Tag: model

  • ನಿನ್ನೆ ಕೂಲಿ ಕೆಲಸ ಮಾಡುತ್ತಿದ್ದವ ಇಂದು ಮಾಡೆಲ್- ಅದೃಷ್ಟ ಅಂದ್ರೆ ಇದು

    ನಿನ್ನೆ ಕೂಲಿ ಕೆಲಸ ಮಾಡುತ್ತಿದ್ದವ ಇಂದು ಮಾಡೆಲ್- ಅದೃಷ್ಟ ಅಂದ್ರೆ ಇದು

    ತಿರುವನಂತಪುರಂ: ಜೀವನವು ರಾತ್ರೋರಾತ್ರಿ ಹೇಗೆ ಬದಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಬದಲಾದ ಅದೃಷ್ಟದ ಕಥೆಯಲ್ಲಿ ಕೇರಳದ ಮಮ್ಮಿಕಾ ಕೂಡ ಒಬ್ಬರಾಗಿದ್ದಾರೆ. 60 ವರ್ಷದ ಮಮ್ಮಿಕಾ ಕೂಲಿ ಕಾರ್ಮಿಕರಾಗಿ ಕೆಲಸ ಮಡುತ್ತಿದ್ದರು. ಆದರೆ ದಿಢೀರಂತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದಾರೆ.

    ಮಾಸಿದ ಲುಂಗಿ ಮತ್ತು ಶರ್ಟ್ ತೊಡುತ್ತಿದ್ದರು. ಕೂಲಿ ಕೆಲಸವನ್ನು ಮಾಡುತ್ತಾ ಜೀವನವನ್ನು ಸಾಗಿಸುತ್ತಿದ್ದರು. ಆದರೆ ಇದೀಗ ಇವರನ್ನು ಗುರುತಿಸಿದ ಜಾಹೀರಾತು ಏಜೆನ್ಸಿಯೊಂದು ಮಾಡೆಲ್ ಆಗಿ ಮಾಡಿದ್ದಾರೆ. ಇವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿವೆ.

    ಖ್ಯಾತ ಛಾಯಾಗ್ರಾಹಕ ಶರೀಕ್ ವಯಾಲಿಲ್ ಅದ್ಭುತ ಫೋಟೋಗಳನ್ನು ಸೆರೆಹಿಡಿದಿದ್ದಾರೆ. ಮಾಡೆಲ್ ಆಗುವ ಮೊದಲು ಅವರು ಹೇಗಿದ್ದರು ಎನ್ನುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಕೂಲಿ ಕಾರ್ಮಿಕರ ಡ್ರೆಸ್‍ನಲ್ಲಿದ್ದರೂ ಅದೇನೋ ಗ್ಲಾಮರ್ ಲುಕ್ ಅವರ ಮೊಗದಲ್ಲಿ ಕಾಣುತ್ತದೆ. ಹೀಗಾಗಿ ಮಮ್ಮಿಕಾ ಅವರನ್ನು ಶರೀಕ್ ಅವರು ಮೇಕಪ್ ಕಲಾವಿದಾರ ಮಜ್ನಾಸ್, ಆಶಿಕ್ ಪುವಾದ್ ಮತ್ತು ಶಬೀಬ್ ವಯಾಲಿಲ್ ಅವರಿಂದ ಮೇಕಪ್ ಮಾಡಿಸಿ ಬ್ರ್ಯಾಂಡ್ ಬಟ್ಟೆಯನ್ನು ಹಾಕಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಸೂಟುಬೂಟು, ದುಬಾರಿ ಗ್ಲಾಸ್ ಧರಿಸಿ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

  • ಟೆರೇಸ್‍ನಿಂದ ಜಿಗಿದು ಮಾಡೆಲ್ ಆತ್ಮಹತ್ಯೆಗೆ ಯತ್ನ

    ಟೆರೇಸ್‍ನಿಂದ ಜಿಗಿದು ಮಾಡೆಲ್ ಆತ್ಮಹತ್ಯೆಗೆ ಯತ್ನ

    ಜೈಪುರ: ಮಾಡೆಲ್ ಒಬ್ಬರು ಹೋಟೆಲ್ ಟೆರೇಸ್‍ನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧ್‍ಪುರದಲ್ಲಿ ನಡೆದಿದೆ.

    ಯುವತಿಯನ್ನು ಗುಂಗುನ್ ಉಪಾಧ್ಯಾಯ ಎಂದು ಗುರುತಿಸಲಾಗಿದ್ದು, ಈಕೆ ಓರ್ವ ಮಾಡೆಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಜೋಧ್‍ಪುರ ನಗರದ ನಿವಾಸಿಯಾಗಿದ್ದಾರೆ. ಉದಯಪುರದಿಂದ ಜೋಧ್‍ಪುರಕ್ಕೆ ಆಗಮಿಸಿದ ಯುವತಿ ಅದೇ ರಾತ್ರಿ ಜೋಧ್‍ಪುರದ ರತನಾಡ ಪ್ರದೇಶದ ಹೋಟೆಲ್ ಲಾಡ್ರ್ಸ್ ಇನ್‍ನ ಆರನೇ ಮಹಡಿಯಿಂದ ಜಿಗಿದಿದ್ದಾರೆ.

    ಟೆರೇಸ್ ಮೇಲಿನಿಂದ ಜಿಗಿಯುವ ಮುನ್ನ, ಗುಂಗುನ್ ತಂದೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ, ತನ್ನನ್ನು ಕೊನೆಯದಾಗಿ ನೋಡುವಂತೆ ಮುಖವನ್ನು ತೋರಿಸಿದ್ದಾರೆ. ಇದನ್ನೂ ಓದಿ: ಪುರುಷರ ಟಾಯ್ಲೆಟ್‍ಗೆ ನುಗ್ಗಿದ್ದ ದೀಪಿಕಾ ಪಡುಕೋಣೆ, ಆಲಿಯಾ ಭಟ್!

    ಈ ವೇಳೆ ಗುಂಗುನ್ ಅವರ ತಂದೆ ಗಣೇಶ್ ಉಪಾಧ್ಯಾಯ ಅವರು ಕೂಡಲೇ ಪೊಲೀಸರಿಗೆ ಕಡೆ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಗುಂಗುನ್ ಇರುವ ಸ್ಥಳ ಪತ್ತೆ ಹಚ್ಚಿದ ಪೊಲೀಸರು ಸ್ಥಳಕ್ಕೆ ಹೋಗುವ ಮುನ್ನವೇ ಹೋಟೆಲ್‍ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಇದೀಗ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಗುಂಗುನ್ ಅವರ ಕಾಲು ಮತ್ತು ಎದೆ ಮುರಿದು ಹೋಗಿದೆ. ಸಾಕಷ್ಟು ರಕ್ತಸ್ರಾವವಾಗಿದ್ದರಿಂದ ಇದೀಗ ಅವರಿಗೆ ವೈದ್ಯರು ರಕ್ತ ಕೊಡಿಸುತ್ತಿದ್ದಾರೆ.

    ಸದ್ಯ ಗುಂಗುನ್ ಸಾಯುವ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬುವುದು ಇನ್ನೂ ತಿಳಿದುಬಂದಿಲ್ಲ. ಗುಂಗುನ್ ಸ್ಥಿತಿ ಸದ್ಯ ಗಂಭೀರವಾಗಿದ್ದು, ಈಗಲೇ ಏನನ್ನು ಹೇಳುವ ಸ್ಥಿತಿಯಲ್ಲಿ ಇಲ್ಲ. ಆಕೆಗೆ ಪ್ರಜ್ಞೆ ಬಂದ ನಂತರವಷ್ಟೇ ಸತ್ಯ ಬಹಿರಂಗವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಣಿಪುರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ, ಟಿಕೆಟ್‌ ವಂಚಿತರ ಬೆಂಬಲಿಗರಿಂದ ಪ್ರತಿಭಟನೆ

  • MRS India Earth ಗೆದ್ದ ಬೆಂಗಳೂರಿನ ವೈದ್ಯೆ

    MRS India Earth ಗೆದ್ದ ಬೆಂಗಳೂರಿನ ವೈದ್ಯೆ

    ಬೆಂಗಳೂರು: ದೆಹಲಿಯಲ್ಲಿ ನಡೆದ MRS ಇಂಡಿಯಾ ಅರ್ಥ್ 2021ರ ಪ್ರಶಸ್ತಿಯನ್ನು ಬೆಂಗಳೂರಿನ ವೈದ್ಯೆ ಮುಡಿಗೇರಿಸಿಕೊಂಡಿದ್ದಾರೆ.

    ಡಾ. ರಶ್ಮಿ ಶಂಕರ್ ಪ್ರಶಸ್ತಿ ಬಾಚಿಕೊಂಡ ವೈದ್ಯೆ. ಪ್ರಸ್ತುತ ಬೆಂಗಳೂರಿನ ಅಪೋಲೊ ಆಸ್ಪತ್ರೆಯಲ್ಲಿ ಅನಸ್ತೇಶಿಯಾ ವಿಭಾಗದ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಐಪಿಎಲ್ 2022 ಹರಾಜು – 5 ವಿದೇಶಿ ವಿಕೆಟ್ ಕೀಪರ್‌ಗಳ ಮೇಲೆ ಫ್ರಾಂಚೈಸಿಗಳ ಕಣ್ಣು

    ದೆಹಲಿಯಲ್ಲಿ ನಡೆದ MRS ಇಂಡಿಯಾ ಅರ್ಥ್ 2021 ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ 24 ಸ್ಪರ್ಧಿಗಳು ಭಾಗವಹಿಸಿದ್ದರು. ಅವರನ್ನೆಲ್ಲಾ ಹಿಂದಿಕ್ಕಿ ಬೆಂಗಳೂರಿನ ವೈದ್ಯೆ MRS ಇಂಡಿಯಾ ಅರ್ಥ್ ಕಿರೀಟವನ್ನು ಮುಡಿಗೇರಿಸಿಕೊಂಡು ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ. ವೃತ್ತಿಯಲ್ಲಿ ವೈದ್ಯೆರಾಗಿರುವ ಡಾ. ರಶ್ಮಿ ಮಾಡೆಲ್, ಡ್ಯಾನ್ಸ್ ನಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಕಾಶದಲ್ಲಿ ಅಚ್ಚರಿ – ಏನಿದು ಸ್ಟಾರ್‌ಲಿಂಕ್‌ ಉಪಗ್ರಹಗಳು? ದರ ಎಷ್ಟು? ನೆಟ್‌ ಹೇಗೆ ಸಿಗುತ್ತೆ?

  • ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

    ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸಿದ Miss Bumbum 2021

    ಮುಂಬೈ: ಮನೆ, ಕಾರಿಗೆ ಇನ್ಶೂರೆನ್ಸ್ ಮಾಡುವುದನ್ನು ಕೇಳಿದ್ದೇವೆ. ಆದರೆ ಮಿಸ್ ಬಮ್‍ಬಮ್ 2021 ನಥಿ ಕಿಹರಾ ಬ್ಯಾಕ್ ಬ್ಯೂಟಿಗೆ 13 ಕೋಟಿ ಇನ್ಶೂರೆನ್ಸ್ ಮಾಡಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.

    35 ವರ್ಷ ವಯಸ್ಸಿನ ನಥಿ ಕಿಹರಾ ಬ್ರೆಜಿಲಿಯನ್ ಮಾಡೆಲ್ ಆಗಿದ್ದಾರೆ. ಈಕೆ ಮಗುವಿಗೆ ಜನ್ಮ ನೀಡಿದ ನಾಲ್ಕು ತಿಂಗಳ ನಂತರ ಅತ್ಯಂತ ಕಿರಿಯ ಬಂಬಮ್ ವಲ್ರ್ಡ್ ಸುಂದರಿ ಎಂದು ಆಯ್ಕೆಯಾಗಿದ್ದಾರೆ. 1.3 ಮಿಲಿಯನ್ ಪೌಂಡ್ (ಅಂದಾಜು ರೂ 13 ಕೋಟಿ)ಗೆ ವಿಮೆ ಮಾಡಿದ್ದಾರೆ. ಇದನ್ನೂ ಓದಿ:   ಚಿಕ್ಕವಯಸ್ಸಿನ ಹುಡುಗನ ಜೊತೆ ಡೇಟಿಂಗ್ ಮಾಡುವ ಬಗ್ಗೆ ರಶ್ಮಿಕಾ ಉತ್ತರ ಏನು ಗೊತ್ತಾ?

    Nathy Kihara

    ನನ್ನ ಪೃಷ್ಠದ ಕಾರಣದಿಂದ ನಾನು ಪ್ರಸಿದ್ಧಳಾಗಿದ್ದೇನೆ. ಇದು ಬ್ರೆಜಿಲ್‍ನಲ್ಲಿ ಅತಿ ದೊಡ್ಡದಾಗಿದೆ. ಆದ್ದರಿಂದ ಅದನ್ನು ವಿಮೆಗೆ ಹಾಕುವುದು ನ್ಯಾಯೋಚಿತವಾಗಿದೆ. ನನ್ನ ಹಿಂಬದಿಯ ಗಾತ್ರದಿಂದ ತನಗೆ ಇನ್ನೂ ತೃಪ್ತಿಯಿಲ್ಲ. ಹೆಚ್ಚಿನ ವ್ಯಾಯಾಮ ಮಾಡುವ ಮೂಲಕ ಅದನ್ನು ಹೆಚ್ಚಿಸುವ ಯೋಜನೆ ಇದೆ. 126 ಸೆಂಟಿಮೀಟರ್ ಹಿಂದೆ ಇದೆ. ಆದರೆ ಸದ್ಯದ ಗುರಿಯು 130 ಸೆಂ.ಮೀ ಅನ್ನು ಹೊಂದುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ:  ಪ್ರಿಯತಮನನ್ನು ಪರಿಚಯಿಸಿದ ನಟಿ ಕಾವ್ಯ ಗೌಡ

    ಈಕೆಗೆ ಇಬ್ಬರು ಮಕ್ಕಳಿದ್ದಾರೆ. ಒಂಬತ್ತು ವರ್ಷದ ಹುಡುಗ ಮತ್ತು ಈ ವರ್ಷದ ಆರಂಭದಲ್ಲಿ ಅವರ ಮಗಳು ಜನಿಸಿದ್ದಾಳೆ. ಪ್ರಪಂಚದಾದ್ಯಂತ ಸ್ವಾಭಿಮಾನದ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕ ಅಮ್ಮಂದಿರನ್ನು ಪ್ರತಿನಿಧಿಸಲು ಮತ್ತು ಪೆÇ್ರೀತ್ಸಾಹಿಸಲು ಸಾಧ್ಯವಾಗಿರುವುದಕ್ಕೆ ನನಗೆ ಗೌರವವಿದೆ. ನನ್ನ ಪೃಷ್ಠವು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ನನ್ನ ದೇಹವನ್ನು ಕಾಪಾಡಿಕೊಳ್ಳಲು ನಾನು ಸಾಕಷ್ಟು ತರಬೇತಿ ನೀಡುತ್ತೆನೆ. ತಾಯ್ತನದ ನಂತರ ಜಿಮ್‍ನಲ್ಲಿ ತೂಕ, ಆಹಾರದ ಮೇಲೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.

  • ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್- ನೆಟ್ಟಿಗರಿಂದ ತರಾಟೆ!

    ತಂದೆಯ ಶವದ ಮುಂದೆ ಮಾಡೆಲ್ ಫೋಟೋ ಶೂಟ್- ನೆಟ್ಟಿಗರಿಂದ ತರಾಟೆ!

    ಫ್ಲೋರಿಡಾ: ಮಾಡೆಲ್ ಒಬ್ಬಳು ತನ್ನ ತಂದೆಯ ಮೃತದೇಹದ ಮುಂದೆಯೇ ಫೋಟೋಶೂಟ್ ಮಾಡಿಸಿಕೊಂಡು ಭಾರೀ ಚರ್ಚೆಗೆ ಗ್ರಾಸವಾದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.

    ಮಾಡೆಲ್ ಅನ್ನು ಜಯೆ ರಿವೇರಾ(20) ಎಂದು ಗುರುತಿಸಲಾಗಿದ್ದು, ಈಕೆ ಫ್ಲೋರಿಡಾದ ಮೈಮಿ ನಗರದ ಸಾಮಾಜಿಕ ಜಾಲತಾಣದ ಸ್ಟಾರ್ ಆಗಿದ್ದಾಳೆ. ಇದೀಗ ಈಕೆಯ ಫೋಟೋಶೂಟ್ ಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ವೀಡಿಯೋ ನೋಡಿ ಮಗುವಿಗೆ ಜನ್ಮ ನೀಡಿದ ಹುಡುಗಿ – ಪ್ರಿಯಕರ ಅರೆಸ್ಟ್

    ಇನ್‍ಸ್ಟಾ ಖಾತೆಯಲ್ಲಿ ರಿವೇರಾ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾಳೆ. ಈಕೆ ತನ್ನ ತಂದೆಯ ಶವದ ಮುಂದೆ ನಿಂತು ಫೋಟೋಶೂಟ್ ಮಾಡಿಸಿದ್ದಾಳೆ. ಅಲ್ಲದೆ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡು, ‘ಚಿಟ್ಟೆ ದೂರ ಹಾರಿದೆ. ನೀವು ನನ್ನ ಬೆಸ್ಟ್ ಫ್ರೆಂಡ್. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಚೆನ್ನಾಗಿಯೇ ಬದುಕಿದ್ರಿ’ ಎಂದು ಬರೆದುಕೊಂಡಿದ್ದಾಳೆ. ಮತ್ತು #DadLess ಎಂದು ಹ್ಯಾಶ್‍ಟ್ಯಾಗ್ ಕೂಡ ನೀಡಿದ್ದಾಳೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಆಕೆಯ ವಿರುದ್ಧ ಕಿಡಿಕಾರುತ್ತಿದ್ದಾರೆ.

    ರಿವೇರಾ ತನ್ನ ತಂದೆಯ ಮೃತದೇಹದ ಮುಂದೆ ನಿಂತು ಸಖತ್ ಸ್ಟೈಲಿಶ್ ಆಗಿ ನಗುತ್ತಾ, ವಿಧ ವಿಧವಾಗಿ ಫೋಟೋಕ್ಕೆ ಪೋಸ್ ನೀಡಿದ್ದಾಳೆ. ಇದು ನೆಟ್ಟಿಗರ ಸಿಟ್ಟಿಗೆ ಕಾರಣವಾಗಿದೆ. 20 ವರ್ಷದ ಈಕೆಗೆ 3 ಲಕ್ಷಕ್ಕೂ ಅಧಿಕ ಟಿಕ್ ಟಾಕ್ ಫಾಲೋವರ್ಸ್ ಇದ್ದಾರೆ.

    ತಂದೆಗೆ ಗೌರವ ಕೊಡಿ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ನೀವು ಈ ಫೋಟೋಗಳನ್ನು ಕುಡಲೇ ಡಿಲೀಟ್ ಮಾಡಿ ಕ್ಷಮೆ ಕೇಳಿ, ಸ್ವಲ್ಪವೂ ಸೂಕ್ಷ್ಮತೆ ಎಂಬಕ್ಷ್ಮಿಲ್ಲ. ಇದೊಂದು ಕೆಟ್ಟ ರೀತಿಯ ನಡವಳಿಕೆ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

  • ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ನವದೆಹಲಿ: ಹೇರ್ ಕಟ್ ಮಾಡುವಾಗ ಎಡವಟ್ಟು ಮಾಡಿರುವುದಕ್ಕೆ ಮಾಡೆಲ್ ಗೆ 2 ಕೋಟಿ ಪರಿಹಾರ ನೀಡುವಂತೆ ಹೋಟೆಲ್ ಒಂದಕ್ಕೆ NCDRC (National Consumer Disputes Redressal Commission)ಆದೇಶ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಖ್ಯಾತ ರೂಪದರ್ಶಿಯಾಗಬೇಕು ಎಂಬ ಆಸೆಯಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ ಮಹಿಳೆಗೆ ತಪೊದಾ ಹೇರ್ ಕಟ್ ಮತ್ತು ಚಿಕಿತ್ಸೆ ಮಾಡಿದ್ದಕ್ಕಾಗಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (NCDRC) ದೆಹಲಿ ಮೂಲದ ಸಲೂನ್ ಒಂದಕ್ಕೆ ಆದೇಶ ನೀಡಿದೆ. ಇದನ್ನೂ ಓದಿ:  ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

    ರೂಪದರ್ಶಿ ಆಶ್ನಾ ರಾಯ್ ತಮ್ಮ ನೀಳ ಕೇಶದ ಕಾರಣದಿಂದಾಗಿ ಹಲವಾರು ಕಂಪೆನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಐಷಾರಾಮಿ ಹೋಟೆಲ್‍ನಲ್ಲಿ ಇರುವ ಸಲೂನ್‍ಗೆ ಅವರು ಕೇಶವಿನ್ಯಾಸಕ್ಕಾಗಿ ಭೇಟಿಕೊಟ್ಟಿದ್ದರು. ಈ ವೇಳೆ ಅವರ ಕೂದಲು ಹಾಳಾದ್ದರಿಂದ ಜಾಹೀರಾತುಗಳು ತಪ್ಪಿಹೋಗುವ ಸಂದರ್ಭ ಎದುರಾಗಿದೆ. ಹೀಗಾಗಿ 2018 ರಲ್ಲಿ ಕಂಪೆನಿಯ ವಿರುದ್ಧ  NCDRCಗೆ ಅವರು ದೂರು ನೀಡಿದ್ದರು.

    ಈ ಕುರಿತಾಗಿ ವಿಚಾರಣೆ ನಡೆಸಿದ ಎನ್‍ಸಿಡಿಆರ್  ಅಧ್ಯಕ್ಷ ಆರ್.ಕೆ ಅಗರ್‍ವಾಲ್ ಮತ್ತು ಡಾ.ಎಂ ಕಂಠೀಕರ್ ಅವರಿದ್ದ ಪೀಠ ತಪ್ಪಾದ ಹೇರ್ ಕಟ್ ನಿಂದ ರೂಪದರ್ಶಿಯಾಗಬೇಕು ಎಂಬ ಅವರ ಕನಸು ನಾಶವಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಆದೇಶಿಸಿದೆ.

  • ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

    ಕುಡಿದ ಅಮಲಿನಲ್ಲಿ ಸೇನಾ ವಾಹನಕ್ಕೆ ಒದ್ದು ಯುವತಿ ರಂಪಾಟ – ವೀಡಿಯೋ ವೈರಲ್

    ಗ್ವಾಲಿಯರ್: ಕುಡಿದ ಅಮಲಿನಲ್ಲಿ 22 ವರ್ಷದ ಮಾಡೆಲ್ ಒಬ್ಬಳು ಸೇನಾ ವಾಹನದ ಮೇಲೆ ದಾಳಿ ನಡೆಸಿ ರಂಪಾಟ ಮಾಡಿರುವ ಘಟನೆ ಬುಧವಾರ ರಾತ್ರಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

    delhi model

    ಯುವತಿ ದೆಹಲಿ ಮೂಲದ ಮಾಡೆಲ್ ಆಗಿದ್ದು, ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಗಲಾಟೆ ಸೃಷ್ಟಿಸಿ, ಸೇನಾ ವಾಹನವನ್ನು ನಿಲ್ಲಿಸಿ ಅದರ ಮೇಲೆ ದಾಳಿ ನಡೆಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.  ಇದನ್ನೂ ಓದಿ: 10 ವರ್ಷದಲ್ಲಿ 25 ಬಾರಿ ಅನ್ಯ ಪುರುಷರೊಂದಿಗೆ ಓಡಿಹೋದಳು – ಗಂಡನಿಗೆ ಮಾತ್ರ ಅವಳೇ ಬೇಕಂತೆ

    delhi model

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯುವತಿ ಸೇನೆಯ ವಾಹನವನ್ನು ನಿಲ್ಲಿಸಿ ಹೆಡ್‍ಲೈಟ್‍ಗೆ ಪದೇ, ಪದೇ ಒದ್ದು, ಹಾನಿಗೊಳಿಸಿದ್ದಾಳೆ. ಅಲ್ಲದೇ ಆಕೆಯನ್ನು ತಡೆಯಲು ಬಂದ ಸೇನಾಧಿಕಾರಿಯನ್ನು ಹಿಂದಕ್ಕೆ ತಳ್ಳಿದ್ದಾಳೆ ಮತ್ತು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿ ಪಡಿಸಿದ್ದಾಳೆ. ಇನ್ನೂ ಈ ಘಟನೆ ಪಡವ್ ಪೊಲೀಸ್ ಠಾಣೆಗೆ ವರದಿಯಾಗುತ್ತಿದ್ದಂತೆಯೇ, ಮಹಿಳಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಯುವತಿಯನ್ನು ಕರೆದೊಯ್ದಿದ್ದಾರೆ.  ಇದನ್ನೂ ಓದಿ: ‘ಧಾರವಾಡಿ ಎಮ್ಮೆ’ ತಳಿಗೆ ದೊರೆತಿದೆ ರಾಷ್ಟ್ರಮಟ್ಟದ ಮಾನ್ಯತೆ!

    ಈ ಕುರಿತಂತೆ ಪಡವ್ ಪೊಲೀಸ್ ಠಾಣೆಯ ಉಸ್ತುವಾರಿ ವಿವೇಕ್, ಯುವತಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿದ್ದಾಳೆ. ಸೇನೆಯ ಕಡೆಯಿಂದ ಯಾವುದೇ ದೂರುಗಳಿಲ್ಲ. ಇದೀಗ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಕೆಯ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ದೆಹಲಿಯಿಂದ ಗ್ವಾಲಿಯರ್‌ಗೆ ಯುವತಿ ಮತ್ತು ಆಕೆಯ ಇಬ್ಬರು ಸ್ನೇಹಿತೆಯರು ಬಂದಿದ್ದು, ನಗರದ ಹೋಟೆಲ್‍ನಲ್ಲಿ ತಂಗಿರುವುದಾಗಿ ತಿಳಿಸಿದ್ದಾರೆ.

  • ಲಾಕ್‍ಡೌನ್ ಖಿನ್ನತೆ – ಆತ್ಮಹತ್ಯೆಗೆ ಶರಣಾದ ರೂಪದರ್ಶಿ

    ಲಾಕ್‍ಡೌನ್ ಖಿನ್ನತೆ – ಆತ್ಮಹತ್ಯೆಗೆ ಶರಣಾದ ರೂಪದರ್ಶಿ

    ನವದೆಹಲಿ: ಲಾಕ್‍ಡೌನ್ ನಿಂದಾಗಿ ಮನೆಯಲ್ಲಿಯೇ ಲಾಕ್ ಆಗಿದ್ದ ರೂಪದರ್ಶಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.

    ಪ್ರಿಯಾ ಉರ್ಫ್ ಭಾವನಾ ಆತ್ಮಹತ್ಯೆಗೆ ಶರಣಾದ ಯುವತಿ. ಲಾಕ್‍ಡೌನ್ ಮುಂಚೆ ಪ್ರಿಯಾ ಮುಂಬೈನಲ್ಲಿ ವಾಸವಾಗಿದ್ದು, ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಕಳೆದ ಎರಡು ಬಾರಿಯೂ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ತನ್ನ ವೃತ್ತಿಜೀವನದ ಕುರಿತು ಪ್ರಿಯಾ ಚಿಂತೆಯಲ್ಲಿದ್ದರು.

    ಈ ಬಾರಿ ಲಾಕ್‍ಡೌನ್ ಘೋಷಣೆಯಾದಾಗ ಪ್ರಿಯಾ ಗ್ರೇಟರ್ ನೋಯ್ಡಾದಲ್ಲಿರುವ ಸೋದರಿ ಬಳಿ ಬಂದು, ಅಲ್ಲಿಯೇ ಉಳಿದುಕೊಂಡಿದ್ದರು. ಆದ್ರೆ ಪ್ರಿಯಾ ಕೆರಿಯರ್ ಕುರಿತು ಚಿಂತಿಸಿ ಖಿನ್ನತೆಗೊಳಗಾಗಿದ್ದರು. ಇದನ್ನೂ ಓದಿ: ಅಧಿಕಾರಿ ಸತ್ಯ ಹೇಳಿದ್ದಕ್ಕೆ ಸಚಿವ ಸುಧಾಕರ್​​​ಗೆ ಇರಿಸು ಮುರಿಸು

    ಸೋಮವಾರ ರಾತ್ರಿ ಬಾಲ್ಕನಿಗೆ ಬಂದ ಪ್ರಿಯಾ 14ನೇ ಮಹಡಿಯಿಂದ ಜಿಗಿದಿದ್ದಾರೆ. ಕೂಡಲೇ ಭದ್ರತಾ ಸಿಬ್ಬಂದಿ ಪ್ರಿಯಾಳನ್ನ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪ್ರಿಯಾ ಸಾವನ್ನಪ್ಪಿರೋದನ್ನು ಖಚಿತ ಪಡಿಸಿದ್ದಾರೆ. ಮನೆಯಲ್ಲಿ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ ಎಂದು ವರದಿಯಾಗಿದೆ. ಇದನ್ನೂ ಓದಿ: ನೀವು ಬೇಜಾರ್ ಮಾಡ್ಕೋಬೇಡಿ – ಗೇಮ್ ಪ್ಲ್ಯಾನ್ ಬಗ್ಗೆ ಅರವಿಂದ್ ಮಾತು

  • ಪ್ರಿಯತಮ, ಆತನ ಗೆಳೆಯನಿಂದ್ಲೇ ಮಾಡೆಲ್ ಮೇಲೆ ಅತ್ಯಾಚಾರ

    ಪ್ರಿಯತಮ, ಆತನ ಗೆಳೆಯನಿಂದ್ಲೇ ಮಾಡೆಲ್ ಮೇಲೆ ಅತ್ಯಾಚಾರ

    – 18 ಬಾರಿ ಲೈಂಗಿಕ ಕಿರುಕುಳದ ದೂರು

    ಬೆಂಗಳೂರು: ಪ್ರಿಯತಮ ಹಾಗೂ ಆತನ ಸ್ನೇಹಿತನಿಂದಲೇ ಮಾಡೆಲ್ ಒಬ್ಬಳು ಅತ್ಯಾಚಾರಕ್ಕೊಳಗಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಪ್ರಮೋದ್ ಎಂಬಾತ ಪ್ರೀತಿಸುವುದಾಗಿ ಮಾಡೆಲ್ ಹಿಂದೆ ಬಿದ್ದಿದ್ದನು. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಯುವತಿಯನ್ನು ಸಂಪರ್ಕ ಮಾಡಿ ಆಕೆಯ ಮೊಬೈಲ್ ನಂಬರ್ ಕೂಡ ಪಡೆದಿದ್ದನು. ಅಲ್ಲದೆ ಆಕೆಯ ಜೊತೆ ನಿರಂತರವಾಗಿ ಮಾತನಾಡಿ ಇನ್ನಷ್ಟು ಹತ್ತಿರವಾಗಿದ್ದನು.

    ಹೀಗೆ ಮಾತನಾಡುತ್ತಾ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ಅಲ್ಲದೆ ಪ್ರಮೋದ್, ನಿನ್ನೊಂದಿಗೆ ತುಂಬಾ ಮಾತನಾಡಬೇಕು ಎಂದು ಪುಸಲಾಯಿಯಿಸಿ ಯುವತಿಯನ್ನು ಯಶವಂತಪುರ ಲಾಡ್ಜ್ ಗೆ ಕರೆಸಿಕೊಂಡಿದ್ದಾನೆ. ಹೀಗೆ ಬಂದವಳಿಗೆ ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಹಾಕಿ ಕುಡಿಯಲು ಕೊಟ್ಟಿದ್ದಾನೆ.

    ಇತ್ತ ಪ್ರಿಯತಮ ನೀಡಿದ ಜ್ಯೂಸ್ ಕುಡಿದ ಯುವತಿಗೆ ಪ್ರಜ್ಞೆ ತಪ್ಪಿದೆ. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಪ್ರಮೋದ್ ಹಾಗೂ ಆತನ ಗೆಳೆಯ ಧನಂಜಯ್ ಸೇರಿ ಯುವತಿ ಮೇಲೆ ತಮ್ಮ ಕಾಮ ತೃಷೆ ತೀರಿಸಿಕೊಂಡಿದ್ದಾರೆ. ಅಲ್ಲದೆ ಇದೇ ಸಂದರ್ಭದಲ್ಲಿ ಯುವತಿಯೊಂದಿಗಿನ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಕೂಡ ಸೆರೆ ಹಿಡಿದಿದ್ದಾರೆ.

    ಇಷ್ಟೆಲ್ಲಾ ಆದ ಕೆಲ ದಿನಗಳ ಬಳಿಕ ಯುವತಿಗೆ ಕರೆ ಮಾಡಿ, ನಿನ್ನ ಖಾಸಗಿ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಹೀಗೆ ಯುವತಿಯನ್ನು ಬೆದರಿಸಿ 18 ಬಾರಿ ಕರೆಸಿಕೊಂಡು ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ.

    ಯುವಕ ಕಿರುಕುಳದಿಂದ ನೊಂದ ಯುವತಿ ಇದೀಗ ಯಶವಂತಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಯುವತಿಯ ದೂರಿನ ಅನ್ವಯ ಆರೋಪಿಗಳಾದ ಪ್ರಮೋದ್ ಹಾಗೂ ಧನಂಜಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

  • ಕೋಲಿನಿಂದ ಹೊಡೆದು ನಾಲ್ವರಿಂದ ಯುವಕನ ಮೇಲೆ ಗ್ಯಾಂಗ್‍ರೇಪ್

    ಕೋಲಿನಿಂದ ಹೊಡೆದು ನಾಲ್ವರಿಂದ ಯುವಕನ ಮೇಲೆ ಗ್ಯಾಂಗ್‍ರೇಪ್

    – ಮಾಡೆಲ್ ಆಗಿದ್ದ 19 ವರ್ಷದ ಯುವಕ

    ಮುಂಬೈ: ಸಿನಿಮಾದಲ್ಲಿ ನಟಿಸಲೆಂದು ಗುಜರಾತ್‍ನಿಂದ ನಗರಕ್ಕೆ ಬಂದಿದ್ದ ಪುರುಷ ಮಾಡೆಲ್‍ನ್ನು 4 ಜನ ಯುವಕರು ರೇಪ್ ಮಾಡಿರುವ ಘಟನೆ ವರದಿಯಾಗಿದೆ.

    ಮಾಡೆಲ್ ಆಗಿದ್ದ 19 ವರ್ಷದ ಯುವಕ ತನ್ನ ಸಂಬಂಧಿಕರೊಂದಿಗೆ ಥಾಣೆಯಲ್ಲಿ ವಾಸಿಸುತ್ತಿದ್ದ. ಆ ಸಂದರ್ಭ ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಶುಕ್ಲಾ ಎಂಬಾತಾನೊಂದಿಗೆ ಪರಿಚಯವಾಗಿತ್ತು. ಇವನನ್ನು ಭೇಟಿ ಮಾಡಿದ್ದ. ಕೆಲದಿನಗಳ ನಂತರ ಶುಕ್ಲಾ ತನ್ನ ಇತರ ಸ್ನೇಹಿತರನ್ನು ಕರೆದುಕೊಂಡು ಬಂದು ಮಾಡೆಲ್‍ನ್ನು ಮತ್ತೊಮ್ಮೆ ಕರೆಸಿಕೊಂಡಿದ್ದ ಎಂದು ವರದಿಯಾಗಿತ್ತು.

    ಶುಕ್ಲಾ ಮತ್ತು ಇತರ ಸ್ನೇಹಿತರು ಸೇರಿಕೊಂಡು ಮಾಡೆಲ್‍ನ್ನು ಮನೆಯ ಮೇಲ್ಛಾವಣಿಗೆ ಕರೆದುಕೊಂಡು ಹೋಗಿ ಅಲ್ಲಿ ಆತನಿಗೆ ಥಳಿಸಿ, ಕಿರುಕುಳ ನೀಡಿ ಅತ್ಯಾಚಾರಮಾಡಿ, ಕೋಲಿನಿಂದ ಹೊಡೆದಿದ್ದಾರೆ. ಈ ಘಟನೆಯನ್ನು ತನ್ನ ಫೋನಿನ ಮೂಲಕ ಚಿತ್ರೀಕರಿಸಿದ ಶುಕ್ಲಾ ನಾವೂ ತಪ್ಪಿಸಿಕೊಳ್ಳುವ ಮೊದಲು ಪೊಲೀಸರಿಗೆ ಮಾಹಿತಿ ತಿಳಿಸಿದರೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.

    ಹಲವು ಪ್ರಯತ್ನಗಳ ನಂತರ ಮಾಡೆಲ್ ತನ್ನ ಫೋನ್‍ನ್ನು ಎತ್ತಿಕೊಂಡು ತನ್ನ ಸಂಬಂಧಿಕರಿಗೆ ಸಂಪರ್ಕಿಸಿ ಮನೆಗೆ ತಲುಪಿದ್ದಾನೆ. ನಂತರ ನಡೆದ ಘಟನೆಯನ್ನು ವಿವರಿಸಿದ್ದಾನೆ. ಕುಟುಂಬಸ್ಥರ ಸಹಾಯದಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಶುಕ್ಲಾ, ಜೈಸ್ವಾಲ್ (34) ಮತ್ತು ಅರವಿಂದ್ ಪ್ರಜಾಪತಿ(23)ಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.