Tag: MM Keeravani

  • ದೇವರನ್ನು ಭೇಟಿಯಾದರಂತೆ ನಿರ್ದೇಶಕ ರಾಜಮೌಳಿ

    ದೇವರನ್ನು ಭೇಟಿಯಾದರಂತೆ ನಿರ್ದೇಶಕ ರಾಜಮೌಳಿ

    ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದು ಬೀಗುತ್ತಿರುವ ನಿರ್ದೇಶಕ ರಾಜಮೌಳಿ, ಅದೇ ಖುಷಿಯಲ್ಲೇ ಒಂದು ಪೋಸ್ಟ್ ಮಾಡಿದ್ದಾರೆ. ಕೊನೆಗೂ ನಾನು ದೇವರನ್ನು ಭೇಟಿ ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಆ ದೇವರು ಯಾರು ಎನ್ನುವುದಕ್ಕಾಗಿ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ದೇವರ ಜೊತೆ ಕೆಲ ಹೊತ್ತು ಕಳೆದು ಸಂಭ್ರಮಿಸಿದ್ದಾರೆ.

    ಅಂದಹಾಗೆ ರಾಜಮೌಳಿ ದೇವರು ಅಂತ ಕರೆದದ್ದು ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವನ್ ಸ್ಟೀಲ್ ಬರ್ಗ್ ಅವರನ್ನು. ಹಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಟೀವನ್, ರಾಜಮೌಳಿ ಅವರ ಅತ್ಯಂತ ಹೆಮ್ಮೆ ನಿರ್ದೇಶಕರಂತೆ. ಅನೇಕ ಬಾರಿ ಇವರ ಕುರಿತು ರಾಜಮೌಳಿ ಹೇಳಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಅವರ ಜೊತೆ ಕೆಲಸ ಮಾಡುವುದಾಗಿಯೂ ಈ ಹಿಂದೆ ಹೇಳಿಕೊಂಡಿದ್ದರು. ತಮ್ಮ ಆರಾಧ್ಯ ನಿರ್ದೇಶಕನನ್ನು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ರಾಜಮೌಳಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಇದೇ ಸಮಾರಂಭದಲ್ಲಿ ಸ್ಟೀವನ್ ಸ್ಟೀಲ್ ಬರ್ಗ್ ಕೂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇವರ ನಿರ್ದೇಶನದ ಫ್ಯಾಬೆಲ್ಮ್ಯಾನ್ಸ್ ಸಿನಿಮಾ ಎರಡು ಪ್ರಶಸ್ತಿಗಳನ್ನು ಪಡೆದಿದೆ. ಈ ಸಿನಿಮಾಗೆ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಸಂದಿವೆ. ಸ್ಟೀವನ್ ಜೊತೆ ಫೋಟೋ ಕೂಡ ತಗೆಸಿಕೊಂಡಿರುವ ರಾಜಮೌಳಿ, ಆ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್.ಆರ್.ಆರ್ ಸಿನಿಮಾಗೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ನಾಟು ನಾಟು ಹಾಡು, ಈ ಬಾರಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿಮಾ ಟೀಮ್ ತಮ್ಮ ಕುಟುಂಬದೊಂದಿಗೆ ಹಾಜರಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

    ರಾಜಮೌಳಿ (Rajamouli) ನಿರ್ದೇಶನ `ಆರ್‌ಆರ್‌ಆರ್’ (RRR) ಸಿನಿಮಾದ ನಾಟು ನಾಟು ಹಾಡಿನ ಸಂಗೀತಕ್ಕೆ ಹಾಲಿವುಡ್‌ನ `ಗೋಲ್ಡನ್ ಗ್ಲೋಬ್ಸ್’ ಎಂಬ ಪ್ರಶಸ್ತಿಗೆ ಬಾಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಂ ಕ್ಷೀರವಾಣಿಗೆ ಗೋಲ್ಡನ್ ಗೋಬ್ಸ್ ಪ್ರಶಸ್ತಿ (Golden Globe Awards) ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರದ ಹೊರತಾಗಿ ಪ್ರಶಸ್ತಿ ಗೆದ್ದವರ ಬಗ್ಗೆ ಇಲ್ಲಿದೆ ಡೀಟೈಲ್ಸ್. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

    ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡ್ತಿರುವ ಸಿನಿಮಾ ಅಂದ್ರೆ `ಆರ್‌ಆರ್‌ಆರ್’ (RRR Film) ಸಿನಿಮಾ. ಈ ಚಿತ್ರದ ನಾಟು ನಾಟು (Naatu Naatu Song) ಸಾಂಗ್‌ಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಬಾಚಿಕೊಂಡಿದೆ. ಗೋಲ್ಡನ್ ಗ್ಲೋಬ್‌ನಲ್ಲಿ ಗೆದ್ದ ಸಿನಿಮಾಗಳು ಆಸ್ಕರ್‌ನಲ್ಲಿಯೂ ಗೆಲ್ಲವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನೂ ಗೋಲ್ಡನ್ ಗೋಬ್ಸ್‌ನಲ್ಲಿ ಬೇರೇ ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಎಂಬ ಸಂಪೂರ್ಣ ವಿವರ ಇಲ್ಲಿದೆ.

    ಗೋಲ್ಡನ್ ಗ್ಲೋಬ್ಸ್ ವಿಜೇತರ ಪಟ್ಟಿ 2023

    ಅತ್ಯುತ್ತಮ ಡ್ರಾಮಾ ಸಿನಿಮಾ- ದಿ ಫ್ಯಾಬಲ್‌ಮ್ಯಾನ್ಸ್

    ಸಂಗೀತ ಹಾಗೂ ಕಾಮಿಡಿ ಜಾನರ್‌ನ ಅತ್ಯುತ್ತಮ ಸಿನಿಮಾ- ದಿ ಬನ್‌ಶೀಸ್ ಆಫ್ ಇನೆಶೆರಿನ್

    ಅತ್ಯುತ್ತಮ ಟಿವಿ ಸೀರೀಸ್- ಹೌಸ್ ಆಫ್ ಡ್ರ‍್ಯಾಗನ್ಸ್

    ಸಂಗೀತ ಹಾಗೂ ಕಾಮಿಡಿ ಜಾನರ್‌ನ ಟಿವಿ ಸೀರೀಸ್- ಅಬಾಟ್ ಎಲಿಮೆಂಟ್ರಿ

    ಅತ್ಯುತ್ತಮ ಟಿವಿ ಸಿನಿಮಾ- ದಿ ವೈಟ್ ಲೋಟಸ್: ಸಿಸಿಲಿ

    ಟಿವಿ ಸೀರೀಸ್‌ನ ಅತ್ಯುತ್ತಮ ನಟ- ಕೆವಿನ್ ಕೋಸ್ಟರ್ (ಯೆಲ್ಲೊಸ್ಟೋನ್)

    ಟಿವಿ ಸಿನಿಮಾದ ಅತ್ಯುತ್ತಮ ನಟ- ಇವಾನ್ ಪೆಟರ್ಸ್ (ಮಾನ್‌ಸ್ಟರ್; ದಿ ಜೆಫ್ರಿ ಡಾಮೆರ್ ಸ್ಟೋರಿ)

    ಟಿವಿ ಸಿನಿಮಾದ ಅತ್ಯುತ್ತಮ ನಟಿ- ಅಮಾಂಡಾ ಸೇಫ್ರೆಡ್ (ದಿಡ್ರಾಪೌಟ್)

    ಟಿವಿ ಸಿನಿಮಾ ಅತ್ಯುತ್ತಮ ಪೋಷಕ ನಟಿ- ಜೆನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)

    ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟ- ಪೌಲ್ ವಾಲ್ಟರ್ (ಬ್ಲಾಕ್ ಬರ್ಡ್)

    ಅತ್ಯುತ್ತಮ ಚಿತ್ರಕಥೆ- ದಿ ಬ್ಯಾನ್‌ಶೀಸ್ ಆಫ್ ಇನೆಶೆರೀನ್

    ಅತ್ಯುತ್ತಮ ನಿರ್ದೆಶಕ- ಸ್ಟಿವನ್ ಸ್ಪೀಲ್‌ಬರ್ಗ್, (ದಿ ಫೇಬಲ್‌ಮ್ಯಾನ್ಸ್)

    ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ- ಅರ್ಜೆಂಟೀನಾ 1985 (ಆರ್‌ಆರ್‌ಆರ್ ಸಿನಿಮಾ ಈ ವಿಭಾಗದಲ್ಲಿ ಸೋತಿದೆ)

    ಅತ್ಯುತ್ತಮ ನಟಿ- ಕೇಟ್ ಬ್ಲಾಂಚೆಟ್ (ಕಾರ್)

    ಅತ್ಯುತ್ತಮ ನಟ- ಆಸ್ಟಿನ್ ಬಟ್ಲರ್ (ಎಲ್ವಿಸ್)

    ಟಿವಿ ಸೀರೀಸ್ ಅತ್ಯುತ್ತಮ ಪೋಷಕ ನಟಿ- ಜೂಲಿಯಾ ಗಾರ್ನರ್ (ಓಜಾರ್ಕ್)

    ಅತ್ಯುತ್ತಮ ಪೋಷಕ ನಟ- ಕೆ ಹ್ಯು ಕಾನ್ (ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್)

    ಅತ್ಯುತ್ತಮ ಪೋಷಕ ನಟಿ- ಆಂಗೆಲಾ ಬೆಸೆಟ್ (ವಕಾಂಡಾ ಫಾರೆವರ್)

    ಅತ್ಯುತ್ತಮ ನಟ ಟಿವಿ ಸೀರೀಸ್- ಟೈಲರ್ ಜೇಮ್ಸ್ ವಿಲಿಯಮ್ಸ್ (ಅಬಾಟ್ ಎಲಿಮೆಂಟ್ರಿ)

    ಅತ್ಯುತ್ತಮ ಸಂಗೀತ- ಜಸ್ಟಿನ್ ಹರ್‌ವಿಟ್ಜ್ (ಬ್ಯಾಬಿಲಾನ್)

    ಅತ್ಯುತ್ತಮ ಹಾಡು- ನಾಟು-ನಾಟು (ಆರ್‌ಆರ್‌ಆರ್‌)

    ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಪಿನಾಕಿಯೋ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಇಂದು ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ಇಂದು ಚಿಕ್ಕಬಳ್ಳಾಪುರದಲ್ಲಿಆರ್.ಆರ್.ಆರ್ ಮೆಗಾ ಪ್ರೀ ರಿಲೀಸ್ ಇವೆಂಟ್ : ಏನೆಲ್ಲ ವಿಶೇಷ?

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ಕನ್ನಡ ಅವತರಣಿಕೆಯ ಮೆಗಾ ಪ್ರೀ ರಿಲೀಸ್ ಇವೆಂಟ್ ಇಂದು ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿದೆ. ಹಾಗಾಗಿ ಕಲಾವಿದರ ದಂಡೇ ಅಲ್ಲಿ ಸೇರಲಿದೆ. ಸಿನಿಮಾದ ನಟರು ಮತ್ತು ಕಾರ್ಯಕ್ರಮದಲ್ಲಿ ಭಾಗಿ ಆಗಲು ಬರುತ್ತಿರುವ  ನೆಚ್ಚಿನ ನಟರನ್ನು ನೋಡುವುದಕ್ಕಾಗಿ ಅಭಿಮಾನಿಗಳು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಕಾಯುತ್ತಿದ್ದಾರೆ. ಏರ್ ಪೋರ್ಟ್ಗೆ ಅಭಿಮಾನಿಗಳ ಸಾಗರವೇ ಹರಿದು ಬಂದಿದ್ದರಿಂದ, ಅಲ್ಲಿನ ಸಿಬ್ಬಂದಿಗೆ ಮತ್ತೊಂದು ಟೆನ್ ಷನ್ ಶುರುವಾಗಿದೆ.

    ಇಂದು ಸಂಜೆ 06 ಗಂಟೆಗೆ ಆರಂಭವಾಗಲಿರುವ ಪ್ರೀ ರಿಲೀಸ್ ಇವೆಂಟ್, ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಬಳಿ ನೂರಕ್ಕೂ ಹೆಚ್ಚು ಎಕರೆ ವಿಸ್ತೀರ್ಣದಲ್ಲಿ ಜಾಗದಲ್ಲಿ ನಡೆಯುತ್ತಿದೆ. ಸಿನಿಮಾದ ನಾಯಕ ನಟರಾದ ಜ್ಯೂ.ಎನ್‍ಟಿಆರ್, ರಾಮ್ ಚರಣ್ ಹಾಗೂ ನಿರ್ದೇಶಕ ರಾಜಮೌಳಿ, ಆಲಿಯಾ ಭಟ್ ಸೇರಿದಂತೆ ಬಹುತೇಕ ತಾರಾಗಣವೇ ಕಾರ್ಯಕ್ರಮದಲ್ಲಿ ಹಾಜರಿರಲಿದೆ. ಇದನ್ನೂ ಓದಿ : ಪುನೀತ್ ಹುಟ್ಟು ಹಬ್ಬಕ್ಕೆ ವಿಶ್ ಮಾಡದ ರಶ್ಮಿಕಾ ಮಂದಣ್ಣ ಮತ್ತೆ ನೆಟ್ಟಿಗರು ಗರಂ

    ಕಳೆದ ರಾತ್ರಿಯೇ ಬೆಂಗಳೂರಿಗೆ ಕೆಲವು ನಟರು ಆಗಮಿಸಿದ್ದರಿಂದ ಕೇಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟರನ್ನ ನೋಡಲು ಏರ್ಪೋರ್ಟ್ ನಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ನೆಚ್ಚಿನ ನಟರನ್ನು ಸಂಭ್ರಮದಿಂದ ಬರಮಾಡಿಕೊಂಡರು. ಇದನ್ನೂ ಓದಿ: ಪುನೀತ್ ಗೆ ಮರಣೋತ್ತರ ‘ ಸಹಕಾರ ರತ್ನ’ ಪ್ರಶಸ್ತಿ: ಸಚಿವ ಎಸ್.ಟಿ.ಸೋಮಶೇಖರ್ ಘೋಷಣೆ

    ಕೇವಲ ಸಿನಿಮಾ ನಟರು ಮಾತ್ರವಲ್ಲ, ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರ ಸುಧಾಕರ್ ಸೇರಿದಂತೆ ಕೆಲ ರಾಜಕಾರಣಿಗಳು ಕೂಡ ಭಾಗಿ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಕಾರ್ಯಕ್ರಮವನ್ನು ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಹಾಗಾಗಿ ಟನ ಶಿವರಾಜ್ ಕುಮಾರ್ ಕೂಡ ಭಾಗಿ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ : ದಾಖಲೆ ಬರೆದ ಜೇಮ್ಸ್ – ಎರಡೇ ದಿನದಲ್ಲಿ 100 ಕೋಟಿ ಕ್ಲಬ್ ಸೇರಿದ ಪುನೀತ್ ಚಿತ್ರ

    ಈಗಾಗಲೇ ಲಕ್ಷಾಂತರ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಡೀ ದೇಶದಲ್ಲೇ ಅತಿ ದೊಡ್ಡದಾದ ಇವೆಂಟ್ ಇದಾಗಿದೆ. ಭದ್ರತೆ ಮತ್ತು ಸರ್ವ ಸಿದ್ಧತೆಯನ್ನು ಮಾಡಿಕೊಂಡು ಇವೆಂಟ್ ಮಾಡಲಾಗುತ್ತಿದೆ ಎಂದಿದೆ ಚಿತ್ರತಂಡ.

  • RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    RRR ಆಡಿಯೋ ಖರೀದಿ -ಒಪ್ಪಂದಕ್ಕೆ ಸಹಿ ಹಾಕಿದ ಲಹರಿ ಸಂಸ್ಥೆ

    ಬೆಂಗಳೂರು: ನಿರ್ದೇಶಕ ಎಸ್.ಎಸ್ ರಾಜಮೌಳಿ ಅವರ ಬಹುನಿರೀಕ್ಷಿತ RRR ಚಿತ್ರದ ಆಡಿಯೋ ಪಡೆದುಕೊಂಡ ಒಪ್ಪಂದಕ್ಕೆ ಲಹರಿ ಸಂಸ್ಥೆ ಇಂದು ಸಹಿ ಹಾಕಿದೆ.

    ಕೆಲದಿನಗಳ ಹಿಂದೆ ಲಹರಿ ಸಂಸ್ಥೆ ಆರ್‍ಆರ್‍ಆರ್ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿತ್ತು. ಇದೀಗ ಲಹರಿ ಸಂಸ್ಥೆಯು ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಅವರು ಆರ್‍ಆರ್‍ಆರ್ ಅಗ್ರಿಮೆಂಟ್ ಗೆ ಸೈನ್ ಮಾಡಿರುವ ಅಧಿಕೃತವಾಗಿ ಪತ್ರವನ್ನು ಪಡೆಯುವ ಮೂಲಕ ಹಕ್ಕನ್ನು ಪಡೆದುಕೊಂಡಿದೆ. ಆಗಸ್ಟ್ 1ರ ಬೆಳಗ್ಗೆ 11 ಗಂಟೆಗೆ ಆರ್‍ಆರ್‍ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ. ಇದನ್ನೂ ಓದಿ: RRR ಆಡಿಯೋ ರೈಟ್ಸ್ ಲಹರಿ ಪಾಲು

    ಲಹರಿ ಸಂಸ್ಥೆ ಹೈದರಾಬಾದ್‍ನಲ್ಲಿ ಲಿಖಿತವಾಗಿ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಲಹರಿ ಸಂಸ್ಥೆಯ ಮನೋಹರ್ ನಾಯ್ಡು, ನವೀನ್, ಕೀರವಾಣಿ ಜೊತೆ ಸಭೆಯಲ್ಲಿ ಭಾಗಿಯಾಗಿದ್ದರು. 28 ಕೋಟಿ ರೂ.ಗೆ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ ಎಂದು ತಿಳಿದು ಬಂದಿದೆ.

    ಆರ್‌ಆರ್‌ಆರ್‌ ಚಿತ್ರದ ಆಡಿಯೋ ಹಕ್ಕನ್ನು ಭಾರೀ ಮೊತ್ತಕ್ಕೆ ಖರೀದಿಸಲಾಗಿದೆ. ಒಟ್ಟು 5 ಭಾಷೆಗಳಲ್ಲಿ ಆರ್‌ಆರ್‌ಆರ್‌ ತೆರೆಕಾಣುತ್ತಿದ್ದು, ಐದೂ ಭಾಷೆಯ ಆಡಿಯೋ ಹಕ್ಕನ್ನು ಲಹರಿ ಹಾಗೂ ಟಿ ಸಿರೀಸ್ ತಮ್ಮ ಜೋಳಿಗೆಗೆ ಹಾಕಿಕೊಂಡಿವೆ. ಬಾಹುಬಲಿ ಚಿತ್ರದ ಆಡಿಯೋ ಹಕ್ಕನ್ನೂ ಇದೇ ಸಂಸ್ಥೆ ದಾಖಲೆ ಮೊತ್ತಕ್ಕೆ ಖರೀದಿಸಿತ್ತು.  ಇದನ್ನೂ ಓದಿ: RRR ಸಿನಿಮಾದ ಒಂದು ಸಾಂಗ್ ಶೂಟ್‍ಗೆ ರಾಜಮೌಳಿ ಬೃಹತ್ ಪ್ಲಾನ್

    ಈಗಾಗಲೇ ಆರ್‌ಆರ್‌ಆರ್‌ ಸಿನಿಮಾದ ಚಿತ್ರೀಕರಣ ಕೊನೇಯ ಹಂತ ತಲುಪಿದ್ದು, ಇದೇ ಆಗಸ್ಟ್ 1 ರಂದು ವಿಶೇಷ ಹಾಡನ್ನು ಬಿಡುಗಡೆಗೊಳಿಸಲು ಚಿತ್ರ ತಂಡ ಸಿದ್ಧತೆ ನಡೆಸಿದೆ. ಇದರ ಮಧ್ಯೆಯೇ ಜುಲೈ 15ರಂದು ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಲು ಸಹ ತಯಾರಿ ನಡೆದಿದೆ. ಈ ಮೇಕಿಂಗ್ ವೀಡಿಯೋ ನಿಮ್ಮನ್ನು ಆರ್‍ಆರ್‍ಆರ್ ಪ್ರಪಂಚಕ್ಕೆ ಕೊಂಡೊಯ್ಯಲಿದ್ದು, ಈ ಮೂಲಕ ಚಿತ್ರವನ್ನು ಹೇಗೆ ನಿರ್ಮಿಸಲಾಗಿದೆ ಎಂಬುದರ ಝಲಕ್ ತೋರಿಸಲಾಗುತ್ತಿದೆ.

    ಹೀಗೆ ಆರ್‌ಆರ್‌ಆರ್‌ ಸಿನಿಮಾ ಕುರಿತು ಚಿತ್ರ ತಂಡ ಬ್ಯಾಕ್ ಟು ಬ್ಯಾಕ್ ಅಪ್‍ಡೇಟ್ ನೀಡುತ್ತಿದೆ. ಅಂದಹಾಗೆ ಬಹುನಿರೀಕ್ಷಿತ ಆರ್‍ಆರ್‍ಆರ್ ಸಿನಿಮಾ ಅಕ್ಟೋಬರ್ 13ರಂದು ವಿಶ್ವಾದ್ಯಂತ ತೆರೆಗಪ್ಪಳಿಸುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ. ಹೀಗಾಗಿ ಅಭಿಮಾನಿಗಳು ಆರ್‍ಆರ್‍ಆರ್ ಅಪ್‍ಡೇಟ್ಸ್‍ಗಾಗಿ ಕಾತರದಿಂದ ಕಾಯುತ್ತಿದ್ದಾರೆ.