Tag: mlc ravikumar

  • ಸಂಪುಟದ ಮುಂದಿಟ್ಟು ತಮಗೆ ಬೇಕಾದವ್ರ ಕೇಸ್ ತೆಗೆದು ಹಾಕಿದ್ದಾರೆ, ಬಿಜೆಪಿ ಇದನ್ನು ಒಪ್ಪಲ್ಲ: ರವಿಕುಮಾರ್

    ಸಂಪುಟದ ಮುಂದಿಟ್ಟು ತಮಗೆ ಬೇಕಾದವ್ರ ಕೇಸ್ ತೆಗೆದು ಹಾಕಿದ್ದಾರೆ, ಬಿಜೆಪಿ ಇದನ್ನು ಒಪ್ಪಲ್ಲ: ರವಿಕುಮಾರ್

    ಬೆಂಗಳೂರು: ತಮಗೆ ಬೇಕಾಗಿರುವವರ ಕೇಸ್‌ಗಳನ್ನು ಸಂಪುಟದಲ್ಲಿ ಇಟ್ಟು ತೆಗೆದು ಹಾಕುವ ಕೆಲಸ ಸರಿಯಲ್ಲ ಎಂದು ಪರಿಷತ್ ಸದಸ್ಯ ರವಿಕುಮಾರ್ (MLC Ravikumar) ಆಕ್ರೋಶ ಹೊರಹಾಕಿದ್ದಾರೆ.

    ಬಿಜೆಪಿ (BJP) ಕಚೇರಿಯಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ಹಿಂದೆ ಭಯೋತ್ಪಾದನೆ ರೀತಿಯ ಚಟುವಟಿಕೆ ಮಾಡಿರುವಂತವರ ಕೇಸ್‌ಗಳನ್ನು ಎಲ್ಲಾ ತೆಗೆದು ಹಾಕಿದ್ದರು. ತಮ್ಮ ವೋಟ್ ಬ್ಯಾಂಕ್ ರಕ್ಷಿಸಿಕೊಳ್ಳಲು ಈ ರೀತಿ ಮಾಡಿದ್ದಾರೆ. ಏನೇ ತಪ್ಪು ಮಾಡಿದ್ದರೂ ತಮಗೆ ಬೇಕಾದವರ ಕೇಸ್ ತೆಗೆದು ಹಾಕುವುದನ್ನು ಬಿಜೆಪಿ ಒಪ್ಪಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ನಮ್ಮದಷ್ಟೆ ಅಲ್ಲ, ಬಿಜೆಪಿಯವರ ಕೇಸ್ ಕೂಡ ವಾಪಸ್ – 62 ಪ್ರಕರಣ ವಾಪಸ್‌ಗೆ ಡಿಕೆಶಿ ಸಮರ್ಥನೆ

    ಮತ ಪತ್ರದ ಮೂಲಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರಿಸಿದ ವಿಚಾರವಾಗಿ, ನಿಮ್ಮ ಸರ್ಕಾರವೇ ಇವಿಎಂ ಮೂಲಕ ಅಧಿಕಾರಕ್ಕೆ ಬಂದಿದೆ. ಇವಿಎಂ‌ನಲ್ಲಿ ಏನೂ‌ ಅಕ್ರಮ ಸಾಧ್ಯವಿಲ್ಲ ಎಂದು ಅನೇಕ ಕೋರ್ಟ್ ತೀರ್ಪು ಬಂದಿದೆ. ರಾಜ್ಯ ಸರ್ಕಾರ ಮತ್ತೆ ಪುರಾತನ ಯುಗಕ್ಕೆ ಹೋಗುತ್ತಿದೆ. ರಾಹುಲ್ ಗಾಂಧಿ ಹೇಳಿದರು ಎಂದು ಮತ ಪತ್ರ ತೆಗೆದುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ನಾವು ಜನರ ಬಳಿ ಹೋಗುತ್ತಿದ್ದೇವೆ. ಕಳ್ಳನ ಮನಸ್ಸು ಹುಳ್ಳುಳ್ಳಗೆ ಎಂಬ ರೀತಿ ಸರ್ಕಾರ ಏನೇನೋ ತಪ್ಪು ಮಾಡಲು ಹೊರಟಿದೆ ಎಂದು ವ್ಯಂಗ್ಯವಾಡಿದ್ದಾರೆ.

