Tag: mohammad rela

  • ನಡೆದಾಡುವ ದೇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ `ಧರ್ಮ’ದ ಪಟ್ಟ ಕೊಟ್ಟ ಡಿಕೆಶಿ!

    ನಡೆದಾಡುವ ದೇವರಿಗೆ ಚಿಕಿತ್ಸೆ ಕೊಟ್ಟ ವೈದ್ಯರಿಗೆ `ಧರ್ಮ’ದ ಪಟ್ಟ ಕೊಟ್ಟ ಡಿಕೆಶಿ!

    ಬೆಳಗಾವಿ: ಒಂದ್ಕಡೆ ವೈದ್ಯೋ ನಾರಾಯಣೋ ಹರಿ. ವೈದ್ಯರು ದೇವರಿಗೆ ಸರಿ ಸಮಾನ ಅಂತ ಹೇಳುತ್ತಾರೆ. ಮಾತೃದೇವೋಭವ, ಪಿತೃದೇವೋಭವ, ಗುರುದೇವೋ ಭವ ಬಳಿಕ ವೈದ್ಯರಿಗೆ ದೇವರ ಸ್ಥಾನ ಕೊಟ್ಟಿದ್ರೆ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ನಡೆದಾಡುವ ದೇವರಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ `ಧರ್ಮ’ದ ಹಣೆ ಪಟ್ಟವನ್ನು ಕಟ್ಟಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

    ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದಾರೆ.

    ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂತ ಹೇಳಿದ್ರು.

    ಒಂದು 5 ದಿನದ ಮಗು ಇನ್ನೊಂದು 111 ವರ್ಷದ ಒಬ್ಬರು ಹಿರಿಯ ಶ್ರೀಗಳು. ನಾವೆಲ್ಲ ನಡೆದಾಡುವ ದೇವರು ಅಂತ ಕರೆಯುತ್ತೇವೆ. ಆಸ್ಪತ್ರೆ, ಸಿಬ್ಬಂದಿ ಹಾಗೂ ಸೌಲಭ್ಯಗಳು ತುಂಬಾ ಚೆನ್ನಾಗಿದೆ. 450 ಬೆಡ್ ನಲ್ಲಿ 150 ಬೆಡ್ ಐಸಿಯುನಲ್ಲಿದೆ. ಇಂತಹ ಸೌಲಭ್ಯವಿರುವ ಆಸ್ಪತ್ರೆಯನ್ನು ಎಲ್ಲೂ ನೋಡಿಲ್ಲ ಎಂದು ಹೊಗಳಿದರು.

    ಸ್ವಾಮೀಜಿಗಳು ಬಹಳ ಲವಲವಿಕೆಯಿಂದ ಇದ್ದಾರೆ. ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಯಾವಾಗ ಬಂದ್ರಿ, ಏನ್ ಬಂದ್ರಿ ಅಂತ ನನ್ನನ್ನು ಸ್ವಾಮೀಜಿಗಳು ಕೇಳಿದ್ರು. ಬೆಳಗ್ಗೆ ಆಪರೇಷನ್ ಆಗಿದ್ದಷ್ಟೇ, ನಾನು ಹೋದಾಗ ಎದ್ದು ಕುಳಿತುಕೊಳ್ಳಬೇಕು ಅಂತ ಸ್ವಾಮೀಜಿಗಳು ಹೇಳಿದ್ರು. ಆಗ ನಾನು, ಸ್ವಾಮಿಗಳೇ ಇವತ್ತು ಒಂದು ದಿನ ಇರಿ ಅಂತ ಹೇಳಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಅಂತ ಹೇಳಿದ್ರು.

    ಮುಸ್ಲಿಮರ ಆಸ್ಪತ್ರೆ ಆದ್ರೂ ಸಿದ್ದಗಂಗಾ ಶ್ರೀಗಳಿಗೆ ಉತ್ತಮ ಚಿಕಿತ್ಸೆ..! ಡಿಕೆ ಶಿವಕುಮಾರ್ ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದು ಸರಿಯೇ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಖ್ಯಾತ ವೈದ್ಯ ಮೊಹಮ್ಮದ್ ರೇಲಾರಿಂದ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ

    ಖ್ಯಾತ ವೈದ್ಯ ಮೊಹಮ್ಮದ್ ರೇಲಾರಿಂದ ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ

    – ವರ್ಷಕ್ಕೆ 250ಕ್ಕೂ ಹೆಚ್ಚು ಯಶಸ್ವಿ ಶಸ್ತ್ರ ಚಿಕಿತ್ಸೆ

    ಬೆಂಗಳೂರು/ತುಮಕೂರು: ನಡೆದಾಡುವ ದೇವರು ಸಿದ್ದಗಂಗಾ ಶ್ರೀಗಳು ಆರೋಗ್ಯವಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಚೆನ್ನೈನ ರೇಲಾ ಇನ್ಸ್ ಸ್ಟಿಟ್ಯೂಟ್ ಆ್ಯಂಡ್ ಮೆಡಿಕಲ್ ಸೆಂಟರ್ ಗೆ   ಕರೆದೊಯ್ಯಲಿದ್ದಾರೆ.

    ಸಿದ್ದಗಂಗಾ ಶ್ರೀಗಳು ಕ್ಷೇಮವಾಗಿದ್ದಾರೆ. ಆದ್ರೆ 6 ಸ್ಟಂಟ್ ಅಳವಡಿಸಿರೋದ್ರಿಂದ ಮತ್ತೆ ಸ್ಟಂಟ್ ಅಳವಡಿಸಲು ಸಾಧ್ಯವಿಲ್ಲ. ಆದ ಕಾರಣ ಇಂದು ಬೆಳಗ್ಗೆ ಚೆನ್ನೈಗೆ ಕರೆದೊಯ್ಯಲಾಗುತ್ತಿದ್ದು, ಅಲ್ಲಿ ಶ್ರೀಗಳಿಗೆ ಭಾರತದ ಖ್ಯಾತ ಲಿವರ್ ಸ್ಪೆಷಲಿಸ್ಟ್ ಡಾ. ಮೊಹಮ್ಮದ್ ರೇಲಾ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳಿಗೆ ಚೆನ್ನೈನಲ್ಲಿ ಚಿಕಿತ್ಸೆ

    ರೇಲಾ ಯಾರು..?
    ಡಾ. ಮೊಹಮ್ಮದ್ ರೇಲಾ ಭಾರತ ಖ್ಯಾತ ಲಿವರ್ ಸರ್ಜನ್ ನಲ್ಲಿ ಕೂಡ ಒಬ್ಬರು. ಲಂಡನ್‍ನ ಕಿಂಗ್ಸ್ ಕಾಲೇಜ್ ಆಸ್ಪತ್ರೆಯ ತಜ್ಞ ವೈದ್ಯರಾಗಿದ್ದ ಮೊಹಮ್ಮದ್ ರೇಲಾ,  5 ದಿನದ ಹಸಿಗೂಸಿಗೆ ಲಿವರ್ ಕಸಿ ಮಾಡೋದ್ರ ಮೂಲಕ ಗಿನ್ನಿಸ್ ಬುಕ್‍ನಲ್ಲಿ ರೆಕಾರ್ಡ್ ಮಾಡಿದ್ರು. ಇದೂವರೆಗೂ 4 ಸಾವಿರ ಲಿವರ್ ಕಸಿ ಮಾಡಿರೋ ಖ್ಯಾತಿ ಇವರದ್ದಾಗಿದೆ. ವರ್ಷಕ್ಕೆ 250ಕ್ಕೂ ಹೆಚ್ಚು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರೋ ಹೆಗ್ಗಳಿಕೆಗೆ ಡಾ.ಮೊಹಮ್ಮದ್ ಪಾತ್ರರಾಗಿದ್ದಾರೆ.

    ಮೂಲತಃ ತಮಿಳುನಾಡಿನ ಮೂಲದವರಾದ ಡಾ. ಮೊಹಮ್ಮದ್ ರೇಲಾ ಹಲವು ಸಾಧನೆಗಳನ್ನು ಮಾಡಿದ್ದಾರೆ. ಈಗ ಶ್ರೀಗಳಿಗೆ ಚಿಕಿತ್ಸೆ ನೀಡಲಿದ್ದಾರೆ. ಇದನ್ನೂ ಓದಿ: ನಂಗೆ ಎಷ್ಟು ವಯಸ್ಸು- 111 ಅಂದಾಗ, ಬಹಳಾಯ್ತು ಅಂದ್ರು ನಡೆದಾಡೋ ದೇವ್ರು

    ಸಿಎಂ ಸೂಚನೆ:
    ಸಿದ್ದಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಜನರಿಗೆ ಆತಂಕ ಬೇಡ, ಆರೋಗ್ಯ ಸ್ಥಿರವಾಗಿದೆ ಅಂತ ಶೃಂಗೇರಿಯಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಶ್ರೀಗಳಿಗೆ ಬಿಟ್ಟು-ಬಿಟ್ಟು ಸ್ವಲ್ಪ ಜ್ವರ ಬರ್ತಿದೆ, ಅವರ ಆರೋಗ್ಯದ ಸಂಬಂದ ಪಿನ್ ಟು ಪಿನ್ ಮಾಹಿತಿ ತರಿಸಿಕೊಳ್ತಿದ್ದೇನೆ. ಮಠದ ಕಿರಿಯ ಸ್ವಾಮೀಜಿ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ ಇದ್ರೆ ಆಸ್ಪತ್ರೆ ದಾಖಲು ಮಾಡಲು ಹೇಳಿದ್ದೇನೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸರಿಗೆ ಎಲ್ಲಾ ರೀತಿಯ ಸಹಕಾರಕ್ಕೆ ಸೂಚಿಸಿದ್ದೇನೆ. ಯಾರೂ ಗಾಬರಿಪಡೋ ಅಗತ್ಯವಿಲ್ಲ ಅವರು ನಮ್ಮೊಂದಿಗೆ ಇನ್ನೂ ಇರಬೇಕೆಂದು ಶಾರದಾಂಬೆಗೆ ಬೇಡಿಕೊಳ್ತೇನೆ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv