Tag: Modi Government

  • ಮೋದಿ ಸರ್ಕಾರ GST ಸರಳೀಕರಣ ಮಾಡಿ ದಸರಾ, ದೀಪಾವಳಿ ಉಡುಗೊರೆ ಕೊಟ್ಟಿದೆ – ಮಹೇಶ್ ತೆಂಗಿನಕಾಯಿ

    ಮೋದಿ ಸರ್ಕಾರ GST ಸರಳೀಕರಣ ಮಾಡಿ ದಸರಾ, ದೀಪಾವಳಿ ಉಡುಗೊರೆ ಕೊಟ್ಟಿದೆ – ಮಹೇಶ್ ತೆಂಗಿನಕಾಯಿ

    -ಮಿಲಾದ್ ಉನ್ ನಬಿ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ಕೊಡಬಾರದು ಎಂದ ಶಾಸಕ

    ಬೆಂಗಳೂರು: ಜಿಎಸ್‌ಟಿ (GST) ಸರಳೀಕರಣ ಮಾಡಿ ಮೋದಿ ಸರ್ಕಾರ (Modi Government) ದೇಶದ ಜನರಿಗೆ ಮೋದಿ ಸರ್ಕಾರ ದಸರಾ, ದೀಪಾವಳಿ ಉಡುಗೊರೆ ಕೊಟ್ಟಿದೆ ಎಂದು ಬಿಜೆಪಿ ಶಾಸಕ ಮಹೇಶ್ ತೆಂಗಿನಕಾಯಿ (Mahesh Tenginakai) ತಿಳಿಸಿದ್ದಾರೆ.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಮೋದಿ ಅವರು ಬಡವರು, ಮಧ್ಯಮವರ್ಗದ ಪರ ಇರುವವರು. ಹೀಗಾಗಿ ದಸರಾ, ದೀಪಾವಳಿಗೆ ದೇಶದ ಜನರಿಗೆ ಕಾಣಿಕೆ ಕೊಟ್ಟಿದ್ದಾರೆ. ಜಿಎಸ್‌ಟಿಯಲ್ಲಿ ಬದಲಾವಣೆ ತರುವ ಮೂಲಕ ಜನರಿಗೆ ಸಹಕಾರ ಮಾಡಿದ್ದಾರೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಜಿಎಸ್‌ಟಿ ಸುಧಾರಣೆ; ಮೋದಿ ಸರ್ಕಾರದಿಂದ ರಾಷ್ಟ್ರದ ಜನತೆಗೆ ದೀಪಾವಳಿ ಕೊಡುಗೆ – ಹೆಚ್‌ಡಿಕೆ ಹರ್ಷ

    ಕ್ಯಾನ್ಸರ್ ಔಷಧಿಗಳ ಮೇಲೆ ಟ್ಯಾಕ್ಸ್ ರದ್ದು ಮಾಡಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಜಿಎಸ್‌ಟಿ ಇಳಿಸುವ ಕೆಲಸ ಮಾಡಿ, ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್, ಮೋದಿ ಅವರಿಗೆ ಧನ್ಯವಾದ ಹೇಳ್ತೀನಿ. ಜನರ ಪರವಾಗಿ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದಿದ್ದಾರೆ.

    ಇದೇ ವೇಳೆ ಅರಮನೆ ಮೈದಾನದಲ್ಲಿ ಆಯೋಜನೆ ಆಗಿರುವ ಮಿಲಾದ್ ಉನ್ ನಬಿ ಕಾರ್ಯಕ್ರಮಕ್ಕೆ ಸರ್ಕಾರ ಅವಕಾಶ ಕೊಡಬಾರದು. ಕಾಂಗ್ರೆಸ್ ಸರ್ಕಾರ (Congress) ಅಧಿಕಾರಕ್ಕೆ ಬಂದಾಗಿನಿಂದ ಅಲ್ಪಸಂಖ್ಯಾತರ ಪುಷ್ಟೀಕರಣ ಮಾಡುತ್ತಿದೆ. ಬೆಂಗಳೂರಿಗೆ ಟೂರಿಸಂ ವೀಸಾ ಪಡೆದು ಧರ್ಮ ಪ್ರಚಾರ ಮಾಡುವ ಕೆಲಸ ಆಗ್ತಿದೆ. ಸರ್ಕಾರ ಇದಕ್ಕೆ ಅವಕಾಶ ಕೊಡಬಾರದು. ಬಿಜೆಪಿ ಇದನ್ನು ಪ್ರಬಲವಾಗಿ ಖಂಡಿಸುತ್ತದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ಧರ್ಮಸ್ಥಳ ಕೇಸ್ ಸೇರಿ ಅನೇಕ ಕೇಸ್‌ಗಳು ನಡೆಯುತ್ತಿರುವ ಸಮಯದಲ್ಲಿ ಈ ಕಾರ್ಯಕ್ರಮಕ್ಕೆ ಅವಕಾಶ ಕೊಡೋದು ಸರಿಯಲ್ಲ. ವಿದೇಶದಿಂದ ಬರೋರಿಗೆ ಧರ್ಮ ಭಾಷಣಕ್ಕೆ ಅನುಮತಿ ಕೊಡಬಾರದು. ಸಿಎಂ ಅವರು ಆಯೋಜಕರಿಗೆ ಹೇಳಿದ್ದೇನೆ ಎಂದಿದ್ದಾರೆ. ಆದರೆ ನಾಳೆ ನಿಮ್ಮ ಇಂಟಲಿಜೆನ್ಸ್ ಅಲ್ಲೇ ಇರುತ್ತದೆ. ಒಂದು ವೇಳೆ ಏನಾದರೂ ಅವರು ಧರ್ಮ ಪ್ರಚಾರ ಮಾಡಿ ಮಾತಾಡಿದರೆ, ಅವರ ಮೇಲೆ ಕೂಡಲೇ ಎಫ್‌ಐಆರ್ ದಾಖಲು ಮಾಡ್ತಾರಾ ಎಂದು ಸಿಎಂ ಹೇಳಬೇಕು ಎಂದು ಆಕ್ರೋಶ ಹೊರಹಾಕಿದರು.ಇದನ್ನೂ ಓದಿ: ದಸರಾ ಬಳಿಕ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ನಿಗದಿ – ಚುನಾವಣಾ ಆಯೋಗದ ಮೂಲಗಳ ಹೇಳಿಕೆ

  • ʻಆಪರೇಷನ್ ಸಿಂಧೂರʼದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪರಾಗ್ ಜೈನ್‌ ʻರಾʼ ನೂತನ ಮುಖ್ಯಸ್ಥ

    ʻಆಪರೇಷನ್ ಸಿಂಧೂರʼದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಪರಾಗ್ ಜೈನ್‌ ʻರಾʼ ನೂತನ ಮುಖ್ಯಸ್ಥ

    ನವದೆಹಲಿ: ಹಿರಿಯ ಐಪಿಎಸ್ ಅಧಿಕಾರಿ ಪರಾಗ್ ಜೈನ್ (IPS Officer Parag Jain) ಅವರನ್ನು ಭಾರತದ ಬಾಹ್ಯ ಗುಪ್ತಚರ ಸಂಸ್ಥೆಯಾದ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ (RAW) ಮುಂದಿನ ಕಾರ್ಯದರ್ಶಿಯಾಗಿ ಪ್ರಧಾನಿ ಮೋದಿ ಸರ್ಕಾರ ನೇಮಿಸಿದೆ.

    1989ರ ಬ್ಯಾಚ್‌ನ ಪಂಜಾಬ್ ಕೇಡರ್‌ನ (Punjab cadre) ಐಪಿಎಸ್ ಅಧಿಕಾರಿ ಜೈನ್, ಜುಲೈ 1 ರಂದು 2 ವರ್ಷಗಳ ಸ್ಥಿರ ಅವಧಿಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಮುಖ್ಯಸ್ಥ ರವಿ ಸಿನ್ಹಾ ಅವರ ಅದಿಕಾರ ಇದೇ ಜೂನ್ 30 ರಂದು ಕೊನೆಗೊಳ್ಳಲಿದೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ `ಧರ್ಮ ಚಕ್ರವರ್ತಿ’ ಬಿರುದು ಪ್ರದಾನ

    ಗುಪ್ತಚರ ವಲಯಗಳಲ್ಲಿ ‘ಸೂಪರ್ ಸ್ಲೀತ್’ ಎಂದು ಕರೆಯಲ್ಪಡುವ ಜೈನ್, ಮಾನವ ಬುದ್ಧಿಮತ್ತೆಯನ್ನು (HUMINT) ತಾಂತ್ರಿಕ ಬುದ್ಧಿಮತ್ತೆಯೊಂದಿಗೆ (TECHINT) ಪರಿಣಾಮಕಾರಿಯಾಗಿ ಸಂಯೋಜಿಸುವ ಖ್ಯಾತಿ ಹೊಂದಿದ್ದಾರೆ. ಇದನ್ನೂ ಓದಿ: ಸಂವಿಧಾನದ ಪೀಠಿಕೆ ರಾಷ್ಟ್ರದ ಆತ್ಮ, ತಿದ್ದುಪಡಿಯಿಂದ ಸಂವಿಧಾನದ ಆಶಯಕ್ಕೆ ಧಕ್ಕೆಯಾಗಿದೆ: ಜಗದೀಪ್ ಧನ್ಕರ್ ಕಳವಳ

    ಇತ್ತಿಚೇಗಿನ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆ ಸಮಯದಲ್ಲಿ, ಜೈನ್ ಅವರ ನಾಯಕತ್ವದಲ್ಲಿ ಗುಪ್ತಚರ ಮಾಹಿತಿಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ಸಕ್ರಿಯಗೊಳಿಸಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಜೈನ್ ಹೊಂದಿರುವ ವ್ಯಾಪಕ ಅನುಭವ ಅವರ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಹಿರಿಯ ಅಧಿಕಾರಿಗಳಿಂದ ಕ್ರಮಬದ್ಧ ಮತ್ತು ವಿವೇಚನಾಶೀಲ ಎಂದು ಬಣ್ಣಿಸಲ್ಪಟ್ಟ ಜೈನ್, ತಮ್ಮ ವೃತ್ತಿಜೀವನದುದ್ದಕ್ಕೂ ಹಲವಾರು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

    2021ರ ಜನವರಿ 1ರಂದು ಪಂಜಾಬ್‌ನಲ್ಲಿ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ಬಡ್ತಿ ನೀಡಲಾಯಿತು. ಆದರೂ ಅವರು ಆಗ ಕೇಂದ್ರ ನಿಯೋಜನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಹಿಂದೆ ಅವರು ಕೆನಡಾ ಮತ್ತು ಶ್ರೀಲಂಕಾದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ S-400 ಯಶಸ್ವಿ ಕಾರ್ಯಾಚರಣೆ; S-500 ರಕ್ಷಣಾ ವ್ಯವಸ್ಥೆ ಖರೀದಿಗೂ ಆಸಕ್ತಿ ತೋರಿದ ಭಾರತ

  • ಯುಪಿಎಸ್‌ನಲ್ಲಿ ʻUʼ ಅಂದ್ರೆ ಮೋದಿ ಸರ್ಕಾರ ಯುಟರ್ನ್‌ – ಏಕೀಕೃತ ಪಿಂಚಣಿ ಯೋಜನೆ ಕುರಿತು ಖರ್ಗೆ ಟೀಕೆ

    ಯುಪಿಎಸ್‌ನಲ್ಲಿ ʻUʼ ಅಂದ್ರೆ ಮೋದಿ ಸರ್ಕಾರ ಯುಟರ್ನ್‌ – ಏಕೀಕೃತ ಪಿಂಚಣಿ ಯೋಜನೆ ಕುರಿತು ಖರ್ಗೆ ಟೀಕೆ

    – 140 ಕೋಟಿ ಭಾರತೀಯರನ್ನು ನಾವು ರಕ್ಷಿಸುತ್ತೇವೆ ಎಂದ ಎಐಸಿಸಿ ನಾಯಕ
    – ಕರ್ನಾಟಕ ಕಾಂಗ್ರೆಸ್‌ನಂತೆ ಆರ್ಥಿಕ ಅವ್ಯವಸ್ಥೆ ಮಾಡಲ್ಲ: ಬಿಜೆಪಿ ವಕ್ತಾರ ಕಿಡಿ

    ನವದೆಹಲಿ: ಎನ್‌ಡಿಎ ನೇತೃತ್ವದ ಕೇಂದ್ರ ಸಂಪುಟ ಏಕೀಕೃತ ಪಿಂಚಣಿ ಯೋಜನೆಗೆ (UPS) ಅನುಮೋದನೆ ನೀಡಿದ ಮರುದಿನವೇ ಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು, ಮೋದಿ ಸರ್ಕಾರವನ್ನು ʻಯು-ಟರ್ನ್‌ ಸರ್ಕಾರʼ ಎಂದು ವಾಗ್ದಾಳಿ ನಡೆಸಿದ್ದಾರೆ.

    ಈ ಬಗ್ಗೆ ವರದಿಯೊಂದನ್ನು ಉಲ್ಲೇಖಿಸಿ ಎಕ್ಸ್‌ ಖಾತೆಯಲ್ಲಿ ಟೀಕಿಸಿರುವ ಖರ್ಗೆ ಅವರು, ʻಯುಪಿಎಸ್‌ʼನಲ್ಲಿ ʻಯುʼ ಅಂದ್ರೆ ಮೋದಿ ಸರ್ಕಾರದ ಯು-ಟರ್ನ್‌ಗಳು. ಮೋದಿ ಸರ್ಕಾರ (Modi government) ಯು-ಟರ್ನ್‌ ಸರ್ಕಾರ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಜೂನ್ 4ರ ನಂತರ, ಪ್ರಧಾನ ಮಂತ್ರಿಯ ಅಧಿಕಾರದ ದುರಹಂಕಾರದ ಮುಂದೆ ಜನರ ಶಕ್ತಿ ಮೇಲುಗೈ ಸಾಧಿಸಿದೆ. ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಕಳುಹಿಸುವುದು, ಪ್ರಸಾರ ಮಸೂದೆಯ ಹಿಂಪಡೆಯುವಿಕೆ ದೀರ್ಘಾವಧಿಯ ಬಂಡವಾಳ ಗಳಿಕೆ/ಸೂಚ್ಯಂಕಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ರೋಲ್‌ಬ್ಯಾಕ್, ಜಂಟಿ ಸಂಸದೀಯ ಸಮಿತಿಗೆ ವಕ್ಫ್ ಮಸೂದೆಯನ್ನು ಕಳುಹಿಸುವುದು, ಪ್ರಸಾರ ಮಸೂದೆಯ ರೋಲ್‌ಬ್ಯಾಕ್, ಲ್ಯಾಟರಲ್ ಎಂಟ್ರಿಯ ರೋಲ್‌ಬ್ಯಾಕ್ ಮುಂತಾದವು ಮೋದಿ ಸರ್ಕಾರದ ಯು-ಟರ್ನ್‌ಗಳುʼ ಎಂದು ವಾಗ್ದಾಳಿ ನಡೆಸಿದ್ದಾರೆ.

    ನಾವು ಹೊಣೆಗಾರಿಕೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ, ಜೊತೆಗೆ ನಿರಂಕುಶ ಸರ್ಕಾರದಿಂದ 140 ಕೋಟಿ ಭಾರತೀಯರನ್ನು ರಕ್ಷಿಸುತ್ತೇವೆ ಎಂದು ಖರ್ಗೆ ಅಭಯ ನೀಡಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಬಸ್‌ನಲ್ಲೇ ಬಾಲಕಿ ಮೇಲೆ ಗ್ಯಾಂಗ್‌ರೇಪ್ – ಐವರ ವಿರುದ್ಧ ಪೋಕ್ಸೋ ಕೇಸ್!

    ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ತುಹಿನ್ ಸಿನ್ಹಾ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳು ಸೇರಿದಂತೆ ಕಾಂಗ್ರೆಸ್ ಎಲ್ಲೆಲ್ಲಿ ಆಡಳಿತ ನಡೆಸುತ್ತದೆಯೋ ಅಲ್ಲಿ ಅವರು ಯಾವಾಗಲೂ ಆರ್ಥಿಕ ಅವ್ಯವಸ್ಥೆ ಮಾಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಗೋಲ್ಡನ್ ಟೆಂಪಲ್‍ನಲ್ಲಿ ಕೇಜ್ರಿವಾಲ್ ಬಿಡುಗಡೆಗೆ ಮನೀಶ್ ಸಿಸೋಡಿಯಾ ಪ್ರಾರ್ಥನೆ

    ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರದಲ್ಲಿರುವವರು ಆತುರದ ರೀತಿಯಲ್ಲಿ ಯೋಚಿಸುತ್ತಾರೆ. ಅದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗುತ್ತದೆ. ಆದ್ರೆ ನಮ್ಮ ಸರ್ಕಾರ ಕಾಂಗ್ರೆಸ್‌ಗಿಂತ ಭಿನ್ನವಾಗಿ ಯೋಚಿಸುತ್ತದೆ. ಮೊದಲು ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೇಂದ್ರ ಸರ್ಕಾರ ಕಾಳಜಿ ವಹಿಸುತ್ತದೆ. ಹೊಸ ಯುಪಿಎಸ್ 1 ವರ್ಷದಿಂದ ಕೆಲಸ ಮಾಡುತ್ತಿದೆ. ಹಣಕಾಸು ಕಾರ್ಯದರ್ಶಿ ಟಿ.ವಿ ಸೋಮನಾಥನ್ ಅಂತಿಮಗೊಳಿಸುವ ಮೊಲದಲು 100ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ (PM Modi) ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯುಪಿಎಸ್, ಸರ್ಕಾರಿ ನೌಕರರಿಗೆ ಖಚಿತವಾದ ಪಿಂಚಣಿ, ಕುಟುಂಬ ಪಿಂಚಣಿ ಮತ್ತು ಖಚಿತವಾದ ಕನಿಷ್ಠ ಪಿಂಚಣಿ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಇದನ್ನೂ ಓದಿ: ಬಾಂಗ್ಲಾದಿಂದ ಭಾರತಕ್ಕೆ ಹಿಂದೂಗಳೇ ಬರ್ತಿಲ್ಲ, ಆದ್ರೆ 35 ಮುಸ್ಲಿಂ ನುಸುಳುಕೋರರನ್ನು ಬಂಧಿಸಿದ್ದೇವೆ: ಅಸ್ಸಾಂ ಸಿಎಂ

    ಏಕೀಕೃತ ಪಿಂಚಣಿ ಯೋಜನೆಯ ಉಪಯೋಗ ಏನು?
    ಇದು ಸರ್ಕಾರಿ ನೌಕರರಿಗೆ ಇತ್ತೀಚಿನ ಪಿಂಚಣಿ ಯೋಜನೆಯಾಗಿದೆ. ಸರ್ಕಾರಿ ನೌಕರರಿಗೆ ನಿಶ್ಚಿತ ಪಿಂಚಣಿ ಮೊತ್ತದ ಭರವಸೆ ನೀಡುವ ಯೋಜನೆ ಇದಾಗಿದೆ.

    1. ಖಚಿತವಾದ ಪಿಂಚಣಿ: ಕನಿಷ್ಠ 25 ವರ್ಷಗಳ ಸೇವೆ ಪೂರ್ಣಗೊಳಿಸುವ ಸರ್ಕಾರಿ ನೌಕರರಿಗೆ ನಿವೃತ್ತಿಯ ಮೊದಲು ಕಳೆದ 12 ತಿಂಗಳ ಸರಾಸರಿ ಮೂಲ ವೇತನದ 50% ನಷ್ಟು ಈ ಯೋಜನೆಯು ಖಾತರಿಪಡಿಸುತ್ತದೆ. ಕನಿಷ್ಠ 10 ವರ್ಷಗಳ ಸೇವೆಯವರೆಗಿನ ಕಡಿಮೆ ಸೇವಾ ಅವಧಿಗೆ ಇದು ಅನುಪಾತದಲ್ಲಿರುತ್ತದೆ.

    2. ಖಚಿತವಾದ (ಸ್ಥಿರ) ಕುಟುಂಬ ಪಿಂಚಣಿ: ಉದ್ಯೋಗಿಯ ಮರಣದ ಸಂದರ್ಭದಲ್ಲಿ ನೀಡಲಾಗುವ ಪಿಂಚಣಿ ವ್ಯವಸ್ಥೆಯಾಗಿದೆ. ಇದು ಉದ್ಯೋಗಿಯ ಮೂಲ ವೇತನದ 60 ಪ್ರತಿಶತದಷ್ಟು ಪಡೆಯಬಹುದಾಗಿದೆ.

    3. ಖಚಿತವಾದ ಕನಿಷ್ಠ ಪಿಂಚಣಿ: ಕನಿಷ್ಠ 10 ವರ್ಷಗಳ ಸೇವೆ ಸಲ್ಲಿದ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ತಿಂಗಳಿಗೆ 10,000 ರೂ.ನಂತೆ ಖಚಿತವಾದ ಕನಿಷ್ಠ ಪಿಂಚಣಿ ಒದಗಿಸುತ್ತದೆ
    ಭರವಸೆ ನೀಡುತ್ತದೆ.

    ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ, ನೌಕರರು ಶೇ.10 ರಷ್ಟು ಕೊಡುಗೆ ನೀಡಿದರೆ, ಕೇಂದ್ರ ಸರ್ಕಾರವು ಶೇ.14 ರಷ್ಟು ಕೊಡುಗೆ ನೀಡುತ್ತದೆ, ಇದನ್ನು ಯುಪಿಎಸ್‌ನೊಂದಿಗೆ ಶೇ.18ಕ್ಕೆ ಹೆಚ್ಚಿಸಲಾಗುತ್ತದೆ.

  • ಬಿಜೆಪಿ ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ: ಮೋದಿ ವಿರುದ್ಧ ರಾಹುಲ್‌ ಕಿಡಿ

    ಬಿಜೆಪಿ ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ: ಮೋದಿ ವಿರುದ್ಧ ರಾಹುಲ್‌ ಕಿಡಿ

    ನವದೆಹಲಿ: ಸಂಸತ್ ಸದಸ್ಯತ್ವ ರದ್ದಾಗಿ ಮರುಸ್ಥಾಪನೆಯಾದ ಬಳಿಕ ಮೊದಲ ಬಾರಿಗೆ ಸಂಸತ್‌ನಲ್ಲಿ (Lok Sabha) ಭಾಷಣ ಮಾಡಿದ ರಾಹುಲ್ ಗಾಂಧಿ ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸಿದ್ದಾರೆ. ಬಿಜೆಪಿ (BJP) ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಗಂಭೀರ ಆರೋಪ ಮಾಡಿದ್ದಾರೆ.

    ಸಂಸತ್‌ ಸದಸ್ಯತ್ವ  ಮರಳಿ ಪಡೆದ ಬಳಿಕ 2ನೇ ದಿನ ಲೋಕಸಭೆಗೆ ಆಗಮಿಸಿದ ಸಂಸದ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. ಈ ವೇಳೆ ಮಣಿಪುರ ವಿಚಾರವನ್ನ ತೆಗೆದುಕೊಂಡು ಪ್ರಧಾನಿ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಬಿಜೆಪಿ-ಕಾಂಗ್ರೆಸ್‌ ನಡುವೆ ಗದ್ದಲ ಏರ್ಪಟಿತು.

    ಮಣಿಪುರ ಗಲಭೆಯನ್ನುದ್ದೇಶಿಸಿ (Maipur Violence) ಮಾತನಾಡಿದ ರಾಹುಲ್‌ ಗಾಂಧಿ, ನಾನು ಮಣಿಪುರಕ್ಕೆ ಭೇಟಿ ನೀಡಿದ್ದೇನೆ, ಅಲ್ಲಿನ ಸ್ಥಿತಿಗತಿಯನ್ನ ಗಮನಿಸಿದ್ದೇನೆ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಒಮ್ಮೆಯೂ ಮಣಿಪುರಕ್ಕೆ ಭೇಟಿ ನೀಡಿಲ್ಲ. ಏಕೆಂದರೆ ಮೋದಿಗೆ ಮಣಿಪುರ ಭಾರತದ ಭಾಗ ಅಂತಾ ಮೋದಿಗೆ ಅನ್ನಿಸಿಯೇ ಇಲ್ಲ. ಮಣಿಪುರವನ್ನ ಎರಡು ಭಾಗವಾಗಿ ವಿಂಗಡಿಸಿದ್ದಾರೆ. ಭಾರತವನ್ನ ಮಣಿಪುರದಲ್ಲಿ ಹತ್ಯೆ ಮಾಡಿದ್ದಾರೆ ಎಂದು ತೀವ್ರ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: 4ರ ಬಾಲಕಿ ಮೇಲೆ ಅತ್ಯಾಚಾರ: ಇದು ಮಾನವೀಯತೆ ಮೀರಿದ ಕ್ರೌರ್ಯ, ಕಾಮುಕರಿಗೆ ಕ್ಷಮೆಯಿಲ್ಲವೆಂದ ಸಚಿನ್‌ ಪೈಲಟ್‌

    ಮುಂದುವರಿದು.. ನೀವು ಭಾರತ ಮಾತೆಯನ್ನೂ ಕೊಂದಿದ್ದೀರಿ. ನನ್ನ ಒಬ್ಬ ತಾಯಿ ಇಲ್ಲಿ ಕುಳಿತಿದ್ದರೆ, ಇನ್ನೊಬ್ಬ ತಾಯಿಯನ್ನ ಮಣಿಪುರದಲ್ಲಿ ಕೊಂದಿದ್ದೀರಿ. ಮನಸ್ಸು ಮಾಡಿದ್ರೆ ಭಾರತೀಯ ಸೇನೆ ಒಂದೇ ದಿನದಲ್ಲಿ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಬಹುದು. ಆದ್ರೆ ಮೋದಿ ಸರ್ಕಾರ ಸೇನೆಯನ್ನ ಬಳಸುತ್ತಿಲ್ಲ. ನಮ್ಮ ಸೈನಿಕರು ಸಾಯಬೇಕು ಅಂತಾ ಬಯಸುತ್ತಿದೆ. ಭಾರತೀಯರ ಮನಸ್ಸನ್ನು ಅರ್ಥಮಾಡಿಕೊಳ್ಳದ ಮೋದಿ ಇನ್ನಾರ ಧ್ವನಿಗೆ ಕಿವಿಗೊಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್‌ ಹಿಂದಿಕ್ಕಿ ಲಾಭಾಂಶದಲ್ಲಿ ದೇಶದಲ್ಲಿ ನಂ.1 ಕಂಪನಿಯಾಗಿ ಹೊರಹೊಮ್ಮಿದ ಎಸ್‌ಬಿಐ

