Tag: Mohammed Shariq

  • ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

    ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

    ಮಂಗಳೂರು: ನಗರದಲ್ಲಿ ಕುಕ್ಕರ್ ಬಾಂಬ್ ಸ್ಫೋಟಿಸಿದ ಉಗ್ರ ಶಾರೀಕ್‍ನ (Mohammed Shariq)  ತನಿಖೆ ಮುಂದುವರೆದಿದೆ. ತನಿಖೆ ವೇಳೆ ಎನ್‍ಐಎ (NIA) ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಸಿಕ್ತಾ ಇದೆ. ಆತನ ಹಣದ (Money) ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು ಹೆಚ್ಚಿನ ಹಣ ಡಾಲರ್ (Dollar Money) ಮೂಲಕ ಅಕೌಂಟ್‍ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ. ಮೈಸೂರಿನ (Mysuru) ನೂರಾರು ಮಂದಿಯ ಅಕೌಂಟ್‍ಗೆ ಡಾಲರ್ ಭಾರತೀಯ ಕರೆನ್ಸಿಯಾಗಿ ವರ್ಗಾವಣೆ ಆಗಿದ್ದು 40ಕ್ಕೂ ಅಧಿಕ ಜನರನ್ನು ವಿಚಾರಣೆ ನಡೆಸಲಾಗಿದೆ.

    ಉಗ್ರ ಮಹಮ್ಮದ್ ಶಾರೀಕ್‍ನ ಒಂದೊಂದೇ ಉಗ್ರ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಆತನ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್‍ಐಎ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಇನ್ನೂ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್‍ನನ್ನು ಎನ್‍ಐಎ ಅಧಿಕಾರಿಗಳು ನಿರಂತರ ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತನ ಹಣದ ಮೂಲವನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆತನ ಡಾರ್ಕ್ ವೆಬ್‍ನಲ್ಲಿರುವ (Dark Web) ಅಕೌಂಟ್‍ಗೆ ಡಾಲರ್‌ ರೂಪದಲ್ಲಿ ಸಾಕಷ್ಟು ಹಣ ಬಂದಿರುವ ದಾಖಲೆ ಲಭ್ಯವಾಗಿದ್ದು ಅಧಿಕಾರಿಗಳು ಅದರ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್

    ಡಾರ್ಕ್ ವೆಬ್‍ನಲ್ಲಿರುವ ಶಾರೀಕ್ ಅಕೌಂಟ್‍ಗೆ ಲಕ್ಷಾನುಗಟ್ಟಲೇ ಮೌಲ್ಯದ ಡಾಲರ್ ಡೆಪೋಸಿಟ್ ಆಗಿದ್ದು, ಬಳಿಕ ಅದನ್ನು ಆತ ಭಾರತೀಯ ಕರೆನ್ಸಿಯಾಗಿ ವರ್ಗಾಯಿಸುತ್ತಿದ್ದ. ಭಾರತೀಯ ಕರೆನ್ಸಿಯನ್ನು ತನ್ನ ಪರಿಚಯಸ್ಥರ ಅಕೌಂಟ್‍ಗೆ ಹಾಕಿಸಿ ಅದನ್ನು ಉಪಯೋಗಿಸುತ್ತಿದ್ದ. ಮೈಸೂರಿನಲ್ಲಿ ತಾನೊಬ್ಬ ಹಿಂದೂ ಎಂದು ಹೇಳಿಕೊಂಡು ಸಾಕಷ್ಟು ಜನರನ್ನು ಪರಿಚಯ ಮಾಡಿಕೊಂಡಿದ್ದು, ಅವರ ಅಕೌಂಟ್‍ಗೆ ಹಣ ವರ್ಗಾವಣೆ ಮಾಡುತ್ತಿದ್ದ. ಸುಮಾರು 100 ಅಧಿಕ ಮೈಸೂರಿಗರ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದ್ದು, ಎನ್‍ಐಎ ಅಧಿಕಾರಿಗಳು 40 ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ. ಈತನ ಕೃತ್ಯ ತಿಳಿಯದೇ ಇದ್ದ ಸಾಕಷ್ಟು ಜನ ಈತನ ಸ್ನೇಹವನ್ನು ನಂಬಿ ಅಕೌಂಟ್‍ಗೆ ಹಣ ಹಾಕಿ ಶಾರೀಕ್ ಹೇಳಿದ ಬೇರೆ, ಬೇರೆ ಅಕೌಂಟ್‍ಗೆ ವರ್ಗಾಯಿಸುತ್ತಿದ್ದರು. ಇದನ್ನೂ ಓದಿ: ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

    ಮೈಸೂರು ಮಾತ್ರವಲ್ಲದೆ ನೆರೆಯ ತಮಿಳುನಾಡು, ಕೇರಳ, ಮಧ್ಯ ಪ್ರದೇಶ, ಜಾರ್ಖಂಡ್ ಸೇರಿದಂತೆ ವಿವಿಧ ರಾಜ್ಯಗಳ ಅಕೌಂಟ್‍ಗೂ ಈತನ ಹಣ ವರ್ಗಾವಣೆ ಆಗಿದೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಎಲ್ಲಾ ರಾಜ್ಯದಲ್ಲೂ ತನಿಖೆ ಆರಂಭಿಸಿದ್ದು, ಉಗ್ರನ ಜಾಲ ಇಡೀ ದೇಶದಲ್ಲೇ ಪಸರಿಸಿದ ಆತಂಕ ಎದುರಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

    ಕೊಡಗಿನ ಹೋಂಸ್ಟೇಯಲ್ಲಿ ಇಬ್ಬರು ಮಹಿಳೆಯರೊಂದಿಗೆ ತಂಗಿದ್ದ ಶಾರೀಕ್!

    ಮಡಿಕೇರಿ: ಕೋಮು ಸೂಕ್ಷ್ಮ ಪ್ರದೇಶವಾದ ಕರಾವಳಿಯಲ್ಲಿ (Karavali) ಶಂಕಿತ ಉಗ್ರ ಶಾರೀಕ್ ಆಟೋದಲ್ಲಿ ಕುಕ್ಕರ್ ಬಾಂಬ್ (Cooker Bomb) ಹಿಡಿದುಕೊಂಡು ಬಂದು ಭಾರೀ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಿ ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ್ದ. ಈ ಬಾಂಬ್ ಬ್ಲಾಸ್ಟ್ ಮಾಡುವ ಮೊದಲು ಕೊಡಗು ಜಿಲ್ಲೆಯ ಹೋಂಸ್ಟೇ ಒಂದಕ್ಕೆ ಆತ ಮತ್ತು ಇಬ್ಬರು ಮಹಿಳೆಯರು (Womens) ಸೇರಿ ಆತನ ತಂಡ ಬಂದು ಹೋಗಿತ್ತು ಎಂದು ಇದೀಗ ತನಿಖೆ ವೇಳೆ ತಿಳಿದು ಬಂದಿದೆ.

    ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿ ಶಾರೀಕ್ (Mohammed Shariq)  ಹಾಗೂ ಆತನ ಸಹಚರರು ಕೊಡಗು ಜಿಲ್ಲೆಗೂ ಭೇಟಿ ನೀಡಿದ್ರು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಅಧಿಕಾರಿಗಳು ಹಾಗೂ ಮಂಗಳೂರು (Mangaluru) ಪೊಲೀಸರು ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹೋಂಸ್ಟೇಗೆ ಶಾರೀಕ್ ಜೊತೆ ಅತನ ಸಹಚರರು ಸೇರಿದಂತೆ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್‌!

    ಹೀಗಾಗಿ ಎನ್‍ಐಎ ತನಿಖಾ ತಂಡ ಹಾಗೂ ಮಂಗಳೂರು ಪೊಲೀಸರು ಹೋಂಸ್ಟೇಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಹೋಂಸ್ಟೇ ಮಾಲೀಕರನ್ನು ವಿಚಾರಣೆ ನಡೆಸಿದಾಗ ಶಾರೀಕ್ ಹಾಗೂ ಅವನೊಂದಿಗೆ ಸಹಚರರು ಹಾಗೂ ಇಬ್ಬರು ಮಹಿಳೆಯರು ಬಂದು ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಹೋಂಸ್ಟೇ ಮಾಲೀಕನನ್ನು ಮಂಗಳೂರಿಗೆ ಬರುವಂತೆ ಪೊಲೀಸರು ತಿಳಿಸಿ ಹೋಗಿದ್ದಾರೆ. ಇದನ್ನೂ ಓದಿ: ಕುಕ್ಕರ್ ಬ್ಲಾಸ್ಟ್ ಕೇಸ್‍ನಲ್ಲಿ NIAಗೆ ಸ್ಫೋಟಕ ಮಾಹಿತಿ- ಉಗ್ರನ ಅಕೌಂಟ್‍ಗೆ ಬರ್ತಿತ್ತು ಡಾಲರ್

    ಈ ಓಟೆಕಾಡ್ ಹೋಂಸ್ಟೇ ಮಾಲೀಕರು ಪಂಚಾಯತ್‍ನಿಂದ ಕಳೆದ ಆರು ತಿಂಗಳ ಹಿಂದೆಯಿಂದ ಲೈಸೆನ್ಸ್ ತೆಗೆದುಕೊಳ್ಳದೆ ಹಾಗೂ ಹೋಂಸ್ಟೇ ಮಾರ್ಗಸೂಚಿ ಪಾಲನೆ ಮಾಡದೆ ಇರುವುದರಿಂದ ಹೋಂಸ್ಟೇಗೆ ಯಾರು ಬರುತ್ತಾರೆ, ಹೋಗುತ್ತಾರೆ ಅನ್ನೋದರ ಬಗ್ಗೆ ದಾಖಲೆಗಳು ಇಲ್ಲ ಅನ್ನೋದು ಎನ್‍ಐಎ ಆಧಿಕಾರಿಗಳಿಗೆ ತಿಳಿದು ಬಂದಿದೆ. ಈ ಬಗ್ಗೆ ಗ್ರಾಮಪಂ ಅಧ್ಯಕ್ಷೆ ಚೋಟ್ಟೆಯoಡಮಡ ಸರಿತಾ ಮಾತನಾಡಿ, ಉಗ್ರ ಶಾರೀಕ್ ನಮ್ಮ ಗ್ರಾಮಕ್ಕೂ ಬಂದು ಹೋಗಿರುವುದು ನಿಜಕ್ಕೂ ಗ್ರಾಮದ ಜನರಿಗೆ ಅತಂಕ ಉಂಟುಮಾಡಿದೆ. ಯಾರೇ ಹೋಂಸ್ಟೇ, ರೆಸಾರ್ಟ್ ನಡೆಸುವ ಮಾಲೀಕರು ಬರುವ ಪ್ರವಾಸಿಗರ ಮೂಲ ದಾಖಲೆ ಹಾಗೂ ಮಾಹಿತಿಗಳನ್ನು ತೆಗೆದುಕೊಂಡು ಅನುಮಾನ ಬರುವ ವ್ಯಕ್ತಿಗಳು ಕಂಡುಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]