Tag: Mobile theft

  • ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ – ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್‌ ಕದ್ದಿದ್ದ ಖದೀಮರ ಬಂಧನ

    ಚಿಕ್ಕಬಳ್ಳಾಪುರ ಪೊಲೀಸರ ಭರ್ಜರಿ ಬೇಟೆ – ಕೋಟಿ ಕೋಟಿ ಮೌಲ್ಯದ 5,140 ಮೊಬೈಲ್‌ ಕದ್ದಿದ್ದ ಖದೀಮರ ಬಂಧನ

    – 4.50 ಕೋಟಿ ಮೌಲ್ಯದ ಮೊಬೈಲ್‌ಗಳನ್ನ 90 ಲಕ್ಷಕ್ಕೆ ಸೇಲ್‌ ಮಾಡಿದ್ದ ಗ್ಯಾಂಗ್‌

    ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲ ಅವು ಸರಿಸುಮಾರು 5 ಕೋಟಿ ಮೌಲ್ಯದ ಮೊಬೈಲ್‌ಗಳು (Mobile), ಉತ್ತರ ಪ್ರದೇಶದಿಂದ ಬೆಂಗಳೂರಿಗೆ (Bengaluru) ರವಾನೆ ಮಾಡ್ತಿದ್ದ ಟ್ರಕ್‌ನಲ್ಲಿ ರಂದ್ರ ಕೊರೆದು ಸಿನಿಮೀಯ ಶೈಲಿಯಲ್ಲಿ ಮೊಬೈಲ್‌ಗಳನ್ನ ಕಳವು ಮಾಡಲಾಗಿತ್ತು. ಪೊಲೀಸರಿಗೆ ಚಾಲೆಂಜಿಂಗ್ ಆಗಿದ್ದ ಪ್ರಕರಣವನ್ನ ಚಿಕ್ಕಬಳ್ಳಾಪುರ (Chikkaballapura Police) ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ದೇಶದಲ್ಲೇ ಪೊಲೀಸರ ಕಾಯಕ ಮಾದರಿ ಎನ್ನುವಂತಾಗಿದೆ.

    ಹೌದು. 2024ರ ನವೆಂಬರ್‌ 23ರಂದು ಟ್ರಕ್‌ವೊಂದು ರಾಷ್ಟ್ರೀಯ ಹೆದ್ದಾರಿ-44ರ (National Highway – 4) ಮೂಲಕ ಉತ್ತರಪ್ರದೇಶದ ನೋಯ್ಡಾದಿಂದ ಬೆಂಗಳೂರಿಗೆ ಬರೋಬ್ಬರಿ 6,640 ಮೊಬೈಲ್‌ಗಳನ್ನ ಹೊತ್ತು ಸಾಗಿತ್ತು. ಬೆಂಗಳೂರು ತಲುಪಲು ಇನ್ನೂ 50 ಕಿಮೀ ಅಷ್ಟೇ ಬಾಕಿಯಿತ್ತು. ಆದ್ರೆ ದಿನ ಕಳೆದರೂ ಬೆಂಗಳೂರು ತಲುಪಲೇ ಇಲ್ಲ. ಹೀಗಾಗಿ ಕಂಪನಿಯವರು ಜಿಪಿಎಸ್ ಆಧರಿಸಿ ಚೆಕ್ ಮಾಡಿದ್ರೆ ಅದು ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ರೆಡ್ಡಿಗೊಲ್ಲವಾರಹಳ್ಳಿ ಬಳಿ ಡಾಬಾ ವೊಂದರ ಬಳಿ ನಿಲ್ಲಿಸಲಾಗಿತ್ತು. ಹೋಗಿ ನೋಡಿದ್ರೆ ಟ್ರಕ್ ಇದೆ, ಚಾಲಕ ಇರಲಿಲ್ಲ. ಇದನ್ನೂ ಓದಿ: ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ನಂತರ ಟ್ರಕ್‌ನಲ್ಲಿ ಸರಕು ನೋಡಲು ಹೋದಾಗ ಚಾಲಕನ ಕ್ಯಾಬಿನ್‌ನಿಂದಲೇ ರಂದ್ರ ಕೊರೆದು ಮೊಬೈಲ್‌ಗಳನ್ನ ದೋಚಿ ಮತ್ತೊಂದು ಟ್ರಕ್‌ಗೆ ತುಂಬಿಸಿರುವುದು ಬೆಂಕಿಗೆ ಬಂದಿತು. 6,640 ಮೊಬೈಲ್ ಗಳ ಪೈಕಿ 5,140 ಮೊಬೈಲ್ ಗಳನ್ನ ಕಳವು ಮಾಡಲಾಗಿತ್ತು. ಉಳಿದ ಮೊಬೈಲ್ ಗಳು ಹಾಗೆ ಟ್ರಕ್ ನಲ್ಲಿ ಉಳಿದಿದ್ದವು. ಇದನ್ನೂ ಓದಿ: Kolar | ಮನೆಯಲ್ಲಿ ಬುದ್ಧಿವಾದ ಹೇಳಿದ್ದಕ್ಕೆ ವ್ಯಕ್ತಿ ನೇಣಿಗೆ ಶರಣು

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಢು ತನಿಖೆ ನಡೆಸಿದ ಪೇರೇಸಂದ್ರ ಹಾಗೂ ಸೆನ್ ಪೊಲೀಸರು ಹರಿಯಾಣ, ರಾಜಸ್ಥಾನ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದರು. ಇದೀಗ 7 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಟ್ರಕ್ ಚಾಲಕ ರಾಹುಲ್, ಇಮ್ರಾನ್, ಮೊಹಮ್ಮದ್ ಮುಸ್ತಫಾ, ಅನೂಪ್ ರಾಯ್, ಅಭಿಜಿತ್ ಪೌಲ್, ಸಕೃಲ್ಲಾ ಹಾಗೂ ಯೂಸುಫ್ ಖಾನ್ ಬಂಧಿತ ಆರೋಪಿಗಳು. ಬಂಧಿತರಿಂದ ಮೊಬೈಲ್ ಸಾಗಾಟ ಮಾಡಲು ಬಳಸಿದ್ದ ಟ್ರಕ್ ಸೇರಿ ಕಳವು ಮಾಡಿದ್ದ 5,140 ಮೊಬೈಲ್‌ಗಳ ಪೈಕಿ 56 ಮೊಬೈಲ್‌ಗಳನ್ನ ಜಪ್ತಿ ಮಾಡಿದ್ದಾರೆ. ಇದನ್ನೂ ಓದಿ: ಗಡಿಯಲ್ಲಿ ಯುದ್ಧ ಕಾರ್ಮೋಡ – ಭಾರತೀಯ ಸೈನಿಕರ ಯಶಸ್ಸಿಗಾಗಿ ಪರಶುರಾಮನ ಕೊಡಲಿಯಿಟ್ಟು ಮಹಾಯಾಗ

    ದೆಹಲಿಯಲ್ಲಿ ಮಾರಾಟ
    ಚಿಕ್ಕಬಳ್ಳಾಪುರ ಸಮೀಪ ಮೊಬೈಲ್‌ ದೋಚಿದ್ದ ಕಳ್ಳರು ಬೇರೊಂದು ಟ್ರಕ್‌ಗೆ ತುಂಬಿಕೊಂಡು ದೆಹಲಿಯಲ್ಲಿ ಮಾರಾಟ ಮಾಡಿದ್ದರು. ಸರಿಸುಮಾರು ನಾಲ್ಕೂವರೆ ಕೋಟಿ ಮೌಲ್ಯದ ಮೊಬೈಲ್‌ಗಳನ್ನ ಕಳ್ಳರು ಕೇವಲ 90 ಲಕ್ಷ ರೂಪಾಯಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿದ್ದರು. ಅಲ್ಲಿಂದ ಮೊಬೈಲ್‌ಗಳು ದೇಶದ ನಾನಾ ರಾಜ್ಯಗಳಿಗೆ ಸಪ್ಲೈ ಆಗಿವೆ ಅನ್ನೋದು ತನಿಖೆ ವೇಳೆ ತಿಳಿದುಬಂದಿದೆ. ಹೀಗಾಗಿ ಮೊಬೈಲ್‌ ಮಾರಿ ಆರೋಪಿಗಳ ಖಾತೆಯಲ್ಲಿದ್ದ ಉಳಿದಿದ್ದ 20 ಲಕ್ಷ ರೂ. ನಗದನ್ನು ಸೀಜ್‌ ಮಾಡಿಕೊಳ್ಳಲಾಗಿದೆ.

    ಅಲ್ಲದೇ ಪ್ರಕರಣದಲ್ಲಿನ ಪ್ರಮುಖ ಆರೋಪಿಗಳು 2 ವರ್ಷಗಳ ಹಿಂದೆ ಬಂಗಾಳದಲ್ಲಿ ನಡೆದಿರೋ 9 ಕೋಟಿಯ ಐಪೋನ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದರು. ಹೀಗಾಗಿ ಚಿಕ್ಕಬಳ್ಳಾಪುರ ಪೊಲೀಸರಿಂದ ಪ. ಬಂಗಾಳ ಪೊಲೀಸರು ಬಾಡಿ ವಾರೆಂಟ್ ಮೇಲೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.  ಇದನ್ನೂ ಓದಿ: ಕರ್ನಾಟಕದ ತೊಗಲುಗೊಂಬೆ ಕಲಾವಿದೆ ಭೀಮವ್ವಗೆ ಪದ್ಮಶ್ರೀ ಗೌರವ

  • ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    ಸದ್ದಿಲ್ಲದೇ ಬಸ್‌ ಹತ್ತಿ, ಮೊಬೈಲ್‌ ಎಗರಿಸಿಕೊಂಡು ಹೋಗ್ತಿದ್ರು; 120 ಮೊಬೈಲ್‌ಗಳೊಂದಿಗೆ ಕಳ್ಳಿಯರ ಗ್ಯಾಂಗ್‌ ಸಿಕ್ಕಿಬಿದ್ದಿದ್ದು ಹೇಗೆ?

    – ರಶ್‌ ಆಗಿರೋ ಬಸ್‌ಗಳಿಗೆ ಮಾತ್ರ ಹತ್ತುತ್ತಿದ್ದ ಕಳ್ಳಿಯರು

    ಬೆಂಗಳೂರು: ನಗರದ ಹೊರವಲಯದಲ್ಲಿ ಟೆಂಟ್ ಹಾಕಿಕೊಂಡು ವಾಸ ಮಾಡ್ತಿದ್ದವರ ಬಳಿ ಸಿಕ್ಕಿದ್ವು ನೂರಾರು ಮೊಬೈಲ್‌ಗಳು, ಐಟಿ ಬಿಟಿ ಏರಿಯಾಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ (BMTC Bus) ಓಡಾಡುತ್ತಿದ್ದ ಮಹಿಳೆಯರ ಮೊಬೈಲ್‌ಗಳನ್ನೇ ಟಾರ್ಗೆಟ್ ಮಾಡ್ತಾ ಇದ್ದ ಕಳ್ಳಿಯರ ಗ್ಯಾಂಗ್ ರಾಜಧಾನಿಯಲ್ಲಿ ಸಿಕ್ಕಿ ಬಿದ್ದಿರೊ ಸ್ಟೋರಿ ಇದೆ ನೋಡಿ.

    ಹೊಂಚು ಹಾಕಿ ಬಿಎಂಟಿಸಿ ಬಸ್ ಹತ್ತೋ ಮಹಿಳೆಯರನ್ನ (Women) ನೋಡಿ. ಏನೋ ಕೆಲಸದ ಅರ್ಜೆಂಟ್‌ನಲ್ಲಿ ಬಸ್‌ಗೆ ಹತ್ತುತ್ತಿದ್ದಾರೆ ಅಂದುಕೊಂಡ್ರೆ ಖಂಡಿತಾ ನಿಮ್ಮ ಊಹೆ ತಪ್ಪು. ಇಷ್ಟಕ್ಕೂ ಇವರು ಹೀಗೆ ಬಸ್ ಹತ್ತುತ್ತಿರೋದು ಕೆಲಸಕ್ಕೆ ಹೋಗೋಕಲ್ಲ, ಮೊಬೈಲ್ ಕದಿಯೋಕೆ. ರಾಜಧಾನಿ ಬೆಂಗಳೂರಲ್ಲಿ ತುಂಬಾ ರಶ್ ಇರುವ ಐಟಿ-ಬಿಟಿ ಏರಿಯಾಗಳ ಬಿಎಂಟಿಸಿ ಬಸ್ ಹತ್ತೋ ಇವ್ರು ಮಹಿಳೆಯರ ಮೊಬೈಲ್‌ಗಳನ್ನ (Mobile) ಕದಿಯೋದೇ ಟಾರ್ಗೇಟ್ ಮಾಡಿಕೊಂಡಿದ್ದರು. ಇಂತಹ ಕಳ್ಳಿಯರ ಗ್ಯಾಂಗನ್ನ ಬೆಂಗಳೂರಿನ ಮಹದೇವಪುರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ ನೇಮಕ

    ಹೀಗೆ ಪೊಲೀಸರಿಗೆ ಸಿಕ್ಕಿಬಿದ್ದವರ ಹೆಸರು ರಾಧಾ, ನಂದಿನಿ, ಸುಜಾತ, ಶಂಕರಮ್ಮ ಅಂತಾ. ಬಹುತೇಕರು ದೂರದ ಅನಂತಪುರದವರು. ಆದರೆ ಇಲ್ಲಿಗೆ ಬಂದು ರಾಜಧಾನಿಯ ಹೊರವಲಯದ ಹೊಸಕೋಟೆ ಬಳಿಯ ಚೊಕ್ಕನಹಳ್ಳಿಯಲ್ಲಿ ಮನೆ ಮಾಡಿಕೊಂಡು ರಾಜಧಾನಿಗೆ ಮೊಬೈಲ್ ಕದಿಯೋಕೆ ಅಂತಲೇ ಬರ್ತಿದ್ದರು. ಬಸ್ ಗಳು ತುಂಬಾ ರಶ್ ಇರುವ ಸಮಯದಲ್ಲಿ ಬಸ್ ಹತ್ತಿ ನೂಕಾಟದಲ್ಲಿ ಮಹಿಳೆಯರ ಮೊಬೈಲ್ ಎಗರಿಸಿ ಪುನಃ ವಾಪಸ್‌ ಮನೆಗೆ ಹೋಗ್ತಿದ್ರು. ಹೀಗೆ ಒಂದಷ್ಟು ಮೊಬೈಲ್ ಸಂಗ್ರಹಿಸಿ ಅನಂತಪುರದ ವ್ಯಕ್ತಿಯೊಬ್ಬನ ಕರೆಸಿ ಸೇಲ್ ಮಾಡಿದ್ದರು. ಇದನ್ನೂ ಓದಿ: ಶಾಲಾ-ಕಾಲೇಜುಗಳ ಅಭಿವೃದ್ಧಿಗೆ 850 ಕೋಟಿ ರೂ. ಅನುದಾನ; ಸಿಎಂಗೆ ಮಧು ಬಂಗಾರಪ್ಪ ಅಭಿನಂದನೆ

    ಸದ್ಯ ಆರೋಪಿ ಮಹಿಳೆಯರಿಂದ ಮಹದೇವಪುರ ಠಾಣಾ ಪೊಲೀಸ್ರು ಬರೋಬ್ಬರಿ 30 ಲಕ್ಷ ಮೌಲ್ಯದ 120 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಇವರಿಂದ ಮೊಬೈಲ್‌ಗಳನ್ನ ಕೊಂಡುಕೊಳ್ಳುತ್ತಿದ್ದ ವ್ಯಕ್ತಿಗೂ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ʻಚಿನ್ನʼ ಗೆದ್ದವರಿಗೆ 6 ಕೋಟಿ ರೂ. ಗಿಫ್ಟ್‌ – – ಬೆಂಗ್ಳೂರಿಗೇ ಬರಲಿದೆ ʻಕ್ರೀಡಾ ನಗರʼ

  • ಪೊಲೀಸ್ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಮೊಬೈಲ್ ಕಳ್ಳ

    ಪೊಲೀಸ್ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ ಮೊಬೈಲ್ ಕಳ್ಳ

    – ಪೊಲೀಸ್ ಠಾಣೆಯಲ್ಲಿ ರಾದ್ಧಾಂತ, ಮನೆಗೆ ಕಳುಹಿಸಿದ ಪೊಲೀಸರು
    – ಮರಳಿ ಬಂದು ಠಾಣೆಯಲ್ಲೇ ಬೆಂಕಿ ಹಚ್ಚಿಕೊಂಡ

    ಹೈದರಾಬಾದ್: ಮೊಬೈಲ್ ಕದ್ದ ಆರೋಪಿ ಪೊಲೀಸ್ ಠಾಣೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿರುವ ಘಟನೆ ನಡೆದಿದೆ.

    ಹೈದರಾಬಾದ್‍ನ ಚಂದ್ರಯಂಗುತ್ತ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತಕ್ಷಣವೇ ಬೆಂಕಿ ನಂದಿಸಿದ್ದು, ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಶೇ.10ರಷ್ಟು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    ನರೇಶ್ ಗೌಡ ಮೊಬೈಲ್ ಕಳೆದಿರುವ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಂತರ ಅದೇ ದಿನ ಸಂಜೆ ಸ್ಥಳೀಯರು ಮೊಬೈಲ್ ಕದ್ದ ಆರೋಪಿಗಳಲ್ಲಿ ಒಬ್ಬನಾದ ಮೊಹಮ್ಮದ್ ಶಬ್ಬಿರ್ ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ನರೇಶ್ ಗೌಡರ ಮೊಬೈಲ್ ಕದ್ದ ಆರೋಪಿಗಳ ಪೈಕಿ ಈತನೂ ಹೌದು ಎಂದು ತಿಳಿಸಿದ್ದಾರೆ.

    ಈ ಕುರಿತು ಚಂದ್ರಯಂಗುತ್ತ ಪೊಲೀಸ್ ಇನ್ಸ್ ಪೆಕ್ಟರ್ ರುದ್ರ ಭಾಸ್ಕರ್ ಮಾಹಿತಿ ನೀಡಿದ್ದು, ದೈಹಿಕ ಪರೀಕ್ಷೆ ನಡೆಸಿದಾಗ ಆರೋಪಿ ಬಳಿ ಪೊಲೀಸರಿಗೆ ಸಂತ್ರಸ್ತನ ಮೊಬೈಲ್ ಸಿಕ್ಕಿಲ್ಲ. ನಂತರ ಆರೋಪಿ ಶಬ್ಬಿರ್ ಕೂಗಲು ಪ್ರಾರಂಭಿಸಿದ್ದಾನೆ. ಈ ಮೂಲಕ ಪೊಲೀಸ್ ಠಾಣೆಯಲ್ಲಿ ರಾದ್ಧಾಂತ ಮಾಡಿದ್ದಾನೆ. ಹೀಗೆ ಕೂಗಾಡುವುದನ್ನು ತಾಳಲಾರದೆ ಪೊಲೀಸರು ಆರೋಪಿಯನ್ನು ಮನೆಗೆ ಕಳುಹಿಸಿದ್ದರು. ಕೆಲವೇ ಸಮಯದ ಬಳಿಕ ಮರಳಿ ಪೊಲೀಸ್ ಠಾಣೆಗೆ ಆರೋಪಿ ಬಂದಿದ್ದಾನೆ. ಆಗ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ನಂತರ ಪೊಲೀಸರು ಬೆಂಕಿ ನಂದಿಸಿ ಒಸ್ಮಾನಿಯಾ ಜನರಲ್ ಆ ಸ್ಪತ್ರೆಗೆ ಸೇರಿಸಿದ್ದಾರೆ.

    ಈ ವೇಳೆ ಅಡಿಷನಲ್ ಇನ್ಸ್ ಪೆಕ್ಟರ್ ಕೆ.ಎನ್.ಪ್ರಸಾದ್ ವರ್ಮಾ ಹಾಗೂ ಕ್ರೈಂ ಪೊಲೀಸ್ ಕಾನ್‍ಸ್ಟೇಬಲ್‍ಗೂ ಸುಟ್ಟ ಗಾಯಗಳಾಗಿವೆ. ಶಬ್ಬಿರ್ ವಿರುದ್ಧ ಅವರು ದೂರು ನೀಡಿದ್ದರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಒಟ್ಟು 8 ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.