Tag: Mohan Babu

  • `ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

    `ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

    ಳೆದ 30 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣಗಳು ಮತ್ತು ಚಿತ್ರರಂಗದ ಸಂಭ್ರಮದ ನಡುವೆ, ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಹಾಗೂ ನಟ ಮೋಹನ್ ಬಾಬು (Mohan Babu) ಚೆನ್ನೈನಲ್ಲಿ ಮತ್ತೆ ಒಂದಾದರು. ಇದಕ್ಕೆ ಕಾರಣಕ್ಕೆ `ಪೆದರಾಯುಡು’ ಸಿನಿಮಾವು ಜೂನ್ 15, 1995ರಂದು ತೆರೆಕಂಡಿತ್ತು. ಇದೀಗ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು, ವಿಷ್ಣು ಮಂಚು ನಟನೆಯ `ಕಣ್ಣಪ್ಪ’ (Kannappa) ಸಿನಿಮಾ ವೀಕ್ಷಿಸಿ ಹಳೇ ನೆನಪಿಗೆ ಹೊರಳಿದರು.

    ರವಿ ರಾಜ ಪಿನಿಸೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ `ಪೆದರಾಯುಡು’ ಸಿನಿಮಾ, ಅಂದಿನ ಕಾಲದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಗಟ್ಟಿ ಕಥಾ ಶೈಲಿ ನೆನಪಿನಲ್ಲಿ ಉಳಿಯುವ ಅಭಿನಯಗಳು ಮತ್ತು ಅದ್ವಿತೀಯ ಮಾಸ್ ಆಕರ್ಷಣೆಯಿಂದ ತೆಲುಗು ಚಿತ್ರರಂಗದಲ್ಲಿ ಈ ಚಿತ್ರ ಶಾಶ್ವತವಾಗಿ ಉಳಿದಿದೆ. ಈ ಚಿತ್ರ 30 ವರ್ಷ ಪೂರೈಸಿದ ಬೆನ್ನಲ್ಲೇ ರಜನಿಕಾಂತ್ ಮತ್ತು ಮೋಹನ್ ಬಾಬು (Mohan Babu) ಒಂದೆಡೆ ಸೇರಿ ಕಣ್ಣಪ್ಪ ಚಿತ್ರ ವೀಕ್ಷಿಸಿದರು. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಅಂದಹಾಗೆ ಜೂನ್ 27ರಂದು ಜಾಗತಿಕ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಣ್ಣಪ್ಪ ಸಿನಿಮಾ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಶಿವನ ಭಕ್ತರಾದ ಕಣ್ಣಪ್ಪನ ಕಥೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ರಜನಿಕಾಂತ್ ಕೊಂಚ ಭಾವುಕರಾಗಿದ್ದಾರೆ. ಇದನ್ನೂ ಓದಿ: ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಸಂಯುಕ್ತ ಮೆನನ್ ಎಂಟ್ರಿ

    `ಇದು ಅಸಾಧಾರಣ ಚಿತ್ರ. ಭಾವನೆ, ದೃಶ್ಯ ವೈಭವ ಮತ್ತು ಆಧ್ಯಾತ್ಮ- all extraordinary’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ರಜನಿಕಾಂತ್ ಬಗ್ಗೆಯೂ ಮಾತನಾಡಿದ ಮೋಹನ್ ಬಾಬು, `ಇವತ್ತು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ!’ ಎಂದು ಸಂಭ್ರಮದಿಂದ ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    ಅಂದಹಾಗೆ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಪುತ್ರನ ಚಿತ್ರಕ್ಕೆ ಮೋಹನ್ ಬಾಬು ಬಂಡವಾಳ ಹೂಡಿ ನಿರ್ಮಾಪಕರಾಗಿದ್ದಾರೆ. ಬಹು ತಾರಾಗಣದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೂನ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  • ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಚಿತ್ರಕ್ಕೆ ಚಾಲನೆ

