Tag: Modi RoadShow

  • ಬೆಂಗ್ಳೂರಿಗೆ ಮೋದಿ – ಬೆಳಗ್ಗಿನ ಜಾವದಿಂದಲೇ ಸಂಚಾರದಲ್ಲಿ ಏರುಪೇರು; ಹೇಗಿದೆ ರೂಟ್ ಮ್ಯಾಪ್?

    ಬೆಂಗ್ಳೂರಿಗೆ ಮೋದಿ – ಬೆಳಗ್ಗಿನ ಜಾವದಿಂದಲೇ ಸಂಚಾರದಲ್ಲಿ ಏರುಪೇರು; ಹೇಗಿದೆ ರೂಟ್ ಮ್ಯಾಪ್?

    ಬೆಂಗಳೂರು: ಚಂದ್ರಯಾನ-3 (Chandrayaan-3) ಆಪರೇಷನ್ ಯಶಸ್ವಿಯಾಗಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಸ್ಟ್ 26ರಂದು ಬೆಳಗ್ಗೆ ಬೆಂಗಳೂರಿಗೆ ಬರುತ್ತಿದ್ದಾರೆ.

    ಗ್ರೀಸ್‌ನ ಅಥೆನ್ಸ್ ನಗರದಿಂದ ಬೆಳಗ್ಗೆ 6 ಗಂಟೆ ಸುಮಾರಿಗೆ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದಾರೆ. ಸುಮಾರು 1 ಗಂಟೆಗಳ ಕಾಲ ಪೀಣ್ಯ ಬಳಿಯ ನೆಲಗದರನಹಳ್ಳಿಯಲ್ಲಿರುವ ಇಸ್ರೋ ಕಮಾಂಡಿಂಗ್ ಸೆಂಟರ್‌ನಲ್ಲಿ ಇರಲಿದ್ದಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ಸಕ್ಸಸ್‌ಗೆ ಕಾರಣರಾದ ಇಸ್ರೋ ವಿಜ್ಞಾನಿಗಳಿಗೆ ಮೋದಿ ಅಭಿನಂದಿಸಲಿದ್ದಾರೆ. ವಿಜ್ಞಾನಿಗಳ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಲಿದ್ದಾರೆ.

    ಬೆಳಗ್ಗೆ 8:05ಕ್ಕೆ ಇಸ್ರೋದಿಂದ ನಿರ್ಗಮಿಸಲಿದ್ದಾರೆ, ಬೆಳಗ್ಗೆ 8:30 ಹೆಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಬೆಳಗ್ಗೆ 8:35 ದೆಹಲಿಗೆ ತಲುಪಲಿದ್ದಾರೆ. ಬೆಂಗಳೂರಿಗೆ ಮೋದಿ ಬರೋ ಹಿನ್ನೆಲೆಯಲ್ಲಿ ಬೆಳಗಿನ ಜಾವ 4 ಗಂಟೆಯಿಂದ ಬೆಳಗ್ಗೆ 9.00 ಗಂಟೆವರೆಗೆ ಸಂಚಾರ ಏರುಪೇರಾಗಲಿದೆ. ಇದನ್ನೂ ಓದಿ: ಸ್ನೇಹಿತರಿಂದಲೇ ಚಿನ್ನ ಕಳವು ಮಾಡಿಸಿ ನಾಟಕ – ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಸಿಕ್ಕಿಬಿದ್ದ ಪತ್ನಿ

    ಮೋದಿ ರೂಟ್ ಮ್ಯಾಪ್ ಹೇಗಿದೆ?
    ಹೆಚ್‌ಎಎಲ್‌ಗೆ ಬಂದಿಳಿಯಲಿರುವ ಪ್ರಧಾನಿ ಮೋದಿ, ದೊಮ್ಮಲೂರು, ಟ್ರಿನಿಟಿ ಸರ್ಕಲ್, ಎಂಜಿ ರಸ್ತೆ, ರಾಜಭವನ ರಸ್ತೆ, ಚಾಲುಕ್ಯ ಸರ್ಕಲ್, ವಿಂಡ್ಸರ್ ಮ್ಯಾನರ್ ಬ್ರಿಡ್ಜ್, ಕಾವೇರಿ ಜಂಕ್ಷನ್, ಸ್ಯಾಂಕಿ ಟ್ಯಾಂಕ್, ಟಾಟಾ ಇನ್‌ಸ್ಟಿಟ್ಯೂಟ್, ಯಶವಂತಪುರ ಮೇಲ್ಸೇತುವೆ, ಗೊರಗುಂಟೆಪಾಳ್ಯ, ಪೀಣ್ಯ, ಜಾಲಹಳ್ಳಿ ಕ್ರಾಸ್ ಎಡ ತಿರುವು, ಇಸ್ರೋ ಕಚೇರಿ ಮಾರ್ಗಗಳಲ್ಲಿ ಸಂಚರಿಸಲಿದ್ದಾರೆ. ಇದನ್ನೂ ಓದಿ: Chandrayaan-3 ಲ್ಯಾಂಡರ್‌ನಿಂದ ಚಂದ್ರನ ಮೇಲೆ ಇಳಿಯುತ್ತಿರುವ ರೋವರ್ – ವೀಡಿಯೋ ರಿಲೀಸ್ ಮಾಡಿದ ಇಸ್ರೋ

    ರೋಡ್ ಶೋ ಕ್ಯಾನ್ಸಲ್‌:
    ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ಬೆಂಗಳೂರಿನಲ್ಲಿ ರೋಡ್ ಶೋ ನಡೆಸೋ ಬಿಜೆಪಿ ನಾಯಕರ ಪ್ಲ್ಯಾನ್‌ ಉಲ್ಟಾ ಆಗಿದೆ. ಇಸ್ರೋ ಕಮಾಂಡಿಂಗ್ ಸೆಂಟರ್ ಇರೋ ಕಚೇರಿ ಪೀಣ್ಯವು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಹೀಗಾಗಿ, ದಾಸರಹಳ್ಳಿಯಿಂದ ಇಸ್ರೋ ಕಚೇರಿವರೆಗೆ 1 ಕಿ.ಮೀ. ರೋಡ್ ಶೋ ನಡೆಸುತ್ತೇವೆ ಅಂತ ಅಶೋಕ್ ಹೇಳಿದ್ದರು. ಆದರೆ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ಕೊಟ್ಟಿದ್ದು, ಮೋದಿ ರೋಡ್ ಶೋ ಪ್ಲ್ಯಾನ್ ಆಗಿಲ್ಲ ಅಂದಿದ್ದಾರೆ.

