Tag: modi stadium

  • World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?

    World Cup 2023: ಆಸ್ಟ್ರೇಲಿಯಾ ಗೆಲುವಿಗೆ ಕಾರಣಗಳೇನು..?

    ಅಹಮದಾಬಾದ್: ಭಾರತದ ವಿಶ್ವಕಪ್ ಗೆಲ್ಲುವ ನಿರೀಕ್ಷೆ ಹುಸಿಯಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆದ್ದು ಬೀಗಿದೆ. ಅಹಮದಬಾದ್‍ನ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟೀಂ ಆಸ್ಟ್ರೇಲಿಯಾ (IND Vs AUS) ವಿರುದ್ಧ 6 ವಿಕೆಟ್‍ಗಳ ಸೋಲನ್ನು ಕಂಡಿದೆ. 20 ವರ್ಷಗಳ ಸೇಡನ್ನ ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ಆಸ್ಟ್ರೇಲಿಯಾ ತಿವಿದಿದ್ದು ಮತ್ತೆ ಭಾರತ ಫೈನಲ್‍ನಲ್ಲಿ ಮುಗ್ಗರಿಸಿದೆ. ಇದನ್ನೂ ಓದಿ: ಟೀಂ ಇಂಡಿಯಾ ಎಡವಿದ್ದೆಲ್ಲಿ; ಇಲ್ಲಿದೆ 5 ಕಾರಣ..

    ಗೆಲುವಿಗೆ ಕಾರಣಗಳೇನು..?
    ಭಾರತ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ಕಳಪೆಯಾಗಿದೆ. ಆಸ್ಟ್ರೇಲಿಯಾ ತಂಡವು ಟೀಂ ಇಂಡಿಯಾವನ್ನು ವಿಕೆಟ್‍ನಲ್ಲೇ (Wicket) ಕಟ್ಟಿ ಹಾಕಿದೆ. ಅಲ್ಲದೆ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡೋದು ಕಷ್ಟಕರವಾಗಿದ್ದು, ಸ್ಲೋ ಬ್ಯಾಟಿಂಗ್ ಪಿಚ್ ಆಗಿರೋ ಕಾರಣ ಸ್ಫೋಟಕ ಬ್ಯಾಟಿಂಗ್ ಸಾಧ್ಯವಾಗಲಿಲ್ಲ. ಇದನ್ನೂ ಓದಿ: 140 ಕೋಟಿ ಭಾರತೀಯರ ಕನಸು ಭಗ್ನ – ವಿಶ್ವ ವಿಜೇತ ಆಸ್ಟ್ರೇಲಿಯಾ

    ಎರಡನೇ ಬ್ಯಾಟಿಂಗ್‍ಗೆ (Batting) ಮೊದಲ ಬ್ಯಾಟಿಂಗ್‍ಗಿಂತ ಪಿಚ್ ಉತ್ತಮವಾಗಿತ್ತು. ಡ್ಯೂಪ್ಯಕ್ಟರ್ ಕೂಡ ಟೀಂ ಆಸ್ಟ್ರೇಲಿಯಾಗೆ (Australia) ಸಾಥ್ ನೀಡಿದ್ದು, ಭಾರತದ ಪ್ರಮುಖ ಬ್ಯಾಟ್ಸ್ ಮ್ಯಾನ್‍ಗಳ ವೈಫಲ್ಯವಾಗಿರುವುದು. ಮಿಡಲ್ ಓವರ್‍ನಲ್ಲಿ ಭಾರತಕ್ಕೆ ಹೆಚ್ಚು ರನ್ ಗಳಿಸಲು ಸಾಧ್ಯವಾಗದೆ ಇದ್ದದ್ದು, ಆಸ್ಟ್ರೇಲಿಯಾದ ಪ್ರಮುಖ ಮೂರು ವಿಕೆಟ್ ಬೇಗ ಕಳೆದುಕೊಂಡರೂ ದೃತಿಗೇಡದೆ ಇದ್ದದ್ದು ಹಾಗೂ ಭಾರತದ ಬೌಲಿಂಗ್ ಸ್ಟ್ರಾಂಗ್ ಇದ್ರೂ ಪಿಚ್ ಸಪೋರ್ಟ್ ಸಿಗದೇ ಇದ್ದಿದ್ದು ಆಸ್ಟ್ರೇಲಿಯಾ ಗೆಲುವಿಗೆ ಕಾರಣವಾಯಿತು.

    ಒಟ್ಟಿನಲ್ಲಿ ಭಾರತ (Team India) ಕ್ರಿಕೆಟ್ ತಂಡ ವಿಶ್ವಕಪ್ ಗೆಲುವಿನ ಹಂಬಲದಲ್ಲಿ ಅಂತಿಮ ಹಂತದಲ್ಲಿ ಎಡವಿದ್ದು, ಆಸ್ಟ್ರೇಲಿಯಾ ಆರು ವಿಕೆಟ್‍ಗಳ ಜಯ ಸಾಧಿಸಿತು.

  • World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

    World Cup 2023- ಭಾರತ ಗೆದ್ದು ಬರಲಿ ಎಂದು ಬೊಮ್ಮಾಯಿ, ಹೆಚ್‍ಡಿಕೆ ವಿಶ್

    ಬೆಂಗಳೂರು: ಅಹಮದಾಬಾದ್‍ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ  (Narendra Modi Stadium Ahemadabad) ಇಂದು ನಡೆಯುವ ಫೈನಲ್ ಕ್ರಿಕೆಟ್ ಪಂದ್ಯ ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದು, ಎಲ್ಲೆಡೆಯಿಂದಲೂ ಟೀಂ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಂತೆಯೇ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಹಾಗೂ ಹೆಚ್.ಡಿ ಕುಮಾರಸ್ವಾಮಿ ಕೂಡ ವಿಶ್ ಮಾಡಿದ್ದಾರೆ.

    ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಬೊಮ್ಮಾಯಿ, ಭಾರತ ಹಾಗೂ ಆಸ್ಟ್ರೇಲಿಯಾ (IND Vs AUS) ನಡುವಿನ ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯ ನೋಡಲು ಇಡೀ ಜಗತ್ತಿನ ಕ್ರಿಕೆಟ್ (Cricket) ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಾನೂ ಫೈನಲ್ ಪಂದ್ಯ ನೋಡಲು ಕಾತುರನಾಗಿದ್ದೇನೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಈ ಬಾರಿ ವಿಶ್ವ ಕಪ್ ಗೆಲ್ಲುವ ಫೆವರಿಟ್ ತಂಡವಾಗಿದೆ.

    ರನ್ ಮಷಿನ್ ವಿರಾಟ್ ಕೋಹ್ಲಿಯ ರನ್ ಹೊಳೆ, ಮೊಹಮದ್ ಶಮಿಯ ಬೌಲಿಂಗ್ ದಾಳಿ, ಸಂಘಟಿತ ಹೋರಾಟದಿಂದ ಭಾರತ ತಂಡ ಮೂರನೇ ಬಾರಿ ವಿಶ್ವಕಪ್ ಎತ್ತಿ ಹಿಡಿಯುತ್ತದೆ ಎನ್ನುವ ಅಚಲ ವಿಶ್ವಾಸ ನನಗಿದೆ. ಭಾರತ ಕ್ರಿಕೆಟ್ ತಂಡ ಜಯಶಾಲಿಯಾಗಿ ಮೂರನೇ ಬಾರಿ ಕ್ರಿಕೆಟ್ ಲೋಕದ ವಿಶ್ವ ಚಾಂಪಿಯನ್ ಆಗಲಿ ಎಂದು ಶುಭ ಹಾರೈಸುತ್ತೇನೆ. ಗುಡ್ ಲಕ್ ಟೀಮ್ ಇಂಡಿಯಾ ಎಂದು ಬೊಮ್ಮಾಯಿ (Basavaraj Bommai) ಬರೆದುಕೊಂಡಿದ್ದಾರೆ.

    ವಿಶ್ವಕಪ್ ಸರಣಿಯಲ್ಲಿ ಈವರೆಗೆ ಎಲ್ಲ ಪಂದ್ಯಗಳನ್ನು ಜಯಿಸಿ ಅಜೇಯವಾಗಿರುವ ಭಾರತ ತಂಡ ವಿಶ್ವಕಪ್ ಗೆಲ್ಲಬೇಕು. ನಮ್ಮೆಲ್ಲರ ಹಾರೈಕೆ, ಕನಸುಗಳೆಲ್ಲವೂ ಟೀಂ ಇಂಡಿಯಾ ಜೊತೆಯಲ್ಲಿವೆ. ಭಾರತ ಗೆದ್ದು ಬರಲಿ. ಎಲ್ಲರೂ ಹಾರೈಸೋಣ, ಪ್ರಾರ್ಥಿಸೋಣ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (hD Kumaraswamy) ಶುಭಹಾರೈಸಿದ್ದಾರೆ. ಇದನ್ನೂ ಓದಿ: ಲೆದರ್ ಬಾಲ್ ಮೇಲೆ ಸಹಿ ಮಾಡಿ ಭಾರತ ತಂಡಕ್ಕೆ ಶುಭಕೋರಿದ ಬಿ.ವೈ ರಾಘವೇಂದ್ರ

