Tag: model

  • ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಕೇಸ್ ನಲ್ಲಿ ಮತ್ತೆ ಎಂಟ್ರಿ ಕೊಟ್ಟ ಮಾಡೆಲ್

    ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಕೇಸ್ ನಲ್ಲಿ ಮತ್ತೆ ಎಂಟ್ರಿ ಕೊಟ್ಟ ಮಾಡೆಲ್

    ಬೆಂಗಳೂರು: ಈಶ್ವರಪ್ಪ ಪಿಎ ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣದಲ್ಲಿ ಮಾಡೆಲ್ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಮಾಡೆಲ್ ಜೊತೆಗಿನ ಸಂಬಂಧದ ವೀಡಿಯೋಗಳಿಗಾಗಿ ಕಿಡ್ನ್ಯಾಪ್ ಯತ್ನ ನಡೆದಿತ್ತು ಅನ್ನೋ ಮಾತುಗಳು ಕೇಳಿಬಂದಿದ್ದವು. ಆ ನಂತರ ಕಣ್ಮರೆಯಾಗಿದ್ದ ಮಾಡೆಲ್ ಇದೀಗ ಮತ್ತೆ ಪ್ರತ್ಯಕ್ಷವಾಗಿದ್ದಾರೆ.

    ವಿನಯ್ ಕಿಡ್ನ್ಯಾಪ್ ಯತ್ನ ಪ್ರಕರಣದಲ್ಲಿ ಬಿಎಸ್‍ವೈ ಪಿಎ ಸಂತೋಷ ಮೊಬೈಲ್ ನೀಡಿರಲಿಲ್ಲ. ತನಿಖೆಗೆ ಮೊಬೈಲ್ ನೀಡದೆ ಸಂತೋಷ್ ವಿಚಾರಣೆಗೆ ಸ್ಪಂದಿಸ್ತಿಲ್ಲ. ಹೀಗಾಗಿ ಸಂತೋಷನಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನ ರದ್ದುಪಡಿಸಬೇಕು ಅಂತಾ ಪೊಲೀಸರು ಕೋರ್ಟ್ ಮೆಟ್ಟಿಲು ಹತ್ತಿದ್ದು, ವಿಚಾರಣೆಗೆ ಬರಬೇಕಿದೆ ಎಂದು ಹೇಳಿದ್ದರು.

    ಕಿಡ್ನ್ಯಾಪ್ ಯತ್ನದ ನಂತರ ಮಾಡೆಲ್ ಹೆಸರೂ ಕೂಡ ಕೇಳಿ ಬಂದಿತ್ತು. ನನ್ನ ಹೆಸರನ್ನು ಪ್ರಕರಣದಲ್ಲಿ ಎಳೆದು ತಂದವರನ್ನ ನಾನು ಸುಮ್ಮನೇ ಬಿಡೋದಿಲ್ಲ. ಕಂಪ್ಲೆಂಟ್ ಕೊಡ್ತೀನಿ, ಅದು ಮಾಡ್ತೀನಿ, ಇದು ಮಾಡ್ತೀನಿ ಅಂದೋರು ವಾರದ ಹಿಂದೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾರೆ.

    ವಿನಯ್ ಮತ್ತು ಸಂತೋಷ್ ನಡುವೆ ನಿಮ್ಮ ಸಂಬಂಧ ಎಂತಹದ್ದು? ಅಲ್ಲದೇ ಮೂವರ ನಡುವೆ ಹಲವಾರು ಮೆಸೇಜ್ ಗಳು ಹೋಗಿವೆ. ಕಿಡ್ನ್ಯಾಪ್ ಪ್ರಕರಣದಲ್ಲಿ ತನಿಖೆಗೆ ನಿಮ್ಮ ಮೊಬೈಲ್ ಅವಶ್ಯಕತೆಯಿದೆ. ಹೀಗಾಗಿ ನಿಮ್ಮ ಮೊಬೈಲ್ ನೀಡಬೇಕು ಅಂತಾ ಮಾಡೆಲ್ ಗೆ ನೋಟೀಸ್ ನೀಡಲಾಗಿತ್ತು. ಇದೀಗ ಮಲ್ಲೇಶ್ವರಂ ಎಸಿಪಿ ಬಡಿಗೇರ್ ಮುಂದೆ ಹಾಜರಾಗಿ ಮಾಡೆಲ್ ತಮ್ಮ ಮೊಬೈಲ್ ನೀಡಿದ್ದಾರೆ.

    ವಿನಯ್ ಜೊತೆಯಲ್ಲಿದ್ದಾಗ ಮಾಡೆಲ್ ಮೊಬೈಲ್ ಗೆ ಸಂತೋಷ ಮೆಸೇಜ್ ಮಾಡಿದ್ದಾನೆ. ಅದನ್ನ ವಿನಯ್ ಗೆ ತೋರಿಸಿದ ಮಾಡೆಲ್, ನೆಕ್ಸ್ಟ್ ರಿಯಾಕ್ಷಗಳನ್ನೆಲ್ಲಾ ವಿನಯ್ ಹೇಳಿದ ಹಾಗೆ ಮೆಸೇಜ್ ಮಾಡಿದ್ದಾರೆ. ಈ ಎಲ್ಲಾ ಸ್ಕ್ರೀನ್ ಶಾಟ್ ಗಳನ್ನು ವಿನಯ್ ಗೆ ಕೊಟ್ಟಿದ್ದು, ಅದನ್ನ ಪಡೆದುಕೊಳ್ಳಲು ಸಂತೋಷ ಕಿಡ್ನ್ಯಾಪ್ ಗೆ ಯತ್ನಿಸಿದ್ದ ಅನ್ನೋ ಮಾತುಗಳು ಕೇಳಿಬರುತ್ತಿವೆ.

    ಇನ್ನು ವಿನಯ್ ಗೂ ಕೂಡ ಮೊಬೈಲ್ ನೀಡುವಂತೆ ನೋಟೀಸ್ ಕೊಡಲಾಗಿದೆ. ಮೊಬೈಲ್ ಗಳನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳಿಸಿ ಸತ್ಯಾಂಶ ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸ್ತಿದ್ದಾರೆ.

    https://www.youtube.com/watch?v=kMLCLgKOZUY

  • ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಮಾಡೆಲ್ ಸಂಗೀತಾ ಚಟರ್ಜಿ

    ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಮಾಡೆಲ್ ಸಂಗೀತಾ ಚಟರ್ಜಿ

    ಹೈದರಾಬಾದ್: ರಕ್ತಚಂದನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಗಗನಸಖಿ ಕಮ್ ಮಾಡೆಲ್ ಸಂಗೀತಾ ಚಟರ್ಜಿ ಆಂಧ್ರಪ್ರದೇಶದ ಚಿತ್ತೂರು ಜೈಲಿನಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    ಸಂಗೀತಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಜಾಮೀನು ಸಿಗದ ಹಿನ್ನೆಲೆ ಅಸಮಧಾನಗೊಂಡ ಸಂಗೀತಾ ಜೈಲಿನ ಶೌಚಾಲಯದಲ್ಲಿದ್ದ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.

    2016ರಲ್ಲಿ ರಕ್ತ ಚಂದನ ಕಳ್ಳ ಸಾಗಣೆಯ ಡಾನ್ ಲಕ್ಷ್ಮಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಲಕ್ಷಣ್ ರನ್ನು ಸಂಗೀತಾ ಚಟರ್ಜಿ ವಿವಾಹವಾಗಿದ್ದರು. ಲಕ್ಷ್ಮಣ್ ಬಂಧನದ ಬಳಿಕ ಇಡೀ ರಕ್ತ ಚಂದನ ಕಳ್ಳಸಾಗಣೆ ದಂಧೆಯ ಮೇಲುಸ್ತುವಾರಿಯನ್ನು ರೂಪದರ್ಶಿ ಸಂಗೀತಾ ಚಟರ್ಜಿ ನೋಡಿಕೊಳ್ಳುತ್ತಿದ್ದಳು.

    ಸಂಗೀತಾ ರಕ್ತಚಂದನದ ಕಳ್ಳಸಾಗಣೆಯನ್ನು ದೇಶದ ಆರು ರಾಜ್ಯಗಳಿಗೆ ಸೇರಿದಂತೆ ಚೀನಾ, ಜಪಾನ್ ರಾಷ್ಟ್ರಗಳಿಗೂ ವಿಸ್ತರಣೆ ಮಾಡಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಕೋಲ್ಕಾತ್ತಾದಿಂದ ಆಂಧ್ರಗೆ ಬಂದಿದ್ದ ವೇಳೆ ಸಂಗೀತಾಳನ್ನ ಪೊಲೀಸರು ಮಾರ್ಚ್‍ನಲ್ಲಿ ಬಂಧಿಸಿದ್ದರು.

  • ನಟಿಯ ಕೊಳೆತ ಶವ ಮನೆಯಲ್ಲಿ ಪತ್ತೆ- ಕೊಲೆ ಶಂಕೆ

    ನಟಿಯ ಕೊಳೆತ ಶವ ಮನೆಯಲ್ಲಿ ಪತ್ತೆ- ಕೊಲೆ ಶಂಕೆ

    ಮುಂಬೈ: ರೂಪದರ್ಶಿ ಹಾಗೂ ನಟಿಯಾಗಿದ್ದ 23 ವರ್ಷದ ಯುವತಿಯ ಶವ ಮುಂಬೈನ ಅಂಧೇರಿಯ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾಗಿದೆ.

    ಇಲ್ಲಿನ ಭೈರವನಾಥ್ ಎಸ್‍ಆರ್‍ಎ ಸೊಸೈಟಿಯ ನಿವಾಸಿಯಾಗಿದ್ದ ಕೃತಿಕಾ ಚೌಧರಿಯ ಶವ ಕೊಳೆತ ಸ್ಥಿತಿಯಕಲ್ಲಿ ಪತ್ತೆಯಾಗಿದ್ದು, 3-4 ದಿನಗಳ ಹಿಂದೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

    ಸೋಮವಾರದಂದು ಸುಮಾರು 3.45ರ ಸಮಯದಲ್ಲಿ ಕೃತಿಕಾ ಚೌಧರಿಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
    ಪೊಲೀಸರು ಸ್ಥಳಕ್ಕೆ ಬಂದು ನೋಡಿದಾಗ ಕೃತಿಕಾ ಅವರ ರೂಮ್ ಹೊರಗಿನಿಂದ ಲಾಕ್ ಆಗಿತ್ತು. ನಂತರ ಒಳ ಹೋಗಿ ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ರಮಿನಲ್ಲಿ ಎಸಿ ಆನ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

    ರೂಮಿನ ಎಸಿ ಆನ್ ಆಗಿದ್ದರಿಂದ ಶವದ ದುರ್ವಾಸನೆ ಬೇಗ ಹೋರಬಂದಿಲ್ಲ. 3-5 ದಿನಗಳ ಹಿಂದೆಯೇ ಕೊಲೆ ನಡೆದಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸದ್ಯಕ್ಕೆ ನಟಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ.

    ಕೃತಿಕಾ ಚೌಧರಿ ಕಂಗನಾ ರನಾವತ್ ಅಭಿನಯದ ರಜ್ಜೋ ಚಿತ್ರದಲ್ಲಿ ಕೆಲಸ ಮಾಡಿದ್ದರು. ಅಲ್ಲದೆ ಕೆಲವು ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದರು ಎಂದು ವರದಿಯಾಗಿದೆ.

  • ನಿರ್ದೇಶಕ ಮಧುರ್ ಭಂಡಾರ್ಕರ್ ಕೊಲೆಗೆ ಸುಪಾರಿ- ರೂಪದರ್ಶಿಗೆ 3 ವರ್ಷ ಜೈಲು

    ನಿರ್ದೇಶಕ ಮಧುರ್ ಭಂಡಾರ್ಕರ್ ಕೊಲೆಗೆ ಸುಪಾರಿ- ರೂಪದರ್ಶಿಗೆ 3 ವರ್ಷ ಜೈಲು

    ಮುಂಬೈ: ಹಿಂದಿ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಮಧುರ್ ಭಂಡಾರ್ಕರ್ ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಮೂಲದ ರೂಪದರ್ಶಿ ಪ್ರೀತಿ ಜೈನ್‍ಗೆ ಇಲ್ಲಿನ ನ್ಯಾಯಲಯ 3 ವರ್ಷ ಜೈಲು ಶಿಕ್ಷೆ ಹಾಗೂ 10,000 ರೂ. ದಂಡ ವಿಧಿಸಿದೆ.

    ಪ್ರೀತಿ ಜೈನ್ ಜೊತೆ ಹತ್ಯೆ ಸಂಚಿನಲ್ಲಿ ಭಾಗಿಯಾಗಿದ್ದ ನರೇಶ್ ಪರ್ದೇಶಿ ಮತ್ತು ಶಿವರಾಮ್ ದಾಸ್‍ಗೂ ನ್ಯಾಯಾಲಯ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಏನಿದು ಪ್ರಕರಣ?: ನಿರ್ದೇಶಕ ಭಂಡಾರ್ಕರ್ ಅವರನ್ನು ಕೊಲ್ಲಲು ರೂಪದರ್ಶಿ ಪ್ರೀತಿ 2005ರ ಸೆಪ್ಟೆಂಬರ್‍ನಲ್ಲಿ ಅಂಡರ್ ವಲ್ರ್ಡ್ ಡಾನ್ ಆಗಿದ್ದ ಅರುಣ್ ಗಾವ್ಲಿಯ ಸಹಚರ ನರೇಶ್ ಪರ್ದೇಶಿಗೆ 75,000 ರೂ. ಸುಪಾರಿ ನೀಡಿದ್ದಳು. ಆದ್ರೆ ನರೇಶ್ ತನ್ನ ಕೆಲಸವನ್ನು ಮಾಡಿ ಮುಗಿಸದ ಕಾರಣಕ್ಕೆ ಪ್ರೀತಿ ಜೈನ್ ಆತನಿಗೆ ತಾನು ಕೊಟ್ಟಿದ್ದ 75,000 ರೂ.ಗಳನ್ನು ವಾಪಸ್ ಕೊಡಲು ಕೇಳಿದ್ದಳು. ಈ ಬಗ್ಗೆ ಅರುಣ್ ಗಾವ್ಲಿಯ ಮತ್ತೊಬ್ಬ ಸಹಚರ ವಕೀಲ ಬಗಾವೆಗೆ ವಿಷಯ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು.

    ಇದಕ್ಕೂ ಮೊದಲು ಜೈನ್, ಭಂಡಾರ್ಕರ್ ಅವರು ಸಿನಿಮಾದಲ್ಲಿ ಪಾತ್ರ ಕೊಡುವುದಾಗಿ ಹೇಳಿ 1999 ರಿಂದ 2004ರ ಅವಧಿಯ ವೇಳೆ ನನ್ನ ಮೇಲೆ 16ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿ 2004ರ ಜುಲೈನಲ್ಲಿ ದೂರು ದಾಖಲಿಸಿದ್ದಳು. ಭಂಡಾರ್ಕರ್ ನನಗೆ ವಂಚಿಸಿದ್ದಾರೆ. ಅವರನ್ನು ಬಂಧಿಸಿ ಎಂದು ಒತ್ತಾಯಿಸಿದ್ದಳು. ಬಳಿಕ ತನ್ನ ಆರೋಪವನ್ನು ಕೈಬಿಡುತ್ತಿದ್ದೇನೆ ಎಂದು ಹೇಳಿದಾಗ ಕೋರ್ಟ್ ಭಂಡಾರ್ಕರ್ ವಿರದ್ಧದ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಿತ್ತು.

  • 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    ನವದೆಹಲಿ:2016-17ರ ಅವಧಿಯಲ್ಲಿ ದೇಶದಲ್ಲಿ ಮಾರುತಿ ಕಂಪೆನಿಯ ಕಾರುಗಳು ಅತಿ ಹೆಚ್ಚು ಮಾರಾಟವಾಗಿದೆ. ಅಷ್ಟೇ ಅಲ್ಲದೇ ಭಾರತದಲ್ಲಿ ಅತಿಹೆಚ್ಚು ಮಾರಾಟದವಾದ ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿ ಕಂಪೆನಿಯ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) ತನ್ನ ವರದಿಯನ್ನು ಬಿಡುಗಡೆ ಮಾಡಿದೆ. 2015-16 ಅವಧಿಯಲ್ಲಿ ಮಾರಾಟವಾದ ಅತಿ ಹೆಚ್ಚು ಕಾರುಗಳ ಟಾಪ್ -10 ಪಟ್ಟಿಯಲ್ಲಿ ಮಾರುತಿಯ ಕಂಪೆನಿಯ 6 ಕಾರುಗಳು ಸ್ಥಾನ ಪಡೆದಿದ್ದರೆ ಈ ಬಾರಿ 7 ಕಾರುಗಳು ಸ್ಥಾನ ಪಡೆದುಕೊಂಡಿದೆ.

    2016-17ರಲ್ಲಿ ಭಾರತದಲ್ಲಿ ಒಟ್ಟು 30,46,727 ಕಾರುಗಳು ಮಾರಾಟವಾಗಿದೆ. ಈ ಹಿಂದಿನ ಅವಧಿಯಲ್ಲಿ 27,89,208 ಕಾರುಗಳು ಮಾರಾಟವಾಗಿದ್ದು, ಶೇ.9.23 ಪ್ರಗತಿ ದರ ಸಾಧಿಸಿದೆ.

    ಒಟ್ಟು ಮಾರಾಟವಾದ ಕಾರುಗಳು ಪೈಕಿ ಶೇ.35ರಷ್ಟು ಪಾಲನ್ನು ಮಾರುತಿ ಕಂಪೆನಿಯ ಕಾರುಗಳು ಪಡೆದುಕೊಂಡಿದ್ದು, ಟ್ಟು 14,43,641 ಕಾರುಗಳು ಮಾರಾಟವಾಗಿದೆ.

    ಯಾವ ಕಾರು ಎಷ್ಟು ಮಾರಾಟವಾಗಿದೆ?
    #1 ಮಾರುತಿ ಆಲ್ಟೋ


    ಮಾರ್ಚ್ 31ಕ್ಕೆ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ 2,41,635 ಅಲ್ಟೋ ಕಾರುಗಳು ಮಾರಾಟವಾಗಿದೆ. ಸತತ 13 ವರ್ಷಗಳಿಂದ ಈ ಪಟ್ಟಿಯಲ್ಲಿ ಅಲ್ಟೋ ನಂಬರ್ ಒನ್ ಸ್ಥಾನಗಳಿಸಿದರೂ ಈ ಹಿಂದಿನ ಅವಧಿಗೆ ಹೋಲಿಸಿದರೆ ಮಾರಾಟದಲ್ಲಿ ಶೇ.8.27 ಕುಸಿತ ಕಂಡಿದೆ. ಈ ಹಿಂದಿನ ಹಣಕಾಸು ಅವಧಿಯಲ್ಲಿ 2,63,422 ಕಾರುಗಳು ಮಾರಾಟಗೊಂಡಿತ್ತು.

    #2 ವ್ಯಾಗನ್ ಆರ್:


    ಎರಡನೇ ಸ್ಥಾನದಲ್ಲಿ ಮಾರುತಿಯ ವ್ಯಾಗನ್ ಆರ್ ಕಾರು ಇದ್ದು, 1,72,346 ಕಾರುಗಳು ಮಾರಾಟವಾಗಿವೆ. 2015-16ರಲ್ಲಿ 1,69,555 ವಾಗನ್ ಆರ್ ಮಾರಾಟ ಕಂಡಿತ್ತು.

    #3 ಸ್ವಿಫ್ಟ್ ಡಿಸೈರ್:


    ಕಳೆದ ವರ್ಷ 1,67,266ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,939 ಸ್ವಿಫ್ಟ್ ಡಿಸೈರ್ ಮಾರಾಟವಾಗಿತ್ತು.

    #4 ಸ್ವಿಫ್ಟ್:


    1,66,885 ಸ್ವಿಫ್ಟ್ ಕಾರುಗಳು ಮಾರಾಟವಾಗಿದ್ದರೆ, ಈ ಹಿಂದಿನ ಹಣಕಾಸು ವರ್ಷದಲ್ಲಿ 1,95,043 ಕಾರುಗಳನ್ನು ಮಾರಾಟ ಮಾಡುವ ಮೂಲಕ ಟಾಪ್ 3 ಸ್ಥಾನವನ್ನು ಪಡೆದುಕೊಂಡಿತ್ತು.

    #5. ಗ್ರಾಂಡ್ ಐ10:


    ಹುಂಡೈ ಕಂಪೆನಿಯ ಐ10 5ನೇ ಸ್ಥಾನ ಪಡೆದುಕೊಂಡಿದೆ. ಹಣಕಾಸು ವರ್ಷದಲ್ಲಿ 1,46,228 ಕಾರುಗಳು ಮಾರಾಟವಾಗಿವೆ.

    #6 ಎಲೈಟ್ ಐ20:


    ಹುಂಡೈ ಎಲೈಟ್ ಐ20ಗೆ 6ನೇ ಸ್ಥಾನ ಸಿಕ್ಕಿದ್ದು, 1,26,304 ಕಾರುಗಳು ಮಾರಾಟ ಕಂಡಿದೆ.

    #7 ಬಲೆನೊ:


    ಮಾರುತಿ ಸುಜುಕಿ ಕಂಪೆನಿ ಬಲೆನೊ 1,20,804 ಕಾರುಗಳು ಮಾರಾಟವಾಗಿದೆ.

    #8 ಕ್ವಿಡ್:


    ರೆನಾಲ್ಟ್ ಕಂಪೆನಿಯ ಕ್ವಿಡ್ 8ನೇ ಸ್ಥಾನಗಳಿಸಿದ್ದು, 1,09,341 ಕಾರುಗಳು ಮಾರಾಟ ಕಂಡಿವೆ.

    #9 ವಿಟಾರಾ ಬ್ರೆಜಾ:


    ಮಾರುತಿ ಕಂಪೆನಿಯ ವಿಟಾರಾ ಬ್ರೆಜಾ 1,08,640 ಕಾರುಗಳನ್ನು ಮಾರಾಟ ಮಾಡುವ ಮೂಲಕ ಪಟ್ಟಿಯಲ್ಲಿ 9ನೇ ಸ್ಥಾನವನ್ನು ಪಡೆದುಕೊಂಡಿದೆ.

    #10 ಸೆಲರಿಯೋ


    ಮಾರುತಿಯ ಸೆಲರಿಯೋ 2016-17ರ ಹಣಕಾಸು ವರ್ಷದಲ್ಲಿ ಒಟ್ಟು 97,361 ಮಾರಾಟ ಕಂಡಿದೆ.

  • ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

    ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

    ಮಾಸ್ಕೋ: ದುಬೈನಲ್ಲಿರುವ ವಿಶ್ವದ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ರೂಪದರ್ಶಿಯೊಬ್ಬಳು ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    23 ವರ್ಷದ ವಿಕಿ ಒಡಿಂಕ್ಟೊವಾ ಎಂಬ ರಷ್ಯಾ ರೂಪದರ್ಶಿ ದುಬೈನಲ್ಲಿರುವ ಸುಮಾರು 1,004 ಅಡಿ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಈ ಫೋಟೋ ಶೂಟ್ ಮಾಡಿಕೊಂಡಿದ್ದಾಳೆ. ಮಾತ್ರವಲ್ಲದೇ ಬಳಿಕ ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್  ವೀಡಿಯೋ ಹಾಗೂ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಆದ್ರೆ ಇದೀಗ ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾಳೆ.

    ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಳಿಕ, `ಇದನ್ನು ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರತೀ ಬಾರಿ ಈ ವಿಡಿಯೋ ನೋಡುವಾಗ್ಲೂ ನನ್ನ ಮೈ ಬೆವರುತ್ತದೆ ಅಂತಾ ಹೇಳಿಕೊಂಡಿದ್ದಾಳೆ.

    ಈಕೆಯ ಫಾಲೋವರ್ಸ್‍ಗಳಲ್ಲಿ ಹಲವು ಮಂದಿ `ಈಕೆ ಯಾವುದೇ ಸುರಕ್ಷತಾ ವಿಧಾನಗಳನ್ನು ಬಳಸದೆ ಫೋಟೋ, ವಿಡಿಯೋ ಮಾಡಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು, `ಒಂದು ವೇಳೆ ಏನಾದ್ರೂ ಹೆಚ್ಚು ಕಮ್ಮಿ ಆದ್ರೆ ಆಕೆ ಬದುಕಲು ಸಾಧ್ಯವೇ ಇಲ್ಲ’ ಅಂತಾ ಮಾತನಾಡಿಕೊಂಡಿದ್ದಾರೆ.

    ಮಾಡೆಲ್ ಫೋಟೋಗೆ ಕಮೆಂಟ್ ಹಾಕಿದ್ದರಲ್ಲಿ ಒಂದು ಕಮೆಂಟ್ ಹೀಗಿತ್ತು. `ನಿನ್ನ ಜೀವನವನ್ನು ಯಾಕೆ ಈ ರೀತಿ ನಿರ್ಲಕ್ಷ್ಯಿಸುತ್ತಿದ್ದಿ? ಒಂದು ವೇಳೆ ನಾನು ನಿನ್ನ ಪೋಷಕನಾಗಿದ್ದರೆ ನಿನ್ನನ್ನು ಹಾಗೂ ಪೋಟೋ ತೆಗೆದ ಗಡ್ಡಧಾರಿ ವ್ಯಕ್ತಿಯನ್ನು ಶಿಕ್ಷಿಸುತ್ತಿದ್ದೆ’ ಅಂತಾ ಬರೆಯಲಾಗಿತ್ತು.

    ಈಕೆಗೆ ಇನ್ ಸ್ಟಾಗ್ರಾಮ್  ನಲ್ಲಿ 30 ಸಾವಿರ ಮಂದಿ ಫಾಲೋವರ್ಸ್ ಇದ್ದಾರೆ. ಹೀಗಾಗಿ ಈಕೆ ಪೋಸ್ಟ್ ಮಾಡಿದ ಕೂಡಲೇ ಫೋಟೋ, ವಿಡಿಯೋ ವೈರಲಾಗಿ ಹರಡಿದೆ.

    https://www.youtube.com/watch?v=R0wHh19dEIQ