Tag: mobile Data

  • ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

    ಏರ್‌ಟೆಲ್‌ ಪ್ಯಾಕ್‌ ದರ ಏರಿಕೆ: ಶೀಘ್ರವೇ ಮೊಬೈಲ್‌ ರಿಚಾರ್ಜ್‌ ದುಬಾರಿ

    ನವದೆಹಲಿ: ಶೀಘ್ರವೇ ಟೆಲಿಕಾಂ(Telecom) ಕಂಪನಿಗಳು ತಮ್ಮ ಪ್ಯಾಕ್‌ಗಳ ದರಗಳನ್ನು ಏರಿಸುವ ಸಾಧ್ಯತೆಯಿದೆ.

    ಈಗಾಗಲೇ ಏರ್‌ಟೆಲ್‌(Airtel) ಕಂಪನಿ ಎರಡು ಸರ್ಕಲ್‌ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್‌ಟೆಲ್‌ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಶೀಘ್ರವೇ ಭಾರತದ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಏಕರೂಪದ ಚಾರ್ಜರ್

    ಹರ್ಯಾಣ ಮತ್ತು ಒಡಿಶಾ ಸರ್ಕಲ್‌ನಲ್ಲಿ ಏರ್‌ಟೆಲ್‌ ಕನಿಷ್ಟ ರಿಚಾರ್ಚ್‌ ದರವನ್ನು ಶೇ.57ರಷ್ಟು ಏರಿಕೆ ಮಾಡಿದೆ. ಈ ಮೊದಲು 99 ರೂ. ರಿಚಾರ್ಜ್‌ ಮಾಡಿದರೆ 28 ದಿನಗಳ ವ್ಯಾಲಿಡಿಟಿ, 99 ರೂ. ಟಾಕ್‌ ಟೈಂ ಮತ್ತು 200 ಎಂಬಿ ಡೇಟಾ ಸಿಗುತ್ತಿತ್ತು. ಈಗ ಈ ಪ್ಯಾಕ್‌ ದರವನ್ನು155 ರೂ.ಗೆ ಏರಿಕೆ ಮಾಡಲಾಗಿದೆ.  28 ದಿನಗಳ ವ್ಯಾಲಿಡಿಟಿಯ ಜೊತೆಗೆ ಹೆಚ್ಚುವರಿಯಾಗಿ ಅನ್‌ಲಿಮಿಟೆಡ್‌ ಕಾಲ್‌ ಮತ್ತು 1 ಜಿಬಿ ಡೇಟಾ ಮತ್ತು 300 ಉಚಿತ ಎಸ್‌ಎಂಎಸ್‌ ನೀಡಿದೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?

    ವಿಶ್ವದಲ್ಲೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅಗ್ಗ: ಯಾವ ದೇಶದಲ್ಲಿ ಎಷ್ಟು?

    ನವದೆಹಲಿ: ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಬಂದ ಮೇಲೆ ದೇಶದಲ್ಲಿ ಡೇಟಾ ಕ್ರಾಂತಿ ನಡೆದಿದ್ದು ನಿಮಗೆ ಗೊತ್ತೇ ಇದೆ. ಈಗ ಈ ಕ್ರಾಂತಿಯಿಂದ ಏನಾಯ್ತು ಎನ್ನುವ ಪ್ರಶ್ನೆಗೆ ಉತ್ತರ ಎಂಬಂತೆ ವಿಶ್ವದಲ್ಲಿಯೇ ಭಾರತದಲ್ಲಿ ಮೊಬೈಲ್ ಡೇಟಾ ದರ ಅತಿ ಕಡಿಮೆ ಎಂದು ಅಧ್ಯಯನವೊಂದು ತಿಳಿಸಿದೆ.

    ಭಾರತದಲ್ಲಿ ಒಂದು ಜಿಬಿ ಮೊಬೈಲ್ ಡೇಟಾಕ್ಕೆ ಸರಾಸರಿ 18.50 ರೂ. ಇದ್ದರೆ ವಿಶ್ವದಲ್ಲಿ 1 ಜಿಬಿ ಡೇಟಾ ದರ ಸರಾಸರಿ 600 ರೂ. ಇದೆ ಎಂದು ಕೇಬಲ್ ಕೊ ಡಾಡ್ ಯುಕೆ ಸಂಸ್ಥೆ ತಿಳಿಸಿದೆ. ಒಟ್ಟು 232 ದೇಶಗಳನ್ನು ಅಧ್ಯಯನಕ್ಕೆ ಪರಗಣಿಸಿ ಈ ವರದಿಯನ್ನು ಸಿದ್ದಪಡಿಸಲಾಗಿದೆ.

    ಭಾರತದಲ್ಲಿ ಒಂದು ಜಿಬಿ ಡೇಟಾಕ್ಕೆ ಕನಿಷ್ಟ ದರ 1.75 ರೂ. ಇದ್ದರೆ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ಇದೆ. ಇಲ್ಲಿ 1 ಜಿಬಿ ಡೇಟಾಗೆ 0.26 ಡಾಲರ್(18.22 ರೂ.) ದರ ಇದೆ. ಮೂರನೇ ಸ್ಥಾನದಲ್ಲಿ ಚೀನಾ(60.97 ರೂ.), ನಾಲ್ಕನೇಯ ಸ್ಥಾನದಲ್ಲಿ ಅಮೆರಿಕ ಮತ್ತು ಬ್ರೆಜಿಲ್(105.14 ರೂ.) ಇದೆ. ಒಂದು ಜಿಬಿಗೆ ಅತಿ ಹೆಚ್ಚು ಹಣವನ್ನು ಜಿಂಬಾಬ್ವೆ ಜನ ಪಾವತಿಸುತ್ತಿದ್ದಾರೆ. ಇಲ್ಲಿ 1 ಜಿಬಿ ಡೇಟಾ ದರ 525.72 ರೂ. ಇದೆ. ಭಾರತದ ಮೇಲೆ ಉಗ್ರರನ್ನು ಕಳುಹಿಸಿ ದಾಳಿ ನಡೆಸುವ ಪಾಕಿಸ್ತಾನದಲ್ಲಿ 1 ಜಿಬಿ ಡೇಟಾ ಕನಿಷ್ಟ ದರ 40 ಪಾಕಿಸ್ತಾನ ರೂ. ಇದೆ.

    ಭಾರತದಲ್ಲಿ ಭಾರೀ ವೇಗದಲ್ಲಿ ಸ್ಮಾರ್ಟ್ ಫೋನ್ ಮಾರುಕಟ್ಟೆ ಬೆಳವಣಿಗೆಯಾಗುತ್ತಿದೆ. ಟೆಲಿಕಾಂ ಕಂಪನಿಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವ ಹಿನ್ನೆಲೆಯಲ್ಲಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಕಡಿಮೆ ದರದಲ್ಲಿ ಡೇಟಾವನ್ನು ನೀಡುತ್ತಿವೆ ಎಂದು ಅಧ್ಯಯನ ತಿಳಿಸಿದೆ.

    ವಿಶ್ವದ ಉಳಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಡೇಟಾ ದರ ಕಡಿಮೆ ಎನ್ನುವುದು ಹೊಸ ಸುದ್ದಿಯಲ್ಲ. ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಜಿಯೋಗೆ ಸಂಬಂಧಿಸಿದ ಹೊಸ ಪ್ಲಾನ್ ಬಿಡುಗಡೆ ಮಾಡುವಾಗಲೇ ಈ ವಿಚಾರವನ್ನು ತಿಳಿಸಿದ್ದರು. 2015ರ ಸೆಪ್ಟೆಂಬರ್ 5 ರಂದು ಜಿಯೋ ಎಂಟ್ರಿ ಕೊಟ್ಟ ಬಳಿಕ ದೇಶದಲ್ಲಿ ಡೇಟಾ ಸಮರ ಆರಂಭಗೊಂಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv