Tag: Mock Drill

  • ರಾಜ್ಯದಲ್ಲೇ ಪ್ರಥಮ ಬಾರಿಗೆ ಮಾಕ್ ಡ್ರಿಲ್‌ನಲ್ಲಿ ಸ್ವದೇಶಿ ನಿರ್ಮಿತ ಫೈರ್ ಬೋಟ್ ಬಳಕೆ

    ರಾಜ್ಯದಲ್ಲೇ ಪ್ರಥಮ ಬಾರಿಗೆ ಮಾಕ್ ಡ್ರಿಲ್‌ನಲ್ಲಿ ಸ್ವದೇಶಿ ನಿರ್ಮಿತ ಫೈರ್ ಬೋಟ್ ಬಳಕೆ

    ಕಾರವಾರ: ಉತ್ತರ ಕನ್ನಡ(Uttara Kannada) ಜಿಲ್ಲೆಯ ಕಾರವಾರದಲ್ಲಿ(Karwar) ನಡೆದ ಮಾಕ್ ಡ್ರಿಲ್‌ನಲ್ಲಿ ಇದೇ ಮೊದಲ ಬಾರಿಗೆ ಫೈರ್ ಬೋಟ್(ಫೈರ್ ರೋಬಟ್)ನನ್ನು ಬಳಕೆ ಮಾಡಲಾಗಿದೆ.

    ನೌಕಾದಳದ ಸುಪರ್ದಿಯಲ್ಲಿ ಇರುವ ಈ ಫೈರ್ ರೋಬೋಟ್(Fire Robot) ಇದೇ ಮೊದಲ ಬಾರಿಗೆ ಮುದುಗಾದ ನೇವಿ ಸಿವಿಲಿಯನ್ ಕಾಲೋನಿಯಲ್ಲಿ ನಡೆದ ಬೆಂಕಿ ಅನಾಹುತವನ್ನು ತಡೆಯಲು ಈ ಫೈರ್ ರೋಬೋಟ್ ಬಳಕೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ಇದರ ಉಸ್ತುವಾರಿ ಹೊತ್ತಿರುವ ನೌಕಾದಳದ ಫೈರ್ ಸ್ಟೇಷನ್ ಆಫೀಸರ್ ಸುಭಾಷ್ ನಾಯ್ಕ್ರವರು ನೇವಿ ಸಿವಿಲಿಯನ್ ಕಾಲೋನಿಯಲ್ಲಿ ಇದರ ಪ್ರಾತಕ್ಷಿಕೆ ನೀಡಿದರು. ಇದನ್ನೂ ಓದಿ: ನಿಮ್ಮ ನ್ಯೂಕ್ಲಿಯರ್‌ ಬ್ಲ್ಯಾಕ್‌ಮೆಲ್‌ಗೆ ನಾವು ಬೆದರಲ್ಲ: ಪಾಕ್‌ಗೆ ಮೋದಿ ಎಚ್ಚರಿಕೆ

    ವಿಶೇಷತೆ ಏನು?
    ಸ್ವದೇಶಿ ನಿರ್ಮಿತ ಟಾಟಾ ಕಂಪನಿಯ ಈ ಫೈರ್ ಬೋಟ್(ಫೈರ್ ರೋಬೋಟ್) ಇಂಧನ ರಹಿತವಾಗಿ ಕಾರ್ಯ ನಿರ್ವಹಿಸುತ್ತದೆ. 450 ಎಂಎಹೆಚ್ ಸಾಮರ್ಥ್ಯ ಹೊಂದಿದ ಬ್ಯಾಟರಿ ಚಾಲಿತ, ಅಗ್ನಿ ನಿರೋಧಕ ಉಪಕರಣ ಇದಾಗಿದ್ದು, 4 ಗಂಟೆಗಳ ಕಾಲ ಕಾರ್ಯ ನಿರ್ವಹಿಸಲಿದೆ. ಈ ಯಂತ್ರದಲ್ಲಿ ಥರ್ಮಲ್ ಸ್ಕ್ಯಾನರ್ ಕ್ಯಾಮೆರಾ ಇದ್ದು ರಿಮೋಟ್ ಚಾಲಿತವಾಗಿದ್ದು, 150 ಮೀಟರ್‌ವರೆಗೆ ತೆರಳುವ ಸಾಮರ್ಥ್ಯ ಹೊಂದಿದೆ.

    ಇದು ನಾಲ್ಕರಿಂದ ಐದು ಮೀಟರ್ ವಾಟರ್ ಸ್ಪ್ರೇ ಮಾಡುತ್ತದೆ. 190 ಡಿಗ್ರಿ ತಿರುಗುವ ಸಾಮರ್ಥ್ಯ ಹೊಂದಿದ್ದು, ನೀರನ್ನು 10 ಮೀಟರ್‌ವರೆಗೆ ಜಟ್ ಹಾಗೂ ಸ್ಪ್ರೇ ರೀತಿಯಲ್ಲಿ ಮೇಲಕ್ಕೆ ಚಿಮ್ಮಿಸುವ ಸಾಮರ್ಥ್ಯ ಇದಕ್ಕಿದೆ. ಲಿಕ್ವಿಡ್, ನೀರು ಬಳಸಿ ಫೋಮ್ ಮಾಡಿ ನೀರು ಸ್ಪ್ರೇ ಮಾಡುತ್ತದೆ. ಈ ಫೈರ್ ಬೋಟ್‌ನನ್ನು ಜನರಲ್, ಆಯಿಲ್, ಮೆಟಲ್ ಫೈರ್ ಆದಾಗ ಬಳಕೆ ಮಾಡಬಹುದಾಗಿದೆ. ಇದನ್ನೂ ಓದಿ: ವಿದೇಶದಲ್ಲಿ ಓದು ಮುಗಿಸಿ ಮನೆಗೆ ಬಂದಿದ್ದ ಯುವಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

    ಈ ಫೈರ್ ಬೋಟ್‌ನನ್ನು ಅಗ್ನಿ ದುರಂತ ಸಂಭವಿಸಿದಾಗ ಎಲ್ಲಿ ಮನುಷ್ಯ ತೆರಳಲು ಸಾಧ್ಯವಿಲ್ಲವೋ ಅಂತ ಪ್ರದೇಶಗಳಿಗೆ ಇದನ್ನು ಕಳುಹಿಸಬಹುದು. ಇದಲ್ಲದೇ ನೌಕೆ, ಅಣು ಸ್ಥಾವರ, ಶಸ್ತ್ರಾಗಾರದಲ್ಲಿ ಅಗ್ನಿ ದುರಂತ ನಡೆದಾಗ ಇದನ್ನು ಬಳಸಲಾಗುತ್ತದೆ. ಇದು ಚಿಕ್ಕ ಮೆಟ್ಟಲುಗಳನ್ನು ಸಹ ಹತ್ತಿ ಹೋಗುವ ಸಾಮರ್ಥ್ಯ ಹೊಂದಿದ್ದು, ಕಾರವಾರದಲ್ಲಿ ಈ ಫೈರ್ ಬೋಟ್ 8ಕ್ಕೂ ಹೆಚ್ಚು ಇದ್ದು, ಶೀಘ್ರದಲ್ಲಿ ಅಗ್ನಿಶಾಮಕ ದಳಕ್ಕೂ ಈ ಫೈರ್ ಬೋಟ್(ಫೈರ್ ರೋಬೋಟ್)ಬಳಕೆ ಮಾಡುವ ಸಾಧ್ಯತೆಗಳಿವೆ.

  • ʻಆಪರೇಷನ್ ಅಭ್ಯಾಸ್ʼ – KRS ನಲ್ಲಿ ಮೇ 11 ರಂದು ಮಾಕ್ ಡ್ರಿಲ್

    ʻಆಪರೇಷನ್ ಅಭ್ಯಾಸ್ʼ – KRS ನಲ್ಲಿ ಮೇ 11 ರಂದು ಮಾಕ್ ಡ್ರಿಲ್

    ಮಂಡ್ಯ: ತುರ್ತು ಸಂದರ್ಭಗಳಲ್ಲಿ ಅಣೆಕಟ್ಟು ರಕ್ಷಣೆ ಮಾಡುವ ಬಗ್ಗೆ ಸಾರ್ವಜನಿಕರು, ಪ್ರವಾಸಿಗರಿಗೆ ಜಾಗೃತಿ ಮೂಡಿಸಲು ಮೇ 11ರಂದು‌ ಕೆಆರ್‌ಎಸ್ ಬೃಂದಾವನ (KRS Brindavan) ಉದ್ಯಾನವನದಲ್ಲಿ ʻಆಪರೇಷನ್ ಅಭ್ಯಾಸ್ʼ (Operation Abhyas) ಅಡಿಯಲ್ಲಿ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

    ಅಂದು ಅಂಜೆ ಸಂಜೆ 4 ಗಂಟೆಯಿಂದ 7 ಗಂಟೆ ವರೆಗೆ ಅಣಕು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ‌. ಇದು ಜಾಗೃತಿ ಉದ್ದೇಶದಿಂದ ಮಾಡಲಾಗುತ್ತಿದ್ದು, ಸಾರ್ವಜನಿಕರು, ಪ್ರವಾಸಿಗರು ಆತಂಕ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದ್ದಾರೆ. ಇಂದು ಮಂಡ್ಯ (Mandya) ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇದನ್ನೂ ಓದಿ: ದೇಶಕ್ಕಾಗಿ ನಾನು ಪ್ರಾಣ ಕೊಡಲು ಸಿದ್ಧ: ಜಮೀರ್ ಅಹ್ಮದ್

    ಬೆಂಕಿ ಅನಾಹುತಗಳು (Fire Accident), ತುರ್ತು‌ ಸಂದರ್ಭದಲ್ಲಿ ಜನರು ಗಾಬರಿ ಅಥವಾ ಆತಂಕಕ್ಕೆ ಒಳಗಾಗದಂತೆ ಆತ್ಮ ವಿಶ್ವಾಸ ತುಂಬಿ, ಅರಿವು ಮೂಡಿಸುವ ಉದ್ದೇಶದಿಂದ ಅಣುಕು ಪ್ರದರ್ಶನ (Mock Drill) ಆಯೋಜಿಸಲಾಗುತ್ತಿದೆ. ಅಲ್ಲದೇ ತುರ್ತು ಕಾರ್ಯಾಚರಣೆ ವೇಳೆ ನಾಗರಿಕರ ರಕ್ಷಣೆ, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಿಕೆ, ಗಾಯಗೊಂಡವರಿಗೆ ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತು ಹಾಗೂ ಬ್ಲಾಕ್ ಔಟ್ ಚಟುವಟಿಕೆಗಳ ಬಗ್ಗೆ ಅಣುಕು ಪ್ರದರ್ಶನ ಮಾಡಲಾಗುತ್ತದೆ. ಜನರು ಜನತೆ ಯಾವುದೇ ರೀತಿಯ ಗಾಬರಿ, ಆತಂಕಕ್ಕೆ ಒಳಗಾಗದೇ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಭಾರತ-ಪಾಕ್ ಉದ್ವಿಗ್ನ ಸ್ಥಿತಿ; ದೆಹಲಿ ಏರ್‌ಪೋರ್ಟ್‌ನಲ್ಲಿ 138 ವಿಮಾನ ಹಾರಾಟ ರದ್ದು

    ಇದೇ ವೇಳೆ ಅಣುಕು‌ ಕಾರ್ಯಾಚರಣೆಗೆ ವಾರ್ನಿಂಗ್ ಟೀಂ, ಕಂಟ್ರೋಲ್‌ ರೂಂ, ಇವ್ಯಾಕುಯೇಷನ್ ಟೀಂ (ಸ್ಥಳಾಂತರಿಸುವ ರಕ್ಷಣಾ ತಂಡ), ಅಗ್ನಿ ಶಾಮಕ ದಳ, ಎನ್‌ಸಿಸಿ ತಂಡ, ಹೋಂ ಗಾರ್ಡ್ಸ್‌, ಪೊಲೀಸ್ ಇಲಾಖೆ, ಪ್ರಥಮ ಚಿಕಿತ್ಸೆ ತಂಡ, ವೈದ್ಯಕೀಯ ತಂಡ, ಸಾರಿಗೆ ತಂಡ, ಸಂವಹನ ತಂಡಗಳನ್ನು ರಚಿಸಿ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಿದರು. ಇದನ್ನೂ ಓದಿ: ಗಡಿಯಲ್ಲಿ ಬುಲ್ಡೋಜರ್ ಘರ್ಜನೆ – 28 ಮದರಸಾ, 9 ಮಸೀದಿ, 6 ದೇವಾಲಯ, 1 ಈದ್ಗಾ ನೆಲಸಮ

  • ರಾಯಚೂರು | ರೈಲ್ವೇ ಇಲಾಖೆಯಿಂದ ಮಾಕ್ ಡ್ರಿಲ್ – ನಾಗರಿಕರ ರಕ್ಷಣೆಗೆ ಜಾಗೃತಿ

    ರಾಯಚೂರು | ರೈಲ್ವೇ ಇಲಾಖೆಯಿಂದ ಮಾಕ್ ಡ್ರಿಲ್ – ನಾಗರಿಕರ ರಕ್ಷಣೆಗೆ ಜಾಗೃತಿ

    ರಾಯಚೂರು: ಸೌತ್ ಸೆಂಟ್ರಲ್ ರೈಲ್ವೇ ಗುಂತಕಲ್ ವಲಯದಿಂದ ರಾಯಚೂರಿನ (Raichuru) ರೈಲ್ವೇ ನಿಲ್ದಾಣದವರೆಗೆ ಸಿವಿಲ್ ಡಿಫೆನ್ಸ್ ತಂಡದಿಂದ ಮಾಕ್ ಡ್ರಿಲ್ (Mock Drill) ನಡೆಸಲಾಯಿತು. ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರಿಕರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲು 30ಕ್ಕೂ ಹೆಚ್ಚು ಜನರ ಸಿವಿಲ್ ಡಿಫೆನ್ಸ್ ತಂಡ ಅಣಕು ಕಾರ್ಯಾಚರಣೆ ಮಾಡಿತು.ಇದನ್ನೂ ಓದಿ: ಆಪರೇಷನ್‌ ಸಿಂಧೂರ | ಉಗ್ರರ ಶವಗಳನ್ನು ಟ್ರ್ಯಾಕ್ಟರ್‌ನಲ್ಲಿ ಸಾಗಿಸಿದ ಭಿಕಾರಿಸ್ತಾನ್‌!

    ಲಕ್ಷ್ಮೀ ಬಾಂಬ್, ಸ್ಮೋಕ್ ಬಾಂಬ್‌ಗಳನ್ನು ಬಳಸಿ ದಾಳಿ ವೇಳೆ ಜನ ಹೇಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಬೇಕು? ಅಧಿಕಾರಿಗಳು ಹೇಗೆ ಅಲರ್ಟ್ ಆಗಿರಬೇಕು? ಹಂತ ಹಂತವಾಗಿ ಗಾಯಾಳುಗಳನ್ನು ರಕ್ಷಿಸಿ ಹೇಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಬೇಕು ಎನ್ನುವುದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಡಿವಿಜನ್ ಸಿವಿಲ್ ಡಿಫೆನ್ಸ್ ಎಮರ್ಜೆನ್ಸಿ ಆಫಿಸರ್ ಕೆ.ಸುದರ್ಶನ ರೆಡ್ಡಿ ನೇತೃತ್ವದಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.

    ರೈಲ್ವೇ ನಿಲ್ದಾಣದಲ್ಲಿ ಯುದ್ಧದ ದಾಳಿ ಸನ್ನಿವೇಶ ಸೃಷ್ಟಿಸಿ ಅಣಕು ಕಾರ್ಯಾಚರಣೆ ಮಾಡಿದ ಸಿಬ್ಬಂದಿ ಜನರು ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಬೆಂಕಿ ನಂದಿಸಿ ಅಪಾಯಗಳನ್ನು ತಗ್ಗಿಸುವ ಬಗ್ಗೆ ಮಾಕ್ ಡ್ರಿಲ್ ಮಾಡಲಾಯಿತು. ಗಡಿಯಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ಕೇಂದ್ರದ ಸೂಚನೆ ಮೇರೆಗೆ ರೈಲ್ವೇ ಇಲಾಖೆಯಿಂದ ಕಾಚಗೂಡು, ರಾಯಚೂರು, ಔರಂಗಾಬಾದ್ ಮೂರು ಸ್ಥಳಗಳಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಯಿತು.ಇದನ್ನೂ ಓದಿ: ಆಮೀರ್ ಖಾನ್ ನಿವಾಸಕ್ಕೆ ಅಲ್ಲು ಅರ್ಜುನ್ ಭೇಟಿ- ಒಟ್ಟಿಗೆ ಸಿನಿಮಾ ಮಾಡ್ತಾರಾ?

  • LIVE – ಮಾಕ್‌ ಡ್ರಿಲ್‌: ಕಟ್ಟಡದ ಮೇಲೆ ನಿಂತು ರಕ್ಷಣೆಗೆ ಕೂಗಿದ ಜನರು

    LIVE – ಮಾಕ್‌ ಡ್ರಿಲ್‌: ಕಟ್ಟಡದ ಮೇಲೆ ನಿಂತು ರಕ್ಷಣೆಗೆ ಕೂಗಿದ ಜನರು

    ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾಗರಿಕರ ಸಂರಕ್ಷಣೆಗಾಗಿ ದೇಶಾದ್ಯಂತ ಸ್ವರಕ್ಷಣಾ ತಾಲೀಮು (ಮಾಕ್‌ ಡ್ರಿಲ್‌) ನಡೆಸಲಾಯಿತು. ದೇಶಾದ 224 ಕಡೆಗಳಲ್ಲಿ ಮಾಕ್‌ ಡ್ರಿಲ್‌ ನಡೆಸಲಾಯಿತು. 

    05: 38 PM: ಡೆಹ್ರಾಡೂನ್‌ನ ಐಎಸ್‌ಬಿಟಿಯಲ್ಲಿ ಸಂತ್ರಸ್ತರನ್ನು ರಕ್ಷಿಸುವ ಮಾಕ್‌ ಡ್ರಿಲ್‌ ನಡೆಸಲಾಯಿತು.

    05: 24 PM: ಶಿವಮೊಗ್ಗದ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೈರನ್‌ ಸದ್ದು ಮೊಳಗುತ್ತಿದ್ದಂತೆ ವಿದ್ಯಾರ್ಥಿಗಳು ಬೆಂಚಿನ ಕೆಳಗಡೆ ಅವಿತುಕೊಂಡಂತೆ ಮಾಕ್‌ ಡ್ರಿಲ್‌ ಮಾಡಿದರು.

    05: 20 PM: ಗೋವಾದ ಪಣಜಿಯಲ್ಲಿ ಬೋಟ್‌ಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯಾಚರಣೆಯ ಮಾಕ್‌ ಡ್ರಿಲ್‌ ನಡೆಯಿತು.

    05: 13 PM: ಚೆನ್ನೈ ಬಂದರಿಗೆ ಟಿಎನ್‌ಡಿಆರ್‌ಎಫ್ ತಂಡ ಆಗಮನ. ಚೆನ್ನೈ ಬಂದರಿನಲ್ಲಿ ಅಣಕು ಕವಾಯತು ನಡೆಸುವ ಮೊದಲು ಕಮಾಂಡರ್ ಬ್ರೀಫಿಂಗ್ ನಡೆದ ದೃಶ್ಯಗಳು.

    05: 10 PM: ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಆಪರೇಷನ್ ಅಭ್ಯಾಸ ಮಾಕ್ ಡ್ರಿಲ್ ನಡೆಯಿತು. ಬಾಂಬ್ ದಾಳಿ ವೇಳೆ ನಾಗರಿಕರನ್ನ ಅಪಾಯದಿಂದ ರಕ್ಷಿಸಿಕೊಳ್ಳಲು ಅಣಕು ಪ್ರದರ್ಶನ ಮಾಡಲಾಯಿತು. ಬಾಂಬ್ ಡಿಸ್ಪೋಸಲ್ ಮಾಡುವ ಬಗ್ಗೆಯು ಮಾಕ್ ಡ್ರಿಲ್ ನಡೆಯಿತು.

    05: 08 PM: ಕಟ್ಟಡದ ಮೇಲೆ ನಿಂತು ಜನರು ರಕ್ಷಣೆಗಾಗಿ ಕೂಗಿಕೊಂಡಂತೆ ಮಾಕ್‌ ಡ್ರಿಲ್‌ ಮಾಡಿದರು.

    05: 03 PM: ಮೊದಲ ಮಹಡಿಯಲ್ಲಿ ಸಿಲುಕಿದ ಗಾಯಳುಗಳ ರೆಸ್ಕ್ಯೂ ಕಾರ್ಯ ಆರಂಭ. ಏಣಿ ಮೂಲಕ ರಕ್ಷಣೆ ಮಾಡಿ ಕರೆದೊಯ್ಯುವ ಕಾರ್ಯ ಆರಂಭಿಸಲಾಯಿತು.

    05: 00 PM: ಮಾಕ್ ಡ್ರಿಲ್ ಮತ್ತೆ ಆರಂಭ.

    04: 32 PM: ದೆಹಲಿಯ ಎನ್‌ಡಿಎಂಸಿ ಕಚೇರಿಯಲ್ಲಿ ಸೈರನ್‌ ಸದ್ದು ಮೊಳಗುತ್ತಿದ್ದಂತೆ ಜನ ಭಯಭೀತರಾಗಿ ಹೊರಗಡೆ ಓಡಿಬಂದಂತೆ ಅಣಕು ಪ್ರದರ್ಶನ ಮಾಡಿದರು.

    04: 30 PM: ಬೆಂಗಳೂರಿನ ಗೆಸ್ಟ್‌ ಹೌಸ್‌ನಲ್ಲಿ ಬಾಂಬ್‌ ಬ್ಲಾಸ್ಟ್‌ನ ಅಣಕು ಪ್ರದರ್ಶನ ನಡೆಯಿತು.

    04: 22 PM: ಗ್ವಾಲಿಯರ್‌ನ ಸಿರೋಲ್ ಪ್ರದೇಶದಲ್ಲಿ ಸಮಗ್ರ ಅಣಕು ಡ್ರಿಲ್ ನಡೆಸಲಾಯಿತು. ಬೆಂಕಿ ಬಿದ್ದ ಕಟ್ಟಡಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹಾಕಿ ನಂದಿಸಿದರು.

    04: 20 PM: ಮುಂಬೈನ ಕ್ರಾಸ್ ಮೈದಾನದಲ್ಲಿ ಅಣಕು ಪ್ರದರ್ಶನ ನಡೆದ ಪರಿ ಹೀಗಿತ್ತು.

    04: 15 PM: ಹಲಸೂರು ಕೆರೆಯಲ್ಲಿ ಸಮಗ್ರ ಅಣಕು ಪ್ರದರ್ಶನ ನಡೆಸಲಾಗುತ್ತಿದೆ.

    04: 02 PM: ಐ ಲ್ಯಾಂಡ್‌ನಲ್ಲಿ ಸಿಲುಕಿರುವ ಸಂತ್ರಸ್ತರ ರಕ್ಷಣೆ ಅಣುಕು ಪ್ರದರ್ಶನ ಮಾಡಲಾಯಿತು.

    04: 01 PM: ಸೈರನ್ ಸದ್ದಿಗೆ ಗುಂಪುಗೂಡಿದ ಜನ. ಕಚೇರಿ, ಅಂಗಡಿಗಳಿಂದ ಹೊರಬಂದ ಜನ. ಫುಟ್‌ಪಾತ್‌ನಲ್ಲಿ ಓಡಾಡೋರೂ ಸೈರನ್‌ಗೆ ಅಲರ್ಟ್.

    3:59 PM: ಡಿಫನ್ಸ್ ಪ್ರಧಾನ ಕಚೇರಿ ಮೈದಾನಕ್ಕೆ ಗೃಹ ಸಚಿವ ಪರಮೇಶ್ವರ್‌ ಆಗಮಿಸಿ ಮಾಕ್‌ ಡ್ರಿಲ್‌ ವೀಕ್ಷಣೆ ಮಾಡಿದರು.

    3:58 PM: ಚಾಮರಾಜಪೇಟೆ 3:58ಕ್ಕೆ ಸರಿಯಾಗಿ ಸೈರನ್‌ ಮೊಳಗಿತು. ಹಲಸೂರು ಡಿಫೆನ್ಸ್‌, ರಾಜಾಜಿನಗರ ಅಗ್ನಿಶಾಮಕ ಠಾಣೆ, ಕಮರ್ಷಿಯಲ್‌ ಪೊಲೀಸ್‌ ಠಾಣೆ, ಸಿಟಿ ಮಾರ್ಕೆಟ್‌ ಠಾಣೆ ಹೀಗೆ ಹಲವೆಡೆ ಸೈರನ್‌ ಸದ್ದು ಕೇಳಿಬಂತು.

  • ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಶುರು – `ಆಪರೇಷನ್ ಅಭ್ಯಾಸ್’ ಹೆಸರಲ್ಲಿ ಅಣಕು ಕಾರ್ಯಾಚರಣೆ

    ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಶುರು – `ಆಪರೇಷನ್ ಅಭ್ಯಾಸ್’ ಹೆಸರಲ್ಲಿ ಅಣಕು ಕಾರ್ಯಾಚರಣೆ

    ಬೆಂಗಳೂರು: ಕೇಂದ್ರ ಗೃಹ ಸಚಿವಾಯಲದ (Union Home Ministry) ಸೂಚನೆ ಮೇರೆಗೆ ದೇಶದ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ (Mock Drill)(ಅಣುಕು ಕಾರ್ಯಾಚರಣೆ) ಆರಂಭವಾಗಿದೆ.

    ಬೆಂಗಳೂರಿನ (Bengaluru)35 ಕಡೆಗಳಲ್ಲಿ ಸೈರನ್ ಮೊಳಗಿದ್ದು, ಆಪರೇಷನ್ ಅಭ್ಯಾಸ್ ಹೆಸರಲ್ಲಿ ನಾಗರಿಕ ಅಣುಕು ಪ್ರದರ್ಶನ ಆರಂಭವಾಗಿದೆ. ಗೆಸ್ಟ್ ಹೌಸ್‌ನಲ್ಲಿ ಬೆಂಕಿ ಬಿದ್ದಾಗ ಹೇಗೆ ರಕ್ಷಣೆ ಮಾಡಬೇಕು? ಸಮುದ್ರ ತೀರದಲ್ಲಿ ಯಾವ ರೀತಿ ಕಾರ್ಯಾಚರಣೆ ಇರುತ್ತದೆ? ಸಾರ್ವಜನಿಕರು ಯಾವ ರೀತಿ ವರ್ತಿಸಬೇಕು? ಮಾನಸಿಕ ಸ್ಥೈರ್ಯ ಹೇಗೆ ತುಂಬಬೇಕು? ಎಂಬುದರ ಅಣಕು ಕಾರ್ಯಾಚರಣೆ ನಡೆಯುತ್ತಿದೆ.ಇದನ್ನೂ ಓದಿ: ರಾಷ್ಟ್ರಪತಿ ಭೇಟಿಯಾಗಿ ‘ಆಪರೇಷನ್‌ ಸಿಂಧೂರ’ ಬಗ್ಗೆ ವಿವರಿಸಿದ ಮೋದಿ

    ಬೋಟ್ ರೆಸ್ಕ್ಯೂಗೆ ಸಿವಿಲ್ ಡಿಫೆನ್ಸ್, ಅಗ್ನಿಶಾಮಕ ದಳ ಹಾಗೂ ಆಲ್ ಇಂಡಿಯಾ ವಾಟರ್ ರೆಸ್ಕ್ಯೂ ಟೀಂನಿಂದ ಕಾರ್ಯಾಚರಣೆ ನಡೆಯುತ್ತಿದೆ. ಹಲಸೂರು ಕೆರೆಯಲ್ಲಿ ನಡೆಯುತ್ತಿರುವ ಬೋಟ್ ರೆಸ್ಕ್ಯೂ ನೋಡಲು ಬಂದ ಗೃಹ ಸಚಿವ ಪರಮೇಶ್ವರ್ ಹಾಗೂ ಬಿಜೆಪಿ ಸಂಸದ ಎಂಪಿ ಸುಧಾಕರ್ ಆಗಮಿಸಿದ್ದು, ಅಣುಕು ಕವಾಯತು ವೀಕ್ಷಿಸುತ್ತಿದ್ದಾರೆ.

    ಏ.22ರಂದು ಮಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗಿದೆ. ವಿವಿಧ ತುರ್ತು ಪರಿಸ್ಥಿತಿಯಲ್ಲಿ ದೇಶದ ಜನರನ್ನ ಸಿದ್ಧಗೊಳಿಸುವ ಉದ್ದೇಶದಿಂದಾಗಿ ಅಣಕು ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು.

    ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ನಾಗರಿಕರಿಗೆ ತರಬೇತಿ ನೀಡುವುದು ಈ ಕವಾಯತುಗಳ ಪ್ರಮುಖ ಅಂಶವಾಗಿರುತ್ತದೆ. ವಾಯುದಾಳಿ ಸೈರನ್ ಮತ್ತು ವಿದ್ಯುತ್ ಕಡಿತದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದರ ಮೇಲೆ ಈ ಕವಾಯತುಗಳ ಉದ್ದೇಶವಾಗಿರುತ್ತದೆ.ಇದನ್ನೂ ಓದಿ: ಭಾರತದ ವಿರುದ್ಧ ಪ್ರತಿದಾಳಿಗೆ ಪಾಕ್‌ ಕುತಂತ್ರ – ಸೇನೆಗೆ ಪರಮಾಧಿಕಾರ ನೀಡಿದ ಪ್ರಧಾನಿ ಶೆಹಬಾಜ್ ಶರೀಫ್

  • ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?

    ನಗದು, ಟಾರ್ಚ್, ವೈದ್ಯಕೀಯ ಕಿಟ್ ಕೈಲ್ಲಿಟ್ಟುಕೊಳ್ಳಿ – ನಾಳೆ 244 ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ಹೇಗಿರಲಿದೆ?

    ನವದೆಹಲಿ: ಭಾರತ (India) ಮತ್ತು ಪಾಕಿಸ್ತಾನದ (Pakistan) ಮಧ್ಯೆ ಹೆಚ್ಚಾಗುತ್ತಿರುವ ಉದ್ವಿಗ್ನತೆ ನಡುವೆ ಇದೀಗ ಕೇಂದ್ರ ಗೃಹ ಸಚಿವಾಲಯದ ಸೂಚನೆ ಅನ್ವಯ ದೇಶದ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ನಾಳೆ (ಮೆ 07) ಮಾಕ್ ಡ್ರಿಲ್ ನಡೆಯಲಿದೆ.

    ಮಾಕ್ ಡ್ರಿಲ್ (Mock Drill) ಮೂಲಕ ನಾಗರಿಕರಿಗೆ ತುರ್ತು ಪರಿಸ್ಥಿತಿಯ ಕಾಲ್ಪನಿಕತೆಯನ್ನು ಕಟ್ಟಿಕೊಡಲಾಗುತ್ತದೆ. ಈ ವೇಳೆ ರಕ್ಷಣಾ ಕ್ರಮದ ತರಬೇತಿ, ವಾಯುದಾಳಿಯ ಸೈರನ್‌ಗಳಿಗೆ ಹೇಗೆ ಪ್ರತಿಕ್ರಿಯಿಸುವುದು, ವಿದ್ಯುತ್ ಕಡಿತ ಹಾಗೂ ಇನ್ನಿತರ ಮೂಲಭೂತ ವಸ್ತುಗಳ ನಿಯಂತ್ರಣಗಳ ಕುರಿತು ತಿಳುವಳಿಕೆ ನೀಡಲಾಗುತ್ತದೆ.ಇದನ್ನೂ ಓದಿ: ನಾಳೆ ರಾಜ್ಯದ 2 ಕಡೆ ನಡೆಯಲಿದೆ ಯುದ್ಧದ ಡ್ರಿಲ್‌!

    ಏ.22ರಂದು ಮಹಲ್ಗಾಮ್‌ನ (Pahalgam Terrorist Attack) ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವಿವಿಧ ತುರ್ತು ಪರಿಸ್ಥಿತಿಯಲ್ಲಿ ದೇಶವನ್ನು ಸಿದ್ಧಗೊಳಿಸುವ ಉದ್ದೇಶದಿಂದಾಗಿ ನಾಳೆ ಅಣಕು ಭದ್ರತಾ ಕವಾಯತು ನಡೆಸುವಂತೆ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ .

    ಗೃಹ ಸಚಿವಾಲಯದ ಹೇಳಿಕೆಯ ಪ್ರಕಾರ, ನಾಗರಿಕರಿಗೆ ತರಬೇತಿ ನೀಡುವುದು ಈ ಕವಾಯತುಗಳ ಪ್ರಮುಖ ಅಂಶವಾಗಿರುತ್ತದೆ. ವಾಯುದಾಳಿ ಸೈರನ್ ಮತ್ತು ವಿದ್ಯುತ್ ಕಡಿತದ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುವುದರ ಮೇಲೆ ಈ ಕವಾಯತುಗಳು ಗಮನಹರಿಸಲಿವೆ. ಈ ವೇಳೆ ನಾಗರಿಕರು ಅವಶ್ಯ ಸಾಮಗ್ರಿಗಳನ್ನು ಹೆಚ್ಚು ಇರಿಸಿಕೊಳ್ಳುವುದು, ಟಾರ್ಚ್, ಕ್ಯಾಂಡಲ್ ಮತ್ತು ವೈದ್ಯಕೀಯ ಸಲಕರಣೆಗಳನ್ನು ಇರಿಸಿಕೊಳ್ಳುವಂತೆ ಸೂಚನೆ ನೀಡಲಾಗುವುದು. ಜೊತೆಗೆ ಮೊಬೈಲ್ ಮತ್ತು ಡಿಜಿಟಲ್ ವಹಿವಾಟುಗಳ ವಿಫಲಗೊಳ್ಳುವ ಸಂದರ್ಭ ಉಂಟಾದರೆ ನಗದು ಹಣವನ್ನು ಕೈಯಲ್ಲಿ ಇರಿಸಿಕೊಳ್ಳುವಂತೆ ತಿಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

    ಇನ್ನೂ ಮಾಕ್ ಡ್ರಿಲ್ ನಡೆಸಲಾಗುವ 244 ಜಿಲ್ಲೆಗಳ ಪೈಕಿ 100ಕ್ಕೂ ಹೆಚ್ಚು ಜಿಲ್ಲೆಗಳನ್ನು ಅತ್ಯಂತ ಸೂಕ್ಷ್ಮ ಸ್ಥಳಗಳೆಂದು ಗುರುತಿಸಲಾಗಿದೆ. ಹೀಗಾಗಿ ಈ ಅಣಕು ಕವಾಯತು ಕೆಲವು ನಿರ್ಣಾಯಕ ಕ್ರಮಗಳನ್ನು ಒಳಗೊಂಡಿರಲಿದೆ.ಇದನ್ನೂ ಓದಿ: ಮಗಳ ಸಾವಿಗೆ ಪ್ರತೀಕಾರ – ‘ತಮ್ಮ’ನ ಅಪ್ಪನನ್ನು ಬರ್ಬರವಾಗಿ ಕೊಂದ ತಂದೆ