    ಇನ್ನು, ದಾಸರಹಳ್ಳಿ ಬಿಜೆಪಿ ಶಾಸಕ ಮುನಿರಾಜು ಮಾತನಾಡಿ, ರೋಡ್ ಶೋ ಅಂತಿಮವಾಗಿಲ್ಲ. ಎಸ್‌ಪಿಜಿಯಿಂದ ಅನುಮತಿ ಕೂಡ ಸಿಕ್ಕಿಲ್ಲ. ಆದರೆ, ಸಾವಿರಾರು ಕಾರ್ಯಕರ್ತರು ಜಮಾಯಿಸ್ತಾರೆ. ಸಹಜವಾಗಿ ಕಾರ್ಯಕರ್ತರು ಕಂಡಾಗ ಮೋದಿ ಕೈ ಬೀಸ್ತಾರೆ. ಕೆಳಗೆ ಇಳಿದರೂ ಇಳಿಯಬಹುದು ಅಂದಿದ್ದಾರೆ. ಈ ಬೆನ್ನಲ್ಲೇ ಮೋದಿ ಇಸ್ರೋ ಭೇಟಿ ಹೊತ್ತಲ್ಲಿ ಜಾಲಹಳ್ಳಿ ಕ್ರಾಸ್ ಬಳಿ ಬೆಂಗಳೂರಿನ ಎಲ್ಲಾ 16 ಬಿಜೆಪಿ ಶಾಸಕರು ಹಾಜರಿದ್ದು ಸ್ವಾಗತ ಕೋರಲಿದ್ದಾರೆ. ಇನ್ನೂ ಪ್ರಧಾನಿಗಳ ಭೇಟಿಗೆ ನಮ್ಮದೇನೂ ವಿರೋಧ ಇಲ್ಲ. ರೋಡ್ ಶೋನಾದರೂ ಮಾಡಲಿ.. ಪಬ್ಲಿಕ್ ಮೀಟಿಂಗಾದರೂ ಮಾಡಲಿ ಅಭ್ಯಂತರ ಇಲ್ಲ ಅಂತ ಸಿಎಂ ಹೇಳಿದ್ದಾರೆ. ರೋಡ್ ಶೋ ಮೂಲಕ ಇಸ್ರೋ ಸಾಧನೆಯನ್ನ ಲೋಕಸಭಾ ಚುನಾವಣೆಗೆ ಬಳಸಿಕೊಳ್ಳೋದು ಪ್ಲ್ಯಾನ್‌ ಅಂತ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು?

    ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು?

    -ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ..?

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಕರ್ನಾಟಕ ವಿಧಾನಸಭಾ ಚುಣಾವಣೆಯ (Karnataka Election 2023) ಕೊನೆಯ ದಿನದ ಪ್ರಚಾರ ಮುಗಿಸಿದ್ದಾರೆ. ಇದೀಗ ಪ್ರಧಾನಿ ಬಂದು ಹೋದ ಮೇಲೆ ಬಿಜೆಪಿ ಗೆದ್ದೇ ಗೆಲ್ಲುತ್ತೆ ಅನ್ನೋ ವಿಶ್ವಾಸ ಕಮಲ ಪಾಳದಲ್ಲಿ ಮೂಡಿದೆ.

    ಸಿಲಿಕಾನ್ ಸಿಟಿಯಲ್ಲಿ ಮೋದಿ 40 ಕಿ.ಮೀ ಮೆಗಾ ರೋಡ್ ಎಫೆಕ್ಟ್ ಏನು? ರಾಜಧಾನಿಯಲ್ಲೂ ಗುಜರಾತ್ ಇತಿಹಾಸ ರಿಪೀಟ್ ಆಗೇಬಿಡುತ್ತಾ? ಬೆಂಗಳೂರಿನ ಮೇಲೆ ಬಿಜೆಪಿ ಮತ್ತೆ ಹಿಡಿತ ಸಾಧಿಸಲು ರಹದಾರಿಯಾಗುತ್ತಾ ನಮೋ ರೋಡ್ ಶೋ..? ಅನ್ನೋ ಬಗ್ಗೆ ಬಿಜೆಪಿ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇದನ್ನೂ ಓದಿ: ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಬೆಂಗಳೂರಿನಲ್ಲಿ ಗುಜರಾತ್‌ನ ಅಹಮದಾಬಾದ್ ಮಾದರಿಯ ರೋಡ್ ಶೋ ನಡೆಸಿದ್ದ ಮೋದಿ ಸಕ್ಸಸ್ ತಂದುಕೊಟ್ಟಿದ್ದರು. ಬೆಂಗಳೂರಿನಲ್ಲೂ ಅದೇ ಪ್ರಮಾಣದ ಸಕ್ಸಸ್ ತಂದುಕೊಡುವ ನಿರೀಕ್ಷೆಯನ್ನ ಹುಟ್ಟುಹಾಕಿದ್ದಾರೆ. ಗುಜರಾತ್ ರೋಡ್ ಶೋ ಹಿಸ್ಟರಿ ಇಲ್ಲೂ ಮರುಕಳಿಸುವ ಭರವಸೆಯಲ್ಲಿ ಬಿಜೆಪಿ ಇದೆ.

    ಪ್ರಧಾನಿ ರೋಡ್ ಶೋ ನಡೆಸಿದ ಮೇಲೆ ಬಿಜೆಪಿ ಪರ ಜನರ ಅಲೆ ಜೋರಾಗಿದೆ. ಇದರಿಂದ 18-20 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ. 2008ರಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಇದನ್ನೂ ಓದಿ: ಡಿಕೆಶಿ ಪರ ಅಖಾಡಕ್ಕಿಳಿದ ಪತ್ನಿ, ಪುತ್ರ – ಕನಕಪುರದ ಹಲವೆಡೆ ಬಿರುಸಿನ ಪ್ರಚಾರ

    ಈ ಬಾರಿ ಚುನಾವಣೆಯಲ್ಲಿ ಹಳೆ ಮೈಸೂರು ಹಾಗೂ ಬೆಂಗಳೂರು ನಗರವನ್ನ ಹೆಚ್ಚಾಗಿ ಟಾರ್ಗೆಟ್ ಮಾಡಿರುವ ಬಿಜೆಪಿ ಬಹುಮತದ ಡಬಲ್ ಎಂಜಿನ್ ಸರ್ಕಾರ ಸ್ಥಾಪಿಸುವ ನಿರೀಕ್ಷೆ ಹೊಂದಿದೆ. ಸೋಮವಾರ (ಮೇ 8) ಬಹಿರಂಗಪ್ರಚಾರಕ್ಕೆ ತೆರೆ ಬೀಳಲಿದ್ದು, ಯಾವ ಪಕ್ಷದ ಹಣೆಬರಹ ಹೇಗಿದೆ ಅನ್ನೋದನ್ನ ಕಾದುನೋಡಬೇಕಿದೆ.

  • ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಮೋದಿ ರೋಡ್‌ಶೋ; `ಜೈ ಬಜರಂಗಿ’ ಪೋಸ್ಟರ್ ಹಿಡಿದು ಗಮನ ಸೆಳೆದ ಮುಸ್ಲಿಂ ಮಹಿಳೆ

    ಬೆಂಗಳೂರು: ಕೊನೆಯದಿನದ ಚುನಾವಣಾ ಪ್ರಚಾರ (Election Campaign) ನಡೆಸಿದ ಪ್ರಧಾನಿ ಮೋದಿ ಅವರ ರೋಡ್ ಶೋ (Modi RoadShow) ಅದ್ಧೂರಿಯಾಗಿ ನೆರವೇರಿತು.

    ಬಹಿರಂಗ ಪ್ರಚಾರಕ್ಕೆ ತೆರ ಬೀಳಲು ಒಂದು ದಿನ ಬಾಕಿ ಇರುವಾಗ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ (Bengaluru) ಭರ್ಜರಿ ರೋಡ್ ನಡೆಸಿ ಮತಬೇಟೆ ಮಾಡಿದರು. ಭಾನುವಾರ ಬೆಳಗ್ಗೆ ತುಂತುರು ಮಳೆ ನಡುವೆಯೂ ಅಭಿಮಾನಿಗಳಲ್ಲಿ ಉತ್ಸಾಹ, ಹುರುಪಿಗೇನೂ ಕಮ್ಮಿ ಇರಲಿಲ್ಲ. ಅತ್ಯಂತ ಸುಗಮವಾಗಿ ಮೋದಿ ರೋಡ್ ಶೋ ನಡೀತು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಸರ್ಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೋದಿ ನಂತ್ರ ರೋಡ್‌ಶೋ ಶುರು ಮಾಡಿದರು.

    6.5 ಕಿಲೊಮೀಟರ್ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಮೋದಿ ಪರ ಘೋಷಣೆ ಮೊಳಗಿಸಿದ್ರು. ದಾರಿಯುದ್ದಕ್ಕೂ ಪುಷ್ಟವೃಷ್ಟಿಗೈದರು. ಇದನ್ನೂ ಓದಿ: ಕರ್ನಾಟಕವನ್ನ ಭಾರತದಿಂದ ಬೇರೆ ಮಾಡುವ ಹುನ್ನಾರ ನಡೆಸಿದೆ ಕಾಂಗ್ರೆಸ್ – ಮೋದಿ ವಾಗ್ದಾಳಿ

    ಪ್ರಧಾನಿ ಮೋದಿ ಅವರು ನಡೆಸಿದ ಕೊನೆಯದಿನದ ರೋಡ್‌ಶೋನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ರೋಡ್ ಶೋ ಉದ್ದಕ್ಕೂ ಕೇಸರಿ ಕಲರವ ತುಂಬಿ ತುಳುಕಿತ್ತು. ಇದೇ ವೇಳೆ ಮುಸ್ಲಿಂ ಮಹಿಳೆಯೊಬ್ಬರು (Muslim Women) `ಜೈ ಬಜರಂಗಿ.. ಜೈ ಬಿಜೆಪಿ’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ಪ್ರಧಾನಿ ಮೋದಿ ನೋಡಲು ಬಿಸಿಲಿನಲ್ಲೂ ಕಾದು ನಿಂತಿದ್ದ ದೃಶ್ಯ ಗಮನ ಸೆಳೆಯಿತು. `ಜೈ ಬಜರಂಗಿ’ ಘೋಷವಾಕ್ಯದ ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವೂ ಇತ್ತು. ಇದನ್ನೂ ಓದಿ: ಸುಡಾನ್‌ನಿಂದ ಬಂದ ಹಕ್ಕಿಪಿಕ್ಕಿ ಜನರ ಜೊತೆ ಮೋದಿ ಸಂವಾದ

    ಅಲ್ಲದೇ, 500 ಪುರೋಹಿತರಿಂದ ಹನುಮಾನ್ ಚಾಲೀಸಾ ಪಠಣ ನಡೆಸಲಾಯಿತು. ಪುಟ್ಟ ಬಾಲಕನೊಬ್ಬ ಐ ಲವ್‌ಯೂ ಮೋದಿಜಿ ಪೋಸ್ಟರ್ ಹಿಡಿದಿದ್ದ ದೃಶ್ಯವೂ ರೋಡ್‌ಶೋ ವೇಳೆ ಗಮನ ಸೆಳೆಯಿತು.

  • ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ

    ದೇಶದಲ್ಲೇ ಕರ್ನಾಟಕವನ್ನ ನಂ.1 ರಾಜ್ಯ ಮಾಡ್ತೀವಿ, ನಾನು ನಿಮ್ಮ ಸೇವಕ – ಜನರ ಮುಂದೆ ಮೋದಿ ಭಾವುಕ

    ಬೆಳಗಾವಿ: ದೇಶದಲ್ಲಿ ಕರ್ನಾಟಕವನ್ನ ನಂ.1 ರಾಜ್ಯ ಮಾಡಲು ಬಿಜೆಪಿ (BJP) ಯೋಜನೆ ರೂಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು.

    ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ʻಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ನಾಡಿನ ಜನರಿಗೆ ನನ್ನ ನಮಸ್ಕಾರಗಳುʼ ಎನ್ನುತ್ತಾ ಕನ್ನಡದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ನಾನು ಮೊದಲು ನಿಮ್ಮೆಲ್ಲರ ಕ್ಷಮೆ ಕೇಳುವೆ, ಬರಲು ಸ್ವಲ್ಪ ತಡವಾಯಿತು ಎಂದು ಕ್ಷಮೆ ಕೋರಿದರು.

    ಮುಂದುವರಿದು, ಕಳೆದ 4 ದಿನಗಳಿಂದ ಕರ್ನಾಟಕದ ವಿವಿಧೆಡೆ ಭೇಟಿ ನೀಡಿದ್ದೇನೆ. ಈ ಸಲ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಬರುತ್ತದೆ. ಯುವಕರು, ಮಹಿಳೆಯರು, ರೈತರು, ಕಾರ್ಮಿಕರು, ನಗರ, ಹಳ್ಳಿ ಸೇರಿ ಎಲ್ಲ ಕಡೆ ಉತ್ಸಾಹ ಇದೆ. 4 ದಿಕ್ಕಿನಿಂದಲೂ ಒಂದೇ ಧ್ವನಿ ಕೇಳಿ ಬರುತ್ತಿದೆ. ʻಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರʼ ಎಂಬುದು ಕೇಳಿ ಬರುತ್ತಿದೆ. ಮತದಾನಕ್ಕೆ ಒಂದೇ‌ ವಾರ ಬಾಕಿ ಇದೆ. ಡಬಲ್ ಇಂಜಿನ್ ಸರ್ಕಾರ ಪು‌ನರಾಯ್ಕೆಯ ಶಂಖನಾದ ಜನರಿಂದ ಕೇಳಿ ಬಂದಿದೆ. ಇದಕ್ಕೆಲ್ಲ ಕಾರಣ ಬಡವರ, ಮಧ್ಯಮವರ್ಗದ ವಿಶ್ವಾಸ ಗಳಿಸಿದ್ದು ಎಲ್ಲರ ವಿಶ್ವಾಸ ಗಳಿಸಿದ್ದೆ ಇದಕ್ಕೆಲ್ಲ‌ ಕಾರಣ ಎಂದು ಹೇಳಿದರು. ಇದನ್ನೂ ಓದಿ: ಎಸಿಎಫ್‌ ಆಯ್ಕೆ ಮುಸುಕಿನ ಗುದ್ದಾಟ – ಸ್ಪರ್ಧಾಕಾಂಕ್ಷಿಗಳ ಹಿತ ಕಾಯುವಂತೆ KSCEAA ಒತ್ತಾಯ

    ಕರ್ನಾಟಕದಲ್ಲಿ ಈಗ ವಿಮಾನ ನಿಲ್ದಾಣ, ಆಧುನಿಕ ರೈಲ್ವೆ ನಿಲ್ದಾಣಗಳು ಆಗುತ್ತಿವೆ. ಕರ್ನಾಟಕವನ್ನು ನಂ.1 ಮಾಡಲು ಬಿಜೆಪಿ ಯೋಜನೆ ರೂಪಿಸಿದೆ. ಹಾಗಾಗಿ ಬಿಜೆಪಿಗೆ ಮತ ಹಾಕಿದರೆ, ದೇಶದಲ್ಲೇ ಕರ್ನಾಟಕವನ್ನು ನಂ.1 ಮಾಡಲು ಮತ ಹಾಕಿದಂತೆ ಎಂದು ಎಚ್ಚರಿಸಿದರು.

    ಕರ್ನಾಟಕದ ಜನ ಕಾಂಗ್ರೆಸ್, ಜೆಡಿಎಸ್‌ನ ಶಾರ್ಟ್ ಕಟ್ ಸರ್ಕಾರದ ಬಗ್ಗೆ ಎಚ್ಚರಬಾಗಿರಬೇಕು. ಶಾರ್ಟ್ ಕಟ್ ರಾಜಕಾರಣ ಮಾಡುವುದು ಅಂದ್ರೆ ಸಮಾಜವನ್ನು ವಿಭಜಿಸಿದಂತೆ. ಇಂತಹ ರಾಜಕೀಯ ಮಾಡುವವರು ಒಡೆದು ಆಳುವ ನೀತಿ ಅನುಸರಿಸಿದಂರತೆ. ಇದು ವಿಕಾಸದ ದಾರಿ ಆಗುವುದಿಲ್ಲ. ಈ ಶಾರ್ಟ್ ಕಟ್ ರಾಜಕಾರಣದಿಂದ ಅಭಿವೃದ್ಧಿ ಆಗುವುದಿಲ್ಲ. ಹಿಂದೆಲ್ಲ ಅವರು ಮಾಡಿರಬಹುದು. ಆದರೆ, ಇದು 3ನೇ ಪೀಳಿಗೆಯ ಸಮಾಜ ಇದೆ. ಈ ಯುವ ಪೀಳಿಗೆ ಶಾರ್ಟ್ ಕಟ್‌ ನವರ ಕೈಗೆ ಅಧಿಕಾರ ಕೊಡುವುದಿಲ್ಲ. ದೇಶದಲ್ಲಿ ಅಸಮಾನತೆ ಹೋಗಲಾಡಿಸಿದ್ದು ಬಿಜೆಪಿ ಸರ್ಕಾರ, ಕರ್ನಾಟಕದಲ್ಲಿ ಬಿಜೆಪಿ ಸಮತೋಲನದ ಆಡಳಿತ ಮಾಡುತ್ತಿದೆ. ಒಗ್ಗಟ್ಟಿನಲ್ಲಿ ಕರ್ನಾಟಕ ಸರ್ಕಾರದ ಭವಿಷ್ಯ ಇದೆ ಎಂಬುದನ್ನ ಅರಿತು, ನೀವೆಲ್ಲರೂ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.

    ಜನಸೇವೆಯೇ ಜನಾರ್ಧನ ಸೇವೆ. ಬಿಜೆಪಿ ನಿಮ್ಮ ಸೇವಕನಂತೆ ಕೆಲಸ ಮಾಡುತ್ತದೆ. ನಾನು ಸೇವಕನಂತೆ ಕೆಲಸ ಮಾಡುತ್ತಿರುವೆ. ಆದ್ರೆ ಕಾಂಗ್ರೆಸ್ ಸೇವೆ ದೆಹಲಿಯಲ್ಲಿನ ಕುಟುಂಬದ ಮೇಲೆ ಇದೆ. ಕಾಂಗ್ರೆಸ್ ರಿಮೋಟ್ ಇರುವುದು ದೆಹಲಿಯ ಒಂದು ಕುಟುಂಬದ ಮನೆಯಲ್ಲಿ. ಜೆಡಿಎಸ್ ಒಂದು ಪರಿವಾರದ ಪ್ರೈವೆಟ್ ಲಿಮಿಟೆಡ್ ಕಂಪನಿ. ಆದರೆ ಮೋದಿಗೆ ಈ ಕುಟುಂಬ ರಾಜಕಾರಣ ಗೊತ್ತಿಲ್ಲ. ಜನರೇ ನನ್ನ ಪರಿವಾರ, ನನ್ನ ಕುಟುಂಬ. ಜನರ ಸುಖ-ದುಃಖಗಳೇ ನನಗೆ ನನ್ನ ಕುಟುಂಬದ ಸುಖ-ದುಃಖಗಳಿದ್ದಂತೆ ಎಂದು ಭಾವುಕರಾದರು. ಇದನ್ನೂ ಓದಿ: ಭಕ್ತ ಅಂತ ಹೇಳಿಕೊಳ್ಳೋದಲ್ಲ ಆಂಜನೇಯನ ತರ ಕೆಲಸ ಮಾಡಬೇಕು: ಡಿಕೆಶಿಗೆ ಸುಧಾಕರ್ ತಿರುಗೇಟು

    ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನ ಎಲ್ಲ ಕಡೆ ತಿರಸ್ಕಾರ ಮಾಡಲಾಗಿದೆ. ದೇಶದಲ್ಲಿ ಮೂರು ರಾಜ್ಯದಲ್ಲಿ ಮಾತ್ರ ಕಾಂಗ್ರೆಸ್ ಇದೆ. ಜೆಡಿಎಸ್‌ ಮೂರು ಜಿಲ್ಲೆಯ ಪಕ್ಷ. 2018ರಲ್ಲಿ ಅವರೊಂದಿಗೆ ಸೇರಿ ಸರ್ಕಾರ ಮಾಡಿದ್ದರು. ಕಾಂಗ್ರೆಸ್ ಮುಳುಗುತ್ತಿರುವ ಹಡಗಾಗಿದೆ. ಇವರಿಗೆ ತಮ್ಮ ಭವಿಷ್ಯ ನಿರ್ಮಾಣವೇ ಗೊತ್ತಿಲ್ಲ. ಇಂಥವರು ಜನರ ಭವಿಷ್ಯ ನಿರ್ಮಾಣ ಮಾಡುತ್ತಾರಾ. ನಾನು ಹೇಳುತ್ತಿರುವುದು ಕೇವಲ ಭಾಷಣದ ಮಾತುಗಳಲ್ಲ. ಈ ಹಿಂದೆಯೂ ನುಡಿದಂತೆ ನಡೆದಿದ್ದೇನೆ. ಇವತ್ತು ಮೆಡಿಕಲ್, ತಾಂತ್ರಿಕ ಸ್ಪರ್ಧಾತ್ಮಕ ಪರೀಕ್ಷೆ, ಎಲ್ಲ ಭರ್ತಿ ಪರೀಕ್ಷೆಗಳು ಸ್ಥಳೀಯ ಭಾಷೆಯಲ್ಲಿ ಆಗುತ್ತಿವೆ. ಇದನ್ನೆಲ್ಲ ಜನರಿಗಾಗಿ ನಾವು ಮಾಡಿದ್ದೇವೆ ಎಂದು ತಮ್ಮ ಸರ್ಕಾರದ ಸಾಧನೆಗಳನ್ನ ಪ್ರಸ್ತುತಪಡಿಸಿದರು.

  • `ನಮೋ’ ರೋಡ್ ಶೋ; ಮೈಸೂರಿನ ಈ ಮಾರ್ಗಗಳಲ್ಲಿಂದು ವಾಹನ ಸಂಚಾರ ಬಂದ್

    `ನಮೋ’ ರೋಡ್ ಶೋ; ಮೈಸೂರಿನ ಈ ಮಾರ್ಗಗಳಲ್ಲಿಂದು ವಾಹನ ಸಂಚಾರ ಬಂದ್

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಅದ್ಧೂರಿ ರೋಡ್‌ಶೋ ನಡೆಸಿರುವ ಪ್ರಧಾನಿ ಮೋದಿ ಅವರು ಭಾನುವಾರ ಮೈಸೂರಿನ ವಿವಿಧೆಡೆ ರೋಡ್ ಶೋ (Modi Roadshow) ನಡೆಸುತ್ತಿದ್ದು, ವಿವಿಧ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

    5 ಕ್ಷೇತ್ರಗಳ ಮತದಾರರ ಮನ ಗೆಲ್ಲಲು ಅಖಾಡಕ್ಕಿಳಿದಿರುವ ಮೋದಿ ದಸರಾ ಜಂಬೂ ಸವಾರಿ ಮಾರ್ಗದಲ್ಲಿ ಮೋದಿ ರೋಡ್ ಶೋ ನಡೆಸಲಿದ್ದಾರೆ. ಗನ್‌ಹೌಸ್ ವೃತ್ತದಿಂದ ರೋಡ್ ಶೋ ಆರಂಭವಾಗಲಿದ್ದು, ಅದಕ್ಕೂ ಮುನ್ನ ಜೆಎಸ್‌ಎಸ್ ವಿದ್ಯಾಪೀಠದ ಮುಂಭಾಗದಲ್ಲಿರುವ ಬಸವ ಪುತ್ಥಳಿಗೆ ಮಾಲಾರ್ಪಣೆ ಮಾಡಲಿದ್ದಾರೆ. ಇದನ್ನೂ ಓದಿ: ಮೋದಿ ʻಮನ್‌ ಕಿ ಬಾತ್‌ʼ100ನೇ ಸಂಚಿಕೆ ಇಂದು ಪ್ರಸಾರ

    ರೋಡ್ ಶೋಗೆ ಸಜ್ಜಾದ ಮೈಸೂರು: ಮೈಸೂರಿನ 5 ಕ್ಷೇತ್ರಗಳನ್ನ ಗುರಿಯಾಗಿಸಿ ಚುನಾವಣಾ ಪ್ರಚಾರ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸ್ಕೃತ ಪಾಠ ಶಾಲೆ ಸರ್ಕಲ್, ಕಾಪೋರೇಷನ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಕೆ.ಆರ್ ಸರ್ಕಲ್ ಆಯುರ್ವೇದ ಸರ್ಕಲ್, ಹಳೆ ಆರ್‌ಎಂಸಿ, ಹೈವೆ ಸರ್ಕಲ್, ಮಿಲೀನಿಯಂ ಸರ್ಕಲ್ ವರೆಗೆ ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರೀಕರಿಗೆ ಕೂರಲು ದೇವರಾಜ ಮಾರುಕಟ್ಟೆ, ಹಳೆ ಎಪಿಎಂಸಿ ಸರ್ಕಲ್, ಗನ್ ಹೌಸ್ ಸೇರಿದಂತೆ 5 ಕಡೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 1 ಗಂಟೆ ಸಮಯದಲ್ಲಿ 4 ಕಿಮೀ ರ‍್ಯಾಲಿ ನಡೆಯಲಿದೆ. ಸಕಲ ಸಿದ್ಧತೆಗಳೊಂದಿಗೆ ಅಧಿಕಾರಿಗಳು ಕಾದು ಕುಳಿತಿದ್ದಾರೆ.

