Tag: model

  • ಫೋಟೋಶೂಟ್ ನೆಪದಲ್ಲಿ ಮಾಡೆಲ್ ಜೊತೆ ಅಸಭ್ಯ ವರ್ತನೆ

    ಫೋಟೋಶೂಟ್ ನೆಪದಲ್ಲಿ ಮಾಡೆಲ್ ಜೊತೆ ಅಸಭ್ಯ ವರ್ತನೆ

    ಬೆಂಗಳೂರು: ಫೋಟೋಶೂಟ್ ಮಾಡುವ ನೆಪದಲ್ಲಿ ಫೋಟೋಗ್ರಾಫರ್ ಮಾಡೆಲ್ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.

    ಶರತ್ ಕುಮಾರ್ ಬಂಧಿತ ಆರೋಪಿ. ಶರತ್ ಕುಮಾರ್ ಶಂಕರನಗರ ಮುಖ್ಯರಸ್ತೆಯಲ್ಲಿ ಇರುವ ಗೋಲ್ಡನ್ ಲೈಟ್ ಕ್ರಿಯೇಶನ್ ಸ್ಟುಡಿಯೋದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು. ಸ್ಟುಡಿಯೋದಲ್ಲಿ ಫೋಟೋಶೂಟ್ ಮಾಡುವಾಗ ಮಾಡೆಲ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

    ಶರತ್ ಇನ್‍ಸ್ಟಾಗ್ರಾಂ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ ಫೋಟೋಶೂಟ್ ಮಾಡುವ ನೆಪದಲ್ಲಿ ಯುವತಿಯನ್ನು ತನ್ನ ಸ್ಟುಡಿಯೋಗೆ ಕರೆಸಿಕೊಂಡಿದ್ದನು. ಶರತ್ ಮಾತು ಕೇಳಿ ಯುವತಿ ಸ್ಟುಡಿಯೋಗೆ ಹೋಗಿದ್ದಳು.

    ಯುವತಿ ಸ್ಟುಡಿಯೋಗೆ ಬರುತ್ತಿದ್ದಂತೆ ಶರತ್ ಸ್ಟುಡಿಯೋದಲ್ಲಿ ಇದ್ದವರನ್ನು ಹೊರಗೆ ಕಳುಹಿಸಿದ್ದಾನೆ. ಅವರು ಹೊರಗೆ ಹೋಗುತ್ತಿದ್ದಂತೆ ಫೋಟೋಶೂಟ್ ಮಾಡುವ ನೆಪದಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.

    ಸದ್ಯ ಯುವತಿ ಶರತ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಯತ್ನ ಪ್ರಕರಣ ದಾಖಲಿಸಿದ್ದಾಳೆ. ಯುವತಿಯ ದೂರು ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಆರೋಪಿ ಶರತ್ ಕುಮಾರ್‍ನನ್ನು ಬಂಧಿಸಿದ್ದಾರೆ.

  • ತಿರುಪತಿ ಮಾದರಿಯಲ್ಲಿ ರಾಮನಗರದಲ್ಲಿ ತಲೆ ಎತ್ತಲಿದೆ ತಿಮ್ಮಪ್ಪನ ದೇವಾಲಯ

    ತಿರುಪತಿ ಮಾದರಿಯಲ್ಲಿ ರಾಮನಗರದಲ್ಲಿ ತಲೆ ಎತ್ತಲಿದೆ ತಿಮ್ಮಪ್ಪನ ದೇವಾಲಯ

    ಬೆಂಗಳೂರು: ವಿಶ್ವ ಪ್ರಸಿದ್ಧ ತಿರುಪತಿ ದೇವಸ್ಥಾನ ಮಾದರಿಯಲ್ಲಿ ರಾಜ್ಯದಲ್ಲೂ ತಿರುಪತಿ ತಿಮ್ಮಪ್ಪನ ದೇವಾಲಯ ತಲೆ ಎತ್ತಲಿದೆ.

    ಆಂಧ್ರಪ್ರದೇಶದ ತಿರುಪತಿಗೆ ಪ್ರತಿ ದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ಕೆಲ ಕ್ಷಣಗಳಷ್ಟೇ ದೇವರ ದರ್ಶನ ಪಡೆಯುವ ಅವಕಾಶ ಸಿಗುತ್ತದೆ. ಇದರಿಂದ ಗಂಟೆಗಂಟಲೇ ಸರತಿ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾಯುವ ಭಕ್ತರು ನಿರಾಸೆಯನ್ನ ಅನುಭವಿಸುತ್ತಾರೆ. ಇಂತಹ ಭಕ್ತರಿಗೆ ರಾಜ್ಯದಲ್ಲೇ ತಿಮ್ಮಪ್ಪನ ದರ್ಶನ ಪಡೆಯುವ ಅವಕಾಶ ಲಭಿಸಿದೆ.

    ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಮುಜರಾಯಿ ಇಲಾಖೆಯ ಸಭೆಯಲ್ಲಿ ರಾಮನಗರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

    ರಾಮನಗರದಲ್ಲಿ ದೇವಾಲಯ ನಿರ್ಮಾಣಕ್ಕೆ ಬೇಕಾದ ಅಗತ್ಯವಾದ 15 ಎಕರೆ ಭೂಮಿ ನೀಡಲು ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ತಿರುಪತಿ ತಿಮ್ಮಪ್ಪನ ದೇವಸ್ಥಾನದ ಮಾದರಿಯಲ್ಲೇ ರಾಜ್ಯದಲ್ಲೂ ದೇವಸ್ಥಾನ ನಿರ್ಮಾಣವಾಗಲಿದೆ. ದೇವಸ್ಥಾನ ನಿರ್ಮಾಣ ಕಾರ್ಯವನ್ನ ಸಂಪೂರ್ಣವಾಗಿ ಟಿಟಿಡಿಯೇ ನೋಡಿಕೊಳ್ಳಲಿದ್ದು, ಅದರ ನಿರ್ವಹಣೆ ಕೂಡಾ ಟಿಟಿಡಿಯೇ ಮಾಡಲಿದೆ.

    ಉಳಿದಂತೆ ಇಂದು ನಡೆದ ಸಭೆಯಲ್ಲಿ ಸಚಿವ ರೇವಣ್ಣ, ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯಕ್ ಹಾಗೂ ಜಿಲ್ಲಾಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

  • ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಕರಣ್ ಒಬೆರಾಯ್ ಅತ್ಯಾಚಾರ ಪ್ರಕರಣ – ದೂರು ಕೊಟ್ಟ ರೂಪದರ್ಶಿಗೆ ಚಾಕು ಇರಿತ

    ಮುಂಬೈ: ಕಿರುತೆರೆ ನಟ ಮತ್ತು ನಿರೂಪಕ ಕರಣ್ ಒಬೆರಾಯ್ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾನೆ ಎಂದು ದೂರು ನೀಡಿದ್ದ ಮಾಡೆಲ್‍ಗೆ ಶನಿವಾರ ಬೆಳಗ್ಗೆ ಇಬ್ಬರು ಅಪರಿಚಿತರು ಚಾಕು ಹಾಕಿ ಪರಾರಿಯಾಗಿದ್ದಾರೆ.

    ಶನಿವಾರ ಬೆಳಗ್ಗೆ ವಾಕಿಂಗ್ ಎಂದು ಹೋಗಿದ್ದ 34 ವರ್ಷದ ಮಾಡೆಲ್‍ಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೈಯನ್ನು ಹರಿತವಾದ ಅಯುಧದಿಂದ ಇರಿದು ಆಸಿಡ್ ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

    2017ರಲ್ಲಿ ನನ್ನ ಮೇಲೆ ಕರಣ್ ಅತ್ಯಾಚಾರ ಮಾಡಿದ್ದಾನೆ ಎಂದು ಮಾಡೆಲ್ ಮೇ 6 ರಂದು ದೂರು ನೀಡಿದ್ದಳು. ಈ ದೂರಿನ ಪ್ರಕಾರ ಕರಣ್ ಪೋಲಿಸರು ಬಂಧಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದಲ್ಲಿದ್ದಾನೆ. ಈ ಪ್ರಕರಣ ಕೋರ್ಟ್‍ನಲ್ಲಿ ಇರುವಾಗಲೇ ಲೋಖಂಡ್ವಾಲಾ ರಸ್ತೆಯಲ್ಲಿ ಬೆಳಗ್ಗೆ 6.30ಕ್ಕೆ ವಾಕಿಂಗ್ ಹೋಗಿದ್ದ ಮಾಡೆಲ್ ಮೇಲೆ ಇಬ್ಬರು ಅಪರಿಚಿತ ದಾಳಿ ಮಾಡಿ ಚಾಕುವಿನಿಂದ ಇರಿದು ಹೋಗುವಾಗ ಒಂದು ಪತ್ರವನ್ನು ಎಸೆದು ಹೋಗಿದ್ದಾರೆ. ಇದನ್ನು ಓದಿ: ಅತ್ಯಾಚಾರ ಕೇಸ್‍ನಲ್ಲಿ ಕಿರುತೆರೆ ನಟ ಅರೆಸ್ಟ್

    ಈ ಸಮಯದಲ್ಲಿ ಮಾಡೆಲ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಇಬ್ಬರು ಮಹಿಳೆಯರು ಬಂದು ಸಹಾಯ ಮಾಡಿದ್ದಾರೆ. ನಂತರ ಒಶಿವಾರದ ಹಿರಿಯ ಪೊಲೀಸ್ ಅಧಿಕಾರಿ ಶೈಲೇಶ್ ಪಸಲ್ವಾರ್ ಅವರಿಗೆ ಮಾಡೆಲ್ ದೂರು ನೀಡಿದ್ದು ತನಿಖೆ ಮಾಡಲಾಗುತ್ತಿದೆ.

    ಏನಿದು ಪ್ರಕರಣ?
    ಕರಣ್ ಮಾಡೆಲ್‍ನನ್ನು ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಅತ್ಯಾಚಾರವೆಸಗಿ ಮೋಸ ಮಾಡಿದ್ದ. ಕರಣ್ ಅತ್ಯಾಚಾರ ಮಾಡಿದಲ್ಲದೇ ವಿಡಿಯೋ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಅಲ್ಲದೆ ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಮಾಡೆಲ್‍ಗೆ ಬೆದರಿಕೆ ಹಾಕಿದ್ದ. ಈ ಸಂಬಂಧ ಕರಣ್ 2017ರಲ್ಲಿ ಮುಂಬೈನ ಓಸ್ವಿಪುರದಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಾಡೆಲ್ ದೂರು ನೀಡಿದ್ದಳು. ಈ ದೂರಿನ ಮೇರೆಗೆ ಓಸ್ವಿಪುರ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 ಹಾಗೂ 384 ರ ಆಡಿ ಪ್ರಕರಣ ದಾಖಲಾಗಿದ್ದು ಕರಣ್ ನನ್ನು ಪೊಲೀಸರು ಬಂಧಿಸಿದ್ದರು.

  • ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರ‍್ಯಾಂಪ್‌  ಮೇಲೆ ಮಾಡೆಲ್ ಜೊತೆ ‘ಕ್ಯಾಟ್’ವಾಕ್ ಮಾಡಿ ಮೂತ್ರವಿಸರ್ಜನೆ – ವಿಡಿಯೋ

    ರಾಬಟ್: ಮೊರಕ್ಕೋದಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬೆಕ್ಕೊಂದು ವಾಕ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.

    ಮರಾಕೇಶ್‍ನಲ್ಲಿ ನಡೆದ ಕ್ರಿಶ್ಚಿಯನ್ ಡಿಯರ್ ಫ್ಯಾಷನ್ ಶೋ ನಡೆಯುವ ವೇಳೆ ಅಲ್ಲಿ ಬೆಕ್ಕೊಂದು ಮಾಡೆಲ್‍ಗಳ ಕ್ಯಾಟ್ ವಾಕ್ ವಿರುದ್ಧವಾಗಿ ನಡೆದುಕೊಂಡು ಹೋಗಿರುವುದು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಶೋಗೆ ಬಂದಿದ್ದ ಪ್ರೇಕ್ಷಕರ ಜೋರಾಗಿ ಕಿರುಚುವ ಶಬ್ದದ ನಡುವೆಯು ಸ್ಥಳಕ್ಕೆ ಎಂಟ್ರಿ ಕೊಟ್ಟಿದೆ. ನಡೆದುಕೊಂಡು ಮುಂದೆ ಪ್ರೇಕ್ಷಕರ ಗುಂಪಿನೊಳಗೆ ಹೋಗಿ ಮೂತ್ರವಿಸರ್ಜನೆ ಮಾಡಿ ಅಲ್ಲಿಂದ ಜನರೊಳಗೆ ಕಣ್ಮರೆಯಾಗಿದೆ.

    ಫ್ಯಾಷನ್ ಶೋಗಳಲ್ಲಿ ಪ್ರಾಣಿಗಳು ಕಾಣಿಸಿಕೊಂಡಿರುವುದು ಇದೇ ಮೊದಲೆನಲ್ಲ. ಜನವರಿ ತಿಂಗಳಲ್ಲಿ ನಡೆದ ಫ್ಯಾಷನ್ ಶೋ ಒಂದರಲ್ಲಿ ಬಾಲಿವುಡ್ ನಟ ಸಿದ್ಧರ್ಥ್ ಮೊಲ್ಹೋತ್ರಾ ಪಾಲ್ಗೊಂಡಿದ್ದ ಫ್ಯಾಶನ್ ಶೋದಲ್ಲಿ ನಾಯಿಯೊಂದು ಭಾಗವಹಿಸಿತ್ತು.

  • ಸಿನಿಮಾದಲ್ಲಿ ಚಾನ್ಸ್ ಕೊಡಿಸೋ ಆಮಿಷ – ಚಾಕು ತೋರಿಸಿ ಮಾಡೆಲ್ ಮೇಲೆ ರೇಪ್ ಯತ್ನ

    ಸಿನಿಮಾದಲ್ಲಿ ಚಾನ್ಸ್ ಕೊಡಿಸೋ ಆಮಿಷ – ಚಾಕು ತೋರಿಸಿ ಮಾಡೆಲ್ ಮೇಲೆ ರೇಪ್ ಯತ್ನ

    ಬೆಂಗಳೂರು: ವ್ಯಕ್ತಿಯೊಬ್ಬ ಸಿನಿಮಾದಲ್ಲಿ ಮಾಡೆಲ್‍ಗೆ ಚಾನ್ಸ್ ಕೊಡಿಸುವ ಆಮಿಷವೊಡ್ಡಿದ್ದು, ನಂತರ ಚಾಕು ತೋರಿಸಿ ಮಾಡೆಲ್ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಬಂಧಿತನನ್ನು ಸೋಮಶೇಖರ್ ಎಂದು ಗುರುತಿಸಲಾಗಿದೆ. ಬಂಗಾರಪೇಟೆಗೆ ರೈಲಿನಲ್ಲಿ ಈ ಘಟನೆ ನಡೆದಿದೆ. ಆರೋಪಿ ಸೋಮಶೇಖರ್ ಪರಿಚಯಸ್ಥ ಮಾಡೆಲ್‍ವೊಬ್ಬರಿಗೆ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಕೊಡಿಸುತ್ತೇನೆ ಎಂದು ಆಮಿಷವೊಡ್ಡಿದ್ದಾನೆ.

    ಮಾಡೆಲ್ ಅನ್ನು ಫೋಟೋಶೂಟ್ ಮಾಡಿಸಬೇಕು ಎಂದು ನೆಪ ಹೇಳಿ ಬಂಗಾರಪೇಟೆಗೆ ರೈಲಿನಲ್ಲಿ ಕರೆದುಕೊಂಡು ಹೋಗಲು ಆರೋಪಿ ಸೋಮಶೇಖರ್ ಯತ್ನಿಸಿದ್ದನು. ನಂತರ ಕುಪ್ಪಂನ ಟೇಕಲ್ ಬಳಿ ಮಾಡೆಲ್‍ಗೆ ಚಾಕು ತೋರಿಸಿ ಕೈಕಾಲು ಕಟ್ಟಿಹಾಕಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅಷ್ಟೇ ಅಲ್ಲದೇ ಆರೋಪಿ ಸೋಮಶೇಖರ್ ಮಾಡೆಲ್ ಬಳಿ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.

    ಮಾಡೆಲ್ ಆರೋಪಿಯಿಂದ ಹೇಗೋ ತಪ್ಪಿಸಿಕೊಂಡು ಬಂದು ರೈಲ್ವೆ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ತಕ್ಷಣ ಪೊಲೀಸರು ಸೋಮಶೇಖರನನ್ನು ಬಂಧಿಸಿದ್ದಾರೆ.

  • ಕ್ಯಾಟ್‍ವಾಕ್ ಮಾಡುತ್ತಾ ವೇದಿಕೆಯಲ್ಲೇ ಪ್ರಾಣಬಿಟ್ಟ ಮಾಡೆಲ್!

    ಕ್ಯಾಟ್‍ವಾಕ್ ಮಾಡುತ್ತಾ ವೇದಿಕೆಯಲ್ಲೇ ಪ್ರಾಣಬಿಟ್ಟ ಮಾಡೆಲ್!

    ಬ್ರೆಜಿಲ್: ಕ್ಯಾಟ್‍ವಾಕ್ ಮಾಡುತ್ತಾ ರ‌್ಯಾಂಪ್‌ ಚಾಕ್ ವೇದಿಕೆ ಮೇಲೆಯೇ ಕುಸಿದು ಬಿದ್ದು ಮಾಡೆಲ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸೌಪೌಲೊ ಫ್ಯಾಷನ್ ವಿಕ್‍ನಲ್ಲಿ ನಡೆದಿದೆ.

    ಮಾಡೆಲ್ ಟೇಲ್ಸ್ ಸೋರ್ಸ್, ಫ್ಯಾಷನ್ ವಿಕ್ ಅಂತಿಮ ದಿನದಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆ ಮೇಲೆ ಕ್ಯಾಟ್‍ವಾಕ್ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಕುಸಿದು ಬಿದ್ದರು. ಕೂಡಲೇ ಸ್ಥಳದಲ್ಲಿದ್ದ ಕಾರ್ಯಕ್ರಮದ ಆಯೋಜಕರು ಟೇಲ್ಸ್ ಅವರಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆ ಸಾಗಿಸುವ ಪ್ರಯತ್ನ ನಡೆಸಿದರು. ಆದರೆ ಆಸ್ಪತ್ರೆಗೆ ತಲುಪುವ ವೇಳೆಗೆ ಟೇಲ್ಸ್ ಕೊನೆಯುಸಿರೆಳೆದಿದ್ದರು.

    26 ವರ್ಷದ ಟೇಲ್ಸ್ ವೇದಿಕೆ ಮೇಲೆಯೇ ಸಾವನ್ನಪ್ಪಿದ್ದು ತಮಗೆ ಶಾಕ್ ಆಗಿದೆ ಎಂದು ಕಾರ್ಯಕ್ರಮದ ಆಯೋಜಕರು ಪ್ರತಿಕ್ರಿಯೆ ನೀಡಿದ್ದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

  • ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ್ದ ಮಾಡೆಲ್ ಶವ ಕೆರೆಯಲ್ಲಿ ಪತ್ತೆ

    ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ್ದ ಮಾಡೆಲ್ ಶವ ಕೆರೆಯಲ್ಲಿ ಪತ್ತೆ

    ರಾಂಚಿ: ಮಾಡೆಲ್‍ಯೊಬ್ಬಳ ಶವ ಕೆರೆಯಲ್ಲಿ ಪತ್ತೆಯಾದ ಘಟನೆ ಮಂಗಳವಾರ ಸಂಜೆ ಜಾರ್ಖಂಡ್‍ನ ದಂಥಾರಿ ಜಿಲ್ಲೆಯಲ್ಲಿ ನಡೆದಿದೆ.

    ಆಂಚಲ್ ಯಾದವ್(32) ಮೃತ ಮಾಡೆಲ್. ಆಂಚಲ್ ದಂಥಾರಿಯ ನಿವಾಸಿಯಾಗಿದ್ದು, ಮಾಡೆಲಿಂಗ್ ಜೊತೆ ವಿಮಾ ಕಂಪನಿಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಳು. ನಗರದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪಾರ್ಟಿ ನಡೆದರೂ ಅಲ್ಲಿಗೆ ಆಂಚಲ್ ಕೂಡ ಆಗಮಿಸುತ್ತಿದ್ದಳು.

    ಆಂಚಲ್ ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ರಾಯ್‍ಪುರದಿಂದ ದಾಂಥಾರಿ ನಿವಾಸಕ್ಕೆ ಆಗಮಿಸಿದ್ದಳು. ಆಂಚಲ್ ಮನೆಗೆ ಬರುತ್ತಿದ್ದಂತೆ ಆಕೆಗೆ ಒಂದು ಕರೆ ಬಂದಿದೆ. ಆಗ ಅವಳು ಮನೆ ಹೊರಗೆ ಬೈಕಿನಲ್ಲಿ ಕಾಯುತ್ತಿದ್ದ ವ್ಯಕ್ತಿಯನ್ನು ಭೇಟಿ ಮಾಡಲು ಹೋದಳು. ಅಲ್ಲದೆ ತನ್ನ ತಾಯಿಯ ಬಳಿ ಅರ್ಧ ಗಂಟೆಯಲ್ಲಿ ಮನೆಗೆ ಮರಳುತ್ತೇನೆ ಎಂದು ಹೇಳಿ ಹೋಗಿದ್ದಳು. ಆದರೆ ಮಂಗಳವಾರ ಆಕೆ ಶವವಾಗಿ ಪತ್ತೆ ಆಗಿದ್ದಾಳೆ.

    ಮಂಗಳವಾರ ಸಂಜೆ ಆಂಚಲ್ ಸಹೋದರನಿಗೆ ಕರೆ ಮಾಡಿ ಆಕೆಯ ಮೃತದೇಹವನ್ನು ತಲುಪಿಸಲಾಗಿದೆ. ಆಂಚಲ್‍ನನ್ನು ಕೊಲೆ ಮಾಡಲಾಗಿದ್ದು, ಆಕೆಯ ಕೈ-ಕಾಲು ಹಾಗೂ ಕುತ್ತಿಗೆಯನ್ನು ಹಗ್ಗದಿಂದ ಕಟ್ಟಲಾಗಿತ್ತು. ಅಲ್ಲದೆ ಆಕೆಯ ಹೊಟ್ಟೆಗೆ ಚಾಕು ಇರಿದ ಗುರುತು ಕೂಡ ಪತ್ತೆಯಾಗಿದೆ. ಆಂಚಲ್‍ನನ್ನು ಕೊಲೆ ಮಾಡಿದ ವ್ಯಕ್ತಿ ಮೊದಲೇ ಆಕೆಯ ಪರಿಚಯಸ್ಥನು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಪೊಲೀಸರು ಸಾಕ್ಷಿಗಾಗಿ ಆಂಚಲ್‍ನ ಸಾಮಾಜಿಕ ಜಾಲತಾಣ ಹಾಗೂ ಕಾಲ್ ಡಿಟೇಲ್ಸ್ ಕೂಡ ಪರಿಶೀಲಿಸುತ್ತಿದ್ದಾರೆ. ಆಂಚಲ್ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಮೊಬೈಲ್ ಸಿಗಲಿಲ್ಲ. ಆಂಚಲ್ ಮೃತದೇಹ ಕೆರೆಯಲ್ಲಿ 12 ಗಂಟೆಕ್ಕಿಂತ ಹೆಚ್ಚು ಹೊತ್ತು ತೇಲಾಡಿದೆ ಎಂದು ಪೊಲೀಸರು ಅನುಮಾನ ಪಡುತ್ತಿದ್ದಾರೆ. ಅಲ್ಲದೆ ವ್ಯಕ್ತಿ ಜೊತೆ ಬೈಕಿನಲ್ಲಿ ಹೋದ ಸ್ವಲ್ಪ ಸಮಯದಲ್ಲಿ ಆಕೆಯ ಕೊಲೆ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2014ರಲ್ಲಿ ಬರನಾವಾಪಾರಾದಲ್ಲಿ ಅರಣ್ಯ ಅಧಿಕಾರಿಗೆ ಸೆಕ್ಸ್ ವಿಡಿಯೋ ತೋರಿಸಿ ಬ್ಲಾಕ್‍ಮೇಲ್ ಮಾಡಿದ ಆರೋಪದ ಅಡಿಯಲ್ಲಿ ಆಂಚಲ್‍ಳನ್ನು ಬಂಧಿಸಲಾಗಿತ್ತು.

  • ರೂಪದರ್ಶಿಗೆ ನಗ್ನಚಿತ್ರ ಕಳುಹಿಸಿ ಸೆಕ್ಸ್‌ಗೆ ಒತ್ತಾಯಿಸಿದ ವ್ಯಕ್ತಿ ಅರೆಸ್ಟ್

    ರೂಪದರ್ಶಿಗೆ ನಗ್ನಚಿತ್ರ ಕಳುಹಿಸಿ ಸೆಕ್ಸ್‌ಗೆ ಒತ್ತಾಯಿಸಿದ ವ್ಯಕ್ತಿ ಅರೆಸ್ಟ್

    ಬೆಂಗಳೂರು: ಫೇಸ್ ಬುಕ್ ಮೂಲಕ ರೂಪದರ್ಶಿಗೆ ಅಶ್ಲೀಲ ಸಂದೇಶ ಕಳುಹಿಸಿ ಸೆಕ್ಸ್‌ಗೆ ಒತ್ತಾಯ ಮಾಡುತ್ತಿದ್ದ ಮುಖಪುಟ ವಿನ್ಯಾಸಗಾರನನ್ನು ಪೊಲೀಸರು ಬಂಧಿಸಿದ್ದಾರೆ.

    ತಮ್ಮಣ್ಣ ಫಕೀರಪ್ಪ ಹಾದಿಮನಿ (52) ಬಂಧಿತ ಆರೋಪಿ. ತಮ್ಮಣ್ಣ ಕನ್ನಡ ಮತ್ತು ಆಂಗ್ಲ ವಾರ ಪತ್ರಿಕೆಗೆ ಮುಖಪುಟ ವಿನ್ಯಾಸಗಾರನಾಗಿ ಕೆಲಸ ಮಾಡುತ್ತಿದ್ದು, ಬೆಳಗಾವಿಯ ಗೋಕಾಕ್ ಬಸ್ ನಿಲ್ದಾಣದ ಬಳಿ ಲಾಡ್ಜ್ ನಲ್ಲಿದ್ದ ವೇಳೆ ಬಂಧಿಸಲಾಗಿದೆ.

    ತಮ್ಮಣ್ಣ ಫೇಸ್‍ಬುಕ್ ಮೂಲಕ ರೂಪದರ್ಶಿಗೆ ಪರಿಚಯಿಸಿಕೊಂಡಿದ್ದನು. ಬಳಿಕ ತಮ್ಮಣ್ಣ ರೂಪದರ್ಶಿಗೆ ನಗ್ನ ಚಿತ್ರ ಕಳುಹಿಸುವ ಮೂಲಕ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದನು. ದಿನೇ ದಿನೇ ತಮ್ಮಣ್ಣನ ಕಿರುಕುಳ ಹೆಚ್ಚಾಗುತ್ತಿದ್ದರಿಂದ ರೂಪದರ್ಶಿ ಮನನೊಂದಿದ್ದಳು.

    ತಮ್ಮಣ್ಣನ ಕಿರುಕುಳ ತಾಳಲಾರದೇ ರೂಪದರ್ಶಿ ಸೈಬರ್ ಕ್ರೈಂ ಪೋಲೀಸರಿಗೆ ದೂರು ನೀಡಿದ್ದಳು. ರೂಪದರ್ಶಿ ದೂರು ಆಧರಿಸಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್

    ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್

    ಬೆಂಗಳೂರು: ಇವತ್ತು ಫ್ಯಾಷನ್ ದುನಿಯಾಕ್ಕೆ ಮಾರು ಹೋಗದವರಿಲ್ಲ. ಬಹುತೇಕ ಹುಡುಗಿಯರು ನಾವು ಮಾಡೆಲ್ ಗಳಾಗಿ ಮಿಂಚಬೇಕು ಅನ್ನೋ ಆಸೆ ಹೊಂದಿರುತ್ತಾರೆ. ಈ ಕನಸನ್ನು ನನಸಾಗಿಸಲು ಮೆಟ್ರೋ ಪಾಲಿಟನ್ ಸಿಟಿಗಳಲ್ಲಿ ಆಡಿಷನ್ ಗಳು ನಡೆಯುತ್ತವೆ. ಅದರಂತೆ ನಗರದ ಖಾಸಗಿ ಹೋಟೆಲ್ ನಲ್ಲಿ, ಮಿಸೆಸ್ ಇಂಡಿಯಾ ಗೆಲಾಕ್ಸಿ ಆಡಿಷನ್ ನಡೆಯಿತ್ತು.

    ರಾಜ್ಯದ ವಿವಿಧೆಡೆಯಿಂದ ಬಂದ ನೂರಾರು ಚೆಲುವಿಯರು ತಮ್ಮ ಬೆಡಗು-ಭಿನ್ನಾಣವನ್ನು ಪ್ರದರ್ಶಿಸಿದರು. ಈ ವೈಯಾರಿಯರ ಜಿಂಗ್ ಚಾಂಕ್ ರ‍್ಯಾಂಪ್ ವಾಕ್ ಎಲ್ಲರನ್ನೂ ಅಟ್ರಾಕ್ಟ್ ಮಾಡಿತ್ತು. ಇಂಡೋ-ವೆಸ್ಟರ್ನ್ ಡ್ರೇಸೆಸ್ಸ್, ಗೌನ್ ಗಳನ್ನು ತೊಟ್ಟು ಬೆಡಗಿಯರು ಮಿಂಚಿದರು.

    ವಿದೇಶಿ ಹಾಡುಗಳ ಹಿನ್ನೆಲೆಗೆ ತಕ್ಕಂತೆ ಹಾಕಿದ ಚೆಲುವೆಯರು ಮೈ ಮಾಟ ಪ್ರದರ್ಶಿಸಿದರು. ತಮ್ಮ ಸೌಂದರ್ಯ, ಪ್ರತಿಭೆಯ ಮೂಲಕ ಸ್ಪರ್ಧೆಯೊಡ್ಡಿದರು. ಜೊತೆಗೆ ಭವಿಷ್ಯದ ಮಾಡೆಲ್ ಗಳಾಗುವ ಭರವಸೆ ತುಂಬಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮುದ್ರದಲ್ಲಿ ಮುಳುಗಿ 19 ವರ್ಷದ ಮಾಡೆಲ್ ಸಾವು

    ಸಮುದ್ರದಲ್ಲಿ ಮುಳುಗಿ 19 ವರ್ಷದ ಮಾಡೆಲ್ ಸಾವು

    ಕೇಪ್‍ಟೌನ್: 19 ವರ್ಷದ ಬ್ರಿಟಿಷ್ ಮಾಡೆಲ್ ಒಬ್ಬಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

    ಸಿನೀಡ್ ಮೂಡ್ಲಿಯರ್(19) ಮೃತಪಟ್ಟ ಮಾಡೆಲ್. ಸಿನೀಡ್ ಖ್ವಾಜುಲು ನಟಲ್‍ನ ಉಮ್ಲಾಹನಗರದ ರೆಸಾರ್ಟ್‍ನಲ್ಲಿ ತನ್ನ ರಜೆ ದಿನಗಳನ್ನು ಕಳೆಯುತ್ತಿದ್ದಾಗ ಈ ಘಟನೆ ನಡೆದಿದೆ. ಸಿನೀಡ್ ಮೂಲತಃ ಲಂಡನ್‍ನವಳಾಗಿದ್ದು, ಲಂಡನ್ ಮಾಡೆಲಿಂಗ್ ಏಜೆನ್ಸಿಗಾಗಿ ಕೆಲಸ ಮಾಡುತ್ತಿದ್ದಳು.

    ಸಿನೀಡ್ ಮುಳುಗುವ ವೇಳೆ ಕೂಡಲೇ ಧಾವಿಸಿದ ಜೀವರಕ್ಷಕ ಸಿಬ್ಬಂದಿ ಆಕೆಯನ್ನು ರಕ್ಷಿಸಿದ್ದಾರೆ. ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾಳೆ ಎಂದು ಸಿನೀಡ್ ತಂದೆ ಬಾಬ್ ಮೂಡ್ಲಿಯರ್ ತಿಳಿಸಿದ್ದಾರೆ.

    ಸಿನೀಡ್ ತನ್ನ ಸ್ನೇಹಿತರ ಜೊತೆ ಸಮುದ್ರದ ಬಳಿ ನಿಂತು ಸೂರ್ಯೋದಯವನ್ನು ವೀಕ್ಷಿಸುತ್ತಿದ್ದಳು. ಆಗ ಅಲ್ಲಿ ಬೀಸಿದ ಭಾರೀ ಅಲೆಗೆ ಆಕೆ ಸಮುದ್ರದಲ್ಲಿ ಬಿದ್ದಿದ್ದಾಳೆ. ಸಮುದ್ರಕ್ಕೆ ಬೀಳುವ ವೇಳೆ ಬಂಡೆಗೆ ತಲೆ ಬಡಿದು ಗಂಭಿರವಾಗಿ ಗಾಯಗೊಂಡಿದ್ದರಿಂದ ಆಕೆ ಮೃತಪಟ್ಟಿದ್ದಾಳೆ ಎಂದರು.

    ಸಿನೀಡ್ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪದವಿಯನ್ನು ಓದುತ್ತಿದ್ದಳು. ಆಕೆ ಮೃತಪಟ್ಟಿದ್ದು ನಮ್ಮ ಕುಟುಂಬದವರಿಗೆ ಒಂದು ದೊಡ್ಡ ಕೆಟ್ಟ ಕನಸು ಎನ್ನಬಹುದು. ಆಕೆ ಮೃತಪಟ್ಟ ವಿಷಯ ತಿಳಿದು ತಕ್ಷಣ ನಾವು ಲಂಡನ್‍ನಿಂದ ದಕ್ಷಿಣ ಆಫ್ರಿಕಾಗೆ ತೆರೆಳಿದ್ದೇವೆ ಎಂದು ಸಿನೀಡ್ ತಂದೆ ಬಾಬ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv