Tag: Mobile App

  • ನಿಮ್ಮ ಮೊಬೈಲ್‍ನಲ್ಲಿ ಚೀನಾದ ಆ್ಯಪ್ ಇದೆಯಾ ಚೆಕ್ ಮಾಡ್ಕೊಳ್ಳಿ

    ನಿಮ್ಮ ಮೊಬೈಲ್‍ನಲ್ಲಿ ಚೀನಾದ ಆ್ಯಪ್ ಇದೆಯಾ ಚೆಕ್ ಮಾಡ್ಕೊಳ್ಳಿ

    – ಇಲ್ಲಿದೆ 59 ಆ್ಯಪ್‍ಗಳ ಲಿಸ್ಟ್

    ನವದೆಹಲಿ: ಕೇಂದ್ರ ಸರ್ಕಾರ ಟಿಕ್‍ಟಾಕ್, ಹೆಲೋ ಸೇರಿದಂತೆ 59 ಆ್ಯಪ್‍ಗಳನ್ನು ಬ್ಯಾನ್ ಮಾಡಿದೆ.

    ಟಿಕ್‍ಟಾಕ್, ಯುಸಿ ಬ್ರೌಸರ್, ಕ್ಯಾಮ್ ಸ್ಕ್ಯಾನರ್ ಸೇರಿದಂತೆ ಹಲವು ಆ್ಯಪ್ ಗಳಿಗೆ ಭಾರತ ಸರ್ಕಾರ ನಿಷೇಧ ಹೇರಿದೆ. ಭಾರತದ ಭದ್ರತಾ ಸಂಸ್ಥೆಗಳು ಚೀನಾದ ಆ್ಯಪ್ ಗಳ ಪಟ್ಟಿಯನ್ನು ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ನೀಡಿತ್ತು. ಚೀನಾ ಗಡಿಯಲ್ಲಿ ಘರ್ಷಣೆ ಹೆಚ್ಚಾದ ಹಿನ್ನೆಲೆಯಲ್ಲಿ ಆ್ಯಪ್ ಗಳನ್ನು ಬ್ಯಾನ್ ಮಾಡಬೇಕೆಂಬ ಕೂಗು ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಸರ್ಕಾರ ನಿಷೇಧ ಹೇರಲಾಗಿರುವ ಆ್ಯಪ್ ಗಳನ್ನು ಸಾರ್ವಜನಿಕರು ಬಳಸುತ್ತಿದ್ರೆ, ಮೊಬೈಲ್ ನಿಂದ ಅನ್ ಇನ್‍ಸ್ಟಾಲ್ ಮಾಡಲು ಸಲಹೆ ನೀಡಲಾಗಿದೆ. ಚೀನಾ ತನ್ನ ಆ್ಯಪ್ ಗಳ ಭಾರತೀಯರ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿದೆ ಎಂಬ ಮಾತುಗಳು ಕೇಳಿ ಬಂದಿತ್ತು.

    ಬ್ಯಾನ್ ಆ್ಯಪ್‍ಗಳ ಪಟ್ಟಿ:
    ಟಿಕ್ ಟಾಕ್, ಶೇರ್ ಇಟ್, ಕ್ವಾಯಿ, ಯುಸಿ ಬ್ರೌಸರ್, ಬೈದು ಮ್ಯಾಪ್, ಶೇನ್, ಕ್ಲ್ಯಾಶ್ ಆಪ್ ಕಿಂಗ್ಸ್, ಡಿಯು ಬ್ಯಾಟರಿ ಸೇವರ್, ಹೆಲೊ, ಲೈಕೀ, ಯೂಕ್ಯಾಮ್ ಮೇಕ್‍ಅಪ್, ಎಂಐ ಕಮ್ಯೂನನಿಟಿ, ಸಿಎಂ ಬ್ರೌಸರ್ಸ್, ವೈರಸ್ ಕ್ಲೀನರ್, ಅಪಸ್ ಬ್ರೌಸರ್, ರೋಮ್‍ವುಯ್, ಕ್ಲಬ್ ಫ್ಯಾಕ್ಟರಿ, ನ್ಯೂಸ್‍ಡಾಗ್, ಬ್ಯೂಟಿ ಪ್ಲಸ್, ವಿಯ್ ಚಾಟ್.

    ಯುಸಿ ನ್ಯೂಸ್, ಕ್ಯೂಕ್ಯೂ ಮೇಲ್, ವೀಬೋ, ಕ್ಸೆಂಡರ್, ಕ್ಯೂಕ್ಯೂ ಮ್ಯೂಸಿಕ್, ಕ್ಯೂಕ್ಯೂ ನ್ಯೂಸ್ ಫೀಡ್, ಬಿಗೊ ಲೈವ್, ಸೆಲ್ಫಿ ಸಿಟಿ, ಮೇಲ್ ಮಾಸ್ಟರ್, ಪ್ಯಾರೆಲ್ಲೆಲ್ ಸ್ಪೇಸ್, ಎಂಐ ವಿಡಿಯೋ ಕಾಲ್-ಕ್ಸಿಯೋಮಿ, ವಿಯ್ ಸಿಂಕ್, ಇಎಸ್ ಫೈಲ್ ಎಕ್ಸ್‍ಪ್ಲೋರರ್, ವಿವಾ ವಿಡಿಯೋ-ಕ್ಯೂಯು ವಿಡಿಯೋ, ಮೀತು, ವಿಗೋ ವಿಡಿಯೋ, ನ್ಯೂ ವಿಡಿಯೋ ಸ್ಟೇಟಸ್, ಡಿಯು ರೆಕಾರ್ಡರ್, ವೀಲ್ಟ್-ಹೈಡ್, ಕ್ಯಾಚೆ ಕ್ಲೀನರ್ ಡಿಯು ಆ್ಯಪ್ ಸ್ಟುಡಿಯೋ.

    ಡಿಯು ಕ್ಲೀನರ್, ಡಿಯು ಬ್ರೌಸರ್, ಹ್ಯಾಗೋ ಪ್ಲೇ ವಿತ್ ನ್ಯೂ ಫ್ರೆಂಡ್ಸ್, ಕ್ಯಾಮ್ ಸ್ಕ್ಯಾನರ್, ಕ್ಲೀನ್ ಮಾಸ್ಟರ್- ಚೀತಾ ಮೊಬೈಲ್, ವಂಡರ್ ಕ್ಯಾಮೆರಾ, ಫೋಟೋ ವಂಡರ್, ಕ್ಯೂಕ್ಯೂ ಪ್ಲೇಯರ್, ವುಯ್ ಮೀಟ್, ಸ್ವೀಟ್ ಸೆಲ್ಫಿ, ಬೈದು ಟ್ರಾನ್ಸ್‍ಲೇಟ್, ವಿಮೇಟ್, ಕ್ಯೂಕ್ಯೂ ಇಂಟರ್‍ನ್ಯಾಷನಲ್, ಕ್ಯೂಕ್ಯೂ ಸೆಕ್ಯೂರಿಟಿ ಸೆಂಟರ್, ಕ್ಯೂಕ್ಯೂ ಲಾಂಚರ್, ಯು ವಿಡಿಯೋ, ವಿ ಫ್ಲೈ ಸ್ಟೇಟಸ್ ವಿಡಿಯೋ, ಮೊಬೈಲ್ ಲೆಜೆಂಡ್ಸ್, ಡಿಯು ಪ್ರೈವೆಸಿ.

  • ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಮೊಬೈಲ್ ಆ್ಯಪ್ ಮೂಲಕ 7ನೇ ಆರ್ಥಿಕ ಗಣತಿ

    ಬಳ್ಳಾರಿ: ಸರ್ಕಾರದ ಆದೇಶದ ಮೇರೆಗೆ 7ನೇ ಆರ್ಥಿಕ ಗಣತಿ ಡಿ. 24ರಿಂದ ಪ್ರಾರಂಭವಾಗಿದ್ದು, ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗಣತಿಯ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಯಿತು.

    ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್, ಗಣತಿಯಲ್ಲಿ ಮನೆ ಹಾಗೂ ವಾಣಿಜ್ಯ ಕಟ್ಟಡ, ಸಂಕೀರ್ಣಗಳಲ್ಲಿ ನಡೆಯುತ್ತಿರುವ ವ್ಯಾಪಾರ, ಉದ್ಯಮದ ಬಗ್ಗೆ ಮಾಹಿತಿಯನ್ನು ಗಣತಿದಾರರು ಕೇಳಲಿದ್ದಾರೆ ಎಂದು ತಿಳಿಸಿದರು. ಸದರಿ ಗಣತಿದಾರರಿಗೆ ಎಲ್ಲಾ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ಮನೆಗಳಲ್ಲಿ ನಡೆಯುವ ಹೈನುಗಾರಿಕೆ, ಹೊಲಿಗೆ, ಅಂಗಡಿ ಇತರೆ ಸಣ್ಣಪುಟ್ಟ ವ್ಯಾಪಾರ ಗಣತಿಯೊಂದಿಗೆ ವಾಣಿಜ್ಯ ಕಟ್ಟಡಗಳಲ್ಲಿನ ಉದ್ಯಮಗಳ ಬಗ್ಗೆ ಮಾಹಿತಿ ಕಲೆಹಾಕಲಿದ್ದು, ಸದರಿ ಮಾಹಿತಿ ಆಧರಿಸಿ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಇಲಾಖೆಗಳ ಮೂಲಕ ನಿರ್ಧಿಷ್ಟ ಉದ್ಯಮಗಳಿಗೆ ನೀಡಬೇಕಾದ ಸೌಲಭ್ಯ, ಸಹಕಾರಗಳ ಬಗ್ಗೆ ಯೋಜನೆ ರೂಪಿಸಲು ಸಹಕಾರಿಯಾಗಲಿದೆ ಎಂದರು.

    ಸಾರ್ವಜನಿಕರು ಉದ್ಯಮಗಳ ಮಾಹಿತಿಯನ್ನು ನಿಖರವಾಗಿ ನೀಡಬೇಕು. ಸದರಿ ಗಣತಿಯನ್ನು ಮೊಬೈಲ್ ಆ್ಯಪ್ ಮೂಲಕ ನಡೆಸಲಾಗುವುದು ಹಾಗೂ ಎಲ್ಲಾ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದರು. ಹೀಗಾಗಿ ಯಾರು ಆತಂಕ ಪಡದೆ ಸರಿಯಾದ ಮಾಹಿತಿ ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು.

  • ಆಧಾರ್ ಕಾರ್ಡಿಗೆ ಗುಡ್‍ಬೈ? – ಬಹು ಉಪಯೋಗಿ ಕಾರ್ಡಿನತ್ತ ಕೇಂದ್ರದ ಚಿತ್ತ

    ಆಧಾರ್ ಕಾರ್ಡಿಗೆ ಗುಡ್‍ಬೈ? – ಬಹು ಉಪಯೋಗಿ ಕಾರ್ಡಿನತ್ತ ಕೇಂದ್ರದ ಚಿತ್ತ

    ನವದೆಹಲಿ: ಆಧಾರ್ ಕಾರ್ಡಿಗೆ ಗುಡ್‍ಬೈ ಹೇಳಲು ಕೇಂದ್ರ ಸರ್ಕಾರ ಮುಂದಾಗಿದ್ಯಾ ಹೀಗೊಂದು ಪ್ರಶ್ನೆ ಎದ್ದಿದೆ. ಗೃಹ ಸಚಿವ ಅಮಿತ್ ಶಾ ಅವರು ಹೇಳಿದ ಒಂದು ಹೇಳಿಕೆಯಿಂದ ಈ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

    ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ದೇಶದ ಜನರ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳ ಜಾಗದಲ್ಲಿ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ. ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್) ಇದ್ದರೆ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

    ತಮ್ಮ ಭಾಷಣದಲ್ಲಿ ಮಲ್ಟಿ ಪರ್ಪಸ್ ಕಾರ್ಡ್ ಇದ್ದರೆ ಚೆನ್ನಾಗಿರುತಿತ್ತು ಎಂದು ಹೇಳಿದರು. ಆದರೆ ಈ ಕಾರ್ಡ್ ಸರ್ಕಾರ ನೀಡಲು ಮುಂದಾಗಿದ್ಯಾ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಈ ವೇಳೆ 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ತಿಳಿಸಿದರು.