    ಇತ್ತ ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯೇ ಎಕ್ಸ್ ಮಾಡಿದ್ದು, ನಾಳಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾಕೂಟದ ಫೈನಲ್ ಪಂದ್ಯದಲ್ಲಿ ಭಾರತೀಯರ ಗೆಲುವನ್ನು ಸಂಭ್ರಮಿಸಲು ನಾನು ಎಲ್ಲರಂತೆ ಕಾತುರನಾಗಿದ್ದೇನೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಎಲ್ಲಾ ವಿಭಾಗಗಳಲ್ಲೂ ನಮ್ಮದು ಒಂದು ಪರಿಪೂರ್ಣ ತಂಡವಾಗಿರುವುದರಿಂದ ಈ ಬಾರಿಯ ವಿಶ್ವಕಪ್ ಭಾರತದ ಮಡಿಲು ಸೇರುವುದು ನಿಶ್ಚಿತ ಎಂದಿದ್ದಾರೆ.

    ಒಟ್ಟಿನಲ್ಲಿ ವಿಶ್ವಕಪ್ ಮಹಾಸಮರಕ್ಕೆ ಅಹಮದಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ಸಾಕ್ಷಿಯಾಗುತ್ತಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ, ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ.

  • 13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    13 ವಿಶ್ವಕಪ್‍ನಲ್ಲಿ 8ನೇ ಬಾರಿ ಫೈನಲ್- 5 ಬಾರಿ ಚಾಂಪಿಯನ್ ಆಗಿರೋ ಆಸ್ಟ್ರೇಲಿಯಾ

    ಅಹಮದಾಬಾದ್: ಕ್ರಿಕೆಟ್ (Cricket) ಹಬ್ಬ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂಡಿಯಾ ಮತ್ತು ಆಸ್ಟ್ರೇಲಿಯಾ (IND Vs AUS) ವಿಶ್ವಕಪ್ ಗಾಗಿ ಅಖಾಡಕ್ಕೆ ಇಳಿಯಲಿದ್ದು ಎರಡು ದೇಶದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ನಾಡಿಬಡಿತವೂ ಜೋರಾಗಿದೆ. ವಿಶ್ವಕಪ್ ನಲ್ಲಿ ಇಲ್ಲಿವರೆಗೆ ವಿಶೇಷ ಸಾಧನೆ ಮಾಡಿರೋ ಟೀಮ್ ಆಸ್ಟ್ರೇಲಿಯಾ ಈ ಬಾರಿ ಭಾರತವನ್ನ ತವರು ನೆಲದಲ್ಲೇ ಸೋಲಿಸಲು ರೆಡಿಮಾಡಿಕೊಂಡಿದೆ.

    ಹೌದು, ವಿಶ್ವಕಪ್ (World Cup 2023) ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಸಾಧನೆಯನ್ನ ಯಾರೂ ಅಲ್ಲಗೆಳೆಯುವಂತೆ ಇಲ್ಲ. ಯಾಕಂದ್ರೆ ಇಲ್ಲಿವರಗೆ ಅತಿಹೆಚ್ಚು ಬಾರಿ ಫೈನಲ್‍ಗೆ ಪ್ರವೇಶ ಪಡೆದಿರೋ ತಂಡ ಮಾತ್ರವಲ್ಲ, 5 ಬಾರಿ ವಿಶ್ವಕಪ್ ಕಿರೀಟವನ್ನ ತನ್ನದಾಗಿಸಿಕೊಂಡಿರೋ ರಾಷ್ಟ್ರವಾಗಿರೋದು ಆಸ್ಟ್ರೇಲಿಯಾ. 2023ರ ವಿಶ್ವಕಪ್‍ನಲ್ಲಿ ಫೈನಲ್‍ಗೆ ಎಂಟ್ರಿ ಕೊಟ್ಟಿರುವ ಆಸ್ಟ್ರೇಲಿಯಾ ಎಂಟನೇ ಬಾರಿ ಫೈನಲ್ ಪಂದ್ಯವನ್ನ ಇಂದು ಆಡಲಿದೆ. ಇದನ್ನೂ ಓದಿ: World Cup 2023: ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆಯಲ್ಲಿ ನೇರಪ್ರಸಾರದ ವ್ಯವಸ್ಥೆ

    1987, 1999, 2003, 2007, 2015ರಲ್ಲಿ ಚಾಂಪಿಯನ್ ಆಗಿದ್ರೆ 1975 ಮತ್ತು 1996ರ ಫೈನಲ್‍ನಲ್ಲಿ ಸೋತಿರೋ ಅನುಭವವೂ ಆಸ್ಟ್ರೇಲಿಯಾ ತಂಡಕ್ಕೆ ಆಗಿದೆ. ಎಂಟನೇ ಬಾರಿ ಫೈನಲ್ ಆಡ್ತಿರೋ ಆಸ್ಟ್ರೇಲಿಯಾ ಟೀಂ ಈ ಪಂದ್ಯವನ್ನ ಸಹ ಗೆಲ್ಲುವ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ. ಬಿಗ್ ಬಿಗ್ ಟೂರ್ನಿಯಲ್ಲಿ ಜಯಗಳಿಸೋದು ಹೇಗೆ ಅನ್ನೋದನ್ನ ಕಲಿತಿರೋ ಆಸೀಸ್ ತಂಡವನ್ನ ಸುಲಭವಾಗಿ ಮಣಿಸಲು ಸಾಧ್ಯವಿಲ್ಲ. ಇದನ್ನೂ ಓದಿ: ಶಮಿ ಕೈಯಲ್ಲಿ ಬೆಂಕಿ ಚೆಂಡು- ಕಾಂಗರೂಗಳ ನಿದ್ದೆಗೆಡಿಸಿರೋ ಸ್ವಿಂಗ್ ಮಾಸ್ಟರ್

    ಟೀಂ ಇಂಡಿಯಾಗೆ ಸರಿಸಮನಾಗಿ ಸವಾಲು ಹಾಕುವ ಸಾಮರ್ಥ್ಯವಿರೋ ಆಸ್ಟ್ರೇಲಿಯಾ (Australia) ಈ ವಿಶ್ವಕಪ್‍ನಲ್ಲಿ ಮೂರನೇ ತಂಡವಾಗಿ ಸೇಮಿಸ್ ಪ್ರವೇಶ ಮಾಡಿತ್ತು. ಲೀಗ್ ಹಂತದಲ್ಲಿ ಆಡಿದ್ದ 9ರಲ್ಲಿ 7 ಪಂದ್ಯವನ್ನ ಗೆದ್ದು 14 ಅಂಕಗಳಿಸಿ ಮೂರನೇ ತಂಡವಾಗಿ ಆಸ್ಟ್ರೇಲಿಯಾ ಸೇಮಿಸ್‍ಗೆ ಲಗ್ಗೆ ಹಾಕಿತ್ತು. ಸೇಮಿಸ್‍ನಲ್ಲಿ ಸೌಥ್ ಆಫ್ರಿಕಾವನ್ನ (South Africa) ಬಗ್ಗುಬಡಿದು ಫೈನಲ್‍ಗೆ ಎಂಟ್ರಿ ನೀಡಿದೆ. ಮೊದಲ ಎರಡು ಪಂದ್ಯದಲ್ಲಿ ಮಾತ್ರ ಸೋತ ಆಸ್ಟ್ರೇಲಿಯಾ ಬಳಿಕ ಸತತವಾಗಿ 8 ಪಂದ್ಯಗಳಲ್ಲಿ ಜಯಗಳಿಸಿಕೊಂಡಿದೆ.

    ಪಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಟೀಂ ಬ್ಯಾಟಿಂಗ್ ಬೌಲಿಂಗ್ ಮತ್ತು ಫೀಲ್ಡಿಂಗ್‍ನಲ್ಲಿ ಫುಲ್ ಸ್ಟ್ರಾಂಗ್ ಆಗಿದೆ. ಬ್ಯಾಟಿಂಗ್ ಲೈನ್ ಆಫ್‍ನಲ್ಲಿ ವಾರ್ನರ್, ಹೆಡ್, ಸ್ಮೀತ್, ಮಾರ್ಶ್ ಮತ್ತು ಮಾಕ್ಸಿ ಟ್ರಂಪ್ ಕಾರ್ಡ್‍ಗಳಾಗಿದ್ರೇ, ಬೌಲರ್ ಗಳಾದ ಮಿಚೆಲ್ ಸ್ಟಾರ್ಕ್, ಜೋಶ್ ಹಷಲ್ಹುಡ್, ಕಮಿಂಗ್ಸ್, ಸ್ಪೀಡ್ ಬೌಲಿಂಗ್‍ನಲ್ಲಿ ಭಾರತದ ಬ್ಯಾಟರ್ ಗಳನ್ನ ಕಟ್ಟಿಹಾಕಲು ಸಜ್ಜಾಗ್ತಿದ್ರೇ ಸ್ಲೀನ್ ಜಾದೂ ಮಾಡಲು ಜಂಪಾ ಕೂಡ ಸಿದ್ಧರಾಗಿದ್ದಾರೆ.

    ಒಟ್ಟಿನಲ್ಲಿ 7 ಬಾರಿ ವಿಶ್ವಕಪ್ ಫೈನಲ್ ಆಡಿರೋ ಅನುಭವ ಟೀಂ ಆಸೀಸ್‍ಗೆ ಇದೆ. ಇದೇ ಅನುಭವದಲ್ಲಿ 8ನೇ ಫೈನಲ್‍ಗೆ ಆಸ್ಟ್ರೇಲಿಯಾ ಸಜ್ಜಾಗಿದ್ದು, ಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ಇದಕ್ಕೆ ಭಾರತ ಕೂಡ ರಣತಂತ್ರವನ್ನ ಹಾಕಿಕೊಂಡಿದ್ದು ಮೂರನೇ ಬಾರಿಗೆ ವರ್ಲ್ಡ್ ಕಪ್ ಗೆಲ್ಲುವ ತವಕದಲ್ಲಿದೆ. ಇದಕ್ಕೆ ಉತ್ತರ ಇವತ್ತಿನ ಮ್ಯಾಚ್‍ನಿಂದ ಸಿಗಲಿದೆ.‌

  • ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

    ಬರೊಬ್ಬರಿ 20 ವರ್ಷದ ಮುಯ್ಯಿಗೆ ಕಾದಿದೆ ಟೀಂ ಇಂಡಿಯಾ!

    ಅಹಮದಾಬಾದ್: ಸೋಲಿಗೆ ಸೇಡು ತೀರಿಸಿಕೊಂಡಿದ್ದ ಟೀಂ ಇಂಡಿಯಾ (Team India) ಇಂದು ಮತ್ತೊಂದು ಅಂತಹದ್ದೆ ಮೆಗಾ ರೈವರ್ಲಿಗೆ ಸಜ್ಜಾಗಿದೆ. ಆದರೆ ಇದು ನಿನ್ನೆ ಮೊನ್ನೆಯ ಸೇಡಲ್ಲ, ಬರೊಬ್ಬರಿ 20 ವರ್ಷಗಳ ಹಿಂದಿನ ಸೇಡು.

    ಕಳೆದ 20 ವರ್ಷಗಳ ಹಿಂದೆ ಅಂದರೆ 2003ರ ವಿಶ್ವಕಪ್ (World Cup) ಫೈನಲ್ ಪಂದ್ಯ ಟೂರ್ನಿ ಉದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾ ಫೈನಲ್‌ನಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧವೇ ಮುಗ್ಗರಿಸಿತ್ತು. 2ನೇ ಬಾರಿಗೆ ಫೈನಲ್‌ಗೇರಿ ಚಾಂಪಿಯನ್ ಆಗೇಬಿಡುತ್ತೆ ಎಂದು ಕಾದು ಕುಳಿತಿದ್ದ ಕೋಟಿ ಕೋಟಿ ಭಾರತೀಯ ಅಭಿಮಾನಿಗಳ ಆಸೆ ನೂಚ್ಚುನೂರಾಗಿದ್ದ ದಿನ ಅದು. ಆ ದಿನ ಆಸ್ಟ್ರೇಲಿಯಾ ತಂಡದ ವಿರುದ್ಧ ಹೀನಾಯವಾಗಿ ಸೋತಿದ್ದ ಟೀಂ ಇಂಡಿಯಾ ಈಗ ಹಳೆಯ ಸೋಲಿನ ನೋವನ್ನು ಮುಯ್ಯಿ ಸಮೇತ ವಾಪಸ್ ಕೊಡಲು ರೆಡಿ ಆಗಿದೆ.

    ವಿಶ್ವಕಪ್ ಇತಿಹಾಸದಲ್ಲಿ 2 ತಂಡಗಳ ಮುಖಾಮುಖಿಯ ಬಲವನ್ನು ನೋಡುವುದಾದರೆ ಭಾರತ ತಂಡಕ್ಕಿಂತ ಆಸ್ಟ್ರೇಲಿಯಾ ತಂಡವೇ ಬಲಿಷ್ಠವಾಗಿರೋದು ಅಂಕಿ ಅಂಶಗಳ ಮೂಲಕ ಸಾಬೀತಾಗಿದೆ. ವಿಶ್ವಕಪ್ ಇತಿಹಾಸದಲ್ಲಿ 13 ಬಾರಿಗೆ ಮುಖಾಮುಖಿ ಆಗಿರೋ ಉಭಯ ತಂಡಗಳಲ್ಲಿ ಭಾರತ ಗೆದ್ದಿರೋದು ಕೇವಲ 5 ಪಂದ್ಯಗಳು ಮಾತ್ರ. ಉಳಿದಂತೆ ಆಸ್ಟ್ರೇಲಿಯಾ 8 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವಕಪ್‌ನಲ್ಲಿ ಭಾರತದ ಮೇಲೆ ಹಿಡಿತ ಸಾಧಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡದ ಪ್ರದರ್ಶನವನ್ನು ನೋಡುವುದಾದರೆ ಕಳೆದ 3 ಬಾರಿಯ ವಿಶ್ವಕಪ್ ಮುಖಾಮುಖಿಯಲ್ಲಿ ಭಾರತವೇ ಪ್ರಾಬಲ್ಯ ಮೆರೆದಿರೋದು. 2011-2023 ರವರೆಗೆ ಒಟ್ಟು 4 ಬಾರಿ ಎದುರಾಗಿದ್ದು, ಭಾರತ 3 ಬಾರಿ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದೆ. ಇದನ್ನೂ ಓದಿ: World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

    ಆಸೀಸ್ ಮುಖಾಮುಖಿಯ ಅಂಕಿ ಅಂಶಗಳು:
    * 1983ರ ವಿಶ್ವಕಪ್‌ನಲ್ಲಿ ಮೊದಲ ಮುಖಾಮುಖಿ ಭಾರತಕ್ಕೆ 162 ರನ್‌ಗಳ ಸೋಲು.
    * 1984ರ ವಿಶ್ವಕಪ್‌ನಲ್ಲೆ 2ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಜಯ. ಆಸೀಸ್ ವಿರುದ್ಧ 118 ರನ್‌ಗಳ ಜಯ.
    * 1987 ರಲ್ಲಿ 3ನೇ ಮುಖಾಮುಖಿ. ಭಾರತಕ್ಕೆ 1 ರನ್‌ಗಳ ವಿರೋಚಿತ ಸೋಲು.
    * 1987 ರಲ್ಲಿ 4ನೇ ಬಾರಿ ಮುಖಾಮುಖಿ. ಭಾರತಕ್ಕೆ 56 ರನ್‌ಗಳ ಜಯ.
    * 1992 ರಲ್ಲಿ 5ನೇ ಮುಖಾಮುಖಿ. ಭಾರತಕ್ಕೆ 3 ರನ್‌ಗಳ ವಿರೋಚಿತ ಸೋಲು.
    * 1996 ರಲ್ಲಿ 6ನೇ ಮುಖಾಮುಖಿ. ಲೀಗ್ ಭಾರತಕ್ಕೆ 16 ರನ್‌ಗಳ ಸೋಲು.
    * 2003 ರಲ್ಲಿ 7ನೇ ಮುಖಾಮುಖಿ. ಲೀಗ್ ಮ್ಯಾಚ್‌ನಲ್ಲಿ ಭಾರತಕ್ಕೆ 9 ವಿಕೆಟ್‌ಗಳ ಸೋಲು.
    * 2003ರ ಫೈನಲ್‌ನಲ್ಲಿ 8ನೇ ಬಾರಿಗೆ ಮುಖಾಮುಖಿ. 125 ರನ್‌ಗಳ ಸೋಲು.
    * 2011 ರಲ್ಲಿ 9ನೇ ಮುಖಾಮುಖಿ. ಸೆಮಿಸ್‌ನಲ್ಲಿ ಭಾರತಕ್ಕೆ 5 ವಿಕೆಟ್‌ಗಳ ಜಯ.
    * 2015ರಲ್ಲಿ 10ನೇ ಮುಖಾಮುಖಿ ಸೆಮಿಸ್‌ನಲ್ಲಿ ಭಾರತಕ್ಕೆ 95 ರನ್‌ಗಳ ಸೋಲು.
    * 2019 ರಲ್ಲಿ 11ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 36 ರನ್‌ಗಳ ಜಯ.
    * 2023 ರಲ್ಲಿ ಲೀಗ್‌ನಲ್ಲಿ 12ನೇ ಬಾರಿಗೆ ಮುಖಾಮುಖಿ. ಭಾರತಕ್ಕೆ 6 ವಿಕೆಟ್‌ಗಳ ಜಯ.

    ಒಟ್ಟಾರೆ ಇಲ್ಲಿಯತನಕ ಒಂದು ಲೆಕ್ಕ ಆದರೆ, ಇಂದಿನಿಂದ ಮತ್ತೊಂದು ಲೆಕ್ಕ. ಟೀಂ ಇಂಡಿಯಾ ಇಂದಿನ ಫೈನಲ್ ಗೆಲ್ಲೋ ಮೂಲಕ 2003 ನಿಮ್ಮ ಸಮಯ ಆದರೆ, 2023 ನಮ್ಮ ಸಮಯ ಅನ್ನೋದನ್ನು ತೋರಿಸಬೇಕಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ

  • World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

    World Cup 2023: ಟೀಂ ಇಂಡಿಯಾಗೆ 3ನೇ ಪ್ರಶಸ್ತಿ ಗೆಲ್ಲುವ ಕನಸು- ಆಸೀಸ್‍ಗೆ 6ನೇ ಟ್ರೋಫಿ ಮೇಲೆ ಕಣ್ಣು

    ಅಹಮದಾಬಾದ್: ಸೋಲಿಲ್ಲದೆ 2023ರ ಏಕದಿನ ವಿಶ್ವಕಪ್ ಫೈನಲ್‍ಗೆ (World Cup Final 2023) ಲಗ್ಗೆ ಇಟ್ಟಿರುವ ಭಾರತ (India) ತಂಡ, ಮೂರನೇ ಬಾರಿ ಏಕದಿನ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಇಂದು ಅಹ್ಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ (Narendra Modi Stadium Ahemadabad) ನಡೆಯುವ ಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಪ್ರಶಸ್ತಿಗಾಗಿ ಸೆಣಸಲಿದೆ. ಟೀಂ ಸ್ಟ್ರಾಟಜಿ ಏನು, ಪ್ಲೇಯಿಂಗ್ ಲೆವನ್ ಹೇಗಿರುತ್ತೆ. ಪಿಚ್ ರಿಪೋರ್ಟ್ ಏನ್ ಹೇಳುತ್ತೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

    ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗೋ ಕಾಲ. 12 ವರ್ಷಗಳ ವನವಾಸಕ್ಕೆ ಮುಕ್ತಿ ಸಿಗೋ ಕಾಲ. ಎಸ್, ಎದೆಬಡಿತ ಹೆಚ್ಚಿರೋ ವಿಶ್ವಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಇಡೀ ಜಗತ್ತೇ ಕಾದು ಕುಳಿತಿದೆ. ಅಹಮದಾಬಾದ್‍ನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಬಲಿಷ್ಟ ಎರಡು ತಂಡಗಳು ಪ್ರಶಸ್ತಿಗಾಗಿ ಕಾದಾಡಲಿದ್ದಾವೆ. ಒಂದು ದಶಕದ ಬಳಿಕ ಐಸಿಸಿ  (ICC) ಟ್ರೋಫಿ ಎತ್ತಿಹಿಡಿಯಲು ಭಾರತ ಕಾಯ್ತಿದ್ರೆ, ಇತ್ತ ಆಸ್ಟ್ರೇಲಿಯಾ ಆರನೇ ವಿಶ್ವಕಪ್ ನ್ನು ತನ್ನದಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಇದನ್ನೂ ಓದಿ: ಇಂದು IND Vs AUS ಸಮರ – 12 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲುವ ತವಕ

    ಎರಡು ತಂಡಗಳ ಕಾಳಗ ನಿಜಕ್ಕೂ ಮದಗಜಗಳ ಕಾದಾಟವಿದ್ದಂತೆ. ಎರಡು ತಂಡಗಳಲ್ಲೂ ಸ್ಟಾರ್ ಪ್ಲೇಯರ್ಸ್, ಬಿಗ್ ಬಿಟ್ಟರ್ಸ್, ಪಂದ್ಯದ ಗತಿಯನ್ನೇ ಬದಲಿಸೋ ತಾಕತ್ತಿರೋ ಆಟಗಾರರಿದ್ದಾರೆ. ಯಾರಿಗೆ ಯಾರು ಕಮ್ಮಿ ಇಲ್ಲ, ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ. ಅಂಥದ್ದೊಂದು ಹೈವೋಲ್ಟೇಜ್, ಬಿಗ್‍ಫೈಟ್ ಮ್ಯಾಚ್‍ಗೆ ಸಾಕ್ಷಿಯಾಗಲಿದೆ. ಯಾಕಂದ್ರೆ ಇದು 2 ಬಲಿಷ್ಠ ಚಾಂಪಿಯನ್ಸ್ ತಂಡಗಳ ಸೆಣಸಾಟ.

    ಎಸ್, ಎರಡು ತಂಡಗಳಿಗೂ ವಿಶ್ವಕಪ್ ಮೇಲೆಯೇ ಕಣ್ಣು. ಹಾಗಾಗಿ ಉಭಯ ತಂಡಗಳು ಕಠಿಣ ತಾಲೀಮು ನಡೆಸಿವೆ. ಭಾರತ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು, ತವರು ನೆಲದ ಬೆಂಬಲ ಆತ್ಮವಿಶ್ವಾಸವನ್ನ ಹಿಮ್ಮಡಿಗೊಳಿಸಿದೆ. ರೋಹಿತ್ ಶರ್ಮಾ, ಗಿಲ್, ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ತಂಡದ ಟ್ರಂಪ್ ಕಾರ್ಡ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಸಿರಾಜ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್‍ಪ್ರೀತ್ ಬುಮ್ರಾ ಬೌಲಿಂಗ್ ದಾಳಿ ಆಸೀಸ್ ಬ್ಯಾಟ್ಸ್ ಮನ್‍ಗಳ ನಿದ್ದೆಗೆಡಿಸಿದೆ. ಆದರೆ ಪಿಚ್ ಸ್ಪಿನ್ನರ್ ಗೆ ಹೆಚ್ಚು ನೆರವಾಗಿರೋದ್ರಿಂದ ರವಿಚಂದ್ರನ್ ಅಶ್ವಿನ್‍ಗೂ ಸ್ಥಾನ ಸಿಗುತ್ತಾ ಕಾದುನೋಡಬೇಕಿದೆ.

    ಆಸ್ಟ್ರೇಲಿಯಾಗೆ (Australia) ಬ್ಯಾಟಿಂಗ್ ಶಕ್ತಿಯೇ ದೊಡ್ಡ ಅಸ್ತ್ರ. ಆರಂಭಿಕ ಬ್ಯಾಟ್ಸ್‍ಮನ್ ಟ್ರಾವಿಸ್ ಹೆಡ್, ಡೇವಿಡ್ ವಾರ್ನರ್ ಫಾರ್ಮ್‍ನಲ್ಲಿದ್ದಾರೆ. ಸ್ಟೀವನ್ ಸ್ಮಿತ್, ಮಾರ್ನಸ್ ಲಾಬುಶೇನ್, ಗ್ಲೆನ್ ಮ್ಯಾಕ್ಸ್ ವೆಲ್, ಜಾಶ್ ಇಂಗ್ಲಿಸ್ ಮಿಡಲ್ ಆರ್ಡರ್ ನಲ್ಲಿ ನೆರವಾಗಲಿದ್ದಾರೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಆಡಂ ಝಾಂಪ, ಹೇಝಲ್‍ವುಡ್ ಬೌಲಿಂಗ್ ಬಲವಿದೆ. ಇನ್ನು ವಿಶ್ವಕಪ್ ಮಹಾಸಮರಕ್ಕೆ ಸಾಕ್ಷಿಯಾಗುತ್ತಿರುವ ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂ ನವವಧುವಿನಂತೆ ಸಿಂಗಾರಗೊಂಡಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಪಂದ್ಯ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಸಮಾರೋಪ ಸಮಾರಂಭವನ್ನು ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi), ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸೆ‌ (Anthony Albanese), ಬಾಲಿವುಡ್ ತಾರೆಯರು, ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ವಿಶ್ವಕಪ್ ಗೆದ್ದ ತಂಡದ ಮಾಜಿ ನಾಯಕರು ಉಪಸ್ಥಿತಿ ಇರಲಿದ್ದಾರೆ. ಇದಲ್ಲದೆ ಏರ್‍ಶೋ, ಲೇಸರ್ ಶೋ, ಸಂಗೀತ, ನೃತ್ಯ ವೈಭವ ವಿಶ್ವಕಪ್ ಫೈನಲ್ ಮ್ಯಾಚ್‍ನ ಕಿಕ್ಕನ್ನ ಹೆಚ್ಚಿಸಲಿದೆ.