಿತು. ನಮಾಮಿ ತುಂಗೆ ಎಂದು ನಮಿಸಲಾಯಿತು. ಆ ಊರಿನ ಜನರೆಲ್ಲರೂ ಸೇರಿ ತುಂಗೆಯಲ್ಲಿ ಶ್ರೀರಾಮನಿಗೆ ತೆಪ್ಪೋತ್ಸವ ನಡೆಸಿ, ಆರತಿ ಬೆಳಗಿ ದೀಪಗಳನ್ನು ಬೆಳಗಿ ವಿಶೇಷ ಪೂಜೆ ನೆರವೇರಿಸಿದರು. ಅಲ್ಲದೆ ರಾಷ್ಟ್ರದಲ್ಲಿಯೇ ಗುರುತಿಸಿಲ್ಪಟ್ಟಿರುವ ಆರ್‍ಎಸ್‍ಎಸ್ ಸರಸಂಘ ಸಂಚಾಲಕ ಮೋಹನ್ ಜೀ ಭಾಗವತ್ ಕೂಡ ಈ ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

    ಶಿವಮೊಗ್ಗದ ಸಂಸ್ಕೃತ ಗ್ರಾಮ ಎಂದೇ ಕರೆಸಿಕೊಳ್ಳುವ ಮತ್ತೂರಿನಲ್ಲಿ ದೇಶದ ಆರ್‍ಎಸ್‍ಎಸ್ ಮುಖಂಡ ಮತ್ತು ಸರಸಂಘ ಸಂಚಾಲಕ ಮೋಹನ್ ಜೀ ಭಾಗವತ್ ವಾಸ್ತವ್ಯ ಹೂಡಿದ್ದು ವಿಶೇಷ ಹೋಮ-ಹವನದಲ್ಲಿ ಪಾಲ್ಗೊಂಡಿದ್ದಾರೆ.

    ಶುಕ್ರವಾರ ಇಡೀ ದಿನ ಶಿವಮೊಗ್ಗದ ಮತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋಹನ್ ಜೀ ಭಾಗವತ್ ಅವರು ಸಂಜೆ ರಾಮ ತಾರಕ ಯಜ್ಞದ ಪೂರ್ಣಾಹುತಿ ಹೋಮದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಮಂದಿರ ನಿರ್ಮಾಣದ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ವಿಶೇಷ ಪೂಜೆ-ಪುನಸ್ಕಾರ ಯಜ್ಞ ಕಾರ್ಯಕ್ರಮ ನಡೆಸಲಾಗಿದ್ದು, ಮತ್ತೂರಿನ ಜನರು ಎಂದುಕೊಂಡಂತೆ ಶುಕ್ರವಾರ ಈ ವಿಶೇಷ ಕಾರ್ಯಕ್ರಮ ನಡೆಸಲಾಯಿತು. ತುಂಗಾ ನದಿಯ ಮಧ್ಯದಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶೇಷ ವೇದಿಕೆಯಲ್ಲಿ ನಿಂತು ಸೀತಾರಾಮಾಂಜನೇಯರಿಗೆ ಮತ್ತು ತುಂಗೆಗೆ ಆರತಿ ಬೆಳಗಿ ಮೋಹನ್ ಜೀ ಭಾಗವತ್ ವಿಶೇಷ ಪೂಜೆ ನೆರವೇರಿಸಿದರು.

    ಈ ವೇಳೆ ಮಾತನಾಡಿದ ಮೋಹನ್ ಭಾಗವತ್ ದೇಶದಲ್ಲಿ ಏಕತೆಯನ್ನು ಸಾಧಿಸುವ ನಿಟ್ಟಿನಲ್ಲಿ ಹಿಂದೂ ಸಂಘಟನೆ ಕಾರ್ಯೋನ್ಮುಖವಾಗಿದೆ. ಪ್ರಸ್ತುತ ಸಂಘಟನೆಯನ್ನು ವಿಶ್ವದಲ್ಲಿಯೇ ಗುರುತಿಸಲಾಗುತ್ತಿದೆ ಎಂದು ಹೇಳಿದ್ದಾರೆ. ತುಂಗೆಗೆ ಆರತಿ ಬೆಳಗಲೆಂದು ಮತ್ತೂರು ಮತ್ತು ಹೊಸಹಳ್ಳಿ ಜನತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ತುಂಗೆಯ ತಟದಲ್ಲಿ ದೀಪಗಳನ್ನು ತುಂಗಾ ನದಿಯಲ್ಲಿ ತೇಲಿ ಬಿಟ್ಟು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಬೇಡಿಕೊಂಡರು. ಮತ್ತೂರಿನ ನಿವಾಸಿಗಳಿಗೆ ಜೀವನ ಕೊಟ್ಟಿರುವ ಸಂರಕ್ಷಣೆ ಮಾಡಿರುವ ತುಂಗೆಗೆ ವಿಶೇಷ ಆರತಿ ಬೆಳಗುವ ಮೂಲಕ ಪೂಜೆ ನೆರವೇರಿಸಿದರು.

    ನಮಾಮಿ ತುಂಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಪ್ರಮುಖ ವ್ಯಕ್ತಿ ಎಂದೇ ಬಿಂಬಿತರಾಗಿರುವ ಆರ್‍ಎಸ್‍ಎಸ್‍ನ ಮೋಹನ್ ಜೀ ಭಾಗವತ್ ಪಾಲ್ಗೊಳ್ಳುವಿಕೆ ಸ್ಥಳೀಯರಲ್ಲಿ ಆನಂದ ಹೆಚ್ಚಿಸಿತ್ತು. ರಾಮ ಜನ್ಮ ಭೂಮಿ ವಿವಾದದ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ರಾಮತಾರಕ ಯಜ್ಞ ಮತ್ತು ತುಂಗಾ ಆರತಿ ಕಾರ್ಯಕ್ರಮ ನೆರವೇರಿಸುವ ಅಭಿಲಾಷೆ ಹೊಂದಿದ್ದ ಇಲ್ಲಿನ ಸ್ಥಳೀಯರು ನಮಾಮಿ ತುಂಗೆ ಕಾರ್ಯಕ್ರಮದ ಮೂಲಕ ಆದಷ್ಟು ಬೇಗನೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

    ಶುಕ್ರವಾರ ಸಂಸ್ಕೃತ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ರಾಮ ಮಂದಿರ ತೀರ್ಪು ಹಿನ್ನೆಲೆಯಲ್ಲಿ ನಡೆಸಲಾದ ಯಜ್ಞ, ದೀಪೋತ್ಸವ ಮತ್ತು ತೆಪ್ಪೋತ್ಸವ ಕಾರ್ಯಕ್ರಮ ಸ್ಥಳೀಯರನ್ನು ಪುಳಕಿತರನ್ನಾಗಿಸಿತ್ತು.