Tag: Mohali

  • ಮೊಹಾಲಿಯಲ್ಲೂ ಧೋನಿ ನೆನಪಿಸಿದ ಅಭಿಮಾನಿಗಳು!

    ಮೊಹಾಲಿಯಲ್ಲೂ ಧೋನಿ ನೆನಪಿಸಿದ ಅಭಿಮಾನಿಗಳು!

    ಮೊಹಾಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಎರಡು 2 ಏಕದಿನ ಪಂದ್ಯಗಳಿಗೆ ಧೋನಿ ಅವರಿಗೆ ವಿಶ್ರಾಂತಿ ನೀಡಿದ್ದರೂ ಕೂಡ, ಮೊಹಾಲಿ ಪಂದ್ಯದಲ್ಲಿ ಧೋನಿ ಧೋನಿ ಎಂದು ಕೂಗುವ ಮೂಲಕ ಟೀಂ ಇಂಡಿಯಾ ಅಭಿಮಾನಿಗಳು ನೆನಪಿಸಿದ್ದಾರೆ.

    ಪಂತ್ ವಿಕೆಟ್ ಮಾಡುವ ವೇಳೆ ಧೋನಿ ಎಂದು ಇಡೀ ಮೈದಾನದಲ್ಲಿ ಅಭಿಮಾನಿಗಳು ಕೂಗಿ ಅಭಿಮಾನ ಮೆರೆದಿದ್ದರು. ಪಂದ್ಯದಲ್ಲಿ ಆಸೀಸ್ ತಂಡ ಗೆಲ್ಲಲು ಪ್ರಮುಖರಾಗಿದ್ದ ಟರ್ನರ್ ವಿಕೆಟ್ ಪಡೆಯುವ ಅವಕಾಶ ಲಭಿಸಿತ್ತು. ಆದರೆ ಈ ಹಂತದಲ್ಲಿ ವಿಕೆಟ್ ಹಿಂದೆ ಎರಡೆರಡು ಬಾರಿ ಎಡವಿದ್ದ ಪಂತ್ ಸಿಕ್ಕ ಅವಕಾಶವನ್ನು ಕೈ ಚೆಲ್ಲಿದ್ದರು.

    44ನೇ ಓವರ್ ಬೌಲ್ ಮಾಡಿದ್ದ ಚಹಲ್ ಲೇಗ್ ಸೈಡ್ ಬಾಲ್ ಎಸೆದು ವೈಡ್ ಮಾಡಿದ್ದರು. ಈ ವೇಳೆ ಸ್ಟಂಪ್ ಮಾಡುವ ಅವಕಾಶವನ್ನು 21 ವರ್ಷದ ಪಂತ್ ಮಿಸ್ ಮಾಡಿದ್ದರು. ಅಲ್ಲದೇ ಮತ್ತೊಂದು ಹಂತದಲ್ಲಿ 3ನೇ ಅಂಪೈರ್ ನೀಡಿದ ತೀರ್ಪಿನ ಬಗ್ಗೆಯೂ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

    ರಿಷಬ್ ಪಂತ್ ಇತ್ತೀಚೆಗಷ್ಟೇ ಬಿಸಿಸಿಐ ನೀಡಿದ್ದ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ 3 ಶ್ರೇಣಿ ಪಡೆದಿದ್ದರು. ಅಲ್ಲದೇ ಇಂಗ್ಲೆಂಡ್ ಹಾಗೂ ಆಸೀಸ್ ಟೂರ್ನಿಗಳಲ್ಲಿ ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಬ್ಯಾಟಿಂಗ್ ಅಲ್ಲದೇ ವಿಕೆಟ್ ಹಿಂದೆಯೂ ಉತ್ತಮ ಪ್ರದರ್ಶನ ನೀಡಿದ್ದ ರಿಷಬ್, ಅನುಭವಿ ಆಟಗಾರರ ದಿನೇಶ್ ಕಾರ್ತಿಕ್ ಇದ್ದ ಹೊರತಾಗಿಯೂ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದರು.

    https://twitter.com/Vidshots1/status/1104775666812243968

    ಅಂದಹಾಗೇ 2005 ಬಳಿಕ ಟೀಂ ಇಂಡಿಯಾ ಮೊದಲ ಬಾರಿಗೆ ಧೋನಿ ಆಡುವ 11ರ ಬಳಗದಲ್ಲಿ ಇಲ್ಲದೇ ಕಣಕ್ಕೆ ಇಳಿದಿದ್ದರು. ಈ ಅವಧಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ್ದ 54 ಏಕದಿನ ಪಂದ್ಯಗಳಲ್ಲಿಯೂ ಧೋನಿ ಆಡಿದ್ದರು. 2004 ರಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಆಸೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಆಡಿರಲಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಮ್ಯಾಚ್ ಟರ್ನ್ ಮಾಡಿದ ಟರ್ನರ್ – ಗೆದ್ದು ಸರಣಿ ಸಮಬಲ ಸಾಧಿಸಿದ ಆಸೀಸ್

    ಮ್ಯಾಚ್ ಟರ್ನ್ ಮಾಡಿದ ಟರ್ನರ್ – ಗೆದ್ದು ಸರಣಿ ಸಮಬಲ ಸಾಧಿಸಿದ ಆಸೀಸ್

    ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಆಸೀಸ್ ನಡುವೆ ನಡೆದ 4ನೇ ಏಕದಿನ ಪಂದ್ಯದಲ್ಲಿ ರನ್ ಹೊಳೆಯೇ ಹಾರಿದಿದ್ದು, ಆಸ್ಟ್ರೇಲಿಯಾ 4 ವಿಕೆಟ್ ಗಳಿಂದ ಗೆದ್ದು ಬಿಗಿದೆ.

    ಟೀಂ ಇಂಡಿಯಾ ನೀಡಿದ 359 ರನ್ ಗುರಿಯನ್ನು ಬೆನ್ನತ್ತಿದ ಆಸೀಸ್ ಪಡೆ 13 ಎಸೆತ ಬಾಕಿ ಇರುವಂತೆಯೇ ರನ್ ಸಿಡಿಸಿ ಗೆಲುವಿನ ಸವಿ ಪಡೆಯಿತು. ಪರಿಣಾಮ 5 ಪಂದ್ಯಗಳ ಏಕದಿನ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು, ದೆಹಲಿಯಲ್ಲಿ ನಡೆಯಲಿರುವ ಅಂತಿಮ ಪಂದ್ಯ ಇತ್ತಂಡಗಳಿಗೂ ಮಾಡು ಇಲ್ಲವೇ ಮಾಡಿ ಎಂಬಂತಾಗಿದೆ.

    ಆರಂಭದಲ್ಲಿ ಫಿಂಚ್ ಶೂನ್ಯಕ್ಕೆ ಔಟ್ ಮಾಡಿ ಭುವನೇಶ್ವರ್ ಮೊದಲ ಅಘಾತ ನೀಡಿದರೆ, 6 ರನ್ ಗಳಿಸಿದ್ದ ವೇಳೆ ಮಾರ್ಶ್ ವಿಕೆಟನ್ನು ಪಡೆಯುವ ಮೂಲಕ ಬುಮ್ರಾ 2ನೇ ಅಘಾತ ನೀಡದರು. ಆದರೆ ಈ ಹಂತದಲ್ಲಿ ಒಂದಾದ ಖವಾಜಾ, ಹ್ಯಾಡ್ಸ್‍ಕಾಂಬ್ ಭರ್ಜರಿ ಆಟ ಪ್ರದರ್ಶಿಸಿ ಟೀಂ ಇಂಡಿಯಾ ಬೌಲರ್ ಗಳನ್ನು ದಂಡಿಸಿದರು.

    ಖವಾಜಾ 99 ಎಸೆತಗಳಲ್ಲಿ 91 ರನ್, ಹ್ಯಾಡ್ಸ್ ಕಂಬ್ 105 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಗಳ ನೆರವಿನಿಂದ 117 ರನ್ ಗಳಿಸಿದರು. ಅಲ್ಲದೇ ನಿರ್ಣಾಯಕ ಹಂತದಲ್ಲಿ ಸ್ಫೋಟಕ ಆಟವಾಡಿದ ಟರ್ನರ್ 40 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಗಳ ನೆರವಿನಿಂದ 80 ರನ್ ಸಿಡಿಸಿ ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣರಾದರು.

    359 ರನ್ ಗಳ ಗುರಿಯನ್ನು ತಲುಪುವ ಮೂಲಕ ಆಸ್ಟ್ರೇಲಿಯಾ ಚೇಸಿಂಗ್ ನಲ್ಲಿ ಅತಿ ಹೆಚ್ಚು ಮೊತ್ತ ದಾಖಲಿಸಿತು. ಈ ಹಿಂದೆ 2011 ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಗಳನ್ನು ಬೆನ್ನತ್ತಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪರ ದುಬಾರಿಯಾದ ಬೌಲರ್ ಗಳು ಆಸೀಸ್ ಆಟಗಾರರನ್ನು ಕಟ್ಟಿ ಹಾಕಲು ವಿಫಲರಾದರು. ಬುಮ್ರಾ 8/59 ರನ್ ನೀಡಿ 2 ವಿಕೆಟ್ ಪಡೆದರೆ, ಚಹಲ್, ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಧವನ್ 143 ರನ್ (115 ಎಸೆತ, 18 ಬೌಂಡರಿ, 3 ಸಿಕ್ಸರ್) ಹಾಗೂ ರೋಹಿತ್ ಶರ್ಮಾ 95 ರನ್ (92 ಎಸೆತ, 5 ಬೌಂಡರಿ, 2 ಸಿಕ್ಸರ್) ಗಳಸಿ ಮಿಂಚಿದ್ದರು. ಅಲ್ಲದೇ ಅಂತಿಮ ಹಂತದಲ್ಲಿ ಪಂತ್ 36, ಶಂಕರ್ 26 ರನ್ ಗಳಿಸಿದ ಪರಿಣಾಮ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 358 ರನ್ ಗಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್: ಆಸೀಸ್‍ಗೆ 359 ರನ್ ಗುರಿ

    ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್: ಆಸೀಸ್‍ಗೆ 359 ರನ್ ಗುರಿ

    ಮೊಹಾಲಿ: ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಆಸೀಸ್‍ಗೆ ಗೆಲ್ಲಲು 359 ರನ್ ಗುರಿ ನೀಡಿದೆ.

    ಕಳೆದ ಮೂರು ಏಕದಿನ ಪಂದ್ಯಗಳಲ್ಲಿ ವಿಫಲವಾಗಿದ್ದ ಆರಂಭಿಕ ಶಿಖರ್ ಧವನ್ 115 ಎಸೆತಗಳಲ್ಲಿ 143 ರನ್ ಸಿಡಿಸಿ ವಿಶ್ವಕಪ್‍ಗೂ ಮುನ್ನ ಫಾರ್ಮ್ ಗೆ ಮರಳಿದ್ದಾರೆ. ಇತ್ತ ಮತ್ತೊಬ್ಬ ಆರಂಭಿಕ ರೋಹಿತ್ ಶರ್ಮಾ ಕೂಡ 92 ಎಸೆತಗಳಿಂದ 5 ಬೌಂಡರಿ 2 ಸಿಕ್ಸರ್ ಮೂಲಕ 95 ರನ್ ಗಳಿಸಿ ಮಿಂಚಿದರು. ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡ ಟೀಂ ಇಂಡಿಯಾ 158 ರನ್ ಗಳಿಸಿತು.

    ಟಾಸ್ ಗೆದ್ದು ಬ್ಯಾಟಿಂಗ್ ಆಯ್ದು ಕೊಂಡ ಟೀಂ ಇಂಡಿಯಾಗೆ ಧವನ್ ಸ್ಫೋಟಕ ಆಟದ ಮೂಲಕ ಆರಂಭ ನೀಡಿದರು. ಇತ್ತ ರೋಹಿತ್ ಶರ್ಮಾ ರಕ್ಷಣಾತ್ಮಕ ಆಟವಾಡಿ ಧವನ್‍ಗೆ ಸಾಥ್ ನೀಡಿದ್ದರು. ಈ ಜೋಡಿ ಮೊದಲ ವಿಕೆಟ್‍ಗೆ 186 ಎಸೆತಗಳಲ್ಲಿ ಬರೋಬ್ಬರಿ 193 ರನ್ ಜೊತೆಯಾಟ ನೀಡಿದರು. ಈ ಮೂಲಕ ಮೊದಲ ವಿಕೆಟ್‍ಗೆ ಭಾರತದ ಅತಿ ಹೆಚ್ಚು ರನ್ ಗಳಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಸಚಿನ್-ಸೌರವ್ ಗಂಗೂಲಿ ಜೋಡಿ 8,227 ಗಳಿಸಿದ್ದರು. ಸದ್ಯ ರೋಹಿತ್-ಧವನ್ ಜೋಡಿ 4,387 ರನ್ ಗಳಿಸಿದ್ದಾರೆ. ಅಲ್ಲದೇ ಇಷ್ಟೇ ರನ್ ಗಳಿಸಿದ್ದ ಸಚಿನ್-ಸೆಹ್ವಾಗ್ ಜೋಡಿಯನ್ನು ಹಿಂದಿಕ್ಕಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ರೋಹಿತ್-ಧವನ್ 7ನೇ ಜೊಡಿಯಾಗಿದೆ.

    97 ಎಸೆತಗಳಲ್ಲಿ ಶತಕ ಪೂರೈಸಿದ ಧವನ್ ಏಕದಿನ ಕ್ರಿಕೆಟಿನಲ್ಲಿ 16ನೇ ಶತಕ ಪೂರ್ಣಗೊಳಿಸಿದರು. ಅಲ್ಲದೇ ಧವನ್ ಏಕದಿನ ಮಾದರಿಯಲ್ಲಿ ಸಿಡಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ಈ ಹಿಂದೆ 137 ರನ್ ಧವನ್ ಅತ್ಯಧಿಕ ರನ್ ಆಗಿತ್ತು. 95 ರನ್ ಗಳಿಸಿದ್ದ ವೇಳೆ ಎಡವಿದ ರೋಹಿತ್ 40ನೇ ಅರ್ಧ ಶತಕ ಸಿಡಿಸಿ ನಿರ್ಗಮಿಸಿದರು.

    ಕೊಹ್ಲಿ 7 ರನ್ ಗಳಿಸಿ ಔಟಾದರೆ, ಕೆಎಲ್ ರಾಹುಲ್ 31 ಎಸೆತಗಳಲ್ಲಿ 26 ರನ್ ಗಳಿಸಿದರು. ರಿಷಬ್ ಪಂತ್ 24 ಎಸೆತಗಳಲ್ಲಿ 36 ರನ್ ಗಳಿಸಿದರು. ವಿಜಯ್ ಶಂಕರ್ ಕೂಡ 11 ಎಸೆತಗಳಲ್ಲಿ 19 ರನ ಗಳಿಸಿದರು.

    ಉಳಿದಂತೆ ಅಂತಿಮ 2 ಪಂದ್ಯಗಳಿಗೆ ವಿಶ್ರಾಂತಿ ಪಡೆದಿರುವ ಧೋನಿ ಅವರು ಆಡುವ 11ರಲ್ಲಿ ಬಳಗದಲ್ಲಿ ಇಲ್ಲದೇ 2005ರ ಬಳಿಕ ಮೊದಲ ಬಾರಿಗೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪರ ಕಣಕ್ಕೆ ಇಳಿದಿತ್ತು.

    ಮೊದಲ ವಿಕೆಟ್ 159 ರನ್ ಗಳಿಗೆ ಉರುಳಿದರೆ 165 ರನ್ ಗಳಿಗೆ ಟೀಂ ಇಂಡಿಯಾ 8 ವಿಕೆಟ್ ಕಳೆದುಕೊಂಡಿತ್ತು. ಆಸೀಸ್ ಪರ ಕಮ್ಮಿನ್ಸ್ 10 ಓವರ್ ಗಳಲ್ಲಿ 70 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ರಿಚಡ್ರ್ಸನ್ 3, ಜಂಪಾ 1 ವಿಕೆಟ್ ಪಡೆದರು.

    ಭಾರತದ ರನ್ ಏರಿದ್ದು ಹೇಗೆ?
    9.2 ಓವರ್ 50 ರನ್
    17.2 ಓವರ್ 100 ರನ್
    32 ಓವರ್ 200 ರನ್
    43.5 ಓವರ್ 300 ರನ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂಡೋ ಆಸೀಸ್ 4ನೇ ಏಕದಿನ ಪಂದ್ಯ – ಕೆಎಲ್ ರಾಹುಲ್‍ಗೆ ಸಿಗುತ್ತಾ ಚಾನ್ಸ್!

    ಇಂಡೋ ಆಸೀಸ್ 4ನೇ ಏಕದಿನ ಪಂದ್ಯ – ಕೆಎಲ್ ರಾಹುಲ್‍ಗೆ ಸಿಗುತ್ತಾ ಚಾನ್ಸ್!

    ಮೊಹಾಲಿ: ಆಸೀಸ್ ವಿರುದ್ಧದ ಅಂತಿಮ 2 ಏಕದಿನ ಪಂದ್ಯಗಳಲ್ಲಿ ಕೆಲವು ಪ್ರಯೋಗಗಳನ್ನು ಮಾಡುತ್ತೇವೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದು, ಕೆಎಲ್ ರಾಹುಲ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯಲಿದ್ದರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

    ಆರಂಭಿಕ ಶಿಖರ್ ಧವನ್ ಸತತ ವೈಫಲ್ಯ ಅನುಭವಿಸುತ್ತಿದ್ದು, ತಂಡದ ಆರಂಭಿಕರು ಪದೇ ಪದೇ ಉತ್ತಮ ಆರಂಭ ನೀಡಲು ವಿಫಲವಾಗುತ್ತಿರುವುದು ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಿಶ್ವಕಪ್‍ಗಾಗಿ ಉತ್ತಮ ಕಾಂಬಿನೇಶನ್ ರೂಪಿಸಲು ಅಂತಿಮ 2 ಪಂದ್ಯಗಳಲ್ಲಿ ಕೊಹ್ಲಿ ಪ್ರಯೋಗಕ್ಕೆ ಮುಂದಾಗಿದ್ದಾರೆ.

    ನಾಳೆ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಮೊಹಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಸರಣಿ ಗೆಲುವಿನ ಪ್ರದರ್ಶನ ನಿರೀಕ್ಷೆ ಮಾಡಲಾಗುತ್ತಿದೆ. ಒಂದೊಮ್ಮೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡರೆ ದೆಹಲಿಯಲ್ಲಿ ನಡೆಯುವ ಪಂದ್ಯ ಮತ್ತಷ್ಟು ಕುತೂಹಲಕ್ಕೆ ಕಾರಣವಾಗುತ್ತದೆ.

    ಈಗಾಗಲೇ ಧೋನಿ ಅವರಿಗೆ ಪಂದ್ಯದಿಂದ ವಿಶ್ರಾಂತಿ ನೀಡಿರುವುದರಿಂದ ಪಂತ್ ಸ್ಥಾನ ಪಡೆಯುವುದು ಖಚಿತವಾಗಿದ್ದು, ಶಮಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಭುವನೇಶ್ವರ್ ಅಂತಿಮ ಬಳಗದಲ್ಲಿ ಆಡುವುದು ಖಚಿತವಾಗಿದೆ. ಫಾರ್ಮ ಸಮಸ್ಯೆಯಿಂದ ಬಳಲುತ್ತಿರುವ ರಾಯುಡು ಈ ಪಂದ್ಯದಲ್ಲಿಯಾದ್ರು ಉತ್ತಮ ಪ್ರದರ್ಶನ ನೀಡುತ್ತರಾ ಕಾದು ನೊಡಬೇಕಿದೆ.

    ಉಳಿದಂತೆ ಮೊಹಾಲಿ ಪಿಚ್ ಕೂಡ ಬ್ಯಾಟಿಂಗ್ ಪಿಚ್ ಆಗಿರುವುದರಿಂದ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಳ್ಳಲಿದೆ. ಇದುವರೆಗೂ ಕ್ರೀಡಾಂಗಣದಲ್ಲಿ 24 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ನಡೆದಿದ್ದು, 15 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂದ್ಯವೇ ಗೆಲುವು ಪಡೆದಿದೆ. ಕಳೆದ ರಾಂಚಿ ಪಂದ್ಯದಂತೆ ಇಲ್ಲಿಯೂ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರ್‌ಸಿಬಿ ತಂಡದಿಂದ ಡ್ರಾಪ್ ಆದ ಸತ್ಯ ಬಿಚ್ಚಿಟ್ಟ ಕ್ರಿಸ್ ಗೇಲ್

    ಆರ್‌ಸಿಬಿ ತಂಡದಿಂದ ಡ್ರಾಪ್ ಆದ ಸತ್ಯ ಬಿಚ್ಚಿಟ್ಟ ಕ್ರಿಸ್ ಗೇಲ್

    ಮೊಹಾಲಿ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಆಯ್ಕೆಗಾರರು ಐಪಿಎಲ್ 11 ನೇ ಆವೃತ್ತಿಗೆ ತನ್ನನ್ನು ಉಳಿಸಿಕೊಳ್ಳುವ ಬಗ್ಗೆ ಮೊದಲು ಮಾಹಿತಿ ನೀಡಿದ್ದರು. ಆದ್ರೆ ಬಳಿಕ ಅವರು ತನ್ನನ್ನು ಸಂಪರ್ಕಿಸಲಿಲ್ಲ. ಇದರಿಂದ ತನಗೆ ನಿರಾಸೆ ಅನುಭವ ಉಂಟಾಗಿತ್ತು ಎಂದು ಕಿಂಗ್ಸ್ ಇಲೆವೆನ್ ತಂಡ ಹಾಗೂ ಕೆರೆಬಿಯನ್ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ.

    ಈ ಕುರಿತು ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಮೊದಲು ಆರ್‌ಸಿಬಿ ತಂಡದ ಆಯ್ಕೆ ಸಮಿತಿ ತನ್ನನ್ನು ಉಳಿಸಿಕೊಳ್ಳುವುದಾಗಿ ಮಾಹಿತಿ ನೀಡಿತ್ತು. ಆದರೆ ಬಳಿಕ ತಮ್ಮ ನಿರ್ಧಾರವನ್ನು ಬದಲಾಯಿಸಿದರು. ಆದರೆ ಈ ಕುರಿತು ಯಾರನ್ನು ಹೊಣೆ ಮಾಡಲು ಸಾಧ್ಯವಿಲ್ಲ. ತಾನು ಈ ಹಿಂದಿನ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದೇನೆ. ಇದಕ್ಕೆ ಸಾಕ್ಷಿ ಎಂಬಂತೆ 21 ಶತಕ ಹಾಗೂ ಅತೀ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಹೊಂದಿದ್ದೇನೆ ಎಂದರು.

    ಸೆಹ್ವಾಗ್ ಅಚ್ಚರಿ ಆಯ್ಕೆ: ಐಪಿಎಲ್ ಟೂರ್ನಿಯ ಹರಾಜು ಪ್ರಕ್ರಿಯೆ ವೇಳೆ ತನ್ನನ್ನು ಎರಡು ಬಾರಿಯೂ ಆಯ್ಕೆ ಮಾಡಿರಲಿಲ್ಲ. ಆದರೆ ಮೂರನೇ ಬಾರಿ ಸೆಹ್ವಾಗ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುವ ಅವಕಾಶ ನೀಡಿದ್ದರು. ಇದು ತನಗೆ ಅಚ್ಚರಿ ಮೂಡಿಸಿತ್ತು. ಈ ಮೊದಲು ತಾನು ಟೂರ್ನಿಗೆ ಅಗತ್ಯವಿಲ್ಲ `ಇಟ್ಸ್ ಫೈನ್’ ಎಂದು ಸಮಾಧಾನಗೊಂಡಿದ್ದೆ ಎಂದು ಹೇಳಿದರು.

    ಕಪ್ ಗೆಲ್ಲಬೇಕು: ಈ ಬಾರಿಯ ಟೂರ್ನಿಯಲ್ಲಿ ತಾನು ಕೇವಲ ಒಂದು ಉದ್ದೇಶ ಹೊಂದಿದ್ದೇನೆ. ಅದು ಪಂಜಾಬ್ ಕಪ್ ಗೆಲ್ಲುವಂತೆ ಮಾಡುವುದು. ತಂಡದ ಮಾಲೀಕರಾದ ಪ್ರೀತಿ ಜಿಂಟಾ ಅವರಿಗೆ ಕಪ್ ಗೆದ್ದು ನೀಡುತ್ತೇವೆ. ಇದಾದ ಬಳಿಕ 2019 ರ ವಿಶ್ವಕಪ್ ಅನ್ನು ತನ್ನ ದೇಶಕ್ಕೆ ಗೆಲ್ಲಿಸಿಕೊಡ ಬೇಕಿದೆ. ಆದ್ರೆ ವಿಶ್ವಕಪ್ ಗೆ ಆಯ್ಕೆಯಾಗಲು ಸಾಕಷ್ಟು ಹೋರಾಟ ನಡೆಸಬೇಕಾಯಿತು ಎಂದು ಹೇಳಿದರು.

    ಕಳೆದ 10 ಐಪಿಎಲ್ ಟೂರ್ನಿಗಳಲ್ಲಿ ಗೇಲ್ 6 ಶತಕಗಳನ್ನು ಒಳಗೊಂಡಂತೆ 3,878 ರನ್ ಗಳಿಸಿದ್ದಾರೆ. 11 ನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿರುವ ಗೇಲ್ ಈಗಾಗಲೇ ಹೈದರಾಬಾದ್ ವಿರುದ್ಧ ಸ್ಫೋಟಕ ಶತಕ (106 ರನ್) ಸಿಡಿಸಿದ್ದು, ಇದುವರೆಗೂ ಆಡಿರುವ ಪಂದ್ಯಗಳಲ್ಲಿ 161.53 ಸ್ಟ್ರೈಕ್ ರೇಟ್ ನಲ್ಲಿ 252 ರನ್ ಸಿಡಿಸಿದ್ದಾರೆ.

  • ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

    ಗೇಲ್ ಶತಕದ ಅಬ್ಬರಕ್ಕೆ ಯುವಿ ಗಂಗ್ನಮ್ ಡ್ಯಾನ್ಸ್ ಸಂಭ್ರಮ – ವಿಡಿಯೋ ನೋಡಿ

    ಮೊಹಾಲಿ: ಇಲ್ಲಿನ ಪಂಜಾಬ್ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ಹಾಗೂ ಪಂಜಾಬ್ ನಡುವಿನ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕ್ರಿಸ್ ಗೇಲ್ ಭರ್ಜರಿ ಶತಕ ಸಿಡಿಸಿದರೆ, ಪೆವಿಲಿಯನ್ ನಲ್ಲಿ ಕುಳಿತಿದ್ದ ಯುವರಾಜ್ ಗಂಗ್ನಮ್ ಸ್ಟೈಲ್ ನಲ್ಲಿ ಡಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.

    ಪಂದ್ಯದಲ್ಲಿ 61ನೇ ಎಸೆತದಲ್ಲಿ 1 ರನ್ ಗಳಿಸುವ ಮೂಲಕ ಗೇಲ್ ಶತಕ ಪೂರೈಸಿದರು. ಈ ವೇಳೆ ಯುವಿ ಗಂಗ್ನಮ್ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಪಂಜಾಬ್ ತಂಡದ ಮಾಲೀಕರಾಗಿರುವ ನಟಿ ಪ್ರೀತಿ ಜಿಂಟಾ ಸಹ ವಿಐಪಿ ಗ್ಯಾಲರಿಯಲ್ಲಿ ಕುಣಿದು ಕುಪ್ಪಳಿಸಿದರು. ಪಂದ್ಯದ ಬಳಿಕವೂ ಗೇಲ್ ರ ಶತಕದ ಸಂಭ್ರಮದ ಆಚರಣೆ ಮುಂದುವರೆದಿದ್ದು ಈ ಕುರಿತ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಕೆರೆಬಿಯನ್ ಆಟಗಾರ ಗೇಲ್ ಶತಕ ಸಿಡಿಸುವ ಮೂಲಕ ತಮ್ಮನ್ನು ಟೀಕಿಸುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರಿಸಿದ್ದಾರೆ. ಈ ಮೂಲಕ ತಮ್ಮಲ್ಲಿ ಇನ್ನು ಬ್ಯಾಟಿಂಗ್ ನಡೆಸುವ ಶಕ್ತಿ ಇದೆ ಎಂದು ಸಾಬೀತು ಪಡಿಸಿದ್ದಾರೆ. ಕೇವಲ 63 ಎಸೆತಗಳನ್ನು ಎದುರಿಸಿದ ಗೇಲ್ ಔಟಾಗದೆ 11 ಸಿಕ್ಸರ್, 1 ಬೌಂಡರಿ ಮೂಲಕ 104 ರನ್ ಸಿಡಿಸಿದ್ದರು. ಅಲ್ಲದೇ ಟೂರ್ನಿಯ ಮೊದಲ ಶತಕ ದಾಖಲಿಸಿದ್ದರು. ಇದನ್ನೂ ಓದಿ: ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಕಳೆದ ಹಲವು ಆವೃತ್ತಿಗಳಲ್ಲಿ ಆರ್ ಸಿಬಿ ತಂಡವನ್ನು ಪ್ರತಿನಿಧಿಸಿದ್ದ ಗೇಲ್ ರನ್ನು ಈ ಬಾರಿ ಪಂಜಾಬ್ ಖರೀದಿಸಿತ್ತು. ಆದರೆ ಗೇಲ್ ಅವರಿಗೆ ಆರಂಭದ ಎರಡು ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಅವಕಾಶ ಪಡೆದ ಗೇಲ್ 62 ರನ್ ಸಿಡಿಸಿ ಭರವಸೆ ಮೂಡಿಸಿದ್ದರು. ಬಳಿಕ ಗುರುವಾರ ರಾತ್ರಿ ನಡೆದ ಹೈದರಾಬಾದ್ ವಿರುದ್ಧವೂ ಶತಕ ಸಿಡಿಸಿ ಅಬ್ಬರಿಸಿದ್ದಾರೆ.

     

  • ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ: ಕ್ರಿಸ್ ಗೇಲ್

    ಮೊಹಾಲಿ: ಐಪಿಎಲ್ 2018 ರ ಆವೃತ್ತಿಗೆ ಸೆಹ್ವಾಗ್ ನನ್ನನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ಅನ್ನು ರಕ್ಷಿಸಿದ್ದಾರೆ ಎಂದು ಕಿಂಗ್ಸ್ ಇಲೆವೆನ್ ತಂಡದ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ಹಾಸ್ಯದ ಟ್ವೀಟ್ ಮಾಡಿದ್ದಾರೆ.

    ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗುರುವಾರ ನಡೆದ ಪಂದ್ಯದಲ್ಲಿ ಗೇಲ್ ಶತಕ ಸಿಡಿಸಿ ಪಂಜಾಬ್ ಗೆಲುವಿಗೆ ಕಾರಣರಾಗಿದ್ದರು. ಈ ಕುರಿತು ಸಂತೋಷ ಹಂಚಿಕೊಂಡ ಸೆಹ್ವಾಗ್ ಕ್ರಿಸ್ ಗೇಲ್‍ರನ್ನು ಆಯ್ಕೆ ಮಾಡುವ ಮೂಲಕ ಐಪಿಎಲ್ ರಕ್ಷಣೆ ಮಾಡಿರುವುದಾಗಿ ಗೇಲ್ ರ ಕಾಲೆಳೆದಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೇಲ್ ಹೌದು ನನ್ನನ್ನು ಆಯ್ಕೆ ಮಾಡುವ ಮೂಲಕ ಸೆಹ್ವಾಗ್ ಐಪಿಎಲ್ ರಕ್ಷಿಸಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಅಲ್ಲದೇ ಎಲ್ಲರೂ ನನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಲು ಸಲಹೆ ನೀಡಿದರು. ಆದರೆ ಇಲ್ಲಿ ನನ್ನ ಹೆಸರಿಗೆ ಗೌರವ ಗಳಿಸಲು ಮಾತ್ರ ಇರುವುದಾಗಿ ಹೇಳಿದ್ದಾರೆ.

    ವರ್ಷದ ಆರಂಭದಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಗೇಲ್ ರನ್ನು ತಂಡಕ್ಕೆ ಪಡೆಯಲು ಐಪಿಎಲ್ ಫ್ರಾಂಚೈಸಿಗಳು ಹಿಂದೇಟು ಹಾಕಿತ್ತು. ಈ ವೇಳೆ ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ಆಗಿದ್ದ ಸೆಹ್ವಾಗ್ ಗೇಲ್‍ರನ್ನು ಮೂಲ ಬೆಲೆಗೆ 2ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿದ್ದರು. ಕಳೆದ ಕೆಲ ದಿನಗಳ ಹಿಂದೆ ಕನ್ನಡಿಗ ಕೆ.ಎಲ್ ರಾಹುಲ್ ಕ್ರಿಸ್ ಗೇಲ್ ಆಟದ ಕುರಿತು ಎಲ್ಲಾ ತಂಡದ ಬೌಲರ್ ಗಳಿಗೂ ಎಚ್ಚರಿಕೆ ನೀಡಿದ್ದರು.

    ಸದ್ಯ ಇದನ್ನು ಸಾಬೀತು ಪಡಿಸಿರುವ ಗೇಲ್ ಹೈದರಾಬಾದ್ ವಿರುದ್ಧ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್ ಹಾಗೂ 1 ಬೌಂಡರಿ ನೆರವಿನಿಂದ ಶತಕ ಸಿಡಿಸಿದರು. ಈ ಮೂಲಕ 2018 ಐಪಿಎಲ್ ಆವೃತ್ತಿಯಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಐಪಿಎಲ್ ನಲ್ಲಿ ಅತೀಹೆಚ್ಚು ಸಿಕ್ಸರ್ ಸಿಡಿಸಿದ ಪಟ್ಟಿಯಲ್ಲಿ 279 ಸಿಕ್ಸರ್ ಮೂಲಕ ಗೇಲ್ ಮೊದಲ ಸ್ಥಾನ ಪಡೆದಿದ್ದಾರೆ. ನಂತರದಲ್ಲಿ ರೋಹಿತ್ ಶರ್ಮಾ(179), ರೈನಾ(174), ಎಬಿಡಿವಿಲಿಯರ್ಸ್(167), ಕೊಹ್ಲಿ(166) ಸ್ಥಾನ ಪಡೆದಿದ್ದಾರೆ.

  • 93 ವರ್ಷದ ಹಿರಿಯ ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಸೆಹ್ವಾಗ್

    93 ವರ್ಷದ ಹಿರಿಯ ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ ಸೆಹ್ವಾಗ್

    ಮೊಹಾಲಿ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಆಟಗಾರ ವಿರೇಂದ್ರ ಸೆಹ್ವಾಗ್ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕವೂ ಅವರ ಅಭಿಮಾನಿಗಳ ಬಳಗ ಕಡಿಮೆಯಾಗಿಲ್ಲ ಎಂಬುವುದಕ್ಕೆ ತಾಜಾ ಉದಾಹರಣೆಯೊಂದು ಸಿಕ್ಕಿದೆ.

    ಸೆಹ್ವಾಗ್ ತಮ್ಮ ಟ್ವಿಟ್ಟರ್ ನಲ್ಲಿ ಕೆಲ ಫೋಟೋಗಳನ್ನು ಅಪ್ಲೋಡ್ ಮಾಡಿದ್ದು, 93 ವರ್ಷದ ಅಭಿಮಾನಿಯನ್ನು ಭೇಟಿ ಮಾಡಿರುವ ಕುರಿತು ಬರೆದುಕೊಂಡಿದ್ದಾರೆ.

    ಮೂಲತಃ ಚಂಡೀಗಢದ ಪಟಿಯಾಲ ನಿವಾಸಿಯಾದ ಓಂ ಪ್ರಕಾಶ್ ಅವರು ಸೆಹ್ವಾಗ್ ಅವರ ಅಭಿಮಾನಿಯಾಗಿದ್ದು, ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ಕುರಿತು ಮಾಹಿತಿ ಪಡೆದ ಸೆಹ್ವಾಗ್ ಕೂಡಲೇ ಅವರ ಬಳಿ ತೆರಳಿ ಮಾತನಾಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿ ತಿಳಿಸಿರುವ ಅವರು, ಓಂ ಪ್ರಕಾಶ್ ಅವರನ್ನು ಭೇಟಿ ಮಾಡಿದ್ದು ತುಂಬಾ ಸಂತೋಷವನ್ನು ನೀಡಿದೆ. ನನ್ನನ್ನು ಭೇಟಿ ಮಾಡಲು ಬಂದ ಓಂ ಪ್ರಕಾಶ್ ದಾದಾ ಅವರಿಗೆ ಅವರ ಪ್ರೀತಿಗೆ ನನ್ನ ನಮಸ್ಕಾರ ಎಂದು ಹೇಳಿದ್ದಾರೆ.

    ಸೆಹ್ವಾಗ್ ಅವರ ಈ ಸರಳತೆಯನ್ನು ತಿಳಿಸುವ ಮತ್ತಷ್ಟು ಫೋಟೋಗಳನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೆಹ್ವಾಗ್ ಅವರು ಓಂ ಪ್ರಕಾಶ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿರುವ ಫೋಟೋವನ್ನು ಪ್ರಕಟಿಸಿದೆ. ಈ ಫೋಟೋರನ್ನು ಕಂಡ ಅಭಿಮಾನಿಗಳು ಸೆಹ್ವಾಗ್ ಅವರ ಸರಳತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

  • ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

    ದೇವರು ಆಡಲು ನನಗೆ ಶಕ್ತಿ ಕೊಟ್ಟಿದ್ದಾನೆ-ಧೋನಿ

    ಮೊಹಾಲಿ: ಕ್ರಿಕೆಟ್ ಆಡಲು ದೇವರು ನನಗೆ ಶಕ್ತಿ ಕೊಟ್ಟಿದ್ದಾನೆ. ಆಟದಲ್ಲಿ ನಾನು ಹೆಚ್ಚು ಸೊಂಟದ ಮೇಲೆ ಒತ್ತಡವನ್ನು ನೀಡುವುದಿಲ್ಲ. ನನ್ನ ಕೈಗಳಿಗೆ ಮಾತ್ರ ಹೆಚ್ಚಿನ ಶ್ರಮ ನೀಡುತ್ತೇನೆ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.

    ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಧೋನಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಳಿಕವೂ ಚೆನ್ನೈ 4 ರನ್ ಅಂತರದಲ್ಲಿ ಸೋಲುಂಡಿತ್ತು.

    ಪಂಜಾಬ್ ತಂಡದ ನೀಡಿದ್ದ 198 ರನ್ ಗುರಿಯನ್ನು ಬೆನ್ನತ್ತಿದ್ದ ಸಿಎಸ್‍ಕೆ ಗೆಲುವಿಗಾಗಿ ರೋಚಕ ಹೋರಾಟ ನಡೆಸಿತ್ತು. ಈ ಪಂದ್ಯದಲ್ಲಿ ಧೋನಿ 44 ಎಸೆತಗಳಲ್ಲಿ 79 ರನ್ (6 ಬೌಂಡರಿ, 5 ಸಿಕ್ಸರ್) ಸಿಡಿಸಿದ್ದರು. ಆದರೆ ಪಂದ್ಯದ ನಡುವೆ ಧೋನಿ ಬೆನ್ನು ನೋವಿನಿಂದ ಬಳಲಿದ್ದರೂ ಬಳಿಕ ಮೈದಾನದಿಂದಲೇ ಚಿಕಿತ್ಸೆ ಪಡೆದು ಆಟ ಮುಂದುವರೆಸಿದ್ದರು. ಪಂದ್ಯದ ಕೊನೆಯ ಓವರ್ ವರೆಗೂ ಗೆಲುವಿಗಾಗಿ ಧೋನಿ ನಡೆಸಿದ ಹೋರಾಟಕ್ಕೆ ಮೋಹಿತ್ ಶರ್ಮಾ ಉತ್ತಮ ಪ್ರತಿರೋಧ ನಡೆಸಿದ್ದರು. ಧೋನಿ ಪಂದ್ಯದಲ್ಲಿ ಸಮಸ್ಯೆಗೆ ಒಳಗಾದರೂ ಗೆಲುವಿಗಾಗಿ ನಡೆಸಿದ ಹೋರಾಟಕ್ಕೆ ಹಲವು ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಟ್ವೀಟ್ ಮಾಡಿದ್ದಾರೆ.

    ಇದಕ್ಕೂ ಮುನ್ನ ಸಿಎಸ್‍ಕೆ ನ ಎರಡು ಪಂದ್ಯಗಳ ಗೆಲುವಿಗೆ ಸ್ಯಾಮ್ ಬಿಲ್ಲಿಂಗ್ ಮತ್ತು ಬ್ರಾವೋ ಕಾರಣರಾಗಿದ್ದರು. ಆದರೆ ಪಂಜಾಬ್ ವಿರುದ್ಧ ಪಂದ್ಯದಲ್ಲಿ ಬ್ರಾವೋ ಅವರ ಸ್ಥಾನದಲ್ಲಿ ಜಡೇಜಾ ಅವರನ್ನು ಬ್ಯಾಟಿಂಗ್ ಕಳುಹಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ ಆಲ್ ರೌಂಡರ್ ಜಡೇಜಾ ಭಾರೀ ಹೊಡೆತ ಸಿಡಿಸುವ ನಂಬಿಕೆ ಇತ್ತು. ಅದ್ದರಿಂದಲೇ ಅವರ ಬ್ಯಾಟಿಂಗ್ ಕ್ರಮದಲ್ಲಿ ಉನ್ನತಿ ನೀಡಲಾಗಿತ್ತು ಎಂದರು. ಬಳಿಕ ಮುಂದಿನ ಪಂದ್ಯಕ್ಕೆ ಮೂರು ದಿನಗಳ ಸಮಯ ಇರುವುದರಿಂದ ತಮ್ಮ ಸಮಸ್ಯೆಯಿಂದ ಬೇಗ ಹೊರ ಬರುತ್ತೇನೆ ಎಂದು ಹೇಳಿದ್ದಾರೆ.

  • ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ವಾರ್ನರ್ ದಾಖಲೆ ಸರಿಗಟ್ಟಿದ ಗೌತಮ್ ಗಂಭೀರ್

    ಮೊಹಾಲಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಗೌತಮ್ ಗಂಭೀರ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಅರ್ಧಶತಕ ಗಳಿಸುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಹೆಚ್ಚು ಅರ್ಧಶತಕ ಹೊಡೆದಿದ್ದ ವಾರ್ನರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

    ಐಪಿಎಲ್ ಟೂರ್ನಿಯಲ್ಲಿ ಈ ಮೂಲಕ 36 ನೇ ಅರ್ಧಶತಕ ಸಿಡಿಸಿದ ಗಂಭೀರ್ ಪಟ್ಟಿಯಲ್ಲಿ ಆಗ್ರಸ್ಥಾನವನ್ನು ಹಂಚಿಕೊಂಡಿದ್ದಾರೆ. ಸದ್ಯ ಚೆಂಡು ವಿರೂಪಗೊಳಿದ ಪ್ರಕರಣದಲ್ಲಿ ಐಪಿಎಲ್ ನಿಂದ ಹೊರಗುಳಿದಿರುವ ವಾರ್ನರ್ ದಾಖಲೆಯನ್ನು ಗಂಭೀರ್ ಮುರಿಯುವ ಅವಕಾಶವಿದೆ. ಈ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ (32) ಮೂರನೇ ಸ್ಥಾನ, ಸುರೇಶ್ ರೈನಾ (31) 4ನೇ ಸ್ಥಾನ, ಆರ್ ಸಿಬಿ ನಾಯಕ ಕೊಹ್ಲಿ (30) ನಂತರದ ಸ್ಥಾನ ಪಡೆದಿದ್ದಾರೆ.

    ಐಪಿಎಲ್ 11 ನೇ ಆವೃತ್ತಿಯ ಮೊದಲ ಪಂದ್ಯದಲ್ಲೇ ಗೌತಮ್ ಗಂಭೀರ್ ಅರ್ಧ ಶತಕ ಗಳಿಸಿದ್ದಾರೆ. ಪಂದ್ಯದಲ್ಲಿ 36 ಎಸೆತಗಳಲ್ಲಿ 1 ಸಿಕ್ಸರ್, 4 ಬೌಂಡರಿ ನೆರವಿನಿಂದ ಅರ್ಧಶತಕ ಸಿಡಿಸಿದರು.

    ಕಳೆದ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಾಯಕತ್ವ ವಹಿಸಿದ್ದ ಗಂಭೀರ್ ಈ ಬಾರಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

    ಗಂಭೀರ್ ಕಳೆದ 10 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ ಗಳಿದ ಪಟ್ಟಿ: 58 , 15, 72, 1, 0, 41, 0, 57, 38, 76, 50. ಒಟ್ಟಾರೆ 11 ಆವೃತ್ತಿಗಳ ಆರಂಭಿಕ ಪಂದ್ಯಗಳಲ್ಲಿ 68 ರನ್ ಸರಾಸರಿ ಯೊಂದಿಗೆ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.