ನ್ಯಾಷನಲ್ ಸ್ಟಾರ್ ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ಜೋಡಿಯ ದಾಂಪತ್ಯಕ್ಕೆ ಇಂದು (ಡಿ.9) 8ನೇ ವರ್ಷ. ಇದೇ ಖುಷಿಯಲ್ಲಿ ನಟಿ ಪತಿ ಯಶ್‌ಗೆ ವಿಶೇಷವಾಗಿ ಶುಭಕೋರಿದ್ದಾರೆ. ನಟಿಯ ಲವ್ಲಿ ವಿಶ್ ನೋಡಿ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ
ದಾಂಪತ್ಯ ಎಂದಿಗೂ ಇಬ್ಬರೂ ಪರಿಪೂರ್ಣ ವ್ಯಕ್ತಿಗಳಿಂದ ಅಲ್ಲ. ಇಬ್ಬರೂ ತದ್ವೀರುದ್ಧ ವ್ಯಕ್ತಿಗಳು ಪರಸ್ಪರ ಬಿಟ್ಟು ಕೊಡಲು ನಿರಾಕರಿಸಿದಾಗ ಎಂದು ನಟಿ ಬರೆದುಕೊಂಡಿದ್ದಾರೆ. ನನ್ನ ಪ್ರೀತಿಯ ಪತಿಗೆ 8ನೇ ವಿವಾಹ ಮಹೋತ್ಸವದ ಶುಭಾಶಯಗಳು ಎಂದು ರಾಧಿಕಾ ವಿಶ್ ಮಾಡಿದ್ದಾರೆ.
ಇನ್ನೂ ಯಶ್ ಮತ್ತು ರಾಧಿಕಾ ಮೊದಲು ‘ನಂದಗೋಕುಲ’ ಎಂಬ ಸೀರಿಯಲ್ ಸೆಟ್‌ನಲ್ಲಿ ಭೇಟಿಯಾದರು. ಆ ನಂತರ ಮೊಗ್ಗಿನ ಮನಸ್ಸು, ಡ್ರಾಮಾ ಸಿನಿಮಾ ವೇಳೆ ಸ್ನೇಹ ಪ್ರೀತಿಗೆ ತಿರುಗಿತ್ತು. ಆ ನಂತರ ಗುರುಹಿರಿಯರ ಸಮ್ಮತಿ ಪಡೆದು 2016ರ ಡಿ.9ರಂದು ಯಶ್ ಜೊತೆ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸಕ್ಸಸ್‌ಫುಲ್ ನಾಯಕಿಯಾಗಿ ಚಿತ್ರರಂಗ ಆಳುತ್ತಿರುವಾಗಲೇ ರಾಧಿಕಾ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿ ಯಶ್ ಜೊತೆ ಮದುವೆಯಾದರು. ಇವರ ದಾಂಪತ್ಯಕ್ಕೆ ಮಕ್ಕಳು ಸಾಕ್ಷಿಯಾಗಿದ್ದಾರೆ. ಅದಷ್ಟೇ ಅಲ್ಲ, ಪತಿ ಯಶ್ ಅವರ ಸಿನಿಮಾ ಯಶಸ್ಸಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಯಶ್ ಸಕ್ಸಸ್‌ನಲ್ಲಿ ರಾಧಿಕಾ ಅವರ ಪಾತ್ರವು ಇದೆ. ಇದರ ಜೊತೆಗೆ ನಟಿಯ ಕಮ್‌ಬ್ಯಾಕ್ ಸಿನಿಮಾ ಅಭಿಮಾನಿಗಳು ಕಾಯುತ್ತಿದ್ದಾರೆ.
ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಸಿನಿಮಾದಿಂದ ದೂರವಿದ್ರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಲವ್ ಸೆಲೆಬ್ರೇಷನ್‌ಗೆ ಗೊಂಬೆಯಂತೆ ರಾಧಿಕಾ ರೆಡಿಯಾಗಿದ್ದಾರೆ. ಯಶ್ ಪತ್ನಿಯ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಫೆಬ್ರವರಿ ಪ್ರೇಮಿಗಳು ಆಚರಿಸುವ ತಿಂಗಳು. ಪ್ರೇಮಿಗಳ ದಿನವನ್ನು ಆಚರಿಸಲು ರಾಧಿಕಾ ರೆಡಿಯಾದಂತಿದೆ. ‘ಹಲೋ ಟು ಮಂತ್ ಆಫ್ ಲವ್’ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ಫೆಬ್ರವರಿ ತಿಂಗಳನ್ನು ನಟಿ ವೆಲ್‌ಕಮ್ ಮಾಡಿದ್ದಾರೆ.
ಗೋಲ್ಡನ್ ಕಲರ್ ಡ್ರೆಸ್‌ನಲ್ಲಿ ಕುಳಿತು ರಾಧಿಕಾ ಪಂಡಿತ್ ವಿವಿಧ ಭಂಗಿಯಲ್ಲಿ ಪೋಸ್ ನೀಡಿದ್ದಾರೆ. ರಾಧಿಕಾರ ಸ್ಟೈಲೀಶ್ ಲುಕ್, ಮುಖದಲ್ಲಿರುವ ಮಂದಹಾಸ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಸಾಯಿ ಧರಂ ತೇಜ್ ಚಿತ್ರದಿಂದ ಪೂಜಾ ಹೆಗ್ಡೆ ಔಟ್
ನಟ ಯಶ್ (Yash) ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಐರಾ ಮತ್ತು ಯಥರ್ವ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮದುವೆಯ ಬಳಿಕ ರಾಧಿಕಾ ನಟನೆಯಿಂದ ದೂರ ಉಳಿದ್ದಾರೆ.
ಕೆಲ ನೆಟ್ಟಿಗರು ರಾಧಿಕಾ ಹೊಸ ಫೋಟೋಗೆ ‘ಟಾಕ್ಸಿಕ್’ (Toxic Film) ಬಗ್ಗೆ ಅಪ್‌ಡೇಟ್ ಕೊಡಿ ಎಂದು ಕಾಮೆಂಟ್ ಮಾಡುತ್ತಿದ್ರೆ, ಮತ್ತೆ ಯಾವಾಗ ನೀವು ಸಿನಿಮಾ ಮಾಡ್ತಿರಾ? ನಾವು ಕಾಯುತ್ತಿದ್ದೇವೆ ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.
ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ (Radhika Pandit) ಅವರು ಯಶ್ (Yash) ಜೊತೆಗಿನ ದಾಂಪತ್ಯ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇದೀಗ 5 ವರ್ಷದ ಹಿಂದಿನ ಪೋಸ್ಟ್ ಹಂಚಿಕೊಂಡು, ತಾವು ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟಿರೋದರ ಬಗ್ಗೆ ಮೆಲುಕು ಹಾಕಿದ್ದಾರೆ. ಈ ಮೂಲಕ ಮತ್ತೆ ನಟನೆಗೆ, ಯಶ್ ಪತ್ನಿ ಕಮ್ ಬ್ಯಾಕ್ ಆಗ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಯಶ್- ರಾಧಿಕಾ ಪಂಡಿತ್ ಅವರಿಗೆ ಜುಲೈ 18 ತುಂಬಾನೇ ಸ್ಪೆಷಲ್ ದಿನ. ‘ಮೊಗ್ಗಿನ ಮನಸ್ಸು’ ಸಿನಿಮಾ ಮೂಲಕ ರಾಧಿಕಾ ನಾಯಕಿಯಾಗಿ ಪರಿಚಯವಾದ ದಿನ. ಚಂಚಲ ಎಂಬ ಪಾತ್ರದ ಮೊಗ್ಗಿನ ಮನಸ್ಸಿನ ಹುಡುಗಿಯಾಗಿ ರಾಧಿಕಾ ಪಂಡಿತ್ ಮಿಂಚಿದ್ದರು. ಯಶ್‌ಗೆ ಜೋಡಿಯಾಗಿ ಸಾಥ್ ನೀಡಿದ್ದರು. ನಟಿಸಿದ ಮೊದಲ ಸಿನಿಮಾನೇ ಸೂಪರ್ ಡೂಪರ್ ಹಿಟ್ ಆಗಿತ್ತು. ಆಮೇಲೆ ಆಗಿದೆಲ್ಲಾ ಇತಿಹಾಸ. ಚಂದನವನದ ಸಿಂಡ್ರೆಲಾ ಆಗಿ ನಟಿ ಸೌಂಡ್ ಮಾಡಿದ್ರು. ರಾಧಿಕಾ ಪಂಡಿತ್ ಚಿತ್ರರಂಗಕ್ಕೆ ಬಂದು ಈಗ 15 ವರ್ಷಗಳಾಗಿದೆ.
ಜುಲೈ 18, 2008 ರಾಧಿಕಾ ಪಂಡಿತ್ (Radhika Pandit) ಆಗಿ ನಿಮಗೆಲ್ಲ ಪರಿಚಿತಳಾದೆ, ನನಗೆ ಚಿತ್ರಪ್ರಪಂಚದ ಪರಿಚಯವಾಯ್ತು. ನಟಿಯರ ಜೀವನ ಚಿಕ್ಕದು ಎನ್ನುತ್ತಾರೆ ಆದರೆ 10 ವರ್ಷ ಎಂಬುದು ಸಣ್ಣದಲ್ಲ. 10 ವರ್ಷ ಹೋರಾಡಿ ಉಳಿದದ್ದೇನೂ ಅಲ್ಲ ಬದಲಿಗೆ ಗಟ್ಟಿಯಾಗಿ ನೆಲೆಗೊಂಡಿದ್ದು. ಈ ಹತ್ತು ವರ್ಷಗಳಲ್ಲಿ ನಿನ್ನ ಸಾಧನೆ ಏನು? ಎಂದು ನೀವು ಕೇಳಬಹುದು, ನಿಮ್ಮನ್ನು (ಅಭಿಮಾನಿಗಳು) ಗಳಿಸಿರುವುದೇ ನನ್ನ ಸಾಧನೆ. ಇಂದಿಗೂ ನನ್ನನ್ನು ಪ್ರೀತಿಸುವ ಅಭಿಮಾನಿಗಳನ್ನು ಪಡೆದಿದ್ದೇನೆ. ಗೌರವಿಸುವ ಚಿತ್ರೋದ್ಯಮವನ್ನು ಪಡೆದಿದ್ದೇನೆ ಎಂದು ಐದು ವರ್ಷಗಳ ಹಿಂದಿನ ಪೋಸ್ಟ್‌ನಲ್ಲಿ ನಟಿ ರಾಧಿಕಾ ಪಂಡಿತ್ ಬರೆದಿದ್ದರು.