    2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ ಎಂದು ಹೇಳಿದರು.

    ಜನಗಣತಿಯ ಸಂಬಂಧಿಸಿದಂತೆ ಜನರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರ ಒಟ್ಟು 16 ಭಾಷೆಗಳಲ್ಲಿ ಮಾಹಿತಿ ನೀಡಲು ಮುಂದಾಗುತ್ತದೆ. ಒಟ್ಟು 12 ಸಾವಿರ ರೂ. ವೆಚ್ಚದಲ್ಲಿ ಈ ಸಮೀಕ್ಷೆ ನಡೆಸಲು ಸರ್ಕಾರ ಮುಂದಾಗುತ್ತಿದೆ.

    ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆಯುತ್ತದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಪೇಪರ್ ಸಮೀಕ್ಷೆ ಮಾಡಿದ ನಂತರ ಮತ್ತೊಮ್ಮೆ ಅದನ್ನು ಕಂಪ್ಯೂಟರಿಗೆ ದಾಖಲಿಸಿ ಮತ್ತೆ ಲೆಕ್ಕಾಚಾರ ಮಾಡಬೇಕಾಗಿತ್ತು. ಈಗ ಮೊದಲ ಹಂತದಲ್ಲೇ ಡೇಟಾ ಸರ್ವರ್ ಗೆ ದಾಖಲಾಗುವುದರಿಂದ ಸಮಯ ಉಳಿತಾಯವಾಗುವುದರ ಜೊತೆ ಲೆಕ್ಕಾಚಾರವು ಸುಲಭವಾಗಲಿದೆ.

  • ಮೊಬೈಲ್ ಆ್ಯಪ್ ಮೂಲಕ 2021ರ ಜನಗಣತಿ – ಅಮಿತ್ ಶಾ

    ಮೊಬೈಲ್ ಆ್ಯಪ್ ಮೂಲಕ 2021ರ ಜನಗಣತಿ – ಅಮಿತ್ ಶಾ

    ನವದೆಹಲಿ: 2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ದೆಹಲಿಯಲ್ಲಿ ಜನಗಣನ(ಜನಗಣತಿ) ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡಲಾಗುತಿತ್ತು. ಆದರೆ 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ಮಾಡಲಾಗುವುದು ಎಂದು ತಿಳಿಸಿದರು.

    2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ ಎಂದು ಹೇಳಿದರು.

     

    ಪ್ರತಿ 10 ವರ್ಷಕ್ಕೊಮ್ಮೆ ದೇಶದಲ್ಲಿ ಜನಗಣತಿ ನಡೆಯುತ್ತದೆ. 2011ರಲ್ಲಿ ಕೊನೆಯ ಬಾರಿಗೆ ಜನಗಣತಿ ನಡೆದಿತ್ತು. ಪೇಪರ್ ಸಮೀಕ್ಷೆ ಮಾಡಿದ ನಂತರ ಮತ್ತೊಮ್ಮೆ ಅದನ್ನು ಕಂಪ್ಯೂಟರಿಗೆ ದಾಖಲಿಸಿ ಮತ್ತೆ ಲೆಕ್ಕಾಚಾರ ಮಾಡಬೇಕಾಗಿತ್ತು. ಈಗ ಮೊದಲ ಹಂತದಲ್ಲೇ ಡೇಟಾ ಸರ್ವರ್‌ಗೆ ದಾಖಲಾಗುವುದರಿಂದ ಸಮಯ ಉಳಿತಾಯವಾಗುವುದರ ಜೊತೆ ಲೆಕ್ಕಾಚಾರವು ಸುಲಭವಾಗಲಿದೆ.

  • ಕರ್ನಾಟಕ ಪೊಲೀಸ್ ಆ್ಯಪ್ ಬಿಡುಗಡೆ – ವಿಶೇಷತೆ ಏನು? ಬಳಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

    ಕರ್ನಾಟಕ ಪೊಲೀಸ್ ಆ್ಯಪ್ ಬಿಡುಗಡೆ – ವಿಶೇಷತೆ ಏನು? ಬಳಕೆ ಹೇಗೆ? ಇಲ್ಲಿದೆ ಪೂರ್ಣ ಮಾಹಿತಿ

    ಬೆಂಗಳೂರು: ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆಗಿನ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ಪೊಲೀಸ್ ಅಪ್ಲಿಕೇಶನ್ ಅನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ಪೊಲೀಸರ ಸೇವೆಯನ್ನು ಮತ್ತಷ್ಟು ಸರಳವಾಗಿ ಜನರಿಗೆ ಒದಗಿಸಲು ಸಹಕಾರಿಯಾಗಿದೆ.

    `ಕರ್ನಾಟಕ ಸ್ಟೇಟ್ ಪೊಲೀಸ್’ ಹೆಸರಿನಲ್ಲಿ ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಮೊಬೈಲ್ ಫೋನ್ ಗಳಲ್ಲಿ ಬಳಕೆ ಮಾಡಲು ಅವಕಾಶವಿದೆ. ಅಲ್ಲದೇ ಆ್ಯಪ್ ಪ್ರಮುಖವಾಗಿ ಕನ್ನಡ ಹಾಗೂ ಇಂಗ್ಲಿಷ್ ಎರಡು ಭಾಷೆಯಲ್ಲಿ ಲಭ್ಯವಿದೆ.

    ವಿಶೇಷತೆಗಳೇನು?
    ಕರ್ನಾಟಕ ಪೊಲೀಸ್ ಆ್ಯಪ್ ಅನ್ನು ಎಲ್ಲರು ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದ್ದು, ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದು ಮಾಡುವ ಮೂಲಕ ಆ್ಯಪ್ ಗೆ ಚಾಲನೆ ನೀಡಬೇಕಾಗುತ್ತದೆ. ಬಳಿಕ ಬಳಕೆದಾರರು ನೀಡಿರುವ ನಂಬರ್ ಮೂಲಕ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂದೇಶ ರವಾನೆ ಮಾಡಬಹುದಾಗಿದೆ.

    ಆ್ಯಪ್ ನಲ್ಲಿ ಎಸ್‍ಒಎಸ್ ಬಟನ್ ಸಹ ಲಭ್ಯವಿದ್ದು, ತುರ್ತು ಸಮಯದಲ್ಲಿ ಈ ಬಟನ್ ಮೇಲೆ ಒತ್ತುವ ಮೂಲಕ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದಾಗಿದೆ. ಫೋನ್ ನ ಜಿಪಿಎಸ್ ಲೋಕೇಶಷನ್ ಮೂಲಕ ತಾವಿರುವ ಸ್ಥಳದ ಬಗ್ಗೆಯೂ ಮಾಹಿತಿ ನೀಡಬಹುದಾಗಿದೆ.

    ವಿಶೇಷವಾಗಿ ಆ್ಯಪ್ ದೂರು ದಾಖಲಿಸಲು ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಹತ್ತಿರದ ಪೊಲೀಸ್ ಠಾಣೆಯ ಮಾಹಿತಿ, ಮೊಬೈಲ್ ನಂಬರ್, ಇ-ಮೇಲ್, ಪೊಲೀಸ್ ಅಧಿಕಾರಿಗಳ ಮಾಹಿತಿ ಸೇರಿದಂತೆ ಗೂಗಲ್ ಮ್ಯಾಪ್ ಜಿಪಿಎಸ್ ಮೂಲಕ ಪೊಲೀಸ್ ಠಾಣೆಯ ಮಾರ್ಗವನ್ನು ಪಡೆಯಬಹುದಾಗಿದೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನ ಬಗ್ಗೆ ಎಫ್‍ಐಆರ್ ಪ್ರತಿಯನ್ನು ಡೌನ್‍ಲೋಡ್ ಮಾಡಿಕೊಳ್ಳುವ ಹಾಗೂ ಕಳ್ಳತವಾದ ವಾಹನಗಳ ಬಗ್ಗೆ ವಿವರವನ್ನು ಪಡೆಯುವ ಆಯ್ಕೆ ಆ್ಯಪ್ ನಲ್ಲಿ ಲಭ್ಯವಿದೆ.

    https://www.facebook.com/CMofKarnataka/photos/a.720456501336150.1073741828.708459142535886/1718420591539731/?type=3&theater

    ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೋಟೋ, ವಿಡಿಯೋ, ಫೈಲ್ ಗಳು ಮತ್ತು ಆಡಿಯೋಗಳನ್ನು ಸಹ ಆಪ್ ಲೋಡ್ ಮಾಡಬಹುದಾಗಿದೆ. ಕರ್ನಾಟಕ ಯಾವುದೇ ಠಾಣೆಯಲ್ಲೂ ನಾಪತ್ತೆಯಾಗಿರುವ ಪ್ರಕರಣಗಳ ಮಾಹಿತಿಯನ್ನು ವಿಕ್ಷೀಸಬಹುದಾಗಿದೆ. ಅಲ್ಲದೇ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ನೀಡುವ ಎಲ್ಲಾ ಮಾಹಿತಿಯನ್ನು ಈ ಆ್ಯಪ್ ಮೂಲಕ ಪಡೆಯಬಹುದಾಗಿದೆ.

    ಪ್ರತಿಯೊಂದು ಪೊಲೀಸ್ ನಿರ್ವಹಣಾ ಕೊಠಡಿಯೂ ಸಹ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿದ್ದು, ದೂರುಗಳ ಕುರಿತು ಪ್ರತಿಕ್ರಿಯೆ ಪಡೆಯಬಹುದು. ಸಾರ್ವಜನಿಕರು ನೀಡುವ ಪ್ರತಿ ದೂರಿಗೂ ಪ್ರತ್ಯೇಕ ಸಂಖ್ಯೆಯನ್ನು ನೀಡಲಾಗುತ್ತದೆ. ಅಲ್ಲದೇ ದೂರು ಸ್ವೀಕೃತಿ ಆಗಿರುವ ಕುರಿತು ಮೇಸೆಜ್ ದೂರದಾರರ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

    ಈಗಾಗಲೇ ಗೂಗಲ್ ಸ್ಟೋರ್ ನಲ್ಲಿ ಬಿಡುಗಡೆಯಾಗಿರುವ ಕೆಎಸ್‍ಪಿ ಆ್ಯಪ್ ಕುರಿತು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, 4.6 ಸ್ಟಾರ್ ರೇಟಿಂಗ್ ಪಡೆದಿದೆ. ಇದೂವರೆಗೂ 10 ಸಾವಿರಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದಾರೆ.

    ಆ್ಯಂಡ್ರಾಯ್ಡ್ ಅಪ್ಲಿಕೇಶನ್ ಡೌನ್‍ಲೋಡ್ ಮಾಡಲು ಕ್ಲಿಕ್ ಮಾಡಿ: ಕರ್ನಾಟಕ ಸ್ಟೇಟ್ ಪೊಲೀಸ್

    https://www.facebook.com/CMofKarnataka/photos/a.720456501336150.1073741828.708459142535886/1718300214885102/?type=3&theater

  • ಮೀನುಗಾರರಿಗೆ ಸಿಹಿ ಸುದ್ದಿ: ಇನ್ನ್ಮುಂದೆ ಈ ಆ್ಯಪ್ ಸಹಾಯದಿಂದ ಸುಲಭವಾಗಿ ಮೀನು ಹಿಡಿಯಬಹುದು

    ಮೀನುಗಾರರಿಗೆ ಸಿಹಿ ಸುದ್ದಿ: ಇನ್ನ್ಮುಂದೆ ಈ ಆ್ಯಪ್ ಸಹಾಯದಿಂದ ಸುಲಭವಾಗಿ ಮೀನು ಹಿಡಿಯಬಹುದು

    ಮಂಗಳೂರು: ಸಮುದ್ರಕ್ಕೆ ಮೀನು ಹಿಡಿಯಲು ಹೋದವರಿಗೇ ಮೀನು ಎಲ್ಲಿದೆ ಅಂತ ಗೊತ್ತಿರಲ್ಲ. ಹಾಗಾಗಿ ಮೀನುಗಾರಿಕೆಗಾಗಿ ಹೊಸ ಮೊಬೈಲ್ ಆ್ಯಪ್ ರೆಡಿಯಾಗಿದೆ. ಮೀನು ಇಂಥ ಜಾಗದಲ್ಲೇ ಇದೆಯೆಂಬ ಖಚಿತ ಮಾಹಿತಿಯನ್ನ ಈ ಮೊಬೈಲ್ ಆ್ಯಪ್ ತಿಳಿಸಿಕೊಡುತ್ತದೆ.

    ಚೆನ್ನೈನ ಎಂ.ಎಸ್.ಸ್ವಾಮಿನಾಥನ್ ರಿಸರ್ಚ್ ಫೌಂಡೇಷನ್ ಮೀನುಗಾರ ಸ್ನೇಹಿ ಮೊಬೈಲ್ ಅಪ್ಲಿಕೇಶನ್ ಹೊರತಂದಿದ್ದು, ಮೀನುಗಾರಿಕಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿದೆ. ಕನ್ನಡ, ಇಂಗ್ಲಿಷ್, ತಮಿಳು, ಮಲಯಾಳಂ, ತೆಲುಗು ಸೇರಿದಂತೆ ವಿವಿಧ ಭಾಷೆಗಳಲ್ಲಿ ಮೊಬೈಲ್ ಆ್ಯಪ್ ಲಭ್ಯವಿದ್ದು ಗೂಗಲ್ ಪ್ಲೇಸ್ಟೋರ್‍ನಲ್ಲಿ ಉಚಿತವಾಗಿ ಡೌನ್‍ಲೋಡ್ ಮಾಡಬಹುದಾಗಿದೆ.

    ರಾಜ್ಯದ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಯ ಮೀನುಗಾರರ ಮೊಬೈಲ್‍ಗಳಿಗೆ ಪ್ರಾಯೋಗಿಕವಾಗಿ ಮಂಗಳೂರಿನ ಕೇಂದ್ರೀಯ ಸಮುದ್ರ ಮೀನುಗಾರಿಕಾ ಸಂಶೋಧನಾ ಸಂಸ್ಥೆ ಮೊಬೈಲ್ ಆ್ಯಪ್ ಅಳವಡಿಸುತ್ತಿದೆ.

    ವಿಶೇಷ ಅಂದ್ರೆ ಈ ಮೊಬೈಲ್ ಆ್ಯಪ್ ಸಮುದ್ರ ಮೇಲ್ಮಟ್ಟದಲ್ಲಿ ಮೀನುಗಳ ಲಭ್ಯತೆ ಇರುವುದನ್ನು ಗುರುತಿಸಿ ಅಪ್ಡೇಟ್ ಮಾಡುತ್ತದೆ. ಮೀನು ಲಭ್ಯವಿರುವ ಪ್ರದೇಶಕ್ಕೆ ಮೀನುಗಾರರು ನೇರವಾಗಿ ತೆರಳಿ ಬೇಟೆಯಾಡಬಹುದಾಗಿದ್ದು, ಸಮಯ, ಇಂಧನ ವ್ಯರ್ಥವಾಗುವುದು ತಪ್ಪುತ್ತದೆ. ಇದಲ್ಲದೆ ಸಮುದ್ರದಲ್ಲಿನ ಬದಲಾವಣೆಗಳು, ಚಂಡಮಾರುತ, ಸುನಾಮಿ ಸಾಧ್ಯತೆಗಳ ಬಗ್ಗೆ ಎಚ್ಚರಿಕೆಯನ್ನೂ ಜಿಪಿಎಸ್ ಮೂಲಕ ಕೊಡುತ್ತದೆ.

    ಜೀವದ ಹಂಗು ತೊರೆದು ಕಡಲಿಗಿಳಿಯುವ ಕಡಲ ಮಕ್ಕಳಿಗಾಗಿಯೇ ಮೊಬೈಲ್ ಆ್ಯಪ್ ಬಂದಿರುವುದು ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಮೂಡಿಸಿದೆ.