Tag: MLC

  • ಜೆಡಿಎಸ್ ಎಂಎಲ್ ಸಿ ಅಪ್ಸರ್ ಆಗಾ ನಿಧನ

    ಜೆಡಿಎಸ್ ಎಂಎಲ್ ಸಿ ಅಪ್ಸರ್ ಆಗಾ ನಿಧನ

    ರಾಮನಗರ: ಜೆಡಿಎಸ್ ಪಕ್ಷದ ವಿಧಾನಪರಿಷತ್ ಸದಸ್ಯ ಸಯ್ಯದ್ ಅಪ್ಸರ್ ಆಗಾ ಅವರು ಅನಾರೋಗ್ಯದಿಂದ ರಾತ್ರಿ ಮೃತಪಟ್ಟಿದ್ದಾರೆ.

    ರಾಮನಗರದ ದೊಡ್ಡ ಮಸೀದಿಯ ನಿವಾಸಿಯಾಗಿದ್ದ ಅಪ್ಸರ್ ಆಗಾ, 2012 ರ ಜೂನ್ 18 ರಂದು ಟಿ.ಎ ಶರವಣ ಜೊತೆಗೆ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ರು. ಮೂರು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಪ್ಸರ್ ಆಗಾ ರಾತ್ರಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    ಇಂದು ಮಧ್ಯಾಹ್ನ 3 ಗಂಟೆಗೆ ಅಂತಿಮ ಸಂಸ್ಕಾರಗಳು ನೆರವೇರಲಿವೆ. ಸಿಎಂ ಎಚ್ ಡಿ ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಸೇರಿದಂತೆ ಹಲವು ಮುಖಂಡರು ಅಂತಿಮ ದರ್ಶನದಲ್ಲಿ ಭಾಗಿಯಾಗಲಿದ್ದಾರೆ.

    ಮೃತ ಎಂಎಲ್ ಸಿ ಅಪ್ಸರ್ ಆಗಾ ರವರು ಅಪ್ಸರ್ ಆಗಾ ರವರು ಪತ್ನಿ, ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಈ ಹಿಂದೆ ನಗರಸಭಾ ಸದಸ್ಯರಾಗಿದ್ದರು. ಮಾವು, ರೇಷ್ಮೆ ಮೂಲ ವ್ಯವಹಾರ ನಡೆಸುತ್ತಿದ್ದರು.

  • ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾದ ಹೆಚ್‍ಡಿಕೆ?

    ಬೆಂಗಳೂರು: ಬಸವರಾಜ್ ಹೊರಟ್ಟಿಗೆ ಸಚಿವ ಸ್ಥಾನ ಸಿಗಲ್ಲ ಎನ್ನುವ ಮಾಹಿತಿಯನ್ನು ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರು ಲಿಂಗಾಯಿತ ಪ್ರಭಾವಿ ಸ್ವಾಮೀಜಿಗಳ ಬಳಿ ಹೇಳಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಸ್ವಾಮೀಜಿಗಳ ಮೂಲಕ ಖಾತೆ ಸಿಗದ ಅತೃಪ್ತರ ಓಲೈಕೆಗೆ ಮುಂದಾಗಿದ್ದಾರಾ ಹೆಚ್‍ಡಿಕೆ ಅನ್ನೋ ಪ್ರಶ್ನೆಯೂ ಮೂಡಿದೆ.

    ಲಿಂಗಾಯಿತ ಸಮುದಾಯದವರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ, ಪಂಚಮಸಾಲಿ ಪೀಠದ ಜಯಬಸವ ಮೃತ್ಯುಂಜಯ ಸ್ವಾಮೀಜಿ ಸುದ್ದಿಗೋಷ್ಠಿ ಕರೆದಿದ್ದರು. ಆದರೆ ಸುದ್ದಿಗೋಷ್ಠಿ ಆರಂಭಕ್ಕೂ ಮುನ್ನ ದೂರವಾಣಿ ಕರೆಯೊಂದಕ್ಕೆ ಉತ್ತರಿಸಿ ಮಾತನಾಡಿದ ಸ್ವಾಮೀಜಿ, ಹೊರಟ್ಟಿಗೆ ಸಚಿವ ಸ್ಥಾನ ಕೊಡಲ್ಲ, ಈಗಾಗಲೇ ಅವರನ್ನು ಎಂಎಲ್‍ಸಿ ಮಾಡಿದ್ದೇವೆ ಅಂತಾ ಕುಮಾರಸ್ವಾಮಿ ಹೇಳಿದ್ದಾರೆ. ಮೂರು ವರ್ಷ ಬಿಟ್ಟು ನೋಡೋಣ ಅಂದಿದ್ದಾರೆ. ಆಗಲೂ ಕೊಡದೇ ಇದ್ದರೆ ಗಲಾಟೆ ಮಾಡೋಣ ಅಂದಿದ್ದಾರೆ.

    ಈ ಮೊಬೈಲ್ ಸಂಭಾಷಣೆ ಪಬ್ಲಿಕ್ ಟಿವಿಗೆ ಲಭ್ಯವಾಗಿದ್ದು ಈ ಮಾತುಕತೆ ಸಾಕಷ್ಟು ಕುತೂಹಲವನ್ನು ಸೃಷ್ಟಿಸಿದೆ. ಇನ್ನು ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತಾನಾಡಿದ ಸ್ವಾಮೀಜಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನಲ್ಲಿ ಒಟ್ಟು ಇಪ್ಪತ್ತು ಜನ ಲಿಂಗಾಯಿತ ಸಮುದಾಯದವರಿದ್ದು, ಹೆಚ್ಚು ಖಾತೆಯನ್ನು ಲಿಂಗಾಯಿತರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.  ಇದನ್ನು ಓದಿ: ನಾನು ನಾಳೆ ಸಚಿವನಾಗಲ್ಲ: ಪರೋಕ್ಷವಾಗಿ ಅಸಮಾಧಾನ ಪ್ರಕಟಿಸಿದ ಹೊರಟ್ಟಿ

  • ಬಿಜೆಪಿಯ ಆಸೆಗೆ, ಜೆಡಿಎಸ್ ಗೇಟ್ ಹಾಕಿದೆ: ಶರವಣ

    ಬಿಜೆಪಿಯ ಆಸೆಗೆ, ಜೆಡಿಎಸ್ ಗೇಟ್ ಹಾಕಿದೆ: ಶರವಣ

    ಬೆಂಗಳೂರು: ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನ ಗೆದ್ದು ಹೆಬ್ಬಾಗಿಲು ಮಾಡಿಕೊಳ್ಳುವ ಬಿಜೆಪಿಯವರ ಆಸೆ ಈಡೇರಿಲ್ಲ. ಬಿಜೆಪಿಯವರ ಹೆಬ್ಬಾಗಿಲ ಆಸೆಗೆ ಜೆಡಿಎಸ್ ಗೇಟ್ ಹಾಕಿದೆ. 2018 ರಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ ಎಂದು 3 ತಿಂಗಳ ಹಿಂದೆಯೇ ನುಡಿದ ಭವಿಷ್ಯ ನಿಜವಾಗುತ್ತಿದೆ, ಹೀಗಾಗಿ ಈ ಬಾರಿ ಕಪ್ ನಮ್ದೇ ಎಂದು ಮುಂಚಿತವಾಗಿ ಸಿಹಿ ಹಂಚಿಕೆ ಮಾಡಿದ್ದೇವೆ ಎಂದು ಜೆಡಿಎಸ್ ವಿಧಾನಪರಿಷತ್ ಸದಸ್ಯ ಶರವಣ ಹೇಳಿದ್ದಾರೆ.

    ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿರುವ ದೇವನಹಳ್ಳಿಯ ರೆಸಾರ್ಟ್ ಗೆ ಭೇಟಿ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ಮೊದಲ ಉದ್ದೇಶ ಕುಮಾರಸ್ವಾಮಿ ಸಿಎಂ ಆಗುವುದು, ಹೀಗಾಗಿ ನಾನು ಸಾಕಷ್ಟು ಪ್ರವಾಸ ಮಾಡಿದ್ದೇನೆ, ಶ್ರಮ ಪಟ್ಟಿದ್ದೇನೆ. ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಅದರಲ್ಲಿ ಎರಡನೇ ಮಾತಿಲ್ಲ ಎಂದರು.

    ನಾನು ನನ್ನ ಸಮುದಾಯದ ಏಕೈಕ ಶಾಸಕ. ನನ್ನ ಸಮುದಾಯದ ಪರವಾಗಿ ಕೆಲಸ ಮಾಡಲು ನನಗೆ ಸಚಿವ ಸ್ಥಾನ ಕೊಟ್ಟು ಅವಕಾಶ ಮಾಡಿಕೊಡಬೇಕಾಗಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇನೆ. ಬಂದ್ ಮಾಡಿದೆ ಎಂದರು.

    ಇದೇ ವೇಳೆ ಕುಮಾರಸ್ವಾಮಿ ಅವರು 5 ವರ್ಷಗಳ ಕಾಲ ಸುಭದ್ರ ಸರ್ಕಾರ ನೀಡುತ್ತಾರೆ. ಇದು ಎಚ್‍ಡಿಕೆ ಅವರ ಆಡಳಿತ ಬಿಜೆಪಿಗೆ ಎಚ್ಚರಿಕೆಯ ನೀಡಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

  • ಕುಡಿಯಲು ನೀರಿಲ್ಲ ಅಂದಿದ್ದಕ್ಕೆ ಕೈ ತಿರುವಿ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಎಂಎಲ್‍ಸಿ!

    ಕುಡಿಯಲು ನೀರಿಲ್ಲ ಅಂದಿದ್ದಕ್ಕೆ ಕೈ ತಿರುವಿ ರೈತನ ಮೇಲೆ ಹಲ್ಲೆಗೆ ಯತ್ನಿಸಿದ ಎಂಎಲ್‍ಸಿ!

    ರಾಯಚೂರು: ಮತಯಾಚನೆ ವೇಳೆ ಯುವರೈತನೋರ್ವ ಬೆಳೆಗೆ ಹಾಗೂ ಕುಡಿಯಲು ನೀರು ಕೇಳಿದಕ್ಕೆ ಎಮ್ ಎಲ್ ಸಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯ ಬೆಂಬಲಿಗರು ಹಲ್ಲೆಗೆ ಮುಂದಾದ ಘಟನೆ ರಾಯಚೂರಿನ ಅತ್ತನೂರು ಗ್ರಾಮದಲ್ಲಿ ನಡೆದಿದೆ.

    ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಹಂಪಯ್ಯ ನಾಯಕ್ ರ ಬೆಂಬಲಿಗರು ಹಾಗೂ ಎಂ.ಎಲ್.ಸಿ, ಕೆಪಿಸಿಸಿ ಉಪಾಧ್ಯಕ್ಷ ಎನ್ ಎಸ್ ಬೋಸರಾಜು ದರ್ಪ ಮೆರೆದಿದ್ದಾರೆ.

    ಕಾಂಗ್ರೆಸ್ ಪರ ಮತಯಾಚನೆಗೆ ಅತ್ತನೂರು ಗ್ರಾಮಕ್ಕೆ ತೆರಳಿದ್ದ ನಾಯಕರಿಗೆ ಭತ್ತ ಬೆಳೆಗೆ ಹಾಗೂ ಕುಡಿಯಲು ನೀರಿಲ್ಲ. ಈಗ ಮತ ಯಾಚನೆಗೆ ಬಂದಿದ್ದೀರಲ್ಲ ಅಂತ ರೈತ ಮಲ್ಲಪ್ಪ ಮಡಿವಾಳ ಖಾರವಾಗಿ ಪ್ರಶ್ನಿಸಿದ್ದಕ್ಕೆ ಕೊಪಗೊಂಡ ಎಂಎಲ್ ಸಿ ಬೋಸರಾಜ, ಸ್ವತಃ ರೈತನ ಕೈತಿರುವಿ ಹಲ್ಲೆಗೆ ಮುಂದಾಗಿದ್ದಾರೆ. ಬಳಿಕ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ಅವರ ಬೆಂಬಲಿಗರು ರೈತನಿಗೆ ಮನಸೋ ಇಚ್ಛೆ ಬೈದು ಕಳಿಸಿದ್ದಾರೆ.

    ನೀರು ಕೇಳಿದ್ದಕ್ಕೆ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ರೈತ ಮಲ್ಲಪ್ಪ ಇದೀಗ ಆರೋಪಿಸಿದ್ದಾರೆ. ಘಟನೆ ನಡೆಯುತ್ತಿದ್ದಂತೆ ಪ್ರಚಾರ ಮೊಟಕುಗೊಳಿಸಿ ಶಾಸಕ ಹಂಪಯ್ಯ ನಾಯಕ್ ಹಾಗೂ ಎನ್ ಎಸ್ ಬೋಸರಾಜ್ ಗ್ರಾಮದಿಂದ ಹೊರಟು ಹೋಗಿದ್ದಾರೆ.

    ಇತ್ತೀಚೆಗಷ್ಟೇ ಮಾನ್ವಿಯ ತಡಕಲ್ ಗ್ರಾಮದಲ್ಲಿ ಮತಯಾಚನೆ ವೇಳೆ ಶಾಸಕ ಹಂಪಯ್ಯ ನಾಯಕ್ ಗೆ ಜನ ಬೆವರಿಳಿಸಿದ್ದರು. ಎರಡು ಬಾರಿ ಶಾಸಕರಾದ್ರೂ ಏನೂ ಅಭಿವೃದ್ಧಿ ಮಾಡಿಲ್ಲ ಅಂತ ತರಾಟೆಗೆ ತೆಗೆದುಕೊಂಡಿದ್ದರು.

  • ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಮ್ಮದು- ಸಿಎಂ ಹೇಳಿಕೆಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

    ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಮ್ಮದು- ಸಿಎಂ ಹೇಳಿಕೆಗೆ ಸಿಎಂ ಇಬ್ರಾಹಿಂ ಪ್ರತಿಕ್ರಿಯೆ

    ಬೆಂಗಳೂರು: ಮದುವೆ ಮಾಡುವುದು ದೊಡ್ಡ ವಿಷಯವಲ್ಲ. ಗಂಡು ಮಾಡಿ ತಂದ ಬಳಿಕ ಉಳಿದ ಕೆಲಸ ನಾವು ಮಾಡುತ್ತೇವೆ ಅಂತ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಇಂದು ಪ್ರತಿಕ್ರಿಯಿಸಿದ್ದಾರೆ.

    ಅವರು ಇಂದು ನಗರದಲ್ಲಿ ಸಿಎಂ ಹೇಳಿಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ಮದುವೆ ಮಾಡುವುದು ಬಾರಿ ದೊಡ್ಡ ಮಾತು. ಒಂದು ಸಲ ಗಂಡು ಕೂರಿಸಿದ ಮೇಲೆ ಮುಂದಿನ ಕೆಲಸ ನಮ್ಮದು ಅಂತ ನಕ್ಕಿದ್ದಾರೆ.

    ಆದ್ರೆ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದಾಗ, ರೀ ಅದೆಲ್ಲಾ ಫೇಕ್ ನ್ಯೂಸ್. ಅವೆಲ್ಲಾ ನ್ಯೂಸ್ ಗಳಿಗೆ ಉತ್ತರ ಕೊಡಕ್ಕಾಗಲ್ಲ ಅಂತ ಹೇಳಿ ಸಿಎಂ ಜಾರಿಕೊಂಡಿದ್ದಾರೆ.

    ಇದನ್ನೂ ಓದಿ: ಮದುಮಗಳು ಚೆನ್ನಾಗಿ ಇದ್ರೆ ಗಂಡುಗಳು ಜಾಸ್ತಿ ಬರ್ತಾವೆ: ಸಿಎಂ ಇಬ್ರಾಹಿಂ ಈ ಮಾತು ಹೇಳಿದ್ಯಾಕೆ?

    ಇಬ್ರಾಹಿಂನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದೇ ಹೆಚ್ಚು. ಇನ್ನೂ ಮಂತ್ರಿ ಸ್ಥಾನ ಕೊಡ್ತೀನಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗುರವಾಗಿ ಮಾತನಾಡಿದ್ದಾರೆ. ಅವರು ತುಮಕೂರಿನಲ್ಲಿ ಸ್ಥಳೀಯ ಪತ್ರಿಕೆಯೊಂದರಲ್ಲಿ ಇಬ್ರಾಹಿಂಗೆ ಮಂತ್ರಿಸ್ಥಾನ ಸಾಧ್ಯತೆ ಎಂದು ವರದಿ ಮಾಡಲಾಗಿತ್ತು. ಈ ವರದಿ ಓದಿದ ಸಿಎಂ, ಯಾವುದೇ ಕಾರಣಕ್ಕೆ ಇಬ್ರಾಹಿಂನನ್ನು ಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಏಕವಚನದಲ್ಲೆ ಮಾತನಾಡಿದ್ದಾರೆ. ಸಿಎಂ ಸಿದ್ದರಾಮಯ್ಯರ ಈ ಮಾತಿಗೆ ಎದುರಿಗೆ ಕುಳಿತಿದ್ದ ಸಚಿವ ಜಯಚಂದ್ರ, ಶಾಸಕ ರಫಿಕ್ ಅಹಮದ್ ಸೇರಿದಂತೆ ಇತರೇ ಕಾಂಗ್ರೆಸ್ ಮುಖಂಡರು ಗೊಳ್ ಎಂದು ನಕ್ಕಿದ್ದರು.