Tag: Mohammed Afsan

  • ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಭಾರತೀಯನ ಸಾವು – ಮರುದಿನವೇ ಸಿಬಿಐ ಮಹತ್ವದ ಕಾರ್ಯಾಚರಣೆ

    ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಭಾರತೀಯನ ಸಾವು – ಮರುದಿನವೇ ಸಿಬಿಐ ಮಹತ್ವದ ಕಾರ್ಯಾಚರಣೆ

    – ಮಾನವ ಕಳ್ಳಸಾಗಣೆಯ ಬೃಹತ್‌ ಜಾಲ ಭೇದಿಸಿದ ಸಿಬಿಐ
    – 7 ಮಹಾನಗರಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಾಏಕಿ ದಾಳಿ

    ನವದೆಹಲಿ: ವಂಚನೆಗೊಳಗಾಗಿ ರಷ್ಯಾ ಸೇನೆಯಲ್ಲಿ (Russia Army) ಸಿಲುಕಿದ್ದ ಹೈದರಾಬಾದ್‌ ಮೂಲದ ಯುವಕ ಸಾವನ್ನಪ್ಪಿದ ಒಂದು ದಿನದ ನಂತರ ಸಿಬಿಐ (CBI) ಮಹತ್ವದ ಕಾರ್ಯಾಚರಣೆ ನಡೆಸಿದೆ. ದೇಶಾದ್ಯಂತ ಸುಮಾರು 7 ಪ್ರಮುಖ ನಗರಗಳಲ್ಲಿ 10ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ ಭಾರತೀಯರನ್ನು ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಜಾಲವನ್ನು ಭೇದಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಹೆಚ್ಚಿನ ವೇತನ ನೀಡುವ ಆಸೆ ತೋರಿಸಿ, ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನೆಪದಲ್ಲಿ ವಿದೇಶಗಳಿಗೆ ಕಳ್ಳಸಾಗಣೆ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸಿಬಿಐ, ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಏಜೆಂಟರಿಗೆ (Human Trafficking Agents) ಸಂಬಂಧಿಸಿದ 7 ಮಹಾನಗರಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ದೆಹಲಿ, ಮುಂಬೈ, ಚೆನ್ನೈ, ತಿರುವನಂತಪುರಂ, ಅಂಬಾಲಾ, ಚಂಡೀಗಢ ಮತ್ತು ಮಧುರೈನಲ್ಲಿ ದಾಳಿ ನಡೆಸಿದೆ. ಸಿಬಿಐ ಪ್ರಕರಣದಲ್ಲಿ ದುಬೈ ಮೂಲದ ಯೂಟ್ಯೂಬ್‌ ಬ್ಲಾಗರ್‌ ಫೈಸಲ್ ಖಾನ್ ಅಲಿಯಾಸ್ ಬಾಬಾ (Faisal Khan alias Baba) ಹೆಸರೂ ದಾಖಲಾಗಿದೆ. ಇದನ್ನೂ ಓದಿ: Shivaratri Speical: ಶಿವಭಕ್ತಿಗೆ ಒಲಿದ ಆಸ್ಟ್ರೇಲಿಯಾ – ಮುಕ್ತಿ ಗುಹೇಶ್ವರ ದೇವಾಲಯದಲ್ಲಿ ಹಲವು ವಿಶೇಷ!

    ಕಳ್ಳಸಾಗಣೆ ಮಾಡುತ್ತಿದ್ದದ್ದು ಹೇಗೆ?
    ಭದ್ರತಾ ಸಿಬ್ಬಂದಿ ಹಾಗೂ ಪೌರ ಕಾರ್ಮಿಕ ಕೆಲಸಗಳಿಗೆ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಅದಕ್ಕಾಗಿ ಹೆಚ್ಚಿನ ವೇತನ ನೀಡುವುದಾಗಿ ಯುವಕರಿಗೆ ಆಮಿಷ ನೀಡುತ್ತಿದ್ದರು. ನಂತರ ಅವರನ್ನು ರಷ್ಯಾ ಸೇನೆಗೆ ತಳ್ಳಿದ್ದು, ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸಿದ್ದರು. ತಮ್ಮ ಮನೆ ಮಕ್ಕಳು ನಾಪತ್ತೆಯಾದ ಬಗ್ಗೆ ಅನೇಕ ಕುಟುಂಬಗಳು ಮಾಧ್ಯಮಗಳೊಂದಿಗೆ ತಮ್ಮ ಸಂಕಷ್ಟ ಹೇಳಿಕೊಂಡಿವೆ. ಈ ವೇಳೆ ಪದೇ ಪದೇ ಫೈಸಲ್ ಖಾನ್ ಹೆಸರು ಕೇಳಿಬಂದಿದೆ. ಇದನ್ನೂ ಓದಿ: ವಂಚನೆಯಿಂದ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹೈದರಾಬಾದ್‌ ಯುವಕ – ಯುದ್ಧದಲ್ಲಿ ದುರಂತ ಸಾವು

    ಈಗಾಗಲೇ ರಷ್ಯಾ ಸೇನೆಯಲ್ಲಿ ಒಂದು ಡಜನ್‌ಗೂ ಹೆಚ್ಚು ಭಾರತೀಯ ಯುವಕರು ಸಿಲುಕಿರುವುದಾಗಿ ಮಾಹಿತಿ ಲಭ್ಯವಾಗಿದ್ದು, ಅವರನ್ನು ಕರೆತರಲು ಭಾರತೀಯ ರಾಯಭಾರ ಕಚೇರಿ ರಷ್ಯಾದ ರಕ್ಷಣಾ ಇಲಾಖೆಯೊಂದಿಗೆ ನಿರಂತರ ಸಂಪರ್ಕ ಸಾಧಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕೃತ್ಯದಲ್ಲಿ ದೆಹಲಿ, ಮುಂಬೈ, ಚಂಡೀಗಢ ಮೂಲದ ಖಾಸಗಿ ಕಂಪನಿಗಳು ಭಾಗಿಯಾಗಿವೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಕಂಪನಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

  • ವಂಚನೆಯಿಂದ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹೈದರಾಬಾದ್‌ ಯುವಕ – ಯುದ್ಧದಲ್ಲಿ ದುರಂತ ಸಾವು

    ವಂಚನೆಯಿಂದ ರಷ್ಯಾ ಸೇನೆಯಲ್ಲಿ ಸಿಲುಕಿದ್ದ ಹೈದರಾಬಾದ್‌ ಯುವಕ – ಯುದ್ಧದಲ್ಲಿ ದುರಂತ ಸಾವು

    ಮಾಸ್ಕೋ: ವಂಚನೆಯ ಜಾಲಕ್ಕೆ ಸಿಕ್ಕಿ ರಷ್ಯಾದ ವ್ಯಾಗ್ನರ್‌ ಪಡೆಯಲ್ಲಿ (Wagner Army) ಸಿಲುಕಿದ್ದ ಭಾರತದ ಹೈದರಾಬಾದಿನ ಯುವಕ ಉಕ್ರೇನ್‌ನಲ್ಲಿ ದುರಂತ ಸಾವಿಗೀಡಾಗಿದ್ದಾನೆ ಎಂದು ರಷ್ಯಾದಲ್ಲಿನ ಭಾರತೀಯ ರಾಯಭಾರ ಕಚೇರಿ (Indian Embassy) ಅಧಿಕಾರಿಗಳು ದೃಢಪಡಿಸಿದ್ದಾರೆ.

    ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ (Ukraine War) ಹೈದರಾಬಾದ್‌ ಮೂಲದ ಯುವಕ ಸಾವನ್ನಪ್ಪಿದ್ದಾನೆ‌ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ಕ್ಷಿಪಣಿ ದಾಳಿಗೆ ಕೇರಳ ಮೂಲದ ವ್ಯಕ್ತಿ ಸಾವು – ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಎಚ್ಚರಿಕೆ ಸಂದೇಶ

    ಯುವಕನನ್ನು ಮೊಹಮ್ಮದ್‌ ಅಸ್ಫಾನ್‌ (Mohammed Afsan )ಎಂದು ಗುರುತಿಸಲಾಗಿದೆ. ಯುವಕನ ಕುಟುಂಬಸ್ಥರು ಪಾರ್ಥೀವ ಶರೀರವನ್ನು ರಷ್ಯಾದಿಂದ ತರಿಸಿಕೊಡುವಂತೆ ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿ ಅವರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಪಾರ್ಥೀವ ಶರೀರವನ್ನು ಭಾರತಕ್ಕೆ ಕಳುಹಿಸಿಕೊಡಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ. ಇದನ್ನೂ ಓದಿ: ಕೆಂಪು ಸಮುದ್ರದ ಅಡಿಯಲ್ಲಿದ್ದ 3 ಡೇಟಾ ಕೇಬಲ್‌ಗಳಿಗೆ ಕತ್ತರಿ – ವಿಶ್ವಾದ್ಯಂತ ಇಂಟರ್‌ನೆಟ್‌ ಸೇವೆಯಲ್ಲಿ ವ್ಯತ್ಯಯ

    ಕುಟುಂಬದೊಂದಿಗೆ ಸಂಪರ್ಕ ಸಾಧಿಸುತ್ತಿರುವ ರಷ್ಯಾದ ಅಧಿಕಾರಿಗಳು, ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಅವರ ದುರಂತ ಸಾವಿನ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕಳುಹಿಸಲು ಸಕಲ ತಯಾರಿ ನಡೆಸುತ್ತಿದ್ದೇವೆ. ಅಸ್ಫಾನ್‌ ಅವರನ್ನು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಯ (Russia Army) ಸಹಾಯಕರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಇನ್ನುಳಿದ ಭಾರತೀಯ ಪ್ರಜೆಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಅಸ್ಫಾನ್‌ ಡೇಂಜರ್‌ ಸೇನೆಯಲ್ಲಿ ಸಿಲುಕಿದ್ದು ಹೇಗೆ?
    ಉದ್ಯೋಗ ವಂಚನೆಯ ಜಾಲಕ್ಕೆ ಸಿಲುಕಿದ್ದ ಹೈದರಾಬಾದಿನ ಮೂಲದ ಯುವಕ ರಷ್ಯಾದ ವ್ಯಾಗ್ನರ್‌ ಪಡೆಯಲ್ಲಿ ಸಿಲುಕಿದ್ದರು. ತೆಲಂಗಾಣ, ಗುಜರಾತ್, ಕರ್ನಾಟಕ (ಕಲಬುರಗಿ ಜಿಲ್ಲೆಯ ಮೂವರು), ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳ 20ಕ್ಕೂ ಹೆಚ್ಚು ಯುವಕರು ಸೇನೆಯಲ್ಲಿ ಸಿಲುಕಿದ್ದಾರೆ. ಅವರನ್ನು ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ಹೋರಾಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ವೀಡಿಯೋವೊಂದರಲ್ಲಿ ಹೇಳಿಕೊಂಡಿದ್ದರು. ಈ ವೀಡಿಯೋ ಬೆಳಕಿಗೆ ಬರ್ತಿದ್ದಂತೆ ಓವೈಸಿ (Asaduddin Owaisi) ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಯುವಕರನ್ನು ರಕ್ಷಿಸುವಂತೆ ಒತ್ತಾಯಿಸಿದ್ದರು. ಇದನ್ನೂ ಓದಿ: ಗಗನಯಾನ ಸಾಹಸಿಗರಿಗೆ ಪೌಷ್ಠಿಕ ಆಹಾರ; ಇದು ಎಲ್ಲಿಂದ – ಹೇಗೆ ತಯಾರಾಗುತ್ತೆ ಗೊತ್ತಾ?