Tag: Mohammad Amir

  • ಹರ್ಭಜನ್, ಅಮೀರ್ ಮಧ್ಯೆ ಸಿಕ್ಸರ್, ನೋಬಾಲ್ ಫೈಟ್

    ಹರ್ಭಜನ್, ಅಮೀರ್ ಮಧ್ಯೆ ಸಿಕ್ಸರ್, ನೋಬಾಲ್ ಫೈಟ್

    ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ಮಾಜಿ ಪೇಸರ್ ಮಹಮ್ಮದ್ ಅಮೀರ್ ಮಧ್ಯೆ ಟ್ವಿಟರ್ ವಾರ್ ನಡೆಯುತ್ತಿರುವುದು ಸಖತ್ ಸುದ್ದಿಯಾಗುತ್ತಿದೆ.

    ಟಿ20ಯಲ್ಲಿ ಪಾಕಿಸ್ತಾನ ವಿರುದ್ಧವಾಗಿ ಭಾರತ ಕ್ರಿಕೆಟ್ ತಂಡ ಸೋತಿದೆ. ಪಾಕ್ ಗೆಲುವಿಗಾಗಿ ಪಟಾಕಿ ಹೊಡೆದ್ದು, ಶಮಿಯನ್ನು ನಿಂದಿಸುತ್ತಿರುವ ವಿಚಾರ ತೀರಾ ವೈಯಕ್ತಿ ಕಿತ್ತಾಟಗಳಿಗೆ ಕಾಣವಾಗುತ್ತಿದ್ದು, ಈ ವಿಚಾರ ಚರ್ಚೆ ಬೇರೆಯದ್ದೇ ಸ್ವರೂಪ ಪಡೆದುಕೊಂಡಿದೆ.

    ಭಾರತದ ಸೋಲನ್ನು ಅಮೀರ್ ಗೇಲಿ ಮಾಡಿದ್ದರು. ಅಲ್ಲದೇ ಹರ್ಭಜನ್ ಸಿಂಗ್‍ಗೆ ಟ್ಯಾಗ್ ಮಾಡಿದ್ದರು. ಅಮೀರ್ ಮಾಡಿದ ಟ್ವೀಟ್‍ಗೆ ಹರ್ಭಜನ್ ಪ್ರತಿಕ್ರಿಯಿಸುವ ಮೂಲಕವಾಗಿ ವಾರ್ ಪ್ರಾರಂಭವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಹರ್ಭಜನ್ ಸಿಂಗ್ 2010ರ ಏಷ್ಯಾ ಕಪ್‍ನ ವೀಡಿಯೋವನ್ನು ಹಂಚಿಕೊಂಡಿದ್ದರು. ಅಮೀರ್ ಬೌಲ್‍ಗೆ ಸಿಕ್ಸರ್ ಸಿಡಿಸಿ ಹರ್ಭಜನ್ ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದರು.


    .
    ಇದಕ್ಕೆ ತಿರುಗೇಟು ಕೊಟ್ಟ ಅಮೀರ್, 2006ರಲ್ಲಿ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶಾಹೀದ್ ಅಫ್ರಿದಿ, ಹರ್ಭಜನ್ ಸಿಂಗ್ ಬಾಲ್‍ಗೆ ಸತತ ಸಿಕ್ಸರ್‌ಗಳನ್ನ ಬಾರಿಸುವ ವೀಡಿಯೋ ಶೇರ್ ಮಾಡಿ ಕಿಚಾಯಿಸಿದ್ದಾರೆ.

    ಸ್ವಾಟ್ ಫಿಕ್ಸಿಂಗ್ ಹಗರಣವನ್ನು ಅಮೀರ್ ಹಂಚಿಕೊಂಡಿದ್ದಾರೆ. 2010ರಲ್ಲಿ ಇಂಗ್ಲೆಂಡ್ ವಿರುದ್ಧದ ಲಾಡ್ಸ್ ಟೆಸ್ಟ್ ನಲ್ಲಿ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾಗಿದ್ದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಟ್ವೀಟ್ ಸಮರವಾಗಿದೆ. ಇದನ್ನೂ ಓದಿ: ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

    ಲಾರ್ಡ್ಸ್ ನಲ್ಲಿ ನೋಬಾಲ್ ಹೇಗೆ ಆಯಿತು? ಅಷ್ಟುಕ್ಕೂ ನೀವು ಎಷ್ಟು ಹಣವನ್ನು ತೆಗೆದುಕೊಂಡಿದ್ದೀರಿ? ಯಾರು ನಿಮಗೆ ಹಣವನ್ನು ನೀಡಿದರು? ಟೆಸ್ಟ್ ಕ್ರಿಕೆಟ್‍ನಲ್ಲಿ ಯಾರಾದರೂ ನೋ ಬಾಲ್ ಹಾಗೆ ಹಾಕುತ್ತಾರಾ ನಿಮಗೆ ನಾಚಿಕೆಯಾಗಬೇಕು. ನಿಮ್ಮ ಬೆಂಬಲಿಗರಿಗೆ ನಾಚಿಕೆಯಾಗಬೇಕು ಎನ್ನುವ ರೀತಿಯಲ್ಲಿ ಹರ್ಭಜನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಮುಸಲ್ಮಾನರಿಂದಲೂ ಪಾಕಿಸ್ತಾನ ತಂಡಕ್ಕೆ ಬೆಂಬಲ: ಪಾಕ್ ಸಚಿವ

    2010ರಲ್ಲಿ ಅಮೀರ್ ಹಾಕಿದ್ದ ನೋಬಾಲ್ ಫೋಟೋವನ್ನು ಶೇರ್ ಮಾಡಿದ್ದಾರೆ. ಇನ್ನೊಂದು ಪೋಸ್ಟ್ ನಲ್ಲಿ 2010ರ ಏಷ್ಯಾ ಕಪ್‍ನಲ್ಲಿ ಸಿಕ್ಸರ್ ಸಿಡಿಸಿದ ವೀಡಿಯೋವನ್ನು ಹರ್ಭಜನ್ ಸಿಂಗ್ ಶೇರ್ ಮಾಡಿದ್ದಾರೆ. ಈ ವೀಡಿಯೋವನ್ನು ನೋಡಿದ ಅಮೀರ್ ನಿಮ್ಮ ಬೌಲಿಂಗ್ ಆಕ್ಷನ್ ಹೇಗಿದೆ ಎಂದು ಹರ್ಭಜನ್ ಸಿಂಗ್ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆಯಾಗಿ ಇಬ್ಬರ ಮಧ್ಯೆ ಟ್ವೀಟ್ ಸಮರ ನಡೆಯುತ್ತಿದ್ದು, ಒಬ್ಬರಮೇಲೊಬ್ಬರು ಆರೋಪವನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಪಾಕ್ ಗೆಲವು ಸಂಭ್ರಮಿಸಿದವ್ರ ವಿರುದ್ಧ ದೂರು ದಾಖಲಿಸಿದವರಿಗೆ ಉಗ್ರರ ವಾರ್ನಿಂಗ್

  • ಬ್ರದರ್, ಇದು ನೀವೇನಾ?- ಕ್ಯಾಪ್ಟನ್ ಕೊಹ್ಲಿ ಕಾಲೆಳೆದ ಪಾಕ್ ಕ್ರಿಕೆಟಿಗ

    ಬ್ರದರ್, ಇದು ನೀವೇನಾ?- ಕ್ಯಾಪ್ಟನ್ ಕೊಹ್ಲಿ ಕಾಲೆಳೆದ ಪಾಕ್ ಕ್ರಿಕೆಟಿಗ

    ಇಸ್ಲಾಮಾಬಾದ್: ಲಾಕ್‍ಡೌನ್ ಕಾರಣದಿಂದ ಮನೆಯಲ್ಲೇ ಕುಳಿತು ವೆಬ್ ಸೀರಿಸ್ ನೋಡುವುದರಲ್ಲಿ ಬ್ಯುಸಿಯಾಗಿರುವ ಪಾಕ್ ಕ್ರಿಕೆಟಿಗ ಮೊಹಮ್ಮದ್ ಆಮಿರ್, ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಶೇರ್ ಮಾಡಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಲೆಳೆದಿದ್ದಾರೆ.

    ಪಾಕಿಸ್ತಾನ ವೇಗಿ ಮೊಹಮ್ಮದ್ ಆಮಿರ್ ತಮ್ಮ ಕುಟುಂಬದೊಂದಿಗೆ ಸೇಲ್ಫ್ ಐಸೋಲೇಷನ್‍ನಲ್ಲಿದ್ದಾರೆ. ಮನೆಯಲ್ಲೇ ಉಳಿದಿರುವ ಆಮಿರ್ ಸಿನಿಮಾ, ವೆಬ್ ಸೀರಿಸ್ ಸೇರಿದಂತೆ ಟಿವಿ ನೋಡುತ್ತಾ ಕಾಲ  ಕಳೆಯುತ್ತಿದ್ದಾರೆ. ಆದರೆ ಈ ವೇಳೆ ಅಚ್ಚರಿಯ ಅಂಶವೊಂದನ್ನು ಆಮಿರ್ ಗಮನಿಸಿದ್ದು, ಟರ್ಕಿಷ್ ಟಿವಿ ಧಾರಾವಾಹಿವೊಂದರಲ್ಲಿ ನಟಿಸಿದ್ದ ನಟರೊಬ್ಬರು ಕೊಹ್ಲಿರಂತೆಯೇ ಇರುವುದನ್ನು ಕಂಡು ಅಚ್ಚರಿಗೊಂಡಿದ್ದಾರೆ. ಅಲ್ಲದೇ ನಟನ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಟ್ವೀಟ್‍ನಲ್ಲಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಟ್ಯಾಗ್ ಮಾಡಿರುವ ಆಮಿರ್, ‘ಬ್ರದರ್ ಇದು ನೀವೇನಾ?’ ಗೊಂದಲ ಎದುರಾಗಿದೆ ಎಂದು ಪ್ರಶ್ನಿಸಿದ್ದಾರೆ. ಆದರೆ ಆಮಿರ್ ಅವರ ಈ ಟ್ವೀಟ್‍ಗೆ ಇದುವರೆಗೂ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಇದಕ್ಕೂ ಮುನ್ನ ರನ್ ಮೆಷಿನ್ ಕೊಹ್ಲಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದ ಆಮಿರ್, ಪಾಕ್ ಕ್ರಿಕೆಟ್‍ನಲ್ಲಿ ನನ್ನ ನೆಚ್ಚಿನ ಆಟಗಾರ ಸಯೀದ್ ಬಾಯ್! ಆದರೆ ನೀವು ಈ ಯುಗದ ಬಗ್ಗೆ ಪ್ರಶ್ನೆ ಮಾಡಿದರೆ ಅದು ವಿರಾಟ್ ಕೊಹ್ಲಿ. ಈ ಯುಗದಲ್ಲಿ ಅವರಿಗೆ ಸಮ ಎನಿಸುವ ಆಟಗಾರ ಮತ್ತೊಬ್ಬರಿಲ್ಲ ಎಂದು ಆಮಿರ್ ಮಾಧ್ಯಮ ಸಂವಾದವೊಂದರಲ್ಲಿ ಹೇಳಿದ್ದರು.

  • ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

    ಟೆಸ್ಟ್‌ಗೆ ನಿವೃತ್ತಿ ಘೋಷಿಸಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

    ಇಸ್ಲಮಾಬಾದ್: ಟೆಸ್ಟ್ ಮಾದರಿಯ ಕ್ರಿಕೆಟ್‍ಗೆ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ ಅವರು ನಿವೃತ್ತಿ ಘೋಷಿಸಿದ್ದಾರೆ. ಆದರೆ ಏಕದಿನ ಕ್ರಿಕೆಟ್‍ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

    ಪಾಕಿಸ್ತಾನದ ಪರ 36 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಮೀರ್ 30.47 ಸರಾಸರಿಯಲ್ಲಿ 119 ವಿಕೆಟ್ ಪಡೆದಿದ್ದಾರೆ. 2017ರ ಏಪ್ರಿಲ್‍ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ 44 ರನ್ ಕೊಟ್ಟು 6 ವಿಕೆಟ್ ಕಬಳಿಸಿದ್ದು ಇವರ ಅತ್ಯುತ್ತಮ ಬೌಲಿಂಗ್ ಪ್ರದರ್ಶವಾಗಿದೆ.

    ನಿವೃತ್ತಿ ಕುರಿತು ಮಾತನಾಡಿರುವ ಮೊಹಮ್ಮದ್ ಅಮೀರ್ “ಕ್ರಿಕೆಟ್‍ನ ಸಂಪ್ರದಾಯಿಕ ಸ್ವರೂಪವಾದ ಟೆಸ್ಟ್ ಕ್ರಿಕೆಟ್‍ನಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸುವುದಕ್ಕೆ ಗೌರವವಿದೆ. ನಾನು ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಲು ನಿರ್ಧಾರ ಮಾಡಿದ್ದೇನೆ. ಈ ಮೂಲಕ ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚಿನ ಗಮನಹರಿಸಲು ತೀರ್ಮಾನ ಮಾಡಿದ್ದೇನೆ” ಎಂದು ಹೇಳಿದ್ದಾರೆ.

    ಪಾಕಿಸ್ತಾನಕ್ಕಾಗಿ ಆಡುವುದು ನನ್ನ ಅಂತಿಮ ಆಸೆ ಮತ್ತು ಉದ್ದೇಶವಾಗಿ ಉಳಿದಿದೆ ಮತ್ತು ಮುಂದಿನ ವರ್ಷದ ಐಸಿಸಿ ಟಿ 20 ವಿಶ್ವಕಪ್ ಸೇರಿದಂತೆ ತಂಡದ ಮುಂಬರುವ ಸವಾಲುಗಳಲ್ಲಿ ಉತ್ತಮ ಕೊಡುಗೆ ನೀಡಲು ನಾನು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಎಡಗೈ ವೇಗಿಯಾದ ಮೊಹಮ್ಮದ್ ಅಮೀರ್ 2009ರ ಜುಲೈನಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು.

    ಇಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮೀರ್ “ನಾನು ಇಂದು ತೆಗೆದುಕೊಂಡಿರುವುದು ಸುಲಭದ ನಿರ್ಧಾರವಲ್ಲ. ಈ ವಿಚಾರದ ಬಗ್ಗೆ ನಾನು ತುಂಬಾ ಸಮಯದಿಂದ ಯೋಚನೆ ಮಾಡಿದ್ದೆ. ಇನ್ನೂ ಕೆಲವೇ ದಿನಗಳಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಬರುತ್ತಿದೆ. ಆಗಲೇ ಪಾಕಿಸ್ತಾನದಲ್ಲಿ ಉತ್ತಮ ಯುವ ವೇಗಿಗಳು ಇದ್ದಾರೆ. ಅದ್ದರಿಂದ ನಾನು ಈ ಸಮಯದಲ್ಲಿ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ಹೇಳಿದ್ದಾರೆ.

    ಈ ವೇಳೆ ಮಾತನಾಡಿದ ಪಿಸಿಬಿ ವ್ಯವಸ್ಥಾಪಕ ನಿರ್ದೇಶಕ ವಾಸಿಮ್ ಖಾನ್, ಅಮೀರ್ ಇತ್ತೀಚಿನ ದಿನಗಳಲ್ಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಅತ್ಯಂತ ರೋಮಾಂಚಕಾರಿ ಮತ್ತು ಪ್ರತಿಭಾವಂತ ಎಡಗೈ ವೇಗದ ಬೌಲರ್‍ ಗಳಲ್ಲಿ ಒಬ್ಬರಾಗಿದ್ದಾರೆ. ನಿವೃತ್ತಿ ಮೂಲಕ ಯುವ ಆಟಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅವರು ಕ್ರಿಕೆಟರ್ ಹೊರತಾಗಿಯೂ ಒಬ್ಬ ಒಳ್ಳೆಯ ವ್ಯಕ್ತಿ ಎಂದು ಹೇಳಿದ್ದಾರೆ.