Tag: Modaka

  • ಗಣೇಶನಿಗೆ ಪ್ರಿಯವಾದ ಮೋದಕ ಮಾಡೋದು ಹೇಗೆ?

    ಗಣೇಶನಿಗೆ ಪ್ರಿಯವಾದ ಮೋದಕ ಮಾಡೋದು ಹೇಗೆ?

    ಣೇಶನಿಗೆ ಅರ್ಪಿಸುವ ಹಲವಾರು ಭಕ್ಷ್ಯಗಳಲ್ಲಿ ಪ್ರಮುಖವಾದುದು ಮೋದಕ. ಇದು ಗಣಪನಿಗೆ ಬಹಳ ಅಚ್ಚುಮೆಚ್ಚು. ಈ ಮೋದಕವನ್ನು ಮನೆಯಲ್ಲಿ ಸುಲಭವಾಗಿ ಮಾಡಬಹುದು. ಮೋದಕ ಮಾಡೋದನ್ನ ಹೇಗೆ ಎಂದು ಇವತ್ತು ತಿಳಿದುಕೊಳ್ಳೋಣ.

    ಬೇಕಾಗುವ ಪದಾರ್ಥಗಳು
    1 ಕಪ್ ಅಕ್ಕಿ ಹಿಟ್ಟು,
    1 1/4 ಕಪ್ ನೀರು
    1 ಟೀಸ್ಪೂನ್ ತುಪ್ಪ. ಬೇಕಾದರೆ ತುಪ್ಪದ ಬದಲಿಗೆ ತೆಂಗಿನ ಎಣ್ಣೆಯನ್ನೂ ಬಳಸಬಹುದು.
    ಚಿಟಿಕೆ ಉಪ್ಪು
    1 ಕಪ್ ತುರಿದ ತೆಂಗಿನಕಾಯಿ
    3/4 ಕಪ್ ಬೆಲ್ಲ
    1/2 ಟೀಸ್ಪೂನ್ ಏಲಕ್ಕಿ ಪುಡಿ
    1 ಟೀಸ್ಪೂನ್ ಗಸಗಸೆ ಬೀಜ
    ಒಂದು ಸ್ಟೀಮರ್,

    ಹೂರಣ ತಯಾರಿಸೋದು ಹೇಗೆ?
    ಮೊದಲು ಮೋದಕದ ಒಳಗೆ ತುಂಬಿಸಲಾಗುವ ಹೂರಣವನ್ನು ತಯಾರಿಸಬೇಕು. ಒಂದು ಪ್ಯಾನ್‌ನಲ್ಲಿ, ತುರಿದ ತೆಂಗಿನಕಾಯಿ ಮತ್ತು ಬೆಲ್ಲವನ್ನು ಸೇರಿಸಿ ಮತ್ತು ಅವು ಮಿಶ್ರಣ ಆಗುವವರೆಗೆ ಬೆರೆಸಿ. ಈಗ ಏಲಕ್ಕಿ ಪುಡಿ ಮತ್ತು ಗಸಗಸೆ ಬೀಜಗಳನ್ನು ಸೇರಿಸಿ ಮತ್ತು ಮಿಶ್ರಣ ದಪ್ಪವಾಗುವವರೆಗೆ ಬೇಯಿಸಬೇಕು. ನಂತರ ತಣ್ಣಗಾಗಲು ಬಿಡಬೇಕು.

    ಮೋದಕ ತಯಾರಿಸೋದು ಹೇಗೆ?
    ಮೊದಲು ಅಂಗೈಗಳಿಗೆ ಸ್ವಲ್ಪ ತುಪ್ಪವನ್ನು ಸೇರಿಸಿ, ಹಿಟ್ಟಿನ ಸಣ್ಣ ಉಂಡೆಯನ್ನು ತೆಗೆದುಕೊಂಡು ರೋಲಿಂಗ್ ಪಿನ್ ಅಥವಾ ನಿಮ್ಮ ಅಂಗೈಗಳ ಸಹಾಯದಿಂದ ಸುತ್ತಿಕೊಳ್ಳಬೇಕು. ಬಳಿಕ 1 ರಿಂದ 2 ಚಮಚ ಹೂರಣವನ್ನು ಸೇರಿಸಿ ಮೋದಕದ ಆಕಾರಕ್ಕೆ ಮಾಡಬೇಕು. ಬಳಿಕ ಅವುಗಳನ್ನು ಬಾಳೆ ಎಲೆಯಲ್ಲಿ ಇರಿಸಿ, 10 ನಿಮಿಷಗಳ ಕಾಲ ಸ್ಟೀಮ್‌ನಲ್ಲಿ ಬೇಯಿಸಬೇಕು. ಈಗ ಗಣಪನಿಗೆ ಇಷ್ಟವಾದ ಮೋದಕ ನಿಮ್ಮ ಮುಂದೆ ಸಿದ್ಧ.

  • ಗಣಪನಿಗಾಗಿ ವಿಭಿನ್ನ ಬಗೆಯ ಮೋದಕ ಹೀಗೆ ಮಾಡಿ!

    ಗಣಪನಿಗಾಗಿ ವಿಭಿನ್ನ ಬಗೆಯ ಮೋದಕ ಹೀಗೆ ಮಾಡಿ!

    ಣೇಶ ಹಬ್ಬ ಬಂದೇ ಬಿಡ್ತು. ಹಬ್ಬದ ತಯಾರಿಯಂತೂ ಜೋರಾಗಿ ನಡೆಯುತ್ತಿದೆ. ಗಣೇಶ ಚತುರ್ಥಿಗೆ ಗಣಪನಿಗೆ ಅಚ್ಚುಮೆಚ್ಚಿನ ತಿಂಡಿಗಳಲ್ಲಿ ಒಂದಾದ ಮೋದಕವನ್ನು ತಯಾರಿಸಿ ನೈವೇದ್ಯಕ್ಕೆ ಇಡುವುದು ವಾಡಿಕೆ. ಮೋದಕದಲ್ಲಿ ಹಲವು ವಿಧದ ಮೋದಕಗಳಿವೆ. ಈ ಬಾರಿಯ ಗಣೆಶ ಚತುರ್ಥಿಗೆ ಬಗೆಬಗೆಯ ಮೋದಕಗಳನ್ನು ಮಾಡುವ ಮೂಲಕ ಗಣೇಶೋತ್ಸವಕ್ಕೆ ಇನ್ನಷ್ಟು ಮೆರುಗು ನೀಡಿ. ಇವತ್ತಿನ ನಮ್ಮ ರೆಸಿಪಿಯಲ್ಲಿ ಗಣೇಶನಿಗೆ ಪ್ರಿಯವಾದ ವಿಭಿನ್ನ ಬಗೆಯ ಮೋದಕಗಳನ್ನು ಯಾವ ರೀತಿ ತಯಾರಿಸಬಹುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ.

    ಡ್ರೈ ಫ್ರೂಟ್ಸ್ ಮೋದಕ:
    ಬೇಕಾಗುವ ಸಾಮಗ್ರಿಗಳು:
    ಗೋಡಂಬಿ – 1/4 ಕಪ್
    ಬಾದಾಮಿ – 1/4 ಕಪ್
    ಪಿಸ್ತಾ – 1/4 ಕಪ್
    ಒಣ ದ್ರಾಕ್ಷಿ – 1/4 ಕಪ್
    ಕೊಬ್ಬರಿ ತುರಿ – 2-3 ಚಮಚ
    ಖರ್ಜೂರ – 1/2 ಕಪ್
    ತುಪ್ಪ – 3ರಿಂದ 4 ಚಮಚ

    ಮಾಡುವ ವಿಧಾನ:
    * ಮೊದಲು ಬಾದಾಮಿ, ಪಿಸ್ತಾ, ಗೋಡಂಬಿಯನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ಪುಡಿ ಮಾಡಿ.
    *ನಂತರ ಒಣ ದ್ರಾಕ್ಷಿ ಮತ್ತು ಖರ್ಜೂರವನ್ನ ಚೆನ್ನಾಗಿ ಪೇಸ್ಟ್ ಮಾಡಿ.
    * ನಂತರ ಸ್ವಲ್ಪ ತುಪ್ಪ ಹಾಕಿ, ಪುಡಿ ಮಾಡಿದ ಡ್ರೈ ಫ್ರೂಟ್ಸ್ ಹಾಕಿ ಕಲಸಿ.
    * ನಂತರ ಖರ್ಜೂರ, ಒಣದ್ರಾಕ್ಷಿ ಪೇಸ್ಟ್ ಮತ್ತು ಕೊಬ್ಬರಿ ಹಾಕಿ ಮಿಕ್ಸ್ ಮಾಡಿ.
    * ನಂತರ ಮೋದಕ ಅಚ್ಚಿನಲ್ಲಿ ಡ್ರೈಫ್ರೂಟ್ಸ್ ಮಿಶ್ರಣ ತುಂಬಿ ಪ್ರೆಸ್ ಮಾಡಿದರೆ ಆರೋಗ್ಯಕರ ಡ್ರೈಫ್ರೂಟ್ಸ್ ಮೋದಕ ಸಿದ್ಧ.

    ರೋಸ್ ರಸ್‌ಮಲೈ ಮೋದಕ:
    ಬೇಕಾಗುವ ಸಾಮಗ್ರಿಗಳು:
    ಪನ್ನಿರ್ – 200 ಗ್ರಾಂ
    ಹಾಲಿನ ಪುಡಿ – 3/4 ಕಪ್
    ತುಪ್ಪ – 1 ಚಮಚ
    ಸಕ್ಕರೆ – 1/2 ಕಪ್
    ಏಲಕ್ಕಿ ಪುಡಿ – ಸ್ವಲ್ಪ
    ಪಿಸ್ತಾ – ಸ್ವಲ್ಪ
    ಪಿಂಕ್ ಫುಡ್ ಕಲರ್ – ಅಗತ್ಯಕ್ಕೆ ತಕ್ಕಷ್ಟು
    ರೋಸ್ (ಗುಲಾಬಿ) ದಳಗಳು

    ಮಾಡುವ ವಿಧಾನ:
    * ಪನ್ನೀರನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿ.
    * ನಂತರ ತವಾದಲ್ಲಿ ತುಪ್ಪ ಹಾಕಿ ಬಿಸಿಯಾದ ನಂತರ ಪುಡಿ ಮಾಡಿದ ಪನ್ನೀರ್ ಹಾಕಿ.
    * ನಂತರ ಹಾಲಿನ ಪುಡಿ ಸೇರಿಸಿ, ತೆಗೆದಿಟ್ಟ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
    * ಏಲಕ್ಕಿ ಪುಡಿ, ಪುಡಿ ಮಾಡಿದ ಪಿಸ್ತಾ, ಪಿಂಕ್ ಫುಡ್ ಕಲರ್ ಹಾಕಿ ಮಿಕ್ಸ್ ಮಾಡಿ ಉರಿ ಆರಿಸಿ.
    * ಈಗ ಮೋದಕ ಅಚ್ಚುವಿನಲ್ಲಿ ಗುಲಾಬಿ ದಳ ಇಟ್ಟು, ಪಿಸ್ತಾ ಇಟ್ಟು ನಂತರ ಪನ್ನಿರ್ ಮಿಶ್ರಣ ತುಂಬಿ ಒತ್ತಿ.
    * ರುಚಿಕರವಾದ ರೋಸ್ ರಸ್‌ಮಲೈ ಮೋದಕ ಸವಿಯಲು ಸಿದ್ಧ.

    ಅಂಜೂರದ ಮೋದಕ:
    ಬೇಕಾಗುವ ಸಾಮಗ್ರಿಗಳು:
    ಬಾದಾಮಿ – 1/4 ಕಪ್
    ಗೋಡಂಬಿ – 1/4 ಕಪ್
    ಪಿಸ್ತಾ – 2 ಚಮಚ
    ಒಣ ದ್ರಾಕ್ಷಿ – 2 ಚಮಚ
    ಅಂಜೂರ – 1/2 ಕಪ್
    ಖರ್ಜೂರ – 1/2 ಕಪ್
    ಪುಡಿ ಮಾಡಿದ ತೆಂಗಿನ ತುರಿ – 1/4 ಕಪ್
    ಗಸೆಗಸೆ – 1/4 ಕಪ್
    ಏಲಕ್ಕಿ ಪುಡಿ – 1/2 ಚಮಚ

    ಮಾಡುವ ವಿಧಾನ:
    * ಒಂದು ಮಿಕ್ಸಿ ಜಾರ್‌ಗೆ ಬಾದಾಮಿ, ಗೋಡಂಬಿ, ಪಿಸ್ತಾ ಹಾಕಿ ಚೆನ್ನಾಗಿ ಪುಡಿ ಮಾಡಿ.
    * ನಂತರ ಒಣದ್ರಾಕ್ಷಿ, ಅಂಜೂರ, ಖರ್ಜೂರ ಹಾಕಿ ಪೇಸ್ಟ್ ಮಾಡಿ.
    * ನಂತರ ಇದನ್ನು ಒಂದು ಬೌಲ್‌ಗೆ ಹಾಕಿ ಪುಡಿ ಮಾಡಿದ ತೆಂಗಿನ ತುರಿ, ಗಸೆಗಸೆ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
    * ತಯಾರಾದ ಮಿಶ್ರಣವನ್ನು ಮೋದಕ ಅಚ್ಚಿಗೆ ಹಾಕಿ ಒತ್ತಿ. ಅಂಜೂರ ಮೋದಕ ರೆಡಿ.

     

  • ಮೋದಕ ಮಾಡುವ ವಿಧಾನ

    ಮೋದಕ ಮಾಡುವ ವಿಧಾನ

    ಣೇಶ ಮೋದಕ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯಾವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    * ಮೈದಾ ಹಿಟ್ಟು – 1 ಕಪ್
    * ಚಿರೋಟಿ ರವೆ – 1/4 ಕಪ್
    * ಉಪ್ಪು – ಚಿಟಿಕೆ
    * ಬೆಲ್ಲ – 1 ಅಚ್ಚು
    * ಕೊಬ್ಬರಿ ತುರಿ- 1 ಕಪ್
    * ಏಲಕ್ಕಿ ಪುಡಿ
    * ಗಸಗಸೆ – 1 ಚಮಚ
    * ಎಳ್ಳು -ಸ್ವಲ್ಪ
    * ಗೋಡಂಬಿ, ಬಾದಾಮಿ – 3-4 ಚಮಚ
    * ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಹೂರಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಹೂರಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಹೂರಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

    Live Tv
    [brid partner=56869869 player=32851 video=960834 autoplay=true]

  • ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಗಣೇಶನಿಗೆ ಪ್ರಿಯವಾದ ಮೋದಕ ಮಾಡುವ ವಿಧಾನ

    ಗಣಪನಿಗೆ ಇಷ್ಟವಾಗುವ ತಿಂಡಿಗಳಲ್ಲಿ ಮೋದಕವೂ ಒಂದು. ಗಣೇಶನನ್ನು ಮೋದಕ ಪ್ರಿಯ ಎಂದು ಕೂಡ ಕರೆಯುತ್ತಾರೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ ಹಿಟ್ಟು – 1 ಕಪ್
    2. ಚಿರೋಟಿ ರವೆ – 1/4 ಕಪ್
    3. ಉಪ್ಪು – ಚಿಟಿಕೆ
    4. ಬೆಲ್ಲ – 1 ಅಚ್ಚು
    5. ಕೊಬ್ಬರಿ ತುರಿ – 1 ಕಪ್
    6. ಏಲಕ್ಕಿ ಪುಡಿ
    7. ಗಸಗಸೆ – 1 ಚಮಚ
    8. ಎಳ್ಳು -ಸ್ವಲ್ಪ
    9. ಗೋಡಂಬಿ, ಬಾದಾಮಿ – 3-4 ಚಮಚ
    1. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬೌಲ್‍ಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಊರ್ಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಊರ್ಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಊರ್ಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

  • ಗಣಪನಿಗಾಗಿ ಸ್ಪೆಷಲ್ ಮೋದಕ ಮಾಡುವ ವಿಧಾನ

    ಗಣಪನಿಗಾಗಿ ಸ್ಪೆಷಲ್ ಮೋದಕ ಮಾಡುವ ವಿಧಾನ

    ಗೌರಿ ಗಣೇಶ ಹಬ್ಬ ಬರುತ್ತಿದೆ. ಹಬ್ಬಗಳು ಬಂದರೆ ಸಾಕು ಸಿಹಿ ತಿನಿಸುಗಳನ್ನು ಮಾಡಬೇಕು. ಅದರಲ್ಲೂ ಗಣೇಶ ಹಬ್ಬವೆಂದರೆ ಮುಂಚಿತವಾಗಿ ಗಣಪನಿಗೆ ಇಷ್ಟವಾಗುವ ತಿಂಡಿ-ತಿನಿಸುಗಳನ್ನು ಮಾಡಿ ಸಿದ್ಧ ಮಾಡಿಕೊಳ್ಳಬೇಕು. ಗಣೇಶ ಮೋದಕ ಪ್ರಿಯ ಎಂದು ಎಲ್ಲರಿಗೂ ತಿಳಿದಿದೆ. ಆದ್ದರಿಂದ ನಿಮಗಾಗಿ ಗಣಪನಿಗೆ ಪ್ರಿಯಾವಾದ ಮೋದಕ ಸಿಹಿ ಮಾಡುವ ವಿಧಾನ ಇಲ್ಲಿದೆ…

    ಬೇಕಾಗುವ ಸಾಮಾಗ್ರಿಗಳು
    1. ಮೈದಾ ಹಿಟ್ಟು – 1 ಕಪ್
    2. ಚಿರೋಟಿ ರವೆ – 1/4 ಕಪ್
    3. ಉಪ್ಪು – ಚಿಟಿಕೆ
    4. ಬೆಲ್ಲ – 1 ಅಚ್ಚು
    5. ಕೊಬ್ಬರಿ ತುರಿ – 1 ಕಪ್
    6. ಏಲಕ್ಕಿ ಪುಡಿ
    7. ಗಸಗಸೆ – 1 ಚಮಚ
    8. ಎಳ್ಳು -ಸ್ವಲ್ಪ
    9. ಗೋಡಂಬಿ, ಬಾದಾಮಿ – 3-4 ಚಮಚ
    1. ಎಣ್ಣೆ – ಕರಿಯಲು

    ಮಾಡುವ ವಿಧಾನ
    * ಮೊದಲಿಗೆ ಒಂದು ಬಟ್ಟಲಿಗೆ ಚಿರೋಟಿ ರವೆ, ಮೈದಾ ಹಿಟ್ಟು, ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಂಡು ತಟ್ಟೆ ಮುಚ್ಚಿಡಿ.
    * ನಂತರ ಒಂದು ಪ್ಯಾನ್ ಅನ್ನು ಒಲೆಯ ಮೇಲಿಟ್ಟು ಅದಕ್ಕೆ ಸೋಸಿಕೊಂಡ ಬೆಲ್ಲದ ನೀರು, ಕೊಬ್ಬರಿ ತುರಿಯನ್ನು ಹಾಕಿ ಫ್ರೈ ಮಾಡಿರಿ.
    * ಹೂರಣ ಸ್ವಲ್ಪ ಗಟ್ಟಿಯಾದಂತೆ ಅದಕ್ಕೆ ಏಲಕ್ಕಿ ಪುಡಿ, ಹುರಿದ ಗಸಗಸೆ, ಪುಡಿ ಮಾಡಿದ ಎಳ್ಳು, ಹುರಿದು ಸಣ್ಣಗೆ ಹೆಚ್ಚಿದ ಗೋಡಂಬಿ, ಬಾದಾಮಿಯನ್ನು ಸೇರಿಸಿ ಮಿಕ್ಸ್ ಮಾಡಿರಿ, ತಣ್ಣಗಾಗಲು ಬಿಡಿ.
    * ಈಗ ಹಿಟ್ಟನ್ನು ತೆಗೆದುಕೊಂಡು ಪೂರಿ ಆಕಾರಕ್ಕಿಂತ ಸ್ವಲ್ಪ ಕಡಿಮೆ ಲಟ್ಟಿಸಿ ಅದರೊಳಗೆ 1/2 ಚಮಚ ಹೂರಣ ಸೇರಿಸಿ ಮಧ್ಯಕ್ಕೆ ಮಡಚಿ
    * ಮೋದಕ ರೀತಿಯಲ್ಲಿ ಅಂದರೆ ಬೆಳ್ಳುಳ್ಳಿ ಆಕಾರದಲ್ಲಿ ಮಡಚಿ. ಹೂರಣ ಆಚೆ ಬಾರದಂತೆ ನೋಡಿಕೊಳ್ಳಿ.
    * ಈಗ ಮಾಡಿಟ್ಟುಕೊಂಡ ಹಲವು ಮೋದಕಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರಿಯಿರಿ.
    ( ಡ್ರೈಫ್ರೂಟ್ಸ್, ಎಳ್ಳು ಬೇಕಿದ್ದಲ್ಲಿ ಮಾತ್ರ ಬಳಸಬಹುದು ಅದಕ್ಕೆ ಬದಲಾಗಿ ಹುರಿಗಡಲೆ ಪುಡಿ ಬಳಸಬಹುದು)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv