Tag: Mohammed Nalapad

  • ಬಿಟ್ ಕಾಯಿನ್ ಕೇಸ್ – ಒಂದು ದಿನ ಮೊದಲೇ ವಿಚಾರಣೆಗೆ ಹಾಜರಾದ ನಲಪಾಡ್!

    ಬಿಟ್ ಕಾಯಿನ್ ಕೇಸ್ – ಒಂದು ದಿನ ಮೊದಲೇ ವಿಚಾರಣೆಗೆ ಹಾಜರಾದ ನಲಪಾಡ್!

    ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ (Bitcoin Case) ಯುವ ಕಾಂಗ್ರೆಸ್ ಅಧ್ಯಕ್ಷ ಮಹಮದ್ ನಲಪಾಡ್‌ (Nalapad), ನೋಟಿಸ್‌ ನೀಡಿದ್ದಕ್ಕಿದಂತ ಒಂದು ದಿನದ ಮುಂಚೆಯೇ ಎಸ್‌ಐಟಿ (SIT) ವಿಚಾರಣೆಗೆ ಹಾಜರಾಗಿದ್ದಾರೆ.

    ಶುಕ್ರವಾರ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೋಟಿಸ್‌ ನೀಡಿತ್ತು. ಮಾಧ್ಯಮಗಳ ಕಣ್ತಪ್ಪಿಸೋ ಸಲುವಾಗಿ ಇಂದೇ ನಲಪಾಡ್ ವಿಚಾರಣೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿ ಡಿವೈಎಸ್ಪಿ ಬಾಲರಾಜು ಹೇಳಿಕೆ ದಾಖಲು ಮಾಡಿಕೊಳ್ಳುತ್ತಿದ್ದಾರೆ.

    ನಲಪಾಡ್ ವಿರುದ್ಧ ಶ್ರೀಕಿ (Shriki) ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಅಲ್ಲದೇ ಶ್ರೀಕಿ ಜೊತೆಗೆ ಕೋಟ್ಯಂತರ ರೂ. ವ್ಯವಹಾರ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿತ್ತು. ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲ್ಪಾಡ್ ಅವರನ್ನು ಎಸ್‍ಐಟಿ ಆರೋಪಿ ಎಂದು ಪರಿಗಣಿಸಿತ್ತು. ಈ ಹಿಂದೆ ಹೇಳಿಕೆ ದಾಖಲು ಮಾಡಿದ್ದ ಎಸ್‍ಐಟಿ ಅಧಿಕಾರಿಗಳು. ಹೇಳಿಕೆಯ ಬಳಿಕ ಆರೋಪಿಯನ್ನಾಗಿಸಿತ್ತು.

    ಪ್ರಕರಣದಲ್ಲಿ ಬಿಜೆಪಿ ಸರ್ಕಾರ ದುರುಪಯೋಗ ಮಾಡಿ ಕೋಟ್ಯಂತರ ರೂ. ಕೊಳ್ಳೆ ಹೊಡೆದಿದೆ ಎಂದು ಕಾಂಗ್ರೆಸ್‌ ಆರೋಪ ಮಾಡಿತ್ತು. ಅದರಂತೆ ಎಸ್‌ಐಟಿ ರಚನೆ ಮಾಡಿ ತನಿಖೆಗೆ ಆದೇಶಿಸಿತ್ತು.

    ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (ಎಸ್‌ಐಟಿ) ನೋಟಿಸ್ ನೀಡಿತ್ತು. ಸಾಮಾನ್ಯವಾಗಿ ಆರೋಪಿತರಿಗೆ ಈ ಸೆಕ್ಷನ್‌ ಅಡಿ ತನಿಖಾಧಿಕಾರಿ ನೋಟಿಸ್‌ ನೀಡಲಾಗುತ್ತದೆ. ಅದೇ ಸೆಕ್ಷನ್‌ ಅಡಿ ನಲಪಾಡ್ ಅವರಿಗೆ ಎರಡನೇ ಬಾರಿ ಎಸ್‌ಐಟಿ ವಿಚಾರಣೆಗೆ ಕರೆದಿರುವುದು ಬಂಧನ ಭೀತಿಗೆ ಕಾರಣವಾಗಿತ್ತು.

  • ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್ ವಿಚಾರಣೆ – ಸರ್ಕಾರ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ: ಪರಮೇಶ್ವರ್

    ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್ ವಿಚಾರಣೆ – ಸರ್ಕಾರ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ: ಪರಮೇಶ್ವರ್

    ಬೆಂಗಳೂರು: ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್ ವಿಚಾರಣೆ ಆಗುತ್ತಿದೆ. ಅದರ ಬಗ್ಗೆ ಸರ್ಕಾರ ಪ್ರತಿಕ್ರಿಯೆ ಕೊಡುವ ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಬಿಟ್‌ಕಾಯಿನ್ ಕೇಸ್‌ನಲ್ಲಿ ನಲಪಾಡ್‌ಗೆ ಪೊಲೀಸರರು ವಿಚಾರಣೆಗೆ ನೋಟಿಸ್ ಕೊಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಿಚಾರಣೆಗೆ ನೋಟಿಸ್ ಕೊಟ್ಟಿದ್ದರೆ ಅದಕ್ಕೆ ನಾನೇನು ಹೇಳಬೇಕು. ಬಿಟ್‌ಕಾಯಿನ್ ತನಿಖೆ ನಡೆಯುತ್ತಿದೆ. ತನಿಖಾಧಿಕಾರಿಗಳಿಗೆ ಯಾರನ್ನು ವಿಚಾರಣೆ ಮಾಡಬೇಕು ಅಂತ ಅನ್ನಿಸುತ್ತದೆ ಅವರನ್ನು ವಿಚಾರಣೆ ಮಾಡ್ತಾರೆ. ಅದರಲ್ಲಿ ನಲಪಾಡ್ ಕೂಡಾ ಒಬ್ಬರು. ಅವರನ್ನು ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಪೊಲೀಸ್ ಅಧಿಕಾರಿಯಾಗಿ ಅಚ್ಚರಿ ಮೂಡಿಸಲಿದ್ದಾರೆ ಬಿಗ್ ಬಾಸ್ ರೂಪೇಶ್ ಶೆಟ್ಟಿ!

    ನಲಪಾಡ್ ಮತ್ತು ಶ್ರೀಕಿ ನಡುವೆ ಸಂಬಂಧ ಇದೆಯಾ ಇಲ್ಲವಾ? ಎನ್ನುವುದನ್ನು ತನಿಖೆ ಮಾಡುತ್ತಾರೆ. ಇನ್ವೆಸ್ಟಿಗೇಷನ್ ಅಂದರೆ ಅದೇ ತಾನೆ. ಯಾರಿಗೆ ಸಂಬಂಧ ಇದೆ, ಇಲ್ಲವಾ? ಹಣಕಾಸು ವ್ಯವಹಾರ ಇದೆಯಾ, ಇಲ್ಲವಾ? ಎಲ್ಲವನ್ನು ತನಿಖೆ ಮಾಡುತ್ತಾರೆ. ತನಿಖೆ ನಡೆಯುತ್ತಿರುವಾಗ, ಒಬ್ಬರನ್ನು ವಿಚಾರಣೆಗೆ ಕರೆದಾಗ ಸರ್ಕಾರ ಉತ್ತರ ಕೊಡಲು ಆಗುವುದಿಲ್ಲ. ಸಂಪೂರ್ಣವಾಗಿ ತನಿಖೆ ಆಗಲಿ. ಬಳಿಕ ಎಲ್ಲಾ ಮಾಹಿತಿ ಕೊಡುತ್ತೇವೆ ಎಂದು ಸ್ಪಷ್ಟಪಡಿಸಿದರು.

    2ನೇ ಏರ್ಪೋರ್ಟ್ ಜಾಗದ ಬಗ್ಗೆ ಚರ್ಚೆ ಅವಶ್ಯಕತೆ ಇಲ್ಲ:
    ಇದೇ ವೇಳೆ ಬೆಂಗಳೂರಿನಲ್ಲಿ 2ನೇ ಏರ್ಪೋರ್ಟ್ ಜಾಗದ ಬಗ್ಗೆ ಮಾತನಾಡಿ, ಎರಡನೇ ಏರ್ಪೋರ್ಟ್ ತುಮಕೂರಾ? ಅಥವಾ ಬಿಡದಿಯಲ್ಲಾ? ಎಂಬ ಚರ್ಚೆ ಅವಶ್ಯಕತೆ ಇಲ್ಲ. ಎಲ್ಲಿ ಏರ್ಪೋರ್ಟ್ ಮಾಡಬೇಕು ಎಂಬ ಚರ್ಚೆ ಯಾಕೆ ಮಾಡಬೇಕು. ಸರ್ಕಾರ ಅಂತಿಮವಾಗಿ ಒಂದು ನಿರ್ಧಾರ ತೆಗೆದುಕೊಳ್ಳುತ್ತದೆ. ಅದು ಒಂದು ಟೆಕ್ನಿಕಲ್ ವಿಷಯ. ಅದನ್ನ ಚರ್ಚೆ ಮಾಡಿ ಅದರ ಸಾಧಕ-ಬಾಧಕಗಳನ್ನ ನೋಡಿ ನಿರ್ಧರಿಸುತ್ತಾರೆ. ಅದಕ್ಕೆ ಇಷ್ಟೊಂದು ಚರ್ಚೆ ಅಗತ್ಯ ಇಲ್ಲ ಎಂದರು.

    ಮೂಲಸೌಕರ್ಯ ಪ್ರಾಜೆಕ್ಟ್, ಜನ ಸಮುದಾಯಕ್ಕೆ, ರಾಜ್ಯಕ್ಕೆ ಅನುಕೂಲ ಆಗಬೇಕು ಅಂತ ಎರಡನೇ ಏರ್ಪೋರ್ಟ್ ಮಾಡ್ತಿರೋದು. ಬಿಡದಿಯಲ್ಲಿ ಮಾಡಿದರೆ ಎಷ್ಟು ಪ್ರಮಾಣದಲ್ಲಿ ಅನುಕೂಲ ಆಗುತ್ತದೆಯೋ, ತುಮಕೂರಿನಲ್ಲಿ ಆದರೂ ಅಷ್ಟೇ ಅನುಕೂಲ ಆಗುತ್ತೆ. ನಮ್ಮ ಬೇಡಿಕೆ ತುಮಕೂರಿನಲ್ಲಿ ಆಗಬೇಕು ಎಂದು ಇಟ್ಟಿದ್ದೇವೆ ಅಷ್ಟೆ. ಅದಕ್ಕೆ ಚರ್ಚೆ ಮಾಡಿ, ಗೊಂದಲ ಸೃಷ್ಟಿ ಮಾಡುವ ಅಗತ್ಯ ಇಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿಗೆ ಜೈಲು – ಬ್ಯಾಂಕ್‌ ವಂಚನೆ ಕೇಸ್‌ನಲ್ಲಿ ದೋಷಿ ಎಂದು ಕೋರ್ಟ್‌ ತೀರ್ಪು

  • ಬಿಟ್ ಕಾಯಿನ್ ಕೇಸ್ – ನಲಪಾಡ್ ಎಸ್‌ಐಟಿ ನೋಟಿಸ್ 

    ಬಿಟ್ ಕಾಯಿನ್ ಕೇಸ್ – ನಲಪಾಡ್ ಎಸ್‌ಐಟಿ ನೋಟಿಸ್ 

    ಬೆಂಗಳೂರು: ಬಿಟ್ ಕಾಯಿನ್ ಕೇಸ್‍ನಲ್ಲಿ ಯುವ ಕಾಂಗ್ರೆಸ್ (Congress) ಅಧ್ಯಕ್ಷ ಮಹಮದ್ ನಲಪಾಡ್ (Mohammed Nalapad) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ನೋಟಿಸ್ ನೀಡಿದೆ.

    ನಲಪಾಡ್ ವಿರುದ್ಧ ಶ್ರೀಕಿ (Shriki) ಜೊತೆಗೆ ಸೇರಿ ಅವ್ಯವಹಾರಕ್ಕೆ ಕೈ ಜೋಡಿಸಿದ ಆರೋಪ ಮಾಡಲಾಗಿದೆ. ಈ ಮೂಲಕ ಬಿಟ್ ಕಾಯಿನ್ ಪ್ರಕರಣದಲ್ಲಿ ನಲ್ಪಾಡ್ ಅವರನ್ನು ಎಸ್‍ಐಟಿ ಆರೋಪಿ ಎಂದು ಪರಿಗಣಿಸಿದ್ದು, ನೋಟಿಸ್ ನೀಡಿದೆ. ಇದನ್ನೂ ಓದಿ: ರಾಜ್ಯದ ಮೊದಲ ಕ್ಯಾನ್ಸರ್ ಡೇ ಕೇರ್ ಕೀಮೋಥೇರಪಿ ಸೆಂಟರ್ ರಾಯಚೂರಿನಲ್ಲಿ ಆರಂಭ

    ಫೆ.7ರಂದು ವಿಚಾರಣೆಗೆ ಹಾಜರಾಗಲು ಎಸ್‌ಐಟಿ ನೋಟಿಸ್‌ನಲ್ಲಿ ಉಲ್ಲೇಖಿಸಿದೆ. ಈ ಹಿಂದೆ ಹೇಳಿಕೆ ದಾಖಲು ಮಾಡಿದ್ದ ಎಸ್‍ಐಟಿ ಅಧಿಕಾರಿಗಳು. ಹೇಳಿಕೆಯ ಬಳಿಕ ಆರೋಪಿಯನ್ನಾಗಿಸಿತ್ತು.

    ಶ್ರೀಕಿ ಜೊತೆಗೆ ಕೋಟ್ಯಾಂತರ ರೂ. ವ್ಯವಹಾರ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಇದನ್ನೂ ಓದಿ: ವಿಜಯೇಂದ್ರರನ್ನ ಕೆಳಗಿಳಿಸಿದರೆ ಬಿಜೆಪಿಗೆ 10 ಸೀಟೂ ಬರಲ್ಲ: ರೇಣುಕಾಚಾರ್ಯ

  • ಮೋದಿಗೆ ಚೊಂಬು ತೋರಿಸಲು ಬಂದ ನಲಪಾಡ್ ಪೊಲೀಸರ ವಶಕ್ಕೆ!

    ಮೋದಿಗೆ ಚೊಂಬು ತೋರಿಸಲು ಬಂದ ನಲಪಾಡ್ ಪೊಲೀಸರ ವಶಕ್ಕೆ!

    – ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಅರ್ಧಗಂಟೆ ಮುಂಚೆಯೇ ಬಂದು ಕುಳಿತಿದ್ದ ನಲಪಾಡ್‌ & ಗ್ಯಾಂಗ್‌

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಗೆ ಚೊಂಬು ತೋರಿಸಲು ಯತ್ನಿಸಿದ ಯುವ ಕಾಂಗ್ರೆಸ್ ಮುಖಂಡ ಮೊಹಮದ್‌ ನಲಪಾಡ್ (Mohammed Nalapa) ಅವರನ್ನು ಪೊಲೀಸರು (Bengaluru Police) ವಶಕ್ಕೆ ಪಡೆದಿರುವ ಘಟನೆ ನಡೆದಿದೆ.

    ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ವಿಜಯ ಸಂಕಲ್ಪ ಸಮಾವೇಶದಲ್ಲಿ ಮೋದಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ 28 ಸ್ಥಾನ ಗೆಲ್ಲಿಸೋಣ, ಆಮೇಲೆ ಕಾವೇರಿ, ಕೃಷ್ಣ ನೀರು ಕೊಡಿ ಅಂತ ಮೋದಿಯನ್ನ ಕೇಳೋಣ: ದೇವೇಗೌಡ

    ಸಮಾವೇಶದ ಬಳಿಕ ಮೋದಿ ಹಿಂದಿರುಗುತ್ತಿದ್ದರು, ಈ ವೇಳೆ ಮೇಖ್ರಿ ಸರ್ಕಲ್ ಬಳಿ ಚೊಂಬು ಪ್ರದರ್ಶನಕ್ಕೆ ಕಾಂಗ್ರೆಸ್ ಮುಖಂಡರು ಯತ್ನಿಸಿದ್ದರು. ಯುವ ಕಾಂಗ್ರೆಸ್ ಮುಖಂಡ ನಲಪಾಡ್ ನೇತೃತ್ವದಲ್ಲಿ ಮೋದಿಗೆ ಚೊಂಬು ತೋರಿಸುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದರು. ಈ ವೇಳೆ ನಲಪಾಡ್ ಸೇರಿದಂತೆ ಇಬ್ಬರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ನಲಪಾಡ್‌ ಚೊಂಬು ಪ್ರದರ್ಶನ ಮಾಡೋದು ತಪ್ಪಾ ಅಂತಾ ಆಕ್ರೋಶ ಹೊರಹಾಕಿದ್ರು.

    ನಂಬರ್‌ ಪ್ಲೇಟ್‌ ಇಲ್ಲದ ಕಾರಿನಲ್ಲಿ ಕುಳಿತಿದ್ದ ನಲಪಾಡ್‌ & ಗ್ಯಾಂಗ್‌:
    ಮೋದಿ ತೆರಳುವ ರಸ್ತೆ ಮಾರ್ಗದಲ್ಲಿ (ಮೇಖ್ರಿ ಸರ್ಕಲ್‌) ಅರ್ಧಗಂಟೆ ಮುಂಚೆಯೇ ಬಂದಿದ್ದ ನಲಪಾಡ್‌ ನಂಬರ್‌ ಇಲ್ಲದ ಕಾರಿನಲ್ಲಿ ಕಾದು ಕುಳಿತಿದ್ದರು. ಕಪ್ಪು ಬಣ್ಣದ ಲ್ಯಾಂಡ್ರೋವರ್ ಡಿಫೆಂಡರ್ ಕಾರಿನಲ್ಲಿ ನಲಪಾಡ್‌ ಜೊತೆಗೆ 8 ಜನ ಇದ್ದರು. ಮೋದಿ ತೆರಳುವ ಸಂದರ್ಭದಲ್ಲೇ ಚೊಂಬು ಪ್ರದರ್ಶನಕ್ಕೆ ಮುಂದಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ದೇವೇಗೌಡರ ಉತ್ಸಾಹವೇ ನಮಗೆ ಪ್ರೇರಣೆ, ಮಾರ್ಗದರ್ಶನ – ಮೋದಿ ಗುಣಗಾನ

  • ರಾಹುಲ್ ಗಾಂಧಿ ಪರ ರೋಡಿಗಿಳಿದ ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‌ಐಆರ್

    ರಾಹುಲ್ ಗಾಂಧಿ ಪರ ರೋಡಿಗಿಳಿದ ಮೊಹಮ್ಮದ್ ನಲಪಾಡ್ ವಿರುದ್ಧ ಎಫ್‌ಐಆರ್

    ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಪರ ರೋಡಿಗಿಳಿದು ಪ್ರತಿಭಟನೆ ನಡೆಸಿದ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ (Mohammed Nalapad) ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

    ರಾಹುಲ್ ಗಾಂಧಿಯ ಭಾರತ್‌ ಜೋಡೊ ನ್ಯಾಯ ಯಾತ್ರೆಗೆ (Bharat Jodo Nyay Yatra) ಅಸ್ಸಾಂನಲ್ಲಿ ಅಡ್ಡಿಪಡಿಸಿದ್ದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ (Congress) ಪ್ರತಿಭಟನೆ ನಡೆಸಿತ್ತು. ಬೆಂಗಳೂರಿನಲ್ಲೂ ಸಹ ರಾಹುಲ್ ಗಾಂಧಿ ಪರ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ನಲಪಾಡ್ ಪಂಜಿನ ಮೆರವಣೆಗೆ ನಡೆಸಿ ಪ್ರತಿಭಟಿಸಿದ್ದರು. ಇದನ್ನೂ ಓದಿ: ಕಲಬುರಗಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಕೇಸ್‍ನಲ್ಲಿ ನಾಲ್ವರ ಬಂಧನ: ಪರಮೇಶ್ವರ್

    ಸದ್ಯ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ರಾಹುಲ್ ಗಾಂಧಿ ಹಾಗೂ 25 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿ ತನಿಖೆ ನಡೆಯುತ್ತಿದೆ.

    ಕಾಂಗ್ರೆಸ್ ಭವನದ ಬಳಿ ಅನುಮತಿ ಪಡೆಯದೇ ಗುಂಪುಗೂಡಿ ಪ್ರತಿಭಟನೆ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿ, ಅಕ್ರಮ ಜಮಾವಣೆ, ಮೈಕ್ ಮೂಲಕ ಅನ್ಸೌಮೆಂಟ್, ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದಡಿ ದೂರು ಹೈಗ್ರೌಂಡ್ ಠಾಣೆಯ ಇನ್‌ಸ್ಪೆಕ್ಟರ್ ಭರತ್ ಸ್ವಯಂ ಪ್ರೇರಿತ ದೂರು ದಾಖಲಿಸಿ, ಎಫ್‌ಐಆರ್ ಮಾಡಲಾಗಿದೆ. ಇದನ್ನೂ ಓದಿ: 900ಕ್ಕೂ ಹೆಚ್ಚು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಹುದ್ದೆಗೆ ಶೀಘ್ರವೇ ನೇಮಕಾತಿ ಪ್ರಕ್ರಿಯೆ: ಪರಮೇಶ್ವರ್

  • ಸರ್ಕಾರಿ ಕಾಲೇಜಿನಲ್ಲಿ ಕಾಂಗ್ರೆಸ್ ಚಿಹ್ನೆ ಫ್ಲೆಕ್ಸ್ – ನಲಪಾಡ್ ಧ್ವಜಾರೋಹಣ

    ಸರ್ಕಾರಿ ಕಾಲೇಜಿನಲ್ಲಿ ಕಾಂಗ್ರೆಸ್ ಚಿಹ್ನೆ ಫ್ಲೆಕ್ಸ್ – ನಲಪಾಡ್ ಧ್ವಜಾರೋಹಣ

    ಮೈಸೂರು: ಸಾಂಸ್ಕೃತಿಕ ನಗರಿಯ ಕಾಲೇಜೊಂದರಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ (Independence Day 2023) ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಚಿಹ್ನೆ ಇರುವ ಫ್ಲೆಕ್ಸ್‌ ಕಾಣಿಸಿಕೊಂಡಿದೆ. ಅಲ್ಲದೇ ಈ ಕಾರ್ಯಕ್ರಮವನ್ನು ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ (Mohammed Nalapad) ಉದ್ಘಾಟಿಸಿದ್ದಾರೆ.

    ಮೈಸೂರಿನ (Mysuru) ಮಹಾರಾಣಿ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷವೊಂದರ ಪ್ರತಿನಿಧಿ ಮುಖ್ಯ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಧ್ವಜಾರೋಹಣ ಕೂಡ ನೆರವೇರಿಸಿದ್ದಾರೆ. ಅಷ್ಟೇ ಅಲ್ಲ ಕಾಂಗ್ರೆಸ್ ಚಿಹ್ನೆ ಇರುವ ಫ್ಲೆಕ್ಸ್ ಅನ್ನು ಕಟ್ಟಿ ಕಾರ್ಯಕ್ರಮ ಮಾಡಲಾಗಿದೆ. ಇದನ್ನೂ ಓದಿ: ಪಾಕಿಸ್ತಾನ ಇಸ್ಲಾಂ ರಾಷ್ಟ್ರ ಎಂದು ಘೋಷಿಸಿಕೊಂಡು ಏನಾಗಿದೆ ಎಂದು ಎಲ್ಲರಿಗೂ ಗೊತ್ತು: ದಿಗ್ವಿಜಯ್ ಸಿಂಗ್

    ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಈ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಹರೀಶ್ ಗೌಡ ಜೊತೆ ಮೊಹಮ್ಮದ್‌ ನಲಪಾಡ್‌ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು ಕಂಡುಬಂತು.

    ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚಿಹ್ನೆಯ ಫ್ಲೆಕ್ಸ್ ಹಾಕಿರುವುದು ಟೀಕೆಗೆ ಕಾರಣವಾಗಿದೆ. ಸರ್ಕಾರಿ ಕಾಲೇಜು ಕಾರ್ಯಕ್ರಮವನ್ನು ಕಾಂಗ್ರೆಸ್ ಕಾರ್ಯಕ್ರಮ ರೀತಿ ಮಾಡುವುದಕ್ಕೆ ಸೂಚಿಸಿದ್ದು ಯಾರು ಎಂದು ಪ್ರಶ್ನಿಸಲಾಗಿದೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ಬಳಿಕ ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ನೇಹಿತನಿಗೆ ಕಾರು ನೀಡದೇ ಕಿರಿಕ್‌- ನಲಪಾಡ್‌ ವಿರುದ್ಧ ದೂರು

    ಸ್ನೇಹಿತನಿಗೆ ಕಾರು ನೀಡದೇ ಕಿರಿಕ್‌- ನಲಪಾಡ್‌ ವಿರುದ್ಧ ದೂರು

    ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್(Mohammed Nalapad) ವಿರುದ್ದ ಸ್ನೇಹಿತನೇ ದೂರು ದಾಖಲಿಸಿದ್ದಾರೆ.

    ಉದ್ಯಮಿ ನಜೀರ್‌ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ(NCR) ದಾಖಲಾಗಿದೆ. ಇದನ್ನೂ ಓದಿ: ಹಿಜಬ್ ಸೂಚನೆ ಕಡೆಗಣನೆ, ಮಹಿಳೆಯರು ಮದುವೆಗೆ ಹೋಗುವ ಉಡುಪು ಧರಿಸಿ ವಿವಿಗೆ ಬರುತ್ತಾರೆ: ತಾಲಿಬಾನ್ ಸಮರ್ಥನೆ

     

     

    ಏನಿದು ಪ್ರಕರಣ?
    ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ(Youth Congress Election) ನಲಪಾಡ್ ಸ್ನೇಹಿತ ನಜೀರ್‌ ಅವರಿಂದ ಫಾರ್ಚೂನರ್ ಕಾರು ಪಡೆದಿದ್ದರು. ಸ್ನೇಹಿತ ಎಂಬ ಕಾರಣಕ್ಕೆ ನಜೀರ್‌ ಕಾರು ನೀಡಿದ್ದರು.

    ಚುನಾವಣೆ ನಡೆದ ಬಳಿಕ ತನ್ನ ಕಾರನ್ನು ಮರಳಿ ಹಿಂದಿರುಗಿಸುವಂತೆ ನಜೀರ್‌ ಕೇಳಿದ್ದಾರೆ. ಆದರೆ ನಲಪಾಡ್‌ ಕಾರು ನೀಡುವ ಮನಸ್ಸನ್ನು ಮಾಡಿರಲಿಲ್ಲ. ಕಾರು ನೀಡದ ನಲಪಾಡ್‌ ಈಗ ಧಮ್ಕಿ ಹಾಕಿದ್ದಾರೆ.

    ಈಗ ಕಾರು ಕೇಳಿದರೆ ಕೊಡಲ್ಲ. ಏನು ಬೇಕಾದರೂ ಮಾಡಿಕೋ ಹೋಗು. ನನ್ನ ಬಳಿ ಯೂತ್‌ ಹುಡುಗರು ಇದ್ದಾರೆ. ನಿನ್ನನ್ನು ನೋಡಿಕೊಳ್ಳುತ್ತಾರೆ. ಮತ್ತೆ ಕಾರು ಕೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ.

    ಕಾರು ಕೊಡದೇ ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ನಲಪಾಡ್‌ ವಿರುದ್ಧ ನಜೀರ್‌ ದೂರು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೇ.. ಇದು ಬೆಂಗಳೂರು ಅಲ್ಲ – ನಲಪಾಡ್‌ಗೆ ಮಂಡ್ಯ ಕಾರ್ಯಕರ್ತನಿಂದ ತರಾಟೆ

    ಹೇ.. ಇದು ಬೆಂಗಳೂರು ಅಲ್ಲ – ನಲಪಾಡ್‌ಗೆ ಮಂಡ್ಯ ಕಾರ್ಯಕರ್ತನಿಂದ ತರಾಟೆ

    ಮಂಡ್ಯ: ಯೂತ್‌ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ಗೆ(Mohammed Nalapad)ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡ ಪ್ರಸಂಗ ಇಂದು ನಡೆಯಿತು.

    ಮೈಸೂರಿನಿಂದ ಹೊರಟ ಭಾರತ್‌ ಜೋಡೋ ಯಾತ್ರೆ(Bharat Jodo Yatra) ಇಂದು ಮಧ್ಯಾಹ್ನ ಪಾಂಡವಪುರಕ್ಕೆ(Padavapura) ಎಂಟ್ರಿಯಾಯಿತು. ನಿಯಂತ್ರಣ ಮಾಡುವ ವಿಚಾರಕ್ಕೆ ಜನರ ಮತ್ತು ಪೊಲೀಸರ ಮಧ್ಯೆ ವಾಗ್ವಾದ ನಡೆಯುತ್ತಿತ್ತು. ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಸೋನಿಯಾ ಕೊಡಗು ಭೇಟಿ ರದ್ದು

    ಈ ವೇಳೆ ಓಡಿ ಬಂದ ನಲಪಾಡ್, ಕೈ ಮುಗಿದು ಜನರನ್ನು ನಿಯಂತ್ರಣ ಮಾಡಲು ಮುಂದಾದರು. ಈ ಸಂದರ್ಭದಲ್ಲಿ ನಲಪಾಡ್ ಅವರನ್ನು ಮಂಡ್ಯದ ಕೈ ಕಾರ್ಯಕರ್ತರೊಬ್ಬರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಹೇ..ಇದು ಬೆಂಗಳೂರು ಅಲ್ಲಾ ಎಂದು ಕೈ ಕಾರ್ಯಕರ್ತರೊಬ್ಬರು ಅವಾಜ್‌ ಹಾಕಿದ್ದಾರೆ. ಅವಾಜ್‌ ಹಾಕಿದ ಬೆನ್ನಲ್ಲೇ ನಲಪಾಡ್‌ ಕೈ ಮುಗಿದು ವಾಪಸ್‌ ಹೋಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • PFI, SDPI, ಭಜರಂಗದಳ ಬ್ಯಾನ್ ಮಾಡಿ: ನಲಪಾಡ್

    PFI, SDPI, ಭಜರಂಗದಳ ಬ್ಯಾನ್ ಮಾಡಿ: ನಲಪಾಡ್

    ರಾಯಚೂರು: ಪಿಎಫ್‌ಐ (PFI), ಎಸ್‌ಡಿಪಿಐ (SDPI) ಹಾಗೂ ಭಜರಂಗದಳ (Bajrang Dal) ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ರಾಜ್ಯ ಕಾಂಗ್ರೆಸ್ ಯುವ (Youth Congress) ಘಟಕದ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ಒತ್ತಾಯಿಸಿದ್ದಾರೆ.

    ಭಾರತ್ ಜೋಡೊ (Bharat Jodo) ಯಾತ್ರೆ ಪೂರ್ವಭಾವಿ ಸಭೆ ಹಿನ್ನೆಲೆಯಲ್ಲಿ ರಾಯಚೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ನಾವು ಮೊದಲಿನಿಂದಲೂ ಈ ಸಂಘಟನೆಗಳನ್ನ ಬ್ಯಾನ್ ಮಾಡಿ ಅಂತಲೇ ಹೇಳುತ್ತಿದ್ದೇವೆ. ಅಷ್ಟೇ ಅಲ್ಲ ಕೋಮು ಸೌಹಾರ್ದ ಕೆಡಿಸುವ ಯಾವುದೇ ಸಂಘಟನೆಯನ್ನಾಗಲಿ ಬ್ಯಾನ್ ಮಾಡಲೇಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ಭಯೋತ್ಪಾದನೆಗೆ (Terrorism) ನಿರುದ್ಯೋಗವೇ (Unemployment) ಕಾರಣ ಅಂತ ನಾನು ಹೇಳಿಲ್ಲ, ಆದರೆ ನನ್ನ ಹೇಳಿಕೆಯನ್ನ ತಿರುಚಲಾಗಿದೆ. ನಾನು ಹೇಳಿದ್ದರ ಉದ್ದೇಶ ಬೇರೆಯಿತ್ತು, ಕೆಲಸ ಇಲ್ಲದಿರೋದಕ್ಕೆ ಯುವಕರು ದಾರಿ ತಪ್ಪುತ್ತಿದ್ದಾರೆ. ಕೆಲವರ ಬೌದ್ಧಿಕ ಮಟ್ಟ ಹಾಗೇ ಇರುತ್ತದೆ. ಅಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ಕೊಡಿ, ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.

    ಪರ್ಸೆಂಟೇಜ್ ವಿಚಾರ ನಾವು ಹೇಳಿರೋದಲ್ಲ:
    ಗುತ್ತಿಗೆದಾರ ಸಂತೋಷ್ ಪಾಟೀಲ್ ಜೀವ ಕಳೆದುಕೊಂಡಿದ್ದಾನೆ. ಪಿಎಸ್‌ಐ (PSI) ಹಗರಣ ಮಾಡಿದ್ದು ನಾವಾ? `ಪೇ-ಸಿಎಂ’ (Pay CM) ಪೋಸ್ಟರ್ ಹಾಕಿದ್ದಕ್ಕೆ ನಮ್ಮನ್ನ ಅರೆಸ್ಟ್ ಮಾಡ್ತಾರೆ. ರಾತ್ರಿ 1 ಗಂಟೆ ಸಮಯದಲ್ಲಿ ಕಚೇರಿ ಮೇಲೆ ರೇಡ್ ಮಾಡ್ತಾರೆ. ಆರೋಪ ಸುಳ್ಳು ಅನ್ನೋದಾದ್ರೆ ನೀವೆಕೆ ಟೆನ್ಷನ್ ತೆಗೆದುಕೊಳ್ತೀರಿ? ಜನರೇ ಸರಿ ತಪ್ಪು ತೀರ್ಮಾನ ಮಾಡುತ್ತಾರೆ. ಆರೋಪ ಸತ್ಯ ಆಗಿರೋದಕ್ಕೆ ನೀವು ಹೀಗೆ ಮಾಡುತ್ತಿದ್ದೀರಿ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬುಡಕ್ಕೆ ಬೆಂಕಿ ಪ್ರೊಟೆಸ್ಟ್

    ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಬುಡಕ್ಕೆ ಬೆಂಕಿ ಪ್ರೊಟೆಸ್ಟ್

    ಬೆಂಗಳೂರು: ರಾಹುಲ್ ಗಾಂಧಿ ಇಡಿ ಸಮನ್ಸ್‌ ಖಂಡಿಸಿ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಬೆಂಕಿ ಹಚ್ಚಿ ಬಂಧನಕ್ಕೊಳಗಾಗಿದ್ದರು. ಇದೀಗ ಕಾರಿಗೆ ಬೆಂಕಿ ಹಾಕಿದ್ದ ಪ್ರಕರಣ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸುತ್ತ ಗಿರ್ಕಿ ಹೊಡೆಯುತ್ತಿದೆ.

    ಇದೀಗ ನಲಪಾಡ್‍ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಿದೆ ಪೊಲೀಸ್ ಮೂಲಗಳು. ಕಳೆದ ಜುಲೈ 21 ರಂದು ಕಾಂಗ್ರೆಸ್ ಪ್ರತಿಭಟನೆ ವೇಳೆ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶಾಂತಿ ನಗರದ ಇಡಿ ಕಚೇರಿ ಮುಂದೆ ಕಾರಿಗೆ ಬೆಂಕಿ ಹಾಕಿ ಬಂಧನಕ್ಕೊಳಗಾಗಿದ್ದರು. ಕಾರ್ಯಕರ್ತರ ತನಿಖೆ ವೇಳೆ ಯೂತ್ ಕಾಂಗ್ರೆಸ್ ಅಧ್ಯಕ್ಷನ ಕಡೆ ಬೆರಳು ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳುತ್ತಿವೆ. ಹಾಗಾಗಿ ಪೊಲೀಸರು ನಲಪಾಡ್ ಪಾತ್ರದ ಬಗ್ಗೆ ಒಂದಷ್ಟು ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡಲಾಗುತ್ತಿದ್ದು, ಸಾಕ್ಷ್ಯಗಳು ಪಕ್ಕಾ ಆದರೆ ನಲಪಾಡ್‌ಗೆ ನೋಟಿಸ್ ನೀಡಲು ತಯಾರಿ ನಡೆಯುತ್ತಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಕಾರಿಗೆ ಬೆಂಕಿ ಇಟ್ಟ ಹೊಣೆ ನಾಯಕನಾಗಿ ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್

    ಸದ್ಯ ಬಂಧಿತ ಕಾರ್ಯಕರ್ತರನ್ನು ವಿಚಾರಣೆ ಮಾಡಿರುವ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಗಳು ಹೇಳಿರುವ ಮಾಹಿತಿಯ ಟೆಕ್ನಿಕಲ್ ಎವಿಡೆನ್ಸ್ ಕಲೆ  ಹಾಕುತ್ತಿದ್ದು, ತಾಂತ್ರಿಕ ಸಾಕ್ಷ್ಯಗಳು ಪತ್ತೆ ಆದರೆ ನಲಪಾಡ್‍ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ನನ್ನ ಮಗ ಕಾಂಗ್ರೆಸ್ ಸೇರ್ಪಡೆ ಆಗ್ತಿರೋದು ನಿಜ: ಬಿಜೆಪಿ MLC ವಿಶ್ವನಾಥ್

    Live Tv
    [brid partner=56869869 player=32851 video=960834 autoplay=true]