Tag: Moeen Ali

  • ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿಲ್‌ ಅಲಿ ಗುಡ್‌ಬೈ

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮೊಯಿಲ್‌ ಅಲಿ ಗುಡ್‌ಬೈ

    ನವದೆಹಲಿ: ಇಂಗ್ಲೆಂಡ್ (England) ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ನಡುವೆ ಆಲ್‌ರೌಂಡರ್ ಮೊಯಿನ್ ಅಲಿ (Moeen Ali) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

    ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸ್ವದೇಶಿ ಸರಣಿಯಲ್ಲಿ ಇಂಗ್ಲೆಂಡ್‌ನ ವೈಟ್-ಬಾಲ್ ತಂಡಗಳಿಗೆ ಆಯ್ಕೆದಾರರು ಮೊಯಿನ್ ಅವರನ್ನು ಕಡೆಗಣಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಿಂದ ಹಿಂದಿನ ನಿವೃತ್ತಿಯ ಹೊರತಾಗಿಯೂ, ಮೊಯಿನ್ ODI ಮತ್ತು T20 ಕ್ರಿಕೆಟ್‌ ಮಾದರಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಇದನ್ನೂ ಓದಿ: U-20 World Wrestling Championships – ಭಾರತಕ್ಕೆ 2 ಪದಕ; ನಿಕಿತಾಗೆ ಬೆಳ್ಳಿ, ನೇಹಾಗೆ ಕಂಚು!

    ಆಸ್ಟ್ರೇಲಿಯ ಸರಣಿಗೆ ತಂಡದಲ್ಲಿ ಸೇರಿಸಿಕೊಳ್ಳದಿರುವುದು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಸಂಪೂರ್ಣವಾಗಿ ಹೊರಗುಳಿಯುವ ಅವರ ನಿರ್ಧಾರಕ್ಕೆ ಕಾರಣವಾಗಿದೆ. ಎಲ್ಲಾ ಸ್ವರೂಪಗಳಲ್ಲೂ ಮೊಯಿನ್ ಅಲಿ ಇಂಗ್ಲೆಂಡ್‌ಗಾಗಿ ಗಮನಾರ್ಹವಾದ ಕೊಡುಗೆ ನೀಡಿದ್ದರು. ತಮ್ಮ ಆಲ್‌ರೌಂಡರ್ ಕೌಶಲ್ಯಗಳೊಂದಿಗೆ ತಂಡಕ್ಕೆ ಪ್ರಮುಖ ಆಸ್ತಿಯಾಗಿದ್ದರು.

    ಸಂದರ್ಶನವೊಂದರಲ್ಲಿ ನಿವೃತ್ತಿ ಬಗ್ಗೆ ಮೊಯಿನ್‌ ಅಲಿ ಪ್ರಸ್ತಾಪಿಸಿ, ಇಂಗ್ಲೆಂಡ್‌ಗಾಗಿ ಆಡಿರುವುದು ನನ್ನ ಜೀವನದ ಅತ್ಯುತ್ತಮ ದಿನಗಳು. ಕಿರಿಯ ಆಟಗಾರರೊಂದಿಗೆ ತಂಡ ಪ್ರಗತಿ ಕಾಣಲೆಂದು ಬಯಸುತ್ತೇನೆ. ಅವರಿಲ್ಲದೆ ಇಂಗ್ಲೆಂಡ್ ಮುನ್ನಡೆಯುವ ಸಮಯ ಬಂದಿದೆ ಎಂದಿದ್ದರು. ಇದನ್ನೂ ಓದಿ: ರಾಜಸ್ಥಾನದಲ್ಲಿ ಎರಡನೇ ಇನ್ನಿಂಗ್ಸ್‌ – ರಾಯಲ್ಸ್‌ ಕೋಚ್‌ ಆಗಿ ದ್ರಾವಿಡ್‌ ನೇಮಕ

    ಮೊಯಿನ್ ಅಲಿ ಇಂಗ್ಲೆಂಡ್ ಪರ 68 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 204 ವಿಕೆಟ್‌ಗಳನ್ನು ಪಡೆದಿದ್ದಾರೆ. 3,094 ರನ್‌ಗಳನ್ನು ಗಳಿಸಿದ್ದಾರೆ. ಆಲ್‌ರೌಂಡರ್ ಆಗಿ ಉತ್ತಮ ಕೊಡುಗೆ ನೀಡಿದ್ದಾರೆ. 138 ODI ಗಳಲ್ಲಿ 2,355 ರನ್ ಕಲೆಹಾಕಿದ್ದು, 111 ವಿಕೆಟ್‌ಗಳನ್ನು ಕಿತ್ತಿದ್ದಾರೆ. 92 T20 ಪಂದ್ಯಗಳಲ್ಲಿ, ಮೊಯಿನ್ 1,229 ರನ್ ಗಳಿಸಿದ್ದಾರೆ. 51 ವಿಕೆಟ್‌ಗಳನ್ನು ಕಿತ್ತಿದ್ದಾರೆ.

  • ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಅಲಿ, ರಶೀದ್ ಸಂಭ್ರಮಾಚರಣೆಯಿಂದ ಹೊರ ಹೋಗಿ ಎಂದ ಬಟ್ಲರ್ – ಆದ್ರು ಹೃದಯ ಗೆದ್ದ ಕ್ಯಾಪ್ಟನ್

    ಮೆಲ್ಬರ್ನ್‌: ಪಾಕಿಸ್ತಾನವನ್ನು (Pakistan) ಬಗ್ಗುಬಡಿದು 2022ರ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿರುವ ಇಂಗ್ಲೆಂಡ್ (England) ತಂಡ ಸಂಭ್ರಮಾಚರಣೆ ವೇಳೆ ಆಲ್‍ರೌಂಡರ್‌ಗಳಾದ ಮೊಯಿನ್ ಅಲಿ (Moeen Ali) ಮತ್ತು ಆದಿಲ್‌ ರಶೀದ್ (Adil Rashid) ಅವರನ್ನು ನಾಯಕ ಜೋಸ್ ಬಟ್ಲರ್ (Jos Buttler) ಹೊರ ಹೋಗುವಂತೆ ಹೇಳಿದ ಪ್ರಸಂಗವೊಂದು ನಡೆದಿದೆ.

    ಪಾಕ್ ವಿರುದ್ಧ ಫೈನಲ್ ಪಂದ್ಯದಲ್ಲಿ 5 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಇಂಗ್ಲೆಂಡ್ 2ನೇ ಬಾರಿ ಟಿ20 ವಿಶ್ವಕಪ್‍ಗೆ ಮುತ್ತಿಕ್ಕಿತು. ಅಲ್ಲದೇ 12 ವರ್ಷಗಳ ಬಳಿಕ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಈ ಗೆಲುವಿಗಾಗಿ ಇಂಗ್ಲೆಂಡ್ ತಂಡ ಬಹಳಷ್ಟು ಶ್ರಮಪಟ್ಟಿದೆ. ಆ ಶ್ರಮದ ಫಲವಾಗಿ ಗೆಲುವು ಇಂಗ್ಲೆಂಡ್ ತಂಡದ ಪಾಲಾಗಿದೆ. ಪ್ರತಿಯೊಬ್ಬ ಆಟಗಾರರು ಕೂಡ ಇಂಗ್ಲೆಂಡ್ ಗೆಲುವಿಗಾಗಿ ಪೂರ್ಣ ಪ್ರಮಾಣದಲ್ಲಿ ಶ್ರಮಿಸಿದ್ದರು. ಇದು ಅವರ ಸಂಭ್ರಮಾಚರಣೆ ವೇಳೆ ಕಾಣಸಿಕ್ಕಿತು. ಇದನ್ನೂ ಓದಿ: Sorry Brother ಇದೇ ಕರ್ಮ – ಅಖ್ತರ್‌ಗೆ ಡೆಡ್ಲಿ ಯಾರ್ಕರ್ ಎಸೆದ ಶಮಿ

    ಸೀಮಿತ ಓವರ್‌ಗಳ ನಾಯಕನಾಗಿದ್ದ ಇಯಾನ್ ಮಾರ್ಗನ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಬಳಿಕ ಇಂಗ್ಲೆಂಡ್ ಬಟ್ಲರ್‌ಗೆ ನಾಯಕತ್ವದ ಪಟ್ಟ ಕಟ್ಟಿತು. ನೂತನ ನಾಯಕನೊಂದಿಗೆ ಇಂಗ್ಲೆಂಡ್ ಟಿ20 ವಿಶ್ವಕಪ್‍ಗೆ ಆಗಮಿಸಿತ್ತು. ಬಳಿಕ ಅದ್ಭುತವಾಗಿ ಆಡಿ ವಿಶ್ವಕಪ್‍ನೊಂದಿಗೆ ತೆರಳುವಂತಾಯಿತು. ಪಾಕ್ ವಿರುದ್ಧ ಗೆದ್ದ ಬಳಿಕ ಪ್ರಶಸ್ತಿ ಹಿಡಿದು ಸಂಭ್ರಮಿಸುತ್ತಿದ್ದ ವೇಳೆ ಅಲಿ ಮತ್ತು ರಶೀದ್‍ರನ್ನು ಬಟ್ಲರ್ ಹೊರ ಹೋಗುವಂತೆ ಕಳುಹಿಸಿ ಸಂಭ್ರಮಿಸಿದರು.

    ಅವರಿಬ್ಬರು ಹೊರ ಹೋಗುತ್ತಾರೆ. ಬಳಿಕ ಇಂಗ್ಲೆಂಡ್ ತಂಡ ಶಾಂಪೇನ್ ಸಂಭ್ರಮಾಚರಣೆ ಮಾಡಿತು. ಇದನ್ನು ಕಂಡ ಅಭಿಮಾನಿಗಳು ಬಟ್ಲರ್ ನಡೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಇದನ್ನೂ ಓದಿ: 2019 ಏಕದಿನ ವಿಶ್ವಕಪ್ ನೆನೆಪಿಸಿದ ಬೆನ್‍ಸ್ಟೋಕ್ಸ್ – ನಿಜವಾದ ಮ್ಯಾಚ್ ವಿನ್ನರ್ ಎಂದ ಫ್ಯಾನ್ಸ್

    ಹೊರ ಹೋದ ಕಾರಣ:
    ಅಲಿ ಮತ್ತು ರಶೀದ್ ತಮ್ಮ ಧರ್ಮದ ಪ್ರಕಾರ ಶಾಂಪೇನ್ ಸಹಿತ ಇತರ ಮದ್ಯಗಳನ್ನು ಮುಟ್ಟುವುದಿಲ್ಲ. ಸಂಭ್ರಮಾಚರಣೆ ವೇಳೆ ಶಾಂಪೇನ್ ಚೆಲ್ಲುವ ಕಾರಣ ಬಟ್ಲರ್ ಅವರಿಬ್ಬರೊಂದಿಗೆ ಹೊರ ಹೋಗುವಂತೆ ಮನವಿಮಾಡಿಕೊಂಡಿದ್ದರು. ಬಳಿಕ ಅವರು ತಂಡದೊಂದಿಗೆ ಸೇರಿಕೊಂಡರು.

    2019ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗ ಇಂಗ್ಲೆಂಡ್ ನಾಯಕರಾಗಿದ್ದ ಇಯಾನ್ ಮಾರ್ಗನ್ ಕೂಡ ಇದೇ ರೀತಿ ನಡೆದುಕೊಂಡಿದ್ದರು. ಇದೀಗ ಬಟ್ಲರ್ ಕೂಡ ಅದೇ ಹಾದಿಯಲ್ಲಿ ಸಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೋಯಿನ್ ಅಲಿಯಿಂದ ಯಾವುದೇ ವಿಶೇಷ ಮನವಿ ಬಂದಿಲ್ಲ – ಸಿಎಸ್‍ಕೆ ಸ್ಪಷ್ಟನೆ

    ಮೋಯಿನ್ ಅಲಿಯಿಂದ ಯಾವುದೇ ವಿಶೇಷ ಮನವಿ ಬಂದಿಲ್ಲ – ಸಿಎಸ್‍ಕೆ ಸ್ಪಷ್ಟನೆ

    ಚೆನ್ನೈ: ಇಂಗ್ಲೆಂಡ್ ಆಟಗಾರ ಮೋಯಿನ್ ಅಲಿ ಅವರಿಂದ ಜೆರ್ಸಿಗೆ ಸಂಬಂಧಿಸಿದಂತೆ ಯಾವುದೇ ವಿಶೇಷ ಮನವಿ ಬಂದಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೇಳಿದೆ.

    ಈ ಬಾರಿಯ ಸಿಎಸ್‍ಕೆ ತಂಡದ ಜೆರ್ಸಿಯಲ್ಲಿ ಬೀರ್ ಬ್ರ್ಯಾಂಡ್ ಎಸ್‍ಎನ್‍ಜೆ 10000ದ ಲೋಗೋ ಇರಲಿದೆ. ಧರ್ಮದ ಕಾರಣ ನೀಡಿ ಎಸ್‍ಎನ್‍ಜೆ ಡಿಸ್ಟಿಲರೀಸ್ ಕಂಪನಿಯ ಬೀರ್ ಬ್ರ್ಯಾಂಡ್ ಜೆರ್ಸಿಯನ್ನು ಧರಿಸುವುದಕ್ಕೆ ಮೋಯಿನ್ ಅಲಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿತ್ತು.

    ಅಷ್ಟೇ ಅಲ್ಲದೇ ಅಲಿ ಅವರ ಈ ವಿಶೇಷ ಮನವಿಯನ್ನು ಸಿಎಸ್‍ಕೆ ತಂಡ ಪುರಸ್ಕರಿಸಿತ್ತು ಎಂದು ವರದಿಯಾಗಿತ್ತು. ಈ ವರದಿಗೆ ಸಂಬಂಧಿಸಿ ಸಿಎಸ್‍ಕೆ ಮ್ಯಾನೇಜ್‍ಮೆಂಟ್ ಪ್ರತಿಕ್ರಿಯಿಸಿ ಮೊಯಿನ್ ಅಲಿ ಅವರಿಂದ ಈ ರೀತಿಯ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದೆ.

    ಸಿಎಸ್‍ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಸಿ ವಿಶ್ವನಾಥನ್ ಪ್ರತಿಕ್ರಿಯಿಸಿ, ಯಾವುದೇ ಲೋಗೋವನ್ನು ತೆಗೆಯುವಂತೆ ಮೊಯಿನ್ ಅಲಿ ಅವರಿಂದ ಯಾವುದೇ ಮನವಿ ಬಂದಿಲ್ಲ ಎಂದು ತಿಳಿಸಿದ್ದಾರೆ.

    ಕಳೆದ ವರ್ಷ ಅಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದರೆ ಈ ಬಾರಿ ಆರ್‍ಸಿಬಿ ಅವರನ್ನು ಕೈ ಬಿಟ್ಟ ಹಿನ್ನೆಲೆಯಲ್ಲಿ ಚೆನ್ನೈ ತಂಡ 7 ಕೋಟಿ ರೂ. ಬಿಡ್ ಮಾಡಿ ಮಿನಿ ಹರಾಜಿನಲ್ಲಿ ಖರೀದಿಸಿತ್ತು.

    ಬರ್ಮಿಂಗ್‍ಹ್ಯಾಮ್‍ನಲ್ಲಿ ಜನಿಸಿದ ಅಲಿ ಒಟ್ಟು 19 ಐಪಿಎಲ್ ಪಂದ್ಯಗಳಿಂದ 20.6 ಸರಾಸರಿಯಲ್ಲಿ 309 ರನ್ ಗಳಿಸಿದ್ದಾರೆ. ಕಳೆದ ಆವೃತ್ತಿಯಲ್ಲಿ ಒಟ್ಟು 3 ಪಂದ್ಯಗಳನ್ನು ಆಡಿದ್ದರು.

    2010ರ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಲ್‍ರೌಂಡರ್ ಯೂಸೂಫ್ ಪಠಾಣ್ ಅವರು ಕಿಂಗ್‍ಫಿಶರ್ ಲೋಗೋಗೆ ಟೇಪ್ ಸುತ್ತಿದ ಜೆರ್ಸಿ ಧರಿಸಿ ಆಡಿದ್ದರು.

  • ಫ್ರೀ ಹಿಟ್ ಎಸೆತಕ್ಕೆ ಔಟ್ – ಕೆಟ್ಟ ದಾಖಲೆ ಬರೆದ ಆರ್‌ಸಿಬಿ ಇಬ್ಬರು ಆಟಗಾರರು

    ಫ್ರೀ ಹಿಟ್ ಎಸೆತಕ್ಕೆ ಔಟ್ – ಕೆಟ್ಟ ದಾಖಲೆ ಬರೆದ ಆರ್‌ಸಿಬಿ ಇಬ್ಬರು ಆಟಗಾರರು

    – ಕ್ರಿಕೆಟ್ ಇತಿಹಾಸದಲ್ಲೇ ಮೂರನೇ ಬಾರೀ ಫ್ರೀ ಹಿಟ್‍ನಲ್ಲಿ ರನೌಟ್

    ಅಬುಧಾಬಿ: ಐಪಿಎಲ್‍ನಲ್ಲಿ ಎರಡು ಬಾರಿ ಫ್ರೀ ಹಿಟ್ ಬಾಲಿನಲ್ಲೇ ರಾಯಲ್ ಚಾಲೆಜಂರ್ಸ್ ಬೆಂಗಳೂರು ತಂಡದ ಆಟಗಾರರು ಔಟ್ ಆಗಿ ಕೆಟ್ಟ ದಾಖಲೆ ಬರೆದಿದ್ದಾರೆ.

    ಶುಕ್ರವಾರ ಅಬುಧಾಬಿ ಮೈದಾನದಲ್ಲಿ ನಡೆದ ಐಪಿಎಲ್-2020ಯ ಎಲಿಮಿನೇಟರ್-1 ಪಂದ್ಯದಲ್ಲಿ ಬೆಂಗಳೂರು ತಂಡ ಹೀನಾಯವಾಗಿ ಸೋತಿದೆ. ಈ ಮೂಲಕ ಐಪಿಎಲ್-2020ಯಿಂದ ಹೊರಗೆ ಬಿದ್ದಿದೆ. ಆದರೆ ಶುಕ್ರವಾರದ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ ಮೊಯೀನ್ ಅಲಿ ಫ್ರೀ ಹಿಟ್ ಬಾಲಿನಲ್ಲಿ ರನೌಟ್ ಆಗುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.

    ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಮೊದಲೇ ಮೂರು ವಿಕೆಟ್‍ಗಳನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕಿತ್ತು. ಈ ವೇಳೆ 3ನೇ ಆಟಗಾರನಾಗಿ ಆರೋನ್ ಫಿಂಚ್ ಔಟ್ ಆದ ನಂತರ ಮೊಯೀನ್ ಅಲಿಯವರು ಕಣಕ್ಕಿಳಿದಿದ್ದರು. ಈ ವೇಳೆ 10ನೇ ಓವರ್ 4ನೇ ಬಾಲನ್ನು ನದೀಮ್ ಅವರು ನೋಬಾಲ್ ಹಾಕಿದರು. ನಂತರದ ಫ್ರೀ ಹಿಟ್ ಬಾಲನ್ನು ಆಫ್ ಸೈಡ್ ಕಡೆಗೆ ಭಾರಿಸಿದ ಅಲಿ ರನ್ ಹೋಡಲು ಬಂದರು. ಆದರೆ ರಶೀದ್ ಖಾನ್ ನಾನ್ ಸ್ಟ್ರೈಕ್‍ನಲ್ಲಿದ್ದ ವಿಕೆಟ್‍ಗೆ ನೇರವಾಗಿ ಬಾಲನ್ನು ಎಸೆದ ಕಾರಣ ರನೌಟ್‍ಗೆ ಬಲಿಯಾದರು.

    https://twitter.com/PageTrending/status/1324729181767266305

    ಈ ಮೂಲಕ ಫ್ರೀ ಹಿಟ್‍ನಲ್ಲಿ ಔಟ್ ಆದ ಎರಡನೇ ಆರ್‌ಸಿಬಿ ಆಟಗಾರ ಎಂಬ ಕೆಟ್ಟ ದಾಖಲೆಯನ್ನು ಮೊಯೀನ್ ಅಲಿ ಬರೆದರು. ಪಂದ್ಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಲಿ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ 2017ರ ಐಪಿಎಲ್‍ನಲ್ಲಿ ಆರ್‌ಸಿಬಿ ಪರವಾಗಿ ಆಡುತ್ತಿದ್ದ ಕೇದರ್ ಜಾಧವ್ ಕೂಡ ಫ್ರೀ ಹಿಟ್‍ನಲ್ಲಿ ಔಟ್ ಆಗಿದ್ದರು. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ ಅವರು ನೋಬಾಲ್ ಎಸೆದು ಫ್ರೀ ಹಿಟ್‍ನಲ್ಲಿ ಜಾಧವ್ ಅವರನ್ನು ರನೌಟ್ ಮಾಡಿದ್ದರು.

    ಫ್ರೀ ಹಿಟ್ ಬ್ಯಾಟ್ಸ್ ಮನ್‍ಗೆ ವರವಿದ್ದಂತೆ ಈ ಬಾಲಿನಲ್ಲಿ ಆತ ವಿಕೆಟ್ ಆದರೂ ಕ್ಯಾಚ್ ಕೊಟ್ಟರು ಔಟ್ ಇರುವುದಿಲ್ಲ. ಈ ಬಾಲಿನಲ್ಲಿ ರನೌಟ್ ಆಗುವುದು ಅಪರೂಪ. ಆದರೆ ಕ್ರಿಕೆಟ್ ಇತಿಹಾಸದಲ್ಲಿ ಮೂರು ಬಾರಿ ಈ ಘಟನೆ ನಡೆದಿದ್ದು, ಎರಡು ಬಾರಿ ಐಪಿಎಲ್‍ನಲ್ಲಿ ನಡೆದಿರುವುದು ವಿಶೇಷವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲೂ ಫ್ರೀಹಿಟ್‍ನಲ್ಲಿ ಬ್ಯಾಟ್ಸ್ ಮನ್ ಔಟ್ ಆಗಿದ್ದು, 2006ರಲ್ಲಿ ಜೋಹಾನ್ಸ್ ಬರ್ಗ್‍ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆಫ್ರಿಕಾದ ರಾಬಿನ್ ಪೀಟರ್ಸನ್, ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಫ್ರೀ ಹಿಟ್‍ನಲ್ಲಿ ರನೌಟ್ ಆಗಿದ್ದರು.

    ಶುಕ್ರವಾರದ ಎಲಿಮಿನೇಟರ್-1 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜೇಸನ್ ಹೋಲ್ಡರ್ ಅವರ ದಾಳಿಗೆ ತತ್ತರಿಸಿ ಆರಂಭಿಕ ಆಘಾತಕ್ಕೆ ಒಳಗಾಯ್ತು. ಆದರೆ ಕೊನೆಯಲ್ಲಿ ಎಬಿ ಡಿವಿಲಿಯರ್ಸ್ ಕುಸಿದ ಆರ್‌ಸಿಬಿಗೆ ಆಸರೆಯಾದರು. ಪರಿಣಾಮ ನಿಗದಿತ 20 ಓವರಿನಲ್ಲಿ 131 ರನ್ ಪೇರಿಸಿತು. ಈ ಗುರಿನ್ನು ಬೆನ್ನಟ್ಟಿದ ಹೈದರಾಬಾದ್ ತಂಡ ಕೇನ್ ವಿಲಿಯಮ್ಸನ್ ಅವರ ಭರ್ಜರಿ ಬ್ಯಾಟಿಂಗ್‍ನಿಂದ ಇನ್ನೂ 2 ಬಾಲ್ ಇರುವಂತೆ ಗೆದ್ದು ಬೀಗಿ ಆರ್‍ಸಿಬಿಯನ್ನು ಐಪಿಎಲ್‍ನಿಂದ ಹೊರಗಟ್ಟಿತು.

  • ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಇದು ಒನ್ ಡೇ ಮ್ಯಾಚು ಕಣೋ, 6-6-2-4-6-6-6-6, 8 ಬಾಲಲ್ಲಿ 42 ರನ್!

    ಬೆಂಗಳೂರು: ವಿಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಆಕ್ರಮಣಕಾರಿ ಆಟವಾಡಿ ವಿಶ್ವದಾಖಲೆ ಮಾಡಿದ್ದಾರೆ.

    ಮೊಯೀನ್ ಅಲಿ ಆಟದ ತೀವ್ರತೆ ಎಷ್ಟಿತ್ತೆಂದರೆ ಕೇವಲ 10 ನಿಮಿಷದಲ್ಲಿ 14 ಬಾಲಲ್ಲಿ 61 ರನ್ ಗಳಿಸಿದ್ದರು.

    45ನೇ ಓವರ್ ನಿಂದ ಆಕ್ರಮಣಕಾರಿ ಆಟಕ್ಕಿಳಿದ ಕಮಿನ್ಸ್ ಹಾಗೂ ಹೋಲ್ಡರ್ ಎಸೆತಗಳನ್ನು ಮನಸೋಇಚ್ಛೆ ಥಳಿಸಿದರು. ಅದರಲ್ಲೂ ಕೊನೆಯ 8 ಬಾಲ್ ನಲ್ಲಿ 6-6-2-4-6-6-6-6 ಬಾರಿಸಿ 42 ರನ್ ಗಳಿಸಿದರು.

    ಈ ಆಟದ ಮೂಲಕ ಮೊಯೀನ್ ಅಲಿ ಇಂಗ್ಲೆಂಡ್ ಪರ ವೇಗದ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೂ ಪಾತ್ರರಾದರು. ವಿಂಡೀಸ್ ವಿರುದ್ಧದ ಈ ಪಂದ್ಯವನ್ನು ಇಂಗ್ಲೆಂಡ್ 124 ರನ್ ಗಳಿಂದ ಗೆದ್ದಿತ್ತು. 5 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿದೆ.

  • 39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

    39 ಎಸೆತಕ್ಕೆ 39 ರನ್, ಮುಂದಿನ 14 ಬಾಲ್‍ಗೆ 61 ರನ್ ಗಳಿಸಿ ಶತಕ ಬಾರಿಸಿದ್ರು!

    ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಇಂದೋರ್ ನಲ್ಲಿ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಸಿಕ್ಸರ್ ಮೇಲೆ ಸಿಕ್ಸರ್ ಹೊಡೆಯುತ್ತಿದ್ದರೆ ಅತ್ತ ಇಂಗ್ಲೆಂಡ್ ಆಟಗಾರ ಮೊಯೀನ್ ಅಲಿ ಕೂಡಾ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದರು.

    ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆರಂಭದ 39 ಎಸೆತಗಳಲ್ಲಿ 39 ರನ್ ಗಳಿಸಿದ್ದ ಮೊಯೀನ್ ಅಲಿ ನಂತರದ 14 ಎಸೆತಗಳಲ್ಲಿ 61 ರನ್ ಗಳಿಸಿ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. 7ನೇ ಕ್ರಮಾಂಕದಲ್ಲಿ ಬಂದು 57 ಎಸೆತಗಳಲ್ಲಿ ಒಟ್ಟು 102 ರನ್ ಗಳಿಸಿದರು. ಈ ಮೊದಲು ಈ ದಾಖಲೆ ಜೇಮ್ಸ್ ಫೌಲ್ಕನರ್ ಹೆಸರಿನಲ್ಲಿತ್ತು.

    44ನೇ ಓವರ್ ಮುಗಿಯುವವರೆಗೆ ಶಾಂತವಾಗಿ ಆಡುತ್ತಿದ್ದ ಅಲಿ 45ನೇ ಓವರ್ ನಲ್ಲಿ ಆಕ್ರಮಣಕಾರಿ ಆಟಕ್ಕಿಳಿದರು. ಈ ಆಕ್ರಮಣಕಾರಿ ಇನ್ನಿಂಗ್ಸ್ ನಲ್ಲಿ ಅಲಿ 8 ಸಿಕ್ಸರ್ ಹಾಗೂ 7 ಬೌಂಡರಿ ಬಾರಿಸಿದರು. ಅಲಿ ಆಟದಿಂದಾಗಿ ಇಂಗ್ಲೆಂಡ್ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 369 ರನ್ ಗಳಿಸಿತು.

    ಕೊನೆಯ 8 ಎಸೆತಗಳಲ್ಲಿ ಮೊಯೀನ್ 42 ರನ್ ಗಳಿಸಿದರು. ಈ 8 ಎಸೆತಗಳಲ್ಲಿ ಅವರು ಕ್ರಮವಾಗಿ 6-6-2-4-6-6-6-6 ರನ್ ಗಳಿಸಿದರು.

    ಮೊಯೀನ್ ದಾಖಲಿಸಿದ ಶತಕ ಇಂಗ್ಲೆಂಡ್ ಪರ 2ನೇ ಆತಿ ವೇಗದ ಶತಕ ಎಂಬ ದಾಖಲೆಗೆ ಪಾತ್ರವಾಯಿತು. ಇಂಗ್ಲೆಂಡ್ ನ ಜೋಸ್ ಬಟ್ಲರ್ 2005ರ ನವೆಂಬರ್ ನಲ್ಲಿ 46 ಎಸೆತಗಳಲ್ಲಿ ಶತಕ ದಾಖಲಿಸಿದ್ದರು.