Tag: mohammed nalpad

  • ಟೆಡೆಕ್ಸ್ ಟಾಕ್ಸ್ ನಲ್ಲಿ ಡ್ರಗ್ಸ್, ಪಾರ್ಟಿ ಬಗ್ಗೆ ಉದ್ದುದ್ದ ಭಾಷಣ ಬಿಗಿದಿದ್ದ ರೌಡಿ ನಲಪಾಡ್- ಈಗ ಜನರಿಂದ ಮಂಗಳಾರತಿ

    ಟೆಡೆಕ್ಸ್ ಟಾಕ್ಸ್ ನಲ್ಲಿ ಡ್ರಗ್ಸ್, ಪಾರ್ಟಿ ಬಗ್ಗೆ ಉದ್ದುದ್ದ ಭಾಷಣ ಬಿಗಿದಿದ್ದ ರೌಡಿ ನಲಪಾಡ್- ಈಗ ಜನರಿಂದ ಮಂಗಳಾರತಿ

    ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿ ಸದ್ಯ ಜೈಲು ಸೇರಿರೋ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಹಲ್ಲೆ ನಡೆದ 11 ದಿನಗಳ ಹಿಂದೆ ಮಾದಕವಸ್ತುಗಳ ನಿಗ್ರಹದ ಬಗ್ಗೆ ಭಾಷಣ ಮಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ. ಇದನ್ನು ನೋಡಿದ ಜನ ಈಗ ನಲಪಾಡ್ ಬಗ್ಗೆ ಉಗಿದು ಉಪ್ಪಾಕ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಟೆಡೆಕ್ಸ್ ಸಂಘಟನೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯುವ ಶಕ್ತಿ ವಿಷಯದ ಬಗ್ಗೆ ನಲಪಾಡ್ ಮಾತನಾಡಿದ್ದ. ಮಾದಕ ವಸ್ತುಗಳ ನಿಗ್ರಹಕ್ಕೆಂದು ಟೀಮ್ ನಲಪಾಡ್ ಕಟ್ಟಿಕೊಂಡಿದ್ದೇನೆ ಎಂದು ಹೇಳಿದ್ದ. ನಲಪಾಡ್ ಮಾದಕವ್ಯಸನದ ಅಮಲಿನಲ್ಲೇ ಹಲ್ಲೆ ನಡೆಸಿರಬಹುದು ಎಂಬ ಅನುಮಾನ ಪೊಲೀಸರಿಗೆ ಇದೆ. ಆರೋಪಿಯ ವೈದ್ಯಕೀಯ ಪರೀಕ್ಷೆ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

    ಭಾಷಣದಲ್ಲಿ ನಲಪಾಡ್, ತನ್ನ ರಾಜಕೀಯ ಎಂಟ್ರಿ ಬಗ್ಗೆ ಮಾತಾಡಿದ್ದಾನೆ. ನನಗೀಗ 27 ವರ್ಷ, ಯುವಜನರ ಶಕ್ತಿ ಏನೆಂಬುದನ್ನು ತೋರಿಸಲು ರಾಜಕೀಯಕ್ಕೆ ಬಂದೆ. ಎರಡು ಪ್ರಮುಖ ಸವಾಲುಗಳ ವಿರುದ್ಧ ನಾನು ಹೋರಾಡಬೇಕಿದೆ. ಒಂದು ಮತಗಳ ಮಾರಾಟ. ಇನ್ನೊಂದು ಡ್ರಗ್ಸ್ ದಂಧೆ ಎಂದು ಹೇಳಿದ್ದಾನೆ. ಇದನ್ನೂ ಓದಿ: ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

    ಹಣಕ್ಕಾಗಿ ಮತಗಳನ್ನು ಮಾರಾಟ ಮಾಡುವುದು ತಪ್ಪು ಅನ್ನೋದು ಎಲ್ಲರಿಗೂ ಗೊತ್ತು. ಆದರೂ ಅದನ್ನೇ ಎಲ್ಲರೂ ಮಾಡುತ್ತಿದ್ದಾರೆ. ಯುವಜನತೆ ಡ್ರಗ್ಸ್ ವ್ಯಸನಿಗಳಾಗುತ್ತಿದ್ದಾರೆ. ಈ ಮಾತುಗಳನ್ನು ನಾನು ಬರೆದುಕೊಂಡು ಹೇಳುತ್ತಿಲ್ಲ. ನೇರವಾಗಿ ಹೃದಯದಿಂದ ಹೇಳುತ್ತಿದ್ದೇನೆ ಎಂದಿದ್ದ.