    ಶ್ರೀಕ್ಷೇತ್ರ ಕಾಳಹಸ್ತಿಯಲ್ಲಿ ವಿಷ್ಣು ಮಂಚು ನಟನೆಯ ‘ಕಣ್ಣಪ್ಪ’ ಚಿತ್ರಕ್ಕೆ ಚಾಲನೆ

    ಶಿವನ ಅಚಲ ಭಕ್ತನಾದ ಕಣ್ಣಪ್ಪನ (Kannappa) ಕಾಲಾತೀತ ಕಥೆಯು ಯುಗಯುಗಗಳಿಂದಲೂ ಭಾರತೀಯ ಮನಸ್ಸುಗಳಲ್ಲಿ ಅಚ್ಚಳಿಯದೇ ಉಳಿದಿದೆ. ಕಣ್ಣಪ್ಪನ ಕಥೆಯು ಮತ್ತೊಮ್ಮೆ ಬೆಳ್ಳಿ ಪರದೆಯ ಮೇಲೆ ಮೂಡಿಬರುತ್ತಿದ್ದು, ವಿಷ್ಣುಮಂಚು (Vishnumanchu) ಅಭಿನಯದ ಈ ಚಿತ್ರಕ್ಕೆ ಶುಕ್ರವಾರ, ಕಾಳಹಸ್ತಿಯಲ್ಲಿ ಅಧಿಕೃತವಾಗಿ ಚಾಲನೆ (Muhurta) ಸಿಕ್ಕಿದೆ.

     

    ಭಾರತೀಯ ಚಿತ್ರರಂಗದ ಜನಪ್ರಿಯ ಕಲಾವಿದರನ್ನು ಒಳಗೊಂಡಿರುವ ಮತ್ತು ದೊಡ್ಡ ಪ್ರಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು 24 ಫ್ರೇಮ್ಸ್ ಫ್ಯಾಕ್ಟರಿ ಮತ್ತು ಎವಿಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳ ಅಡಿಯಲ್ಲಿ ಈ ಚಿತ್ರವನ್ನು ನಟ ಹಾಗೂ ರಾಜಕಾರಣಿ ಮೋಹನ್ ಬಾಬು (Mohan Babu) ನಿರ್ಮಿಸುತ್ತಿದ್ದಾರೆ.

    ಕಣ್ಣಪ್ಪ ಚಿತ್ರವು ಅಚಲವಾದ ಭಕ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ನಾಸ್ತಿಕನಾದ ಕಣ್ಣಪ್ಪನ ವಿಸ್ಮಯಕಾರಿ ರೂಪಾಂತರವು ಈ ಚಿತ್ರದ ಕಥಾವಸ್ತು. ಈಶ್ವರನ  ಅಪ್ರತಿಮ ಭಕ್ತನಾಗಿ ಮತ್ತು ಇತಿಹಾಸದ ಅತ್ಯಂತ ಅಸಾಧಾರಣ ಭಕ್ತರಲ್ಲಿ ಒಬ್ಬನಾದ ಕಣ್ಣಪ್ಪನ ಪಾತ್ರ ಮಾಡುವ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ವಿಷ್ಣು ಮಂಚು ಹೇಳಿಕೊಂಡಿದ್ದಾರೆ. ಇದುವರೆಗೂ ಹಲವು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿರುವ ವಿಷ್ಣು ಮಂಚು, ಇದೇ ಮೊದಲ ಬಾರಿಗೆ ಪೌರಾಣಿಕ ಚಿತ್ರವೊಂದರಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ ಮತ್ತು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟಿದ್ದಾರೆ.

    ಈ ಚಿತ್ರಕ್ಕೆ ಧೀಮಂತ ಲೇಖಕರಾದ ಪರುಚೂರಿ ಗೋಪಾಲಕೃಷ್ಣ, ತೋಟ ಪ್ರಸಾದ್, ತೋಟಪಲ್ಲಿ ಸಾಯಿನಾಥ್ ಮತ್ತು ಬುರ್ರಾ ಸಾಯಿ ಮಾಧವ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದು‌, ಮಣಿಶರ್ಮಾ ಮತ್ತು ಸ್ಟೀಫನ್ ದೇವಸ್ಸೆ ಸಂಗೀತ ಹಾಗೂ ಶೆಲ್ಡನ್ ಶಾ ಅವರ ಛಾಯಾಗ್ರಹಣವಿದೆ.

    ಈ ಹಿಂದೆ ಸ್ಟಾರ್ ಪ್ಲಸ್ ಗಾಗಿ ಮಹಾಭಾರತ ಸರಣಿಯನ್ನು ನಿರ್ದೇಶಿಸಿದ್ದ ಮುಖೇಶ್ ಕುಮಾರ್ ಸಿಂಗ್, ಮೇರುಕೃತಿಯನ್ನು ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ನಟಿ  ನೂಪುರ್ ಸನೋನ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಭಕ್ತಿ ಪ್ರಧಾನ ‘ಕಣ್ಣಪ್ಪ’ ( ಎ ಟ್ರೂ ಎಪಿಕ್ ಇಂಡಿಯನ್ ಟೇಲ್) ಚಿತ್ರ, ಪ್ಯಾನ್ ಇಂಡಿಯಾ ಸಿನಿಮಾವಾಗಿ ಬಹುಭಾಷೆಗಳಲ್ಲಿ ಬರಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಮಕ್ಕಳ ಜಗಳಕ್ಕೆ ಬ್ರೇಕ್‌ ಹಾಕಲು ಆಸ್ತಿ ಹಂಚಿಕೆಗೆ ಮುಂದಾದ ನಟ ಮೋಹನ್‌ ಬಾಬು?

    ಟಾಲಿವುಡ್‌ನ ಈ ಸ್ಟಾರ್‌ಗೆ ಹೆಸರೂ ಇದೆ ಹಣಾನೂ ಇದೆ. ಮೂವರು ಮಕ್ಕಳು, ಮಕ್ಕಳೆಲ್ಲಾ ಸ್ಟಾರ್ಸು. ಇದೀಗ ಆ ಸ್ಟಾರ್‌ಗೆ ಗಳಿಸಿದ ಆಸ್ತಿಯೇ ತಲೆನೋವು ತಂದಿದೆ. ಎದೆಎತ್ತರಕ್ಕೆ ಬೆಳೆದ ಮಕ್ಕಳು ಕಿತ್ತಾಡ್ಕೊಂಡು ಮೂರು ದಿಕ್ಕಲ್ಲಿ ದಾರಿ ಕಂಡುಕೊಂಡಿದ್ದಾರೆ. ಈ ಕಡೆ ತಂದೆ ಇನ್ನೊಂದು ದಾರಿ ಹಿಡಿದು ಹೊರಟಿದ್ದಾರೆ. ಏನಿದು ಟಾಲಿವುಡ್‌ನಲ್ಲಿ ಗುಲ್ಲಾಗಿರೋ ಜ್ಯುಬಲಿಹಿಲ್ಸ್ ಗಲ್ಲಿ ಸಮಾಚಾರ ಗೊತ್ತೇ..?

    ಟಾಲಿವುಡ್‌ನ (Tollywood)  ಶ್ರೀಮಂತ ನಟರಲ್ಲಿ ಇವರೂ ಒಬ್ಬರು. 90ರ ಕಾಲದ ಸೂಪರ್ ಸ್ಟಾರ್. ನಮ್ಮ್ ಅಂಬರೀಶ್ ಅವರ ಆಪ್ತಮಿತ್ರ. ಅವರ ಹೆಸರೇ ಡೈಲಾಗ್ ಕಿಂಗ್ ಮೋಹನ್ ಬಾಬು. ಡಿಫರೆಂಟ್ ಸ್ಟೈಲ್‌ನಿಂದ ಟಾಲಿವುಡ್‌ನಲ್ಲಿ ಭದ್ರನೆಲೆಕಂಡುಕೊಂಡ ಮೋಹನ್‌ಬಾಬುಗೆ ಮೂವರು ಮಕ್ಕಳು. ವಿಷ್ಣು ಮಂಚು(Vishnu Manchu)  ಮತ್ತು ಮನೋಜ್ ಮಂಚು (Manoj Manchu) ಹಾಗೂ ಲಕ್ಷ್ಮಿ ಮಂಚು. ಮೂರೂ ಮಕ್ಕಳು ಸ್ಟಾರೇ. ಆದರೆ ವಿಷ್ಣು ಹಾಗೂ ಮನೋಜ್ ಮಂಚುವಿನ ಪರಸ್ಪರ ಕಿತ್ತಾಟ ವೈಮನಸ್ಸು ನಾಲ್ಕು ಗೋಡೆ ಮಧ್ಯೆ ಉಳಿದಿಲ್ಲ. ಕೈಕೈಮಿಲಾಯಿಸಿಕೊಂಡು ಹೊಡೆದಾಡಿಕೊಂಡ ವೀಡಿಯೋ ವೈರಲ್ ಆಗಿ ಇಳಿವಯಸಿನಲ್ಲಿ ಮೋಹನ್ ಬಾಬು(Mohan Babu) ತಲೆಕೆಡಿಸಿಕೊಳ್ಳುವಂತಾಯ್ತು. ಇನ್ನು ಮಗಳು ಲಕ್ಷ್ಮಿ ಕೂಡ ತಮ್ಮದೇ ಸೆಪರೇಟ್ ಮನೆ ಮಾಡ್ಕೊಂಡು ವಾಸವಿದ್ದಾಳೆ.

    ಮಕ್ಕಳು ಅವರವರ ಪಾಡಿಗೆ ದೂರ ಇದ್ರೂ ಮೋಹನ್ ಬಾಬು ತಲೆ ಕೆಡಿಸಿಕೊಳ್ತಿರಲಿಲ್ಲವೇನೋ ಆದರೆ ಆಗಿರೋದು ಬೇರೆ ಅನ್ನುತ್ತದೆ ಟಾಲಿವುಡ್ ಮೂಲ. ಮಕ್ಕಳ ಜಗಳ ನೋಡಲಾರದೆ ಮೋಹನ್ ಬಾಬು ಆಸ್ತಿ ಪಾಲು ಮಾಡಲು ಅಲೆಯುತ್ತಿದ್ದಾರೆ. ಆಂಧ್ರದ ರಿಜಿಸ್ಟರ್ ಆಫೀಸ್‌ಗೂ ಮೋಹನ್ ಬಾಬು ಕಾಲಿಟ್ಟಿದ್ದು ಮಕ್ಕಳಿಗೆ ಆಸ್ತಿ ಪಾಲು ಮಾಡಿ ಪಾರಾಗುತ್ತಿದ್ದಾರೆ ಎನ್ನಲಾಗ್ತಿದೆ. ಈ ಮೂಲಕ ನೆಮ್ಮದಿ ಜೀವನ ಕಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದಾರಂತೆ. ಅದಕ್ಕೆ ಹೇಳೋದು ಹಣ ಅತಿಯಾಗಿದ್ದರೂ ಕಷ್ಟವೇ.

    ಸ್ಟಾರ್ ನಟರ ಕುಟುಂಬ, ಕಲಾವಿದರು ಅಂದ ಮೇಲೆ ಅಭಿಮಾನಿಗಳಿಗೆ ಪ್ರೇರಣೆಯಾಗಬೇಕು. ಕೂಡಿ ಬಾಳುವ ಮೂಲಕ ಫ್ಯಾನ್ಸ್ಗೆ ಉದಾಹರಣೆಯಾಗಿ ನಿಲ್ಲಬೇಕು. ಆದರೆ ಮೋಹನ್ ಬಾಬು ಅವರ ಮನೆಯ ಜಗಳ ನೋಡಿ ಆಡಿಕೊಳ್ಳುವವರ ಬಾಯಿಗೆ ಗುರಿಯಾಗಿದ್ದಾರೆ. ಮುಂದೆ ಏನಾಗತ್ತೋ ಕಾಯಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್‌

    ಭೂಮಾ ಮೌನಿಕಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತೆಲುಗು ನಟ ಮಂಚು ಮನೋಜ್‌

    ಟಾಲಿವುಡ್ (Tollywood) ನಟ ಮಂಚು ಮನೋಜ್ & ಭೂಮಾ ಮೌನಿಕಾ ರೆಡ್ಡಿ ಜೊತೆ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಹೊಸ ಬಾಳಿಗೆ ಭೂಮಾ ಮೌನಿಕಾ ರೆಡ್ಡಿ ಜೊತೆ ಮಂಚು ಮನೋಜ್ (Manchu Manoj) ಕಾಲಿಟ್ಟಿದ್ದಾರೆ.

