Tag: MLC Rajendra Rajanna

  • ರಾಜೇಂದ್ರ ಕೊಲೆ ಸುಪಾರಿ ಕೇಸ್ – 9 ದಿನ ಕಳೆದರೂ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸದ ಪೊಲೀಸರು

    ರಾಜೇಂದ್ರ ಕೊಲೆ ಸುಪಾರಿ ಕೇಸ್ – 9 ದಿನ ಕಳೆದರೂ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸದ ಪೊಲೀಸರು

    – ಅಮಾಯಕರನ್ನು ಫಿಟ್ ಮಾಡುವ ತಂತ್ರವೇ?

    ತುಮಕೂರು: ಎಂಎಲ್‌ಸಿ ರಾಜೇಂದ್ರ ರಾಜಣ್ಣರ (MLC Rajendra Rajanna) ಕೊಲೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನ ಆರೋಪಿಗಳನ್ನು ಬಂಧಿಸಿ 9 ದಿನ ಕಳೆದರೂ ಪೊಲೀಸರು ಕೋರ್ಟಿಗೆ ಹಾಜರುಪಡಿಸದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಆರೋಪಿಗಳಾದ ಸೋಮು, ಅಮಿತ್, ಭರತ್, ಯತೀಶ್ ಹಾಗೂ ಆಡಿಯೋದಲ್ಲಿ ಮಾತನಾಡಿದ ಮಹಿಳೆ ಪುಷ್ಪಾ, ಆಕೆಯ ಸ್ನೇಹಿತೆ ಯಶೋಧಾ ಸೇರಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿಸಿ 9 ದಿನ ಕಳೆದಿದೆ. ಬಂಧನವಾದ 24 ಗಂಟೆಯೊಳಗೆ ಕೋರ್ಟ್ (Court) ಮುಂದೆ ಹಾಜರುಪಡಿಸಬೇಕಿತ್ತು. ಆದರೆ ಇಲ್ಲಿಯವರೆಗೂ ಯಾವುದೇ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸದೇ ಲೋಪ ಎಸಗಿದ್ದಾರೆ. ಎಲ್ಲಾ ಆರೋಪಿಗಳ ಬಳಿ ಬಲವಂತವಾಗಿ ವಿಚಾರಣೆಗೆ ಬಂದು ವಾಪಸ್ ಹೋಗಿದ್ದೇವೆ ಎಂದು ಪ್ರತಿದಿನ ಬರೆಸಿಕೊಂಡು ಸಹಿ ಹಾಕಿಸಿಕೊಳ್ಳುತಿದ್ದಾರೆ ಎಂದು ಬಂಧಿತರ ಸಂಬಂಧಿಕರು ಆರೋಪಿಸಿದ್ದಾರೆ. ಇದನ್ನೂ ಓದಿ: ದೇಶ ತೊರೆಯಿರಿ ಅಥವಾ ಜೈಲು ಶಿಕ್ಷೆ ಅನುಭವಿಸಿ: ವಿದೇಶಿ ಭಯೋತ್ಪಾದಕರಿಗೆ ಅಮೆರಿಕ ಎಚ್ಚರಿಕೆ

    ಅಲ್ಲದೇ ಏ5 ಆರೋಪಿ ಯತೀಶ್ ಅವರ ಸಂಬಂಧಿಗಳು ಪೊಲೀಸರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದಾರೆ. ಇವರ ಅರ್ಜಿ ಪುರಸ್ಕರಿಸಿದ ಕೋರ್ಟ್ ಪೊಲೀಸರಿಗೆ ಛಿಮಾರಿ ಹಾಕಿ ಕಳುಹಿಸಿದೆ. ಕೋರ್ಟ್ ಎಚ್ಚರಿಕೆಯಿಂದ ಎಚ್ಚೆತ್ತುಕೊಂಡ ಪೊಲೀಸರು ಯತೀಶ್‌ನನ್ನು ಬಿಟ್ಟು ಕಳುಹಿಸಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ನಿಮ್ಮ ಪಾತ್ರ ಇಲ್ಲ ಎಂದು ಹಿಂಬರಹ ಕೊಟ್ಟು ಬಿಡುಗಡೆಗೊಳಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ಕಟರ್ ಬಳಸಿ ಎಟಿಎಂನಿಂದ 18 ಲಕ್ಷ ರೂ. ದೋಚಿದ ಖದೀಮರು

    ಅಮಾಯಕರನ್ನು ಫಿಟ್ ಮಾಡಲು ಒತ್ತಡ?
    ಕೊಲೆ ಸುಪಾರಿ ಪ್ರಕರಣ ಒಂದು ಕಟ್ಟು ಕಥೆ ಎಂಬುದು ಆರೋಪಿಗಳ ವಿಚಾರಣೆಯಿಂದ ಪೊಲೀಸರಿಗೆ ದೃಢಪಟ್ಟಿದೆ. ಪುಷ್ಪಾ ಎಂಬ ಮಹಿಳೆ ತನ್ನ ಸ್ನೇಹಿತ ಸೋಮು ಮೇಲಿನ ವೈಮನಸ್ಸಿನಿಂದ ಅವರ ಮೇಲೆ ಕೆಟ್ಟ ಹೆಸರು ಬರಲಿ ಎಂದು ಕೊಲೆ ಸುಪಾರಿ ವದಂತಿ ಹಬ್ಬಿಸಿದ್ದಳು. ವಿಚಾರಣೆ ವೇಳೆ ಆಕೆ ಇದನ್ನು ಒಪ್ಪಿಕೊಂಡಿದ್ದಾಳೆ. ಆದರೂ ಪೊಲೀಸರು ಎಲ್ಲಾ ಆರೋಪಿಗಳನ್ನು ಊರ್ಡಿಗೆರೆ ಹಾಗೂ ಸದಾಶಿವನಗರ ಉಪ ಠಾಣೆಯಲ್ಲಿ ಇರಿಸಿದ್ದಾರೆ ಹೊರತು ಕೋರ್ಟ್‌ಗೆ ಹಾಜರುಪಡಿಸಿಲ್ಲ. ಜೊತೆಗೆ ಅಮಾಯಕರನ್ನು ಫಿಟ್ ಮಾಡಲು ಸಂಚು ನಡೆಯುತ್ತಿದ್ಯಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಲೈನ್‍ಮೆನ್ ಬೈಕ್‍ಗೆ ಕಾರು ಡಿಕ್ಕಿ – ಸವಾರ ಹಾರಿ ಬಿದ್ರೂ ನಿಲ್ಲಿಸದೇ ಪರಾರಿಯಾದ ಚಾಲಕ

    ಆಡಿಯೋದಲ್ಲಿದ್ದ ರಾಕಿಗೆ ವಿಐಪಿ ಟ್ರೀಟ್‌ಮೆಂಟ್:
    ಪುಷ್ಪಾ ಜೊತೆ ಆಡಿಯೋದಲ್ಲಿ ಮಾತನಾಡಿದ ಯುವಕ ರಾಕಿಯನ್ನು ಪೊಲೀಸರು ಬಂಧಿಸಿ ವಿಚಾರಿಸಬೇಕಿತ್ತು. ತನಿಖಾ ತಂಡದಲ್ಲಿ ಇದ್ದ ಸಿಪಿಐ ಒಬ್ಬರ ಸಂಬಂಧಿ ರಾಕಿ. ಹಾಗಾಗಿ ರಾಕಿಯನ್ನು ವಿಚಾರಣೆ ಮಾಡಿ ಕಳುಹಿಸಿದ್ದಾರೆ ಎಂಬ ಆರೋಪ ಈಗ ಬಂದಿದೆ. ಇದನ್ನೂ ಓದಿ: ಭಾರೀ ಗಾಳಿ ಮಳೆಯಿಂದ ಶಾರ್ಟ್ ಸರ್ಕ್ಯೂಟ್ – ನೂರಾರು ಮನೆಗಳ ಟಿವಿ, ಫ್ರಿಡ್ಜ್‌ಗಳಿಗೆ ಹಾನಿ