Tag: Modi Road Show

  • ಶಂಕರಾಚಾರ್ಯರು ಸಂಚರಿಸಿದ್ದ ರಸ್ತೆಯಲ್ಲಿ ಮೋದಿ 6 ಕಿ.ಮೀ ರೋಡ್‌ ಶೋ – ಮಂಗಳವಾರವೇ ನಾಮಪತ್ರ ಸಲ್ಲಿಕೆ ಯಾಕೆ?

    ಶಂಕರಾಚಾರ್ಯರು ಸಂಚರಿಸಿದ್ದ ರಸ್ತೆಯಲ್ಲಿ ಮೋದಿ 6 ಕಿ.ಮೀ ರೋಡ್‌ ಶೋ – ಮಂಗಳವಾರವೇ ನಾಮಪತ್ರ ಸಲ್ಲಿಕೆ ಯಾಕೆ?

    ಲಕ್ನೋ: ಮಂಗಳವಾರ ನಾಮಪತ್ರ ಸಲ್ಲಿಸಲಿರುವ ಪ್ರಧಾನಿ ಮೋದಿ (PM Narendra Modi) ಇಂದೇ ಸ್ವಕ್ಷೇತ್ರ ವಾರಣಾಸಿಗೆ (Varanasi) ತೆರಳಿದ್ದು, ಭರ್ಜರಿ ರೋಡ್‌ಶೋ (Road Show) ನಡೆಸಿದ್ದಾರೆ. ಮಾಳವೀಯ ವೃತ್ತದಿಂದ ಆರಂಭವಾದ ರೋಡ್ ಶೋ ಕಾಶಿ ವಿಶ್ವನಾಥ ಧಾಮದವರೆಗೂ 6 ಕಿಲೋಮೀಟರ್ ಉದ್ದ ನಡೆಯಿತು.

    ಸಂತ ರವಿದಾಸ್ ಗೇಟ್, ಅಸ್ಸಿ ಘಾಟ್, ಶಿವಲೀಲಾ ಘಾಟ್, ಸೋನಾರ್‌ಪುರ, ಜಂಗಮವಾಡಿ, ಗೋದೌಲಿಯಾವನ್ನು ಮೋದಿ ರೋಡ್ ಶೋ ಹಾದು ಹೋಯ್ತು. 1200 ವರ್ಷಗಳ ಹಿಂದೆ ಶಂಕರಾಚಾರ್ಯರು (Shankaracharya) ಇದೇ ರಸ್ತೆಯಲ್ಲಿ ಓಡಾಡಿದ್ದರು ಎಂಬ ಪ್ರತೀತಿ ಇದೆ. ಮೋದಿ ಸಾಗಿದ ರಸ್ತೆಯಲ್ಲಿ 25 ದೇವಸ್ಥಾನಗಳು, 60ಕ್ಕೂ ಹೆಚ್ಚು ಆಶ್ರಮಗಳಿದ್ದು, ದಾರಿಯುದ್ದಕ್ಕೂ ಸಾವಿರಾರು ಮಂದಿ ಮೋದಿಗೆ ಹೂಮಳೆಯ ಸ್ವಾಗತ ನೀಡಿದರು.  ಇದನ್ನೂ ಓದಿ: ಹೇಮಂತ್‌ ಸೊರೆನ್‌ ಮಧ್ಯಂತರ ಜಾಮೀನು ಅರ್ಜಿ ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂ

    ಬಿಸ್ಮಿಲ್ಲಾ ಖಾನ್ ಕುಟುಂಬದ ಶಹನಾಯಿ ವಾದನವೂ ಇತ್ತು. ಕಲಾ ತಂಡಗಳ ವೈಭವವೂ ಕಂಡುಂತು. 5000ಕ್ಕೂ ಹೆಚ್ಚು ಮಹಿಳೆಯರು, ಗುಜರಾತಿಗಳು, ಮರಾಠಿಗಳು, ಬೆಂಗಾಲಿಗಳು, ತಮಿಳರು, ಪಂಜಾಬಿಗಳು. ಹೀಗೆ ದೇಶದ ಎಲ್ಲಾ ಭಾಗದ ಮಂದಿ ಮೋದಿ ರೋಡ್‌ಶೋನಲ್ಲಿ ಪಾಲ್ಗೊಂಡಿದರು.

    ಜನರ ಪ್ರತಿಕ್ರಿಯೆ ನೋಡಿ ಪ್ರಧಾನಿ ಮೋದಿ ಫುಲ್ ಖುಷಿಯಾದರು. ಜನರತ್ತ ಕೈಬೀಸಿ, ಕಮಲದ ಚಿನ್ಹೆಯನ್ನು ತೋರಿಸಿದರು. ರೋಡ್‌ಶೋನಲ್ಲಿ ಮೋದಿ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಸೇರಿ ಹಲವರು ಪಾಲ್ಗೊಂಡಿದ್ದರು. ರೋಡ್‌ ಶೋ ಅಂತ್ಯವಾದ ಬಳಿಕ ಕಾಶಿ ವಿಶ್ವೇಶ್ವರನಿಗೆ ಮೋದಿ ಪೂಜೆ ಸಲ್ಲಿಸಿದರು. 10 ವರ್ಷದಲ್ಲಿ ವಾರಣಾಸಿ ಹೇಗೆ ಬದಲಾಗಿದೆ ಎಂಬುದನ್ನು ಲೇಸರ್ ಶೋ ಮೂಲಕ ಪ್ರಸ್ತುತ ಪಡಿಸಲಾಯಿತು. ಇದನ್ನೂ ಓದಿ: ಮಂಗಳವಾರ ರೇವಣ್ಣ ಬಿಡುಗಡೆ – ಕೋರ್ಟ್‌ನಲ್ಲಿ ವಾದ, ಪ್ರತಿವಾದ ಹೇಗಿತ್ತು? ಜಾಮೀನು ಷರತ್ತು ಏನು?

    ಮಂಗಳವಾರ ಯಾಕೆ?
    ನಾಳೆ ಗಂಗಾ ಸಪ್ತಮಿ. ಹಿಂದೂಗಳ ಪಾಲಿಗೆ ಪವಿತ್ರವಾದ ದಿನ. ಈ ದಿನ ಬ್ರಹ್ಮನ ಕಮಂಡಲದಿಂದ ಗಂಗೆ ಜನಿಸಿದಳು ಎಂಬ ನಂಬಿಕೆಯಿದೆ. ಗಂಗಾ ಸಪ್ತಮಿಯಂದು ಶುಭ ಅಭಿಜಿನ್ ಲಗ್ನದಲ್ಲಿ ಮೋದಿ ನಾಮಪತ್ರ ಸಲ್ಲಿಸುವುದು ಶ್ರೇಯಸ್ಕರ ಎಂದು ಪಂಡಿತ್ ಗಣೇಶ್ವರ್ ಶಾಸ್ತ್ರಿ ಸೂಚಿಸಿದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡುತ್ತಿದ್ದಾರೆ. ರಾಮಮಂದಿರ ಲೋಕಾರ್ಪಣೆಗೆ ಮಹೂರ್ತವನ್ನು ಇವರೇ ನೀಡಿದ್ದರು.

     

  • ನಾಳೆ ಶುಭಗಳಿಗೆಯಲ್ಲಿ ಮೋದಿ ನಾಮಪತ್ರ ಸಲ್ಲಿಕೆ – ಇಂದು ವಾರಣಾಸಿಯಲ್ಲಿ ಅದ್ಧೂರಿ ರೋಡ್‌ ಶೋ!

    ನಾಳೆ ಶುಭಗಳಿಗೆಯಲ್ಲಿ ಮೋದಿ ನಾಮಪತ್ರ ಸಲ್ಲಿಕೆ – ಇಂದು ವಾರಣಾಸಿಯಲ್ಲಿ ಅದ್ಧೂರಿ ರೋಡ್‌ ಶೋ!

    – ಮೋದಿ ಕಾರ್ಯಕ್ರಮದ ಲಿಸ್ಟ್‌ ಹೀಗಿದೆ…

    ಲಕ್ನೋ: ಸತತ 3ನೇ ಬಾರಿಗೆ ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರಧಾನಿ ನರೇಂದ್ರ ಮೋದಿ (PM Modi) ಅವರು, ಮೇ 14 ರಂದು (ಮಂಗಳವಾರ) ಬೆಳಗ್ಗೆ ಕಾಲಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಶುಭಗಳಿಗೆಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನಾದಿನವಾದ ಸೋಮವಾರ (ಇಂದು) ವಾರಣಾಸಿಯಲ್ಲಿ (Varanasi) ಬೃಹತ್‌ ರೋಡ್‌ ಶೋ ನಡೆಸಲಿದ್ದಾರೆ. ಇದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ.

    ಮೋದಿ ನಾಮಪತ್ರ ಸಲ್ಲಿಕೆ ವೇಳೆ ಲಕ್ಷಾಂತರ ಜನ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ವಾರಣಾಸಿಯಲ್ಲಿ ಅದ್ಧೂರಿ ರೋಡ್‌ ಶೋ (Modi Road Show) ನಡೆಯಲಿದೆ. ಶಂಖನಾದ (ಶಂಖನಾದ), ಡೋಲು, ವಾದ್ಯಗೋಷ್ಠಿಗಳು ಮೊಳಗಲಿವೆ, ಅನೇಕ ಪಂಡಿತರು ಮಂತ್ರಗಳ ಪಠಣ ಮಾಡಲಿದ್ದಾರೆ. ಹಾಗಾಗಿ ಹಬ್ಬದ ವಾತಾವರಣವೇ ಅಲ್ಲಿ ಸೃಷ್ಟಿಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.

    ಬಿಗಿ ಭದ್ರತೆ:
    ನಾಮಪತ್ರ ಸಲ್ಲಿಕೆಗೂ ಮುನ್ನಾದಿನ ಇಲ್ಲಿನ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ (Banaras Hindu University) ದ್ವಾರದಿಂದ ಅದ್ಧೂರಿ ರೋಡ್‌ ಶೋ ಆರಂಭವಾಗಲಿದೆ. ಅಲ್ಲಿ ಮೋದಿಯವರು ಬಿಎಚ್‌ಯು ಸಂಸ್ಥಾಪಕ ಮಹಾಮಾನ ಪಂ. ಮದನ್ ಮೋಹನ್ ಮಾಳವಿಯಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಕಾಶಿ ವಿಶ್ವನಾಥ ಧಾಮದ ಗೇಟ್ ಸಂಖ್ಯೆ-4 ರಲ್ಲಿ ರೋಡ್‌ ಶೋ ಮುಕ್ತಾಯಗೊಳ್ಳಲಿದೆ.

    ಮುಸ್ಲಿಂ ಸಮುದಾಯದಿಂದ ವಿಶೇಷ ಸ್ವಾಗತ:
    ಸರಿಸುಮಾರು 5 ಕಿಮೀ ವರೆಗೆ ರೋಡ್ ಶೋನಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದ 1 ಲಕ್ಷಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು, ಕಾಶಿ ನಿವಾಸಿಗಳು, ಕ್ರೀಡಾಪಟುಗಳು, ಕಲಾವಿದರು ಮತ್ತು ಸ್ಥಳೀಯರಲ್ಲದೇ ಇತರ ಪ್ರಮುಖರು ಭಾಗವಹಿಸಲಿದ್ದಾರೆ. ಮರಾಠಿ, ಗುಜರಾತಿ, ಬೆಂಗಾಲಿ, ಮಾಹೇಶ್ವರಿ, ಮಾರ್ವಾಡಿ, ತಮಿಳು ಮತ್ತು ಪಂಜಾಬಿ ಸಮುದಾಯಗಳ ಗುಂಪು ಪ್ರಧಾನಿ ಮೋದಿಯನ್ನು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಸ್ವಾಗತಿಸಲಿದೆ. 5,000 ಕ್ಕೂ ಹೆಚ್ಚು ಬಿಜೆಪಿ ಮಹಿಳಾ ಘಟಕದ ಕಾರ್ಯಕರ್ತರು ಭಾಗಿಯಾಗಲಿದ್ದು, 100 ಪಾಯಿಂಟ್‌ಗಳಲ್ಲಿ ಪುಷ್ಪವೃಷ್ಟಿ ಮಾಡಲಾಗುವುದು. ಮುಸ್ಲಿಂ ಸಮುದಾಯದವರೂ ಮೋದಿಗೆ ವಿಶೇಷ ಸ್ವಾಗತ ಕೋರಲಿದ್ದಾರೆ ಎಂದು ಕಾಶಿ ಪ್ರದೇಶ ಬಿಜೆಪಿ ವಕ್ತಾರ ನವರತನ್ ರಾಠಿ ತಿಳಿಸಿದ್ದಾರೆ.

    ರೋಡ್‌ ಶೋ ಬಳಿಕ ಮೋದಿ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ರಾತ್ರಿ ಬನಾರಸ್ ಲೋಕೋಮೋಟಿವ್ ವರ್ಕ್ಸ್‌ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಲಿದ್ದು, ಅಲ್ಲಿಯೇ ಪ್ರಮುಖ ನಾಗರಿಕರೊಂದಿಗೆ ಸಂವಾದ ನಡೆಸಲಿದ್ದಾರೆ. ಮೇ 14 ರಂದು (ಮಂಗಳವಾರ) ಅವರು ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ನಂತರ ತಮ್ಮ ನಾಮಪತ್ರವನ್ನು ಸಲ್ಲಿಸುತ್ತಾರೆ.

    ಮೋದಿ ಅವರು 2014 ಮತ್ತು 2019ರಲ್ಲಿ ವಾರಣಾಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸತತ 3ನೇ ಅವಧಿಗೆ ವಾರಣಾಸಿಯಿಂದಲೇ ಸ್ಪರ್ಧಿಸುತ್ತಿರುವ ಮೋದಿ ಹ್ಯಾಟ್ರಿಕ್‌ ಗೆಲುವಿನೊಂದಿಗೆ 3ನೇ ಬಾರಿಗೆ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದಾರೆ.

  • ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ನೀವು ಬಿಟ್ಟರೂ 40% ಕರ್ಮ ನಿಮ್ಮನ್ನ ಹಿಂಬಾಲಿಸುತ್ತಿದೆ ಮೋದಿಜೀ – ಟ್ವೀಟ್‌ನಲ್ಲಿ ಕಾಲೆಳೆದ ಸಿದ್ದು

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ನಡೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೃಹತ್ ರೋಡ್ ಶೋ (Road Show) ಯಶಸ್ವಿಯಾಗಿ ಸಂಪನ್ನಗೊಂಡಿದೆ.

    ಈ ನಡುವೆ ಪ್ರಧಾನಿ ರೋಡ್‌ ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದು‌ ಪ್ರತಿಪಕ್ಷ ನಾಯಕರಿಂದ ಟೀಕೆಗೆ ಅಸ್ತ್ರವಾಗಿದೆ. ಪ್ರಧಾನಿ ರೋಡ್‌ಶೋ ವೇಳೆ ಕ್ಲಿಕ್ಕಿಸಿದ ಫೋಟೋವೊಂದರಲ್ಲಿ ಮಳಿಗೆಯ ಮೇಲೆ 40% ಆಫರ್‌ ಇರುವ ಪೋಸ್ಟರ್‌ ಕಂಡುಬಂದಿದೆ. ಈ ಫೋಟೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ಸಿದ್ದರಾಮಯ್ಯ (Siddaramaiah) ʻನೀವು ಬಿಟ್ಟರೂ 40% ಕರ್ಮ ನಿಮ್ಮನ್ನು ಬಿಡದೆ ಹಿಂಬಾಲಿಸುತ್ತಿದೆ ಮೋದಿಜೀʼ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

    ಇದರೊಂದಿಗೆ ಕನ್ನಡಿಗರ ಮತಕ್ಕಿರುವ ಬೆಲೆ ಬದುಕಿಗಿಲ್ಲವೇ? ಘೋಷಣೆಯೊಂದಿಗೆ ಹಲವು ಪ್ರಶ್ನೆಗಳನ್ನು ಪ್ರಧಾನಿ ಮೋದಿ ಅವರಿಗೆ ಕೇಳಿದ್ದಾರೆ. ಗ್ರಾಮೀಣ ಬ್ಯಾಂಕಿಂಗ್‌, ಐಬಿಪಿಎಸ್‌, ಕೇಂದ್ರ ಸ್ವಾಮ್ಯದ ಸಂಸ್ಥೆಗಳ ನೇಮಕಾತಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಬರೆಯಲು ಅವಕಾಶ ನಿರಾಕರಿಸಿ ಹುಟ್ಟಿದ ನೆಲದಲ್ಲಿಯೇ ಕನ್ನಡಿಗ ಯುವಜನರಿಗೆ ಉದ್ಯೋಗ ವಂಚನೆ ಮಾಡಲಾಗಿದೆ. ಇವರು ಪ್ರತಿಭಟನೆ ನಡೆಸುವಾಗ ನ್ಯಾಯ ಕೊಡಿಸಲು ನೀವು ಯಾಕೆ ಬಂದಿರಲಿಲ್ಲ? ಇದನ್ನೂ ಓದಿ: ಮೇ7ರಂದು ಬೆಂಗಳೂರಿನಲ್ಲಿ ಮೋದಿ ಫೈನಲ್‌ ರೋಡ್‌ ಶೋ

    ಕಳೆದ 4 ಬಜೆಟ್‌ಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಲಾಗುವ ಅನುದಾನ ಶೇ.1.97ಕ್ಕಿಂತ ಮೇಲೆ ಏರಿಲ್ಲ. 2022ರಲ್ಲಿ ಸಿಎಜಿ ವರದಿ ಪ್ರಕಾರ 2022ರಲ್ಲಿ 1.62 ಲಕ್ಷ ವಿದ್ಯಾರ್ಥಿಗಳು ಶಾಲೆಗಳನ್ನ ತ್ಯಜಿಸಿದ್ದಾರೆ. 2020-21 ಮತ್ತು 2021-22ರ ಅವಧಿಯಲ್ಲಿ 1,965 ಸರ್ಕಾರಿ ಶಾಲೆಗಳನ್ನ ಮುಚ್ಚಲಾಗಿದೆ. ಶಿಕ್ಷಣವಂಚಿತ ಮಕ್ಕಳ ಭವಿಷ್ಯ ಹಾಳಾಗುವಾಗ ನ್ಯಾಯ ಕೊಡಿಸಲು ನೀವು ಏಕೆ ಬಂದಿರಲಿಲ್ಲ? ಎಂಬಿತ್ಯಾದಿ ಪ್ರಶ್ನೆಗಳನ್ನ ಪ್ರಧಾನಿ ಮುಂದಿಟ್ಟಿದ್ದಾರೆ.