Tag: Mohammad Kaif

  • ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

    ದಸರಾ ಸಂಭ್ರಮ – ಲಾರ್ಡ್ಸ್ ಪೆವಿಲಿಯನ್‌ನಲ್ಲಿ ನಿಂತು ತ್ರಿವರ್ಣ ಧ್ವಜ ಹಾರಿಸಿದ ಗಂಗೂಲಿ

    ಕೋಲ್ಕತ್ತಾ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅವರಿಂದು ದಕ್ಷಿಣ ಕೋಲ್ಕತ್ತಾದಲ್ಲಿ ನಡೆದ ದುರ್ಗಾ ಪೂಜೆಯ ಪಂಡಾಲ್ (Durga Puja Pandal) ಉದ್ಘಾಟಿಸಿದರು. ಇದೇ ವೇಳೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಲಾರ್ಡ್ಸ್ ಮೈದಾನದಲ್ಲಿ (Lord’s Pavilion) ಇಂಗ್ಲೆಂಡ್ (England) ವಿರುದ್ಧ ನಡೆದ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯ ಫೈನಲ್‌ನಲ್ಲಿ ಭಾರತ ಸ್ಮರಣೀಯ ಗೆಲುವು ಮೆಲುಕು ಹಾಕಿದ್ದಾರೆ.

    ಇಲ್ಲಿನ ದುರ್ಗಾಪೂಜಾ ಸಮಿತಿ ಪಕ್ಕದಲ್ಲೇ ಲಾರ್ಡ್ಸ್ ಪೆವಿಲಿಯನ್ ರೀತಿಯಲ್ಲೇ ತಾತ್ಕಾಲಿಕ ಪೆಂಡಾಲ್ ಸ್ಥಾಪಿಸಲಾಗಿದೆ. ದುರ್ಗಾಪೂಜೆ, ದುರ್ಗೋತ್ಸವ ಎಂದು ಕರೆಯುವ ಹಿಂದೂಗಳ ಈ ಆರಾಧನಾ ಮಹೋತ್ಸವವನ್ನು ಮಹಿಷಾಸುರನನ್ನು ಸಂಹಾರವನ್ನು ನೆನಪಿಸುವ ವಿಶೇಷ ಆಚರಣೆಯೂ ಆಗಿದೆ. ಇದನ್ನೂ ಓದಿ: ಸರಣಿ ಗೆದ್ದರೂ ಮುಖದಲ್ಲಿ ನಗುವಿಲ್ಲ – ಕೊಹ್ಲಿಯನ್ನು ಗುರಾಯಿಸಿದ ಪಂತ್

    2002ರಲ್ಲಿ ಲಾರ್ಡ್ಸ್‌ನಲ್ಲಿ ನಡೆದಿದ್ದ ನ್ಯಾಟ್‌ವೆಸ್ಟ್ ತ್ರಿಕೋನ ಸರಣಿಯಲ್ಲಿ ಭಾರತ (Team India) ಅವಿಸ್ಮರಣೀಯ ಗೆಲುವು ದಾಖಲಿಸಿತ್ತು. ಯುವರಾಜ್ ಸಿಂಗ್ (Yuvraj Singh), ಮೊಹಮ್ಮದ್ ಕೈಫ್ (Mohammad Kaif) ಬ್ಯಾಟಿಂಗ್ ಅಬ್ಬರದಿಂದ ಗೆಲುವು ದಾಖಲಿಸಿದ ನಂತರ ಸೌರವ್ ಗಂಗೂಲಿ ತಮ್ಮ ಟೀಶರ್ಟ್ ಬಿಚ್ಚಿ ಬಾಲ್ಕನಿಯಲ್ಲಿ ಬೀಸಿ ಸಂಭ್ರಮಿಸಿದ್ದರು. ಇದನ್ನೂ ಓದಿ: ಭಾರತ Vs ಆಸ್ಟ್ರೇಲಿಯಾ ಹೈವೋಲ್ಟೆಜ್ ಪಂದ್ಯದ ನಡುವೆ ಮೊಳಗಿತು ಜೈಶ್ರೀರಾಮ್ ಉದ್ಘೋಷ

    16 ದೇಶಗಳೊಂದಿಗೆ 113 ಟೆಸ್ಟ್ ಪಂದ್ಯಗಳನ್ನಾಡಿರುವ ಸೌರವ್ ಗಂಗೂಲಿ 7,212 ರನ್ ಬಾರಿಸಿದ್ದಾರೆ. 35 ಅರ್ಧ ಶತಕಗಳನ್ನು ಗಳಿಸಿದ್ದಾರೆ, ಜೊತೆಗೆ 32 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಇನ್ನೂ 22 ದೇಶಗಳೊಂದಿಗೆ 311 ಏಕದಿನ ಕ್ರಿಕೆಟ್ ಪಂದ್ಯದಲ್ಲಿ 11,363 ರನ್ ಪೂರೈಸಿರುವ ಗಂಗೂಲಿ 100 ವಿಕೆಟ್ ಕಬಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು- ಕೈಫ್

    ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು- ಕೈಫ್

    ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಬಟರ್ ಚಿಕನ್ ಮತ್ತು ಬಿರಿಯಾನಿ ಪ್ರಿಯರು ಎನ್ನುವುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವಾಗದ ವಿಚಾರವಾಗಿ ಮಾತನಾಡಿ ಧೋನಿ-ಬಿರಿಯಾನಿ ಕಥೆ ಹೇಳಿದ್ದಾರೆ.

    2004ರಲ್ಲಿ ಧೋನಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಕೈಫ್ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದಾಗ್ಯೂ ಕೈಫ್ ಅವರು ನಿಧಾನವಾಗಿ ಟೀಂ ಇಂಡಿಯಾದಿಂದ ಹೊರಗುಳಿದರು. ಇತ್ತ ಧೋನಿ 2007ರಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡರು, ಬಳಿಕ 2008ರಲ್ಲಿ ಎಲ್ಲಾ ಮೂರು ಮಾದರಿ ಟೆಸ್ಟ್, ಏಕದಿನ, ಟಿ20 ನಾಯಕನಾಗಿ ಅನೇಕ ಸಾಧನೆಗೆ ಸಾಕ್ಷಿಯಾದರು.

    2006ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೈಫ್ ಉತ್ತರ ಪ್ರದೇಶ ತಂಡ ಗೆಲುವಿಗೆ ಕಾರಣರಾಗಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ತಮಾಷೆಯಾಗಿ ಹೇಳಿದ ಕೈಫ್, ನಮ್ಮ ಮನೆಯಲ್ಲಿ ಧೋನಿಗೆ ಸರಿಯಾಗಿ ಬಿರಿಯಾನಿ ಬಡಿಸದೇ ಇರುವುದು ಟೀಂ ಇಂಡಿಯಾ ಕಮ್‍ಬ್ಯಾಕ್‍ಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ.

    ಕೈಫ್ 2006ರಲ್ಲಿ ಇಡೀ ಭಾರತದ ಕ್ರಿಕೆಟ್ ತಂಡವನ್ನು ತಮ್ಮ ನೋಯ್ಡಾ ಮನೆಗೆ ರಂಜಾನ್ ಹಬ್ಬಕ್ಕಾಗಿ ಆಹ್ವಾನಿಸಿದ್ದರು. ಈ ವೇಳೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಅವರಂತಹ ಹಿರಿಯ ಆಟಗಾರರು ಕೂಡ ಹಾಜರಾಗಿದ್ದರು. ಅವರಲ್ಲೆ ಒಂದು ಕೋಣೆಯಲ್ಲಿ ಕುಳಿತಿದ್ದರೆ ಎಂ.ಎಸ್.ಧೋನಿ, ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಆಗ ಕೈಫ್ ಹಿರಿಯ ಆಟಗಾರರ ಬಗ್ಗೆ ಹೆಚ್ಚು ಕಾಳಜಿ ತೋರಿದ್ದರು.

    ಈ ವಿಚಾರವಾಗಿ ಮಾತನಾಡಿರುವ ಕೈಫ್, “2006ರಲ್ಲಿ ನಾನು ರಣಜಿ ಟ್ರೋಫಿ ಟೂರ್ನಿಯ ಫೈನಲ್‍ನಲ್ಲಿ ಶತಕ ಬಾರಿಸಿ ಉತ್ತರ ಪ್ರದೇಶದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದೆ. ಇದರಿಂದಾಗಿ ಎಂಎಸ್ ಧೋನಿ ಬಯಸಿದರೆ ನಾನು ಟೀಂ ಇಂಡಿಯಾಗೆ ಪುನರಾಗಮನ ಮಾಡಬಹುದೆಂದು ಭಾವಿಸಿದ್ದೆ” ಎಂದು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.

    “ಎಂ.ಎಸ್.ಧೋನಿ, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಒಂದು ಕೋಣೆಯಲ್ಲಿ ಕುಳಿತಿದ್ದರು. ಹಿರಿಯರಾದ ಸಚಿನ್, ಗಂಗೂಲಿ ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರ ಜೊತೆಗೆ ಕುಳಿತು ಉಪಚರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಹೆಚ್ಚಿನ ಸಮಯವನ್ನು ಹಿರಿಯರೊಂದಿಗೆ ಕಳೆದುಬಿಟ್ಟೆ. ಆ ಸಮಯದಲ್ಲಿ ಬಹುಶಃ ಧೋನಿ ಮತ್ತು ಇತರ ಕಿರಿಯ ಕ್ರಿಕೆಟಿಗರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಕೈಫ್ ಕೇಳಿಕೊಂಡಿದ್ದಾರೆ.

    ಕೈಫ್ 2006ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಅವರು ಭಾರತ ಪರ 13 ಟೆಸ್ಟ್ ಮತ್ತು 125 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಎರಡು ಮಾದರಿಯಲ್ಲಿ ಕ್ರಮವಾಗಿ 624 ರನ್ ಮತ್ತು 2,753 ರನ್ ಗಳಿಸಿದ್ದಾರೆ. ಕೈಫ್ ತಮ್ಮ ಅದ್ಬುತ ಫೀಲ್ಡಿಂಗ್‍ಗೆ ಹೆಸರಾಗಿದ್ದರು. ಅವರು ಸಾರ್ವಕಾಲಿಕ ಅತ್ಯುತ್ತಮ ಭಾರತೀಯ ಫೀಲ್ಡರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

  • ಕ್ರಿಕೆಟ್ ಕಾಮೆಂಟೇಟರ್ ಆಗ್ತಾರಂತೆ ಯುವಿ, ಆದ್ರೆ..!?

    ಕ್ರಿಕೆಟ್ ಕಾಮೆಂಟೇಟರ್ ಆಗ್ತಾರಂತೆ ಯುವಿ, ಆದ್ರೆ..!?

    ಮುಂಬೈ: ಟೀಂ ಇಂಡಿಯಾ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಶೀಘ್ರವೇ ಕಾಮೆಂಟೇಟರ್ ಆಗುತ್ತಾರಂತೆ. 2019ರ ಏಕದಿನ ವಿಶ್ವಕಪ್ ಸಂದರ್ಭದಲ್ಲಿ ನಿವೃತ್ತಿ ಘೋಷಣೆ ಮಾಡಿದ್ದ ಯುವರಾಜ್ ಸಿಂಗ್, ಇತ್ತೀಚೆಗೆ ಇನ್‍ಸ್ಟಾ ಲೈವ್‍ನಲ್ಲಿ ಮೊಹಮ್ಮದ್ ಕೈಫ್‍ರೊಂದಿಗೆ ಮಾತನಾಡುತ್ತಾ ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ರಿವೀಲ್ ಮಾಡಿದ್ದಾರೆ.

    ಲೈವ್ ಸಂದರ್ಭದಲ್ಲಿ ಕಾಮೆಂಟೇಟರ್ ಆಗಿ ಬದಲಾಗುವ ಅವಕಾಶ ಇದೆಯಾ ಎಂದು ಕೈಫ್ ಪ್ರಶ್ನಿಸಿದ್ದರು. ಇದಕ್ಕೂತ್ತರಿಸಿದ ಯುವಿ, ಕಾಮೆಂಟರಿ ಬಾಕ್ಸ್ ನಲ್ಲಿ ಕೆಲವರ ವಾದಗಳನ್ನು ಕೆಳಲಾಗದ ಸ್ಥಿತಿ ಇದೆ. ಆದ್ದರಿಂದ ಕಾಮೆಂಟರಿ ಬಾಕ್ಸ್ ನಲ್ಲಿ ಕುಳಿತು ಮಾತನಾಡುವುದು ಕಷ್ಟ. ಆದರೆ ಐಸಿಸಿ ಟೂರ್ನಿಗಳಲ್ಲಿ ಕಾಮೆಂಟರಿ ಹೇಳಬೇಕೆಂದು ಅನ್ನಿಸುತ್ತಿದೆ. ಮೈದಾನದಲ್ಲಿರೋ ಆಟಗಾರರಿಗೆ ಮಾತ್ರ ಸಂದರ್ಭದ ಒತ್ತಡ ಗೊತ್ತಾಗುತ್ತೆ. ಯುವ ಕ್ರಿಕೆಟಿಗರನ್ನು ಅನಗತ್ಯವಾಗಿ ವಿಮರ್ಶೆ ಮಾಡುವುದು ನನ್ನಿಂದ ಆಗುವುದಿಲ್ಲ. ಆದ್ದರಿಂದ ಹೆಚ್ಚು ದಿನ ಕಾಮೆಂಟರಿ ಮಾಡುವುದಿಲ್ಲ. ಯುವ ಆಟಗಾರರ ತಪ್ಪುಗಳನ್ನು ತಿಳಿದುಕೊಳ್ಳುವಂತೆ ಮಾಡುವುದು ಮಾತ್ರ ಕಾಮೆಂಟರಿ ನೀಡುವವರ ಜವಾಬ್ದಾರಿ ಅಷ್ಟೇ ಎಂದು ಯುವಿ ಅಭಿಪ್ರಾಯ ಪಟ್ಟಿದ್ದಾರೆ.

    2007 ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಟೀಂ ಇಂಡಿಯಾ ಗೆಲ್ಲುವಲ್ಲಿ ಯುವಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಬಳಿಕ ಯುವಿ ಕ್ರಿಕೆಟ್ ವೃತ್ತಿ ಜೀವನ ಹಳಿತಪ್ಪಿತ್ತು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದ ಯುವಿ, ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ರೀತಿ ಧೋನಿ ತಮಗೆ ನಾಯಕರಾಗಿ ಸರಿಯಾದ ಬೆಂಬಲ ನೀಡಲಿಲ್ಲ. ಸುರೇಶ್ ರೈನಾಗೆ ಧೋನಿ ಬೆಂಬಲ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದರು ಎಂದು ಹೇಳಿದ್ದರು.

    2011ರ ವಿಶ್ವಕಪ್ ಸಂದರ್ಭದ ಟೀಂ ಇಂಡಿಯಾ ಆಯ್ಕೆಗೆ ಆಲ್‍ರೌಂಡರ್ ಗಳಾದ ಯೂಸುಫ್ ಪಠಾಣ್ ಮತ್ತು ಸುರೇಶ್ ರೈನಾ ಆಯ್ಕೆ ಗೊಂದಲ ಮೂಡಿತ್ತು. ನಾಯಕರಾಗಿದ್ದ ಧೋನಿಗೆ ರೈನಾ ಫೆವರಿಟ್ ಆಟಗಾರರರಾಗಿದ್ದರು. ಆದರೆ ಯೂಸುಫ್, ನಾನು ಉತ್ತಮ ಫಾರ್ಮ್‍ನಲ್ಲಿದ್ದೆವು. ನಾನು ವಿಕೆಟ್ ಗಳಿಸುತ್ತಿದ್ದ ಕಾರಣ ನನ್ನನ್ನು ತಂಡದಿಂದ ಕೈ ಬಿಡಲು ಸಾಧ್ಯವಾಗಿರಲಿಲ್ಲ ಎಂದು ಯುವಿ ವಿವರಿಸಿದ್ದರು.

  • ನ್ಯಾಟ್‍ವೆಸ್ಟ್ ಐತಿಹಾಸಿಕ ಗೆಲುವಿನ ದಿನದಂದೇ ಎಲ್ಲ ಮಾದರಿಯ ಕ್ರಿಕೆಟಿಗೆ ಕೈಫ್ ವಿದಾಯ

    ನ್ಯಾಟ್‍ವೆಸ್ಟ್ ಐತಿಹಾಸಿಕ ಗೆಲುವಿನ ದಿನದಂದೇ ಎಲ್ಲ ಮಾದರಿಯ ಕ್ರಿಕೆಟಿಗೆ ಕೈಫ್ ವಿದಾಯ

    ಮುಂಬೈ: ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ನ್ಯಾಟ್‍ವೆಸ್ಟ್ ಕ್ರಿಕೆಟ್ ಸರಣಿ ಜಯಸಿದ 12 ವರ್ಷಗಳ ಬಳಿಕ ಮಹಮ್ಮದ್ ಕೈಫ್ ಎಲ್ಲಾ ಮಾದರಿಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.

    37 ವರ್ಷದ ಕೈಫ್ 13 ಟೆಸ್ಟ್ ಹಾಗೂ 125 ಏಕದಿನ ಪಂದ್ಯಗಳನ್ನು ಆಡಿದ್ದು, ಲಾರ್ಡ್ಸ ಅಂಗಳದಲ್ಲಿ 2002 ಜುಲೈ 13 ರಂದು ನಡೆದಿದ್ದ ನ್ಯಾಟ್‍ವೆಸ್ಟ್ ಫೈನಲ್ ಪಂದ್ಯದಲ್ಲಿ ಅಜೇಯ 87 ರನ್ ಸಿಡಿಸಿ ಟೀಂ ಇಂಡಿಯಾ ಐತಿಹಾಸಿಕ ಜಯಗಳಿಸಲು ಕಾರಣರಾಗಿದ್ದರು.

    ತಮ್ಮ ನಿವೃತ್ತಿಯ ಕುರಿತು ಬಿಸಿಸಿಐ ಕಾರ್ಯದರ್ಶಿ ಸಿಕೆ ಖನ್ನಾ ಅವರಿಗೆ ಇಮೇಲ್ ಮೂಲಕ ಮಾಹಿತಿ ನೀಡಿರುವ ಕೈಫ್, ನ್ಯಾಟ್‍ವೆಸ್ಟ್ ಟೂರ್ನಿ ಗೆದ್ದ 16 ವರ್ಷದ ಸಂಭ್ರದ ದಿನದಂದು ನಾನು ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದುತ್ತಿದ್ದು, ನನ್ನ ಜೀವನದಲ್ಲಿ ಪ್ರಮುಖ ಪಾತ್ರವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸುವುದಾಗಿ ಹೇಳಿದ್ದಾರೆ.

    2003ರ ದಕ್ಷಿಣ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ತಂಡದ ಸದಸ್ಯರಾಗಿದ್ದ ಕೈಫ್ ದೇಶಿಯ ಕ್ರಿಕೆಟ್ ನಲ್ಲಿ ಉತ್ತರ ಪ್ರದೇಶಕ್ಕೆ ರಣಜಿ ಟ್ರೋಫಿ ಗೆದ್ದು ಕೊಟ್ಟ ಹೆಗ್ಗಳಿಕೆ ಸಹ ಪಡೆದಿದ್ದು, ಛತ್ತೀಸ್‍ಗಢದ ವಿರುದ್ಧ ಕೊನೆಯ ರಣಜಿ ಪಂದ್ಯವಾಡಿದ್ದರು.

    ಟೀಂ ಇಂಡಿಯಾ ಕಂಡ ಅತ್ಯುತ್ತಮ ಫೀಲ್ಡರ್ ಮಹಮ್ಮದ್ ಕೈಫ್ ಆಗಿದ್ದು, 5 ವರ್ಷಗಳ ಕಾಲ ನಿರಂತರವಾಗಿ ಟೀಂ ಇಂಡಿಯಾ ಭಾಗವಾಗಿದ್ದ ಕೈಫ್ ಮೈದಾನದ 30 ಯಾರ್ಡ್ ಸರ್ಕಲ್ ನಲ್ಲಿ ಆಟಗಾರರು ರನ್ ಕದಿಯಲು ಭಯಪಡುವಂತೆ ಕ್ಷೇತ್ರ ರಕ್ಷಣೆ ಮಾಡುತ್ತಿದ್ದರು. 2006 ರಲ್ಲಿ ಕೈಫ್ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು.

    ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದ ವೇಳೆ 6 ಅಥವಾ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಕೈಫ್ 125 ಪಂದ್ಯಗಳಲ್ಲಿ 2 ಶತಕ, 17 ಅರ್ಧ ಶತಕ ಒಳಗೊಂಡಂತೆ 2,753 ರನ್ ಗಳಿಸಿದ್ದಾರೆ. 13 ಟೆಸ್ಟ್ ಪಂದ್ಯವಾಡಿದ್ದ ಕೈಫ್ 624 ರನ್ ಗಳಿಸಿ 1 ಶತಕ, 3 ಅರ್ಧ ಶತಕ ಗಳಿಸಿದ್ದಾರೆ.

    ಟೀಂ ಇಂಡಿಯಾದಲ್ಲಿ ಹೆಚ್ಚಿನ ಸ್ಥಾನ ಪಡೆಯದಿದ್ದರೂ ದೇಶಿಯ ಕ್ರಿಕೆಟ್ ನಲ್ಲಿ ಉತ್ತರ ಪ್ರದೇಶ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಕೈಫ್ 186 ಪಂದ್ಯಗಳಲ್ಲಿ 19 ಶತಕ, 59 ಅರ್ಧಶತಕಗಳೊಂದಿಗೆ 10,229 ರನ್ ಸಿಡಿಸಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಆರ್ ಸಿಬಿ ಪರ ಆಡಿದ್ದರು.

    ಹಲವು ದಿನಗಳಿಂದ ಕೈಫ್ ಹಿಂದಿ ಭಾಷೆಯಲ್ಲಿ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ತಮ್ಮ ಮುಂದಿನ ನಡೆ ಕುರಿತು ಯಾವುದೇ ಮಾಹಿತಿ ನೀಡದ ಕೈಫ್ ತಮ್ಮ ಮಕ್ಕಳಾದ ಕಬೀರ್ ಹಾಗೂ ಇವಾ ಜೊತೆ ಹೆಚ್ಚಿನ ಕಾಲ ಕಳೆಯಲು ಇಷ್ಟಪಡುವುದಾಗಿ ತಿಳಿಸಿದ್ದಾರೆ.

    ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಸೋಲುವತ್ತ ಮುಖಮಾಡಿತ್ತು. 325 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 146 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ಜೊತೆಯಾದ ಮೊಹಮ್ಮದ್ ಕೈಫ್ ಮತ್ತು ಯುವರಾಜ್ 7ನೇ ವಿಕೆಟ್‍ಗೆ 121 ರನ್ ಜೊತೆಯಾಟವಾಡಿದ್ದರ ಪರಿಣಾಮ ಭಾರತ ಇನ್ನು ಮೂರು ಎಸೆತ ಬಾಕಿ ಇರುವಂತೆಯೇ 2 ವಿಕೆಟ್ ಗಳಿಂದ ರೋಚಕವಾಗಿ ಪಂದ್ಯವನ್ನು ಗೆದ್ದುಕೊಂಡಿತ್ತು. ಕೈಫ್ ಔಟಾಗದೇ 87 ರನ್ ಹೊಡೆದಿದ್ದರೆ ಯುವರಾಜ್ 69 ರನ್ ಹೊಡೆದಿದ್ದರು. ಅಂತಿಮವಾಗಿ ಇನ್ನೂ 3 ಎಸೆತ ಬಾಕಿ ಇರುವಂತೆಯೇ ಭಾರತ ಪಂದ್ಯವನ್ನು ಗೆದ್ದಿತ್ತು. ಭಾರತ ಜಯಗಳಿಸಿದ್ದನ್ನು ಕಂಡು ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂತಸ ವ್ಯಕ್ತಪಡಿಸಿದ್ದರು.

  • ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಹ್ಯಾಟ್ಸ್ ಆಫ್ ಎಂದ ಕೈಫ್

    ಬುರ್ಖಾ ಧರಿಸಿ ಚೆಸ್ ಆಡಲ್ಲ ಎಂದ ಸೌಮ್ಯಾ ನಡೆಗೆ ಹ್ಯಾಟ್ಸ್ ಆಫ್ ಎಂದ ಕೈಫ್

    ನವದೆಹಲಿ: ಇರಾನ್ ನಲ್ಲಿ ನಡೆಯುತ್ತಿರುವ 2018 ರ ಏಷ್ಯಾ ಚೆಸ್ ಟೂರ್ನಿಯಿಂದ ಇತ್ತೀಚೆಗಷ್ಟೇ ಹೊರ ನಡೆಯುವ ನಿರ್ಧಾರ ಪ್ರಕಟಿಸಿದ ಭಾರತ ತಂಡದ ಆಟಗಾರ್ತಿ ಸೌಮ್ಯಾ ಸ್ವಾಮಿನಾಥನ್ ನಡೆಗೆ ಕ್ರಿಕೆಟಿಗ ಮಹಮ್ಮದ್ ಕೈಫ್ ಬೆಂಬಲ ಸೂಚಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಕೈಫ್, ಯಾವುದೇ ಕ್ರೀಡೆಯಲ್ಲಿ ಧಾರ್ಮಿಕ ನಿಯಮಗಳನ್ನು ಅನುಸರಿಸುವಂತೆ ಒತ್ತಡ ಹೇರುವುದು ಉತ್ತಮವಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇರಾನ್ ಟೂರ್ನಿಯಿಂದ ಹೊರ ನಡೆದ ನಿಮ್ಮ ನಿರ್ಧಾರಕ್ಕೆ `ಹ್ಯಾಟ್ಸ್ ಅಫ್’ ಸೌಮ್ಯಾ. ಕ್ರೀಡಾಪಟುಗಳ ಮೇಲೆ ಯಾವುದೇ ಧಾರ್ಮಿಕ ವಸ್ತ್ರ ಸಂಹಿತೆಯನ್ನು ಹೇರಬಾರದು. ಅದರಲ್ಲೂ ಅಂತರಾಷ್ಟ್ರೀಯ ಟೂರ್ನಿಯನ್ನು ಆಯೋಜನೆ ಮಾಡುತ್ತಿರುವ ರಾಷ್ಟ್ರ ನಿಯಮ ರೂಪಿಸಬಾರದು. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕೈಫ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಸದ್ಯ ಸೌಮ್ಯಾ ಅವರ ನಿರ್ಧಾರಕ್ಕೆ ಕೈಫ್ ಅಲ್ಲದೇ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸಹ ಬೆಂಬಲ ನೀಡಿದ್ದು, ಸೌಮ್ಯಾ ಅವರ ಈ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವರು ಬೆಂಬಲ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    https://www.facebook.com/permalink.php?story_fbid=2177807325593182&id=218386564868611

    ಏನಿದು ಪ್ರಕರಣ?
    ಇರಾನ್ ನಲ್ಲಿ ಜೂನ್ 26 ರಿಂದ ಆಗಸ್ಟ್ 4 ವರೆಗೆ ನಡೆಯಲಿರುವ ಏಷ್ಯಾ ಚೆಸ್ ಟೂರ್ನಿಯಿಂದ ಭಾರತದ ತಂಡದ ಆಟಗಾರ್ತಿ ಸೌಮ್ಯಾ ಸ್ವತಃ ನಿರ್ಧಾರದಿಂದ ಹೊರ ನಡೆದಿದ್ದರು. ಇರಾನ್ ದೇಶ ಮಹಿಳೆಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮವಿದೆ. ಇದರಂತೆ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರ್ತಿಯರು ಕಡ್ಡಾಯವಾಗಿ ತಲೆಗೆ ಸ್ಕಾರ್ಫ್ ಧರಿಸಬೇಕೆಂಬ ನಿಯಮ ರೂಪಿಸಿತ್ತು. ಈ ಕಾರಣದಿಂದ ಸ್ಕಾರ್ಫ್ ಧರಿಸಲು ನಿರಾಕರಿಸಿದ್ದ ಸೌಮ್ಯ ಟೂರ್ನಿಯಿಂದ ಹೊರ ನಡೆಯುವ ತೀರ್ಮಾನವನ್ನು ಪ್ರಕಟಿಸಿದ್ದರು.

    ಈ ಕುರಿತು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದ ಸೌಮ್ಯ, ಇರಾನ್ ಕಾನೂನು ನನ್ನ ಅಭಿವ್ಯಕ್ತಿ ಸ್ವಾತಂತ್ರ್ಯ, ಚಿಂತನೆ, ಆತ್ಮಸಾಕ್ಷಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಗಳು ಸೇರಿದಂತೆ ನನ್ನ ಮಾನವ ಹಕ್ಕುಗಳನ್ನು ರಕ್ಷಿಸಿ ಕೊಳ್ಳಲು ಟೂರ್ನಿಗೆ ತೆರಳದೇ ಇರುವುದು ಸೂಕ್ತ ಎಂದು ಬರೆದುಕೊಂಡಿದ್ದಾರೆ.

    ಇದೇ ಮೊದಲಲ್ಲ: ಭಾರತೀಯ ಆಟಗಾರರು ಡ್ರೆಸ್ ಕೋಡ್ ಕಾರಣದಿಂದ ಈ ಹಿಂದೆಯೂ ಹಲವು ಟೂರ್ನಿಗಳಿಂದ ಹೊರ ನಡೆದಿದ್ದರು. ಪ್ರಮುಖವಾಗಿ 2016 ರಲ್ಲಿ ಶೂಟರ್ ಹೀನಾ ಸಿಂಧು ಏಷ್ಯಾ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ನಿಂದ ಹೊರ ನಡೆದಿದ್ದರು.

  • ರೋಹಿತ್ ದಾಖಲೆಯ ಶತಕ ಕುರಿತು ಮೊಹಮ್ಮದ್ ಕೈಫ್ ನುಡಿದ ಭವಿಷ್ಯ ನಿಜವಾಯ್ತು!