    ಮಣಿಪುರದಲ್ಲಿ ಜನಾಂಗೀಯ ಘರ್ಷಣೆಯಿಂದ 160ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದಲ್ಲೂ ಅದೇ ಕೆಲಸ ಮಾಡುತ್ತಿದ್ದೀರಿ. ಅಲ್ಲಿಯೂ ಕೋಮು ಘರ್ಷಣೆಯಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ ಎಂದರು. ಇದೇ ವೇಳೆ ರಾಮಾಯಣ ಮಹಾಕಾವ್ಯ ಪ್ರಸ್ತಾಪಿಸಿದ ರಾಹುಲ್‌ ಗಾಂಧಿ, ಲಂಕೆಯನ್ನ ಹನುಮಂತ ಸುಟ್ಟುಹಾಕಲಿಲ್ಲ. ರಾವಣದ ದುರಹಂಕಾರದಿಂದ ಸುಟ್ಟಹೋಯ್ತು. ರಾವಣ ತನ್ನ ದುರಹಂಕಾರದಿಂದಲೇ ರಾಮನಿಂದ ಹತ್ಯೆಯಾದ ಇದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ತಿರುಗೇಟು ನೀಡಿದರು.

    ಈ ವೇಳೆ ರಾಹುಲ್‌ ಗಾಂಧಿ ಅವರ ಭಾಷಣಕ್ಕೆ ತಕರಾರು ತೆಗೆದ ಬಿಜೆಪಿ ಸಂಸದ ಕಿರಣ್‌ ರಿಜಿಜು, ಈಶಾನ್ಯ ರಾಜ್ಯಗಳಲ್ಲಿ ಕಾಂಗ್ರೆಸ್‌ ಏನು ಮಾಡಿದೆ? ಎಂದು ಪ್ರಶ್ನಿಸಿದರು. ಈ ನಡುವೆ ಸ್ಪೀಕರ್‌ ಓಂ ಬಿರ್ಲಾ ಅವರು ಸಜ್ಜನಿಕೆ ಕಾಯ್ದುಕೊಳ್ಳುವಂತೆ ಸೂಚಿಸಿದ್ದರಿಂದ ಗದ್ದಲ ಉಂಟಾಯಿತು.

    ಕ್ಷಮೆ ಕೋರಿದ ರಾಹುಲ್‌ ಗಾಂಧಿ:
    ಸಂಸತ್‌ ಮರು ಪ್ರವೇಶಿಸಿದ ಮೊದಲ ಭಾಷಣದಲ್ಲಿ ರಾಹುಲ್‌ ಕ್ಷಮೆ ಕೋರಿದರು. ನಾನು ಕೊನೆಯಬಾರಿ ಮಾತನಾಡುವಾಗ ಅದಾನಿ ಬಗ್ಗೆ ಮಾತನಾಡಿದ್ದರಿಂದ ನಿಮ್ಮ ಹಿರಿಯ ನಾಯಕನಿಗೆ ನೋವಾಗಿದೆ. ಆ ನೋವು ನಿಮ್ಮ ಮೇಲೂ ಪರಿಣಾಮ ಬೀರಿರಬಹುದು. ನೋವುಟುಂಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ. ಆದಾಗ್ಯೂ ನಾನು ಸತ್ಯವನ್ನೇ ಹೇಳಿದ್ದೇನೆ. ಆದ್ರೆ ಬಿಜೆಪಿಯಲ್ಲಿರುವ ನನ್ನ ಸ್ನೇಹಿತರಿಗೆ ಹೇಳುತ್ತೇನೆ. ಇಂದು ಭಯ ಪಡೋದಕ್ಕೆ ಯಾವುದೇ ಕಾರಣಗಳಿಲ್ಲ. ಏಕೆಂದರೆ ನನ್ನ ಮುಖ್ಯ ಭಾಷಣ ಅದಾನಿ ಬಗ್ಗೆ ಇರುವುದಿಲ್ಲ ಎಂದು ಕುಟುಕಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರತಿಭಟನಾ ನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಲಾಗುತ್ತದೆ: ಪುರುಶೋತ್ತಮ್ ರೂಪಾಲಾ

    ಪ್ರತಿಭಟನಾ ನಿರತ ರೈತರನ್ನು ಮಾತುಕತೆಗೆ ಆಹ್ವಾನಿಸಲಾಗುತ್ತದೆ: ಪುರುಶೋತ್ತಮ್ ರೂಪಾಲಾ

    ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರವು ರೈತ ವಿರೋಧಿ ಕೃಷಿ ಕಾನೂನು ಕಾಯ್ದೆಯನ್ನು ವಾಪಸ್ ಪಡೆದ ನಂತರವೂ ಮುಂದುವರಿದಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸಲು ಪ್ರತಿಭಟನಾ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಆಹ್ವಾನಿಸಲಾಗುತ್ತಿದೆ ಎಂದು  ಕೇಂದ್ರ ಪಶುಸಂಗೋಪನೆ ಸಚಿವ ಪುರುಶೋತ್ತಮ್ ರೂಪಾಲಾ ಹೇಳಿದ್ದಾರೆ.

    modi

    ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಕ್ತವಾಗಿದೆ. ನಮ್ಮ ನಾಯಕರು ಅವರೊಂದಿಗೆ ಮಾತನಾಡಲು ಆಹ್ವಾನ ನೀಡಲಿದೆ. ಆದರೆ ಯಾವ ದಿನಾಂಕ ಎಂದು ಘೋಷಿಸಲು ಸಾಧ್ಯವಿಲ್ಲ. ಮಾತುಕತೆ ನಡೆಸಿ ಮತ್ತು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಾತ್ರ ನಾನು ಹೇಳಬಲ್ಲೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದು ವಿಧೇಯಕಕ್ಕೆ ರಾಷ್ಟ್ರಪತಿ ಅಂಕಿತ

    ಬೆಳೆಗಳಿಗೆ ಕನಿಷ್ಟ ಬೆಲೆ ನಿಗದಿಸುವುದರ ಬಗ್ಗೆ ಮಾತನಾಡಿದ ಅವರು, ಎಂಎಸ್ ಸ್ವಾಮಿನಾಥನ್ ಆಯೋಗವು ಶಿಫಾರಸ್ಸಿನಂತೆ ರೈತರು ತಮ್ಮ ಇನ್‍ಪುಟ್ ವೆಚ್ಚದ ಶೇಕಡಾ 50 ರಷ್ಟು ಮತ್ತು ಅದಕ್ಕಿಂತ ಹೆಚ್ಚಿನ ದರವನ್ನು ಪಡೆಯಬಹುದು ಎಂದು ಎಂಎಸ್‍ಪಿ ಮೇಲಿನ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಬಗ್ಗೆ ದಾಖಲೆಗಳಿಲ್ಲ, ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ: ಕೇಂದ್ರ ಸರ್ಕಾರ

  • ಮತದಾರರು ಮೋದಿ ಸರ್ಕಾರದ ಅಭಿವೃದ್ಧಿಗೆ ಮೆಚ್ಚಿ ಬಿಜೆಪಿಗೆ ಮತ ಹಾಕುತ್ತಾರೆ: ಬಿಎಸ್‍ವೈ

    ಮತದಾರರು ಮೋದಿ ಸರ್ಕಾರದ ಅಭಿವೃದ್ಧಿಗೆ ಮೆಚ್ಚಿ ಬಿಜೆಪಿಗೆ ಮತ ಹಾಕುತ್ತಾರೆ: ಬಿಎಸ್‍ವೈ

    – ಶಿರಾ, ಆರ್.ಆರ್ ನಗರ ಎರಡರಲ್ಲೂ ನಾವು ಗೆಲ್ಲುತ್ತೇವೆ

    ಶಿವಮೊಗ್ಗ: ಬೆಂಗಳೂರಿನ ಆರ್.ಆರ್ ನಗರ ಮತ್ತು ಶಿರಾ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾದ ಒಲವಿದೆ. ಎರಡು ಕ್ಷೇತ್ರದಲ್ಲಿ ಗೆಲ್ಲುತ್ತೇವೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ಶಿಕಾರಿಪುರಕ್ಕೆ ಆಗಮಿಸಿದ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬಿಎಸ್‍ವೈ, ಶಿರಾ ಹಾಗೂ ಆರ್.ಆರ್ ನಗರ ಎರಡೂ ಕ್ಷೇತ್ರಗಳಲ್ಲಿನ ಮತದಾರರು ಕೇಂದ್ರದ ಮೋದಿ ಸರ್ಕಾರದ ಅಭಿವೃದ್ಧಿ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ಮೆಚ್ಚಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಎರಡು ದಿನಗಳಿಂದ ಶಿರಾದಲ್ಲಿಯೇ ಠಿಕಾಣಿ ಹೂಡಿದ್ದಾರೆ. ಆದ್ದರಿಂದ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

    ಸಿಗಂದೂರು ದೇವಾಲಯದಲ್ಲಿ ಅರ್ಚಕರು ಹಾಗೂ ಟ್ರಸ್ಟಿ ನಡುವೆ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್‍ವೈ ಈ ಬಗ್ಗೆ ದೇವಾಲಯದ ಪ್ರಮುಖರ ಜೊತೆ ಜಿಲ್ಲಾಧಿಕಾರಿ ಚರ್ಚೆ ನಡೆಸಿದ್ದಾರೆ. ದೇವಾಲಯದಲ್ಲಿ ಗಲಾಟೆ ನಡೆಯಬಾರದು. ಅದು ಶೋಭೆ ತರುವಂತಹದ್ದಲ್ಲ. ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಬಗ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ, ಶಾಸಕರಾದ ಹಾಲಪ್ಪ, ಕುಮಾರ ಬಂಗಾರಪ್ಪನವರ ಜೊತೆ ಚರ್ಚೆ ನಡೆಸುತ್ತೇವೆ. ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಉತ್ತರ ಕರ್ನಾಟಕ ಪ್ರವಾಹದ ಬಗ್ಗೆ ಮಾತನಾಡಿದ ಸಿಎಂ, ಈ ಬಗ್ಗೆ ಪ್ರಧಾನಿಯವರ ಜೊತೆ ಮಾತನಾಡಿದ್ದೇನೆ. ಹೆಚ್ಚಿನ ಪರಿಹಾರ ನೀಡುವಂತೆ ಮನವಿ ಮಾಡಿದ್ದೇನೆ. ಕೇಂದ್ರದಿಂದ ಹೆಚ್ಚಿನ ಪರಿಹಾರ ಕೊಡುವ ನಿರೀಕ್ಷೆ ಇದೆ ಎಂದರು. ಶಿವಮೊಗ್ಗ ಜಿಲ್ಲೆ ಹಾಗೂ ಶಿಕಾರಿಪುರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆಯುತ್ತಿವೆ. ಜಿಲ್ಲೆ ಹಾಗೂ ಕ್ಷೇತ್ರ ರಾಜ್ಯದಲ್ಲಿಯೇ ಮಾದರಿಯಾಗಿದೆ. ಮೂರು ದಿನಗಳ ಕಾಲ ಕ್ಷೇತ್ರದಲ್ಲಿಯೇ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದರು.

  • ಮೋದಿ ಸರ್ಕಾರ ನಡೆಸಿರೋ ದಾಳಿ – ಡಿಕೆಶಿ ಮನೆ ಮೇಲಿನ CBI ರೇಡ್‍ಗೆ ಸಿದ್ದು ಖಂಡನೆ

    ಮೋದಿ ಸರ್ಕಾರ ನಡೆಸಿರೋ ದಾಳಿ – ಡಿಕೆಶಿ ಮನೆ ಮೇಲಿನ CBI ರೇಡ್‍ಗೆ ಸಿದ್ದು ಖಂಡನೆ

    – ರಾಜಕೀಯ ದುಷ್ಟತನದ ಪರಮಾವಧಿ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಶಾಕ್ ನೀಡಿದ್ದು, ಮನೆಯ ಮೇಲೆ ರೇಡ್ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಮನೆಯ ಮೇಲೆ ಸಿಬಿಐ ರೇಡ್‍ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಡಿಕೆಶಿಗೆ ಶಾಕ್- ಮನೆ ಮೇಲೆ ಸಿಬಿಐ ದಾಳಿ

    ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಡಿ.ಕೆ.ಶಿವಕುಮಾರ್ ಮನೆಯ ಮೇಲಿನ ಸಿಬಿಐ ರೇಡ್‍ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ. ರಾಜಕೀಯ ದುಷ್ಟತನದ ಪರಮಾವಧಿ” ಎಂದು ಖಂಡಿಸಿದ್ದಾರೆ.

    ಅಷ್ಟೇ ಅಲ್ಲದೇ “ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಸಿದ್ದರಾಮಯ್ಯ ಟ್ವಿಟ್ಟರಿನಲ್ಲಿ ಬರೆದುಕೊಂಡಿದ್ದಾರೆ.

    ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಇಂದು ಐವರು ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿಕೆಶಿ ಮನೆಯ ಮೇಲೆ ದಾಳಿ ಮಾಡುವಂತೆ ರಾಜ್ಯ ಸರ್ಕಾರ ಸಿಬಿಐ ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಇಂದು ಬೆಳಗ್ಗೆ 8 ಗಂಟೆಗೆ ಸಿಬಿಐ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿದ್ದು, ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಡಿಕೆಶಿಗೆ ಸೇರಿದ ಹಲವು ಕಡೆಗಳಲ್ಲಿ ಕೂಡ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

    ಕಳೆದ ವರ್ಷ ಸೆಪ್ಟೆಂಬರ್ 3ರಂದು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿ ಡಿಕೆಶಿ ಜೈಲು ಸೇರಿದ್ದರು. ಇದೀಗ ಒಂದು ವರ್ಷ ಕಳೆಯುವ ಬೆನ್ನಲ್ಲೇ ಮತ್ತೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಮನೆಯ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದು, ಅವರ ಮನೆಯಲ್ಲೂ ಶೋಧಕಾರ್ಯ ನಡೆಸುತ್ತಿದ್ದಾರೆ.

  • ಕೊರೊನಾ, ಚೀನಾ, ಆರ್ಥಿಕ ಸಂಕಷ್ಟಕ್ಕೆ ಮೋದಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ – ಸೋನಿಯಾ ಗಾಂಧಿ

    ಕೊರೊನಾ, ಚೀನಾ, ಆರ್ಥಿಕ ಸಂಕಷ್ಟಕ್ಕೆ ಮೋದಿ ಸರ್ಕಾರದ ಆಡಳಿತ ವೈಫಲ್ಯವೇ ಕಾರಣ – ಸೋನಿಯಾ ಗಾಂಧಿ

    ನವದೆಹಲಿ: ಭಾರತ ಭೀಕರ ಆರ್ಥಿಕ ಸಂಕಷ್ಟದಲ್ಲಿದೆ ಮಾರಕ ರೋಗದ ಭೀತಿಯಲ್ಲಿದೆ ಇದರ ಜೊತೆಗೆ ಭಾರತ ಚೀನಾ ಗಡಿ ಪ್ರದೇಶದಲ್ಲಿ ಬಿಕ್ಕಟ್ಟು ಶುರುವಾಗಿದ್ದು ಇದಕ್ಕೆಲ್ಲ ಕಾರಣ ಮೋದಿ ಸರ್ಕಾರ ಅಧಿಕಾರದ ದುರುಪಯೋಗ, ಆಡಳಿತದ ತಪ್ಪು ನೀತಿಗಳು ಕಾರಣ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

    ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಂಕಷ್ಟದ ಕಾಲದಲ್ಲಿ ಜನರ ಕೈಗೆ ಹಣ ನೀಡಬೇಕು. ಸಣ್ಣ ಮಧ್ಯಮ ಉದ್ದಿಮೆಗಳನ್ನು ಬೆಳೆಸಬೇಕಿತ್ತು. ಬೇಡಿಕೆ ಹೆಚ್ಚಿಸುವ ಪ್ರಯತ್ನ ಸರ್ಕಾರ ಮಾಡಬೇಕಿತ್ತು. ಆದರೆ ಸರ್ಕಾರ ಟೊಳ್ಳಾದ ಆರ್ಥಿಕ ಪ್ಯಾಕೇಜ್ ಘೋಷಿಸಿ ಎಲ್ಲವನ್ನು ನಿರಾಸೆ ಮಾಡಿದೆ ಎಂದ ದೂರಿದ್ದಾರೆ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವ ಸಂದರ್ಭದಲ್ಲಿ ದೇಶದಲ್ಲಿ ಸತತ 17 ದಿನಗಳಿಂದ ಇಂಧನ ಬೆಲೆ ಏರಿಕೆಯಾಗಿದೆ ಇದು ಆರ್ಥಿಕ ಸಂಕಷ್ಟದಲ್ಲಿರುವ ಜನರ ಗಾಯಾದ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.

    ಕೇಂದ್ರ ಅಧಿಕಾರವನ್ನು ಕೇಂದ್ರೀಕರಿಸಿಕೊಂಡಿದೆ. ಈವರೆಗೂ ರಾಜ್ಯ ಸರ್ಕಾರಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಿಲ್ಲ. ಜನರನ್ನು ರೋಗದ ಜೊತೆ ಬಿಟ್ಟು ಸ್ವಯಂ ರಕ್ಷಿಸಿಕೊಳ್ಳಲು ಹೇಳಿದೆ ಇದು ತಪ್ಪು ನಿರ್ವಹಣೆ ಮತ್ತು ವಿನಾಶಕಾರಿ ನಿರ್ಧಾರ. ಇದರಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಎದ್ದು ಕಾಣುತ್ತಿದೆ ಎಂದ ಸೋನಿಯ ಗಾಂಧಿ, ಚೀನಾದೊಂದಿಗೆ ಗಡಿಯಲ್ಲಿ ಬಿಕ್ಕಟ್ಟು ಆರಂಭವಾಗಿದ್ದು ಇದನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಮತ್ತು ದೇಶದ ಸಮಗ್ರತೆ ಕಾಪಾಡುತ್ತದೆ ಎಂದು ಭಾವಿಸಿದ್ದೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ಸೋನಿಯಾ ಗಾಂಧಿ ಬಳಿಕ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸೋನಿಯಾ ಗಾಂಧಿ ಟೀಕೆಗಳನ್ನು ಬೆಂಬಲಿಸುತ್ತೇನೆ ಎಂದರು. ಕೊರೊನಾ ನಿಯಂತ್ರಿಸಲು ನಿರಂತರ ಶ್ರಮ ಮತ್ತು ಧೈರ್ಯ ಬೇಕು, ಗಡಿ ಬಿಕ್ಕಟ್ಟು ನಿಭಾಯಿಸದಿದ್ದರೆ ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

    ಕಾರ್ಯಕಾರಣಿ ಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೆವಾಲ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ಸರ್ಕಾರದ ಆಡಳಿತ ವೈಫಲ್ಯ ವಿರುದ್ಧ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆಸಲಾಯಿತು.

  • ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ತಡೆ ನೀಡಲು ಸುಪ್ರೀಂ ನಕಾರ

    ಮೋದಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗೆ ತಡೆ ನೀಡಲು ಸುಪ್ರೀಂ ನಕಾರ

    ನವದೆಹಲಿ: ಇಪ್ಪತ್ತು ಸಾವಿರ ಕೋಟಿ ವೆಚ್ಚದಲ್ಲಿ ಕೇಂದ್ರ ದೆಹಲಿಯಲ್ಲಿ ಆರಂಭಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.

    ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎಸ್.ಎ ಬೊಬ್ಡೆ ನೇತೃತ್ವದ ತ್ರಿ ಸದಸ್ಯ ಪೀಠ ಇದೇ ಮಾದರಿಯಲ್ಲಿ ಮತ್ತೊಂದು ಅರ್ಜಿ ವಿಚಾರಣೆ ಹಂತದಲ್ಲಿದ್ದು ಒಂದೇ ಮಾದರಿಯ ಅಂಶಗಳಿರುವ ಈ ಅರ್ಜಿಯ ವಿಚಾರಣೆ ಅವಶ್ಯಕತೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

    ದೇಶದಲ್ಲಿ ಕೊರೊನಾ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಯಾರು ಏನನ್ನು ಮಾಡಲು ಸಾಧ್ಯವಿಲ್ಲ. ಸದ್ಯ ಈ ಅರ್ಜಿ ವಿಚಾರಣೆ ನಡೆಸುವ ತುರ್ತು ಅವಶ್ಯಕತೆ ಇಲ್ಲ. ರಾಜೀವ್ ಸೂರಿ ಎನ್ನುವವರು ಇದೇ ಮಾದರಿಯ ಅರ್ಜಿಯನ್ನು ದೆಹಲಿಯ ಹೈಕೋರ್ಟ್ ಸಲ್ಲಿಸಿದ್ದು ವಿಚಾರಣೆ ಹಂತದಲ್ಲಿದೆ. ಈ ಸಂದರ್ಭದಲ್ಲಿ ಇಲ್ಲಿ ವಿಚಾರಣೆ ಅವಶ್ಯಕತೆ ಇಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

    ಏನಿದು ಸೆಂಟ್ರಲ್ ವಿಸ್ಟಾ?
    ಕೇಂದ್ರ ದೆಹಲಿಯ ಲುಟೆಯೇನ್ಸ್ ವಲಯದಲ್ಲಿ ಹೊಸ ಸಂಸತ್ ಭವನ ಕಟ್ಟಡ ಸೇರಿದಂತೆ ಸುಮಾರು ಇಪ್ಪತ್ತು ಸಾವಿರ ಕೋಟಿ ವೆಚ್ಚದಲ್ಲಿ ಇತರೆ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಲು ಪ್ರಧಾನಿ ಮೋದಿ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸೆಂಟ್ರಲ್ ವಿಸ್ಟಾ ಎಂದು ನಾಮಕರಣ ಮಾಡಲಾಗಿದೆ.

  • ಸಿದ್ದರಾಮಯ್ಯ ಒಬ್ಬ ದಡ್ಡ ವಡ್ಡ, ತಲೆ ಇಲ್ಲ – ಈಶ್ವರಪ್ಪ

    ಸಿದ್ದರಾಮಯ್ಯ ಒಬ್ಬ ದಡ್ಡ ವಡ್ಡ, ತಲೆ ಇಲ್ಲ – ಈಶ್ವರಪ್ಪ

    ಶಿವಮೊಗ್ಗ: ಸಿದ್ದರಾಮಯ್ಯ ಒಬ್ಬ ದಡ್ಡ ವಡ್ಡ. ಅವರಿಗೆ ತಲೆ ಇದ್ದಿದ್ದರೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿರಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರಿಗೆ ದಡ್ಡ ಎಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಯಾರೂ ಇಲ್ಲಿ ಹಿಂದಿ ಭಾಷೆ ಬಲವಂತವಾಗಿ ಹೇರಿಕೆ ಮಾಡುವ ಕೆಲಸ ಮಾಡುತ್ತಿಲ್ಲ. ಹಿಂದಿ ಭಾಷೆ ವಿಷಯವಾಗಿ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ಡೈವರ್ಟ್ ಮಾಡಲಾಗಿದ್ದು, ಇದರಲ್ಲಿ ರಾಜಕೀಯ ಕುತಂತ್ರ ಅಡಗಿದೆ ಎಂದು ಆರೋಪಿಸಿದರು. ಇದನ್ನೂ ಓದಿ:ಹಿಂದಿ ದೇಶವನ್ನು ಒಗ್ಗೂಡಿಸುವ ಭಾಷೆ, ಯಾಕೆ ದ್ವೇಷಿಸ್ತಾರೋ ಗೊತ್ತಿಲ್ಲ: ಈಶ್ವರಪ್ಪ

    ರಾಷ್ಟ್ರವನ್ನು ಒಗ್ಗೂಡಿಸುವ ಸಲುವಾಗಿ ಹಿಂದಿ ಭಾಷೆ ಜಾರಿಗೆ ಚಿಂತನೆ ನಡೆಸಲಾಗಿದೆ ಅಷ್ಟೇ. ನಮ್ಮ ಮಾತೃ ಭಾಷೆ ಕನ್ನಡ ಅದರ ನಂತರ ಹಿಂದಿ ಬರುತ್ತದೆ. ಆದರೆ ಸಿದ್ದರಾಮಯ್ಯ ಇಲ್ಲ ಸಲ್ಲದ ಹೇಳಿಕೆ ನೀಡುವ ಮೂಲಕ ಅಮಿತ್ ಶಾ ಅವರನ್ನು ದಡ್ಡ ಎಂದಿದ್ದಾರೆ. ಈ ಕೂಡಲೇ ಅವರ ಹೇಳಿಕೆ ಹಿಂಪಡೆಯುವ ಮೂಲಕ ಕ್ಷಮೆ ಕೋರಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದಾಗಲೇ ಬಿಜೆಪಿ 25 ಸಂಸದರನ್ನು ಪಡೆದಿದೆ. ಹೀಗಿರುವಾಗ ಮೈತ್ರಿ ಇದ್ದರೆಷ್ಟು? ಹೋದರೆಷ್ಟು? ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳು ನಿರ್ನಾಮವಾಗಿವೆ. ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೂ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ವಿಪಕ್ಷ ನಾಯಕನ ಸ್ಥಾನ ಸಹ ಕೈತಪ್ಪಿ ಹೋಗಲಿದೆ ಎಂಬ ಕಾರಣದಿಂದ ಸಿದ್ದರಾಮಯ್ಯ ವಿಲವಿಲ ಎಂದು ಒದ್ದಾಡುತ್ತಿದ್ದಾರೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ಇದುವರೆವಿಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡುವುದಕ್ಕೆ ಆಗಿಲ್ಲ. ಮೊದಲು ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಗಮನ ಹರಿಸಲಿ ಎಂದು ಸಿದ್ದರಾಮಯ್ಯರಿಗೆ ಸಚಿವ ಈಶ್ವರಪ್ಪ ಟಾಂಗ್ ನೀಡಿದರು.