    ಬೇಲೂರಿನಿಂದ ಸೇನಾ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಮೋದಿ, ಸಂಜೆ 5.30ಕ್ಕೆ ಮೈಸೂರಿನ ಓವೆಲ್ ಮೈದಾನಕ್ಕೆ ಬರಲಿದ್ದಾರೆ. 5.45 ರಿಂದ ಮೋದಿ ರೋಡ್ ಶೋ ಆರಂಭವಾಗಲಿದೆ. ರೋಡ್ ಶೋ ಮುಗಿಸಿ ರಿಂಗ್ ರಸ್ತೆ ಮಾರ್ಗವಾಗಿ ಮಂಡಕಳ್ಳಿ ವಿಮಾನ ನಿಲ್ದಾಣ ತಲುಪಲಿರುವ ಮೋದಿ, ವಿಶೇಷ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ

    ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಮಾರ್ಗಗಳಲ್ಲಿ ಬೆಳಗ್ಗೆ 12 ರಿಂದ ರಾತ್ರಿ 8 ಗಂಟೆವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಅದಕ್ಕಾಗಿ ಪರ್ಯಾಯ ಮಾರ್ಗಗಳನ್ನ ಕಲ್ಪಿಸಲಾಗಿದೆ. ಇದನ್ನೂ ಓದಿ: ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ – ಕನ್ನಡದಲ್ಲೇ ಮೋದಿ ಘೋಷಣೆ

    ಯಾವ್ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?
    – ಕೌಟಿಲ್ಯ ಸರ್ಕಲ್ ನಿಂದ ಮುಡಾ ಜಂಕ್ಷನ್ ವರೆಗಿನ ರಾಧಕೃಷ್ಣ ಮಾರ್ಗ.
    – ಮುಡಾ ಸರ್ಕಲ್ ನಿಂದ ರಾಮಸ್ವಾಮಿ ಸರ್ಕಲ್ ವರೆಗಿನ ಜೆಎಲ್‌ಬಿ ರಸ್ತೆ.
    – ರಾಮಸ್ವಾಮಿ ಸರ್ಕಲ್ ನಿಂದ ಗನ್ ಹೌಸ್ ವರೆಗಿನ ಚಾಮರಾಜ ಜೋಡಿ ರಸ್ತೆ.
    – ಬಸವೇಶ್ವರ ವೃತ್ತದಿಂದ ಹೈವೆ ವೃತ್ತದವರೆಗಿನ ಸಯ್ಯಾಜಿರಾವ್ ರೋಡ್.
    – ಹೈವೇ ಸರ್ಕಲ್ ನಿಂದ ಎಲ್‌ಐಸಿ ಸರ್ಕಲ್ ವರೆಗಿನ ನೆಲ್ಸನ್ ಮಂಡೇಲ ರಸ್ತೆ.
    – ಎಲ್‌ಐಸಿ ಸರ್ಕಲ್ ನಿಂದ ಕೆಂಪೇಗೌಡ ವೃತ್ತದವರೆಗಿನ ಹಳೇ ಮೈಸೂರು ಬೆಂಗಳೂರು ರಸ್ತೆ.
    – ಕೆಂಪೇಗೌಡ ಸರ್ಕಲ್ ನಿಂದ ಮೈಸೂರು ವಿಮಾನ ನಿಲ್ದಾಣದವರೆಗಿನ ರಿಂಗ್ ರಸ್ತೆ.

  • ಮೋದಿ ರೋಡ್‌ಶೋ – ಕಾಡಿ ಬೇಡಿ ಕೊನೆಗೂ ಮದುವೆಗೆ ಹೋಗಲು ಅನುಮತಿ ಪಡೆದ ಮದುಮಗ

    ಮೋದಿ ರೋಡ್‌ಶೋ – ಕಾಡಿ ಬೇಡಿ ಕೊನೆಗೂ ಮದುವೆಗೆ ಹೋಗಲು ಅನುಮತಿ ಪಡೆದ ಮದುಮಗ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಏ.29) ಬೆಂಗಳೂರಿನಲ್ಲಿ ರೋಡ್‌ಶೋ (Modi Roadshow) ನಡೆಸಲಿರುವ ಹಿನ್ನೆಲೆಯಲ್ಲಿ ಮದುವೆಗೆ ತೆರಳಲು ಮದುಮಗನಿಗೆ ಅನುಮತಿಯೇ ಇಲ್ಲದಂತಾಗಿತ್ತು.

    ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಅದ್ಧೂರಿ ಪ್ರಚಾರಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಮೋದಿ ಹೆಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ನಂತರ ಬಿಐಇಸಿ ನಿಂದ ನೈಸ್‌ ರಸ್ತೆ ಮೂಲಕ ಮಾಗಡಿ ರಸ್ತೆವರೆಗೆ ರೋಡ್‌ ಶೋ ನಡೆಲಿದ್ದಾರೆ. ಆದ್ರೆ ಮಾಗಡಿ ರೋಡ್ ನಲ್ಲಿರೋ ಅಕ್ಷಯ್ ಕಲ್ಯಾಣ ಮಂಟಪದಲ್ಲಿ ಏಪ್ರಿಲ್‌ 29, 30 ರಂದು ಮದುವೆ ನಿಗದಿಯಾಗಿದ್ದು, ಮದುವೆಗೆ ತೆರಳಲು ಮಧುಮಗನಿಗೆ ಅನುಮತಿ ನಿರಾಕರಿಸಲಾಗಿತ್ತು. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ

    ವಧು ಮಮತಾ ಹಾಗೂ ವರ ರುದ್ರೇಶ್‌ ನಡುವೆ ಮದುವೆ ನಿಶ್ಚಯವಾಗಿತ್ತು. ಮಧುಮಗ ಕಲ್ಯಾಣ ಮಂಟಪಕ್ಕೆ ತೆರಳಲು ಕಾರಿನಲ್ಲಿ ಕಳಶದೊಂದಿಗೆ ಬಂದಿದ್ದ. ಈ ವೇಳೆ ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದರು. ಕೊನೆಗೆ ಇವತ್ತು ನನ್ನ ಮದುವೆಯಿದೆ, ನಾನು ಹೋಗಲೇಬೇಕು ಬಿಡಿ ಎಂದು ವರ ಕೇಳಿಕೊಂಡಿದ್ದಾನೆ. ನಂತರ ಪೊಲೀಸರು ಮಧುಮಗ ಮತ್ತು ಅವನ ಕುಟುಂಬಸ್ಥರನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ

  • ಮಾ.25 ರಂದು ಮೋದಿ ಬೆಂಗಳೂರಿಗೆ – ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

    ಮಾ.25 ರಂದು ಮೋದಿ ಬೆಂಗಳೂರಿಗೆ – ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ

    ಬೆಂಗಳೂರು: ಮಾರ್ಚ್‌ 25ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರು ಪ್ರವಾಸದಲ್ಲಿದ್ದು, ವೈಟ್ ಫೀಲ್ಡ್ – ಕೆ.ಆರ್.ಪುರಂ ನಡುವಿನ ವೈಟ್‌ಫೀಲ್ಡ್‌ ಕಾಡುಗೋಡಿ ಮೆಟ್ರೋ ನಿಲ್ದಾಣಕ್ಕೆ (Whitefield Metro Station) ಚಾಲನೆ ನೀಡಲಿದ್ದಾರೆ. ಆದ್ದರಿಂದ ವೈಟ್‌ಫೀಲ್ಡ್‌ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರವನ್ನ ಸಂಪೂರ್ಣ ನಿರ್ಬಂಧಿಸಲಾಗಿದೆ.

    ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ರ ವರೆಗೆ ಸಾರ್ವಜನಿಕ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ವೈಟ್ ಫೀಲ್ಡ್ ಸುತ್ತಮುತ್ತ ಸಂಚರಿಸುವವರಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

    ಎಲ್ಲೆಲ್ಲಿ ನಿರ್ಬಂಧ?
    ವರ್ತೂರು ಕೋಡಿಯಿಂದ ಹೋಫ್ ಫಾರಂ ಜಂಕ್ಷನ್ ಮೂಲಕ ಕನ್ನಮಂಗಲ ಗೇಟ್ ವರೆಗೆ, ಚನ್ನಸಂದ್ರದಿಂದ ಹೋಫ್ ಫಾರಂ ಮೂಲಕ ಹೂಡಿ ಸರ್ಕಲ್ ವರೆಗೆ ಹಾಗೂ ಕುಂದಲಹಳ್ಳಿ ರಸ್ತೆಯಿಂದ ವೈದೇಹಿ ಅಸ್ಪತ್ರೆ ಮೂಲಕ ಹೋಫ್ ಫಾರಂ ಜಂಕ್ಷನ್ ವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಇದನ್ನೂ ಓದಿ: ಒಳಮೀಸಲಾತಿ ಹಂಚಿಕೆ; ಪ್ರತ್ಯೇಕ ಮೀಸಲಾತಿ ರದ್ದು – EWS ಕೋಟಾ ವ್ಯಾಪ್ತಿಗೆ ಮುಸ್ಲಿಮರು

    ಎಲ್ಲೆಲ್ಲಿ ಪರ್ಯಾಯ ಮಾರ್ಗ?
    ಏರ್‌ಪೋರ್ಟ್‌ ರಸ್ತೆಗೆ ಹೋಗುವವರು ವರ್ತೂರು ಕೋಡಿಯಿಂದ ಕುಂದಲಹಳ್ಳಿ ಬ್ರಿಡ್ಜ್ ಮೂಲಕ ಹಳೇ ಏರ್‌ಪೋರ್ಟ್‌ ರಸ್ತೆ ತಲುಪಬಹುದಾಗಿದೆ. ವರ್ತೂರು ಕೋಟಿ ತಲುಪುವವರು ಚನ್ನಸಂದ್ರ ವೃತ್ತದಿಂದ ನಾಗೊಂಡನಹಳ್ಳಿ, ಇಮ್ಮಡಿಹಳ್ಳಿ ಹಗದೂರು ಮೂಲಕ ತಲುಪಬಹುದು. ಚನ್ನಸಂದ್ರ ತಲುಪುವವರು ಕಾಟಂನಲ್ಲೂರು ಕ್ರಾಸ್ ನಿಂದ ಶೀಗೆಹಳ್ಳಿ ಗೇಟ್, ಕಾಡುಗೋಡಿ ನಾಲಾರಸ್ತೆ ಮೂಲಕ ತಲುಪಬಹುದು.

    ಅಲ್ಲದೇ ಕುಂದಲಹಳ್ಳಿಗೆ ಹೋಗಬೇಕಾದವರು ಹೂಡಿ ಸರ್ಕಲ್ ನಿಂದ ಗ್ರಾಫೈಟ್ ರಸ್ತೆ ಮೂಲಕ ತಲುಪಬಹುದು. ಕಾಟಂನಲ್ಲೂರು ಕ್ರಾಸ್‌ಗೆ ಹೋಗುವವರು ಹೂಡಿ ಸರ್ಕಲ್ ನಿಂದ ಅಯ್ಯಪ್ಪನಗರ, ಭಟ್ಟರಹಳ್ಳಿ-ಮೇಡಹಳ್ಳಿ ಮೂಲಕ ಕಾಟಂನಲ್ಲೂರು ಕ್ರಾಸ್ ತಲುಪಬಹುದಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ಅನರ್ಹತೆ ವಿಚಾರ ತಿಳಿದು ಹೈಕೋರ್ಟ್‍ಗೆ ಓಲೆಕಾರ್ ಅರ್ಜಿ

    ಪ್ರಧಾನಿ ನರೇಂದ್ರ ಮೋದಿ ಆಗಮನದ ಸಮಯದಲ್ಲಿ ಸಂಚಾರ ದಟ್ಟಣೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

  • ಮಾ.25ರಂದು ಮತ್ತೆ ಮೋದಿ ರಾಜ್ಯಕ್ಕೆ – ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋಗೆ ಮುಹೂರ್ತ ಫಿಕ್ಸ್‌

    ಮಾ.25ರಂದು ಮತ್ತೆ ಮೋದಿ ರಾಜ್ಯಕ್ಕೆ – ಬೆಂಗಳೂರಿನಲ್ಲಿ ಮೆಗಾ ರೋಡ್‌ ಶೋಗೆ ಮುಹೂರ್ತ ಫಿಕ್ಸ್‌

    ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Assembly Election) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ರಾಜ್ಯದಲ್ಲಿ ಪ್ರಚಾರ ಬಿರುಸುಗೊಳಿಸಿದ್ದಾರೆ. ಇದೇ ಮಾರ್ಚ್‌ 25 ರಂದು ಮತ್ತೊಮ್ಮೆ ರಾಜ್ಯಕ್ಕೆ ಮೋದಿ ಎಂಟ್ರಿ ಕೊಡ್ತಿದ್ದಾರೆ. ಬೆಂಗಳೂರಿನಲ್ಲಿ ರೋಡ್ ಶೋ (Modi RoadShow) ಮಾಡುವ ಮೂಲಕ ಮೋಡಿ ಮಾಡಲಿದ್ದಾರೆ.

    28 ವಿಧಾನಸಭಾ ಕ್ಷೇತ್ರಗಳಿರುವ ಬೆಂಗಳೂರಿನ‌‌ (Bengaluru) ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, 20 ಕ್ಷೇತ್ರಗಳಲ್ಲಿ ಗೆಲ್ಲಬೇಕೆಂಬ‌ ಗುರಿ ಹೊಂದಿದೆ. ಈ‌ ನಿಟ್ಟಿನಲ್ಲಿ ಮೋದಿಯವರು ಬೆಂಗಳೂರಿಗೆ ವಿಶೇಷ ಆದ್ಯತೆ ಕೊಟ್ಟಿದ್ದಾರೆ. 25 ರಂದು ಬೆಂಗಳೂರಿಗೆ ಬರುತ್ತಿರುವ ಅವರು, ಅಂದು ನೂತನ ಮೆಟ್ರೋ ಮಾರ್ಗ (ವೈಟ್ ಫೀಲ್ಡ್, ಕೆ.ಆರ್ ಪುರದವರೆಗಿನ ಮಾರ್ಗ) ಲೋಕಾರ್ಪಣೆಗೊಳಿಸಲಿದ್ದಾರೆ. ಅದೇ ಸಂದರ್ಭದಲ್ಲಿ ಮೆಗಾ ರೋಡ್ ಶೋ‌ ನಡೆಸಿ ರಾಜಧಾನಿಯ ಮತದಾರರನ್ನ ಸೆಳೆಯುವ ಕಸರತ್ತು ನಡೆಸಲಿದ್ದಾರೆ.

    ಈ ಬಾರಿಯೂ ಮೋದಿಯವರು ಅಭಿವೃದ್ಧಿಯ ಮಂತ್ರದಂಡ ಹಿಡಿದುಕೊಂಡೇ ಆಗಮಿಸುತ್ತಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ವೈಟ್‌ಫೀಲ್ಡ್ ಮೆಟ್ರೋ (Namma Metro) ಸ್ಟೇಷನ್‌ಗೆ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ್ದಾರೆ. ಜೊತೆಗೆ ಟ್ವೀಟ್‌ ಮೂಲಕ ಪ್ರಧಾನಿಯಿಂದಲೇ ಉದ್ಘಾಟನೆ ಅಂತಾ ಶಾಸಕರು ದೃಢಪಡಿಸಿದ್ದಾರೆ. ಇದನ್ನೂ ಓದಿ: BJP ಚುನಾವಣೆ ಗೆಲ್ಲೋಕೆ ರೌಡಿ ಶೀಟರ್‌ಗಳನ್ನ ಸೇರಿಸಿಕೊಳ್ತಿದೆ – ಹೆಚ್‌ಡಿಕೆ ವಾಗ್ದಾಳಿ

    ʻಈ ಮೆಟ್ರೋ ಮಾರ್ಗ ಈಗಾಗಲೇ ಟ್ರಯಲ್ ರನ್ ಮುಗಿಸಿ ಉದ್ಘಾಟನೆಗೆ ಸಜ್ಜಾಗಿದೆ. ವೈಟ್ ಫೀಲ್ಡ್‌ನಿಂದ ಕೆ.ಆರ್ ಪುರ 13.75 ಕಿಮೀ ಸಂಪೂರ್ಣವಾಗಿದ್ದು ಪ್ರಧಾನಿ ಮೋದಿಯಿಂದಲೇ ಉದ್ಘಾಟನೆಗೊಳ್ಳುತ್ತಿದೆ. ಈ ಮೆಟ್ರೋ ಮಾರ್ಗಕ್ಕೆ ಚಾಲನೆ ಕೊಡುವ ಮೂಲಕ ಬೆಂಗಳೂರಿನ ಟೆಕ್ಕಿಗಳಿಗೆ ಪಿಎಂ ಗಿಫ್ಟ್ ಕೊಡುತ್ತಿದ್ದಾರೆ. ಇದರೊಂದಿಗೆ ಟ್ರಾಫಿಕ್ ದಟ್ಟಣೆಯಿಂದ ಐಟಿ ಕಾರಿಡಾರ್‌ಗೆ ರಿಲೀಫ್ ಸಿಗಲಿದೆ. ವೈಟ್ ಫೀಲ್ಡ್ ನಿಂದ ಕೆ.ಆರ್.ಪುರ ಪ್ರಯಾಣ 1 ಗಂಟೆಯಿಂದ ಇನ್ಮುಂದೆ 20-25 ನಿಮಿಷಕ್ಕೆ ಕಡಿತವಾಗಲಿದೆʼ ಎಂದು ಲಿಂಬಾವಳಿ ತಿಳಿಸಿದ್ದಾರೆ. ಇದನ್ನೂ ಓದಿ:  ಸಿದ್ದರಾಮಯ್ಯ ಅಲ್ಲದೇ ಯಾರೇ ಸ್ಪರ್ಧೆ ಮಾಡಿದ್ರು ನನ್ನ ಗೆಲುವು ಶತಸಿದ್ಧ – ಕೋಲಾರ ಜೆಡಿಎಸ್ ಅಭ್ಯರ್ಥಿ ಶ್ರೀನಾಥ್

    ಇದಕ್ಕೂ ಮುನ್ನ ವೈಟ್‌ಫೀಲ್ಡ್ ನಲ್ಲಿ 1.5 ಕಿಮೀ ವರೆಗೆ ಪ್ರಧಾನಿ ಮೆಗಾ ರೋಡ್ ಶೋ ನಡೆಸಲಿದ್ದಾರೆ. ಮಹಾದೇವಪುರ ಕ್ಷೇತ್ರದ ಸತ್ಯಸಾಯಿ ಆಶ್ರಮದಿಂದ ವೈಟ್‌ಫೀಲ್ಡ್ ಮೆಟ್ರೋ ಸ್ಟೇಷನ್ ವರೆಗೆ ಮೋದಿ ರೋಡ್ ಶೋ ನಡೆಯಲಿದೆ. ಬಳಿಕ ಮೆಟ್ರೋ ಸ್ಟೇಷನ್ ಉದ್ಘಾಟಿಸಿ ಕೆ.ಆರ್ ಪುರ ಮೆಟ್ರೋ ಸ್ಟೇಷನ್ ವರೆಗೂ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲಿದ್ದಾರೆ. ಹಾಗಾಗಿ ಮೋದಿ ರೋಡ್‌ ಶೋ ಯಶಸ್ವಿ ಮಾಡಲು ಬಿಜೆಪಿ ಅಪಾರ ಜನ ಸೇರಿಸಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ.

    ಐಟಿಬಿಟಿ ವಲಯ, ಉದ್ಯಮಿಗಳು, ಸುಶಿಕ್ಷಿತರು ಹೆಚ್ಚಾಗಿರುವ ಮಹಾದೇವಪುರ ಕ್ಷೇತ್ರದಲ್ಲಿ ಮೋದಿ ರೋಡ್ ಶೋ ಮೂಲಕ‌ ಈ ವಲಯಗಳ ಮತದಾರರನ್ನು ಸೆಳೆಯಲು ಕಸರತ್ತು ನಡೆಸಲಿದ್ದಾರೆ. ಬೆಂಗಳೂರಿನ ರೋಡ್ ಶೋ ಮೂಲಕ ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಜಿಲ್ಲೆಗಳ ಮೇಲೂ ಪ್ರಧಾನಿಯವರು ಪ್ರಭಾವ ಬೀರುವ ನಿರೀಕ್ಷೆ ಇದೆ. ಆ ಮೂಲಕ ಮೋದಿ ಅಲೆ ಸೃಷ್ಟಿಸಿ ಮತಬೇಟೆಗೆ ಬಿಜೆಪಿ ಪ್ಲಾನ್ ಮಾಡಿಕೊಂಡಿದೆ.