Tag: Modi App

  • ಮೋದಿ ಆ್ಯಪ್ ನಿಂದ ಅಮೆರಿಕ ಕಂಪನಿಗಳಿಗೆ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ

    ಮೋದಿ ಆ್ಯಪ್ ನಿಂದ ಅಮೆರಿಕ ಕಂಪನಿಗಳಿಗೆ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆ್ಯಪ್ ನಿಂದ ಮಾಹಿತಿ ಸೋರಿಕೆ ಆಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

    ಮಾಹಿತಿ ಸೋರಿಕೆ ಕುರಿತು ಕೇಂಬ್ರಿಡ್ಜ್ ಅನಾಲಿಟಿಕಾ ವಿಶ್ಲೇಷಣಾ ವರದಿಯನ್ನು ಆಧಾರಿಸಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವಿಟ್ ನಲ್ಲಿ ಮೋದಿ ಆ್ಯಪ್ ಮೂಲಕ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಅಮೆರಿಕನ್ ಕಂಪೆನಿಗಳಿಗೆ ನೀಡಲಾಗಿದೆ ಎಂದು ದೂರಿದ್ದಾರೆ.

    ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ನನ್ನ ಹೆಸರು ನರೇಂದ್ರ ಮೋದಿ, ನಾನು ಭಾರತದ ಪ್ರಧಾನ ಮಂತ್ರಿಯಾಗಿದ್ದೇನೆ. ಈಗ ನೀವು ನನ್ನ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆದರೆ ನಿಮ್ಮೆಲ್ಲಾ ಮಾಹಿತಿಯನ್ನು ನಾನು ನನ್ನ ಮಿತ್ರನ ಅಗಿರುವ ಅಮೆರಿಕ ಕಂಪೆನಿಗೆ ನೀಡುತ್ತೇನೆ” ಎಂದು ಬರೆದು ಕೊಂಡಿದ್ದಾರೆ.

    ತಮ್ಮ ಟ್ವೀಟ್‍ನಲ್ಲಿ ಪ್ರಮುಖ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಹುಲ್, ಇಂತಹ ಮುಖ್ಯ ಸುದ್ದಿಗಳನ್ನು ಸುಡುತ್ತಿರುವ ನಿಮಗೆ ಧನ್ಯವಾದ ಎಂದು ತಿಳಿಸಿದ್ದಾರೆ.

    ರಾಹುಲ್ ತಮ್ಮ ಟ್ವೀಟ್ ನೊಂದಿಗೆ ಮಾಧ್ಯಮವೊಂದರ ವರದಿಯನ್ನು ಲಿಂಕ್ ಮಾಡಿದ್ದಾರೆ. ಈ ವರದಿಯಲ್ಲಿ ಮೋದಿ ಆ್ಯಪ್ ಬಳಕೆ ಮಾಡುವ ಎಲ್ಲರ ಹೆಸರು, ಫೋಟೋ, ಇ-ಮೇಲ್‍ಗಳ ಮಾಹಿತಿ ಮೂರನೇ ವ್ಯಕ್ತಿಗೆ ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ.

    ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೇಂಬ್ರಿಡ್ಜ್ ವಿಶ್ಲೇಷಣಾ ವರದಿ ಕುರಿತು ಆರೋಪ ಹಾಗೂ ಪ್ರತ್ಯಾರೋಪಗಳು ನಡೆಯುತ್ತಿದ್ದು, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂಬ್ರಿಡ್ಜ್ ವಿಶ್ಲೇಷಣಾ ವರದಿ ಸಹಾಯ ಪಡೆದಿತ್ತು ಎಂದು ಬಿಜೆಪಿ ಆರೋಪಿಸಿದೆ.

    ರಾಹುಲ್ ಗಾಂಧಿ ಶನಿವಾರ ಟ್ವಿಟ್ಟರ್ ನಲ್ಲಿ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರ ವಿರುದ್ಧ ಟ್ವೀಟ್ ವಾರ್ ನಡೆಸಿದ್ದರು. ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣ ಕುರಿತು ಪ್ರಸ್ತಾಪಿಸಿದ್ದ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚು ಬಾಕಿ ಉಳಿಯಲು ನ್ಯಾಯಾಧೀಶರ ಕೊರತೆ ಕಾರಣ ಎಂದು ತಿಳಿಸಿದ್ದರು.

    ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರವಿ ಶಂಕರ್ ಪ್ರಸಾದ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆ ಈ ಸ್ಥಿತಿಯನ್ನು ಎದುರಿಸಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ತಿರುಗೇಟು ನೀಡಿದ್ದರು.

  • ಗುಡ್‍ಮಾರ್ನಿಂಗ್ ಮೆಸೇಜ್ ನೋಡದ ಸಂಸದರಿಗೆ ಮೋದಿ ಕ್ಲಾಸ್!

    ಗುಡ್‍ಮಾರ್ನಿಂಗ್ ಮೆಸೇಜ್ ನೋಡದ ಸಂಸದರಿಗೆ ಮೋದಿ ಕ್ಲಾಸ್!

    ನವದೆಹಲಿ: ತಾನು ಕಳುಹಿಸಿದ ಬೆಳಗಿನ ಶುಭಾಶಯ ಸಂದೇಶವನ್ನು ವೀಕ್ಷಿಸದ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಂಸತ್ ಅಧಿವೇಶನದ ಮುನ್ನ ಬಿಜೆಪಿಯ ಸಂಸದರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೆಲ ಸಂದರ್ಭದಲ್ಲಿ ನಾನು ಸಂದೇಶ ಕಳುಹಿಸುತ್ತಿರುತ್ತೇನೆ. ಆದರೆ ಕೆಲ ಸಂಸದರು ಮಾತ್ರ ನನ್ನ ಸಂದೇಶಕ್ಕೆ ಪ್ರತಿಯಾಗಿ ಉತ್ತರ ಕಳುಹಿಸುತ್ತಾರೆ. ಯಾಕೆ ಎಲ್ಲರು ಉತ್ತರ ಕಳುಹಿಸುವುದಿಲ್ಲ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ನಾನು ಕಳುಹಿಸಿದ ಮೆಸೇಜ್ ನಲ್ಲಿ ಕೆಲವೊಮ್ಮೆ ಬಹಳ ಮುಖ್ಯವಾದ ವಿಚಾರವನ್ನು ತಿಳಿಸಿರುತ್ತೇನೆ. ನಿಮ್ಮಿಂದ ಪ್ರತಿಕ್ರಿಯೆ ಸಿಗದೇ ಇದ್ದಾಗ ಆ ವಿಚಾರದ ಬಗ್ಗೆ ಚರ್ಚೆಯೆ ನಡೆಯುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಎಲ್ಲ ಸಂಸದರು ಮೋದಿ ಆ್ಯಪನ್ನು ಬಳಸುವಂತೆ ಸೂಚಿಸಿದ್ದಾರೆ.

    ಸಭೆಯಲ್ಲಿ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ತಮ್ಮ ಸಹ ಸಂಸದರಿಗೆ ಮೋದಿ ಆ್ಯಪ್ ಬಳಕೆ ಮಾಡುವ ಮೂಲಕ ಪ್ರಧಾನಿ ಮೋದಿ ಅವರು ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವುದು, ಮನ್ ಕೀ ಬಾತ್ ಕಾರ್ಯಕ್ರಮ ಕೇಳುವುದು, ಸರ್ಕಾರ ಯೋಜನೆಗಳು ಹಾಗೂ ಅವುಗಳ ಮಾಹಿತಿಯನ್ನು ಪಡೆಯುವುದು ಹೇಗೆ ಎಂಬುವನ್ನು ವಿವರಿಸಿದ್ದಾರೆ ಎನ್ನಲಾಗಿದೆ.

    ಈ ಕುರಿತು ಸಭೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮಹೇಶ್ ಶರ್ಮಾ ಬಿಜೆಪಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮೋದಿ ಅವರ ಸಲಹೆ ಎಲ್ಲರೂ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಎಸ್‍ಎಸ್ ಅಹ್ಲುವಾಲಿಯಾ ಅವರು ನರೇಂದ್ರ ಮೋದಿ ಆ್ಯಪ್ ಉತ್ತಮವಾಗಿದ್ದು, ನಾನು ನಿರಂತರವಾಗಿ ಸಕ್ರಿಯವಾಗಿ ಬಳಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಕಳೆದ ಆಗಸ್ಟ್ ತಿಂಗಳಿನಲ್ಲಿ ನಡೆದ ಸಭೆಯಲ್ಲಿ ಮೋದಿ ಸದನದ ಗೈರು ಹಾಜರಿ ವಿಚಾರವನ್ನು ಪ್ರಸ್ತಾಪಿಸಿ, ನಿಮ್ಮ ಒಂದು ದಿನದ ಗೈರು ಹಾಜರಿ 2019 ರ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಟಿಕೆಟ್ ಪಡೆಯುವ ಅವಕಾಶವನ್ನು ತಪ್ಪಿಸಬಹುದು ಎಂದು ಹೇಳಿ ಎಚ್ಚರಿಕೆ ನೀಡಿದ್ದರು.

    2015ರಲ್ಲಿ ನರೇಂದ್ರ ಮೋದಿ ಅಪ್ಲಿಕೇಶನ್ ಬಿಡುಗಡೆಯಾಗಿತ್ತು.