Tag: model

  • ಸಿಂಹ ರೂಪ ತಾಳಿದ ಮಂಗಳೂರಿನ ಮಾಡೆಲ್

    ಸಿಂಹ ರೂಪ ತಾಳಿದ ಮಂಗಳೂರಿನ ಮಾಡೆಲ್

    ಮಂಗಳೂರು: ವಿದೇಶಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತಿದ್ದ ಫೇಸ್ ಪೈಂಟಿಂಗ್ ಇದೀಗ ನಮ್ಮ ರಾಜ್ಯದ ಕರಾವಳಿಯಲ್ಲೂ ಮೊದಲ ಬಾರಿಗೆ ಕಾಣ ಸಿಕ್ಕಿದೆ.

    ಮಂಗಳೂರಿನ ಬೆಂದೂರ್ ವೆಲ್ ನಲ್ಲಿರುವ ಬ್ಯೂಟಿ ಲಾಂಜ್ ಆ್ಯಂಡ್ ಅಕಾಡೆಮಿಯ ಮುಖ್ಯಸ್ಥೆ ಚೇತನಾ ಎಂಬ ಮಾಡೆಲ್, ಮುಖದ ಮೇಲೆ ಮಾಡಿರುವ ಫೇಸ್ ಪೈಂಟಿಂಗ್ ಈಗ ಮಂಗಳೂರಿನಲ್ಲಿ ಸಖತ್ ಫೇಮಸ್ ಆಗಿದೆ. ವಿದೇಶಗಳಲ್ಲಿ ಹೆಚ್ಚಾಗಿ ಮಾಡುವ ಫೇಸ್ ಪೈಂಟಿಂಗ್ ಅನ್ನು ಇವರು ಮಾಡಿ ಈಗ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.

    ಶಿವಮೊಗ್ಗ ಮೂಲದ ಮಾಡೆಲ್ ಶ್ರೇಯಾ ಭಟ್ ಎಂಬವರ ಮುಖದ ಮೇಲೆ ಸತತ 5 ಗಂಟೆಗಳ ಕಾಲ ಪೈಂಟಿಂಗ್ ಮಾಡಿ ಸಿಂಹದ ಕಳೆಯನ್ನು ಕೊಟ್ಟಿದ್ದಾರೆ. ಇದನ್ನು ಮಂಗಳೂರಿನ ಛಾಯಾಗ್ರಾಹಕ ವಿವೇಕ್ ಸಿಕ್ವೇರಾ ಸೆರೆಹಿಡಿದಿದ್ದಾರೆ. ಶ್ರೇಯಾ ಅವರ ಮುಖ ಮತ್ತು ಅವರ ಒರಿಜಿನಲ್ ಕೂದಲನ್ನು ಬಳಿಸಿಕೊಂಡು ಈ ಅದ್ಭುತ ಕಲೆಯನ್ನು ಹೊರ ತಂದಿದ್ದಾರೆ. ಸದ್ಯ ಈ ಸಿಂಹ ಈಗ ಕರಾವಳಿಯಲ್ಲಿ ಸಖತ್ ಫೇಮಸ್ ಆಗಿ ಎಲ್ಲರ ಮನ ಮತ್ತು ಮೊಬೈಲ್ ಗಳಲ್ಲಿ ತುಂಬಿ ಹೋಗಿದೆ.

    ಸಿಂಹದ ಮೇಕಪ್ ನಲ್ಲಿ ಕಣ್ಣುಗಳನ್ನು ಮುಚ್ಚಿ ಕಣ್ಣಿನ ಹುಬ್ಬುಗಳಿಗೆ ವ್ಯಾಕ್ಸ್ ಹಚ್ಚಿ ಅದರ ಮೇಲೆ ಸಿಂಹದ ಕಣ್ಣನ್ನು ಚಿತ್ರಿಸಲಾಗಿದೆ. ಶ್ರೇಯಾಳ ತಲೆ ಕೂದಲನ್ನೇ ಬಳಸಿ ಸಿಂಹದ ಮುಖದ ಸುತ್ತಲಿನ ಕೂದಲನ್ನಾಗಿ ಪರಿವರ್ತಿಸಲಾಗಿದೆ. ಈ ಮೇಕಪ್ ಮುಗಿದ ಬಳಿಕ ಅಲ್ಲಿದ್ದವರೇ ನಿಜವಾದ ಸಿಂಹ ಅಂತ ಹೆದರಿಕೊಂಡಿದ್ದು ಇದೆ ಎಂದು ಚೇತನಾ ಅವರ ವಿದ್ಯಾರ್ಥಿಗಳು ಹೇಳುತ್ತಾರೆ.

    ಬ್ಯೂಟಿಷಿಯನ್ ಆಗಿರುವ ಚೇತನಾ, ಹೇರ್ ಬ್ಯೂಟಿ ಸ್ಪೆಷಲಿಸ್ಟ್. ವಿದೇಶಗಳಿಗೆ ಹೋಗಿ ಹೇರ್ ಬ್ಯೂಟಿ ಬಗ್ಗೆ ಅಧ್ಯಯನ ಮಾಡಿ ಬಂದಿದ್ದಾರೆ. ದೇಶ-ವಿದೇಶಗಳಲ್ಲಿ ಸಾಕಷ್ಟು ಕಡೆ ಇವರ ಕಲೆ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಹೆಲೋವಿನ್ ಡೇ ಗೆ ಒಂದು ವಿಶೇಷ ಮೇಕಪ್ ಮಾಡಿದ್ರು. ನಟಿ ಸ್ವಸ್ತಿಕಾ ಅವರಿಗೆ ವಿಶೇಷವಾಗಿ ಒಂದು ಮೇಕಪ್ ಮಾಡಿದ್ದರು. ಸಮಸ್ತ ಸಂತರ ಪೂರ್ವ ದಿನವಾದ ಹೆಲೋವಿನ್ ಡೇ ವಿಶೇಷವಾಗಿ ಮೂರು ಗಂಟೆಯಲ್ಲಿ ಹೆಲೋ ಗೋಲ್ಡನ್ ಕ್ರಾಪ್ ನ್ನು ತಲೆ ಮೇಲೆ ಇಡಲಾಗಿತ್ತು. ಅಲ್ಲದೇ ತಲೆ ಮೇಲೆ 12 ಕ್ಯಾಂಡಲ್ ಇಟ್ಟು ಈ ಮೇಕಪ್ ಮಾಡಲಾಗಿತ್ತು. ಇವರ ಈ ಅದ್ಭುತ ಕಲೆಗೆ ಎಲ್ಲರೂ ಭೇಷ್ ಅಂದಿದ್ದಾರೆ.

    ತಲೆಗೂದಲು ವಿನ್ಯಾಸದಲ್ಲಿ ಎತ್ತಿದ ಕೈ ಆಗಿರುವ ಚೇತನಾಗೆ ಫೇಸ್ ಪೈಂಟಿಂಗ್ ಆರ್ಟ್ ಇನ್ನು ಕೂಡ ಹೊಸದು. ಪ್ರಥಮ ಪ್ರಯತ್ನಗಳಲ್ಲೇ ಅವರು ಫೇಸ್ ಪೈಂಟಿಂಗ್ ಸಾಕಷ್ಟು ಹೆಸರುವಾಸಿಯಾಗಿದೆ.

  • ಕರಾವಳಿಯ ಪ್ರಸಿದ್ಧ ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

    ಕರಾವಳಿಯ ಪ್ರಸಿದ್ಧ ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

    – ವಿವಾದಕ್ಕೆ ಸಿಲುಕಿದ ಮಾಡೆಲ್ ಬೃಂದಾ ಅರಸ್

    ಮಂಗಳೂರು: ಬೆಂಗಳೂರಿನ ಇಬ್ಬರು ಮಾಡೆಲ್ ಗಳು ಕರಾವಳಿಯ ಪುಣ್ಯಕ್ಷೇತ್ರದ ಬಳಿ ಇರುವ ದೇವರ ಜಲಪಾತದ ಎದುರು ಅರೆಬೆತ್ತಲೆಯಾಗಿ ಫೋಟೋ ಶೂಟ್ ಮಾಡಿದ್ದು, ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ 13 ಶತಮಾನದ ಇತಿಹಾಸವಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ನೆಲೆಸಿರೋ ಪರಮಾತ್ಮ ಇಲ್ಲಿಂದ 2 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಎಂಬ ಐತಿಹ್ಯ ಇದೆ. ಹೀಗಾಗಿ ಇದಕ್ಕೆ ದೇವರಗುಂಡಿ ಎಂದು ಜನ ಕರೆಯುತ್ತಾರೆ. ವಿಶೇಷ ದಿನಗಳಲ್ಲಿ ವರ್ಷಕ್ಕೆ ಏಳೆಂಟು ಬಾರಿ ದೇವರಹೊಂಡದಿಂದ ತೀರ್ಥವನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ.

    ಈ ಸ್ಥಳದಲ್ಲಿ ಸ್ಥಳಿಯರು ನೀರಿಗೆ ಇಳಿಯುವುದಿಲ್ಲ. ಅಷ್ಟು ಪವಿತ್ರ ಭಾವನೆಯಿಂದ ಇಲ್ಲಿನ ಪರಿಶುದ್ಧತೆಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಆದರೆ ಬೆಂಗಳೂರಿನ ಮಾಡೆಲ್ ಗಳಾದ ಬೃಂದಾ ಅರಸ್ ಮತ್ತು ಆಕೆಯೊಂದಿಗೆ ಮತ್ತೊಬ್ಬಳು ಮಾಡೆಲ್ ಸೇರಿಕೊಂಡು ಬಿಕಿನಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇದು ಸ್ಥಳೀಯರ ವಿರೋಧಕ್ಕೆ ಕಾರಣವಾಗಿದೆ.

    ಬಿಕಿನಿ ಶೂಟಿಂಗ್ ನಡೆದ ಸ್ಥಳದಲ್ಲಿ ಸುತ್ತಾಮುತ್ತ ಮನೆಗಳಿವೆ. ಆದರೂ ಹೀಗೆ ಅರೆಬೆತ್ತಲಾಗಿ ಓಡಾಡಿ ಸ್ಥಳೀಯರಿಗೆ ಮುಜುಗರವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಇಂದು ಸ್ಥಳೀಯರು ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಗೆ ದೂರು ಕೂಡ ನೀಡಿದ್ದಾರೆ. ಈ ವಿಚಾರ ದೇವಸ್ಥಾನದ ಆಡಳಿತ ಮಂಡಳಿಗೂ ಕೂಡ ಗೊತ್ತಿಲ್ಲವಂತೆ. ಈ ದೇವರ ಗುಂಡಿ ಜಲಪಾತ ಇರುವುದು ದೇವಸ್ಥಾನದಿಂದ 2 ಕಿಲೋಮೀಟರ್ ದೂರದಲ್ಲಿ. ಅಲ್ಲಿ ಶೂಟ್ ಮಾಡುವ ಬಗ್ಗೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಆಡಳಿತ ಮಂಡಳಿಯವರು ಹೇಳಿದ್ದಾರೆ.

    ಈ ಬಗ್ಗೆ ಆಡಳಿತ ಮಂಡಳಿ ಸುಳ್ಯ ತಹಶಿಲ್ದಾರ್ ಗೆ ಮತ್ತು ಅರಣ್ಯ ಇಲಾಖೆಗೆ ದೂರು ನೀಡುವ ನಿರ್ಧಾರ ಮಾಡಿದೆ. ಹೇಳಿ ಕೇಳಿ ಇದು ಅರಣ್ಯ ಪ್ರದೇಶ. ಹೀಗೆ ನಿರ್ಜನ ಪ್ರದೇಶದಲ್ಲಿ ಎರಡ್ಮೂರು ಜನರು ಅರೆಬೆತ್ತಾಲಾಗಿದ್ದರೆ ಅವರಿಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇರುತ್ತೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಟಿಕ್‍ಟಾಕ್‍ಗಾಗಿ ದೇಶ ಬಿಡಲು ಸಿದ್ಧವಾಗಿದ್ದ ಮಾಡೆಲ್

    ಟಿಕ್‍ಟಾಕ್‍ಗಾಗಿ ದೇಶ ಬಿಡಲು ಸಿದ್ಧವಾಗಿದ್ದ ಮಾಡೆಲ್

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಟಿಕ್‍ಟಾಕ್ ಬ್ಯಾನ್ ಆಗಿದ್ದಕ್ಕೆ ಟಿಕ್‍ಟಾಕ್ ಸ್ಟಾರ್ ಜನ್ನತ್ ಮಿರ್ಜಾ ದೇಶವನ್ನೆ ತೊರೆಯುವ ನಿರ್ಧಾರ ಮಾಡಿದ್ದಳು ಎಂಬ ಮಾಹಿತಿ ತಡವಾಗಿ ಲಭಿಸಿದೆ.

    ಟಿಕ್‍ಟಾಕ್ ಮೂಲಕವೇ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಜನ್ನತ್ ಮಿರ್ಜಾ, ತನ್ನ ಕ್ಯೂಟ್ ವಿಡಿಯೋಗಳ ಮೂಲಕ ಟಿಕಾಟಾಕ್ ಆ್ಯಪಿನಲ್ಲಿ ಒಂದು ಕೋಟಿಗೂ ಅಧಿಕವಾದ ಅಭಿಮಾನಿಗಳು ಮತ್ತು ಫೋಲೋವರ್ಸ್ ಹೊಂದಿದ್ದಳು. ಈ ಮೂಲಕ ಪಾಕಿಸ್ತಾನದಲ್ಲಿ ನಂಬರ್ ಓನ್ ಟಿಕ್‍ಟಾಕ್ ಸ್ಟಾರ್ ಆಗಿ ಹೊರಹೊಮ್ಮಿದ್ದಳು.

    ಆದರೆ ಇತ್ತೀಚೆಗೆ ದೇಶದಲ್ಲಿ ಟಿಕ್ ಟಾಕ್ ಮೂಲಕ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಯುವ ಜನರು ಹಾಳಾಗುತಿದ್ದರೆ. ಅಶ್ಲೀಲ ವಿಡಿಯೋಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಟಿಕ್ ಟಾಕ್ ಅನ್ನು ನಿಷೇಧಿಸಿತ್ತು.

    ಜನ್ನತ್ ಮಿರ್ಜಾ ಮಾಡೆಲ್ ಆಗಿದ್ದು, ಟಿಕ್‍ಟಾಕ್ ಮೂಲಕವೇ ಕೋಟಿ ಕೋಟಿ ಹಣ ಸಂಪಾದನೆ ಮಾಡುತ್ತಿದ್ದರು. ಈಗ ಟಿಕ್‍ಟಾಕ್ ಬ್ಯಾನ್ ಆದರೆ ನನ್ನ ಅದಾಯಕ್ಕೆ ಪೆಟ್ಟು ಬೀಳಲಿದೆ. ಹೀಗಾಗಿ ನಾನು ದೇಶ ತೊರೆಯುವ ನಿರ್ಧಾರ ಮಾಡಿದ್ದೇನೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಅಭಿಮಾನಿಯೊಬ್ಬರ ಬಳಿ ಹೇಳಿಕೊಂಡಿದ್ದಳು.

    ಇನ್‍ಸ್ಟಾಗ್ರಾಮಿನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನ್ನತ್ ಮಿರ್ಜಾ ಅವರು, ಟಿಕ್‍ಟಾಕ್ ಬ್ಯಾನ್ ಆಗುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಒಂದು ಪೋಸ್ಟ್ ಹಾಕಿದ್ದಳು. ಇದರಿಂದ ಅಭಿಮಾನಿಯೊಬ್ಬ ಈಗ ಏನೂ ಮಾಡುತ್ತೀರಾ ಎಂದು ಪ್ರಶ್ನೆ ಮಾಡಿದ್ದ. ಇದಕ್ಕೆ ಉತ್ತರಿಸಿದ್ದ ಜನ್ನತ್ ಪಾಕಿಸ್ತಾನ ಒಂದು ಸುಂದರ ರಾಷ್ಟ್ರ ಆದರೆ ಪಾಕಿಸ್ತಾನದಲ್ಲಿರುವ ಜನರ ಮನಸ್ಥಿತಿ ಸರಿಯಿಲ್ಲ. ನಾನು ದೇಶ ಬಿಡುತ್ತೇನೆ ಎಂದು ಹೇಳಿದ್ದರು.

    https://www.instagram.com/p/CEHP6nNAL9_/

    ಸೋಮವಾರ ಮಾತನಾಡಿದ ಪಾಕಿಸ್ತಾನ ಟೆಲಿಕಮ್ಯೂನಿಕೇಷನ್ ಅಥಾರಿಟಿ (ಪಿಟಿಎ) ವಕ್ತಾರ, ಟಿಕ್‍ಟಾಕ್ ಸ್ಥಳೀಯ ನಿಯಮಗಳನ್ನು ಪಾಲಿಸೋದಾಗಿ ಒಪ್ಪಿಕೊಂಡಿದೆ. ಜೊತೆಗೆ ತನ್ನ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನ ಮಾಡಿಕೊಳ್ಳಲು ಸಮ್ಮತಿಸಿದೆ. ಇನ್ಮುಂದೆ ಪಾಕಿಸ್ತಾನದಲ್ಲಿ ಲಭ್ಯವಿರುವ ಟಿಕ್‍ಟಾಕ್ ನಲ್ಲಿ ಅಶ್ಲೀಲ ಮತ್ತು ಕಾನೂನುಬಾಹಿರ ದೃಶ್ಯಗಳು ಪ್ರಸಾರವಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    https://www.instagram.com/p/CC6Br72gt7m/

    ಈಗ ದೇಶ ಬಿಡಲು ಸಿದ್ಧವಾಗಿದ್ದ ಮಾಡೆಲ್ ಜನ್ನತ್ ಮಿರ್ಜಾ ಅವರಿಗೆ ಪಾಕ್ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಈಗ ಟಿಕ್‍ಟಾಕ್ ಪಾಕಿಸ್ತಾನದಲ್ಲಿ ಲಭ್ಯವಿದೆ ಈಗ ದೇಶವನ್ನು ಬಿಡುವ ಯೋಜನೆ ಇದಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಜನ್ನತ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    https://www.instagram.com/p/CClWLbrA4ob/

  • ನನ್ನ ಮುಂದೆ ಬೆತ್ತಲಾದ್ರೆ ಚಿತ್ರದಲ್ಲಿ ಅವಕಾಶ- 17ನೇ ವಯಸ್ಸಿನಲ್ಲಿ ನಡೆದಿದ್ದ ಘಟನೆ ಬಿಚ್ಚಿಟ್ಟ ಮಾಡೆಲ್

    ನನ್ನ ಮುಂದೆ ಬೆತ್ತಲಾದ್ರೆ ಚಿತ್ರದಲ್ಲಿ ಅವಕಾಶ- 17ನೇ ವಯಸ್ಸಿನಲ್ಲಿ ನಡೆದಿದ್ದ ಘಟನೆ ಬಿಚ್ಚಿಟ್ಟ ಮಾಡೆಲ್

    – ಅಸಭ್ಯವಾಗಿ ನನ್ನನ್ನು ಮುಟ್ಟಲು ಪ್ರಯತ್ನಿಸಿದ್ರು

    ಮುಂಬೈ: ಚಿತ್ರರಂಗದಲ್ಲಿ ಮೀಟೂ ಅಭಿಯಾನ ನಡೆಯುತ್ತಿದ್ದ ಸಂದರ್ಭದಲ್ಲಿ ಅನೇಕ ನಟಿಯರು ಚಿತ್ರರಂಗದಲ್ಲಿ ತಾವು ಅನುಭವಿಸಿದ್ದ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದರು. ಇದೀಗ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಮಾಡೆಲ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

    ಭಾರತೀಯ ಮಾಡೆಲ್ ಪೌಲಾ ತನಗೆ 17ನೇ ವಯಸ್ಸಿನಲ್ಲಿದ್ದಾಗಲೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ನಟಿ ಪೌಲಾ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಸಾಜಿದ್ ಖಾನ್ ನೀಡಿದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

    “ಮೀಟೂ ಅಭಿಯಾನ ಶುರುವಾದ ಸಂದರ್ಭದಲ್ಲಿ ಸಾಜಿದ್ ಖಾನ್ ಮೇಲೆ ಅನೇಕರು ಮಾತನಾಡಿದ್ದರು. ಆದರೆ ನಾನು ಆಗ ಸಾಜಿದ್ ಖಾನ್ ವಿರುದ್ಧ ಮಾತನಾಡಲು ಧೈರ್ಯ ಮಾಡಲಿಲ್ಲ. ಯಾಕೆಂದರೆ ಚಿತ್ರರಂಗದಲ್ಲಿ ಗಾಡ್ ಫಾದರ್ ಇಲ್ಲದ ನಾನು ಕುಟುಂಬಕ್ಕಾಗಿ ಸಂಪಾದನೆ ಮಾಡುತ್ತಿದ್ದೆ. ಆದ್ದರಿಂದ ಮಾತನಾಡದೆ ಸುಮ್ಮನಿದ್ದೆ” ಎಂದು ಬರೆದುಕೊಂಡಿದ್ದಾರೆ.

    “ಈಗ ನನ್ನೊಂದಿಗೆ ನನ್ನ ಪೋಷಕರು ಇಲ್ಲ. ನನಗಾಗಿ ಸಂಪಾದಿಸುತ್ತಿದ್ದೇನೆ. ಆದ್ದರಿಂದ ಈಗ ನಾನು 17ನೇ ವಯಸ್ಸಿನಲ್ಲಿ ಸಾಜಿದ್ ಖಾನ್‍ನಿಂದ ಕಿರುಕುಳಕ್ಕೊಳಗಾಗಿದ್ದೇನೆ ಎಂದು ಹೇಳಲು ನನಗೆ ಧೈರ್ಯವಿದೆ ಎಂದರು. ಅಷ್ಟೇ ಅಲ್ಲದೇ, ಅವರು ನನ್ನೊಂದಿಗೆ ಅಸಭ್ಯವಾಗಿ ಮಾತನಾಡಿದರು. ನನ್ನನ್ನು ಮುಟ್ಟಲು ಪ್ರಯತ್ನಿಸಿದರು. ಅವರ ಮುಂಬರುವ ‘ಹೌಸ್‍ಫುಲ್’ ಸಿನಿಮಾದಲ್ಲಿ ಅವಕಾಶ ಬೇಕು ಎಂದರೆ ನನ್ನ ಮುಂದೆ ಬೆತ್ತಲಾಗುವಂತೆ ಹೇಳಿದರು” ಎಂದು ಹೌಸ್‍ಫುಲ್ ಚಿತ್ರದ ವೇಳೆ ನಡೆದ ಘಟನೆಯ ಬಗ್ಗೆ ಹೇಳಿಕೊಂಡಿದ್ದಾರೆ.

    ಇದೇ ರೀತಿ ಎಷ್ಟು ಹುಡುಗಿಯರೊಂದಿಗೆ ಮಾಡಿದ್ದಾರೆಂದು ದೇವರಿಗೆ ತಿಳಿದಿದೆ. ನಾನು ಈಗ ಹೇಳುತ್ತಿರುವುದು ನನ್ನ ಮೇಲೆ ಕರುಣೆ ತೋರಲಿ ಅಂತಲ್ಲ. ನಾನು ಬಾಲ್ಯದಲ್ಲಿದ್ದಾಗ ಈ ಘಟನೆ ನನ್ನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಈ ಬಗ್ಗೆ ಮಾತನಾಡಲು ನಿರ್ಧರಿಸಿದ್ದೇನೆ. ಇವರು ಕನಸುಗಳನ್ನು ನುಚ್ಚುನೂರು ಮಾಡುತ್ತಾರೆ. ಹೀಗಾಗಿ ಇಂತಹವರನ್ನು ಜೈಲಿಗೆ ಕಳುಹಿಸಬೇಕು. ಆದರೆ ನಾನು ಸುಮ್ಮನಿರಲ್ಲ. ಇದರ ಬಗ್ಗೆ ಮಾತನಾಡದೆ ಇರುವುದು ತಪ್ಪು ಎಂದು ಮಾಡೆಲ್ ಪೌಲಾ ಸುದೀರ್ಘವಾಗಿ ಇನ್‍ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

    2018ರಲ್ಲಿ ಸಾಜಿದ್ ಖಾನ್ ಮೇಲೆ ನಟಿ ರೇಚಲ್ ವೈಟ್, ಸಲೋನಿ ಚೋಪ್ರಾ ಮತ್ತು ಪತ್ರಕರ್ತೆ ಮೂವರು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಂತರ ‘ಹೌಸ್‍ಫುಲ್ 4’ ಸಿನಿಮಾ ನಿರ್ದೇಶನದಿಂದ ಸಾಜಿದ್ ಖಾನ್‍ನನ್ನು ದೂರ ಇಡಲಾಗಿತ್ತು. ಇದೀಗ ಮಾಡೆಲ್ ಕೂಡ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದ್ದಾರೆ.

    https://www.instagram.com/p/CE6l9OyD4SP/?utm_source=ig_embed

  • ಸಾವನ್ನಪ್ಪಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೂಪದರ್ಶಿಯ ಟ್ರೋಲ್

    ಸಾವನ್ನಪ್ಪಿದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ರೂಪದರ್ಶಿಯ ಟ್ರೋಲ್

    – ಜನವರಿಯಲ್ಲಿ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್
    – ಕರಾಚಿಯ ವಿಮಾನ ದುರಂತದಲ್ಲಿ ಸಾವು

    ಇಸ್ಲಾಮಾಬಾದ್: ಕರಾಚಿ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ಪಾಕ್ ರೂಪದರ್ಶಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

    ಜಾರಾ ಆಬಿದಾ ಸಾವನ್ನಪ್ಪಿದ ಬಳಿಕವೂ ಟ್ರೋಲ್ ಆಗುತ್ತಿರುವ ರೂಪದರ್ಶಿ. ಧಾರ್ಮಿಕ ನಿಯಮಗಳನ್ನ ಜಾರಾ ಪಾಲನೆ ಮಾಡುತ್ತಿರಲಿಲ್ಲ ಎಂದು ಒಂದು ಪಂಗಡದ ಜನ ಟ್ರೋಲ್ ಮಾಡಲಾಗುತ್ತಿದೆ. ಟ್ರೋಲ್‍ಗಳಿಗೆ ಪರ-ವಿರೋಧಗಳು ವ್ಯಕ್ತವಾಗುತ್ತಲೇ ಜಾರಾ ಬಳಸುತ್ತಿದ್ದ ಸೋಶಿಯಲ್ ಮೀಡಿಯಾ ಖಾತೆಗಳನ್ನು ಡಿ ಆ್ಯಕ್ಟಿವ್ ಮಾಡಲಾಗಿದೆ.

    ಪ್ಲೇನ್ ಕ್ರ್ಯಾಶ್ ನಲ್ಲಿ ಜಾರಾ ಬದುಕುಳಿದಿದ್ದಾರೆ ಎಂಬ ಸುದ್ದಿಗಳು ಪಾಕಿಸ್ತಾನದಲ್ಲಿ ವ್ಯಾಪಕವಾಗಿ ಹಬ್ಬಿದ್ದವು. ಎಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದ ಕುಟುಂಬಸ್ಥರು, ಜಾರಾ ನಮ್ಮನ್ನು ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾಳೆ ಎಂದು ಖಚಿತಪಡಿಸಿದ್ದರು. ಸಾವಿನ ಸುದ್ದಿ ಖಚಿತವಾದ್ರೂ ಆಕೆ ಧರ್ಮ ವಿರೋಧಿ ಎಂಬ ಹೇಳಿಕೆಗಳನ್ನ ಬಳಸಿ ಟ್ರೋಲ್ ಮಾಡಿದ್ದಾರೆ.

    ಇರ್ಫಾನ್ ಎಂಬ ಸೋಶಿಯಲ್ ಮೀಡಿಯಾದಲ್ಲಿ, ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತೆ. ಯಾವ ಮುಸ್ಲಿಂ ಮಹಿಳೆ ತನ್ನ ಶರೀರವನ್ನು ಬಹಿರಂಗವಾಗಿ ತೋರಿಸುತ್ತಾಳೆ ಆಕೆಗೆ ನರಕ ಪ್ರಾಪ್ತಿಯಾಗುತ್ತೆ. ದೇವರು ಅಂತಹವರನ್ನು ಎಂದಿಗೂ ಕ್ಷಮಿಸಲ್ಲ. ಸ್ವರ್ಗ ಕೇವಲ ಶುದ್ಧ ಪುರುಷ ಮತ್ತು ಶುದ್ಧ ಮಹಿಳೆಯರಿಗೆ ಸಿಗುತ್ತೆ ಎಂದು ಬರೆದುಕೊಂಡಿದ್ದಾನೆ.

    ಜಾರಾ ಪರ ಬ್ಯಾಟಿಂಗ್: ಧರ್ಮ ವಿರೋಧಿ ಪಟ್ಟ ಕಟ್ಟಿ ಜಾರಾರನ್ನು ಕೆಲವರು ಟೀಕಿಸಿದ್ರೆ, ಮತ್ತೊಂದಿಷ್ಟು ಜನ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಕೆಲವರು ಜಾರಾರ ಸಾವನ್ನು ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದಾರೆ. ಆ ಜನ ಜಾರಾ ವೃತ್ತಿಯನ್ನು ಕೆಟ್ಟದ್ದು ಅಂತ ಹೇಳೋದು ಅವರ ವೈಯಕ್ತಿಕ ಅಭಿಪ್ರಾಯ. ಈ ಸಮಯದಲ್ಲಿ ಸಾವನ್ನಪ್ಪಿರುವ ಜಾರಾಗಾಗಿ ಪ್ರಾರ್ಥನೆ ಮಾಡಬೇಕಿದೆ ಎಂದು ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಕರಾಚಿ ವಿಮಾನ ದುರಂತಕ್ಕೆ 97 ಮಂದಿ ಬಲಿ

    28 ವರ್ಷದ ಜಾರಾ ಆಬಿದಾ ಮಾಡೆಲ್ ಲೋಕದಲ್ಲಿ ಗುರುತಿಸಿಕೊಳ್ಳುತ್ತಿದ್ದರು. ಹಲವು ವಿಶೇಷ ಕಾರ್ಯಕ್ರಮಗಳಲ್ಲಿ ಜಾರಾ ಭಾಗಿಯಾಗುವ ಮೂಲಕ ಮಾಡೆಲ್ ಲೋಕದಲ್ಲಿ ತಮ್ಮದೇ ಹೆಸರು ಮಾಡಿದ್ದರು. ಜನವರಿಯಲ್ಲಿ ಈ ವರ್ಷದ ಬೆಸ್ಟ್ ಫೀಮೇಲ್ ಮಾಡೆಲ್ ಅವಾರ್ಡ್ ಸಹ ಜಾರಾ ಪಡೆದುಕೊಂಡು ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದರು. ಈ ವರ್ಷದ ಅಂತ್ಯದಲ್ಲಿ ಜಾರಾ ಸಿನಿಮಾ ಸೆಟ್ಟೇರಲಿತ್ತು. ಅಷ್ಟರಲ್ಲಿ ಕರಾಚಿ ವಿಮಾನ ದುರಂತದಲ್ಲಿ ಜಾರಾ ಸಾವು ಆಗಿದೆ.

  • ನನಗೆ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಯೇ ಮಾದರಿ- ಕೈ ಶಾಸಕ ಚಿಂಚೋರೆ

    ನನಗೆ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿಯೇ ಮಾದರಿ- ಕೈ ಶಾಸಕ ಚಿಂಚೋರೆ

    ಧಾರವಾಡ: ಕಾಂಗ್ರೆಸ್ ಮುಖಂಡ ದೀಪಕ್ ಚಿಂಚೋರೆಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾದರಿಯಂತೆ. ಹೀಗಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

    ಹೌದು, ಧಾರವಾಡದ ಕಾಂಗ್ರೆಸ್ ಮುಖಂಡ ಚಿಂಚೋರೆಗೆ ಬಾಲಚಂದ್ರ ಜಾರಕಿಹೊಳಿ ಮಾದರಿಯಂತೆ. ಲಾಕ್‍ಡೌನ್ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೋಳಿ ಅವರು ಕೆಎಂಎಫ್‍ನಿಂದ ಉಚಿತ ಹಾಲನ್ನು ಕೊಟ್ಟಿದ್ದರು. ಇದನ್ನು ನೋಡಿದ ದೀಪಕ್ ಚೊಂಚೋರೆ ಕೂಡ ಬಡ ಜನರಿಗೆ ದಿನಸಿ ಕಿಟ್ ಕೊಟ್ಟಿದ್ದಾರೆ.

    ಸದ್ಯ ಲಾಕ್‍ಡೌನ್ ಆರಂಭವಾದಾಗಿನಿಂದ ಈ ಕಾಂಗ್ರೆಸ್ ಮುಖಂಡ 20 ಸಾವಿರ ದಿನಸಿ ಕಿಟ್‍ನ್ನು ಕೊಟ್ಟಿದ್ದಾರೆ. ರಂಜಾನ್ ಹಬ್ಬ ಇರುವ ಕಾರಣ, ಶಾವಿಗೆ ಕೂಡ ಕಿಟ್‍ನಲ್ಲಿ ಹಾಕಿ ಕೊಡುತಿದ್ದಾರೆ. ಬಾಲಚಂದ್ರ ಜಾರಕಿಹೊಳಿ ನನ್ನ ಗೆಳೆಯ, ಅವರು ಮಾಡಿದಂತೆಯೇ ನಾನು ಕೂಡ ಬಡವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ದೀಪಕ್ ಚಿಂಚೋರೆ ಹೇಳಿದ್ದಾರೆ.

  • ಟಿಕ್‍ಟಾಕ್ ಹುಚ್ಚಾಟ – ಟಾಯ್ಲೆಟ್ ನೆಕ್ಕಿ ‘ಕೊರೊನಾ ವೈರಸ್ ಚಾಲೆಂಜ್’ ಎಂದ ಮಾಡೆಲ್

    ಟಿಕ್‍ಟಾಕ್ ಹುಚ್ಚಾಟ – ಟಾಯ್ಲೆಟ್ ನೆಕ್ಕಿ ‘ಕೊರೊನಾ ವೈರಸ್ ಚಾಲೆಂಜ್’ ಎಂದ ಮಾಡೆಲ್

    ವಾಷಿಂಗ್ಟನ್: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಬಗ್ಗೆ ವಿಚಿತ್ರವಾಗಿ ತನ್ನ ಅಭಿಪ್ರಾಯ ಹಂಚಿಕೊಂಡು ಮಾಡೆಲ್ ಓರ್ವಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ‘ಕೊರೊನಾ ವೈರಸ್ ಚಾಲೆಂಜ್’ ಎಂದು ಮಾಡೆಲ್ ವಿಮಾನದ ಟಾಯ್ಲೆಟ್ ನೆಕ್ಕಿದ ಟಿಕ್‍ಟಾಕ್ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.

    ಅಮೆರಿಕ ಮೂಲದ ಮಾಡೆಲ್ ಅವಾ ಲೌಸಿ(21) ಟಿಕ್ ಟಾಕ್ ವಿಡಿಯೋ ಮಾಡಿ ಅಪ್ಲೋಡ್ ಮಾಡಿದ್ದಳು. ‘ಇಟ್ಸ್ ಕೊರೊನಾ ಟೈಮ್’ ಎಂಬ ಹಾಡಿಗೆ ಲೌಸಿ ಟಾಯ್ಲೆಟ್ ನೆಕ್ಕುತ್ತಾ ಟಿಕ್‍ಟಾಕ್ ಮಾಡಿದ್ದಾಳೆ. ದಯವಿಟ್ಟು ಇದನ್ನು ತಿಳಿದುಕೊಳ್ಳಿ. ವಿಮಾನದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೀಗೆ ಮಾಡಿ ಎಂದು ವಿಡಿಯೋಗೆ ಕ್ಯಾಪ್ಷನ್ ಹಾಕಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಳು. ಇದನ್ನು ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಗರಂ ಆಗಿದ್ದು, ವಿಡಿಯೋ ಸಖತ್ ವೈರಲ್ ಆಗಿತ್ತು. ಅತ್ತ ನೆಟ್ಟಿಗರು ಮಾಡೆಲ್ ವಿರುದ್ಧ ಕೆಂಡ ಕಾರುತ್ತಿದ್ದಂತೆ ಇತ್ತ ಆಕೆ ವಿಡಿಯೋವನ್ನೇ ಡಿಲೀಟ್ ಮಾಡಿದ್ದಾಳೆ.

    https://twitter.com/realavalouiise/status/1238915362470625292

    ಇನ್‍ಸ್ಟಾಗ್ರಾಮ್‍ನಲ್ಲಿ ಸುಮಾರು 1 ಲಕ್ಷದ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಲೌಸಿ ಈ ಹಿಂದೆ ಹಲವು ಟೆಲಿವಿಷನ್ ಟಾಕ್ ಶೋಗಳಲ್ಲಿ ಕಾಣಿಸಿಕೊಂಡಿದ್ದಳು. ಕೊರೊನಾ ವೈರಸ್ ಚಾಲೆಂಜ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಲೌಸಿ ಹೀಗೆ ಮಾಡಿದ್ದಾಳೆ ಎಂಬ ಆರೋಪ ಮಾಡುತ್ತಿದ್ದಂತೆ ವಿಡಿಯೋವನ್ನು ಆಕೆ ಡಿಲೀಟ್ ಮಾಡಿ ಸುಮ್ಮನಾಗಿದ್ದಾಳೆ.

    ಲೌಸಿ ಆರಂಭಿಸಿದ ಕೊರೊನಾ ವೈರಸ್ ಚಾಲೆಂಜ್ ಅನ್ನು ಅನೇಕರು ಸ್ವಿಕರಿಸಿದ್ದು, ಲೌಸಿಯಂತೆ ವಿಮಾನಗಳಲ್ಲಿ ಟಾಯ್ಲೆಟ್ ನೆಕ್ಕುತ್ತಿರುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಕೊರೊನಾ ವೈರಸ್ ಚಾಲೆಂಜ್ ಮಾಡುತ್ತಿರುವವರನ್ನು ಟ್ರೋಲ್ ಮಾಡುತ್ತಿದ್ದಾರೆ.

  • ಮಿಸ್ ಯೂನಿವರ್ಸ್ – ಭಾರತವನ್ನು ಪ್ರತಿನಿಧಿಸಲು ಮಂಗ್ಳೂರು ಯುವತಿ ಆಯ್ಕೆ

    ಮಿಸ್ ಯೂನಿವರ್ಸ್ – ಭಾರತವನ್ನು ಪ್ರತಿನಿಧಿಸಲು ಮಂಗ್ಳೂರು ಯುವತಿ ಆಯ್ಕೆ

    – ಮಿಸ್ ದಿವಾ 2020 ಕಿರೀಟ ತನ್ನದಾಗಿಸಿಕೊಂಡ ಆಡ್ಲಿನ್ ಕ್ಯಾಸ್ಟೆಲಿನೋ

    ಮಂಗಳೂರು: ಮಿಸ್ ದಿವಾ 2020 ಇದರ ಎಂಟನೇ ಆವೃತ್ತಿ ಮುಂಬೈನ ಅಂಧೇರಿಯಲ್ಲಿ ನಡೆದಿದ್ದು, ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಈ ಬಾರಿಯ ಮಿಸ್ ಯೂನಿವರ್ಸ್ 2020 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

    20 ಮಂದಿ ಹೆಸರಾಂತ ಮಾಡೆಲ್‍ಗಳು ಪಾಲ್ಗೊಂಡಿದ್ದ ಕಣದಲ್ಲಿ ಕಳೆದ ಬಾರಿಯ ಚಾಂಪಿಯನ್ ವರ್ತಿಕಾ ಸಿಂಗ್ ವಿಜಯಿಯೆಂದು ಘೋಷಣೆಯಾದ ಬಳಿಕ ಆಡ್ಲಿನ್‍ಗೆ ಕಿರೀಟ ತೊಡಿಸಿದರು. ವರ್ತಿಕಾ ಸಿಂಗ್ 2019ರ ಸಾಲಿನ ಮಿಸ್ ಯೂನಿವರ್ಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದರು.

    ಫೆ.22ರಂದು ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಈ ಮಾಡೆಲಿಂಗ್ ಸ್ಪರ್ಧೆಯಲ್ಲಿ ಬಾಲಿವುಡ್ ನಟರಾದ ಅನಿಲ್ ಕಪೂರ್, ಆದಿತ್ಯ ರಾಯ್ ಕಪೂರ್, ಮಿಸ್ ಯೂನಿವರ್ಸ್ 2000 ಲಾರಾ ದತ್ತಾ, ಡಿಸೈನರ್ ಗಳಾದ ಶಿವನ್ ಮತ್ತು ನರೇಶ್, ಮಿಸ್ ಸುಪ್ರಾ ನ್ಯಾಶನಲ್ 2014 ಆಶಾ ಭಟ್, ಮಿಸ್ ಯೂನಿವರ್ಸ್ ಶ್ರೀಲಂಕಾ 2006 ಜಾಕ್ವೇಲಿನ್ ಫೆರ್ನಾಂಡಿಸ್, ಡಿಸೈನರ್ ನಿಕಿಲ್ ಮೆಹ್ರಾ, ಗ್ಯಾವಿನ್ ಮಿಗೆಲ್ ತೀರ್ಪುಗಾರರ ತಂಡದಲ್ಲಿದ್ದರು.

    ನಟಿ ಮಲೈಕಾ ಅರೋರಾ ಫೈನಲ್ ಸ್ಪರ್ಧೆಯಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಆವಿತ್ರಿ ಚೌಧರಿ ಮಿಸ್ ದಿವಾ 2020 ಆಗಿ ಆಯ್ಕೆಯಾಗಿದ್ದು, ಮಿಸ್ ಸುಪ್ರನ್ಯಾಷನಲ್ 2020 ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. 2019ರಲ್ಲಿ ಶೆಫಾಲಿ ಸೂದ್ ಸುಪ್ರನ್ಯಾಷನಲ್ ಇಂಡಿಯಾ ಆಗಿ ಮೂಡಿ ಬಂದಿದ್ದರು. ಮಂಗಳೂರು ಮೂಲದ ಆಡ್ಲಿನ್ ಕ್ಯಾಸ್ಟೆಲಿನೋ ಸೇರಿದಂತೆ ಕಳೆದೆರಡು ವರ್ಷದಲ್ಲಿ ಬೇರೆ ಬೇರೆ ವಿಭಾಗದಲ್ಲಿ ಜಯ ಗಳಿಸಿದ್ದ ಮಾಡೆಲ್‍ಗಳು ಪರಸ್ಪರ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕೊನೆಯ ಸುತ್ತಿನಲ್ಲಿ ಆಡ್ಲಿನ್ ಅವರನ್ನು ವಿಜಯಿಯೆಂದು ಘೋಷಿಸಲಾಯಿತು. ಕೆಜಿಎಫ್ ನಟಿ ಶ್ರೀನಿಧಿ ಶೆಟ್ಟಿ 2016ರಲ್ಲಿ ಮಿಸ್ ಸುಪ್ರನ್ಯಾಷನಲ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

  • ಇಂಟರ್‌ನ್ಯಾಷನಲ್‌ ಸೂಪರ್ ಮಾಡೆಲ್ ಇನ್ ಇಂಡಿಯಾ ಅವಾರ್ಡ್ ಗೆದ್ದ ಜೂ. ಮಾಡೆಲ್

    ಇಂಟರ್‌ನ್ಯಾಷನಲ್‌ ಸೂಪರ್ ಮಾಡೆಲ್ ಇನ್ ಇಂಡಿಯಾ ಅವಾರ್ಡ್ ಗೆದ್ದ ಜೂ. ಮಾಡೆಲ್

    ಕಲಬುರಗಿ: ಈ ಹಿಂದೆ ಹಾಂಕಾಂಗ್‍ನ ಟ್ಯಾಲೆಂಟ್ ಸ್ಟಾರ್ ಇಂಟರ್‌ನ್ಯಾಷನಲ್‌ ಅವಾರ್ಡ್ ಪಡೆದಿದ್ದ ಕಲಬುರಗಿಯ ಅನನ್ಯ ರೈ, ಇದೀಗ ಯಂಗೆಸ್ಟ್ ಇಂಟರ್‌ನ್ಯಾಷನಲ್‌ ಸೂಪರ್ ಮಾಡೆಲ್ ಇನ್ ಇಂಡಿಯಾ ಅವಾರ್ಡ್ ಪಡೆದಿದ್ದಾಳೆ.

    ಬೆಂಗಳೂರಿನ ಖಾಸಗಿ ಹೋಟಲಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಮೂಲೆಗಳಿಂದ 13 ವರ್ಷದೊಳಗಿನ ಹಲವು ಜೂನಿಯರ್ ಮಾಡಲ್‍ಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಕಲಬುರಗಿಯ ಅನನ್ಯ ರೈಗೆ ಯಂಗೆಸ್ಟ್ ಸ್ಟಾರ್ ಇಂಟರ್‌ನ್ಯಾಷನಲ್‌ ಅವಾರ್ಡ್ ಸಿಕ್ಕಿದೆ. ಈ ಮೂಲಕ ಕಲಬುರಗಿಯ ಕೀರ್ತಿ ಪಟಾಕೆಯನ್ನು ಅನನ್ಯ ರೈ ಇಡೀ ದೇಶದ ತುಂಬಾ ಪಸರಿಸಿದ್ದಾಳೆ. ಬಾಲಿವುಡ್ ಖ್ಯಾತ ನಟಿ ಬಿಪಾಶಾ ಬಸು ಅವರೇ ಪ್ರಶಸ್ತಿಯನ್ನು ನೀಡಿದ್ದಾರೆ. ಇದನ್ನೂ ಓದಿ: ಅಂತರಾಷ್ಟ್ರೀಯ ಮಾಡೆಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಕಲಬುರಗಿಯ ಬಾಲಕಿ

    ಅನನ್ಯ ತಮ್ಮ ತಂದೆ-ತಾಯಿಯ ಏಕೈಕ ಪುತ್ರಿ. ಅನನ್ಯಳ ತಂದೆ ಹೋಟೆಲ್ ಉದ್ಯಮಿ ಆಗಿದ್ದು, ತಾಯಿ ರೂಪಾಕ್ಷಿ ಅವರು ಕಲಬುರಗಿಯ ಜೆಸ್ಕಾಂ ಇಲಾಖೆಯಲ್ಲಿ ಜೆಇ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅನನ್ಯ ಹೈದರಾಬಾದ್‍ನ ನರ್ಸರಿ ಶಾಲೆಯಲ್ಲಿ ಕ್ಯಾಟ್‍ವಾಕ್ ಮಾಡಿ ಬಹುಮಾನ ಗೆದಿದ್ದಳು. ಬಳಿಕ ಅನನ್ಯ ಮಾಡೆಲ್ ಆಗಬೇಕೆಂಬ ಆಸೆಯನ್ನು ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು. ಸುಮಿತ್ರ ರೈ ಅವರು ತಮ್ಮ ಮಗಳ ಡಯಟ್ ಬಗ್ಗೆ ನಿರ್ಧರಿಸುತ್ತಾರೆ. ಆರೋಗ್ಯ ಮತ್ತು ಸೌಂದರ್ಯವನ್ನು ನೋಡಿಕೊಳ್ಳುವ ಸಲುವಾಗಿ ಅನನ್ಯ ಜಂಕ್ ಫುಡ್ ತಿನ್ನುವುದಿಲ್ಲ.

    ಈ ಹಿಂದೆ ಹಾಂಕಾಂಗ್‍ನಲ್ಲಿ ನಡೆದ ಜೂನಿಯರ್ ಇಂಟರ್‌ನ್ಯಾಷನಲ್‌ ಮಾಡೆಲ್ ಸ್ಪರ್ಧೆಯಲ್ಲಿ ಅನನ್ಯ ರೈ ಚಿನ್ನದ ಪದಕ ಗಳಿಸಿದ್ದಳು. ಭಾರತದ ಪರ ಜೂನಿಯರ್ ಮಾಡೆಲಿಂಗ್‍ನಲ್ಲಿ ಮೊದಲ ಬಾರಿಗೆ ರಾಜ್ಯದಿಂದ ಆಯ್ಕೆಯಾದ ಮಾಡೆಲ್ ಅನನ್ಯ ಆಗಿದ್ದಳು. ದೇಶದಲ್ಲಿ ಮಿಂಚಿದ್ದ ಅನನ್ಯ ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಪ್ರತಿಭೆಯನ್ನು ಅನಾವರಣಗೊಳಿಸಿ, ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಳು

  • ಮಾಜಿ ಶಾಸಕನ ಪುತ್ರನಿಂದ ಮಹಿಳೆ ಮೇಲೆ ದೌರ್ಜನ್ಯ

    ಮಾಜಿ ಶಾಸಕನ ಪುತ್ರನಿಂದ ಮಹಿಳೆ ಮೇಲೆ ದೌರ್ಜನ್ಯ

    – ಮಾಡೆಲ್ ಮೇಲೆ ದರ್ಪ

    ಹೈದರಾಬಾದ್: ತೆಲಂಗಾಣ ವೈದ್ಯೆಯ ಮೇಲಿನ ಅತ್ಯಾಚಾರದ ಕುರಿತು ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಹೊತ್ತಿನಲ್ಲೇ, ಬಿಜೆಪಿಯ ಮಾಜಿ ಶಾಸಕನ ಪುತ್ರ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿ ದರ್ಪ ತೋರಿದ್ದಾನೆ.

    ಹೈದರಾಬಾದ್‍ನ ಮಾಧಾಪುರ ಪ್ರದೇಶದ ನೊವೊಟೆಲ್ ಹೋಟೆಲ್‍ನ ಆರ್ಟಿಸ್ಟ್ರಿ ಪಬ್‍ನಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಆಶಿಶ್ ಗೌಡ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ವೃತ್ತಿಯಲ್ಲಿ ಮಾಡೆಲ್ ಆಗಿದ್ದು, ತೆಲುಗು ಬಿಗ್ ಬಾಸ್‍ನ ಕಂಟೆಸ್ಟ್ ಆಗಿದ್ದರು ಎಂದು ಹೇಳಲಾಗಿದೆ. ಘಟನೆ ಕುರಿತು ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆಶಿಶ್ ಪಟಂಚೇರು ಕ್ಷೇತ್ರದ ಮಾಜಿ ಶಾಸಕ ಟಿ.ನಂದೀಶ್ವರ ಗೌಡ ಅವರ ಪುತ್ರನಾಗಿದ್ದಾನೆ. ಆರೋಪಿಯ ವಿರುದ್ಧ ಪೊಲೀಸರು ಮಹಿಳೆಯ ಬಳಿ ಅಸಭ್ಯವಾಗಿ ವರ್ತಿಸಿದ್ದರ ಕುರಿತು ಪ್ರಕರಣ ದಾಖಲಿಸಿದ್ದಾರೆ.

    ಆಶ್ಚರ್ಯವೆಂದರೆ ಪಶು ವೈದ್ಯೆಯ ಮೇಲಿನ ಅತ್ಯಾಚಾರವನ್ನು ಖಂಡಿಸಿ ಹೈದರಾಬಾದ್‍ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಆರೋಪಿ ಸಹ ಭಾಗವಹಿಸಿ ಬೆಂಬಲ ಸೂಚಿಸಿದ್ದ ಎನ್ನಲಾಗಿದೆ.

    ಆಶಿಶ್ ವಿರುದ್ಧ ಐಪಿಸಿ ಸೆಕ್ಷನ್ 354(ಮಹಿಳೆ ಬಳಿ ಅಸಭ್ಯವಾಗಿ ವರ್ತಿಸಿದ ಕ್ರಿಮಿನಲ್ ಅಪರಾಧ) ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಹಾಗೂ ಆತನ ಇಬ್ಬರು ಸ್ನೇಹಿತರು ನನ್ನ ಬಳಿ ಅಸಭ್ಯವಾಗಿ ವರ್ತಿಸಿದರು. ಅಲ್ಲದೆ ಒತ್ತಾಯಪೂರ್ವಕವಾಗಿ ತಳ್ಳಿದರು ಎಂದು 27 ವರ್ಷದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮಾಧಾಪುರ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್(ಎಸ್‍ಎಚ್‍ಒ) ವೆಂಕಟ್ ರೆಡ್ಡಿ ಮಾಹಿತಿ ನೀಡಿದ್ದಾರೆ.

    ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೋಟೆಲ್ ಹಾಗೂ ಪಬ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ, ಇನ್ನೂ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಈ ಪಂಚತಾರಾ ಹೋಟೆಲಿನ ಆರ್ಟಿಸ್ಟ್ರಿ ಪಬ್ ಸೆಲೆಬ್ರಿಟಿಗಳ ನೆಚ್ಚಿನ ತಾಣ ಎಂದು ಹೇಳಲಾಗಿದೆ.

    ಮದ್ಯದ ಬಾಟಲಿಯನ್ನು ದೊಡ್ಡದು ನೀಡಿಲ್ಲ ಎಂದು 2012ರಲ್ಲಿ ಆಶಿಶ್ ಅಂಗಡಿಯ ಕೆಲಸಗಾರನ ಮೇಲೆ ಹಲ್ಲೆ ಮಾಡಿದ್ದರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದನು. ಆರೋಪಿಯ ಕುಟುಂಬವು ಮೂಲತಃ ತೆಲಗು ದೇಶಂ ಪಕ್ಷವಾಗಿದ್ದು, ನಂತರ ಕಾಂಗ್ರೆಸ್ ಹಾಗೂ ಇದೀಗ ಬಿಜೆಪಿಗೆ ಸೇರಿದ್ದಾರೆ ಎಂದು ವರದಿಯಾಗಿದೆ.