Tag: mohammad nalapad

  • ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲು

    ಮೊಹಮ್ಮದ್ ನಲಪಾಡ್ ವಿರುದ್ಧ ದೂರು ದಾಖಲು

    ಚಿಕ್ಕಮಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ (Youth Congress President Mohammad Nalapad) ವಿರುದ್ಧ ದೂರು ದಾಖಲಾಗಿದೆ.

    ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಕುರಿತು ಬಿಜೆಪಿ (BJP) ಮುಖಂಡ ಪ್ರದೀಪ್ ನಾಯಕ್ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆಗೆ ಹಾಗೂ ಕಡೂರಿನ ಜೆ.ಎಮ್.ಎಫ್.ಸಿ ಕೋರ್ಟಿಗೂ ಪ್ರದೀಪ್ ದೂರು ನೀಡಿದ್ದಾರೆ.

    ಇತ್ತೀಚೆಗೆ ಮೋದಿ (Narendra Modi) ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರಿಂದ ರಾಹುಲ್ ಗಾಂಧಿ (Rahul Gandhi) ಬೆಂಬಲಿಸಿ ಪ್ರತಿಭಟನೆ ವೇಳೆಯ ಭಾಷಣದಲ್ಲಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು. ಇದನ್ನೂ ಓದಿ: ನಿಮ್ಮ 60 ರೂ. ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ – ಶಾಮನೂರು ನೀಡಿದ ಸೀರೆಗಳಿಗೆ ಬೆಂಕಿಯಿಟ್ಟ ಮಹಿಳೆಯರು

    ಕಳೆದ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿಯಾಗಿ ರಾಹುಲ್ ಗಾಂಧಿ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಇತ್ತ ಮೊಹಮ್ಮದ್ ನಲಪಾಡ್ ಕೂಡ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದು, ಬಿಜೆಪಿಗರ ಕೆಂಗಣ್ಣೀಗೆ ಗುರಿಯಾಗಿದೆ.

  • ರಾಜಕಾಲುವೆ ಒತ್ತುವರಿ – ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್

    ರಾಜಕಾಲುವೆ ಒತ್ತುವರಿ – ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್

    ಬೆಂಗಳೂರು: ರಾಜಕಾಲುವೆ ಒತ್ತುವರಿ (Rajkaluve Occupy) ತೆರವಿಗೆ ಬಿಬಿಎಂಪಿ ಕೈಗೊಂಡಿರುವ `ಆಪರೇಷನ್ ಬುಲ್ಡೋಜರ್’ (Operation Bulldozer)ಆರಂಭದಲ್ಲೇ ವಿಘ್ನ ಉಂಟಾಗಿದೆ. ಚಲ್ಲಘಟ್ಟದಲ್ಲಿ ರಾಜಕಾಲುವೆ ಒತ್ತುವರಿ ತೆರವು ಪ್ರಕರಣದಲ್ಲಿ ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅಕಾಡೆಮಿ ತೆರವುಗಳಿಸುವ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.

    ನಲಪಾಡ್ ಅಕಾಡೆಮಿ (Nalapad Academy) ಒತ್ತುವರಿ ತೆರವುಗೊಳಿಸುವ ವಿಚಾರದಲ್ಲಿ ವಾರದ ಮಟ್ಟಿಗೆ ಪಡೆದಿದ್ದ ಹೈಕೋರ್ಟ್ ತಡೆಯಾಜ್ಞೆ ಸೆಪ್ಟೆಂಬರ್ 23ರ ವರೆಗೂ ವಿಸ್ತರಣೆಯಾಗಿದೆ. ಹೈಕೋರ್ಟ್ (Karnataka HighCourt) ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ಪೀಠವು ಸೆಪ್ಟೆಂಬರ್ 23ರ ವರೆಗೂ ತಡೆಯಾಜ್ಞೆ ವಿಸ್ತರಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿ ಇಂಪ್ಯಾಕ್ಟ್‌ – ನಲಪಾಡ್‌ ಅಕಾಡೆಮಿಗೆ ಜೆಸಿಬಿ ಗುನ್ನಾ!

    ಹಿನ್ನೆಲೆ ಏನು?
    ಚಲ್ಲಘಟ್ಟದ ಎಂಬೆಸಿ ಗಾಲ್ಫ್ ಲಿಂಕ್ ಬಿಸಿನೆಸ್ ಪಾರ್ಕ್ ಬಳಿ ನಲಪಾಡ್ ಅಕಾಡೆಮಿ ಸ್ಥಾಪನೆಯಾಗಿದೆ. ಒತ್ತುವರಿ ಮಾಡಿ ಅಕಾಡೆಮಿಯ ಕಾಪೌಂಡ್ ಕಟ್ಟಿದ ಹಿನ್ನೆಲೆಯಲ್ಲಿ ಮಂಗಳವಾರ ಜೆಸಿಬಿ ಜೊತೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಜೆಸಿಬಿ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಶಾಂತಿನಗರದ ಕಾಂಗ್ರೆಸ್ ಶಾಸಕ ಹ್ಯಾರಿಸ್ (MLA Haris) ಅವರ ಪಿಎ, ನೋಟಿಸ್ ನೀಡಿಲ್ಲ. ಹೇಗೆ ತೆರವು ಮಾಡುತ್ತೀರಾ ಎಂದು ಅವಾಜ್ ಹಾಕಿದ್ದರು ಜೆಸಿಬಿ (JCB) ಕಾರ್ಯಾಚರಣೆ ನಡೆಸುತ್ತಿದ್ದಂತೆ ಸ್ಥಗಿತಕ್ಕೆ ಸೂಚನೆ ನೀಡಿದರು. ಬಿಬಿಎಂಪಿ (BBMP) ಅಧಿಕಾರಿಗಳಿಗೆ ಗೇಟು ತೆಗೆಯಲು ಕೂಡ ಅವಕಾಶ ಕೊಡಲಿಲ್ಲ. ಹೀಗಾಗಿ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಇದನ್ನೂ ಓದಿ: 

    ಕಾರ್ಯಾಚರಣೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ (Public TV) ನಿರಂತರ ವರದಿ ಪ್ರಸಾರ ಮಾಡಿತ್ತು. ಇದಾದ ಬಳಿಕ ಕಾರ್ಯಾಚರಣೆ ಆರಂಭಗೊಂಡಿತ್ತು. ಈ ಕಾರ್ಯಾಚರಣೆಗೆ ಶಾಂತಿನಗದ ಕಾಂಗ್ರೆಸ್ (Congress) ಶಾಸಕ ಹ್ಯಾರಿಸ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನಲಪಾಡ್‌ ಅಕಾಡೆಮಿಯಿಂದ ರಾಜಕಾಲುವೆ ಒತ್ತುವರಿ – ಪ್ರಭಾವಿಗಳ ಬಿಲ್ಡಿಂಗ್‌ ತೆರವಿಗೆ BBMP ಹಿಂದೇಟು!

    ನಲಪಾಡ್ ಅಕಾಡೆಮಿ ರಾಜಕಾಲುವೆ ಆಪರೇಷನ್ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್ ಕಾರ್ಯಾಚರಣೆ ನಡೆಸದಂತೆ ಒಂದು ವಾರದ ಮಟ್ಟಿಗೆ ತಡೆಯಾಜ್ಞೆ ನೀಡಿತ್ತು. ಇದರಿಂದ ಒತ್ತುವರಿ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಸೆಪ್ಟೆಂಬರ್ 23ರ ವರೆಗೆ ಹೈಕೋರ್ಟ್ ತಡೆಯಾಜ್ಞೆ ವಿಸ್ತರಿಸಿದ್ದು, ನಲಪಾಡ್ ಅಕಾಡೆಮಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕಾರಿಗೆ ಬೆಂಕಿ ಇಟ್ಟ ಹೊಣೆ ನಾಯಕನಾಗಿ ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್

    ಕಾರಿಗೆ ಬೆಂಕಿ ಇಟ್ಟ ಹೊಣೆ ನಾಯಕನಾಗಿ ನಾನೇ ಹೊರುತ್ತೇನೆ: ಮೊಹಮ್ಮದ್ ನಲಪಾಡ್

    ದಾವಣಗೆರೆ: ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರಿಗೆ ಬೆಂಕಿ ಇಟ್ಟ ಪ್ರಕರಣದ ಹೊಣೆಯನ್ನು ನಾಯಕನಾದ ನಾನೇ ಹೊತ್ತುಕೊಳ್ತೇನೆ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ತಿಳಿಸಿದ್ದಾರೆ.

    ದಾವಣಗೆರೆಯ ಹರಿಹರದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಆ ಜಾಗದಲ್ಲಿ ಇದ್ನಾ ಸರ್ ಆರೋಪ ಮಾಡಲಿ. ಯೂತ್ ಕಾಂಗ್ರೆಸ್ ಕಾರ್ಯಕರ್ತರು ಬೆಂಕಿ ಹಚ್ಚಿದ್ದಾರೆ. ಅದಕ್ಕೆ ಅವರ ನಾಯಕನಾದ ನಾನೇ ಹೊಣೆ ಆಗುತ್ತೇನೆ. ಬೇಸರದಿಂದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಇಡಿ ವಿರುದ್ಧ ಆಕ್ರೋಶ – ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಕೈ ಕಾರ್ಯಕರ್ತರು

    ನಾನೇನು ಎಲ್ಲಿ ಓಡಿ ಹೋಗಿಲ್ಲ. ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ತನಿಖೆಗೆ ಕರೆದರೆ ನಾನು ಹೋಗುತ್ತೇನೆ. ನಾನೇನು ಟೆರರಿಸ್ಟ್ ಕ್ರಿಮಿನಲ್ ಆಗಿರೋ ತರ ಮಾಡ್ತಾರೆ. ಬಿಜೆಪಿ ಇಡಿ ಐಟಿ ಯನ್ನು ಕಲೆಕ್ಷನ್ ಗೆ ಬಳಕೆ ಮಾಡಿಕೊಳ್ಳುತ್ತಿದೆ. ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಎಮದು ವಾಗ್ದಾಳಿ ನಡೆಸಿದರು.

    ಸಿದ್ದರಾಮಯ್ಯ ಅಮೃತ ಮಹೋತ್ಸವ ಹಿನ್ನೆಲೆ ನಾನು ಸಿದ್ಧತೆ ನೋಡಿಕೊಂಡು ಬಂದಿದ್ದೇವೆ. ಇದು ಶಕ್ತಿ ಪ್ರದರ್ಶನ, ವ್ಯಕ್ತಿ ಪೂಜೆ ಅಲ್ಲ. 13 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ ಅವರಿಗೆ ಒಂದು ಗೌರವ ನೀಡುವ ಕಾರ್ಯಕ್ರಮ. ಸಾಮೂಹಿಕ ನಾಯಕತ್ವ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

    Live Tv
    [brid partner=56869869 player=32851 video=960834 autoplay=true]

  • ಅರ್ಧ ಜ್ಞಾನವಿರೋ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡ್ಬೇಕು: ನಲಪಾಡ್

    ಅರ್ಧ ಜ್ಞಾನವಿರೋ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡ್ಬೇಕು: ನಲಪಾಡ್

    ಬೆಳಗಾವಿ: ಗೃಹ ಸಚಿವರು ಅರ್ಧ ಜ್ಞಾನೇಂದ್ರ. ಫುಲ್ ಜ್ಞಾನ ಇದ್ದಿದ್ರೆ ಕಷ್ಟ ಇರಲಿಲ್ಲ. ಆದರೆ ಅರ್ಧ ಜ್ಞಾನ ಇಟ್ಟುಕೊಂಡು ಇಂತಹ ಕೆಲಸಗಳನ್ನ ಮಾಡಿಕೊಂಡು ಹೋಗುತ್ತಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು ಎಂದು ಕಾಂಗ್ರೆಸ್ ಯೂಥ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಇರುವವರೇ ಹಗರಣ ಮಾಡಿದ್ದಾರೆ. 56 ಸಾವಿರ ಯುವಕರ ಜೀವನದ ಜೊತೆಗೆ ಆಟವಾಡಿದ್ದಾರೆ. ಈ ಬಿಜೆಪಿ ಸರ್ಕಾರಕ್ಕೆ ಮಾನ, ಮರ್ಯಾದೆ, ಬೇಜಾರು ಜನಪರವಾದ ಕಾಳಜಿ ಇದ್ದರೆ ಇದನ್ನ ಹೇಗೆ ಬಗೆ ಹರಿಸುತ್ತಾರೆ ನೋಡಬೇಕು. ಇದರಲ್ಲಿ ಕಷ್ಟಪಟ್ಟು ಬರೆದವರು ಇರುತ್ತಾರೆ. ಪರೀಕ್ಷೆ ಬರೆದ ಎಲ್ಲರಿಗೂ ನೀವು ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಬಿಜೆಪಿಯರು ಹಿಂದುತ್ವವನ್ನು ಲೀಸ್‍ಗೆ ಪಡೆದಿದ್ದಾರಾ?-ಪ್ರತಾಪ್ ಸಿಂಹಗೆ ನಲಪಾಡ್ ತಿರುಗೇಟು

    ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆ ಕೊಡಬೇಕು. ಅವರು ಗೃಹ ಸಚಿವರಾಗಲು ಅಸಮರ್ಥ, ಅವರು ಇರಲೇಬಾರದು.ಪೊಲೀಸರನ್ನು ಲೀಡ್ ಮಾಡಲು ನಂಬರ್ ಒನ್ ಮಿನಿಸ್ಟರ್ ಬೇಕು, ಇಂತಹ ಅರ್ಧದವರು ಆಗಲ್ಲಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಮೊಹಮ್ಮದ್ ನಲಪಾಡ್ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಬೇಲೂರು ರಥೋತ್ಸವಕ್ಕೂ ಕುರಾನ್‍ಗೂ ಏನು ಸಂಬಂಧ: ಪ್ರಮೋದ್ ಮುತಾಲಿಕ್

  • ಸಚಿವ ಕೆ.ಎಸ್ ಈಶ್ವರಪ್ಪಗೆ ನಲಪಾಡ್ ಎಚ್ಚರಿಕೆ

    ಸಚಿವ ಕೆ.ಎಸ್ ಈಶ್ವರಪ್ಪಗೆ ನಲಪಾಡ್ ಎಚ್ಚರಿಕೆ

    ಬೆಂಗಳೂರು: ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಹೇಳಿಕೆ ವಿಚಾರ ಸಂಬಂಧ ಸಚಿವ ಕೆ.ಎಸ್ ಈಶ್ವರಪ್ಪಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಎಚ್ಚರಿಕೆ ನೀಡಿದ್ದಾರೆ.

    ರಾಷ್ಟ್ರಧ್ವಜ ವನ್ನು ತೆಗೆದು ಕೇಸರಿ ಧ್ವಜವನ್ನು ಹಾಕ್ತಿವಿ ಅಂತಾ ಈಶ್ವರಪ್ಪ ಹೇಳಿದ್ದಾರೆ. ಅದು ಇಂತಹ ಸಮಯದಲ್ಲಿ ಈಶ್ವರಪ್ಪನ ಹೇಳಿಕೆ ಕಾನೂನು ಬಾಹಿರ. ರಾಷ್ಟ್ರಧ್ವಜವನ್ನು ತೆಗೆಯೋಕೆ ಈಶ್ವರಪ್ಪನಿಗೆ ಅವಕಾಶ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಈಶ್ವರಪ್ಪ vs ಡಿಕೆಶಿ ವಾಕ್ಸಮರ: ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಸದನದ ಕದನ

    ಡಿಕೆ ಶಿವಕುಮಾರ್, ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಮಾತಾಡಿದ್ದಾರೆ. ಅವರಿಗೆ ವಯಸ್ಸಾಗಿದೆ, ಹೇಗೆ ಮಾತಾಡಬೇಕು ಅಂತಾ ಗೊತ್ತಾಗಲ್ವ. ಈ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ಆಗಿಲ್ಲ ಅಂದ್ರೆ ಕೋರ್ಟ್ ಗೆ ಹೊಗುತ್ತೀವಿ. ನಾಳೆಯಿಂದ ಕಾಂಗ್ರೆಸ್ ಹೋರಾಟ ಮುಂದುವರಿಯುತ್ತೆ. ಬಿಜೆಪಿ ಪಕ್ಷ ಈಶ್ವರಪ್ಪರನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸೋ ತನಕ ನಮ್ಮ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಕೆ ನೀಡಿದರು.

    ಇತ್ತ ಈಶರಪ್ಪ ವಿರುದ್ಧ ಹೈ ಗ್ರೌಂಡ್ ಪೊಲೀಸ್ ಠಾಣೆಗೆ ದೂರು ನಲಪಾಡ್ ದೂರು ದಾಖಲಿಸಿದ್ದಾರೆ. ಈ ವೇಳೆ ನಲಪಾಡ್ ಗೆ ಯುವ ಕಾಂಗ್ರೇಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಕ್ಲೋಸ್ ಆಯ್ತು ಫ್ಲೈಓವರ್ – ಕಳಪೆ ಕಾಮಗಾರಿ ಎಂದ ತಜ್ಞರು

  • ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ಶ್ರೀಕಿ ನನಗೆ ಪರಿಚಯ ಇರೋದು ನಿಜ: ಮೊಹಮ್ಮದ್ ನಲಪಾಡ್

    ಬೆಂಗಳೂರು: ಶ್ರೀಕಿ ನನಗೆ ಪರಿಚಯ ಇರುವುದು ನಿಜ ಎಂದು ಶಾಸಕ ಹ್ಯಾರೀಸ್ ಪುತ್ರ ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.

    ಬಿಟ್ ಕಾಯಿನ್ ವಿಚಾರವಾಗಿ ಶ್ರೀಕಿಗೂ ಹ್ಯಾರೀಸ್ ಪುತ್ರರಿಗೂ ನಂಟಿದೆ ಎಂಬುದರ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದರು. ಫರ್ಜಿ ಕೆಫೆ ಕೇಸ್ ಸಂಬಂಧ ಅದೊಂದು ಲೇಟರ್ ಮೇಲೆ ನೀವು ಮಾತನಾಡ್ತಾ ಇದ್ದೀರಾ. ಪ್ರೈಮಿನಿಸ್ಟರ್ ಗೆ ಬರೆದಿರೋ ಪತ್ರದಲ್ಲಿ ಬೇರೆಯವರ ಹೆಸರು ಇದೆ ಅದನ್ನ ಯಾಕೆ ಹೇಳ್ತಾ ಇಲ್ಲಾ ನೀವು..?. ಫರ್ಜಿ ಕೆಫೆ ಕೇಸ್ ನಡೆದಾಗ ಶ್ರೀಕಿ ನನ್ನ ಜೊತೆ ಇದ್ದ. ಶ್ರೀಕಿ ನನಗೆ ಗೊತ್ತಿಲ್ಲ ಅನ್ನೋದು ತಪ್ಪು. ಶ್ರೀಕಿ ನನ್ನ ತಮ್ಮನಿಗೆ ಗೊತ್ತಿದ್ದ. ಅದನ್ನ ನಾವು ಮರೆಮಾಚೋದಕ್ಕೆ ಆಗಲ್ಲ ಎಂದರು.

    ಹೇಳಿಕೆಯಲ್ಲಿ ನಲಪಾಡ್ ಹಾಗೂ ಉಮರ್ ನಲಪಾಡ್ ಹ್ಯಾಕ್ ಮಾಡಿದ್ದಾರೆ ಅಂತ ಎಲ್ಲಿಯಾದರೂ ಇದೆಯಾ..? ಆ ಸ್ಟೆಟ್ಮೆಂಟ್ ನಲ್ಲಿ ಮನೀಶ್ ಬಗ್ಗೆ ಬರೆದಿದ್ದಾರೆ. ಲೇಟರ್ ನಲ್ಲಿ ಶ್ರೀಕಿಯನ್ನು ಬಳಸಿಕೊಂಡು ಬೇರೆ ಬೇರೆಯವರು ಹ್ಯಾಕ್ ಮಾಡಿದ್ದಾರೆ ಅಂತ ಇದೆ. ಮಾಜಿ ಮಖ್ಯಮಂತ್ರಿಗಳ ಮಗನ ಹೆಸರಿದೆ. ಮುಖ್ಯಮಂತ್ರಿಗಳ ಹೆಸರಿದೆ. ದೊಡ್ಡ ದೊಡ್ಡ ಪೊಲೀಸ್ ಅಧಿಕಾರಿಗಳ ಹೆಸರಿದೆ. ಯಾಕೆ ತೆಗೆದುಕೊಳ್ತಿಲ್ಲ ಯಾಕೆ ನೀವು ಉಮರ್ ನಲಪಾಡ್ ಹಾಗೂ ನನ್ನ ಹೆಸರನ್ನು ಮಾತ್ರ ಬಳಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಹ್ಯಾಕರ್ ಶ್ರೀಕಿಯಿಂದ 9 ಕೋಟಿ ಮೌಲ್ಯದ 31 ಬಿಟ್ ಕಾಯಿನ್ ಜಪ್ತಿ

    ಸಿಸಿಬಿ ಮುಂದೆ ಹೇಳಿಕೆ ಕೊಟ್ಟಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ನಾನು ಸ್ವಲ್ಪವೂ ಹಣವಿಲ್ಲದೆ ಎಲ್ಲೆಲ್ಲೋ ಸುತ್ತಾಡ್ತಿದ್ದೆ. ನೆಟ್‍ವರ್ಕ್ ಹೆಚ್ಚಿಸಿಕೊಳ್ಳೋಕೆ ಸ್ವಿಟ್ಜರ್‍ಲ್ಯಾಂಡ್, ಸ್ವೀಡನ್, ಫ್ರಾನ್ಸ್, ಜರ್ಮನಿ ಸುತ್ತಾಡಿದೆ. ಒಮ್ಮೆ ‘ಬಿಟ್ ಫ್ಲಿಕ್ಸ್’ ಅನ್ನೋ ಸರ್ವರ್ ಹ್ಯಾಕ್ ಮಾಡಿದ್ದೆ. 2015ರಲ್ಲಿ ಭಾರತಕ್ಕೆ ವಾಪಸ್ ಬಂದೆ. 2015ರಲ್ಲಿ ನನ್ನ ಸ್ನೇಹಿತ ಮನಿಶ್ ಮೂಲಕ ಉಮರ್ ನಲಪಾಡ್ ಜೊತೆ ಸ್ನೇಹವಾಯಿತು. 2018ರಿಂದ ಪ್ರತಿದಿನ ಕೂಡ ಪಾರ್ಟಿಗಳಲ್ಲಿ ಭಾಗಿ ಆಗ್ತಿದ್ವಿ. ಉಮರ್ ನಲಪಾಡ್, ಅಭಿಷೇಕ್, ಗ್ಯಾರಿ ಜೊತೆ ಚಂಡೀಗಢ, ಜೈಪುರ ಸುತ್ತಾಡಿದ್ದೆ ಎಂದು ಹೇಳಿರುವುದು ಬಯಲಾಗಿದೆ. ಇದನ್ನೂ ಓದಿ: ಶ್ರೀಕಿ ಹ್ಯಾಕರ್ ಅಂತ ಗೊತ್ತಿರಲಿಲ್ಲ, ಕಾಲೇಜಿನಲ್ಲಿ ಪರಿಚಯ ಅಷ್ಟೇ: ಉಮರ್ ನಲಪಾಡ್

    ಇತ್ತ ಮೊಹಮ್ಮದ್ ನಲಪಾಡ್ ಜೊತೆಗೂ ಶ್ರೀಕಿ ನಂಟು ಹೊಂದಿದ್ದ. 2018ರ ಫರ್ಜಿ ಕೆಫೆ ಗಲಾಟೆಯಲ್ಲಿ ನಲಪಾಡ್ ಆರೋಪಿ ನಂಬರ್ 1 ಆಗಿದ್ದ. ಇದೇ ಗಲಾಟೆ ಪ್ರಕರಣದಲ್ಲಿ ಶ್ರೀಕೃಷ್ಣ ನಂಬರ್ 3 ಆರೋಪಿಯಾಗಿದ್ದ. ಈ ಪ್ರಕಾರ ನಲಪಾಡ್ ಬ್ರದರ್ಸ್-ಶ್ರೀಕಿ ಸ್ನೇಹಿತರಾಗಿದ್ದಾರೆ. ಆದರೆ ಬಿಟ್ ಕಾಯಿನ್ ವ್ಯವಹಾರದಲ್ಲಿ ನಲಪಾಡ್ ಬ್ರದರ್ಸ್ ಹೆಸರಿಲ್ಲ, ಶ್ರೀಕಿ ಎಲ್ಲೂ ಹೇಳಿಲ್ಲ. ಆದರೆ ಸಿಸಿಬಿ ಮುಂದೆ ನಲಪಾಡ್ ಬದ್ರರ್ಸ್ ನನ್ನ ಫ್ರೆಂಡ್ಸ್ ಅಷ್ಟೇ ಅಂತ ಶ್ರೀಕಿ ಹೇಳಿದ್ದಾನೆ.

  • ರೌಡಿ ನಲಪಾಡ್ ಹೊಗಳಿ ಈಗ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಪ್ರಕಾಶ್ ರೈ

    ರೌಡಿ ನಲಪಾಡ್ ಹೊಗಳಿ ಈಗ ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಪ್ರಕಾಶ್ ರೈ

    ಮೈಸೂರು: ಇನ್ಮುಂದೆ ಯಾರನ್ನಾದರೂ ಹೊಗಳುವ ಮುನ್ನ ಎಚ್ಚರ ವಹಿಸುತ್ತೇನೆ. ಅವರ ಪೂರ್ವ ಪರ ತಿಳಿದು ಮಾತನಾಡುತ್ತೇನೆ. ನನ್ನನ್ನ ಪ್ರೀತಿಸುತ್ತಿರುವ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಒಂದು ಗ್ರಾಮ ತೆಗೆದುಕೊಳ್ಳಲು ಹ್ಯಾರಿಸ್ ಪುತ್ರ ನಲಪಾಡ್ ಹಣ ನೀಡಿದ್ದರು. ಆ ಕ್ಷಣದಲ್ಲಿ ಈ ರೀತಿಯ ಯುವಕರು ಇರಬೇಕು ಎಂದಿದ್ದೆ. ಅಲ್ಲದೇ ಈ ರೀತಿಯ ಗುಣ ಬೆಳೆಸಿಕೊಳ್ಳಬೇಕು ಎಂದಿದ್ದೆ. ಆದ್ರೆ ಆತನ ಮನದಲ್ಲಿ ರಾಕ್ಷಸ ಇದ್ದಾನೆಂದು ಗೊತ್ತಿರಲಿಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಅಭಿಮಾನಿಗಳ ಜೊತೆ ಕ್ಷಮೆ ಕೇಳಿದ ಸೆಹ್ವಾಗ್

    ಹಿರಿಯ ಗೌರಿಯ ಸಾವು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡಿತು. ಹೀಗಾಗಿ, ಕಂಫರ್ಟ್ ಲೈಫ್ ಬಿಟ್ಟು ಹೋರಾಟದ ದಾರಿಗೆ ಇಳಿದು ಪ್ರಶ್ನೆ ಕೇಳುತ್ತಿದ್ದೇನೆ. ನಾನು ಪ್ರಜೆಯಾಗಿ ಮಾತಾಡುತ್ತಿದ್ದೇನೆ. ನಾನೂ ಎಡಪಂಥೀಯನಾಗಿ ಧ್ವನಿ ಎತ್ತಿದ್ದು ನಿಜ. ಯಾವುದು ತಪ್ಪು ಎನಿಸುತ್ತಿದೆಯೋ ಅದರ ವಿರುದ್ಧ ಹೋರಾಟಕ್ಕೆ ಇಳಿದಿದ್ದೇನೆ. ನಾನೂ ಧೋರಣೆಗಳ ವಿರುದ್ಧ ಧ್ವನಿ ಎತ್ತುತ್ತಿದ್ದೇನೆ. ನಾನೂ ರೈಟೂ ಅಲ್ಲ ಲೆಫ್ಟೂ ಅಲ್ಲ. ನಾನೂ ಮೂರನೇ ಸಿದ್ದಾಂತಕ್ಕೆ ಸೇರಿದವನು ಅಂತ ಅಂದ್ರು.

    ಅಂದು ರೈ ಏನ್ ಹೇಳಿದ್ರು?: ಜನವರಿಯಲ್ಲಿ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಪ್ರಕಾಶ್ ರೈ ಅವರು, ಮಹಮ್ಮದ್ ನಲಪಾಡ್ ನನ್ನು ವೇದಿಕೆಯ ಮೇಲೆ ಕರೆದು, ಈತ ನಲಪಾಡ್ ಅಂತ. ಎಂಎಲ್ ಎ ಹ್ಯಾರಿಸ್ ಮಗ. ಹ್ಯಾರಿಸ್ ಮಕ್ಕಳನ್ನು ಬೆಳೆಸಿದ ಹಾಗೆ ಎಲ್ಲರೂ ತಮ್ಮ ಮಕ್ಕಳನ್ನು ಬೆಳೆಸಬೇಕು ಅಂತ ವೇದಿಕೆಯ ಮೇಲೆಯೇ ಹೇಳುವ ಮೂಲಕ ಮಹಮ್ಮದ್ ನಲಪಾಡ್ ನ ಬೆನ್ನು ತಟ್ಟಿದ್ದರು.

    ಈತ ಸಣ್ಣ ಹುಡುಗ. ಒಂದು ಕಾರ್ಯಕ್ರಮವಿದೆ. ನೀವು ಬರಬೇಕು ಅಂತ ಹೇಳಿದ. ನೀವು ಬಹಳ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೀರಿ. ಹೀಗಾಗಿ ಆ ಕಾರ್ಯಕ್ರಮಕ್ಕೆ ನಾನು ಬರ್ತಿನಿ ಅಂತ ಹೇಳಿದೆ. ನನ್ನದೊಂದು ಪ್ರಕಾಶ್ ರಾಜ್ ಫೌಂಡೇಶನ್ ಅನ್ನೊದೊಂದಿದೆ. ಅದರಲ್ಲಿ ಒಂದಷ್ಟು ಹಳ್ಳಿಗಳನ್ನು ದತ್ತು ತೆಗೆದುಕೊಂಡು ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಅಂದೆ. ಆ ಸಂದರ್ಭದಲ್ಲಿ ಈ ಹುಡುಗ ನನಗೆ ಸಹಾಯ ಮಾಡಿದ್ದ. ತನ್ನ ಕ್ಷೇತ್ರವಲ್ಲದೇ, ನಾನು ದತ್ತು ತೆಗೆದುಕೊಳ್ಳುವ ಚಿತ್ರದುರ್ಗದ ಒಂದು ಹಳ್ಳಿಯಲ್ಲಿ ಒಂದು ಪುಟ್ಟ ಮನೆ ಬಡವನಿಗಾಗಿ ಕಟ್ಟಿ, ಅಲ್ಲಿ ಒಬ್ಬ ರೈತನಿಗೆ ಸಹಾಯ ಮಾಡಿದಿದ್ದಿದ್ರೆ, ಅದು ಈ ಹುಡುಗ ಅಂತ ಹೇಳಿ ನೆರೆದ ಜನರ ಮುಂದೆ ಬೆನ್ನು ತಟ್ಟಿದ್ರು.

    https://www.youtube.com/watch?v=G06kEeDdJ2U&feature=youtu.be

    https://www.youtube.com/watch?v=fElPQI1QKLg

  • ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ವಿದ್ವತ್‍ಗೆ ಬಿಜೆಪಿ ಕಾರ್ಯಕರ್ತನ ಪಟ್ಟ ಕಟ್ಟಿದ ಶಾ

    ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ವಿದ್ವತ್‍ಗೆ ಬಿಜೆಪಿ ಕಾರ್ಯಕರ್ತನ ಪಟ್ಟ ಕಟ್ಟಿದ ಶಾ

    ಮಂಗಳೂರು: ಬೆಂಗಳೂರಿನ ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾದ ಯುವಕ ವಿದ್ವತ್ ಬಿಜೆಪಿ ಕಾರ್ಯಕರ್ತನೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಶಾ, ಇತ್ತೀಚೆಗೆ ಸಿದ್ದರಾಮಯ್ಯ ಅವರ ಸರ್ಕಾರ ಕೆಲವು ಹಲ್ಲೆಗಳನ್ನು ಮಾಡುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಶಾಸಕ ಹ್ಯಾರಿಸ್ ಮಗನ ಪ್ರಕರಣ ಇದಕ್ಕೆ ಮುಖ್ಯ ನಿದರ್ಶನವಾಗಿದೆ. ಓರ್ವ ಶಾಸಕನ ಮಗ ಅನ್ನೋದನ್ನು ಬಿಟ್ಟು ಓರ್ವ ಸಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ಆತನ ಮೇಲೆ ಎಫ್‍ಐಆರ್ ದಾಖಲಿಸಿಕೊಳ್ಳಲಿಲ್ಲ. ಇದನ್ನು ಹೇಳುವ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಶಾ ಹೇಳಿದ್ದಾರೆ. ಇದನ್ನೂ ಓದಿ:  ಬಿಜೆಪಿಯವರು ಸತ್ತ ಮೇಲೆ ಎಲ್ಲರನ್ನೂ ಪಕ್ಷಕ್ಕೆ ಸೇರಿಸುತ್ತಾರೆ: ರಾಮಲಿಂಗಾ ರೆಡ್ಡಿ ವ್ಯಂಗ್ಯ

    ವಿದ್ವತ್- ಹಲ್ಲೆಗೊಳಗಾದ ಯುವಕ. 

    ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕಾಂಗ್ರೆಸ್ ಮುಕ್ತವನ್ನಾಗಿ ಮಾಡುತ್ತೇವೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಕ್ತ ಮಾಡ್ತೇವೆ. ಯಡಿಯೂರಪ್ಪ ಸರ್ಕಾರ ಬಂದ್ರೆ ರಾಜ್ಯದಲ್ಲಿ ಅಕ್ರಮ ಮರಳುಗಾರಿಕೆಗೆ ಬ್ರೇಕ್ ಹಾಕ್ತೇವೆ ಅಂತ ಹೇಳಿದ್ರು. ಇದೇ  ವೇಳೆ ಸಮಾವೇಶದ ಮುಂಭಾಗದಲ್ಲಿ ಆಸೀನರಾಗಿದ್ದ ಬಂಟ್ವಾಳದ ಬಿಜೆಪಿ ಕಾರ್ಯಕರ್ತ ಶರತ್ ಮಡಿವಾಳ ಅವರ ಹೆತ್ತವರನ್ನು ಶಾ ಭೇಟಿ ಮಾಡಿ, ಸಾಂತ್ವಾನ ಹೇಳಿದ್ರು.  ಇದನ್ನೂ ಓದಿ: ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ಬಿಜೆಪಿ ಕಾರ್ಯಕರ್ತನಲ್ಲ: ಅಮಿತ್ ಶಾ ಹೇಳಿಕೆ ಸಂಬಂಧ ಮಾಜಿ ಡಿಸಿಎಂ ಆರ್. ಅಶೋಕ್ ಪ್ರತಿಕ್ರಿಯಿಸಿ ವಿದ್ವತ್ ಬಿಜೆಪಿ ಕಾರ್ಯಕರ್ತ ಅಲ್ಲ. ರಾಷ್ಟ್ರೀಯ ಅಧ್ಯಕ್ಷರು ಭಾಷಣ ಮಾಡುವ ವೇಳೆ ಬಿಜೆಪಿ ಕಾರ್ಯಕರ್ತ ಎಂದು ಹೇಳಿದ್ದಾರೆ. ಇದಕ್ಕೆ ರಾಷ್ಟ್ರೀಯ ಅಧ್ಯಕ್ಷರೇ ಸ್ಪಷ್ಟೀಕರಣ ಕೊಡುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

     

     

     

  • ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ವಿದ್ವತ್ ಆರೋಗ್ಯ ವಿಚಾರಿಸಿ ಕಣ್ಣೀರು ಹಾಕಿದ ನಟ ಪುನೀತ್ ರಾಜ್ ಕುಮಾರ್! ವೀಡಿಯೋ ನೋಡಿ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವಕ ವಿದ್ವತ್ ನನ್ನು ನಟ ಪುನೀತ್ ರಾಜ್ ಕುಮಾರ್ ಇಂದು ಭೇಟಿ ಮಾಡಿದ್ದಾರೆ.

    ನಗರದ ಮಲ್ಯ ಆಸ್ಪತ್ರೆಗೆ ಭೇಟಿ ನೀಡಿದ ನಟ ಪುನೀತ್ ಅವರು ವಿದ್ವತ್ ಆರೋಗ್ಯ ವಿಚಾರಿಸಿದ್ದು, ಈ ವೇಳೆ ಅವರು ಕಣ್ಣೀರು ಹಾಕಿದ್ದಾರೆ. ಹಲ್ಲೆಗೊಳಗಾದ ವಿದ್ವತ್, ರಾಘವೇಂದ್ರ ರಾಜ್‍ಕುಮಾರ್ ಪುತ್ರನ ಸ್ನೇಹಿತರಾಗಿದ್ದಾರೆ. ಇದನ್ನೂ ಓದಿ: ಯುಬಿ ಸಿಟಿ ಗಲಾಟೆ ಹೇಗಾಯ್ತು? ಯಾವೆಲ್ಲ ಸೆಕ್ಷನ್ ಹಾಕಲಾಗಿದೆ? ಆರೋಪಿಗಳ ಉದ್ಯೋಗ ಏನು? ನಲಪಾಡ್ ರೌಡಿಸಂ ಫುಲ್ ಡಿಟೇಲ್ ಇಲ್ಲಿದೆ

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, ಹಲ್ಲೆಗೊಳಗಾದ ವಿದ್ವತ್ ಫ್ಯಾಮಿಲಿ ಫ್ರೆಂಡ್. ಆತನನ್ನು ನಾನು ಚಿಕ್ಕಂದಿನಿಂದಲೇ ನೋಡಿದ್ದೀನಿ. ಆತನು ನನಗೆ ಪರಿಚಯ. ಸದ್ಯ ಆತ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದಾನೆ. ವಿದ್ವತ್ ನನ್ನ ತಮ್ಮನ ಹಾಗೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ತಪ್ಪಿತಸ್ಥಿರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿದ್ದಾನೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಾಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದರು. ಇದನ್ನೂ ಓದಿ: ನಲಪಾಡ್ ಗೆ ಋಣ ಸಂದಾಯ – ಕಬ್ಬನ್ ಪಾರ್ಕ್ ಪೊಲೀಸರ ಮತ್ತೊಂದು ಅವಾಂತರ ಬಟಾಬಯಲು!

    ಸದ್ಯ ವಿದ್ವತ್ ಮೂಗಿನ ಹೊಳ್ಳೆಗಳು ಒಡೆದಿದ್ದು, ಮೂಗು ಫ್ರಾಕ್ಚರ್ ಆಗಿದೆ. ಬಲಭಾಗದ 5 ಪಕ್ಕೆಲುಬುಗಳು ಮುರಿದಿದ್ದು, ಎಡಭಾಗದ 4 ಪಕ್ಕೆಲುಬುಗಳು ಮುರಿದಿವೆ. ಆದ್ದರಿಂದ ವಿದ್ವತ್ ಸ್ಥಿತಿ ಗಂಭೀರವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

     

  • ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ- ಸಚಿವ ಜಾರ್ಜ್ ಪ್ರಶ್ನೆ

    ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ವಿಚಾರಕ್ಕಿಂತ ಸಂತೋಷ್ ವಿಚಾರದ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ ಎಂದು ಪ್ರಶ್ನಿಸಿ ಬಿಜೆಪಿ ನಾಯಕರ ವಿರುದ್ಧ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಕಿಡಿಕಾರಿದ್ದಾರೆ.

    ವಿಧಾನಸೌಧದದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವರು, ಸ್ವತಃ ವಿನಯ್ ಹಲ್ಲೆಗೊಳಗಾಗಿದ್ದಾರೆ. ಅವರ ಪತ್ನಿ ಪತ್ರ ಬರೆದರೂ ಬಿಎಸ್ ವೈ ಪ್ರತಿಕ್ರಿಯೆ ಕೊಟ್ಟಿಲ್ಲ. ಊರೆಲ್ಲ ಸುತ್ತುವ ಇವರಿಗೆ ಠಾಣೆಗೆ ಬರಲು ವಯಸ್ಸಿನ ಸಮಸ್ಯೆ. ಮೊದಲು ಸಂತೋಷ್ ಪ್ರಕರಣದ ಬಗ್ಗೆ ಬಿಜೆಪಿಯವರು ಮಾತನಾಡಲಿ. ಮಗ ತಪ್ಪು ಮಾಡಿದ್ರೆ ಅಪ್ಪನ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಐಪಿಸಿ ಸೆಕ್ಷನ್ ನಲ್ಲಿದೆ ಅಂತ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕೆಆರ್ ಪುರಂ  ಬಿಬಿಎಂಪಿ ಕಚೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಪೆಟ್ರೋಲ್ ಸುರಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಬಿಜೆಪಿ ಎನ್ನುವ ಪ್ರಶ್ನೆ ಇಲ್ಲ. ತಪ್ಪು ಯಾರೇ ಮಾಡಿದ್ರೂ ತಪ್ಪೇ. ಪೊಲೀಸರು ಆ ಬಗ್ಗೆ ಕ್ರಮ ತೆಗೆದುಕೊಳ್ತಾರೆ ಎಂದರು.

    ರಾಜ್ಯ ಸರ್ಕಾರ ಶೇ.10 ಪರ್ಸೆಂಟ್ ಗಿಂತ ಹೆಚ್ಚಿನ ಕಮೀಷನ್ ಸರ್ಕಾರ ಎಂಬ ಪ್ರಧಾನಿ ಮೋದಿ ಆರೋಪದ ವಿಚಾರದ ಕುರಿತು ಮಾತನಾಡಿದ ಅವರು, ಮೋದಿಯವರು ಬಿಜೆಪಿಯ ಪ್ರಧಾನಿ ಅಲ್ಲ. ಬದಲಾಗಿ ಅವರು ದೇಶದ ಪ್ರಧಾನಿ. ಪ್ರಧಾನಿ ಹುದ್ದೆಯಲ್ಲಿದ್ದುಕೊಂಡು ಈ ರೀತಿ ಹೇಳಿಕೆ ನೀಡಿದ್ದು ಸರಿ ಅಲ್ಲ. ನೋಟ್ ಬ್ಯಾನ್ ನಂತಹ ಜನರಿಗೆ ತೊಂದರೆ ಕೊಡುವ ಕಾರ್ಯಕ್ರಮ ಮಾಡಿದ್ರು ಹೊರತು ಬೇರೆ ಇಲ್ಲ. ಗುಜರಾತಿನಲ್ಲಿ ಪೆಟ್ರೋ ಕೆಮಿಕಲ್ಸ್ ಯೋಜನೆಯಿಂದ 20 ಸಾವಿರ ಕೋಟಿ ರೂ. ನಷ್ಟವಾಯಿತು. ಇದಕ್ಕೆ ಹೊಣೆ ಯಾರು? ಈ ನಷ್ಟವನ್ನು ಮೋದಿಯವರು ಕೇಂದ್ರ ಸರಕಾರದ ಸಬ್ಸಿಡಿಯಿಂದ ಭರ್ತಿ ಮಾಡ್ಕೋತಿದ್ದಾರೆ. ಪ್ರಧಾನಿಯಾಗಿ ಅವರು 4 ವರ್ಷ ಸಾಧನೆ ಮಾಡಿಲ್ಲ. ಅದಕ್ಕಾಗಿ ಮೋದಿಯವರು ರಾಜ್ಯ ಸರಕಾರದ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ಎಲ್ಲ ರಾಜ್ಯಗಳಿಗೂ ಬಂದು ಸುಳ್ಳು ಆರೋಪಗಳ ಮೂಲಕ ಮೋದಿಯವರು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವಂತೆ ಮಾತಾಡುವುದು ಸರಿಯಲ್ಲ ಅಂತ ಹೇಳಿದ್ರು.

    ಮೈಸೂರಿನಿಂದ ಬೆಂಗಳೂರಿಗೆ ಬಂದ ಸಿದ್ದರಾಮಯ್ಯ ದಾರಿತಪ್ಪಿದ್ದಾರೆ ಎನ್ನುವ ಮೋದಿ ಹೇಳಿಕೆಗೆ, ಮೈಸೂರಿಂದ ಬಂದ ಹಲವರು ರಾಜಕಾರಣದಲ್ಲಿ ಸಾಧನೆ ಮಾಡಿದ್ದಾರೆ. ಆ ವಿಷಯ ಮೋದಿಯವರಿಗೆ ಗೊತ್ತಿಲ್ಲ ಎಂದು ಹೇಳಿದರು.

    ವಿದ್ವತ್- ಹಲ್ಲೆಗೊಳಗಾದ ಯುವಕ.