    ನನ್ನ ತಾತ ಹಾಗೂ ತಂದೆ ಇಬ್ಬರೂ ರಾಜಕಾರಣಿಗಳು. ಮನೆಯಲ್ಲೇ ಆಡಳಿತ ನೋಡುತ್ತ ಬೆಳೆದವನು ನಾನು. ಯುವ ಜನರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಬೇಕು ಎಂಬುದು ನನ್ನ ಉದ್ದೇಶ. ನನಗೂ ಬಹಳ ಸ್ನೇಹಿತರು ಇದ್ದಾರೆ. ಅವರಲ್ಲಿ ಹಲವರು ವ್ಯಸನಿಗಳಾಗುತ್ತಿರುವುದನ್ನು ನೋಡುತ್ತಿದ್ದೇನೆ. ಆಗ ನಾನು ಏನು ಮಾಡುತ್ತಿದ್ದೇನೆ, ಬೇರೆಯವರು ಏನು ಮಾಡುತ್ತಿದ್ದಾರೆ. ಸಮಾಜದಲ್ಲಿ ಏನಾಗುತ್ತಿದೆ ಎಂಬ ಚಿಂತೆ ನನ್ನನ್ನು ಕಾಡುತ್ತದೆ ಎಂದು ಹೇಳಿದ್ದ. ಇದನ್ನೂ ಓದಿ:   ರೌಡಿ ನಲಪಾಡ್ ಪ್ರಕರಣಕ್ಕೆ ಆರಂಭದಲ್ಲೇ ಸಮಾಧಿ ಕಟ್ಟಲು ಮುಂದಾದ ಪೊಲೀಸರು!

    14 ವರ್ಷಕ್ಕೇ ಸಾಕಷ್ಟು ಮಕ್ಕಳು ವ್ಯಸನಿಗಳಾಗುತ್ತಿದ್ದಾರೆ. ಹೀಗಾಗಿ ಶಾಲೆ, ಕಾಲೇಜುಗಳಿಗೆ ಹೋಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದೇನೆ. ಯಾವುದು ಕೆಟ್ಟದ್ದು, ಯಾವುದು ಒಳ್ಳೆಯದು ಎಂದು ತಿಳಿಸುತ್ತಿದ್ದೇನೆ. `ಆ್ಯಂಟಿ ಡ್ರಗ್ಸ್ ಡ್ರೈವ್’ ಆರಂಭಿಸಿದಾಗ ಬೆದರಿಕೆಗಳು ಬಂದವು. ಅದು ಸೂಕ್ಷ್ಮ ವಿಷಯ. ನಿನಗೆ ಏಕೆ ಬೇಕು ಎಂದು ಹಲವರು ಎಚ್ಚರಿಸಿದರು. ನಾನು ಹುಟ್ಟಿದ್ದು ಒಮ್ಮೆ. ಸಾಯುವುದು ಸಹ ಒಮ್ಮೆಯೇ. ನಿತ್ಯವೂ ಸಾಯುವುದಿಲ್ಲ. ಹೃದಯ ಹೇಳಿದಂತೆ ಕೆಲಸ ಮಾಡುತ್ತೇನೆಂದು ಅವರಿಗೆಲ್ಲ ಹೇಳಿದ್ದೆ’ ಎಂದೆಲ್ಲಾ ಉದ್ದುದ್ದ ಭಾಷಣ ಬಿಗಿದಿದ್ದ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ಭಾರತ 2020ರ ಹೊತ್ತಿಗೆ ಬಲಶಾಲಿ ದೇಶವಾಗಬೇಕು. ಅದನ್ನು ಸಾಧಿಸುವ ಕೆಲಸದಲ್ಲಿ ನಾನು ಪಾಲ್ಗೊಂಡಿದ್ದೇನೆ. ನೀವೆಲ್ಲರೂ ಪಾಲ್ಗೊಳ್ಳಬೇಕು. ನಮ್ಮ ತಂಡದ ಪ್ರತಿನಿಧಿಗಳಾಗಿ ಡ್ರಗ್ಸ್ ವಿರುದ್ಧ ಹೋರಾಡಬೇಕು ಎಂದು ನಲಪಾಡ್ ಹೇಳಿದ್ದ. ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ ವೈಯಕ್ತಿಕ ಜೀವನಕ್ಕೆ ಸೀಮಿತವಾಗಿರುತ್ತಾನೋ ಆತ ಉತ್ತಮ ವ್ಯಕ್ತಿ ಆಗುತ್ತಾನೆ. ಯಾವ ವ್ಯಕ್ತಿ ವೈಯಕ್ತಿಕ ಜೀವನದೊಂದಿಗೆ ಸಮಾಜ ಹಾಗೂ ದೇಶದ ಬಗ್ಗೆ ಯೋಚಿಸುತ್ತಾನೋ ಆತ ಮಹಾನ್ ವ್ಯಕ್ತಿ ಆಗುತ್ತಾನೆ. ನಾನು ಮಹಾನ್ ವ್ಯಕ್ತಿ ಆಗಬೇಕು. ನೀವೆಲ್ಲರೂ ಮಹಾನ್ ವ್ಯಕ್ತಿಯಾಗಲು ಬಯಸುತ್ತೇನೆ ಎಂದಿದ್ದ. ಇದನ್ನೂ ಓದಿ:  ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಪಾರ್ಟಿ ಮಾಡೋದು ತಪ್ಪಲ್ಲ, ಮಿತಿ ಇರಬೇಕು ಅಂದಿದ್ದ: ನಾನೂ ಪಾರ್ಟಿಗೆ ಹೋಗುತ್ತೇನೆ. ನನ್ನದೇ ಸ್ನೇಹಿತ ವರ್ಗವಿದೆ. ಆದ್ರೆ ಯಾವುದು ಸರಿ? ಏನು ಮಾಡ್ಬೇಕು, ಏನು ಮಾಡಬಾರದು ಅನ್ನೋದು ನನಗೆ ಗೊತ್ತು. ನಾನು ಕಾಲೇಜುಗಳಿಗೆ ಹೋದಾಗ ಹೇಳ್ತಿದ್ದೆ, ಪಾರ್ಟಿ ಮಾಡೋದು ತಪ್ಪಲ್ಲ. ನಮ್ಮ ಒತ್ತಡಗಳನ್ನ ಹೊರಹಾಕಬೇಕು. ಬರೀ ಓದುವುದು, ಕಾಲೇಜಿಗೆ ಓದಿ ಬರಲು ಆಗಲ್ಲ. ಫನ್ ಮಾಡಬೇಕು. ಆದ್ರೆ ಅದು ಸಿನಿಮಾಗೆ ಹೋಗೋದು, ಹೊರಗಡೆ ಹೋಗೋದಕ್ಕೆ, ನೈಟ್ ಕ್ಲಬ್‍ಗೆ ಸೀಮಿತವಾಗಿರಬೇಕು. ಆದ್ರೆ ಕೆಲವರು ನಿಮ್ಮನ್ನ ತಪ್ಪು ದಾರಿಗೆ ಕೊಂಡೊಯ್ಯಬಹುದು. ಅದು ಸಿಗರೇಟ್‍ನಿಂದ ಶುರುವಾಗಬಹುದು. ಅದರಿಂದ ವೀಡ್‍ಗೆ ದಾರಿ ಮಾಡಿಕೊಡುತ್ತದೆ. ಅದು ಮತ್ತೊಂದಕ್ಕೆ ಪ್ರಚೋದಿಸುತ್ತದೆ. ಕೊನೆಗೆ ಅದರಿಂದ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ಈ ಬಗ್ಗೆ ನಿಮಗೆ ಎಚ್ಚರ ಇದ್ರೆ ಸಾಕು. ಈ ಬಗ್ಗೆ ಗೂಗಲ್‍ನಲ್ಲಿ ಹುಡುಕಿ ನೋಡಿ ಏನು ಲಾಭ ಇದೆ ಅಂತ. ಗೂಗಲ್ ಕೂಡ ಏನೂ ಲಾಭ ಇಲ್ಲ ಎಂದು ಹೇಳುತ್ತೆ ಎಂದೆಲ್ಲಾ ಹೇಳಿದ್ದ. ಇದನ್ನೂ ಓದಿ:ಶಾಂತಿನಗರದಲ್ಲಿ ರೌಡಿ ನಲಪಾಡ್ ಹೇಳಿದ್ದೇ ಶಾಸನವಂತೆ..!

    ಭಾಷಣದ ವಿಡಿಯೋವನ್ನು ಟೆಡೆಕ್ಸ್ ಟಾಕ್ಸ್ ಯುಟ್ಯೂಬ್ ಚಾನಲ್‍ನಲ್ಲಿ ಅಪ್‍ಲೋಡ್ ಮಾಡಲಾಗಿದ್ದು, ಅದನ್ನು ವೀಕ್ಷಿಸಿದವರು, ನಲಪಾಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಅಳಿಸಿಹಾಕುವಂತೆ ಒತ್ತಾಯಿಸಿದ್ದಾರೆ. ಬೆಂಗಳೂರಿನ ಗೂಂಡಾ ರೌಡಿ, ಟೆಡೆಕ್ಸ್ ಟಾಕ್ಸ್ ನಲ್ಲಿ ಕ್ರಿಮಿನಲ್, ಟೀಂ ನಲಪಾಡ್ ಪಾರ್ಟಿ ಮಾಡಲು ಹೋದಾಗ ಏನಾಯ್ತು ಅಂತ ನಮಗೆಲ್ಲಾ ಗೊತ್ತು ಅಂತ ಜನ ಕಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ನಲಪಾಡ್ ಬಳಿ ಇವೆ ಪೊಲೀಸರು, ಮಿಲಿಟರಿಯವರು ಬಳಸೋ ಬೋರ್ ಗನ್!

    ಮೊನಿಷ್ ಗೌಡ ಎಂಬವರು ಕಮೆಂಟ್ ಮಾಡಿ, `ಕೇರಳದಿಂದ ಬಂದು ಬೆಂಗಳೂರು ಹಾಳು ಮಾಡುತ್ತಿದ್ದಾನೆ. ಇದಕ್ಕೆ ಕಬ್ಬನ್ ಪಾರ್ಕ್ ಪೊಲೀಸರು ಸಹಕರಿಸುತ್ತಿದ್ದಾರೆ’ ಎಂದಿದ್ದಾರೆ. ಇದನ್ನೂ ಓದಿ:ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ

    ಮಧು ಗೌಡ್, `ಈತ ಕ್ರಿಮಿನಲ್. ಈ ವಿಡಿಯೊ ಅಳಿಸಿಹಾಕಿ’ ಎಂದಿದ್ದಾರೆ. ಅಜಯ್ ಆಂಥೋನಿ, `ಈತ ರೌಡಿ. ಮುಂಬರುವ ರಾಜಕಾರಣಿ’ ಎಂದು ಪ್ರತಿಕ್ರಿಯೆ ಹಾಕಿದ್ದಾರೆ. ಇದನ್ನೂ ಓದಿ: ರೌಡಿ ನಲಪಾಡ್ ಹೊಗಳಿ ಈಗ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಪ್ರಕಾಶ್ ರೈ

    https://www.youtube.com/watch?v=Td7mLFnMccM

  • ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ

    ವಿದ್ವತ್ ಮೇಲೆ ನಲಪಾಡ್ ಹಲ್ಲೆ ಪ್ರಕರಣ- ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದ ಯುಬಿ ಸಿಟಿ ಸಿಬ್ಬಂದಿ

    ಬೆಂಗಳೂರು: ಉದ್ಯಮಿ ಲೋಕನಾಥ್ ಅವರ ಮಗ ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಬಿ ಸಿಟಿ ಸಿಬ್ಬಂದಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಮುಂದಾಗಿದ್ದರು ಎಂಬ ವಿಚಾರ ಬಯಲಾಗಿದೆ.ಇದನ್ನೂ ಓದಿ: ಕರ್ನಾಟಕ ರಣಜಿ ಆಟಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ರೌಡಿ ನಲಪಾಡ್!

    ಹಲ್ಲೆ ನಡೆಸಿದ ಸಿಸಿಟಿವಿ ಬಚ್ಚಿಟ್ಟ ಸಿಬ್ಬಂದಿ ಮತ್ತೊಂದು ವಿಡಿಯೋ ಕೊಟ್ಟು ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರ ದಿಕ್ಕು ತಪ್ಪಿಸಲು ಮುಂದಾಗಿದ್ದರು. ಈ ಮೊದಲು ಸಿಸಿಟಿವಿ ಪರಿಶೀಲನೆ ವೇಳೆ ಹಲ್ಲೆ ದೃಶ್ಯಾವಳಿಗಳನ್ನ ಯುಬಿ ಸಿಟಿ ಸಿಬ್ಬಂದಿ ತೋರಿಸಿದ್ದರು. ನಂತರ ಆ ವಿಡಿಯೋಗಳನ್ನ ನೀಡುವಂತೆ ಸಿಸಿಬಿ ಪೊಲೀಸರು ಸೂಚಿಸಿದ್ದರು. ಆಗ ಸಿಬ್ಬಂದಿ ಪೊಲೀಸರು ಹೇಳಿದ್ದ ವಿಡಿಯೋ ಮುಚ್ಚಿಟ್ಟು ಮತ್ತೊಂದು ವಿಡಿಯೋ ಕೊಟ್ಟಿದ್ದಾರೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ನಂತರ ಸಿಸಿಬಿ ಕಚೇರಿಯಲ್ಲಿ ವಿಡಿಯೋ ಪರಿಶೀಲನೆ ವೇಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿರುವುದು ಬೆಳಕಿಗೆ ಬಂದಿದೆ. ಇದೇ ವಿಚಾರವಾಗಿ ಭಾನುವಾರದಂದು ಪೊಲೀಸರು ಯುಬಿ ಸಿಟಿಯ ಫರ್ಜಿ ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಯುಬಿ ಸಿಟಿ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಂತರ ಸಿಸಿಬಿ ಪೊಲೀಸರು ಯುಬಿ ಸಿಟಿಯ ಸಂಪೂರ್ಣ ಡಿವಿಆರ್ ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಮೈಮೇಲೆ ಕುರ್ಚಿಗಳನ್ನು ಎಸೆದ್ರು, sorry ಎಂದರೂ ಬಿಯರ್ ಬಾಟಲಿಯಿಂದ ಬಾಯಿಗೆ ಹೊಡೆದ್ರು- ನಲಪಾಡ್ ದಾಳಿ ಬಗ್ಗೆ ವಿದ್ವತ್ Exclusive ಮಾತು

    ಸಿಸಿಟಿವಿ ದೃಶ್ಯಗಳೇ ಈ ಘಟನೆಗೆ ಪ್ರಮುಖ ಸಾಕ್ಷ್ಯಗಳಾಗಿತ್ತು. ಈ ಹಿನ್ನೆಲೆಯಲ್ಲಿ ಅರೋಪಿ ನಲಪಾಡ್ ರಕ್ಷಣೆಗೆ ಯುಬಿ ಸಿಟಿ ಸಿಬ್ಬಂದಿ ನಿಂತಿದ್ದಾರಾ ಎಂಬ ಶಂಕೆ ಮೂಡಿದೆ. ಇದನ್ನೂ ಓದಿ: ಜೈಲಿಗೆ ಹೋದ ಎರಡೇ ದಿನಕ್ಕೆ ನಲಪಾಡ್ ಕೈಗೆ ಸಿಕ್ತು ಮೊಬೈಲ್ ಫೋನ್!

    ಇದನ್ನೂ ಓದಿ:  ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

    ವಿದ್ವತ್- ಹಲ್ಲೆಗೊಳಗಾದ ಯುವಕ.

  • ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

    ಜೈಲಿನಲ್ಲೂ ಮುಂದುವರಿದ ನಲಪಾಡ್ ಪುಂಡಾಟ- ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದ ಸ್ನೇಹಿತ ಅಬ್ರಾಸ್ ಮೇಲೆ ಹಲ್ಲೆ

    ಬೆಂಗಳೂರು: ಯುಬಿ ಸಿಟಿಯ ಫರ್ಜಿ ರೆಸ್ಟೋರೆಂಟ್‍ನಲ್ಲಿ ಗೂಂಡಾಗಿರಿ ಮಾಡಿ ಪರಪ್ಪನ ಅಗ್ರಹಾರ ಜೈಲು ಸೇರಿರೋ ಶಾಸಕ ಹ್ಯಾರಿಸ್ ಮಗ ಮೊಹಮ್ಮದ್ ನಲಪಾಡ್ ನ ಪುಂಡಾಟ ಜೈಲಿನಲ್ಲೂ ಮುಂದುವರಿದಿದೆ.ಇದನ್ನೂ ಓದಿ: ಫರ್ಜಿ ಕೆಫೆಯಲ್ಲಿ ನಲಪಾಡ್ ಗುಂಡಾಗಿರಿ ಪ್ರಕರಣಕ್ಕೆ ಮೆಗಾ ಟ್ವಿಸ್ಟ್

    ಸ್ನೇಹಿತನ ಮೇಲೆಯೇ ರೌಡಿ ನಲಪಾಡ್ ಕೈ ಮಾಡಿದ್ದಾನೆ. ಸಹ ಅರೋಪಿ ಅಬ್ರಾಸ್ ಜೊತೆ ಮಹಮ್ಮದ್ ನಲಪಾಡ್ ಹೊಡೆದಾಡಿಕೊಂಡಿದ್ದಾನೆ. ನಿನ್ನಿಂದಲೇ ನಮಗೂ ಈ ಗತಿ ಬಂತು. ನಿನ್ನಿಂದ ನಾವು ಜೈಲು ಸೇರುವಂತಾಯ್ತು ಎಂದು ಎ5 ಅರೋಪಿ ಅಬ್ರಾಸ್ ಹೇಳಿದ್ದಾನೆ. ಇದರಿಂದ ಕೆರಳಿದ ಮಹಮ್ಮದ್ ನಲಪಾಡ್, ಅಬ್ರಾಸ್ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾನೆ. ತಾವಿದ್ದ ಕೊಠಡಿಯಲ್ಲೇ ಅಬ್ರಾಸ್ ಮತ್ತು ನಲಪಾಡ್ ಬಾಡಿದಾಡಿಕೊಂಡಿದ್ದಾರೆ. ನಂತರ ಜೈಲು ಸಿಬ್ಬಂದಿ ಅಬ್ರಾಸ್‍ನನ್ನ ಬೇರೆ ಸೆಲ್‍ಗೆ ವರ್ಗಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶಾಂತಿನಗರದ ಪ್ರಿನ್ಸ್ ರೌಡಿ ನಲಪಾಡ್ ಈಗ ಪರಪ್ಪನ ಅಗ್ರಹಾರಕ್ಕೆ ಶಿಫ್ಟ್!

    ನಲಪಾಡ್ ರಾತ್ರಿ ಕಣ್ಣಿರು ಹಾಕುತ್ತಾ ಊಟ ಮಾಡಿದ್ದಾನೆ ಎನ್ನಲಾಗಿದೆ. ಪಬ್, ರೆಸ್ಟೋರೆಂಟ್ ನಲ್ಲಿ ಶೋಕಿ ಜೀವನ ನಡೆಸುತ್ತಿದ್ದ ನಲಪಾಡ್ ರಾತ್ರಿ ಜೈಲಿನಲ್ಲಿ ಅನ್ನ ಸಂಬಾರ್ ತಿಂದಿದ್ದಾನೆ. ಬೆಳಗಿನ 4ರ ತನಕ ನಲಪಾಡ್ ಎದ್ದಿದ್ದ ಎಂದು ಹೇಳಲಾಗಿದೆ. ಇದನ್ನೂ ಓದಿ: ಖಾಸಗಿ ವಿಮಾನ ಖರೀದಿಸಲು ಮುಂದಾಗಿದ್ದ ರೌಡಿ ನಲಪಾಡ್!

    ಮೊಹಮ್ಮದ್ ನಲಪಾಡ್ ನಿಂದ ತೀವ್ರ ಹಲ್ಲೆಗೊಳಗಾಗಿ ಅಸ್ಪತ್ರೆ ಸೇರಿರುವ ವಿದ್ವತ್‍ಗೆ ಮಲ್ಯ ಅಸ್ಪತ್ರೆಯಲ್ಲಿ ನಾಲ್ಕನೇ ದಿನವೂ ಚಿಕಿತ್ಸೆ ಮುಂದುವರೆದಿದೆ. ತೀವ್ರ ನಿಗಾ ಘಟಕದಲ್ಲಿ ವಿದ್ವತ್‍ಗೆ ಚಿಕಿತ್ಸೆ ನೀಡುತ್ತಿದ್ದು ಮುಖದ ಊತ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಗಾಯದ ನೋವು ಜಾಸ್ತಿ ಇರುವುದರಿಂದ ವಿದ್ವತ್‍ಗೆ 102 ಡಿಗ್ರಿ ಜ್ವರ ಇತ್ತು. ಇದೀಗ 101 ಡಿಗ್ರಿಗೆ ಜ್ವರ ಇಳಿಮುಖವಾಗಿದ್ದು, ವೈದ್ಯರು ಐಸಿಯುನಲ್ಲಿ ಚಿಕಿತ್ಸೆ ನೀಡ್ತಿದ್ದಾರೆ. ಇದನ್ನೂ ಓದಿ: ನನ್ನ ಸೋದರನಿಗೆ ನೋವಾದ್ರೆ, ನನಗೂ ನೋವಾಗುತ್ತೆ- ವಿದ್ವತ್‍ಗೆ ನ್ಯಾಯ ದೊರಕಬೇಕೆಂದು ಒತ್ತಾಯಿಸಿದ ಗುರು ರಾಜ್‍ಕುಮಾರ್

    ಇನ್ನೂ ಮೂರ್ನಾಲ್ಕು ದಿನ ವಿದ್ವತ್‍ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲು ವೈದ್ಯರು ನಿರ್ಧರಿಸಿದ್ದಾರೆ. ವಿದ್ವತ್ ಮುಖ, ಕಣ್ಣು, ಮೂಗು, ಹಾಗೂ ಪಕ್ಕೆಲುಬುಗಳ ಮೂಳೆ ಮುರಿದಿದ್ದರಿಂದ ವಿದ್ವತ್ ಮೊದಲಿನಂತಾಗಲು ತಿಂಗಳಿಗೂ ಹೆಚ್ಚು ಕಾಲ ಬೇಕಾಗುತ್ತೆ ಎನ್ನಲಾಗಿದೆ.

    ವಿದ್ವತ್ ಅರೋಗ್ಯ ವಿಚಾರಿಸಲು ರಾಘವೇಂದ್ರ ರಾಜ್‍ಕುಮಾರ್ ಅವರ ಮಗ ಗುರುರಾಜ್ ಕುಮಾರ್ ಅಗಮಿಸಿದ್ದರು. ಇದೇ ವೇಳೆ ರಾಘವೇಂದ್ರ ರಾಜ್‍ಕುಮಾರ್ ಮನೆಯಿಂದ ಊಟ ಸಹ ತಂದು ಕೊಟ್ಟಿದ್ದು, ವಿದ್ವತ್ ಶೀಘ್ರ ಗುಣವಾಗಲೀ ಅಂತ ಹಾರೈಸಿದ್ರು.

    https://www.youtube.com/watch?v=p8o_3v5-ZYs

    https://www.youtube.com/watch?v=XE5CFfnOvx0

    https://www.youtube.com/watch?v=RtMFKdQtfME