Tag: MLC

  • ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ

    ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ: ಭಾರತಿ ಶೆಟ್ಟಿ

    ಬೆಂಗಳೂರು: ಶಿವಮೊಗ್ಗದಲ್ಲಿ ಕೊಲೆಯಾಗಿರುವ ಹಿಂದೂ ಕಾರ್ಯಕರ್ತ ಹರ್ಷನ ಮೇಲೆ ಕೊತ್ತಂಬರಿ ಸೊಪ್ಪು ತರಲು ಅಥವಾ ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಹೇಳಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಯಾರ ಹತ್ಯೆ ಆದ್ರೂ ಕೂಡ ಎಲ್ಲಾ ಪಕ್ಷ ಹೇಳೋದು ಒಂದೇ ಮಾತು ಕಠಿಣ ಶಿಕ್ಷೆ ಆಗಬೇಕು ಅಂತ. ಹರ್ಷನ ಜೀವನ ನಾನು ಹತ್ತಿರದಿಂದ ನೋಡಿದ್ದೇನೆ. ಅವರ ಮೇಲೆ ಅನೇಕ ಕೇಸ್ ಇತ್ತು. ಹರ್ಷ ಮೇಲೆ ವೈಯಕ್ತಿಕ ಕೇಸ್ ಇಲ್ಲ. ಹರ್ಷ ಮೇಲೆ ಕೊತ್ತಂಬರಿ ಸೊಪ್ಪು ತರಲು, ಹುಡುಗಿ ಜೊತೆ ಹೋದ ಕೇಸ್ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹರ್ಷ ಕುಟುಂಬಕ್ಕೆ 1 ಲಕ್ಷ ರೂ. ನೆರವು ಘೋಷಿಸಿದ ಶಾಸಕ ಅರವಿಂದ ಲಿಂಬಾವಳಿ

    ಗಣೇಶ ಮೂರ್ತಿ ಕೂರಿಸೋ ಸಂದರ್ಭದಲ್ಲಾದ ಸಂಘರ್ಷದ ಬಗ್ಗೆ ಮಾತ್ರ ಕೇಸ್ ಇರೋದು. ಮದುವೆ ಆಗು ಮಗನೆ ಅಂತ ಅವರ ತಾಯಿ ಹೇಳ್ತಿದ್ರು. ಆಗ ಅವನು ಎಲ್ಲರೂ ಮದುವೆ ಆದ್ರೆ ದೇಶಕ್ಕಾಗಿ ಕೆಲಸ ಮಾಡೋರು ಯಾರು ಅಂತ ಹೇಳುತ್ತಿದ್ದ. ಓಂ ಅನ್ನೋದ್ರ ಮೇಲೆ ಚುಚ್ಚಿ ಚುಚ್ಚಿ ಕೊಂದಿದ್ದಾರೆ ಪಾಪಿಗಳು. ಕೇಸರಿ ಶಾಲು ಅಲ್ಲಿಂದ, ಇಲ್ಲಿಂದ ತಂದ್ರು ಅನ್ನೋ ಮಾಹಿತಿ ಇರೋ ಕಾಂಗ್ರೆಸ್ ನವರಿಗೆ ಕೊಲೆ ಮಾಡೋ ಬಗ್ಗೆ ಮಾಹಿತಿ ಇರಲಿಲ್ವಾ ಎಂದು ಪ್ರಶ್ನಿಸಿ ಭಾರತಿ ಶೆಟ್ಟಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂಸಾಚಾರ, ಶಾಲಾ- ಕಾಲೇಜುಗಳಿಗೆ ರಜೆ: ಸೋಮವಾರ ನಡೆದಿದ್ದು ಏನು?

    ಹರ್ಷಗೆ ನ್ಯಾಯ ಸಿಗಬೇಕು. ಅಪರಾಧಿಗಳಿಗೆ ಕಠಿಣ ಕಠಿಣ ಶಿಕ್ಷೆ ನೀಡಬೇಕು ಎಂದು ಇದೇ ವೇಳೆ ಅವರು ಒತ್ತಾಯಿಸಿದರು.

  • MLA ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡ್ತೀನಿ – ಶಿವರಾಮೇಗೌಡ ಆಡಿಯೋ ವೈರಲ್

    MLA ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡ್ತೀನಿ – ಶಿವರಾಮೇಗೌಡ ಆಡಿಯೋ ವೈರಲ್

    ಮಂಡ್ಯ: ಎಂಪಿ ಬೈಎಲೆಕ್ಷನ್‍ಗೆ 30 ಕೋಟಿ, ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡುತ್ತೇನೆ ಎಂದು ಹೇಳಿರುವ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡರದ್ದು ಎನ್ನಲಾಗುತ್ತಿರುವ ಆಡಿಯೋ ಒಂದು ವೈರಲ್ ಆಗಿದೆ.

    ನಾಗಮಂಗಲದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಆಗಿರುವ ಶಿವರಾಮೇಗೌಡರು, ಮಂಡ್ಯ ಲೋಕಸಭಾ ಎಲೆಕ್ಷನ್‍ಗೆ 30 ಕೋಟಿ ಖರ್ಚು ಮಾಡಿದ್ದೇನೆ. ಎಂಎಲ್‍ಸಿ ಎಲೆಕ್ಷನ್‍ಗೆ 27 ಕೋಟಿ ರೂಪಾಯಿ ಖರ್ಚು ಮಾಡಿದ್ದೇನೆ. ಎಂಎಲ್‍ಎ ಎಲೆಕ್ಷನ್‍ಗೆ 30 ಕೋಟಿ ರೂಪಾಯಿ ಖರ್ಚು ಮಾಡ್ತೇನೆ ಎಂದು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತಾಡಿರುವ ಆಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ಮತ್ತೆ ಸಚಿವರ ವಿರುದ್ಧ ತಿರುಗಿ ಬಿದ್ದ ರೇಣುಕಾಚಾರ್ಯ – ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು

    ನಾಗಮಂಗಲ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಶಿವರಾಮೇಗೌಡರು ಜೆಡಿಎಸ್ ಮಹಿಳಾ ಕಾರ್ಯಕರ್ತೆ ಜೊತೆ ಮಾತನಾಡಿರುವ ಆಡಿಯೋದಲ್ಲಿ, ನನ್ನದು 8 ಸ್ಕೂಲ್ ಇದೆ, ತಿಂಗಳಿಗೆ 3 ಕೋಟಿ ಸಂಬಳ ಕೊಡ್ತೇನೆ. ನಾಗಮಂಗಲ ಎಲೆಕ್ಷನ್‍ಗೂ 10 ತಿಂಗಳ ಸಂಬಳದಷ್ಟೇ ಹಣ ಬೇಕು. ಎಂಎಲ್‍ಎ ಎಲೆಕ್ಷನ್‍ಗೆ ಅಷ್ಟೂ ದುಡ್ಡು ಖರ್ಚು ಮಾಡುತ್ತೇನೆ ಎಂದು ಮಾತನಾಡಿಕೊಂಡು ಬಳಿಕ ದಿವಂಗತ ಮಾದೇಗೌಡರ ಬಗ್ಗೆ ನಿಂದಿಸಿರುವುದು ಆಡಿಯೋದಲ್ಲಿದೆ. ಇದನ್ನೂ ಓದಿ: ಸಿ.ಎಂ.ಇಬ್ರಾಹಿಂ ಬೆನ್ನಿಗೆ ಚೂರಿ ಹಾಕಿದ್ರು ಸಿದ್ದರಾಮಯ್ಯ: ಶ್ರೀರಾಮುಲು ಟೀಕೆ

  • ಇಂದು ಪರಿಷತ್ ಚುನಾವಣೆ ಫಲಿತಾಂಶ – 3 ಪಕ್ಷಗಳಿಗೆ ಪ್ರತಿಷ್ಠೆಯ ಸಮರ

    ಇಂದು ಪರಿಷತ್ ಚುನಾವಣೆ ಫಲಿತಾಂಶ – 3 ಪಕ್ಷಗಳಿಗೆ ಪ್ರತಿಷ್ಠೆಯ ಸಮರ

    ಬೆಂಗಳೂರು: ಇಂದು ಮೇಲ್ಮನೆ ಚುನಾವಣೆಯ 25 ಸ್ಥಾನಗಳ ಚುನವಣಾ ಫಲಿತಾಂಶ ಹೊರಬೀಳಲಿದೆ. 20 ಜಿಲ್ಲಾ ಕೇಂದ್ರಗಳಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಫಲಿತಾಂಶ ಮೂರು ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ. ಈಗಾಗಲೇ ಮತ ಎಣಿಕೆ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಡಿಸೆಂಬರ್ 10ರಂದು ಮತದಾನ ನಡೆದಿತ್ತು.

    1. ಕೊಡಗು
    – ಸುಜಾ ಕುಶಾಲಪ್ಪ, ಬಿಜೆಪಿ – ಮಡಿಕೇರಿ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಸಹೋದರ
    – ಮಂಥರ್ ಗೌಡ, ಕಾಂಗ್ರೆಸ್ – ಬಿಜೆಪಿಯ ಮಾಜಿ ಸಚಿವ ವಾಲೆ ಮಂಜು ಪುತ್ರ ಇದನ್ನೂ ಓದಿ: ತೀವ್ರ ಕುತೂಹಲ ಕೆರಳಿಸಿರುವ ಪರಿಷತ್ ಚುನಾವಣಾ ಫಲಿತಾಂಶ – ಇಂದು ಮತ ಏಣಿಕೆ

    2. ದಕ್ಷಿಣ ಕನ್ನಡ
    – ಕೋಟಾ ಶ್ರೀನಿವಾಸ ಪೂಜಾರಿ, ಬಿಜೆಪಿ, – ಹಾಲಿ ಸಚಿವರು
    – ಮಂಜುನಾಥ ಭಂಡಾರಿ, ಕಾಂಗ್ರೆಸ್ – ಮಲ್ಲಿಕಾರ್ಜುನ ಖರ್ಗೆ ಕಟ್ಟಾ ಬೆಂಬಲಿಗರು

    3. ಚಿಕ್ಕಮಗಳೂರು
    -ಎಂ.ಕೆ.ಪ್ರಾಣೇಶ್, ಬಿಜೆಪಿ – ಹಾಲಿ ಉಪಸಭಾಪತಿ
    -ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ – ಸಿದ್ದರಾಮಯ್ಯ ಆಪ್ತ ವಲಯ, ಜೆಡಿಎಸ್ ಬೆಂಬಲವೂ ಇದೆ ಇದನ್ನೂ ಓದಿ: ‘ಪಾಕಿಸ್ತಾನಿ ಆಹಾರೋತ್ಸವ’ ಎಂದು ಬರೆದ ಫ್ಲೆಕ್ಸ್ ಕಿತ್ತೆಸೆದು ಬೆಂಕಿಯಲ್ಲಿ ಸುಟ್ಟ ಬಜರಂಗ ದಳ

    4. ಶಿವಮೊಗ್ಗ
    -ಡಿ.ಎಸ್.ಅರುಣ್, ಬಿಜೆಪಿ – ಮಾಜಿ ಸಭಾಪತಿ ಡಿ.ಎಸ್.ಶಂಕರಮೂರ್ತಿ ಪುತ್ರ
    -ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ – ಹಾಲಿ ಪರಿಷತ್ ಸದಸ್ಯ

    5. ಧಾರವಾಡ
    -ಪ್ರದೀಪ್ ಶೆಟ್ಟರ್, ಬಿಜೆಪಿ – ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ
    -ಸಲೀಂ ಅಹ್ಮದ್, ಕಾಂಗ್ರೆಸ್ – ಕೆಪಿಸಿಸಿ ಕಾರ್ಯಾಧ್ಯಕ್ಷ

    6. ಬೆಳಗಾವಿ
    -ಮಹಾಂತೇಶ್ ಕವಟಗಿಮಠ, ಬಿಜೆಪಿ – ಹಾಲಿ ಸದಸ್ಯ
    -ಚನ್ನರಾಜ್ ಹಟ್ಟಿ ಬಿ ಹಟ್ಟಿಹೊಳಿ, ಕಾಂಗ್ರೆಸ್ – ಕಾಂಗ್ರೆಸ್ ಪ್ರಭಾವಿ ನಾಯಕಿ ಹೆಬ್ಬಾಳ್ಕರ್ ಸಹೋದರ
    -ಲಖನ್ ಜಾರಕಿಹೊಳಿ, ಪಕ್ಷೇತರ – ರಮೇಶ್, ಸತೀಶ್ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಕಿರಿಯ ಸಹೋದರ

    7. ವಿಜಯಪುರ
    -ಪಿ.ಎಚ್.ಪೂಜಾರ್, ಬಿಜೆಪಿ – ಮಾಜಿ ಶಾಸಕ
    -ಸುನೀಲ್ ಗೌಡ ಪಾಟೀಲ್, ಕಾಂಗ್ರೆಸ್ – ಹಾಲಿ ಪರಿಷತ್ ಸದಸ್ಯ, ಮಾಜಿ ಸಚಿವ ಎಂ.ಬಿ.ಪಾಟೀಲ್ ಸಹೋದರ

    8. ಹಾಸನ
    -ಸೂರಜ್ ರೇವಣ್ಣ, ಜೆಡಿಎಸ್ – ಮಾಜಿ ಸಚಿವ ಎಚ್.ಡಿ ರೇವಣ್ಣ ಪುತ್ರ, ಪ್ರಜ್ವಲ್ ರೇವಣ್ಣ ಸಹೋದರ
    -ವಿಶ್ವನಾಥ್, ಬಿಜೆಪಿ
    -ಎಂ.ಶಂಕರ್, ಕಾಂಗ್ರೆಸ್

    9. ಮಂಡ್ಯ
    -ಅಪ್ಪಾಜಿ ಗೌಡ, ಜೆಡಿಎಸ್ – ಹಾಲಿ ಪರಿಷತ್ ಸದಸ್ಯ
    -ದಿನೇಶ್ ಗೂಳಿಗೌಡ, ಕಾಂಗ್ರೆಸ್ – ಸಚಿವ ಎಸ್.ಟಿ.ಸೋಮಶೇಖರ್ ಒಎಸ್‍ಡಿ ಆಗಿದ್ದವರು
    -ಮಂಜು ಕೆ.ಆರ್.ಪೇಟೆ, ಬಿಜೆಪಿ

    10. ಬೆಂಗಳೂರು ಗ್ರಾಮಾಂತರ
    -ಎಸ್.ರವಿ ಕಾಂಗ್ರೆಸ್ – ಹಾಲಿ ಪರಿಷತ್ ಸದಸ್ಯ
    -ರಮೇಶ್ ಗೌಡ, ಜೆಡಿಎಸ್ – ಹಾಲಿ ಪರಿಷತ್ ಸದಸ್ಯ
    -ಬಿ.ಎಂ.ನಾರಾಯಣ ಸ್ವಾಮಿ, ಬಿಜೆಪಿ

    11. ಬೆಂಗಳೂರು ನಗರ
    -ಗೋಪಿನಾಥ್ ರೆಡ್ಡಿ, ಬಿಜೆಪಿ – ಈಸಲ ಎಸ್ಟಿ ಸೋಮಶೇಖರ್, ಬೈರತಿ ಬಸವರಾಜು ಸಪೋರ್ಟ್
    -ಯೂಸುಫ್ ಷರೀಫ್, ಕಾಂಗ್ರೆಸ್ – ಡಿಕೆಶಿ ಪ್ರತಿಷ್ಠೆ, ಅತ್ಯಂತ ಸಿರಿವಂತ ಅಭ್ಯರ್ಥಿ

  • MLC ಚುನಾವಣೆ ಗೆಲ್ಲಲು ಕಾಂಗ್ರೆಸ್ ಮಿತ್ರರು ತಿಣುಕಾಡ್ತಿದ್ದಾರೆ: ಕಾರಜೋಳ ವ್ಯಂಗ್ಯ

    MLC ಚುನಾವಣೆ ಗೆಲ್ಲಲು ಕಾಂಗ್ರೆಸ್ ಮಿತ್ರರು ತಿಣುಕಾಡ್ತಿದ್ದಾರೆ: ಕಾರಜೋಳ ವ್ಯಂಗ್ಯ

    ಬೆಳಗಾವಿ: ಎಂಎಲ್‍ಸಿ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಮಿತ್ರರು ತಿಣುಕಾಡುತ್ತಿದ್ದಾರೆ. ಫಲಿತಾಂಶದ ಬಳಿಕ ಜನರಿಗೆ ಮುಖ ತೋರಿಸಲು ಕಾಂಗ್ರೆಸ್ ಮಿತ್ರರಿಗೆ ಆಗುವುದಿಲ್ಲವೆಂದು ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.

    ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಿಷತ್ ಚುನಾವಣೆ ಸಾರ್ವತ್ರಿಕ ಚುನಾವಣೆಯಲ್ಲ. ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸುವ ಚುನಾವಣೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 5150 ಗೆದ್ದಿದ್ದಾರೆ, ನಮ್ಮ ಅಭ್ಯರ್ಥಿ ಗೆಲ್ಲಿಸಲು ಕುಸ್ತಿ ಹಿಡಿಯುವ ಅವಶ್ಯಕತೆ ಇಲ್ಲ. ಕುಸ್ತಿ ಹಿಡಿಯದೆ ಕುಸ್ತಿ ಗೆದ್ದು ತೋರಿಸುತ್ತೇವೆ. 24 ಗಂಟೆ ನಮ್ಮ ಸರ್ಕಾರ ಕೋವಿಡ್ ನಿರ್ವಹಣೆಗೆ ಶ್ರಮಿಸುತ್ತಿದೆ ಎಂದರು. ಇದನ್ನೂ ಓದಿ: ಕಾರ್ಯಕ್ರದಲ್ಲಿ ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅತ್ತ ಶಿವಣ್ಣ

    ನಮ್ಮ ಕೆಲಸವನ್ನು ಕಾಂಗ್ರೆಸ್ ಕಣ್ಣು ತೆರೆದು ನೋಡಬೇಕು. ಸುಮ್ಮನೆ ಮೋದಿ, ಬೊಮ್ಮಾಯಿ, ಬಿಎಸ್ ವೈ ಟೀಕಿಸಿದ್ರೆ ಏನಾಯಿತ್ತು? ಇಷ್ಟು ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಏಕೆ ಆರೋಗ್ಯ ವ್ಯವಸ್ಥೆ ಸುಧಾರಿಸಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿಗೆ ತಿಣುಕಾಡುತ್ತಿದ್ದಾರೆ. ಡಿಸೆಂಬರ್ 14ರ ಮಧ್ಯಾಹ್ನ ಅವರೆಲ್ಲ ನಿರಾಶೆಗೋಳ್ಳುತ್ತಾರೆ. ರಾಜ್ಯದಲ್ಲಿ ಬಿಜೆಪಿಯ 15 ಅಭ್ಯರ್ಥಿಗಳು ಗೆಲುವು ದಾಖಲಿಸುತ್ತಾರೆ. ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಕೂಡ ಗೆಲ್ಲುತ್ತಾರೆ ಎಂದು ತಿಳಿಸಿದರು.

  • ಜೆಡಿಎಸ್‍ಗೆ MLC ಸಿ.ಆರ್ ಮನೋಹರ್ ಗುಡ್‍ಬೈ – ಡಿ. 2ಕ್ಕೆ ಕಾಂಗ್ರೆಸ್ ಸೇರಲು ನಿರ್ಧಾರ

    ಜೆಡಿಎಸ್‍ಗೆ MLC ಸಿ.ಆರ್ ಮನೋಹರ್ ಗುಡ್‍ಬೈ – ಡಿ. 2ಕ್ಕೆ ಕಾಂಗ್ರೆಸ್ ಸೇರಲು ನಿರ್ಧಾರ

    ಬೆಂಗಳೂರು: ಆಪರೇಷನ್ ಹಸ್ತಕ್ಕೆ ಜೆಡಿಎಸ್ ನಿಂದ ಮೊದಲ ಪತನವಾಗಿದೆ. ಜೆಡಿಎಸ್‍ಗೆ ಎಂಎಲ್‍ಸಿ ಸಿಆರ್ ಮನೋಹರ್ ಗುಡ್‍ಬೈ ಹೇಳಿದ್ದಾರೆ.

    ನಿನ್ನೆ ರಾತ್ರಿ ವಿಧಾನ ಪರಿಷತ್ ನ ಸಭಾಪತಿ ಬಸವರಾಜ್ ಹೊರಟ್ಟಿ ನಿವಾಸಕ್ಕೆ ಬಂದು ರಾಜೀನಾಮೆ ಸಲ್ಲಿಸಿದ್ದಾರೆ. ಸಿ.ಆರ್.ಮನೋಹರ್ ಚಿತ್ರ ನಿರ್ಮಾಪಕ, ಮಾಜಿ ಸಿಎಂ ಕುಮಾರಸ್ವಾಮಿ ಆಪ್ತರಾಗಿದ್ದಾರೆ. ಡಿಸೆಂಬರ್ 2 ರಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎಂದು ಆಪ್ತ ಮೂಲಗಳಿಂದ ತಿಳಿದುಬಂದಿದೆ.

    ರಾಜೀನಾಮೆ ಸ್ವೀಕರಿಸಿ ಬಳಿಕ ಮಾತನಾಡಿದ ಹೊರಟ್ಟಿ, ಸಿ.ಆರ್ ಮನೋಹರ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವತಃ ಕೊಡ್ತಿರೋ, ಒತ್ತಡಕ್ಕೆ ಕೊಡ್ತಿರೋ ಅಂತ ಕೇಳಿದ್ದೇನೆ. ಆಗ ಅವರು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಈಗಾಗಲೇ ರಾಜೀನಾಮೆಯನ್ನ ಸ್ವೀಕರಿಸಿದ್ದು, ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸುತ್ತೇನೆ ಎಂದರು. ಇದನ್ನೂ ಓದಿ: ಮೂರು ಕೃಷಿ ಕಾನೂನು ವಾಪಸ್ – ಖುಷಿಯಾಗದ ಕಾಂಗ್ರೆಸ್ ನಾಯಕರು

    ಇತ್ತ ರಾಜೀನಾಮೆ ನೀಡಿದ ನಂತರ ಮಾತನಾಡಿದ ಸಿ.ಮನೋಹರ್, ನನ್ನ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಅಸೆಂಬ್ಲಿಗೆ ಹೋಗೋಕೆ ಮನಸ್ಸಿದೆ. ಡಿಸೆಂಬರ್ 2ಕ್ಕೆ ತೀರ್ಮಾನ ಮಾಡಿ ನಿರ್ಧಾರ ಹೇಳುತ್ತೇನೆ. ಪಕ್ಷಕ್ಕೂ ರಾಜೀನಾಮೆಯನ್ನ ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸುತ್ತೇನೆ ಎಂದು ತಿಳಿಸಿದರು.

  • ಪರಿಷತ್ ಚುನಾವಣೆ – ಬಳ್ಳಾರಿಯಿಂದ ಟಿಕೆಟ್ ಪಡೆಯಲು ದೆಹಲಿಯಲ್ಲಿ ಕೈ ನಾಯಕರು ಲಾಬಿ

    ಪರಿಷತ್ ಚುನಾವಣೆ – ಬಳ್ಳಾರಿಯಿಂದ ಟಿಕೆಟ್ ಪಡೆಯಲು ದೆಹಲಿಯಲ್ಲಿ ಕೈ ನಾಯಕರು ಲಾಬಿ

    ನವದೆಹಲಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆ ಕಾವು ಹೆಚ್ಚಾಗುತ್ತಿದೆ. ಕಾಂಗ್ರೆಸ್‍ನಿಂದ ಟಿಕೆಟ್ ಪಡೆಯಲು ಅಭ್ಯರ್ಥಿಗಳು ಸಾಕಷ್ಟು ಪ್ರಯತ್ನ ಆರಂಭಿಸಿದ್ದಾರೆ. ಬಳ್ಳಾರಿಯಿಂದ ಟಿಕೆಟ್‍ಗಾಗಿ ಮುಂಡರಗಿ ನಾಗರಾಜ್ ಬಾರಿ ಪ್ರಯತ್ನ ನಡೆಸಿದ್ದಾರೆ.

    ಮುಂಡರಗಿ ನಾಗರಾಜ್ ಪರವಾಗಿ ದೆಹಲಿಯಲ್ಲಿ ಲಾಬಿ ಶುರುವಾಗಿದ್ದು, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರನ್ನು ಮಾಜಿ ಸಚಿವ ಸಂತೋಷ್ ಲಾಡ್ ಭೇಟಿಯಾಗಿದ್ದು, ದಲಿತ ಎಡ ಸಮುದಾಯದ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಮುಂಡರಗಿ ನಾಗರಾಜ್ ಟಿಕೇಟ್ ನೀಡುವಂತೆ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವು ಎಡ ಸಮುದಾಯದ ನಾಯಕರು ನೀಡಿರುವ ಶಿಫಾರಸು ಪತ್ರದೊಂದಿಗೆ ಸೋನಿಯಾಗಾಂಧಿ ಭೇಟಿ ಮಾಡಿರುವ ಸಂತೋಷ್ ಲಾಡ್ ಟಿಕೆಟ್‍ಗಾಗಿ ಬಿಗಿ ಪಟ್ಟು ಹಿಡಿದಿದ್ದಾರೆ.

    ಇನ್ನು ಮತ್ತೊಂದು ಕಡೆ ಬಳ್ಳಾರಿಯಿಂದ ಕೆ.ಸಿ ಕೊಂಡಯ್ಯಗೆ ಟಿಕೆಟ್ ನೀಡುವಂತೆ ಮತ್ತೊಂದು ಬಣ ಒತ್ತಾಯಿಸಿದೆ. ಈಗಾಗಲೇ ಎರಡು ಬಾರಿ ಪರಿಷತ್ ಸದಸ್ಯರಾಗಿರುವ ಕೊಂಡಯ್ಯ ಅವರಿಗೆ ಟಿಕೆಟ್ ನೀಡುವಂತೆ ಸ್ಥಳೀಯ ನಾಯಕರು ಒತ್ತಾಯಿಸಿದ್ದಾರೆ. ಕೆ.ಸಿ ಕೊಂಡಯ್ಯ ಅವರಿಗೆ ಹಿರಿಯ ನಾಯಕ, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬೆಂಬಲ ಇದೆ ಎನ್ನಲಾಗಿದೆ. ಇದನ್ನೂ ಓದಿ: ಸೋನಿಯಾಗಾಂಧಿ ಭೇಟಿಯಾದ ಡಿಕೆಶಿ – ಸಂಜೆ ವೇಳೆಗೆ ಕಾಂಗ್ರೆಸ್‍ನಿಂದ ಅಭ್ಯರ್ಥಿಗಳ ಘೋಷಣೆ

    ಈ ಸಂಬಂಧ ದೆಹಲಿಯಲ್ಲಿ ಮಾತನಾಡಿರುವ ಸಂತೋಷ್ ಲಾಡ್, ಬಳ್ಳಾರಿಯಿಂದ ಮುಂಡರಗಿ ನಾಗರಾಜ್ ಅವರಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ಎಡ ಸಮುದಾಯ ಬಳ್ಳಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಿಂದೆ ನಾವು ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದೆವು. ಈ ಹಿನ್ನಲೆಯಲ್ಲಿ ಹೈಕಮಾಂಡ್ ಗೆ ಮನವಿ ಮಾಡುತ್ತಿದ್ದೇವೆ, ಸೋನಿಯಾಗಾಂಧಿ ಸೇರಿ ಎಲ್ಲ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿದೆ. ರಾಜ್ಯದ ಎಡ ಸಮುದಾಯದ ಎಲ್ಲ ನಾಯಕರು ಬೆಂಬಲಿಸಿದ್ದಾರೆ ಎಂದರು.

  • ಹೆಚ್‍ಡಿಡಿ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ: ಗೋಪಾಲಸ್ವಾಮಿ

    ಹೆಚ್‍ಡಿಡಿ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ: ಗೋಪಾಲಸ್ವಾಮಿ

    ಹಾಸನ: ಎಂಎಲ್‍ಸಿ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರ ಕುಟುಂಬದವರಿಗೆ ಟಿಕೆಟ್ ಕೊಟ್ಟರೆ ನಮ್ಮ ಅಭ್ಯರ್ಥಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಜೆಡಿಎಸ್‍ನ ಕುಟುಂಬ ರಾಜಕಾರಣದಿಂದ ನಾವು ಗೆಲುವಿಗೆ ಹತ್ತಿರವಾಗಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಎಂಎಲ್‍ಸಿ ಗೋಪಾಲಸ್ವಾಮಿ ಹಾಸನದ ಚನ್ನರಾಯಪಟ್ಟಣದಲ್ಲಿ ವ್ಯಂಗ್ಯವಾಡಿದ್ದಾರೆ.

    ಹಾಸನದಲ್ಲಿ ಎಂಎಲ್‍ಸಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಜೆಡಿಎಸ್‍ನಿಂದ ಭವಾನಿ ರೇವಣ್ಣ ಅಥವಾ ಸೂರಜ್ ರೇವಣ್ಣ ಇಬ್ಬರಲ್ಲಿ ಒಬ್ಬರ ಹೆಸರು ಅಂತಿಮಗೊಳ್ಳಲಿದೆ. ಕಾಂಗ್ರೆಸ್‍ನಿಂದ ಹಾಲಿ ಎಂಲ್‍ಸಿ ಎಂ.ಎ.ಗೋಪಾಲಸ್ವಾಮಿ ಅಥವಾ ಎಂ.ಶಂಕರ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಮಾತನಾಡಿದ ಗೋಪಾಲಸ್ವಾಮಿ ಅವರು, ನನಗೆ ಆರು ವರ್ಷ ಸಹಕಾರ ನೀಡಿದ ಎಲ್ಲರಿಗೂ ಅಬಾರಿಯಾಗಿದ್ದೇನೆ. ಈಗಾಗಲೇ ಡಿ.ಕೆ.ಸುರೇಶ್, ಧೃವನಾರಾಯಣ್ ನೇತೃತ್ವದಲ್ಲಿ ಹಾಸನ ಜಿಲ್ಲೆಯ ನೂರು ಜನ ಕಾಂಗ್ರೆಸ್ ಮುಖಂಡರನ್ನು ಕರೆದು ಸಭೆ ನಡೆಸಿದ್ದಾರೆ. ಹಾಸನದಿಂದ ನನ್ನ ಮತ್ತು ಎಮ್.ಶಂಕರ್ ಹೆಸರು ಅಂತಿಮಗೊಳಿಸಿದೆ. ಪಕ್ಷ ಹೇಳಿದರೆ ಮತ್ತೆ ಸ್ಪರ್ಧಿಸುತ್ತೇನೆ. ಪಕ್ಷ ಹೊಸಬರಿಗೆ ಅವಕಾಶ ಕೊಡಬೇಕು ಎಂಬುದಿದೆ. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ

    ಟಿಕೆಟ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ, ಇಲ್ಲಾ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೋ ಅವರ ಗೆಲುವಿಗೆ ಶ್ರಮಿಸುತ್ತೇನೆ. ಡಿಕೆಶಿ, ಸಿದ್ದರಾಮಯ್ಯ ಭಾನುವಾರ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಅಭ್ಯರ್ಥಿ ಯಾರೆಂದು ಅಂತಿಮ ತೀರ್ಮಾನ ಆಗುತ್ತೆ. ಪಕ್ಷದ ಸೂಚನೆಯಂತೆ ಇಬ್ಬರು ಈಗಾಗಲೇ ಮೂರು ತಾಲೂಕುಗಳಿಗೆ ಭೇಟಿ ನೀಡಿದ್ದೇವೆ. ಜೆಡಿಎಸ್ ಪಕ್ಷದಂತೆ ಒಂದು ಓನರ್ ಪಕ್ಷವಾದರೆ ಯಾರು ಹೇಳುತ್ತಾರೋ ಅದು ತೀರ್ಮಾನ ಆಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ಕಳೆದ ಬಾರಿ ಜೆಡಿಎಸ್ ಶಾಸಕರು, ಸಂಸದರಿದ್ದರೂ ನಾನು ಗೆದ್ದಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡರು. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್‍ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ

  • ಪರಿಷತ್‍ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ ಸಿಕ್ಕಿ ಬಿದ್ದ ಕಾಂಗ್ರೆಸ್‌ ಎಂಎಲ್‍ಸಿ ರಾಥೋಡ್

    ಪರಿಷತ್‍ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ ಸಿಕ್ಕಿ ಬಿದ್ದ ಕಾಂಗ್ರೆಸ್‌ ಎಂಎಲ್‍ಸಿ ರಾಥೋಡ್

    ಬೆಂಗಳೂರು: ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್  ಮೇಲೆ  ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.

    ಪ್ರಶ್ನೋತ್ತರ ಅವಧಿ ವೇಳೆ ಮೊಬೈಲಿನಲ್ಲಿ ಪ್ರಕಾಶ್ ರಾಥೋಡ್ ಮೊಬೈಲ್ ವೀಕ್ಷಣೆ ಮಾಡುತ್ತಿದ್ದರು. ಈ ವೇಳೆ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋಗಳು ಇರುವುದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಈ ವಿಚಾರದ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಥೋಡ್, ನಾನು ಉದ್ದೇಶ ಪೂರ್ವಕವಾಗಿ ಏನನ್ನು ನೋಡಿಲ್ಲ. ನನ್ನ ಮೊಬೈಲ್ ನಲ್ಲಿ ಅಂತಹ ಯಾವುದೇ ವಿಡಿಯೋ ಫೋಟೋ ಇರಲಿಲ್ಲ. ಗ್ರೂಪ್ ನಲ್ಲಿ ಯಾರಾದರು ಏನಾದರು ಕಳುಹಿಸಿರಬಹುದು. ನಾನು ಡೌನ್‍ಲೋಡ್ ಮಾಡಿಲ್ಲ ಮೆಮೊರಿ ಫುಲ್ ಆಗಿದ್ದನ್ನು ಡಿಲೀಟ್ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

    ಇಂದು ಸದನದಲ್ಲಿ ನನ್ನ ಪ್ರಶ್ನೆ ಇತ್ತು. ಅದರ ಬಗ್ಗೆ ಮಾಹಿತಿ ಹುಡುಕುತ್ತಿದ್ದೆ. ಅದನ್ನು ಬಿಟ್ಟು ನಾನು ಬೇರೆ ಯಾವುದೇ ಚಿತ್ರ ಅಥವಾ ವಿಡಿಯೋ ವೀಕ್ಷಿಸಿಲ್ಲ. ನನಗೆ ಗೊತ್ತಿಲ್ಲದೆ ಅಂದಹದ್ದು ಏನಾದರೂ ಕಂಡಿದ್ದರೆ ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ರಾಥೋಡ್ ಹೇಳಿದ್ದಾರೆ.

    ರಾಥೋಡ್ ಅವರು ಮೊಬೈಲಿನ ಗ್ಯಾಲರಿ ಹೋಗಿದ್ದಾರೆ. ಈ ವೇಳೆ ಸ್ಕ್ರಾಲ್ ಮಾಡುವಾಗ ಅಶ್ಲೀಲ ವಿಡಿಯೋಗಳು ಕಾಣಿಸಿದೆ. ವಿಡಿಯೋಗಳು ಎಲ್ಲವೂ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • ಕಾಂಗ್ರೆಸ್ ಎಂಎಲ್‍ಸಿ ಪ್ರಸನ್ನ ಕುಮಾರ್ ಪುತ್ರ ಹೃದಯಾಘಾತದಿಂದ ನಿಧನ

    ಕಾಂಗ್ರೆಸ್ ಎಂಎಲ್‍ಸಿ ಪ್ರಸನ್ನ ಕುಮಾರ್ ಪುತ್ರ ಹೃದಯಾಘಾತದಿಂದ ನಿಧನ

    ಶಿವಮೊಗ್ಗ: ಜಿಲ್ಲೆಯ ಕಾಂಗ್ರೆಸ್ ಮುಖಂಡ ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಪುತ್ರ ಸುಹಾಸ್ (31) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ಮೃತ ಸುಹಾಸ್‍ಗೆ ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು, ಮನೆಯಲ್ಲೇ ಕುಸಿದು ಬಿದ್ದಿದ್ದರು. ನಂತರ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಹಾಸ್ ಕೊನೆಯುಸಿರು ಎಳೆದಿದ್ದಾರೆ. ಸುಹಾಸ್ ಗೆ ಕಳೆದ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿತ್ತು.

    ಎಂಎಲ್‍ಸಿ ಪ್ರಸನ್ನ ಕುಮಾರ್ ಅವರ ತೋಟದಲ್ಲಿ ಮೃತ ಪುತ್ರನ ಅಂತ್ಯಕ್ರಿಯೆ ನೆರವೇರಿಸಲಾಯಿತು. ಮೃತ ಸುಹಾಸ್ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.

  • ಹವಾಮಾನ ವೈಪರೀತ್ಯ- ದಾರಿ ಮಧ್ಯೆ ಲ್ಯಾಂಡ್ ಆದ ಹೆಲಿಕಾಪ್ಟರ್

    ಹವಾಮಾನ ವೈಪರೀತ್ಯ- ದಾರಿ ಮಧ್ಯೆ ಲ್ಯಾಂಡ್ ಆದ ಹೆಲಿಕಾಪ್ಟರ್

    ಶಿವಮೊಗ್ಗ: ಹವಾಮಾನ ವೈಪರಿತ್ಯದಿಂದಾಗಿ ಎಂಎಲ್‍ಸಿ ರಘು ಆಚಾರ್ ಸಂಚಾರ ಮಾಡುತ್ತಿದ್ದ ಹೆಲಿಕಾಪ್ಟರ್ ದಾರಿ ಮಧ್ಯದಲ್ಲಿಯೇ ಲ್ಯಾಂಡ್ ಆದ ಘಟನೆ ಇಂದು ಜಿಲ್ಲೆಯ ಭದ್ರಾವತಿ ತಾಲೂಕಿನ ಅಂಚೆ ಸಿದ್ದಾಪುರದಲ್ಲಿ ನಡೆದಿದೆ.

    ಶಿವಮೊಗ್ಗದಲ್ಲಿ ಇಂದು ನಡೆದ ಶಾಸಕ ಬಿ.ಕೆ ಸಂಗಮೇಶ್ ಅವರ ಸಹೋದರನ ಪುತ್ರಿಯ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಎಂಎಲ್‍ಸಿ ರಘು ಆಚಾರ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೆ ಹೆಲಿಕಾಪ್ಟರ್ ಭದ್ರಾವತಿ ಸಮೀಪ ಬರುತ್ತಿದ್ದಂತೆ ಮೋಡ ಕವಿದ ವಾತಾವರಣ ಇದ್ದ ಪರಿಣಾಮ ಅಂಚೆ ಸಿದ್ದಾಪುರ ಗ್ರಾಮದ ಶಾಲೆಯೊಂದರ ಮೈದಾನದಲ್ಲಿಯೇ ಫೈಲೆಟ್ ನ ಸಮಯ ಪ್ರಜ್ಞೆಯಿಂದ ಲ್ಯಾಂಡ್ ಆಗಿದೆ.

    ನಂತರ ಮಾಧ್ಯಮದವರ ಜೊತೆ ಮಾತನಾಡಿದ ರಘು ಆಚಾರ್, ದೇವರ ದಯೆಯಿಂದ ಯಾವುದೇ ಅವಘಡ ಸಂಭವಿಸಲಿಲ್ಲ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ವಾಪಸ್ ಬಂದಿದ್ದೇನೆ. ನಾನು 9 ವರ್ಷಗಳಿಂದ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಇಂತಹ ಸಮಸ್ಯೆ ಯಾವಾಗಲೂ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಕಾಣಿಸಿಕೊಂಡಿದ್ದು ಕೆಲಕಾಲ ಗಾಬರಿಯಾಗುವಂತೆ ಮಾಡಿತ್ತು ಎಂದಿದ್ದಾರೆ.