Tag: mohammed haris nalapad

  • ಮೋದಿ, ಅಮಿತ್‌ ಶಾ, ಬಿಎಸ್‌ವೈ ಪ್ಲ್ಯಾನ್‌ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳುಹಿಸಿದ್ದರು: ನಲಪಾಡ್‌ ಆರೋಪ

    ಮೋದಿ, ಅಮಿತ್‌ ಶಾ, ಬಿಎಸ್‌ವೈ ಪ್ಲ್ಯಾನ್‌ ಮಾಡಿಯೇ ಪ್ರಜ್ವಲ್‌ನ ವಿದೇಶಕ್ಕೆ ಕಳುಹಿಸಿದ್ದರು: ನಲಪಾಡ್‌ ಆರೋಪ

    ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna) ಅವರು ಭಾರತದಿಂದ ಹೊರಗೆ ಹೋಗುವ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು ಬಿಜೆಪಿ. ಪ್ರಧಾನಿ ಮೋದಿ, ಬಿಜೆಪಿ, ಅಮಿತ್‌ ಶಾ ಹಾಗೂ ಯಡಿಯೂರಪ್ಪ ಅವರೇ ಪ್ಲ್ಯಾನ್‌ ಮಾಡಿ ವಿದೇಶಕ್ಕೆ ಕಳುಹಿಸಿದ್ದರು ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್ (Mohammed Haris Nalapad) ಆರೋಪಿಸಿದ್ದಾರೆ.

    ಪ್ರಜ್ವಲ್‌ ರೇವಣ್ಣ ಬೆಂಗಳೂರಿಗೆ ವಾಪಸ್‌ ಆದ ಬಗ್ಗೆ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ನಲಪಾಡ್‌, ಪ್ರಜ್ವಲ್‌ ರೇವಣ್ಣ ಅವರು ಭಾರತದಿಂದ ಹೊರಗೆ ಹೋಗುವ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದು ಬಿಜೆಪಿ (BJP) ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಕೇಸ್: ಇದುವರೆಗೆ ಏನಾಯ್ತು? – ಇಲ್ಲಿದೆ ಪಿನ್‌ ಟು ಪಿನ್‌ ಡಿಟೇಲ್ಸ್….

    ಏಪ್ರಿಲ್‌ 26ರಂದು ಕರ್ನಾಟದಲ್ಲಿ ಮೊದಲ ಹಂತದ ಚುನಾವಣೆ ಮುಗಿಯುತ್ತಿದ್ದಂತೆ ರಾಜತಾಂತ್ರಿಕ ಪಾಸ್‌ಪೋರ್ಟ್‌ನೊಂದಿಗೆ ಅವರನ್ನು ವಿದೇಶಕ್ಕೆ ಕಳುಹಿಸಲಾಗಿದೆ. ಇದು ಬಿಜೆಪಿಯ ಪ್ರಾಯೋಜಿತ ಕಾರ್ಯಕ್ರಮ. ಇದೀಗ 7ನೇ ಹಂತದ ಮತದಾನ ನಡೆಯಬೇಕಿರುವ ಸಂದರ್ಭದಲ್ಲಿ ವಿದೇಶದಿಂದ ಕರೆಸಿದ್ದಾರೆ. ಬಿಜೆಪಿ, ನರೇಂದ್ರ ಮೋದಿ ಜೀ (PM Modi Ji), ಅಮಿತ್ ಶಾ ಮತ್ತು ನಮ್ಮ ಯಡಿಯೂರಪ್ಪ ಜಿ ಎಲ್ಲರೂ ಒಟ್ಟಾರೆ ಪ್ಲ್ಯಾನ್‌ ಮಾಡಿ ಹೊರಗೆ ಕಳುಹಿಸಿದ್ದರು. ನೀವೇ ಯೋಚನೆ ಮಾಡಿ ಯಾರಾದರೂ ಕುಟುಂಬಸ್ಥರಿಗೂ ಹೇಳದೇ ಮನೆ ಬಿಟ್ಟು ಹೋಗ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ.

    ಇದೇ ವೇಳೆ ನಾನೂ ಈಗಷ್ಟೇ ದೆಹಲಿಯಿಂದ ಬರ್ತಿದ್ದೇನೆ ಅಂತಾ ಬೋರ್ಡಿಂಗ್ ಪಾಸ್ ತೋರಿಸಿದ ನಳಪಾಡ್, ನಾನು ದೆಹಲಿಯಿಂದ ಬರುತ್ತಿರುವಾಗಲೇ ಆಕಸ್ಮಿಕವಾಗಿ ಪ್ರಜ್ವಲ್ ಸಹ ಬರ್ತಿದ್ದಾನೆ ಅಂತ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: ಅರೆಸ್ಟ್‌ ಬಳಿಕ SIT ಕಚೇರಿಗೆ ಪ್ರಜ್ವಲ್‌ ರೇವಣ್ಣ; ಏರ್‌ಪೋರ್ಟ್‌ನಲ್ಲಿ ಏನೆಲ್ಲಾ ಬೆಳವಣಿಗೆ ಆಯ್ತು? – ಮುಂದೇನು ಕ್ರಮ?

    ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಅವರು ಕೊನೆಗೂ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಏಪ್ರಿಲ್ 27ರಂದು ಜರ್ಮನಿಗೆ ಹಾರಿದ್ದ ಪ್ರಜ್ವಲ್ ಜರ್ಮನಿಯ ಮ್ಯೂನಿಕ್‌ನಿಂದ ಬಂದ ಲುಫ್ತಾನ್ಸಾ ಏರ್‌ಲೈನ್ಸ್‌ನ ಡಿಎಲ್‌ಎಚ್ 764 ಎ 359 ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಮಿಗ್ರೇಷನ್‌ ಪ್ರಕ್ರಿಯೆ ಮುಗಿದ ಬಳಿಕ ಎಸ್‌ಐಟಿ ಅಧಿಕಾರಿಗಳು ಬಂಧಿಸಿ ಕರೆದೊಯ್ದಿದ್ದಾರೆ. ಇದನ್ನೂ ಓದಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮಧ್ಯರಾತ್ರಿ ಏರ್‌ಪೋರ್ಟ್‌ನಲ್ಲೇ ಅರೆಸ್ಟ್!