    ಮಾರ್ಚ್ 3ರಂದು ನಡೆದ ಅದ್ಧೂರಿ ಕಲ್ಯಾಣದಲ್ಲಿ ಮಂಚು ಮನೋಜ್- ಭೂಮಾ ಮೌನಿಕಾ ರೆಡ್ಡಿ (Bhuma Mounika Reddy) ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಬ್ಬರಿಗೂ ಇದು 2ನೇ ಮದುವೆ (Wedding) ಆಗಿದೆ. ಇಬ್ಬರೂ ತಮ್ಮ ಜೀವನದಲ್ಲಿ ಏಳು ಹೆಜ್ಜೆ ಇಡುತ್ತಾ ಹೊಸ ಅಧ್ಯಾಯವನ್ನು ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ಭೂಮಾ ಮೌನಿಕಾ ರೆಡ್ಡಿ ದಿವಂಗತ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ರೆಡ್ಡಿ ಅವರ 2ನೇ ಪುತ್ರಿಯಾಗಿದ್ದಾರೆ. ಮೌನಿಕಾಳನ್ನು ಪ್ರೀತಿಸುತ್ತಿದ್ದ ಮಂಚು ಮನೋಜ್ ಈಗ ಅವಳಿಗೆ ಮೂರು ಗಂಟು ಹಾಕಿದ್ದಾರೆ. ಈ ಜೋಡಿಗೆ ಅನೇಕ ಸಿನಿ ಮತ್ತು ರಾಜಕೀಯ ಗಣ್ಯರು ಮದುವೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇದನ್ನೂ ಓದಿ: ಹೃತಿಕ್ ರೋಷನ್- ಸಬಾ ಆಜಾದ್ ಮದುವೆ ನಿಜಾನಾ? ರಾಕೇಶ್ ರೋಷನ್ ಸ್ಪಷ್ಟನೆ

    ತಂದೆ ಮೋಹನ್ ಬಾಬು (Mohan Babu) ಮತ್ತು ಸಹೋದರಿ ಮಂಚು ಲಕ್ಷ್ಮಿ (Manchu Lakshmi) ಮದುವೆಯಲ್ಲಿ ಮಿಂಚಿದ್ದಾರೆ. ಮಂಚು ಮನೋಜ್- ಮೌನಿಕಾಗೆ 2ನೇ ಮದುವೆ ಆಗಿದ್ದರೂ ಕೂಡ ಅದ್ದೂರಿಯಾಗಿ ಮದುವೆ ಮಾಡಲಾಯಿತು. ನವಜೋಡಿಗೆ ಇದೀಗ ಅಭಿಮಾನಿಗಳಿಂದ ಸೆಲೆಬ್ರಿಟಿ ಸ್ನೇಹಿತರಿಂದ ಶುಭಾಶಯಗಳು ಹರಿದುಬರುತ್ತಿದೆ.

  • ಸ್ಟಾರ್ ನಟನ  ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ಸ್ಟಾರ್ ನಟನ ಮಗಳನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್ : ನೋವು ಹಂಚಿಕೊಂಡ ಮೋಹನ್ ಬಾಬು ಪುತ್ರಿ

    ತೆಲುಗು ಸಿನಿಮಾ ರಂಗದ ಖ್ಯಾತ ನಟ ಮೋಹನ್ ಬಾಬು ಅವರ ಪುತ್ರಿ ಲಕ್ಷ್ಮಿ ಮಂಚು ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಕಾಸ್ಟಿಂಗ್ ಕೌಚ್ ಅನ್ನುವುದು ಸಾಮಾನ್ಯ ನಟಿಗೆ ಅಥವಾ ಹೊಸದಾಗಿ ಬರುವ ಕಲಾವಿದೆಯರಿಗೆ ಮಾತ್ರವಲ್ಲ, ಖ್ಯಾತ ನಟರ ಮಗಳಾದ ನನಗೂ ಆಗಿದೆ ಎಂದು ಹೇಳುವ ಮೂಲಕ ತೆಲುಗು ಸಿನಿಮಾ ರಂಗದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇದನ್ನೂ ಓದಿ : ಮದ್ವೆ ಸೀರೆ ವಾಪಸ್ಸು ಕೊಟ್ರಂತೆ ಸಮಂತಾ: ಮಳೆ ನಿಂತರು ಮಳೆ ಹನಿ ನಿಲ್ಲದು

