Tag: mobile game

  • ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ಸಹೋದರಿ – ಮನನೊಂದು ಬಾಲಕ ಆತ್ಮಹತ್ಯೆ

    ಮೊಬೈಲ್ ಗೇಮ್ ಆಡಿದ್ದಕ್ಕೆ ಗದರಿದ ಸಹೋದರಿ – ಮನನೊಂದು ಬಾಲಕ ಆತ್ಮಹತ್ಯೆ

    ನವದೆಹಲಿ: ಮೊಬೈಲ್ ಗೇಮ್ (Mobile Game) ಆಡಿದ್ದಕ್ಕಾಗಿ ಅಕ್ಕ ಗದರಿದ್ದಕ್ಕೆ ಮನನೊಂದ ಬಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯ (Delhi) ಆದರ್ಶ ನಗರದಲ್ಲಿ (Adarsh Nagar) ನಡೆದಿದೆ.

    ಆದರ್ಶ್ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಆದರ್ಶ್ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ತನ್ನ ಅಧ್ಯಯನವನ್ನು ನಿರ್ಲಕ್ಷಿಸಿ ಮೊಬೈಲ್ ಗೇಮ್ ಆಡಿದ್ದಕ್ಕೆ ಅಕ್ಕ-ತಮ್ಮನ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಅಕ್ಕ ತಮ್ಮನನ್ನು ಗದರಿದ್ದಾಳೆ. ಇದರಿಂದ ಮನನೊಂದ ಬಾಲಕ ಮನೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಹಿಟ್ & ರನ್‌ಗೆ ವಿದ್ಯಾರ್ಥಿನಿ ಬಲಿ – ಟಿಪ್ಪರ್‌ ಚಾಲಕ ಅರೆಸ್ಟ್‌

    ಕೂಡಲೇ ಆದರ್ಶ್ನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಅಷ್ಟು ಹೊತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (BNSS) ಸೆಕ್ಷನ್ 194ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್‌ ಏರ್‌ಪೋರ್ಟ್‌ನಲ್ಲಿ ಎರಡು ವಿಮಾನಗಳ ಡಿಕ್ಕಿ – ವೀಡಿಯೋ ವೈರಲ್‌

  • ಶೀಘ್ರದಲ್ಲೇ ಪಬ್‍ಜಿ ಭಾರತಕ್ಕೆ ಕಮ್‍ಬ್ಯಾಕ್

    ಶೀಘ್ರದಲ್ಲೇ ಪಬ್‍ಜಿ ಭಾರತಕ್ಕೆ ಕಮ್‍ಬ್ಯಾಕ್

    ನವದೆಹಲಿ: ಶೀಘ್ರದಲ್ಲಿಯೇ ಪಬ್‍ಜಿ ಮೊಬೈಲ್ ಗೇಮ್ ಭಾರತಕ್ಕೆ ಹೊಸ ಅವತಾರದಲ್ಲಿ ಎಂಟ್ರಿ ನೀಡಲಿದೆ ಎಂದು ಸೌಥ್ ಕೊರಿಯನ್ ಪಬ್‍ಜಿ ಕಾರ್ಪೋರೇಷನ್ ಇಂದು ಘೋಷಣೆ ಮಾಡಿದೆ.

    ಕೇವಲ ಭಾರತದ ಮಾರುಕಟ್ಟೆಗಾಗಿ ಪಬ್‍ಜಿ ಗೇಮ್ ಹೊಸ ಸ್ವರೂಪದಲ್ಲಿ ಬರಲಿದೆ ಎಂದು ಕಂಪನಿ ತನ್ನ ಘೋಷಣೆಯಲ್ಲಿ ಹೇಳಿದೆ. ಜೊತೆಗೆ ಇದರಲ್ಲಿ ಚೀನಾದ ಪಾಲುದಾರಿಕೆ ಇರಲ್ಲ ಎಂದು ಸ್ಪಷ್ಟನೆ ನೀಡಿದೆ.

