Tag: Mobile Seize

  • ದರ್ಶನ್ ಜೊತೆ ಬಂಧನವಾಗಿರೋ ಆರೋಪಿಗಳ ಕುಟುಂಬದ ಸ್ಥಿತಿ ಶೋಚನೀಯ!

    ದರ್ಶನ್ ಜೊತೆ ಬಂಧನವಾಗಿರೋ ಆರೋಪಿಗಳ ಕುಟುಂಬದ ಸ್ಥಿತಿ ಶೋಚನೀಯ!

    – ಕಣ್ಣೀರಲ್ಲಿ ಕೈತೊಳೆಯುತ್ತಿರೋ ಆರೋಪಿ ನಂದೀಶ್ ಕುಟುಂಬ..!

    ಮಂಡ್ಯ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗುವ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Case) ದರ್ಶನ್ ಜೊತೆ 14 ಮಂದಿ ಜೈಲು ಸೇರಿದ್ದಾರೆ. ಇವರ ಪೈಕಿ ಕೆಲ ಕುಟುಂಬಗಳು ಕಡು ಬಡತನತದಲ್ಲಿವೆ. ಮನೆಗೆ ಆಧಾರವಾಗಿ ಇದ್ದವರು ಇದೀಗ ಜೈಲು ಸೇರಿರುವ ಕಾರಣ ಮನೆಯಲ್ಲಿರುವವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಇತ್ತ ನಮ್ಮ ಬಾಸ್ ಹಾಗೆ ಹೀಗೆ ಎಂದು ಜಾಗಟೆ ಬಾರಿಸುವ ಅಭಿಮಾನಿಗಳು (Darshan Fans) ಸೌಜನ್ಯಕ್ಕೂ ಆ ಕುಟುಂಬಗಳನ್ನು ಸಂಪರ್ಕಿಸುವ ಕೆಲಸ ಮಾಡಿಲ್ಲ.

    ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವವರಿಗೆ ಶಿಕ್ಷೆಯಾಗುವ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕಾಗಿದೆ. ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ (Darshan) ಜೊತೆ ಹಲವರು ಭಾಗಿಯಾಗಿದ್ದು ಇದೀಗ ಕೆಲವರು ಜೈಲುಪಾಗಿದ್ದಾರೆ. ಇವ್ರ ಪೈಕಿ ಹಲವರು ಕಡುಬಡತನದಲ್ಲಿದ್ದವರೂ ಆಗಿದ್ದಾರೆ. ಆ ಬಡ ಕುಟುಂಬಗಳು ಕಣ್ಣೀರು ಹಾಕುವ ಸ್ಥಿತಿ ಬಂದೊದಗಿದೆ. ಬಾಸ್ ಬಾಸ್ ಎಂದು ಕೂಗುವ ಅಭಿಮಾನಿಗಳು ಈ ಕುಟುಂಬದ ಕಡೆ ಇದುವರೆಗೆ ತಲೆ ಸಹ ಹಾಕಿಲ್ಲ.

    ಹೌದು. ಮಂಡ್ಯದ ಚಾಮಲಪುರ ಗ್ರಾಮದ ನಂದೀಶ್ ಎಂಬಾತ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ5 ಆರೋಪಿಯಾಗಿ ಬಂಧಿತನಾಗಿದ್ದಾನೆ. ಇವರ ಕುಟುಂಬ ಬಡತನದಲ್ಲಿದ್ದು, ನಂದೀಶನ ಸಂಪಾದನೆ ಹಾಗೂ ಇವರ ತಂದೆ, ತಾಯಿ ಮಾಡುತ್ತಿದ್ದ ಕೂಲಿ ಕೆಲಸದಿಂದ ಸಂಸಾರ ಸಾಗುತ್ತಿತ್ತು. ಇದೀಗ ನಂದೀಶ್ ಜೈಲು ಪಾಲಾಗಿರುವುದರಿಂದ ಇಡೀ ಕುಟುಂಬ ಕಂಗಾಲಾಗಿದೆ. ನಂದೀಶನ ತಾಯಿ ಭಾಗ್ಯಮ್ಮಗೆ ಅಸ್ತಮ ಕಾಯಿಲೆ ಇದ್ದು, ಇದೀಗ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಆರ್ಥಿಕವಾಗಿ ಹಿಂದೆ ಉಳಿದಿರುವ ಈ ಕುಟುಂಬಕ್ಕೆ ನಂದೀಶ್ ಬೆನ್ನೆಲುಬಾಗಿದ್ದ, ಇದೀಗ ನಂದೀಶ್ ಇಲ್ಲ ಹಿರಿ ಜೀವಗಳು ಕಣ್ಣೀರು ಹಾಕ್ತಿದೆ.

    ಇನ್ನೊಂದೆಡೆ ದರ್ಶನ್‌ಗೆ ಜಾಮೀನು ನೀಡಲು ಅವರ ಪರವಾಗಿ ವಕೀಲರು ಕೆಲಸ ಮಾಡ್ತಾ ಇದ್ದಾರೆ. ಆದರೆ ಈ ನಂದೀಶ್ ಹಾಗೂ ಕೆಲವರ ಪರ ವಕಾಲತ್ತು ವಹಿಸಲು ವಕೀಲರೇ ಇಲ್ಲವಾಗಿದ್ದಾರೆ, ಅಲ್ಲದೇ ನಂದೀಶ್ ಮನೆ ಬಳಿಗೆ ಈ ಬಗ್ಗೆ ಯಾರು ಸಹ ಹೋಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬೊಬ್ಬೆ ಹೊಡೆಯುವ ಒಬ್ಬ ಅಭಿಮಾನಿಯೂ ಸಹ ಈ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿಲ್ಲ. ಇದೀಗ ನಂದೀಶ್‌ಗೆ ಜಾಮೀನು ನೀಡಲು ಲಕ್ಷಾಂತರ ರೂ. ಬೇಕು, ನಮ್ಮ ಬಳಿ ಹಣವಿಲ್ಲ. ಜೊತೆಗೆ ಚಿತ್ರದುರ್ಗದಿಂದ ಬೆಂಗಳೂರಿಗೆ ಹೋಗಿ ಮಗನ ಮುಖ ನೋಡಲು ನಮ್ಮ ಬಳಿ ಹಣವಿಲ್ಲ ಅಂತ ಚಿಂತಾಕ್ರಾಂತರಾಗಿದ್ದಾರೆ.

    ಇಂದು (ಶನಿವಾರ) ನಂದೀಶ್‌ನನ್ನ ನೋಡಲು ಊರಿನವರ ಕಾರು ತಗೊಂಡು ಡಿಸೇಲ್ ಹಾಕಿಸಿಕೊಂಡು ಅವರ ಕುಟುಂಬಸ್ಥರನ್ನು ಕರೆದುಕೊಂಡು ಬೆಂಗಳೂರಿಗೆ ಹೋಗ್ತಾ ಇದೀವಿ. ಮುಂದೆ ಏನು ಅಂತಾನೇ ತಿಳಿಯುತ್ತಾ ಇಲ್ಲ ಎಂದು ಇವರ ಸಂಬಂಧಿಕರು ಹೇಳ್ತಾ ಇದ್ದಾರೆ. ಒಟ್ಟಿನಲ್ಲಿ ದರ್ಶನ್‌ ಗ್ಯಾಂಗ್‌ನ ಕ್ರೂರತೆಯನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯಿಗೆ ಬಂದ ಹಾಗೆ ಮಾತಾಡುವವರು ಆ ಕುಟುಂಬಸ್ಥರ ಕಣ್ಣೀರು ಒರೆಸಲು ಮುಂದಾಗುತ್ತಾರಾ ಕಾದು ನೋಡಬೇಕಿದೆ.

  • ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ʻದಾಸʼನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿ – ಪೊಲೀಸರಿಂದ 2 ಹಲ್ಲೆ ವೀಡಿಯೋ ಸಂಗ್ರಹ!

    ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy Case) ಬಂಧನಕ್ಕೆ ಒಳಗಾಗಿರುವ ನಟ ದರ್ಶನ್‌ಗೆ ಕಾನೂನಿನ ಕುಣಿಗೆ ಮತ್ತಷ್ಟು ಬಿಗಿಯಾದಂತೆ ಕಾಣುತ್ತಿದೆ. ಕೊಲೆ ಪ್ರಕರಣದಲ್ಲಿ ಬಿಗಿಯಾಗಿಯೇ ಲಾಕ್ ಮಾಡಿರುವ ಪೊಲೀಸರು (Bengaluru Police) ಎರಡು ಹಲ್ಲೆ ವೀಡಿಯೋಗಳನ್ನ ಸಂಗ್ರಹ ಮಾಡಿದ್ದಾರೆ. ಇದನ್ನೂ ಓದಿ: ಪತಿಗೆ ದೈಹಿಕ ಸಂಬಂಧ ನಿರಾಕರಿಸುವುದು ಕ್ರೌರ್ಯಕ್ಕೆ ಸಮ: ಮಧ್ಯಪ್ರದೇಶ ಹೈಕೋರ್ಟ್‌

    ಕೃತ್ಯ ಎಸಗಿದ್ದು ಹೇಗೆ?
    ಪೊಲೀಸರು ಹೇಳುವಂತೆ ಸಂಗ್ರಹಿಸಲಾದ ಎರಡು ವೀಡಿಯೋಗಳಲ್ಲಿ, `ಡಿ’ಗ್ಯಾಂಗ್ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದೆ ಎನ್ನಲಾಗಿದೆ.

    ಅಪಹರಣದ ಬಳಿಕ ರೇಣುಕಾಸ್ವಾಮಿಯನ್ನ ಶೆಡ್‌ಗೆ ಕರೆದೊಯ್ಯಲಾಗಿದೆ. ಈ ವೇಳೆ `ಡಿ’ಗ್ಯಾಂಗ್ (D Gang) ಮನಸೋ ಇಚ್ಚೆ ಹಲ್ಲೆ ನಡೆಸಿದೆ. ಕಬ್ಬಿಣದ ರಾಡ್, ಲಾಠಿ ಹಾಗೂ ಬೆಲ್ಟ್‌ನಿಂದ ಹಲ್ಲೆ ನಡೆಸಿದೆ ಗ್ಯಾಂಗ್. ಹಲ್ಲೆ ನಡೆಸುವಾಗ ಆರೋಪಿಯೊಬ್ಬ ಮೊಬೈಲ್‌ನಲ್ಲಿ ವೀಡಿಯೋ ಚಿತ್ರೀಕರಣ ಮಾಡಿದ್ದಾನೆ. ಈ ವಿಡಿಯೋ ಸಹ ಪೊಲೀಸರಿಗೆ ಲಭ್ಯವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಪೊದೆಯೊಂದರಲ್ಲಿ ಬೆತ್ತಲೆ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ – ಅತ್ಯಾಚಾರ ಶಂಕೆ

    ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸುವ ಮೊಬೈಲ್ ವೀಡಿಯೊ ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈ ಬೆನ್ನಲ್ಲೇ ಸಿಸಿಟಿವಿ ಡಿವಿಆರ್ (CCTV DVR) ಸೀಜ್ ಮಾಡಿದ್ದು, ಚಿತ್ರೀಕರಣ ಮಾಡಿದ್ದ ಮೊಬೈಲ್‌ಗಳನ್ನೂ ಸಹ ಪೊಲೀಸರು ಜಪ್ತಿ ಮಾಡಿದ್ದಾರೆ ಎಂದು ಅಧಿಕಾರಿಗಳು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪಿಕ್ನಿಕ್‍ಗೆ ತೆರಳಿದ್ದಾಗ ಅವಘಡ – ಮುಳುಗುತ್ತಿದ್ದವನ ರಕ್ಷಿಸಲು ಹೋಗಿ ನಾಲ್ವರು ದುರ್ಮರಣ