    ನಟರ ಮಕ್ಕಳು ಸಿನಿಮಾ ರಂಗದಲ್ಲಿ ಸೇಫ್ ಅನ್ನುವ ಮಾತು ನನ್ನ ವಿಷಯದಲ್ಲಿ ಸುಳ್ಳಾಗಿದೆ. ನನ್ನ ತಂದೆ ಹೆಸರಾಂತ ನಟ. ಆದರೂ, ನನಗೆ ಇಂತಹ ಕಹಿ ಅನುಭವವಾಗಿದೆ. ಯಾರು, ಎಲ್ಲಿ, ಹೇಗೆ ಇರುತ್ತಾರೆ ಎನ್ನುವುದನ್ನು ಊಹಿಸಲೂ ಆಗುವುದಿಲ್ಲ. ನಮಗೆ ಸುಲಭವಾಗಿ ಅವಕಾಶ ಸಿಗುತ್ತದೆ ಎನ್ನುವ  ನಂಬಿಕೆ ಹೇಗೆಲ್ಲ ಸುಳ್ಳು ಮಾಡುತ್ತದೆ ಎಂದು ಆಗಿರುವ ಕಹಿ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ : ಡಾ.ರಾಜ್ ಹುಟ್ಟಿದ ಊರಲ್ಲಿ ಫಸ್ಟ್ ಟೈಮ್ ಸಿನಿಮಾ ಮುಹೂರ್ತ

    ಲಕ್ಷ್ಮೀ ಮಂಚು ಆಡಿದ ಈ ಮಾತು ಅವರು ಯಾವೆಲ್ಲ ಸಿನಿಮಾಗಳನ್ನು ಕೈ ಬಿಟ್ಟಿದ್ದಾರೆ ಎನ್ನುವುದರತ್ತ ಹೊರಳಿದ್ದು, ಯಾರು ಇವರಿಗೆ ಆ ರೀತಿ ತೊಂದರೆ ಕೊಟ್ಟಿರಬಹುದು ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಸಿನಿಮಾ ಮತ್ತು  ಕಿರುತೆರೆ ಎರಡರಲ್ಲೂ ಕೆಲಸ ಮಾಡಿರುವ ಲಕ್ಷ್ಮೀ, ಯಾವ ಕ್ಷೇತ್ರದಲ್ಲಿ ತಮಗೆ ಇಂತಹ ಕಹಿ ಘಟನೆ ನಡೆದಿದೆ ಎಂದು ಹೇಳಿಕೊಂಡಿಲ್ಲ. ಹಾಗಾಗಿ ಯಾವ ಕ್ಷೇತ್ರದಲ್ಲಿ ಅವರಿಗೆ ತೊಂದರೆ ಆಗಿದೆ ಎನ್ನುವುದು ನಿಗೂಢ. ಇದನ್ನೂ ಓದಿ : ಸಿನಿಮಾ ರಂಗಕ್ಕೆ ಬಾ ಅನ್ನಲಿಲ್ಲ ಬಂದ, ರಾಜಕಾರಣಕ್ಕೆ ಅವನನ್ನೇ ಕೇಳಬೇಕು : ಪುತ್ರನ ಬಗ್ಗೆ ಸುಮಲತಾ ಮಾತು

    ಈವರೆಗೂ ಇಂಗ್ಲಿಷ್, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸಿರುವ ಲಕ್ಷ್ಮಿ, ಹಲವು ಟಿವಿ ಶೋಗಳಲ್ಲೂ ಕಾಣಿಸಿಕೊಂಡಿದ್ದಾರೆ. ಇಂಗ್ಲಿಷ್ ಸಿನಿಮಾದ ಮೂಲಕವೇ ಇವರು ಸಿನಿಮಾ ರಂಗಕ್ಕೆ ಬಂದಿರುವುದು ವಿಶೇಷ.

  • ಅಂಬಿ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತ ಆಪ್ತ

    ಅಂಬಿ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತ ಆಪ್ತ

    ಬೆಂಗಳೂರು: ನಟ ಅಂಬರೀಶ್ ಚಿತೆಗೆ ಸಕಲ ಸಿದ್ಧತೆಯನ್ನು ನಗರದ ಕಂಠೀರವ ಸ್ಟೂಡಿಯೋದಲ್ಲಿ ಮಾಡಲಾಗಿತ್ತು. ಈ ವೇಳೆ ಅಂಬಿಯ ಆಪ್ತ ಗೆಳೆಯ ನಟ ಮೋಹನ್ ಬಾಬು ಅವರು ಅವರ ಚಿತೆಗೆ ಕಟ್ಟಿಗೆ ಹಾಕುವಾಗ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ನಗರದ ಕಂಠೀರವ ಸ್ಟುಡಿಯೋದಲ್ಲಿ ಅಂಬಿಯ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡುತ್ತಿದ್ದರು. ಈ ವೇಳೆ ಗಣ್ಯರು ಬಂದು ಅಂಬರೀಶ್ ಅವರಿಗೆ ಕಟ್ಟಿಗೆ ಹಾಕುವ ಮೂಲಕ ಅಂತಿಮ ನಮನ ಸಲ್ಲಿಸುತ್ತಿದ್ದರು. ಆಗ ಮೋಹನ್ ಬಾಬು ಅವರು ತಮ್ಮ ಮಗ ಮತ್ತು ಮಗಳ ಜೊತೆ ಬಂದಿದ್ದು, ಅಂಬರೀಶ್ ಅವರಿಗೆ ಸಿದ್ಧಮಾಡಿದ್ದ ಚಿತೆಯ ಬಳಿ ಹೋಗಿದ್ದಾರೆ. ಬಳಿಕ ಕಟ್ಟಿಗೆಯನ್ನು ಕೈಯಲ್ಲಿ ಕೊಟ್ಟ ತಕ್ಷಣ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಳಿಕ ಅವರು ಕುಟುಂಬದವರು ಒಟ್ಟಿಗೆ ಸೇರಿ ಚಿತೆಗೆ ಕಟ್ಟಿಗೆಯನ್ನು ಹಾಕಿದ್ದಾರೆ. ಕೊನೆಗೆ ಕಟ್ಟಿಗೆ ಹಾಕಿ ಕೈ ಮುಗಿದು ಅತ್ತಿದ್ದಾರೆ.

    ನಟ ಅಂಬರೀಶ್ ಅನಾರೋಗ್ಯದ ಕಾರಣ ಶನಿವಾರ ರಾತ್ರಿ ವಿಧಿವಶರಾಗಿದ್ದರು. ಭಾನುವಾರ ಬೆಳಗ್ಗೆ ಗಣ್ಯರಿಗೆ ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಅಂದು ಸಿನಿಮಾರಂಗ ಗೆಳೆಯನಾಗಿದ್ದ ಮೋಹನ್ ಬಾಬು ಅವರು ಸುದ್ದಿ ತಿಳಿದು ಬಂದು ಅಂಬಿಯ ಅಂತಿಮ ದರ್ಶನ ಪಡೆದಿದ್ದರು. ಭಾನುವಾರ ಸಹ ಅಂಬರೀಶ್ ನೋಡಿ ಅವರ ಪಾರ್ಥಿವ ಶರೀರವನ್ನು ಅಪ್ಪಿಕೊಂಡು ಗಳಗಳನೇ ಅತ್ತಿದ್ದರು.

    ನಟ ಚಿರಂಜೀವಿ, ರಜಿನಿಕಾಂತ್, ಸುದೀಪ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಯಶ್ ಸೇರಿದಂತೆ ಇಡೀ ಚಿತ್ರರಂಗವೇ ಅಂಬರೀಶ್ ಅಗಲಿಕೆಯಿಂದ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv