Tag: Mohammed Faizal

  • ಲಕ್ಷದ್ವೀಪ MP ಅನರ್ಹತೆ ದಿಢೀರ್ ರದ್ದು

    ಲಕ್ಷದ್ವೀಪ MP ಅನರ್ಹತೆ ದಿಢೀರ್ ರದ್ದು

    ನವದೆಹಲಿ: ರಾಹುಲ್ ಗಾಂಧಿ (Rahul Gandhi) ಅನರ್ಹತೆ ವಿಚಾರ ಸದ್ದು ಮಾಡುತ್ತಿರುವ ಹೊತ್ತಲ್ಲೇ ಮಹತ್ವದ ಬೆಳವಣಿಗೆ ನಡೆದಿದೆ. ಲಕ್ಷದ್ವೀಪದ (Lakshadweep) ಎನ್‍ಸಿಪಿ (NCP) ಸಂಸದ (MP) ಮಹ್ಮದ್ ಫೈಸಲ್ (Mohammed Faizal) ವಿರುದ್ಧದ ಅನರ್ಹತೆ ಅಸ್ತ್ರವನ್ನು ಲೋಕಸಭೆ ಕಾರ್ಯಾಲಯ ದಿಢೀರ್ ಎಂದು ಹಿಂಪಡೆದಿದೆ.

    ಮಹ್ಮದ್ ಫೈಸಲ್ ಅವರ ಲೋಕಸಭೆ (Lok Sabha) ಸದಸ್ಯತ್ವವನ್ನು ಪುನರ್‌ಸ್ಥಾಪಿಸಿ ನೋಟಿಫಿಕೇಶನ್ ಹೊರಡಿಸಿದೆ. ಮಹ್ಮದ್ ಫೈಸಲ್ ಅನರ್ಹತೆ ವಿಚಾರ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರುವ ಕೆಲವೇ ಕ್ಷಣಗಳಿಗೆ ಮೊದಲು ಲೋಕಸಭೆ ಕಾರ್ಯಾಲಯ ನೋಟಿಫಿಕೇಷನ್ ಹೊರಡಿಸಿತು. ಈ ಪ್ರಕರಣವೀಗ ರಾಹುಲ್ ಗಾಂಧಿ ಪ್ರಕರಣದ ಮೇಲೆ ಪರಿಣಾಮ ಬೀರುವ ಸಂಭವ ಇದೆ. ಇದನ್ನೂ ಓದಿ: ಅಕ್ರಮ ಗಾಂಜಾ ಮಾರಾಟ- ಮೂವರು ಅರೋಪಿಗಳ ಬಂಧನ

    2009ರ ಕೊಲೆ ಯತ್ನ ಕೇಸಲ್ಲಿ ಮಹ್ಮದ್ ಫೈಸಲ್‍ಗೆ ಇದೇ ಜನವರಿಯಲ್ಲಿ ಸ್ಥಳೀಯ ಕೋರ್ಟ್ 10 ವರ್ಷ ಶಿಕ್ಷೆ ವಿಧಿಸಿತ್ತು. ಈ ಬೆನ್ನಲ್ಲೇ ಮಹ್ಮದ್ ಫೈಸಲ್ ಸಂಸದ ಸ್ಥಾನದಿಂದ ಅನರ್ಹರಾಗಿದ್ದರು. ಆದ್ರೆ, ಸ್ಥಳೀಯ ಕೋರ್ಟ್ ತೀರ್ಪಿಗೆ ಕೇರಳ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಇದಾದ ನಂತರವೂ, ಅನರ್ಹತೆ ತೆರವು ಮಾಡಿಲ್ಲ ಎಂದು ಲೋಕಸಭೆ ಕಾರ್ಯಾಲಯದ ವಿರುದ್ಧ ಮಹ್ಮದ್ ಫೈಸಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಪೂರ್ಣ ಬಹುಮತ : ಎಬಿಪಿ ಸಿ- ವೋಟರ್ ಸಮೀಕ್ಷೆ

  • ಲಕ್ಷದ್ವೀಪ ಸಂಸದನಿಗೆ 10 ವರ್ಷ ಜೈಲು- ಲೋಕಸಭಾ ಸದಸ್ಯತ್ವದಿಂದ ಅನರ್ಹ

    ಲಕ್ಷದ್ವೀಪ ಸಂಸದನಿಗೆ 10 ವರ್ಷ ಜೈಲು- ಲೋಕಸಭಾ ಸದಸ್ಯತ್ವದಿಂದ ಅನರ್ಹ

    ನವದೆಹಲಿ: ಕೊಲೆ ಯತ್ನ ಪ್ರಕರಣದ ದೋಷಿಯಾಗಿರುವ ಲಕ್ಷದ್ವೀಪ (Lakshadweep) ಸಂಸದ (MP) ಮೊಹಮ್ಮದ್ ಫೈಜಲ್‍ ಅವರನ್ನು (Mohammed Faizal) ಲೋಕಸಭಾ  ಸದಸ್ಯತ್ವದಿಂದ ಅನರ್ಹಗೊಳಿಸಿದೆ.

    2009ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪಿಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಯತ್ನಿಸಿದ್ದರು.

    ಈ ಹಿನ್ನೆಲೆಯಲ್ಲಿ 2009ರಲ್ಲಿ ದಾಖಲಾದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕವರಟ್ಟಿಯ ಸೆಷನ್ಸ್ ನ್ಯಾಯಾಲಯವು ಇತ್ತೀಚೆಗೆ ತೀರ್ಪನ್ನು ಪ್ರಕಟಿಸಿತ್ತು. ಈ ತೀರ್ಪಿನ ಅನ್ವಯ ಮೊಹಮ್ಮದ್ ಫೈಜಲ್‍ನನ್ನು ದೋಷಿ ಎಂದು ತಿಳಿಸಿದೆ. ಫೈಝಲ್ ಸೇರಿದಂತೆ ನಾಲ್ವರು ಕೊಲೆ ಯತ್ನ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದನ್ನೂ ಓದಿ: ಸ್ಯಾಂಟ್ರೋ ರವಿ ವಿರುದ್ಧ 1995 ರಿಂದಲೂ ಕೇಸ್‍ಗಳನ್ನು ಜಾಲಾಡ್ತಿರೋ ಪೊಲೀಸರು

    ಈ ಹಿನ್ನೆಲೆಯಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಲೋಕಸಭೆ ಸಚಿವಾಲಯ ತಿಳಿಸಿದೆ. ಮೊಹಮ್ಮದ್ ಫೈಜಲ್ ಲಕ್ಷದ್ವೀಪದ ಸಂಸದರಾಗಿದ್ದರು. ಇದನ್ನೂ ಓದಿ: ಆಡಿಯೋ ವೈರಲ್ ಬೆನ್ನಲ್ಲೇ ಸಿಎಂ ಭೇಟಿ ಮಾಡಿದ ಸಿಪಿವೈ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k