    ಪಬ್‍ಜಿ ಕಾರ್ಪೋರೇಷನ್ ನ ಪೇರೆಂಟ್ ಕಂಪನಿ ಕ್ರ್ಯಾಫ್ಟನ್ ಇಂಕ್ ಭಾರತದಲ್ಲಿ 100 ಮಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡುವುದಾಗಿ ಸಹ ಘೋಷಿಸಿದೆ. ಕೊರಿಯನ್ ಕಂಪನಿಯೊಂದು ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನ ಹೂಡಿಕೆ ಮಾಡ್ತಿದೆ ಎಂದು ಹೇಳಿದೆ.

    ಕೇಂದ್ರ ಸರ್ಕಾರ ಸೈಬರ್ ಸೆಕ್ಯೂರಿಟಿ ಮತ್ತು ದೇಶದ ಹಿತದ ಹಿನ್ನೆಲೆ ಪಬ್‍ಜಿ ಸೇರಿದಂತೆ ಚೀನಾ ಅ್ಯಪ್ ಗಳನ್ನು ಬ್ಯಾನ್ ಮಾಡಿತ್ತು. ಇದೀಗ ಕೊರಿಯನ್ ಕಂಪನಿ ಭಾರತಕ್ಕಾಗಿ ಹೊಸ ರೂಪದಲ್ಲಿ ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಪಬ್‍ಜಿ ಗೇಮ್ ಲಾಂಚ್ ಮಾಡಲು ಸಿದ್ಧತೆ ನಡೆಸಿದೆ. ನಿಷೇಧಕ್ಕೊಳಗಾದ ದಿನವೇ ತಾನು ಹಿಂದಿರುಗುವ ಬಗ್ಗೆ ಪಬ್‍ಜಿ ವಿಶ್ವಾಸ ವ್ಯಕ್ತಪಡಿಸಿತ್ತು.

    ಭಾರತಕ್ಕೆ ಪಬ್‍ಜಿ ಮೊಬೈಲ್ ಇಂಡಿಯಾ ಹೆಸರಿನಲ್ಲಿ ಹಿಂದಿರುಗಲಿದೆ. ಆದ್ರೆ ಲಾಂಚ್ ಆಗುವ ದಿನವನ್ನ ಕಂಪನಿ ಘೋಷಣೆ ಮಾಡಿಲ್ಲ. ಭಾರತೀಯ ಖಾಸಗಿತನಕ್ಕೆ ಆ್ಯಪ್ ನಿಂದ ಧಕ್ಕೆ ಆಗಲಾರದು ಎಂದು ಪಬ್‍ಜಿ ಸ್ಪಷ್ಟಪಡಿಸಿದೆ.

    ವೀಡಿಯೋ ಗೇಮ್ಸ್, ಇ-ಸ್ಪೋರ್ಟ್ಸ್ ಮತ್ತು ಐಟಿ ಇಂಡಸ್ಟ್ರಿಗಳಲ್ಲಿ ಪಬ್‍ಜಿ ಕಾರ್ಪೋರೇಷನ್ ಬಂಡವಾಳ ಹೂಡಿಕೆ ಮಾಡಲಿದೆ. ಭಾರತದ ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ. ಜೊತೆಗೆ ಕಾರ್ಯನಿರ್ವಹಣೆ ಹಿನ್ನೆಲೆ ಸ್ಥಳೀಯ ಮಟ್ಟದಲ್ಲಿ ಪಬ್‍ಜಿ ಕಾರ್ಪೋರೇಷನ್ ಕಚೇರಿ ಸಹ ತೆರೆಯಲಿದೆ.

    ವಿಶ್ವದಲ್ಲಿ ಅತಿ ಹೆಚ್ಚು ಡೌನ್‍ಲೋಡ್ ಅಗಿರುವ ಟಾಪ್ 5ರ ಲಿಸ್ಟ್ ನಲ್ಲಿ ಪಬ್‍ಜಿ ಸ್ಥಾನ ಹೊಂದಿದೆ. ಇಡೀ ವಿಶ್ವದಲ್ಲಿ 73 ಕೋಟಿಗೂ ಅಧಿಕ ಜನ ಪಬ್‍ಜಿ ಡೌನ್‍ಲೋಡ್ ಮಾಡಿದ್ದು, ಭಾರತದಲ್ಲಿ 17.5 ಕೋಟಿ ಅಂದ್ರೆ ಶೇ.24ರಷ್ಟು ಬಳಕೆದಾರರನ್ನು ಪಬ್‍ಜಿ ಹೊಂದಿದೆ. ಪಬ್‍ಜಿ ಆಡುವ ಪ್ರತಿ ನಾಲ್ಕು ಜನರಲ್ಲಿ ಓರ್ವ ಭಾರತೀಯನಿರುತ್ತಾನೆ.

  • ಗೇಮ್ ಆಡ್ಬೇಡ ಎಂದು ಫೋನ್ ಕಿತ್ತುಕೊಂಡ ತಾಯಿ – ದುಪ್ಪಟ್ಟದಿಂದ ನೇಣು ಹಾಕಿಕೊಂಡ ಮಗ

    ಗೇಮ್ ಆಡ್ಬೇಡ ಎಂದು ಫೋನ್ ಕಿತ್ತುಕೊಂಡ ತಾಯಿ – ದುಪ್ಪಟ್ಟದಿಂದ ನೇಣು ಹಾಕಿಕೊಂಡ ಮಗ

    ಮುಂಬೈ: ಗೇಮ್ ಆಡಬೇಡ ಎಂದು ತಾಯಿ ಮೊಬೈಲನ್ನು ಕಿತ್ತುಕೊಂಡಿದಕ್ಕೆ 12 ವರ್ಷದ ಮಗನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಇತ್ತೀಚೆಗೆ ಯುವಜನತೆ ಮೊಬೈಲ್‍ಗೆ ಅಂಟಿಕೊಂಡೆ ಇರುತ್ತಾರೆ. ಅದರಲ್ಲಿ ಗೇಮ್ ಆಡುವ ಮತ್ತು ವಿಡಿಯೋ ಮಾಡುವ ಗೀಳಿಗೆ ಬಿದ್ದಿರುತ್ತಾರೆ. ಹೀಗೆ ಮೊಬೈಲ್ ಚಟಕ್ಕೆ ಬಿದ್ದ 12 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈನ ಶಿವಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಕೊರೊನಾ ಲಾಕ್‍ಡೌನ್‍ನಿಂದ ಮನೆಯಲ್ಲೇ ಇದ್ದ ಬಾಲಕ ತಾಯಿಯ ಫೋನಿನಲ್ಲಿ ಗೇಮ್ ಆಡುತ್ತಿದ್ದನು. ಇತ್ತೀಚೆಗೆ ಹೆಚ್ಚು ಮೊಬೈಲ್‍ಗೆ ಆಡಿಕ್ಟ್ ಆಗಿದ್ದ ಬಾಲಕ ದಿನದ ಬಹು ಸಮಯ ಮೊಬೈಲ್‍ನಲ್ಲೇ ಕಾಲ ಕಳೆಯುತ್ತಿದ್ದ. ಹೀಗಿರುವಾಗ ತಾಯಿ ಮೊಬೈಲ್‍ನಲ್ಲಿ ಹೆಚ್ಚು ಸಮಯ ಆಟವಾಡಬೇಡ ಎಂದು ಬೈದಿದ್ದಾಳೆ. ಆದರೆ ಅದನ್ನು ಕೇಳದ ಬಾಲಕ ಮೊಬೈಲ್‍ನಲ್ಲಿ ವಿಡಿಯೋ ಗೇಮ್ ಆಡುತ್ತಿದ್ದ. ಇದರಿಂದ ಕೋಪಗೊಂಡ ತಾಯಿ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದಾಳೆ.

    ತಾಯಿ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಸಿಟ್ಟಾದ ಬಾಲಕ ಮನೆಯ ಮೂರನೇ ಮಹಡಿಯಲ್ಲಿರುವ ರೂಮ್‍ಗೆ ಹೋಗಿದ್ದಾನೆ. ಮೇಲಿನ ರೊಮ್‍ಗೆ ಹೋಗಿದ್ದಾನೆ ಎಂದ ತಿಳಿದ ತಾಯಿ 30 ನಿಮಿಷ ಬಿಟ್ಟು ಏನೂ ಮಾಡುತ್ತಿದ್ದಾನೆ ಎಂದು ನೋಡಲು ಹೋಗಿದ್ದಾರೆ. ಆದರೆ ಬಾಲಕ ತಾಯಿಯ ದುಪ್ಪಟ್ಟವನ್ನೇ ಬಳಸಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆತ ಅಷ್ಟೋತ್ತಿಗಾಗಲೇ ಮೃತಪಟ್ಟಿದ್ದ.

  • ಮೊಬೈಲ್ ಗೇಮ್‍ಗೆ ಬ್ಯಾಂಕ್ ಲಿಂಕ್ ಮಾಡೋ ಮುನ್ನ ಎಚ್ಚರ

    ಮೊಬೈಲ್ ಗೇಮ್‍ಗೆ ಬ್ಯಾಂಕ್ ಲಿಂಕ್ ಮಾಡೋ ಮುನ್ನ ಎಚ್ಚರ

    – ಗೇಮ್ ಆಡ್ತಾ ಹಣ ಕಳ್ಕೊಂಡ ಗ್ರಾಹಕ

    ಹುಬ್ಬಳ್ಳಿ: ಮೊಬೈಲ್‍ನಲ್ಲಿ ಆನ್‍ಲೈನ್ ಗೇಮ್ ಆಡುವಾಗ ಕಡಿತಗೊಂಡ ಹಣದ ಬಗ್ಗೆ ವಿಚಾರಿಸಲು ಹೋಗಿ ನಕಲಿ ಕಸ್ಟಮರ್ ಕೇರ್ ನವರಿಂದ ಮತ್ತಷ್ಟು ಹಣ ಕಳೆದುಕೊಂಡ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

    ಗ್ರಾಹಕ ತನ್ನ ಮೊಬೈಲ್ ಪೋನ್‍ನಲ್ಲಿ ಗೇಮ್ ಆಡುವಾಗ ಎಸ್‍ಬಿಐ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡಿದ್ದನು. ಈ ವೇಳೆ ಆತನ ಬ್ಯಾಂಕಿನಲ್ಲಿ 9,739 ರೂ. ಕಡಿತವಾಗಿತ್ತು. ಈ ಬಗ್ಗೆ ವಿಚಾರಿಸಲು ಗ್ರಾಹಕ ಗೂಗಲ್ ಕಸ್ಟಮರ್ ಕೇರ್ ನಂಬರ್‌ಗೆ ಫೋನ್ ಮಾಡಿದ್ದಾನೆ. ಆಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನನ್ನು ಶಂಕರ್ ಮಂಡಲ್ ಎಂದು ಪರಿಚಯಿಸಿಕೊಂಡಿದ್ದಾನೆ.

    ಕಡಿತಗೊಂಡ ಹಣವನ್ನು ಮರಳಿ ವರ್ಗಾವಣೆ ಮಾಡುವುದಾಗಿ ಹೇಳಿದ ಈತ ಮೊಬೈಲ್‍ಗೆ ‘Any desk app’ ಇನ್‌ಸ್ಟಾಲ್ ಮಾಡಿಕೊಳ್ಳಲು ಹೇಳಿದ್ದಾನೆ. ಬಳಿಕ ಡೆಬಿಟ್ ಕಾರ್ಡ್ ನಂ. ಮತ್ತು ಸಿವಿವಿ ನಂ. ಮಾಹಿತಿ ಪಡೆದು 16,689 ರೂಪಾಯಿಯನ್ನು ತನ್ನ ಪೇಟಿಎಂ ಖಾತೆ ನಂಬರ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.

    ಗ್ರಾಹಕ ಮತ್ತೆ ಅದೇ ನಂಬರ್‌ಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮೊಬೈಲ್ ಗೇಮ್ ಪ್ರಭಾವದಿಂದ ತಾಯಿ, ಸಹೋದರಿಯನ್ನೇ ಕೊಂದ ಅಪ್ರಾಪ್ತ ಬಾಲಕ

    ಮೊಬೈಲ್ ಗೇಮ್ ಪ್ರಭಾವದಿಂದ ತಾಯಿ, ಸಹೋದರಿಯನ್ನೇ ಕೊಂದ ಅಪ್ರಾಪ್ತ ಬಾಲಕ

    ಅಹಮದಾಬಾದ್: ಹಿಂಸಾತ್ಮಕ ಮೊಬೈಲ್ ಗೇಮ್ ಆಡಲು ಆಡಿಕ್ಟ್ ಆಗಿದ್ದ ಅಪ್ರಾಪ್ತ ಬಾಲಕನೊಬ್ಬ, ಗೇಮ್ ಪ್ರೇರಣೆಯಿಂದ ಸ್ವತಃ ತಾಯಿ ಹಾಗೂ ಸಹೋದರಿನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶ ನೋಯ್ಡಾದಲ್ಲಿ ನಡೆದಿದೆ.

    ತಾಯಿ ಅಂಜಲಿ ಹಾಗೂ 11 ವರ್ಷದ ಸಹೋದರಿ ಕನ್ನಿಕಾ ಮೃತ ದುರ್ದೈವಿಗಳಾಗಿದ್ದು, ಇಬ್ಬರನ್ನು ಬ್ಯಾಟ್‍ನಿಂದ ಹೊಡೆದು ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

    ತನ್ನ ತಾಯಿ ಹಾಗೂ ಸಹೋದರಿಯನ್ನು ಕೊಲೆ ಮಾಡಿದ ನಂತರ ಬಾಲಕ ಮನೆಯಿಂದ 2 ಲಕ್ಷ ರೂ ಹಾಗೂ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದ. ಆದರೆ ಮೊಬೈಲ್ ಕರೆಯ ನೆಟ್‍ವರ್ಕ್ ಆಧರಿಸಿ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ನೋಯ್ಡಾಗೆ ವಾಪಸ್ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ತಾನು ಮಾಡಿದ ಕೃತ್ಯದ ಬಗ್ಗೆ ಒಪ್ಪಿಕೊಂಡಿದ್ದಾನೆ ಎಂದು ಬಿಸ್ರಾಕ್ ಪೊಲೀಸ್ ಠಾಣೆ ಅಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.

    ಕೊಲೆಗೆ ಕಾರಣ ಏನೆಂಬುದರ ಕುರಿತು ವಿಚಾರಣೆ ನಡೆಸಿಲಾಗುತ್ತಿದೆ. ಸಂಪೂರ್ಣ ತನಿಖೆ ನಡೆಸಿದ ಬಳಿಕ ಕೃತ್ಯದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಸದ್ಯ ಕೊಲೆಯಾದ ಇಬ್ಬರ ಶವ ಪರೀಕ್ಷೆ ಪೂರ್ಣಗೊಂಡಿದ್ದು, ಅಂಜಲಿ ಅವರ ತಲೆಯಲ್ಲಿ 7 ಹಾಗೂ ಕನ್ನಿಕಾ ತಲೆಯಲ್ಲಿ 5 ಗಾಯದ ಗುರುತುಗಳು ಪತ್ತೆಯಾಗಿವೆ. ಘಟನೆ ಸೋಮವಾರ ರಾತ್ರಿ 8 ರಿಂದ 11 ರ ಸಮಯದಲ್ಲಿ ನಡೆದಿರುವ ಕುರಿತು ಶವ ಪರೀಕ್ಷೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಬಾಲಕನನ್ನು ವಿಚಾರಣೆ ನಡೆಸಿರುವ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಆತ ತನ್ನ ಓದಿನಲ್ಲಿ ಹಿಂದಿದ್ದ. ಅಲ್ಲದೇ ಮೊಬೈಲ್ ಫೋನ್ ನಲ್ಲಿ ಕ್ರೈಂ ಗ್ಯಾಂಗ್‍ಸ್ಟರ್ ಗೇಮ್ ಆಡುವುದಕ್ಕೆ ಅಡಿಕ್ಟ್ ಆಗಿದ್ದ. ಘಟನೆ ನಡೆದ ದಿನ ಆತನ ತಾಯಿ ಓದುವ ಬಗ್ಗೆ ಆತನನ್ನು ಬೈದಿದ್ದರು ಎಂದು ತಿಳಿದು ಬಂದಿದೆ.