    ಇದೇ ವೇಳೆ ವ್ಯವಸ್ಥಿತವಾಗಿ ದೇಸಾಯಿ ಆಯೋಗದ ವರದಿಯಲ್ಲಿ ಸಿದ್ದರಾಮಯ್ಯ (Siddaramaiah) ಅವರಿಗೆ ಕ್ಲೀನ್ ಚಿಟ್ ಕೊಡಲು ಷಡ್ಯಂತ್ರ ಮಾಡಿದ್ದಾರೆ. ಸಿದ್ದರಾಮಯ್ಯ ತಪ್ಪು ಮಾಡಿರುವುದು ನೂರಕ್ಕೆ ನೂರು ಸತ್ಯ. ಕ್ಲೀನ್ ಚಿಟ್ ಕೊಡುವಲ್ಲಿ ಸಾಕಷ್ಟು ನೀರು ಹರಿಸಿದ್ದಾರೆ. ತಾವೇ ನೇಮಿಸಿದ ಸಮಿತಿಯಿಂದ ಕ್ಲೀನ್ ಚಿಟ್ ಪಡೆಯುವುದು ದೊಡ್ಡ ವಿಷಯವಲ್ಲ. ಅವರು ಎಲ್ಲಾ ಭ್ರಷ್ಟರಿಗೆ ಆಶ್ರಯ ಕೊಟ್ಟಿರುವಂತಹ ಸಿಎಂ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಅಧಿಕಾರ ದುರ್ಬಳಕೆ ಮೂಲಕ ಚುನಾವಣೆ ಗೆಲ್ಲುವ ಹುನ್ನಾರ, ಬ್ಯಾಲೆಟ್ ವಿರೋಧಿಸುತ್ತೇವೆ: ಅಶ್ವಥ್ ನಾರಾಯಣ

  • ಕಾಂಗ್ರೆಸ್ಸಿಗರು ಮಾಡ್ತಿರೋದು ಪಾದಯಾತ್ರೆ ಅಲ್ಲ, ಪಾಪಗಳ ಪ್ರಾಯಶ್ಚಿತ ಯಾತ್ರೆ: ರವಿಕುಮಾರ್

    ಕಾಂಗ್ರೆಸ್ಸಿಗರು ಮಾಡ್ತಿರೋದು ಪಾದಯಾತ್ರೆ ಅಲ್ಲ, ಪಾಪಗಳ ಪ್ರಾಯಶ್ಚಿತ ಯಾತ್ರೆ: ರವಿಕುಮಾರ್

    ಚಿಕ್ಕಬಳ್ಳಾಪುರ: ಕಾಂಗ್ರೆಸ್‍ನಿಂದ ಹಮ್ಮಿಕೊಂಡಿರುವುದು ಮೇಕೆದಾಟು ಪಾದಯಾತ್ರೆಯಲ್ಲ ಬದಲಿಗೆ ಕಾಂಗ್ರೆಸ್ಸಿನ ಮತ ಯಾತ್ರೆ ಹಾಗೂ ಪಾಪಗಳ ಪ್ರಾಯಶ್ಚಿತ ಯಾತ್ರೆ ಎಂದು ವಿಧಾನಪರಿಷತ್ ಸದಸ್ಯ ರವಿಕುಮಾರ್ ಟೀಕಿಸಿದ್ದಾರೆ.

    ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಿದಲ್ಲಿದ್ದಾಗ ಯೋಜನೆಯನ್ನು ಅನುಷ್ಠಾನಕ್ಕೆ ತರುವುದನ್ನು ಬಿಟ್ಟು ವಿನಾಕಾರಣ ಕಾಲಹರಣ ಮಾಡಿದರು. ಈಗ ಮತಕ್ಕಾಗಿ ಮೇಕೆದಾಟು ಪಾದಯಾತ್ರೆಯನ್ನು ನಡೆಸುತ್ತಿದೆ. ಸಜ್ಜನರು ಆಗಿರುವ ಸಚಿವ ಗೋವಿಂದ್ ಕಾರಜೋಳ ಬಗ್ಗೆ ಕಾಂಗ್ರೆಸ್ ಮುಖಂಡರು ಏಕವಚನದಲ್ಲಿ ಮಾತಾಡಿರುವುದು ಖಂಡನೀಯವಾಗಿದೆ ಎಂದು ಕಿಡಿಕಾರಿದರು.

    ಮೇಕೆದಾಟು ಯೊಜನೆ ಪ್ರಾರಂಭವಾಗಿದ್ದು ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲ, ನಮ್ಮ ಕಾಲದಲ್ಲಿ ಎಂದ ಅವರು ತಮಿಳುನಾಡಿನಲ್ಲಿ ಸ್ಟಾಲಿನ್‍ಗೆ ಸಹಕಾರ ನೀಡಿ ಸರ್ಕಾರ ಮಾಡಿದ್ದೀರಿ. ಈಗ ಅವರ ಮನೆಯ ಮುಂದೆ ಹೋಗಿ ಪ್ರತಿಭಟನೆ ನಡೆಸಿ ಎಂದು ಸವಾಲು ಹಾಕಿದರು.  ಇದನ್ನೂ ಓದಿ: ಸ್ಲಂ ಬೋರ್ಡ್‍ನಿಂದ ಕೈಗೆತ್ತಿಕೊಂಡಿರುವ 50 ಮನೆಗಳನ್ನು ಜ.30 ರೊಳಗೆ ಪೂರ್ಣಗೊಳಿಸಬೇಕು: ಗೋಪಾಲಯ್ಯ

    ಕಾಂಗ್ರೆಸ್ ಅವರು ಮಾಡುತ್ತಿರುವ ಪಾದಯಾತ್ರೆ ಅತ್ಯಂತ ಬೇಜಾವ್ದಾರಿತನದಿಂದ ಕೂಡಿದೆ. ನಾವು ನಿಮ್ಮ ವಿರುದ್ಧ ಸಾವಿರಾರು ಜನರನ್ನು ಸೇರಿಸಿ ಪ್ರತಿಭಟನೆ ಮಾಡಬಹುದು. ಆದರೆ ನಮಗೆ ಜವಬ್ದಾರಿ ಇರುವುದರಿಂದ ಈ ರೀತಿ ಕೆಲಸ ಮಾಡುವುದಿಲ್ಲ ಎಂದು ಹೇಳಿದರು.

    ಪಾದಾಯಾತ್ರೆಯಲ್ಲಿ ಭಾಗವಿಸಿದವರು ಟೆಸ್ಟ್ ಮಾಡಿಸಿಕೊಳ್ಳಬೇಕು. ಶಿಸ್ತು, ಕಾಳಜಿ ಇದ್ದರೆ ಡಿ.ಕೆ. ಶಿವಕುಮಾರ್ ಅವರು ಸ್ವತಃ ಕೋವಿಡ್ ಟೆಸ್ಟ್‍ಗೆ ಒಳಪಡುತ್ತಾರೆ. ಇಲ್ಲವಾದರೆ ನಿಮ್ಮನ್ನು ಬೇಜಾವಬ್ದಾರಿತನದ ಅಧ್ಯಕ್ಷ ಅಂತ ಕರೆಯಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕೋವಿಡ್ ಮುಗಿದ ನಂತರ ಮೇಕೆದಾಟಿನಲ್ಲೇ ಬಿದ್ದು ಒದ್ದಾಡಿ, ಯಾರು ಬೇಡ ಅಂತಾರೆ: ಈಶ್ವರಪ್ಪ

    ಕಾಂಗ್ರೆಸ್ ಅವರಿಗೆ ಕೋವಿಡ್ ಎಷ್ಟೇ ಹೆಚ್ಚಾದರೂ ಅದರ ಬಗ್ಗೆ ಯೋಚನೆ ಇಲ್ಲ. ಅವರಿಗೆ ತಮ್ಮ ಪಾದಯಾತ್ರೆ ಯಶಸ್ವಿ ಆಗುವುದಷ್ಟೇ ಮುಖ್ಯವಾಗಿದೆ. ಆದರೆ ಡಿ.ಕೆ. ಶಿವಕುಮಾರ್ ಇಂತಹ ಒಂದಲ್ಲ ನೂರು ಪಾದಯಾತ್ರೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.