    ರೋಹಿತ್ ದಾಖಲೆಯ ಶತಕ ಕುರಿತು ಮೊಹಮ್ಮದ್ ಕೈಫ್ ನುಡಿದ ಭವಿಷ್ಯ ನಿಜವಾಯ್ತು!

    ನವದೆಹಲಿ: ಶ್ರೀಲಂಕಾ ವಿರುದ್ಧದ ಶುಕ್ರವಾರ ನಡೆದ ಎರಡನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುತ್ತಾರೆ ಎಂದು ನಾನು ಪಂದ್ಯದ ಮೊದಲೇ ಹೇಳಿದ್ದೆ ಎಂದು ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಕೈಫ್ ಟ್ವೀಟ್ ಮಾಡಿದ್ದಾರೆ.

    ಈ ಕುರಿತು ಮೊಹಮ್ಮದ್ ಕೈಫ್ ತಮ್ಮ ಮೇಸೆಜ್ ನ ಸ್ಕ್ರಿನ್ ಶಾಟ್ ತೆಗೆದು ಪೋಸ್ಟ್ ಮಾಡಿ ಇಂದು ನಾನು ರೋಹಿತ್ ಶತಕ ಸಿಡಿಸುತ್ತಾರೆ ಎಂದು ನನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದೆ. ಇದು ನಿಜವಾಗಿದೆ. ರೋಹಿತ್ ಈ ವಾರದಲ್ಲಿ ಎಂತಹ ಸಾಧನೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    ರಾತ್ರಿ 7.21ಕ್ಕೆ ಕೈಫ್ ಮೆಸೇಜ್ ಮಾಡಿದ್ದ ಈ ಸಂದೇಶ ಇರುವ ಸ್ಕ್ರೀನ್ ಶಾಟ್ ಅನ್ನು 8.26ಕ್ಕೆ ಕೈಫ್ ಟ್ವೀಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಕ್ರಿಕೆಟ್ ಅಭಿಮಾನಿಗಳು ಈ ಕುರಿತು ರಿ ಟ್ವೀಟ್ ಮಾಡಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

    ಅಭಿಮಾನಿಗಳ ಟ್ವೀಟ್:
    ಗುಜರಾತ್ ಚುನಾವಣೆ ಫಲಿತಾಂಶ ಕುರಿತು ಮೊದಲೇ ಏಕೆ ಹೇಳಿಲ್ಲ? -ಇಮ್ರಾನ್

    ನಿಮ್ಮ ಫೋಟೋ ಶಾಪ್ ಕೌಶಲ್ಯಕ್ಕೆ ಶುಭವಾಗಲಿ – ಅದರ್ಶ್ ಸೆಜ್ವಾಲ್

    ಮುಂದಿನ ಪ್ರಧಾನಿ ಯಾರು ಎಂದು ತಿಳಿಸಿ – ರಾಘವನ್

    ರೋಹಿತ್ ಈ ಪಂದ್ಯದಲ್ಲಿ 43 ಎಸೆತಗಳಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರೆವಿನಿಂದ 118 ರನ್ ಸಿಡಿಸಿದ್ದರು. ಟೀಂ ಇಂಡಿಯಾ 88 ರನ್ ಗಳ ಭಾರಿ ಗೆಲುವು ಪಡೆಯುವ ಮೂಲಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಮೊದಲ ಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿತು.  ಇದನ್ನೂ ಓದಿ: ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವ ಹೀಗಿತ್ತು

    ಕರ್ನಾಟಕದ ಕೆ.ಎಲ್ ರಾಹುಲ್, ರೋಹಿತ್ ಶರ್ಮಾ ಜೋಡಿ ಟಿ20 165 ರನ್ ಗಳ ಜೊತೆಯಾಟವಾಡಿದ್ದು, ಇದು ಭಾರತದಲ್ಲಿ ಮೊದಲ ವಿಕೆಟ್ ಗೆ ದಾಖಲಾದ ದೊಡ್ಡ ಜೊತೆಯಾಟವಾಗಿದ್ದು, ವಿಶ್ವದಲ್ಲಿ ನಾಲ್ಕನೇಯ ದೊಡ್ಡ ಜೊತೆಯಾಟವಾಗಿದೆ.  ಇದನ್ನೂ ಓದಿ: 23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