  • ಮೋದಿ-ಅದಾನಿಯ ಪ್ರೀತಿ ಷಹಜಹಾನ್ – ಮಮ್ತಾಝ್‌ನಂತೆ, ಇದನ್ನ ಜನಕ್ಕೆ ತಿಳಿಸಬೇಕು – ನಲಪಾಡ್

    ಮೋದಿ-ಅದಾನಿಯ ಪ್ರೀತಿ ಷಹಜಹಾನ್ – ಮಮ್ತಾಝ್‌ನಂತೆ, ಇದನ್ನ ಜನಕ್ಕೆ ತಿಳಿಸಬೇಕು – ನಲಪಾಡ್

    ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ (Youth Congress) ಅಧ್ಯಕ್ಷ ಮೊಹಮ್ಮದ್ ನಲಪಾಡ್ (Mohammed Haris Nalapad) ಅಂಡ್ ಟೀಂ ಬೆಂಗಳೂರಿನ (Bengaluru) ವಿವಿಧೆಡೆ ವಿಶೇಷ ರೀತಿಯಲ್ಲಿ ಪ್ರೇಮಿಗಳ ದಿನವನ್ನ (Valentine’s Day) ಆಚರಿಸಿತು.

    `ಮೋದಿ ಲವ್ಸ್ ಅದಾನಿ (Gautam Adani), ಅಮಿತ್ ಶಾ ಲವ್ಸ್ ಅದಾನಿ’ ಪೋಸ್ಟರ್ ಹಿಡಿದುಕೊಂಡು ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ ನಲ್ಲಿ ಪ್ರತಿಭಟನೆ ನಡೆಸಿತು. ಇದನ್ನೂ ಓದಿ: ಸಹಕಾರಿ ಬ್ಯಾಂಕ್‌ಗಳ ಅಕ್ರಮದ ತನಿಖೆ ಸಿಬಿಐಗೆ: ಎಸ್‌.ಟಿ.ಸೋಮಶೇಖರ್

    ಕೈಯಲ್ಲಿ ಪೋಸ್ಟರ್ ಗುಲಾಬಿ ಹಿಡಿದುಕೊಂಡಿದ್ದ ನಲಪಾಡ್, ಮೋದಿ (Narendra Modi), ಅದಾನಿ ಮುಖವಾಡ ಧರಿಸಿಕೊಂಡು ಸಾರ್ವಜನಿಕರು ಹಾಗೂ ಮಳಿಗೆದಾರರಿಗೆ ಗುಲಾಬಿ ಹೂವು ನೀಡಿ ಪ್ರೇಮಿಗಳ ದಿನದ ಶುಭ ಕೋರಿದರು. ಇದನ್ನೂ ಓದಿ: ಬಿಜೆಪಿಯದ್ದು ತ್ರಿಬಲ್ ಎಂಜಿನ್ ಸರ್ಕಾರ.. ಇವ್ರು ಕರ್ನಾಟಕ ಉಳಿಸ್ತಾರಾ: ಹೆಚ್‌ಡಿಕೆ ಪ್ರಶ್ನೆ

    ಈ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ನಲಪಾಡ್, ಮೋದಿ ಮತ್ತು ಅದಾನಿ ನಡುವಿನ ಪ್ರೀತಿ ಷಹಜಹಾನ್-ಮಮ್ತಾಝ್ ರೀತಿಯಂತೆ. ಮಮ್ತಾಝ್‌ಗಾಗಿ ಷಹಜಹಾನ್ ತಾಜ್ ಮಹಲ್ ಕಟ್ಟಿಸಿದಂತೆ, ಅದಾನಿಗಾಗಿ ಮೋದಿ ದೇಶದಲ್ಲಿ ರಸ್ತೆಗಳನ್ನ ಮಾಡಿಸುತ್ತಿದ್ದಾರೆ, ದೇಶವನ್ನು ಅವರಿಗೆ ಬೇಕಾದಂತೆ ಮಾಡಿಕೊಡುತ್ತಿದ್ದಾರೆ. ಹೀಗಾಗಿ ಅವರ ಪ್ರೀತಿಯನ್ನು ಸಾರ್ವಜನಿಕರಿಗೆ ತಿಳಿಸಲು ನಾವು ಪ್ರೇಮಿಗಳ ದಿನಾಚರಣೆಯ ರ‍್ಯಾಲಿ ಮಾಡುತ್ತಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಿ.ಕೆ ಹರಿಪ್ರಸಾದ್ ನೀಡಿದ ʼವೇಶ್ಯೆʼ ಹೇಳಿಕೆಯಲ್ಲಿ ತಪ್ಪಿಲ್ಲ: ನಲಪಾಡ್

    ಬಿ.ಕೆ ಹರಿಪ್ರಸಾದ್ ನೀಡಿದ ʼವೇಶ್ಯೆʼ ಹೇಳಿಕೆಯಲ್ಲಿ ತಪ್ಪಿಲ್ಲ: ನಲಪಾಡ್

    ಹುಬ್ಬಳ್ಳಿ: ಪಕ್ಷಾಂತರ ಮಾಡುವವರೆಗೆ ಬಿ.ಕೆ.ಹರಿಪ್ರಸಾದ್‌ (BK Hariprasad) ಸರಿಯಾಗಿ ಹೇಳಿದ್ದಾರೆ. ವೇಶ್ಯೆಯರ ಬಗ್ಗೆ ತಪ್ಪು ಮಾತನಾಡಿಲ್ಲ. ಆದರೆ ಅವರ ಮಾತು ವೇಶ್ಯೆಯರಿಗೆ ಬೇಜಾರು ಆಗಿದೆ. ಇದರಿಂದ ಅವರು ಕ್ಷಮೆ ಕೇಳಿದ್ದಾರೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿಕೆಯನ್ನು ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಹಮ್ಮದ್ ನಲಪಾಡ್ (Mohammed Haris Nalapad) ಸಮರ್ಥಿಸಿಕೊಂಡರು.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿ.ಕೆ ಹರಿಪ್ರಸಾದ್ ಮಾತನಾಡುವಾಗ ನಾನು ಸಹ ಅದೇ ವೇದಿಕೆಯಲ್ಲಿ ಇದ್ದೆ. ಪಕ್ಷದ ಚಿಹ್ನೆ ಮೇಲೆ ಗೆದ್ದು, ಬೇರೆ ಕಡೆ ಹೋದರೆ ಅವರ ನಡತೆಯನ್ನು ಸ್ಪಷ್ಟಪಡಿಸುತ್ತದೆ. ಇನ್ನೊಂದು ಪಕ್ಷಕ್ಕೆ ಹಣಕ್ಕಾಗಿ ಮಾರಾಟ ಆದವರನ್ನು ಏನೆಂದು ಕರಿಬೇಕು ಎಂದು ಪ್ರಶ್ನಿಸಿದರು.

    ಬಿಜೆಪಿ (BJP) ಸರ್ಕಾರ ಡಕ್ ಔಟ್ ಆಗಿದೆ. ಇವಾಗ ಸೆಂಚುರಿ ಹೊಡೆಯಲು ಇವರೇನು ತೆಂಡೂಲ್ಕರ್, ಕೊಹ್ಲಿನಾ? 4 ವರ್ಷದಲ್ಲಿ ಏನೂ ಮಾಡದೆ ಲಾಸ್ಟ್ 100 ದಿನದಲ್ಲಿ ಏನ್ ಮಾಡ್ತಾರೆ. ಇವರು ಆಲ್ ರೆಡಿ ಡಕೌಟ್ ಆಗಿದ್ದಾರೆ. ಡಕೌಟ್ ಆದ ಗಿರಾಕಿ ಹತ್ರ ನಾನು ಮಾತಾಡಲ್ಲ. ಕಾಂಗ್ರೆಸ್ ಅಂದ್ರೆ ಬಿಜೆಪಿಗೆ ನಡುಕ ಶುರುವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬಂದರೆ ಇವರು ಬೆವತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಕೊಡುವ ಯೋಜನೆ ನೋಡಿ ಭಯ ಬೀಳುತ್ತಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಕೇರಳದಲ್ಲಿ ಹಕ್ಕಿ ಜ್ವರ – ಗಡಿಯಲ್ಲಿ ಕಟ್ಟೆಚ್ಚರ

    ಮೋದಿ ಮುಖ ನೋಡಿ ಬಿಜೆಪಿ ಇಲ್ಲಿವರೆಗೂ ಬಂದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ (Congress) ಬಗ್ಗೆ ಪ್ರೀತಿ ಇದೆ. ಬೇರೆ ಎಲ್ಲಿ ಆದರೂ ಹೋಗಿ ಕಾಂಗ್ರೆಸ್ ಏನ್ ಮಾಡಿದೆ ಅಂತಾ ಕೇಳಬಹುದು. ಆದರೆ ಕರ್ನಾಟಕದಲ್ಲಿ (Karnataka) ಕೇಳೋಕೆ ಆಗಲ್ಲ. ನಾವು ವಿದ್ಯುತ್, ಗೃಹಿಣಿಗೆ ಹಣ ಕೊಡುವ ಯೋಜನೆ ರೂಪಿಸಿದ್ದೇವೆ ಎಂದರು. ಇದನ್ನೂ ಓದಿ: ಹಿಂದಿನ ಸರ್ಕಾರಗಳದ್ದು ಕೇವಲ ವೋಟು ಬ್ಯಾಂಕ್‌ ರಾಜಕಾರಣ, ನಮ್ಮ ಆಧ್ಯತೆ ವಿಕಾಸ: ಮೋದಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉದ್ಯೋಗ ಇಲ್ಲದ್ದಕ್ಕೆ ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ: ಶಂಕಿತ ಉಗ್ರರು ಅರೆಸ್ಟ್ ಪ್ರಶ್ನೆಗೆ ನಲಪಾಡ್ ಉತ್ತರ

    ಉದ್ಯೋಗ ಇಲ್ಲದ್ದಕ್ಕೆ ಯುವಕರು ತಪ್ಪು ದಾರಿ ಹಿಡಿಯುತ್ತಿದ್ದಾರೆ: ಶಂಕಿತ ಉಗ್ರರು ಅರೆಸ್ಟ್ ಪ್ರಶ್ನೆಗೆ ನಲಪಾಡ್ ಉತ್ತರ

    ಮೈಸೂರು: ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆಲ್ಲ ಬಿಜೆಪಿಯೇ (BJP) ಹೊಣೆಗಾರರು ಎಂದು ಕೆಪಿಸಿಸಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್  (Mohammed Haris Nalapad) ಹೇಳಿದರು.

    ಶಿವಮೊಗ್ಗದಲ್ಲಿ (Shivamogga) ಐಸಿಸ್ ಸಂಪರ್ಕದಲ್ಲಿದ್ದ ಯುವಕರ ಬಂಧನ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಗ್ರಿ ಪಡೆದ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ ಅವರು ಕ್ರೈಂ ದಾರಿ ಹಿಡಿಯುತ್ತಿದ್ದಾರೆ. ತಪ್ಪಾದ ದಾರಿಯಲ್ಲಿ ಹೋಗುತ್ತಿದ್ದಾರೆ. ಇದೇ ರಾಜ್ಯದಲ್ಲಿ ನಡೆಯುತ್ತಿರುವುದು. ಐಸಿಸ್ ಸಂಘಟನೆ ಅಂತಲ್ಲ. ಯುವಕರು ತಪ್ಪಾದ ದಾರಿ ಹಿಡಿಯುತ್ತಿರುವುದು ಸತ್ಯ. ನಿರುದ್ಯೋಗ ಇರುವ ಕಾರಣ ಯುವಕರು ತಪ್ಪು ದಾರಿ ಹಿಡಿದಿದ್ದಾರೆ. ಇದಕ್ಕೆ ಬಿಜೆಪಿಯೇ ಹೊಣೆಗಾರರಾಗಿದ್ದಾರೆ. ಕೆಲಸ ಇದ್ದರೆ ಯುವಕರಿಗೆ ತಪ್ಪು ದಾರಿಗೆ ತುಳಿಯುವ ಯೋಚನೆ ಬರಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

    bjP

    2023ರ ವರೆಗೆ ಯುವಕರು ತಾಳ್ಮೆಯಿಂದ ಇರಿ. ಸುವರ್ಣ ಕಾಲ ಬರುತ್ತೆ. ತಪ್ಪು ದಾರಿಗೆ ಹೋಗಬೇಡಿ. ಐಸಿಸ್ ಸಂಪರ್ಕದಲ್ಲಿ ಇರುವವರನ್ನು ಭಾರತದಲ್ಲಿ ಇಟ್ಟುಕೊಳ್ಳಬೇಡಿ. ಅವರಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಗಂಜಿ ಗಿರಾಕಿಗಳಿಂದ ದೂರವಿರಿ – ಬಿಜೆಪಿಯಿಂದ ರಿಡೂ ಸಿದ್ದರಾಮಯ್ಯ, ಇಡಿ ಡಿಕೆಶಿ ಅಭಿಯಾನ

    ಬೆಂಗಳೂರಿನಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ (Congress) ವಿರೋಧವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‍ಗೂ ಒತ್ತುವರಿ ತೆರವಿಗೂ ಸಂಬಂಧವಿಲ್ಲ. ಬಿಜೆಪಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಿ. ಒತ್ತುವರಿ ತೆರವು ಮಾಡುವ ಮುನ್ನಾ ವೈಜ್ಞಾನಿಕವಾಗಿ ವರದಿ ತಯಾರಿಸಿ. ವೈಜ್ಞಾನಿಕವಾಗಿ ವರದಿ ತಯಾರು ಮಾಡದೆ ಸಿಕ್ಕ ಸಿಕ್ಕವರ ಮನೆ ಹೊಡೆದರೆ ಹೇಗೆ ಹೇಳಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪಟಾಕಿ ಬ್ಲಾಸ್ಟ್‌ ನೆಪದಲ್ಲಿ ಸ್ಫೋಟಕ ಸ್ಫೋಟ – ಇದು ಶಿವಮೊಗ್ಗ ಶಂಕಿತ ಉಗ್ರನ ಟ್ರಯಲ್‌ ಬ್ಲ್ಯಾಸ್ಟ್‌ ಕಥೆ

    ಭಾರತ್ ಜೋಡೋ ಯಾತ್ರೆ ಸಂಘಟನೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರಲ್ಲೆ ಅಸಮಾಧಾನ ವಿಚಾರದ ಬಗ್ಗೆ ಮಾತನಾಡಿದ ಅವರು, ಪಕ್ಷ ಅಂದ ಮೇಲೆ ಅದು ಮನೆ ಇದ್ದಂತೆ. ಎಲ್ಲಾ ರೀತಿಯ ಮಾತು ಬರುತ್ತವೆ. ನಾವೇ ಮನೆಯೊಳಗೆ ಕೂತು ಮಾತಾಡಿಕೊಂಡು ಸರಿ ಮಾಡಿಕೊಳ್ಳುತ್ತೇವೆ. ಯಾತ್ರೆಯ ಸಂಘಟನೆ ವಿಚಾರದಲ್ಲಿ ಯಾರು ತಾರತಮ್ಯ ಮಾಡಬಾರದು ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    BBMP ಜೆಸಿಬಿ ಆಪರೇಷನ್ – ಒಂದೇ ವಾರದಲ್ಲಿ ನಲಪಾಡ್ ನಾಟಕ ಬಯಲು

    ಬೆಂಗಳೂರು: ರಸ್ತೆಯಲ್ಲಿ ನೀರು ನಿಂತಾಗ ಸರ್ಕಾರದ (Karnataka Government) ವಿರುದ್ಧ ಪ್ರತಿಭಟನೆ (Protest) ನಡೆಸಿದ್ದ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (mohammed haris nalapad) ನಾಟಕ ಒಂದೇ ವಾರದಲ್ಲಿ ಬಯಲಾಗಿದೆ.

    ರಾಜಕಾಲುವೆ (Rajkaluve) ಒತ್ತುವರಿ ಮಾಡಿ ಕಟ್ಟಡ ಕಟ್ಟಿದ ಪರಿಣಾಮ ಮಹಾದೇವಪುರ ವಿಧಾನ ಸಭಾ ಕ್ಷೇತ್ರದ ಕೆಲವೆಡೆ ರಸ್ತೆಯಲ್ಲಿ ನೀರು ನಿಂತಿತ್ತು. ಈ ಸಂದರ್ಭದಲ್ಲಿ ಟ್ರ್ಯಾಕ್ಟರ್‌ ಏರಿ ನಲಪಾಡ್ ಪ್ರತಿಭಟನೆ ನಡೆಸಿದ್ದರು. ಬಳಿಕ ಜಲಾವೃತಗೊಂಡ ರಸ್ತೆಯಲ್ಲಿ ಗಾಳಿ ತುಂಬಿದ ರಬ್ಬರ್ ಟ್ಯೂಬ್ ಮೇಲೆ ಕುಳಿತು ಸಂಚರಿಸುವ ಮೂಲಕ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದರು. ಆದರೆ ಈಗ ನಲಪಾಡ್ ನಿರ್ದೇಶಕರಾಗಿರುವ ನಲಪಾಡ್ ಅಕಾಡೆಮಿ ರಾಜಕಾಲುವೆ ಒತ್ತುವರಿ ಮಾಡಿಕೊಂಡ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: 40percentsarkara ವೆಬ್‌ಸೈಟ್‌ ಓಪನ್‌ – ಬಿಜೆಪಿ ಅಂದ್ರೆ ಭ್ರಷ್ಟಾಚಾರ ಅಭಿಯಾನ ಆರಂಭಿಸಿದ ಕಾಂಗ್ರೆಸ್‌

    ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ (Nalapad Academy) ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಇಂದು ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದರು. ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.

    ಕಾರ್ಯಾಚರಣೆ ಸ್ಥಗಿತಗೊಂಡ ಬೆನ್ನಲ್ಲೇ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಮಾಡಿತ್ತು. ದೊಡ್ಡವರಿಗೆ ಒಂದು ನ್ಯಾಯ? ಬಡವರಿಗೆ ಒಂದು ನ್ಯಾಯ ಸರಿಯೇ ಎಂದು ಕೇಳಿತ್ತು. ನಿರಂತರ ವರದಿಯ ಬಳಿಕ ಬಿಬಿಎಂಪಿ ಜೆಸಿಬಿಗಳು ನಲಪಾಡ್ ಅಕಾಡೆಮಿ ಕಾಂಪೌಂಡ್‌ನ್ನು ಧರೆಗೆ ಉರುಳಿಸಿದೆ. ಇದನ್ನೂ ಓದಿ: ದೀದಿ ವಿರುದ್ಧ ಬಿಜೆಪಿ ಪ್ರತಿಭಟನೆ – ಪೊಲೀಸರಿಂದ ಜಲಫಿರಂಗಿ ಅಸ್ತ್ರ ಬಳಕೆ

    ವಾರದ ಹಿಂದೆ ಮಳೆ ಬಂದಾಗ ಪ್ರತಿಭಟನೆ ನಡೆಸಿದ್ದ ನಲಪಾಡ್, ʻತೊಲಗಲಿ ತೊಲಗಲಿ, ಬಿಜೆಪಿ ತೊಲಗಲಿ, ಜೀವವಿದ್ದರೆ ಜೀವನ – ಬಿಜೆಪಿಯಿದ್ದರೆ ದಹನ, ರಾಜಕಾಲುವೆ ನಿರ್ಮಿಸಿ, ಮಳೆಯಿಂದ ಜನರನ್ನು ರಕ್ಷಿಸಿ ಎಂಬಿತ್ಯಾದಿ’ ಘೋಷಣೆ ಕೂಗುತ್ತ ಪ್ಲಾಸ್ಟಿಕ್ ಟ್ಯೂಬ್ ಮೇಲೆ ಕುಳಿತು ಮೊಹಮ್ಮದ್ ನಲಪಾಡ್ ಪ್ರತಿಭಟನೆ ನಡೆಸಿದ್ದರು. ನಲಪಾಡ್‌ಗೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಸಾಥ್ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಹಣ ಮಾಡಲು ಸರ್ಕಾರ ನಾಲ್ಕನೇ ಅಲೆ ಬರುತ್ತದೆ ಎನ್ನುತ್ತಿದೆ: ನಲಪಾಡ್

    ಹಣ ಮಾಡಲು ಸರ್ಕಾರ ನಾಲ್ಕನೇ ಅಲೆ ಬರುತ್ತದೆ ಎನ್ನುತ್ತಿದೆ: ನಲಪಾಡ್

    ಮಡಿಕೇರಿ: ಕೋವಿಡ್‍ನಿಂದ ಲಕ್ಷಾಂತರ ಜನರ ಸಾವಿಗೆ ಬಿಜೆಪಿ ಸರ್ಕಾರವೇ ನೇರ ಕಾರಣ. ಹಣ ಮಾಡಲು ಬಿಜೆಪಿ ಸರ್ಕಾರದವರು ನಾಲ್ಕನೇ ಅಲೆ ಬರುತ್ತದೆ ಎಂದು ಹೇಳುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ನಲಪಾಡ್ ಹ್ಯಾರಿಸ್ ಗಂಭೀರ ಆರೋಪ ಮಾಡಿದ್ದಾರೆ.

    china-coronavirus covid

    ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋವಿಡ್‍ನಿಂದ ಲಕ್ಷಾಂತರ ಜನರು ಸತ್ತು ಹೋಗಿದ್ದಾರೆ. ಇದಕ್ಕೆ ಪ್ರಧಾನಿ ಅಂದಿನ ಮುಖ್ಯಮಂತ್ರಿ ನೇರ ಕಾರಣ ಕೊರೊನಾದಿಂದ 4.7 ಲಕ್ಷ ಜನ ಸತ್ತಿದ್ದಾರೆ ಅಂತ ಕೇಂದ್ರ ಸರ್ಕಾರ ಹೇಳ್ತಿದೆ. ವಿಶ್ವ ಸಂಸ್ಥೆ 47 ಲಕ್ಷ ಜನ ಸತ್ತಿದ್ದಾರೆ ಅಂತ ಹೇಳಿದೆ. ದೇಶದಲ್ಲಿ ಸತ್ತವರ ಸಾವಿಗೆ ಬಿಜೆಪಿ ಸರ್ಕಾರ ನೇರ ಹೊಣೆಯಾಗಿದೆ. 40% ಕಮಿಷನ್ ಶುರುವಾಗಿದ್ದೇ ಕೊರೊನಾದಿಂದ. ಸತ್ತವರ ಸಂಖ್ಯೆಯನ್ನೂ ಸುಳ್ಳು ಹೇಳಲಾಗುತ್ತಿದೆ. ಪರಿಹಾರ ಕೊಡಬೇಕೆಂಬ ಕಾರಣಕ್ಕೆ ಈ ಥರ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗಾಗಿ ಎಲ್ಲ ಕಾನೂನಾತ್ಮಕ ಪ್ರಯತ್ನ: ಬೊಮ್ಮಾಯಿ

    ಪರಿಹಾರ ಹಣದಲ್ಲಿ ಕಮಿಷನ್ ಸಿಗೋದಿಲ್ಲ. ಸತ್ತವರಿಗೆ ಸಾಂತ್ವನ ಹೇಳೋದಕ್ಕೂ ಸರ್ಕಾರ ಮುಂದಾಗಿಲ್ಲ. ಅಷ್ಟೇ ಅಲ್ಲದೇ ಕೊಡಗು ಜಿಲ್ಲೆಯ ಶಾಸಕಧ್ವಯರು ಇಬ್ಬರು ಭ್ರಷ್ಟಾಚಾರದಲ್ಲಿದ್ದಾರೆ. ಕೊಡಗಿನ ಶಾಸಕರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಹೆದರಿಸುವ ಕೆಲಸ ಹಾಗೂ ಕೇಸ್ ದಾಖಲು ಮಾಡುವ ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಪ್ರಶ್ನೆ ಮಾಡಿದ್ರೆ ಸುಳ್ಳು ಪ್ರಕರಣ ದಾಖಲಿಸಲು ಪ್ರಯತ್ನಿಸುತ್ತಿದ್ದಾರೆ. ಅದನ್ನೆಲ್ಲಾ ಇನ್ನೂ ಬಿಟ್ಟುಬಿಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ನನಗೆ ಅವಕಾಶ ಕೊಟ್ಟಿದ್ದು, ಬೆನ್ನೆಲುಬಾಗಿ ನಿಂತಿದ್ದು ರಾಹುಲ್‍ಗಾಂಧಿ: ರಮ್ಯಾ

    ಸತ್ತವರ ಲೆಕ್ಕ ತಪ್ಪಿಸುವಲ್ಲಿ ಪರಿಹಾರ ನೀಡುವುದರಲ್ಲೂ ಸರ್ಕಾರ ತಾರತಮ್ಯ ಮಾಡಿದೆ. ಅದ್ರೆ, ನಾಲ್ಕನೇ ಅಲೆ ಮೇಲೆ ನನಗೆ ನಂಬಿಕೆ ಇಲ್ಲ. ಬಿಜೆಪಿ ದುಡ್ಡು ಹೊಡೆಯೋಕೆ ನಾಲ್ಕನೇ, ಐದನೇ ಅಲೆ ತರುತ್ತದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

  • ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಲಪಾಡ್ ಅಧಿಕಾರ ಸ್ವೀಕಾರ

    ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ನಲಪಾಡ್ ಅಧಿಕಾರ ಸ್ವೀಕಾರ

    ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

    ಕ್ವೀನ್ಸ್ ರಸ್ತೆಯ ಕೆಪಿಸಿಸಿ ನೂತನ ಕಚೇರಿಯಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ನಡೆಯಿತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಾದರಿಯಲ್ಲೇ ಇಂದಿನ ವೇದಿಕೆ ಕಾರ್ಯಕ್ರಮ ರೂಪುರೇಷೆ ಇತ್ತು. ಡಿಕೆಶಿ ಅಧಿಕಾರ ಸ್ವೀಕಾರಕ್ಕೆ ಪ್ರತಿಜ್ಞಾ ದಿನ ಎಂದು ನಾಮಕರಣ ಮಾಡಲಾಗಿತ್ತು. ನಲಪಾಡ್ ಅಧಿಕಾರ ಸ್ವೀಕಾರಕ್ಕೆ ಯುವ ಪ್ರತಿಜ್ಞಾ ದಿನ ಎಂದು ನಾಮಕರಣ ಮಾಡಲಾಗಿತ್ತು. ನಲಪಾಡ್‍ಗೆ ಪ್ರತಿಜ್ಞಾ ವಿಧಿ ಭೋದಿಸಬೇಕಿದ್ದ ನಿರ್ಗಮಿತ ಅಧ್ಯಕ್ಷ ರಕ್ಷಾ ರಾಮಯ್ಯ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಹಾಗಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಪ್ರತಿಜ್ಞಾ ವಿಧಿ ಭೋದಿಸಿದರು.  ಇದನ್ನೂ ಓದಿ: ಹಿಜಬ್ ನಮ್ಮ ಕುಟುಂಬದ ವಿವಾದ ಪಾಕಿಸ್ತಾನ ತಲೆಹಾಕಬಾರದು: ಫಾತಿಮಾ ಹುಸೇನ್ ಆಕ್ರೋಶ

    ಬಳಿಕ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ನಲಪಾಡ್, ಈ ಒಂದು ದಿನಕ್ಕೆ ಸತತ ಒಂದು ವರ್ಷಗಳಿಂದ ಹೋರಾಟ ಮಾಡಿದ್ದೇನೆ. ನಾನು ಇಲ್ಲಿಯವರೆಗೂ ಒಂದು ಕೆಟ್ಟದ್ದು ಬಯಸಿಲ್ಲ. ನಾನು ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಯುವಕರ ಧ್ವನಿಯಾಗಬೇಕೆಂದು ಒಂದು ವರ್ಷದಿಂದ ಛಲ ಇತ್ತು ಅದು ಇಂದು ಈಡೇರಿದೆ. ಯೂತ್ ಕಾಂಗ್ರೆಸ್‍ಅನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯಬೇಕು ಎಂಬ ಯೋಚನೆ ಮಾಡುತ್ತಿದ್ದೇನೆ ಎಂದರು. ಇದನ್ನೂ ಓದಿ: ಮೋದಿಗೆ ನಾನು ಹೆದರೋಲ್ಲ, ಅವರ ಸೊಕ್ಕು ನೋಡಿ ನಗು ಬರುತ್ತೆ: ರಾಹುಲ್‌ ಗಾಂಧಿ

    ನಾವು ಈಗ ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ನಾನು ಹಿಂದೆ ಒಂದು ತಪ್ಪು ಮಾಡಿದ್ದೆ ನಿಜ. ನನ್ನನ್ನ ಕ್ಷಮಿಸಿ ಸಹಕಾರ ನೀಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಿಮ್ಮ ಮನೆಯಲ್ಲಿ ಅಣ್ಣ, ತಮ್ಮ ಯಾರಾದ್ರು ತಪ್ಪು ಮಾಡಿದರೆ ತಪ್ಪು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡುವಂತೆ ನನಗೂ ಅವಕಾಶ ಮಾಡಿಕೊಡಿ. ನಾನು ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದರು ಅಧ್ಯಕ್ಷನಾಗಲು ಒಂದು ವರ್ಷ ಬೇಕಾಯಿತು. ನನ್ನ ಜೀವನದಲ್ಲಿ ಮಾಡಿದ ಆ ತಪ್ಪು ಎಷ್ಟು ದೊಡ್ಡ ತಪ್ಪು ಅಂತ ನನಗೆ ಗೊತ್ತಾಗಿದೆ ಎಂದು ತಿಳಿಸಿದರು.

    ಮಂದಿನ ದಿನಗಳಲ್ಲಿ ಸಾಕಷ್ಟು ಯೋಜನೆಗಳನ್ನು ಯೂತ್ ಕಾಂಗ್ರೆಸ್ ಹಮ್ಮಿಕೊಳ್ಳುತ್ತದೆ. ನೀವೆಲ್ಲಾ ನನ್ನ ಕೈ ಹಿಡಿದು ಮುನ್ನೆಡಸಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬರುವತನಕ ನಿದ್ದೆ ಇಲ್ಲ. ನಾವು ಅಧಿಕಾರಕ್ಕೆ ಬರುವವರೆಗೂ ಯೂತ್ ಕಾಂಗ್ರೆಸ್‍ಗೆ ರೆಸ್ಟ್ ಇಲ್ಲ. ಮೊದಲಿಗೆ ಅಪ್ಪ ಅಮ್ಮನಿಗೆ ಧನ್ಯವಾದಗಳು ತಿಳಿಸುತ್ತೇನೆ. ತಪ್ಪು ಮಾಡಿದಾಗ ಮತ್ತೊಂದು ಸಲ ತಪ್ಪು ಮಾಡಬೇಡ ಎಂದು ನನಗೆ ಬುದ್ಧಿ ಹೇಳಿದ್ದಾರೆ. ನಾನು ಏನೇ ತಪ್ಪು ಮಾಡಿದ್ರು ಮಗನಾಗಿ ಸಿದ್ದರಾಮಯ್ಯ ತಿಳಿ ಹೇಳಿದ್ದಾರೆ. ನಲಪಾಡ್ ಕಥೆ ಮುಗಿತು ಅಂದುಕೊಂಡಿದ್ದಾಗ ನನ್ನ ಕೈ ಹಿಡಿದು ಇಲ್ಲಿಯತನಕ ತರಿಸಿದ್ದು ನನ್ನ ನಾಯಕ ಡಿ.ಕೆ ಶಿವಕುಮಾರ್, ಬಿ.ವಿ.ಶ್ರೀನಿವಾಸ್ ಅವರೆಲ್ಲರಿಗೂ ಧನ್ಯವಾದಗಳು ಎಂದರು. ಇದನ್ನೂ ಓದಿ: ನೆಚ್ಚಿನ ಶಿಷ್ಯ ನಲಪಾಡ್‌ಗೆ ಡಿಕೆಶಿಯಿಂದ ಸ್ಪೆಷಲ್‌ ಗಿಫ್ಟ್‌

    ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

  • ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ ಅದನ್ನೇ ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಬೇಡಿ: ನಲಪಾಡ್

    ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ ಅದನ್ನೇ ಇಟ್ಟುಕೊಂಡು ಪದೇ ಪದೇ ಟಾರ್ಗೆಟ್ ಮಾಡಬೇಡಿ: ನಲಪಾಡ್

    ಬೆಂಗಳೂರು: ನನ್ನ ಪಾಡಿಗೆ ನನ್ನನ್ನು ಬದುಕಲು ಬಿಡಿ. ನನ್ನ ಜೀವನದಲ್ಲಿ ಒಂದು ತಪ್ಪು ನಡೆದಿದೆ. ಅದನ್ನೇ ಇಟ್ಟುಕೊಂಡು ಪದೇ ಪದೇ ನನ್ನನ್ನು ಟಾರ್ಗೆಟ್ ಮಾಡಬೇಡಿ. ಒಂದೇ ಒಂದು ಕೇಸ್‍ ಅದನ್ನೆ ಸುಧಾರಿಸಿಕೊಳ್ಳುತ್ತಿದ್ದೇನೆ. ನಾನು ಒಬ್ಬ ಸಾಮಾನ್ಯ ಮನುಷ್ಯ ನನಗೂ ಭಾವನೆಗಳಿವೆ. ನನಗೆ ಜೀವನ ಮಾಡೋಕೆ ಬಿಡಿ ಎಂದು ಬಿಟ್ ಕಾಯಿನ್ ಬಗ್ಗೆ ಕೇಳಿದ ಪ್ರಶ್ನೆಗೆ ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಕೈ ಮುಗಿದು ಕೇಳಿಕೊಂಡಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಲಪಾಡ್, 2018 ರವರೆಗೆ ಶ್ರೀಕಿ ನಮ್ಮ ಸಂಪರ್ಕದಲ್ಲಿದ್ದ. ನನ್ನ ತಮ್ಮ ಉಮರ್ ಸ್ನೇಹಿತ ಮನಿಷ್ ಡಿ.ಕೆ. ಅಂತ ಅವನ ಸ್ನೇಹಿತ ಈ ಶ್ರೀಕಿ. ಫರ್ಜಿ ಕೆಫೆ ಗಲಾಟೆ ನಂತರ ಅವನಿಗೂ ನಮಗೂ ಸಂಪರ್ಕ ಇಲ್ಲ. ಆ ವರದಿಯಲ್ಲೂ ಅವನು ಅದನ್ನೆ ಹೇಳಿದ್ದಾನೆ. ಫರ್ಜಿ ಕೆಫೆಯ ಗಲಾಟೆಯಲ್ಲಿ ಬಾಟಲಿ ಎಸೆದಿದ್ದ ಎ3 ಆರೋಪಿ ಆತ. ಈಗ ನೂರಕ್ಕೆ ನೂರು ನಮ್ಮ ಸಂಪರ್ಕದಲ್ಲಿ ಇಲ್ಲ. ಈ ಹಿಂದೆ ಇದ್ದ ಒಂದು ಕೇಸ್‍ನಿಂದ ಹೊರಬಂದು ಈಗಷ್ಟೇ ಉತ್ತಮ ಕೆಲಸಗಳತ್ತ ಮುನ್ನುಗ್ಗುತ್ತಿದ್ದೇನೆ. ಇದೀಗ ಇನ್ನೊಂದು ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಿಹಾಕಲು ನೋಡುತ್ತಿದ್ದಾರೆ. ನನಗೂ ತಂದೆ, ತಾಯಿ ಅಜ್ಜ, ಅಜ್ಜಿ ಇದ್ದಾರೆ ಅವರಿಗೆ ಏನು ಅನ್ನಿಸಬಹುದು ಎಂದು ಗದ್ಗದಿತನಾಗಿ ಕೈ ಮುಗಿದ ನಲಪಾಡ್ ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ದಯವಿಟ್ಟು ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಬಿಜೆಪಿಯವರಿಗೂ, ನಮ್ಮ ಪಕ್ಷದವರಿಗೂ ಕೈ ಮುಗಿದು ಕೇಳುತ್ತೇನೆ. ನನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನನಗೆ ಯಾವಾಗೆಲ್ಲಾ ಒಳ್ಳೆಯದಾಗುತ್ತೆ ಅನ್ನಿಸುತ್ತೋ ಆಗೆಲ್ಲಾ ಹೀಗೆ ಆಗುತ್ತದೆ. ಯುವ ಕಾಂಗ್ರೆಸ್ ಅಧ್ಯಕ್ಷನಾಗಬೇಕಿದ್ದಾಗ ಹೀಗೆ ಆಯಿತು. ಈಗ ಮತ್ತೆ ಅಧ್ಯಕ್ಷ ಸ್ಥಾನ ಸಿಗುವಾಗ ಹೀಗಾಗುತ್ತಿದೆ. ಬಿಟ್ ಕಾಯಿನ್ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ ಇದನ್ನು ಇಲ್ಲಿಗೆ ಬಿಟ್ಟುಬಿಡಿ. ಇದನ್ನೂ ಓದಿ: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಪರಿಚಯ ಅಷ್ಟೇ: ಉಮರ್ ನಲಪಾಡ್

    2018 ಗಲಾಟೆ ಆದ ನಂತರ ಯಾರು ಸಹ ನನ್ನನ್ನು ಸರಿಯಾಗಿ ನೋಡಲ್ಲ. ರಿಕ್ವೆಸ್ಟ್ ಮಾಡ್ಕೋತೀನಿ ನಾನು ಜನರ ಮಧ್ಯೆ ಕೆಲಸ ಮಾಡಬೇಕು ಯುವಕರನ್ನು ಕಟ್ಟಬೇಕು. ನನ್ನನ್ನು ಬದುಕಲು ಬಿಡಿ ನನಗೂ ಶ್ರೀಕಿಗೂ ಯಾವುದೇ ಸಂಬಂಧವಿಲ್ಲ. ಬಿಟ್‍ಕಾಯಿನ್ ಪ್ರಕರಣದಲ್ಲಿ ನನ್ನನ್ನು ಸುಮ್ಮನೆ ಎಳೆದು ತರಬೇಡಿ. ಈ ಪ್ರಕರಣದಲ್ಲಿ ನನ್ನನ್ನು ಸಿಕ್ಕಿಸಿ ಹಾಕಲು ಕುತಂತ್ರ ನಡೆಯುತ್ತಿದೆ. ದಯವಿಟ್ಟು ನಾನು ಯಾವುದೇ ಬಿಟ್‍ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

  • ಗೆದ್ದ ನಲಪಾಡ್‌ಗೆ ಮುಖಭಂಗ – ರಕ್ಷಾ ರಾಮಯ್ಯಗೆ ಅಧ್ಯಕ್ಷ ಪಟ್ಟ

    ಗೆದ್ದ ನಲಪಾಡ್‌ಗೆ ಮುಖಭಂಗ – ರಕ್ಷಾ ರಾಮಯ್ಯಗೆ ಅಧ್ಯಕ್ಷ ಪಟ್ಟ

    ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್ ಪುತ್ರ ನಲಪಾಡ್‌ಗೆ ಭಾರೀ ಮುಖಭಂಗವಾಗಿದ್ದು, ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದ ನಲಪಾಡ್‌ ಸ್ಪರ್ಧೆಯನ್ನೇ ಎಐಸಿಸಿ ಅನುರ್ಜಿತಗೊಳಿಸಿದೆ.

    ಈ ಚುನಾವಣೆಯಲ್ಲಿ ನಲಪಾಡ್‌ 64,203 ಮತ ಪಡೆದಿದ್ದರೆ ರಕ್ಷಾ ರಾಮಯ್ಯ 57,271 ಮತ ಪಡೆದು ಎರಡನೇ ಸ್ಥಾನ ಪಡೆದುಕೊಂಡಿದ್ದರು. ಆದರೆ ರಕ್ಷಾ ರಾಮಯ್ಯ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ .

    ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಎಐಸಿಸಿಯಿಂದ ನಲಪಾಡ್‌ ಸ್ಪರ್ಧೆಯನ್ನೇ ಅನುರ್ಜಿತ ಎಂದು ಘೋಷಣೆ ಮಾಡಲಾಗಿದೆ. ಎಐಸಿಸಿ ಚುನಾವಣಾ ಸಮಿತಿ ಹಾಗೂ ಶಿಸ್ತುಪಾಲನ ಸಮಿತಿ ನಲಪಾಡ್‌ ಹಿನ್ನೆಲೆಯನ್ನು ಗಮನಿಸಿ ಸ್ಪರ್ಧೆಯನ್ನೇ ಅಸಿಂಧುಗೊಳಿಸುವ ತೀರ್ಮಾನ ಮಾಡಿದೆ.

    ನಲಪಾಡ್‌ ಸ್ಪರ್ಧೆಯನ್ನು ಅಸಿಂಧುಗೊಳಿಸಿದ ಕಾರಣ ಮಾಜಿ ಸಚಿವ ಸೀತಾರಾಂ ಪುತ್ರ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಪಟ್ಟ ಸಿಕ್ಕರೆ ಮೂರನೇ ಸ್ಥಾನ ಪಡೆದ ಮಂಜುನಾಥ್ ಉಪಾಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ. ಯೂತ್‌ ಕಾಂಗ್ರೆಸ್‌ ಚುನಾವಣೆ ಜ.10 ರಿಂದ ಜ.12ರವರೆಗೆ ನಡೆದಿತ್ತು.