Tag: Mobile Torch

  • ವಿದ್ಯುತ್ ಕಡಿತ – ಮೊಬೈಲ್ ಟಾರ್ಚ್ ಬಳಸಿ ವೈದ್ಯರಿಂದ ರೋಗಿಗೆ ಚಿಕಿತ್ಸೆ

    ವಿದ್ಯುತ್ ಕಡಿತ – ಮೊಬೈಲ್ ಟಾರ್ಚ್ ಬಳಸಿ ವೈದ್ಯರಿಂದ ರೋಗಿಗೆ ಚಿಕಿತ್ಸೆ

    ಲಕ್ನೋ: ಉತ್ತರಪ್ರದೇಶ(Uttar Pradesh) ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ವಿದ್ಯುತ್ ಕಡಿತಗೊಳಿಸಿದ್ದ ಹಿನ್ನೆಲೆ ವೈದ್ಯರು ಮೊಬೈಲ್ ಟಾರ್ಚ್ (Mobile Torch) ಬಳಸಿ ರೋಗಿಗೆ ಚಿಕಿತ್ಸೆ ನೀಡಿದ್ದಾರೆ.

    ಧಾರಾಕಾರ ಮಳೆ ಸುರಿದ ಹಿನ್ನೆಲೆ ಬಲಿಯಾ(Balia) ಜಿಲ್ಲೆಯ ಆಸ್ಪತ್ರೆಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಹೀಗಾಗಿ ರೋಗಿಗಳಿಗೆ ಒಂದು ಗಂಟೆಗೂ ಹೆಚ್ಚು ಕಾಲ ಮೊಬೈಲ್ ಟಾರ್ಚ್ ಲೈಟ್‍ನಲ್ಲಿಯೇ ಚಿಕಿತ್ಸೆ ನೀಡಿದ್ದಾರೆ. ಇದನ್ನೂ ಓದಿ: ಬಾರ್‌ನಲ್ಲಿ ಝಳಪಿಸಿದ ಲಾಂಗ್-ಮಚ್ಚು: ಕುಡಿಯಲು ಬಂದವರಿಂದ ಏಕಾಏಕಿ ಅಟ್ಯಾಕ್

    ಹಲವಾರು ಜನರು ಮಹಿಳೆಯರು ಕತ್ತಲೆಯಲ್ಲಿ ಸ್ಟ್ರೆಚರ್ ಮೇಲೆ ಕುಳಿತಿದ್ದು, ವ್ಯಕ್ತಿಯೋರ್ವ ಮೊಬೈಲ್ ಫೋನ್ ಅನ್ನು ಹಿಡಿದಿಟ್ಟುಕೊಂಡಿದ್ದರೆ, ವೈದ್ಯರು ಮಹಿಳೆಯನ್ನು ಚೆಕ್‍ಆಪ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಬ್ರಿಟನ್ ರಾಣಿಯ ಕಿರೀಟದಲ್ಲಿದ್ದ ಕೊಹಿನೂರು ವಜ್ರದ ಮೂಲ ಯಾದಗಿರಿ!

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಜನರೇಟರ್‌ಗಾಗಿ(Generator) ಬ್ಯಾಟರಿಗಳನ್ನು ಪಡೆಯುತ್ತಿದ್ದರಿಂದ 15-20 ನಿಮಿಷಗಳ ಕಾಲ ವ್ಯತ್ಯಯವಾಗಿದೆ. ಆಸ್ಪತ್ರೆಯಲ್ಲಿ ಬ್ಯಾಕ್‍ಅಪ್‍ಗಾಗಿ ಜನರೇಟರ್ ಇದೆ. ಆದರೆ ಬ್ಯಾಟರಿಗಳನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಜನರೇಟರ್ ಬ್ಯಾಟರಿ ಇಲ್ಲದೇ ಇರಲು ಕಾರಣವೇನು ಎಂಬ ಪ್ರಶ್ನಿಸಿದಾಗ, ಯಾವಾಗಲೂ ಬ್ಯಾಟರಿಗಳು ಕಳ್ಳತನವಾಗುವ ಭಯ ಇದ್ದೇ ಇರುತ್ತದೆ. ಹಾಗಾಗಿ ತೆಗೆದಿಡಲಾಗಿತ್ತು ಎಂದಿದ್ದಾರೆ. ಆದರೆ ಈ ಘಟನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಮೊಬೈಲ್ ಟಾರ್ಚಿನಲ್ಲಿ ಇಂಜೆಕ್ಷನ್ ಚುಚ್ಚಿ ವೈದ್ಯರಿಂದ ಶಸ್ತ್ರಚಿಕಿತ್ಸೆ

    ಮೊಬೈಲ್ ಟಾರ್ಚಿನಲ್ಲಿ ಇಂಜೆಕ್ಷನ್ ಚುಚ್ಚಿ ವೈದ್ಯರಿಂದ ಶಸ್ತ್ರಚಿಕಿತ್ಸೆ

    ಭೋಪಾಲ್: ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯ ವೈದ್ಯರು ಟಾರ್ಚ್ ಬೆಳಕಿನಲ್ಲಿ ಮಹಿಳೆಗೆ ಆಪರೇಷನ್ ಮಾಡಿರುವ ಆಘಾತಕಾರಿ ಘಟನೆ ಇಂದು ನಡೆದಿದೆ.

    ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ನಾಗ್ಡಾದ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಮಹಿಳೆಯರಿಗೆ ಟ್ಯೂಬೆಕ್ಟಮಿ (ಸಂತಾನ ತಡೆ ಚಿಕಿತ್ಸೆ) ಆಪರೇಷನ್ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಈ ಶಿಬಿರದಲ್ಲಿ ವಿದ್ಯುತ್ ಇಲ್ಲದ ಕಾರಣ ಮಹಿಳೆಯೊಬ್ಬರಿಗೆ ಟರ್ಚ್ ಬೆಳಕಿನ ಮೂಲಕ ವೈದ್ಯರು ಆಪರೇಷನ್ ಮಾಡಿದ್ದಾರೆ.

    ವರದಿಯ ಪ್ರಕಾರ ಮಹಿಳೆಯನ್ನು ಆಪರೇಷನ್ ಥಿಯೇಟರ್ ಗೆ ಕರೆದುಕೊಂಡು ಹೋಗುವ ಮುನ್ನ ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಇಂಜೆಕ್ಷನ್ ನೀಡಲಾಗಿದೆ. ನಂತರ ಆಕೆಯನ್ನು ಆಪರೇಷನ್ ಥಿಯೇಟರ್ ಒಳಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆಸ್ಪತ್ರೆಯಲ್ಲಿ ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಇದ್ದ ಬ್ಯಾಟರಿಯನ್ನು ಬಳಸಿ ಆಪರೇಷನ್ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶದ ಆರೋಗ್ಯ ಸಚಿವ ತುಳಸಿ ಸಿಲವತ್, ಸರ್ಕಾರಿ ಆಸ್ಪತ್ರೆಯಲ್ಲಿ ಅನೇಕ ಸೌಲಭ್ಯಗಳ ಕೊರತೆ ಇದೆ. ಆದರೆ ನಮ್ಮ ಆಡಳಿತದಲ್ಲಿ ಅದನ್ನು ನಿವಾರಿಸಲು ಪ್ರಯತ್ನ ಮಾಡುತ್ತಿದ್ದೆವೆ. ಇದು ಒಂದು ಗಂಭೀರವಾದ ಘಟನೆ ನಾವು ಇದನ್ನು ಗಂಭೀರವಾಗಿ ಪರಿಗಣಿಸಿ ಮುಂದೆ ಈ ರೀತಿಯ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

  • ಮೊಬೈಲ್ ಟಾರ್ಚ್ ಲೈಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು: ವಿಡಿಯೋ ವೈರಲ್

    ಮೊಬೈಲ್ ಟಾರ್ಚ್ ಲೈಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು: ವಿಡಿಯೋ ವೈರಲ್

    ಪಾಟ್ನಾ: ಆಪರೇಷನ್ ಥಿಯೇಟರ್ ನಲ್ಲಿ ಪವರ್ ಕಟ್ ಆದ ಹಿನ್ನಲೆಯಲ್ಲಿ ಮಹಿಳೆಯೊಬ್ಬರಿಗೆ ಟಾರ್ಚ್ ಲೈಟ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಿದ ಘಟನೆ ಬಿಹಾರದ ಸಹಸ್ರಾದ ಸದಾರ್ ಆಸ್ಪತ್ರೆಯಲ್ಲಿ ನಡೆದಿದೆ.

    ಟಾರ್ಚ್ ಲೈಟಿನಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿರೋ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಅವರ ಸುತ್ತಮುತ್ತ ಹಲವು ಜನ ಸುತ್ತುವರಿದು ಸ್ಟಿಚಸ್ ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೇ ವೈದ್ಯರು ಬಿಳಿ ಬಟ್ಟೆ ಧರಿಸುವ ಬದಲು ಖಾಕಿ ಉಡುಪನ್ನು ಧರಿಸಿದ್ದಾರೆ.

    ವರದಿಗಳ ಪ್ರಕಾರ ಈ ಆಸ್ಪತ್ರೆಯಲ್ಲಿ ಜನರೇಟರ್ ಸೌಲಭ್ಯ ಇಲ್ಲದ ಕಾರಣ ಮೊಬೈಲ್ ಫೋನ್ ಟಾರ್ಚ್‍ನಲ್ಲೇ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆದು ಕೆಲವು ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಘಟನೆಯ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಈ ಹಿಂದೆ ಉತ್ತರಪ್ರದೇಶದ ಉನಾವೊ ಜಿಲ್ಲೆಯಲ್ಲಿ 32 ರೋಗಿಗಳಿಗೆ ಇದೇ ರೀತಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು ಎಂದು ವರದಿಯಾಗಿದೆ.