ಮುಂದುವರೆದು, ಈ ಪಯಣ ಸುಲಭದ್ದೇನು ಆಗಿರಲಿಲ್ಲ. ಆದರೆ ಇದನ್ನು ಸಾಧ್ಯವಾಗಿಸುವುದರಲ್ಲಿ ನನ್ನ ಸುತ್ತಲಿನವರ ಶ್ರಮ ದೊಡ್ಡದು. ಅದರಲ್ಲಿಯೂ ನನ್ನ ಕುಟುಂಬದವರ ಶ್ರಮ ದೊಡ್ಡದು. ನನ್ನ ಕುಟುಂಬದವರು ನನಗೆ ಬೆಂಬಲ ನೀಡಿದರು, ಮಾರ್ಗದರ್ಶನ ಮಾಡಿದರು. ಎಲ್ಲ ರೀತಿಯ ಋಣಾತ್ಮಕತೆಗಳಿಂದಲೂ ನನ್ನನ್ನು ಕಾಪಾಡಿದರು. ನನ್ನ ಪ್ರತಿದಿನದ ಶೂಟಿಂಗ್‌ನಲ್ಲೂ ನನ್ನ ತಾಯಿ ಜೊತೆಯಾಗಿರುತ್ತಿದ್ದರು, ಅಂತೆಯೇ ನನ್ನ ಸಹಾಯಕ ಶಂಕರ್ ಸಹ. ಶಂಕರ್ ನನ್ನ ಸಹಾಯಕನಾಗಿ ಕೆಲಸ ಆರಂಭಿಸಿ ಹತ್ತು ವರ್ಷಗಳಾಗಿವೆ ಎಂದು ತಮ್ಮ ಸಿನಿಮಾ ಪಯಣಕ್ಕೆ ಸಹಾಯ ಮಾಡಿದ ಬೆಂಬಲವಾಗಿ ನಿಂತವರಿಗೆ ಧನ್ಯವಾದಗಳನ್ನು ರಾಧಿಕಾ ಪಂಡಿತ್ ಐದು ವರ್ಷಗಳ ಹಿಂದೆ ಹೇಳಿದ್ದರು. ಇದನ್ನೂ ಓದಿ:ನಿರಾಸೆ ಮೂಡಿಸಿದ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ಫಸ್ಟ್ ಲುಕ್
ತಮ್ಮ ಐದು ವರ್ಷಗಳ ಹಿಂದಿನ ಪೋಸ್ಟ್‌ನಲ್ಲಿ ಇದು ಸಿನಿಮಾ ರಂಗದ ನಿವೃತ್ತಿ ಭಾಷಣವಲ್ಲ, ಪಿಕ್ಚರ್ ಇನ್ನೂ ಇದೆ ಎಂದಿದ್ದರು. ಆ ಮೂಲಕ ಇನ್ನಷ್ಟು ಸಿನಿಮಾಗಳಲ್ಲಿ ನಟಿಸುವುದಾಗಿ ಸೂಚನೆ ನೀಡಿದ್ದರು. ಆದರೆ ಆ ಬಳಿಕ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಲಿಲ್ಲ. 2019ರಲ್ಲಿ ರಿಲೀಸ್ ಆದ ‘ಆದಿಲಕ್ಷ್ಮಿ ಪುರಾಣ’ ರಾಧಿಕಾರ ಕೊನೆಯ ಸಿನಿಮಾ ಆಗಿದೆ. ಅದಾದ ಬಳಿಕ ಇನ್ಯಾವ ಸಿನಿಮಾದಲ್ಲಿಯೂ ರಾಧಿಕಾ ನಟಿಸಿಲ್ಲ.
ಕೆಲ ತಿಂಗಳುಗಳ ಹಿಂದೆ ರಾಧಿಕಾ ಪಂಡಿತ್ ಬಗ್ಗೆ ಹೊಸ ವಿಚಾರವೊಂದು ಸದ್ದು ಮಾಡಿತ್ತು. ನಟಿ ಹೊಸ ಬಗೆಯ ಕಥೆಗಳನ್ನ ಕೇಳುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಲು ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಲಾಗಿತ್ತು. ಪತಿ ಯಶ್, ಯಶಸ್ಸಿಗೆ ರಾಧಿಕಾ ಪಾತ್ರ ಕೂಡ ತುಂಬಾನೇ ಇದೆ. ಕೆಜಿಎಫ್ 2 (KGF2) ನಂತರ ಯಶ್ ಗ್ಲೋಬಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಅವರ ಮುಂದಿನ ಸಿನಿಮಾದಲ್ಲಿ ರಾಧಿಕಾ ಕೂಡ ಸಾಥ್ ನೀಡುತ್ತಾರೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
ಸ್ಯಾಂಡಲ್‌ವುಡ್ (Sandalwood) ನಟಿ ರಾಧಿಕಾ ಪಂಡಿತ್ (Radhika Pandit) ತಮ್ಮ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ರಾಧಿಕಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ನಟಿ ರಾಧಿಕಾ ಪಂಡಿತ್ (Radhika Pandit) ಅವರು ನಟನೆಗೆ (Acting) ಬ್ರೇಕ್ ಹಾಕಿ, ಮಕ್ಕಳ ಪಾಲನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಮದುವೆ, ಸಂಸಾರ, ಮಕ್ಕಳು ಎಂದು ತಮ್ಮ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ: ಲವ್ಲಿ ಸ್ಟಾರ್ ಪ್ರೇಮ್‌ಗೆ `ಟಗರು’ ನಟಿ ಮಾನ್ವಿತಾ ನಾಯಕಿ
ಇದೀಗ ತಮ್ಮ ಸಂಬಂಧಿಕರ ಮದುವೆಯಲ್ಲಿ (Relatives Wedding) ರಾಧಿಕಾ ಪಂಡಿತ್ ಮಿಂಚಿದ್ದಾರೆ. ತಮ್ಮ ಕುಟುಂಬದ (Family) ಜೊತೆಗೂಡಿ ಮದುವೆ ಸಂಭ್ರಮದಲ್ಲಿ ನಟಿ ಭಾಗಿಯಾಗಿದ್ದಾರೆ. ವಧು ಜೊತೆ ಮುದ್ದಾಗಿ ಪೋಸ್ ಕೊಟ್ಟಿರುವ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ಯಥರ್ವ್ ಮತ್ತು ಐರಾ ಜೊತೆ ಕೂಡ ಕ್ಯಾಮೆರಾ ಕಣ್ಣಿಗೆ ಕ್ಯೂಟ್ ಆಗಿ ಪೋಸ್ ನೀಡಿದ್ದಾರೆ. ಸದ್ಯ ಕೊಂಕಣಿ ಶೈಲಿಯ ಮದುವೆಯಲ್ಲಿ ಮಿಂಚಿದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಇನ್ನೂ `ಕೆಜಿಎಫ್ 2′ ಸಕ್ಸಸ್ ನಂತರ ಯಶ್ (Yash) ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ. ಅದಷ್ಟೇ ಅಲ್ಲ, ರಾಧಿಕಾ ಪಂಡಿತ್ ಅದ್ಯಾವಾಗ ಸಿನಿಮಾಗೆ ಕಮ್ ಬ್ಯಾಕ್ ಆಗುತ್ತಾರೆ ಅವರ ಮುಂದಿನ ಚಿತ್ರದ ಅಪ್‌ಡೇಟ್‌ಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ.
LIVE TV
[brid partner=56869869 player=32851 video=960834 autoplay=true]
ಸ್ಯಾಂಡಲ್ವುಡ್ನ (Sandalwood) ಸ್ಟಾರ್ ಜೋಡಿ ರಾಕಿಂಗ್ ಸ್ಟಾರ್ ಯಶ್- ರಾಧಿಕಾ ಪಂಡಿತ್ (Radhika Pandit) ಇದೀಗ ರಾಜಸ್ಥಾನದ ಜೈಪುರದಲ್ಲಿ ಪ್ರೇಮಿಗಳ ದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ವ್ಯಾಲೆಂಟೈನ್ ದಿನದ ಯಶ್ (Yash) ಜೊತೆಗಿನ ಸ್ಪೆಷಲ್ ಫೋಟೋವನ್ನ ರಾಧಿಕಾ ಪಂಡಿತ್ ಶೇರ್ ಮಾಡಿದ್ದಾರೆ.
ಚಂದನವನದ ಚೆಂದದ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಒಬ್ಬರು. ಇಬ್ಬರೂ ಪ್ರೀತಿಸಿ ಮದುವೆಯಾದವರು. ಈ ಕ್ಯೂಟ್ ಕಪಲ್ ಅನೇಕರಿಗೆ ಸ್ಪೂರ್ತಿ. ಈ ಸುಂದರ ಸ್ಟಾರ್ ಕಪಲ್ ಅಷ್ಟೇ ಸುಂದರವಾಗಿ ಪ್ರೇಮಿಗಳ ದಿನವನ್ನು ಸಂಭ್ರಮಿಸಿದ್ದಾರೆ. ಯಶ್ ಮತ್ತು ರಾಧಿಕಾ ಇಬ್ಬರೂ ಪ್ರೇಮಿಗಳ ದಿನಕ್ಕೆ ರಾಜಸ್ಥಾನಕ್ಕೆ ತೆರಳಿದ್ದಾರೆ. ಇಬ್ಬರು ಖಾಸಗಿ ಜೆಟ್‌ನಲ್ಲಿ ರಾಜಸ್ಥಾನಕ್ಕೆ ಹಾರಿದ್ದು, ಜೈಪುರದಲ್ಲಿ ವ್ಯಾಲೆಂಟೈನ್ ಡೇ (Valentines Day) ಆಚರಿಸಿದ್ದಾರೆ. ಪ್ರೇಮಿಗಳ ದಿನದ ಸೆಲೆಬ್ರೇಷನ್ (Celebration) ಫೋಟೋ ಕೂಡ ಸಖತ್ ವೈರಲ್ ಆಗುತ್ತಿದೆ.
ವಿಶೇಷ ದಿನವನ್ನು ರಾಜಸ್ಥಾನದಲ್ಲಿ ಕಳೆದ ಫೋಟೋವನ್ನು ರಾಧಿಕಾ ಪಂಡಿತ್ ಶೇರ್ ಮಾಡಿ ಪ್ರೇಮಿಗಳ ದಿನಾಚರಣೆಯ ಶುಭಾಶಯ ತಿಳಿಸಿದ್ದಾರೆ. ಪತಿ ಯಶ್ ಜೊತೆಗಿನ ರೊಮ್ಯಾಂಟಿಕ್ ಫೋಟೋ ಪೋಸ್ಟ್ ಮಾಡಿ, `ಪ್ರೀತಿಯು ದೊಡ್ಡ ಪ್ರತಿಧ್ವನಿಯನ್ನು ಹೊಂದಿದೆ. ಪ್ರೇಮಿಗಳ ದಿನದ ಶುಭಾಶಯಗಳು’ ಎಂದು ಹೇಳಿದ್ದಾರೆ. ಜೈಪುರದ ರಾಯಲ್ ಅರಮನೆಯಲ್ಲಿ ಈ ಜೋಡಿ ವ್ಯಾಲೆಂಟೈನ್ ಡೇಯನ್ನ ಆಚರಿಸಿದ್ದಾರೆ. ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಚಿತ್ರೋದ್ಯಮದ ಪ್ರಶಸ್ತಿಗೆ ಭಾಜನರಾದ ರಿಷಬ್ ಶೆಟ್ಟಿ
ಚಂದನವನದ ಸಿಂಡ್ರೆಲಾ ರಾಧಿಕಾ ಪಂಡಿತ್ ಮಿಸೆಸ್ ಯಶ್ ಆಗಿ ಸಂಸಾರಿಕ ಜೀವನವನ್ನು ಫುಲ್ ಖುಷಿಯಿಂದ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾಮಿಲಿ ಫೋಟೋ, ತಮ್ಮ ಮುದ್ದು ಮಕ್ಕಳ ವೀಡಿಯೋ ಹಾಕಿ ಅಭಿಮಾನಿಗಳಿಗೆ ಫ್ಯಾಮಿಲಿ ಅಪ್ಡೇಟ್ ಕೊಡುತ್ತಿದ್ದ ರಾಧಿಕಾ, ಇಂದು ತಮ್ಮ 14 ವರ್ಷದ ಹಳೆಯ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ರಾಧಿಕಾ ತಮ್ಮ ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್‍ನಲ್ಲಿ ವಿಶೇಷ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳಲ್ಲಿ ನೀವು ನೋಡುತ್ತಿರುವ ಈ ಇಬ್ಬರು 14 ವರ್ಷಗಳ ಹಿಂದೆ ಈ ಚಿತ್ರದ ಮೂಲಕ ತಮ್ಮ ಚಲನಚಿತ್ರ ಪ್ರಯಾಣವನ್ನು ಪ್ರಾರಂಭಿಸಿದರು. ವೈಯಕ್ತಿಕವಾಗಿ, ಈ ಚಿತ್ರ ನನಗೆ ತುಂಬಾ ನೀಡಿದೆ. ಫಿಲ್ಮ್‌ಫೇರ್ ಪ್ರಶಸ್ತಿ, ರಾಜ್ಯ ಪ್ರಶಸ್ತಿ ಮತ್ತು ಜೀವನ ಸಂಗಾತಿ ಎಲ್ಲವನ್ನು ನೀಡಿದೆ. ಇದಕ್ಕಿಂತ ಹೆಚ್ಚಿನದನ್ನು ಕೇಳಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ `ನೀಲಕಂಠ’ ನಟಿ ನಮಿತಾ ಫುಲ್ ಮಿಂಚಿಂಗ್
ಇ.ಕೆ ಸರ್, ಗಂಗಾಧರ್ ಸರ್, ಚಂದ್ರು ಸರ್, ಮನೋ ಸರ್ ಮತ್ತು ವಿಶೇಷವಾಗಿ ಶಶಾಂಕ್ ಸರ್ ನಮ್ಮ ಮೇಲೆ ನಂಬಿಕೆ ಇಟ್ಟು ಈ ಸುಂದರ ಚಿತ್ರವನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು. ‘ಮೊಗ್ಗಿನ ಮನಸು’ ಸದಾ ವಿಶೇಷವಾಗಿರುತ್ತದೆ ಎಂದು ಬರೆದು ಯಶ್ ಮತ್ತು ಅವರ ಹಳೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ರಾಧಿಕಾ ಶೇರ್ ಮಾಡಿರುವ ಫೋಟೋ ಅವರ ಮತ್ತು ಯಶ್ ಮೊದಲ ಸಿನಿಮಾ ‘ಮೊಗ್ಗಿನ ಮನಸು’ ದೃಶ್ಯದ್ದಾಗಿದೆ. ಈ ಸಿನಿಮಾ ಮೂಲಕ ಯಶ್ ಮತ್ತು ರಾಧಿಕಾ ಸಿನಿಮಾರಂಗಕ್ಕೆ ಕಾಲಿಟ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ. ಅಷ್ಟೇ ಅಲ್ಲದೇ ಇಬ್ಬರು ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳ ಪೋಷಕರಾಗಿದ್ದಾರೆ. ಇದನ್ನೂ ಓದಿ: ಇಬ್ಬರು ಉಕ್ರೇನ್ ಉನ್ನತ ಅಧಿಕಾರಿಗಳನ್ನ ಅಮಾನತು ಮಾಡಿದ ಝೆಲೆನ್ಸ್ಕಿ
ಈ ಸಿನಿಮಾ ಮೂಲಕ ಬಂದ ರಾಧಿಕಾ ಸಿನಿ ಜರ್ನಿ ಯಶಸ್ಸು ಕಂಡಿದ್ದು, ಯಶ್ ಸಹ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಇಬ್ಬರ ಜೋಡಿ ಚಂದನವನದಲ್ಲಿ ಸೂಪರ್ ಮತ್ತು ಪವರ್ ಫುಲ್ ಜೋಡಿಯಾಗಿದೆ.
Live Tv
[brid partner=56869869 player=32851 video=960834 autoplay=true]
ಕನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ ಸದ್ದಿಲ್ಲದೇ ತಮ್ಮ ‘ಲವ್ 360’ ಹೊಸ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಕ್ಯೂಟ್ ಆಗಿರೋ ಲವ್ ಸ್ಟೋರಿಯನ್ನು ಸಿನಿಮಾವಾಗಿಸಿರುವ ಅವರು ಈ ಸಿನಿಮಾದಲ್ಲೂ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ. ಸಿನಿಮಾದ ನಾಯಕ ತನ್ನ ಹುಡುಗಿಗಾಗಿ 360 ಡಿಗ್ರಿ ಯೋಚಿಸುವಂತಹ ಕಥಾ ಹಂದರವನ್ನು ಈ ಚಿತ್ರ ಹೊಂದಿದ್ದು, ಇಬ್ಬರು ಹೊಸ ಕಲಾವಿದರು ಈ ಸಿನಿಮಾದ ಮೂಲಕ ಚಿತ್ರೋದ್ಯಮಕ್ಕೆ ಪರಿಚಯವಾಗುತ್ತಿದ್ದಾರೆ. ಇದನ್ನೂ ಓದಿ : ನಾಗಿಣಿ 2 ಧಾರಾವಾಹಿಗೆ ಬಂದ ತಿಥಿ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ
ಶಶಾಂಕ್ ಅಂದಾಕ್ಷಣ ಥಟ್ಟನೆ ನೆನಪಾಗುವ ಚಿತ್ರ ಮೊಗ್ಗಿನ ಮನಸು. ಬಾಕ್ಸ್ ಆಫೀಸಿನಲ್ಲಿ ಭಾರೀ ಸದ್ದು ಮಾಡಿದ ಚಿತ್ರವಿದು. ಶತದಿನೋತ್ಸವ ಕಂಡ ಎವರ್ ಗ್ರೀನ್ ಸಿನಿಮಾ. ಅನೇಕ ಕಲಾವಿದರ ವೃತ್ತಿ ಬದುಕಿಗೆ ಬಹುದೊಡ್ಡ ತಿರುವು ನೀಡಿದ ಹೆಗ್ಗಳಿಕೆ ಈ ಚಿತ್ರದ್ದು. ಈ “ಮೊಗ್ಗಿನ ಮನಸು” ಚಿತ್ರಕ್ಕೂ ಶಶಾಂಕ್ ಅವರು ಈಗ ನಿರ್ದೇಶನ ಮಾಡಿರುವ “ಲವ್ 360” ಚಿತ್ರಕ್ಕೂ ಸಂಬಂಧವಿದೆ. ಇದನ್ನೂ ಓದಿ : ಪುನೀತ್ ಅವರ ದ್ವಿತ್ವ ಸಿನಿಮಾದ ಮೇಲೆ ಹಲವರ ಕಣ್ಣು
ಯಶ್-ರಾಧಿಕಾಗೆ ಬ್ರೇಕ್ ನೀಡಿದ್ದ ಶಶಾಂಕ್
ಮೊಗ್ಗಿನ ಮನಸು ಸಿನಿಮಾದ ಮೂಲಕ ಯಶ್ ಮತ್ತು ರಾಧಿಕಾ ಪಂಡಿತ್ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಿದವರು ಶಶಾಂಕ್. ಈ ಸಿನಿಮಾದಿಂದಾಗಿ ಈ ಇಬ್ಬರೂ ಕಲಾವಿದರು ಸಿನಿಮಾ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿದರು. ಶಶಾಂಕ್ ಅವರ ಮೊದಲ ಸಿನಿಮಾ ಸಿಕ್ಸರ್ ಕೂಡ ಪ್ರಜ್ವಲ್ ದೇವರಾಜ್ ಬಹುದೊಡ್ಡ ಬ್ರೇಕ್ ನೀಡಿತ್ತು. ತಮ್ಮ ಮೊದಲೆರಡು ಚಿತ್ರಗಳಲ್ಲಿ ಹೊಸ ಹೊಸ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸಿರುವ ಶಶಾಂಕ್, ಲವ್ 360 ಚಿತ್ರದಲ್ಲೂ ಹೊಸ ನಾಯಕ ನಾಯಕಿಯರನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಹರ್ಷ ಸಾವಿಗೆ ಸ್ಯಾಂಡಲ್ ವುಡ್, ಬಾಲಿವುಡ್ ಕಲಾವಿದರ ಆಕ್ರೋಶ
ಈ ಸಿನಿಮಾದ ಮೂಲಕ ಪ್ರವೀಣ್ ಎಂಬ ಹೊಸ ಕಲಾವಿದ ಸ್ಯಾಂಡಲ್ ವುಡ್ ಗೆ ಪರಿಚಯ ಆಗುತ್ತಿದ್ದಾರೆ. ವೈದ್ಯಕೀಯ ಪದವಿ ಮುಗಿಸಿರುವ ಪ್ರವೀಣ್ ಗೆ ಲವ್ 360 ಚೊಚ್ಚಲು ಸಿನಿಮಾ. ಅಲ್ಲದೇ, ನಾಯಕಿಯಾಗಿ ರಚನಾ ಇಂದರ್ ಅವರಿಗೆ ಇದು ಹೊಸ ಸಿನಿಮಾ. ಹಾಗಾಗಿ ಮೊಗ್ಗಿನ ಮನಸು ಸಿನಿಮಾದಷ್ಟೇ ಈ ಚಿತ್ರ ಕೂಡ ಫ್ರೆಶ್ ಆಗಿ ಇರಲಿದೆಯಂತೆ. ಇದನ್ನೂ ಓದಿ : ಸ್ಮಾರಕವಾಗಲಿದೆ ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ಮನೆ
ಮೊಗ್ಗಿನ ಮನಸು ಚಿತ್ರೀಕರಣದ ನೆನಪು
ಸಿನಿಮಾದ ಕಥೆ ನಡೆಯುವುದು ಗೋಕರ್ಣದಲ್ಲಿ. ಹಾಗಾಗಿ ಆ ಭಾಗದಲ್ಲೇ ಅತೀ ಹೆಚ್ಚು ದೃಶ್ಯಗಳನ್ನು ಸೆರೆ ಹಿಡಿದಿದ್ದಾರಂತೆ ಶಶಾಂಕ್. ಮಂಗಳೂರು, ಕಾಸರಗೋಡು, ಬೆಂಗಳೂರು ಸೇರಿದಂತೆ ಹಲವು ಕಡೆ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ಮೊಗ್ಗಿನ ಮನಸು ಸಿನಿಮಾದ ಶೂಟಿಂಗ್ ಕೂಡ ಇದೇ ಭಾಗದಲ್ಲೇ ನಡೆದಿರುವುದು ವಿಶೇಷ. “ಲವ್ 360 ಸಿನಿಮಾದ ಶೂಟಿಂಗ್ ಗಾಗಿ ಕರಾವಳಿಯ ಅನೇಕ ಭಾಗಗಳನ್ನು ಸುತ್ತಾಡಿದೆ.
ದಶಕದ ಹಿಂದೆ ಈ ಜಾಗಗಳಲ್ಲೇ ನಾನು ಮೊಗ್ಗಿನ ಮನಸು ಚಿತ್ರೀಕರಣ ಮಾಡಿದ್ದೆ. ಹಲವು ನೆನಪುಗಳು ಮತ್ತೆ ಮರುಕಳಿಸಿದೆವು. ಹೊಸ ಸಿನಿಮಾ ಕ್ಯೂಟ್ ಲವ್ ಸ್ಟೋರಿಯನ್ನು ಒಳಗೊಂಡಿದೆ. ಹಾಗಾಗಿ ಕರಾವಳಿಯ ಪ್ರದೇಶವೇ ಶೂಟಿಂಗ್ ಗೆ ಬೇಕಾಗಿತ್ತು” ಎನ್ನುತ್ತಾರೆ ಶಶಾಂಕ್.
ಪ್ರತಿ ದಿನ ಬೆಳಗ್ಗೆ ಬಿಗ್‍ಬಾಸ್ ಮನೆಯಲ್ಲಿ ಚಲನ ಚಿತ್ರ ಗೀತೆಯನ್ನು ಪ್ಲೇ ಮಾಡುವ ಮೂಲಕ ಸದಸ್ಯರನ್ನು ಎಚ್ಚರಿಸಲಾಗುತ್ತದೆ. ಆದರೆ ಬಿಗ್‍ಬಾಸ್ ಸೀಸನ್ 8ರಲ್ಲಿ ಇದೇ ಮೊದಲ ಬಾರಿಗೆ ಶುಭಾ ಪೂಂಜಾ ನಟನೆಯ ಹಾಡನ್ನು ವೇಕಪ್ ಸಾಂಗ್ ಆಗಿ ಹಾಕಲಾಗಿದೆ. ಈ ಕುರಿತಾಗಿ ಶುಭಾಗೆ ಸಖತ್ ಖುಷಿಯಾಗಿದೆ. ಶುಭಾಗೆ ಈ ಕ್ಷಣ ಸಂತೋಷ ಕೊಟ್ಟು ಬಿಗ್ ಬಾಸ್ ಶಾಕ್ ಕೋಡುತ್ತಾರ ಎಂದು ಚರ್ಚೆ ಈಗ ಶುರುವಾಗಿದೆ.
ಗ್ರ್ಯಾಂಡ್ ಫಿನಾಲೆಗೆ ಇನ್ನೇನು ಕೆಲವು ದಿನಗಳು ಬಾಕಿ ಇದೆ. 36ನೇ ದಿನದಂದು ಬಿಗ್‍ಬಾಸ್ ಶುಭಾ ಅವರ ನಟನೆಯ ‘ಮೊಗ್ಗಿನ ಮನಸ್ಸು’ ಸಿನಿಮಾದ ‘ಯಾಕಿಂಗ್ ಆಡ್ತಾರೋ ಈ ಹುಡುಗರು’ ಸಾಂಗ್ ಹಾಕಿದ್ದಾರೆ. ಆಗ ಶುಭಾ ನನ್ನ ಸಾಂಗ್ ಎಂದು ಸಂತೋಷದಿಂದ ಓಡಿ ಬಂದು ಡಾನ್ಸ್ ಮಾಡಿದ್ದಾರೆ. ಥ್ಯಾಕ್ಸ್ ಬಿಗ್‍ಬಾಸ್ ನನ್ನ ಸಾಂಗ್ ಹಾಕಿದ್ದಕ್ಕೆ ಎಂದು ಹೇಳಿ ಹಾಗಂತ ನನ್ನ ಕ್ರೇನ್ ಅಲ್ಲಿ ಮನೆಯಿಂದ ಆಚೆ ಎತ್ತಿಕೊಂಡು ಹೋಗಬೇಡಿ ಎಂದು ಹೇಳಿದ್ದಾರೆ.
ಬಿಗ್‍ಬಾಸ್ ಮನೆಯ ಸ್ಪರ್ಧಿಗಳು ವಾರಂತ್ಯದಲ್ಲಿ ಬರುವ ಸೂಪರ್ ಸಂಡೇ ವಿತ್ ಸುದೀಪಾದಲ್ಲಿ ಎಲಿಮಿನೇಟ್ ಆಗಿ ಒಬ್ಬ ಸದಸ್ಯ ಮನೆಯಿಂದ ಆಚೆ ಬರಬೇಕಿತ್ತು. ಆದರೆ ಈ ವಾರ ಒಂದು ಟ್ವಿಸ್ಟ್ ಇರಲಿದೆ. ನಿಮ್ಮಲ್ಲಿಯೇ ಒಬ್ಬರು ಇದ್ದಕ್ಕಿದ್ದಂತೆ ಆಚೆ ಹೋಗಲಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಶುಭಾ ಸಾಂಗ್ ಪ್ಲೇ ಆಗುತ್ತಿದ್ದಂತೆ ನನ್ನು ಕರೆದುಕೊಂಡು ಹೋಗಬೇಡಿ ಎಂದು ಶುಭಾ ಹೇಳಿದ್ದಾರೆ.
ಈ ಹಿಂದೆ ಬಿಗ್‍ಬಾಸ್‍ಗೆ ಶಮಂತ್ ಗೌಡ ಅವರ ರಚನೆಯ ‘ಬಾ ಗುರು ಸಾಂಗ್’ ಹಾಕಿ ಎಂದು ಮನವಿ ಮಾಡಿದ್ದರು. ಆದರೆ ಬಿಗ್‍ಬಾಸ್ ಶಮಂತ್ ಅವರ ಕೋರಿಕೆಯನ್ನು ಈಡೇರಿಸಿ ಅಂದೇ ಕೊರೊನಾ ಎಂದು ಸ್ಪರ್ಧಿಗಳನ್ನು ಹೊರಗೆ ಕರೆದಿದ್ದರು. ಈಗ ಶುಭಾ ಅವರ ಸಿನಿಮಾದ ಸಾಂಗ್ ಹಾಕಿದ್ದಾರೆ. ಈ ಕಾರಣಕ್ಕೆ ಶುಭಾ ಅವರು ಆಚೆ ಬರುತ್ತಾರೆ ಎನ್ನುವ ಅನುಮಾನ ಶುರುವಾಗಿದೆ.
ಬೆಂಗಳೂರು: ಸ್ಯಾಂಡಲ್‍ವುಡ್‍ನ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರಿಗೂ ಜುಲೈ 18 ವಿಶೇಷ ದಿನವಾಗಿದೆ. ಯಾಕೆಂದರೆ ಈ ಜೋಡಿ ಚಂದನವನಕ್ಕೆ ಕಾಲಿಟ್ಟು ಬರೋಬ್ಬರಿ 12 ವರ್ಷಗಳು ಕಳೆದಿವೆ. ಈ ಹಿನ್ನೆಲೆಯಲ್ಲಿ ಯಶ್ ಕೂಡ ಈ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯಶ್ ಮತ್ತು ರಾಧಿಕಾ ಪಂಡಿತ್ ಇಬ್ಬರು ಒಟ್ಟಿಗೆ ಅಭಿನಯಿಸಿದ ಸಿನಿಮಾ ‘ಮೊಗ್ಗಿನ ಮನಸ್ಸು’. ಈ ಸಿನಿಮಾ 2008 ಜುಲೈ 18 ರಂದು ತೆರೆಕಂಡಿತ್ತು. ಈ ಸಿನಿಮಾದಲ್ಲಿ ಇಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲದೇ ಸಿನಿಮಾ ಯಶಸ್ಸು ಕೂಡ ಕಂಡಿತ್ತು. ಹೀಗಾಗಿ ಈ ಸಿನಿಮಾ ರಿಲೀಸ್ ಆಗಿ 12 ವರ್ಷಗಳು ಕಳೆದಿದೆ. ಈ ಮೂಲಕ ರಾಕಿಂಗ್ ಜೋಡಿ ಚಿತ್ರರಂಗಕ್ಕೆ ಕಾಲಿಟ್ಟು 12 ವರ್ಷಗಳಾಗಿವೆ.
ನಟ ಯಶ್ ಕೂಡ ಈ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ‘ಮೊಗ್ಗಿನ ಮನಸ್ಸು’ ಸಿನಿಮಾ ಬಿಡುಗಡೆಯಾಗಿ 12 ವರ್ಷಗಳು ಕಳೆದಿವೆ. ರಾಧಿಕಾ ಮತ್ತು ನನ್ನನ್ನು ಒಟ್ಟಿಗೆ ಪರಿಚಯಿಸಿದ ಸಿನಿಮಾ ಇದು. ಅಲ್ಲದೇ ಈ ಚಿತ್ರ ನಮ್ಮ ಸಿನಿಮಾ ವೃತ್ತಿಜೀವನವನ್ನು ಮಾತ್ರ ಪ್ರಾರಂಭಿಸುತ್ತಿಲ್ಲ ಎಂದು ನನಗೆ ತಿಳಿದಿರಲಿಲ್ಲ” ಎಂದು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
“ಇಂತಹ ವಿಶೇಷ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಸರ್ ಮತ್ತು ಗಂಗಾಧರ್ ಅವರಿಗೆ ಧನ್ಯವಾದಗಳು. ಚಂದ್ರು ಸರ್, ನನ್ನನ್ನು ನಂಬಿ ಸಿನಿಮಾ ಮಾಡಿದ್ದಕ್ಕಾಗಿ ನಮ್ಮ ನಿರ್ದೇಶಕರಾದ ಶಶಾಂಕ್ ಸರ್ ಅವರಿಗೆ ವಿಶೇಷ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ರಾಕಿಂಗ್ ಜೋಡಿ ‘ಮೊಗ್ಗಿನ ಮನಸ್ಸು’ ಸಿನಿಮಾದ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಅದರಂತಯೇ ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದರು. ಮತ್ತೆ ಈ ರಾಕಿಂಗ್ ಜೋಡಿ ಎರಡ್ಮೂರು ಸಿನಿಮಾದಲ್ಲಿ ಒಟ್ಟಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ನಂತರ ಯಶ್ ಮತ್ತು ರಾಧಿಕಾ ಪಂಡಿತ್ 2016ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅವರನ್ನು ಮದುವೆಯಾದ ಬಳಿಕ ಮರೆಯಾದಂತಿದ್ದ ಮೊಗ್ಗಿನ ಮನಸಿನ ಹುಡುಗಿ ಮತ್ತೆ ಬಂದಿದ್ದಾರೆ. ಮದುವೆಯ ಬಳಿಕ ಚಿತ್ರ ರಂಗದಿಂದ ಸಂಪೂರ್ಣವಾಗಿ ದೂರವಾದಂತಿದ್ದ ರಾಧಿಕಾ ಪಂಡಿತ್ ಮತ್ತೆ ನಾಯಕಿಯಾಗಿ ಮರಳಿದ್ದಾರೆ. ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ರಾಧಿಕಾ ನಾಯಕಿಯಾಗಲಿದ್ದಾರೆಂಬುದು ಲೇಟೆಸ್ಟ್ ಸುದ್ದಿ!
ರಾಧಿಕಾ ಪಂಡಿತ್ ಮತ್ತು ನಿರೂಪ್ ಭಂಡಾರಿ ಒಟ್ಟಾಗಿ ನಟಿಸಲಿರುವ ಈ ಚಿತ್ರಕ್ಕೆ ಇನ್ನೂ ಹೆಸರು ಫಿಕ್ಸಾಗಿಲ್ಲ. ಆದರೆ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶನ ಮಾಡಲಿದ್ದಾರೆಂಬ ವಿಚಾರ ಮಾತ್ರ ಜಾಹೀರಾಗಿದೆ. ಇದೀಗ ಈ ಚಿತ್ರಕ್ಕೆ ಸಕಲ ತಯಾರಿಗಳೂ ಭರದಿಂದ ಸಾಗುತ್ತಿವೆ. ಇನ್ನೇನು ತಿಂಗಳ ಅಂತರದಲ್ಲಿಯೇ ಚಿತ್ರೀಕರಣ ಶುರು ಮಾಡಲಿರೋ ಈ ಚಿತ್ರವನ್ನು ಈ ವರ್ಷದ ಕಡೆಯ ಹೊತ್ತಿಗೆ ತೆರೆ ಕಾಣಿಸುವ ಗುರಿಯೂ ಚಿತ್ರ ತಂಡಕ್ಕಿದೆ.
ಅಲ್ಲಿಗೆ ತಮ್ಮಿಷ್ಟದ ತಾರೆ ಮದುವೆಯಾದ ನಂತರ ಚಿತ್ರ ರಂಗದಿಂದ ದೂರಾಗುತ್ತಾರೆಂಬ ಕಸಿವಿಸಿಯಿಂದಿದ್ದ ರಾಧಿಕಾ ಪಂಡಿತ್ ಅಭಿಮಾನಿಗಳು ಈ ಸುದ್ದಿಯಿಂದ ಖುಷಿಗೊಂಡಿದ್ದಾರೆ. ರಾಧಿಕಾ ನಟಿಸುತ್ತಿರೋ ಈ ಚಿತ್ರದ ಕಥೆಯೇನೆಂಬುದರಿಂದ ಹಿಡಿದು ಎಲ್ಲ ವಿಚಾರಗಳನ್ನೂ ಚಿತ್ರ ತಂಡ ಗೌಪ್ಯವಾಗಿಟ್ಟಿದೆ. ಆದರೆ ರಾಧಿಕಾ ಅಳೆದೂ ತೂಗಿ ಈ ಕಥೆಯ ಕಸುವು ನೋಡಿಯೇ ಒಪ್ಪಿಕೊಂಡಿದ್ದಾರೆಂಬುದು ಮಾತ್ರ ಸತ್ಯ. ಯಾಕೆಂದರೆ ಮದುವೆ ಗೌಜಿನ ನಂತರದಲ್ಲಿ ರಾಧಿಕಾ ಮುಂದೆ ಸಾಕಷ್ಟು ಕಥೆಗಳು ಬಂದಿದ್ದವಂತೆ. ಆದರೆ ಅದ್ಯಾವುದನ್ನೂ ಒಪ್ಪಿಕೊಳ್ಳದ ರಾಧಿಕಾ ಈ ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆಂದರೆ ಕಥೆ ಚೆನ್ನಾಗಿದೆ ಅಂತಲೇ ಅರ್ಥ.
ಮೊಗ್ಗಿನ ಮನಸು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಾಧಿಕಾ ಆ ನಂತರದಲ್ಲಿ ನಂಬರ್ ಒನ್ ನಟಿಯಾಗಿ ಹೊರ ಹೊಮ್ಮಿದ್ದು ತನ್ನ ನಟನೆಯ ಕಾರಣದಿಂದಲೇ. ವಿವಾದ ತಗಾದೆಗಳಿಂದ ಸದಾ ದೂರವಿರುವ ರಾಧಿಕಾ ಅನೂಪ್ ಭಂಡಾರಿಗೆ ಜೊತೆಯಾಗಿ ರೀ ಎಂಟ್ರಿ ಕೊಟ್ಟಿರೋದು ಸಹಜವಾಗಿಯೇ ಚಿತ್ರ ರಂಗದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.