Tag: Mnngaluru

  • ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ- ಕೊಚ್ಚಿ ಹೋದ ಪಿಕಪ್ ವ್ಯಾನ್

    ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆ- ಕೊಚ್ಚಿ ಹೋದ ಪಿಕಪ್ ವ್ಯಾನ್

    – ಅಪಾಯದಿಂದ ಪಾರಾದ ಇಬ್ಬರು

    ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಇಂದು ಸುರಿದ ಭಾರೀ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಚಿಬಿದ್ರೆಯ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೀರು ಏರಿಕೆಯಾಗಿದೆ.

    ಏಕಾಏಕಿ ನದಿ ನೀರಿನ ಏರಿಕೆಯಿಂದಾಗಿ ನದಿ ಪಕ್ಕ ನಿಲ್ಲಿಸಿದ್ದ ಸದಾನಂದ ಎಂಬವರಿಗೆ ಸೇರಿದ ಪಿಕಪ್ ವಾಹನ ಸಂಪೂರ್ಣ ಮುಳುಗಡೆಯಾಗಿದ್ದು, ನೀರಿನ ರಭಸ ಹೆಚ್ಚಾಗಿದ್ದರಿಂದ ಪಿಕಪ್ ವಾಹನವನ್ನು ನದಿ ನೀರು ಕೊಚ್ಚಿಕೊಂಡು ಹೋಗಿತ್ತು. ತಕ್ಷಣ ಅಲ್ಲೇ ಇದ್ದ ಸ್ಥಳೀಯ ಯುವಕರು ಪಿಕಪ್ ನಲ್ಲಿದ್ದ ಚಾಲಕ ಹಾಗೂ ಕ್ಲೀನರ್ ನನ್ನು ರಕ್ಷಿಸಿದ್ದಾರೆ.

    ಬಳಿಕ ಪ್ರವಾಹದ ನೀರಿಗೆ ಕೊಚ್ಚಿ ಹೋಗದಂತೆ ವಾಹನಕ್ಕೆ ಹಗ್ಗ ಕಟ್ಟಿ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳೀಯ ಯುವಕರ ಸಹಾಯದಿಂದ ಅನಾಹುತವೊಂದು ತಪ್ಪಿದೆ.