Tag: MLC Puttanna

  • ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ

    ಡಿಕೆಶಿಗೆ ಸಿಎಂ ಆಗುವ ಅವಕಾಶ ಇದೆ, ಯೋಗೇಶ್ಬರ್ ಗೆಲ್ಲಿಸಿದ್ರೆ ಶಕ್ತಿ ಬರುತ್ತೆ: ಎಂಎಲ್‌ಸಿ ಪುಟ್ಟಣ್ಣ

    ರಾಮನರಗ: ಸಿದ್ದರಾಮಯ್ಯ ಅವರ ಬಳಿಕ ಡಿ.ಕೆ ಶಿವಕುಮಾರ್‌ (DK Shivakumar) ಅವರಿಗೆ ಸಿಎಂ ಆಗುವ ಎಲ್ಲಾ ಅವಕಾಶ ಇದೆ. ಸಿ.ಪಿ ಯೋಗೇಶ್ವರ್‌ ಅವರನ್ನ ಗೆಲ್ಲಿಸಿದ್ರೆ ಡಿ.ಕೆ ಶಿವಕುಮಾರ್‌ಗೆ ಶಕ್ತಿ ಬರುತ್ತೆ ಎಂದು ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ (MLC Puttanna) ಹೇಳಿದ್ದಾರೆ.

    ಚನ್ನಪಟ್ಟಣ ಉಪಚುನಾವಣೆ (Channapatna By Election) ಹಿನ್ನೆಲೆಯಲ್ಲಿ ತಾಲೂಕಿನ ಕೋಡಂಬಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮನ್ವಯ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಲಾಂಛನ ನಾಗರಹಾವು ಅಂದಿದ್ದು ಯಡಿಯೂರಪ್ಪ: ಬಾಲಕೃಷ್ಣ

    ಸಿದ್ದರಾಮಯ್ಯ (Siddaramaiah) ಬಳಿಕ ಸಿಎಂ ಆಗುವ ಎಲ್ಲಾ ಅವಕಾಶ ಡಿಕೆಶಿಗೆ ಇದೆ. ಯೋಗೇಶ್ವರ್ ಗೆಲ್ಲಿಸಿದ್ರೆ ಶಿವಕುಮಾರ್‌ಗೆ ಶಕ್ತಿ ಬರುತ್ತೆ. ಡಿ.ಕೆ ಸುರೇಶ್ ಸೋಲಿಸಲು ಕುಮಾರಸ್ವಾಮಿ ಬಾವನನ್ನ ತಂದು ನಿಲ್ಲಿಸಿದ್ರು. ಈಗ ಈ ಕ್ಷೇತ್ರವನ್ನ ಯೋಗೇಶ್ವರ್‌ಗೆ ಬಿಟ್ಟುಕೊಡಬಹುದಿತ್ತು. ಆದರೆ ಅವರ ಮನೆಯವರಿಗೆ ಬಿಟ್ಟು ಬೇರೆ ಯಾರಿಗೂ ಕುಮಾರಸ್ವಾಮಿ ಟಿಕೆಟ್ ಕೊಡಲ್ಲ. ಕುಮಾರಸ್ವಾಮಿ ಟೂರಿಂಗ್ ಟಾಕೀಸ್, ಎಲ್ಲೂ ನಿಲ್ಲಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಕ್ಷೇತ್ರದ 5,000ಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಕೆಲಸ ಕೊಟ್ಟಿದ್ದೇವೆ, ಇದು ಪರ್ಮನೆಂಟ್ ಗ್ಯಾರಂಟಿ: ಭರತ್ ಬೊಮ್ಮಾಯಿ

    ಡಿ.ಕೆ ಸುರೇಶ್ ಅವರ ಸೋಲನ್ನು ಮರೆಯೋಕೆ ಸಿಪಿವೈ ಗೆಲ್ಲಿಸಬೇಕು. ಅದಕ್ಕಾಗಿ ಎಲ್ಲರನ್ನೂ ಮನವೊಲಿಸಿ ಯೋಗೇಶ್ವರ್ ಪರ ಕೆಲಸ ಮಾಡಬೇಕು. ಯೋಗೇಶ್ವರ್ ಕ್ಷೇತ್ರಕ್ಕೆ ನೀರಿನ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ. ಡಿಕೆಶಿ ಕ್ಷೇತ್ರದ ಜನರಿಗೆ ಟ್ರಾನ್ಸ್ಫಾರ್ಮರ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಎರಡು ಬಾರಿ ಗೆದ್ದು ಏನು ಕೊಟ್ಟಿದ್ದಾರೆ? ಕಾಂಗ್ರೆಸ್‌ ಸರ್ಕಾರ ಇನ್ನೂ 3 ವರ್ಷ ಇರುತ್ತೆ. ಸಿಪಿವೈ ಗೆದ್ದರೆ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡ್ತಾರೆ. ಸ್ವಾಭಿಮಾನ ಉಳಿಸಿಕೊಳ್ಳಬೇಕು ಅಂದ್ರೆ ಯೋಗೇಶ್ವರ್ ಗೆಲ್ಲಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

    ಬಳಿಕ ಶಾಸಕ ಹೆಚ್.ಸಿ ಬಾಲಕೃಷ್ಣ ಮಾತನಾಡಿ, ಕುಮಾರಸ್ವಾಮಿ ಮನೆದೇವ್ರು ದುರ್ಯೋಧನ, ಅವರ ಲಾಂಛನ ನಾಗರಹಾವು. ಇದನ್ನ ಹೇಳಿದ್ದು ಇದೇ ಯಡಿಯೂರಪ್ಪನವರು. ಈಗ ಕಚ್ಚಿಸಿಕೊಳ್ಳೋಕೆ ಜೊತೆಗೆ ಕರೆದುಕೊಂಡಿದ್ದಾರೆ. ಕುಮಾರಸ್ವಾಮಿ ಯಾರನ್ನೂ ಬೆಳೆಸುವ ಕೆಲಸ ಮಾಡಿಲ್ಲ. ಎಲ್ಲಾ ಕಡೆ ಅವರ ಕುಟುಂಬದರನ್ನ ಪ್ರತಿಷ್ಠಾಪನೆ ಮಾಡ್ತಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ `ಇರುಮುಡಿ’ ಸಾಗಿಸಲು ಅನುಮತಿ

    ಕುಮಾರಸ್ವಾಮಿಗೆ ನಾವ್ಯಾರೂ ಒಕ್ಕಲಿಗರ ರೀತಿ ಕಾಣುವುದಿಲ್ವಾ? ನಾವು ಅಣ್ಣ-ತಮ್ಮಂದಿರು, ಈ ಜಿಲ್ಲೆಯ ಮಕ್ಕಳು ನಾವು. ಜಗಳ ಆಡಿದ್ದೀವಿ, ಆದ್ರೆ ದ್ವೇಷ ಮಾಡಿಲ್ಲ. ಸಿಪಿವೈಗೆ ಅನ್ಯಾಯ ಆಗೋದು ಗೊತ್ತಾದಾಗ ಅವರನ್ನು ಕರೆತಂದು ಟಿಕೆಟ್ ಕೊಟ್ಟಿದ್ದೀವಿ. ಅವರು ಟೂರಿಂಗ್ ಟಾಕೀಸ್. ಮಂಡ್ಯಕ್ಕೆ ಹೋದ್ರು, ರಾಮನಗರಕ್ಕೂ ಹೋದ್ರು ಈಗ ಇಲ್ಲಿಗೆ ಬಂದವ್ರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: 2025ರ ಐಪಿಎಲ್‌ನಲ್ಲೂ ಮಹಿ ಆಡೋದು ಫಿಕ್ಸ್‌ – ಅ.31ಕ್ಕೆ ರಿಟೇನ್‌ ಆಟಗಾರರ ಭವಿಷ್ಯ!

    ಚನ್ನಪಟ್ಟಣದವರಿಗೆ ಸ್ವಾಭಿಮಾನ ಇದ್ದರೆ ಯೋಗೇಶ್ವರ್‌ ಗೆಲ್ಲಿಸಿ:
    ರಾಮನಗರದಲ್ಲಿ ಸಾಮಾನ್ಯ ಕಾರ್ಯಕರ್ತನನ್ನ ತಂದು ಶಾಸಕನನ್ನಾಗಿ ಸುರೇಶ್ ಮಾಡಿದ್ರು. ಚನ್ನಪಟ್ಟಣದವರಿಗೆ ಸ್ವಾಭಿಮಾನ ಇಲ್ವಾ? ತಾಲೂಕಿಗೆ ನೀರುಕೊಟ್ಟ ಯೋಗೇಶ್ವರ್‌ನ ಸೋಲಿಸಿದ್ರಿ. ನೀರು ಕೊಟ್ಟ ಯೋಗೇಶ್ವರ್‌ಗೆ ವಿಷ ಹಾಕಿದ್ರಿ. ನಿಮಗೆ ದೇವರು ಒಳ್ಳೆಯದು ಮಾಡಲ್ಲ. ಈಗ ಸ್ವಾಭಿಮಾನ ಬೆಳೆಸಿಕೊಳ್ಳಿ ಯೋಗೇಶ್ವರ್ ಗೆಲ್ಲಿಸಿ ಎಂದು ಶಾಸಕ ಮಾರ್ಮಿಕವಾಗಿ ನುಡಿದಿದ್ದರೆ.

  • ಎಂಎಲ್‍ಸಿ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್

    ಎಂಎಲ್‍ಸಿ ಪುಟ್ಟಣ್ಣಗೆ ಕೊರೊನಾ ಪಾಸಿಟಿವ್

    ಬೆಂಗಳೂರು: ಎಂಎಲ್‍ಸಿ ಪುಟ್ಟಣ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಈ ಕುರಿತು ಫೇಸ್‍ಬುಕ್ ನಲ್ಲಿ ಬರೆದುಕೊಂಡಿರುವ ಪುಟ್ಟಣ ಅವರು ನಿಮ್ಮ ಆಶೀರ್ವಾದದಿಂದ ಬೇಗ ಗುಣಮಖನಾಗಿ ಬರುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಜ್ವರ ಇದ್ದುದರಿಂದ, ಕ್ವಾರಂಟೈನ್ ನಲ್ಲಿ ಇದ್ದೆ. ಗುರುವಾರ ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ತಪಾಸಣೆಯ ವರದಿ ಪಾಸಿಟಿವ್ ಬಂದಿರುವುದರಿಂದ ಶುಕ್ರವಾರ ಅಂದರೆ ನಿನ್ನೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ದೇವರ ದಯೆ ಹಾಗೂ ನಿಮ್ಮ ಆಶೀರ್ವಾದದಿಂದ ಬೇಗ ಗುಣಮುಖನಾಗಿ ಬರುತ್ತೆನೆ ಎಂದು ನಂಬಿದ್ದೆನೆ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ನೀವು ಮತ್ತು ನಿಮ್ಮ ಕುಟುಂಬದವರು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ಅವರಿಗೂ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 994 ಮಂದಿಗೆ ಸೋಂಕು ತಗುಲಿದ್ದು, ಭಯಬೀತರಾದ ಜನ ಸಿಲಿಕಾನ್ ಸಿಟಿಯನ್ನ ತೊರೆಯುತ್ತಿದ್ದಾರೆ.

  • ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ ಅನ್ನೋದನ್ನು ರೇವಣ್ಣ ಹೇಳ್ಬೇಕು – ಪುಟ್ಟಣ್ಣ

    ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ ಅನ್ನೋದನ್ನು ರೇವಣ್ಣ ಹೇಳ್ಬೇಕು – ಪುಟ್ಟಣ್ಣ

    ರಾಮನಗರ: ನನಗೆ ಎಲ್ಲೆಲ್ಲಿ ಚಡ್ಡಿ ಹೊಲಿಸಿ ಕೊಡಲಾಗಿದೆ ಅಥವಾ ಅವರದೇ ಚಡ್ಡಿ ಕಳೆದು ನನಗೆ ಹೊಲಿಸಿಕೊಟ್ಟಿದ್ದಾರಾ ಎನ್ನುವುದನ್ನು ರೇವಣ್ಣನವರೇ ಹೇಳಬೇಕೆಂದು ಹೇಳುವ ಮೂಲಕ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ತಿರುಗೇಟು ನೀಡಿದ್ದಾರೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸ್ಥಾನಕ್ಕೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಮನಗರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ತೆರಳಿ ಶಿಕ್ಷಕರ ಬಳಿ ಮತಯಾಚನೆ ನಡೆಸಿದರು. ಇದೇ ವೇಳೆ ಚಡ್ಡಿ ಹಾಕದೆ ಜೈಲಿನಲ್ಲಿ ನಿಂತಿದ್ದ ಅವರನ್ನು ಕರೆತಂದೆ ಎಂಬ ಎಚ್.ಡಿ ರೇವಣ್ಣ ಹೇಳಿಕೆ ವಿಚಾರವಾಗಿ ರಾಮನಗರದ ಬಿಜಿಎಸ್ ವರ್ಡ್ ಸ್ಕೂಲ್ ಬಳಿ ಮಾತನಾಡಿದ ಅವರು ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

    ಚಡ್ಡಿ ಹಾಕದೇ ಜೈಲಿನಲ್ಲಿ ಪುಟ್ಟಣ್ಣನ್ನು ನಿಲ್ಲಿಸಿದ್ರು. ನಾನೇ ಕರೆದುಕೊಂಡು ಹೋದೆ ಎಂದು ರೇವಣ್ಣನವರೇ ಹೇಳಿದ್ದಾರೆ. ಅವರೇ ಕಾಡಂಕನಹಳ್ಳಿಗೆ ಬಂದು ನನಗೆ ಚಡ್ಡಿ ಹಾಕಿ ಕರೆದುಕೊಂಡು ಹೋಗಿದ್ದು. ಅವರನ್ನೇ ಕೇಳಿ ಎಲ್ಲೆಲ್ಲಿ ಚಡ್ಡಿ ಹೊಲಿಸಿಕೊಟ್ಟಿದ್ದಾರೆ. ರಾಜ್ಯಕ್ಕೆಲ್ಲಾ ಇವರೇ ಚಡ್ಡಿ ಕೊಡಿಸಿಬಿಟ್ಟಿರುವವರು, ದೊಡ್ಡವರು ಮಾತನಾಡಬೇಕಾದರೆ ಇತಿಮಿತಿ ಇರಬೇಕು. ನಮಗೂ ಮಾತನಾಡಲು ಬರುತ್ತೆ ನಾವೇನು ದಡ್ಡರಲ್ಲ ಎಂದು ಆಕ್ರೋಶ ಹೊರಹಾಕಿದರು. ಇದನ್ನು ಓದಿ: ಜೈಲಿನಲ್ಲಿ ಚಡ್ಡಿ ಹಾಕಿ ನಿಂತಿದ್ದ ಪುಟ್ಟಣ್ಣಗೆ ಟಿಕೆಟ್ ನೀಡಿದ್ದು ಜೆಡಿಎಸ್ – ರೇವಣ್ಣ ವಾಗ್ದಾಳಿ

    ಪ್ರತಿಯೊಬ್ಬರಿಗೂ ಅವರದೇ ಆದ ಸ್ವಾಭಿಮಾನ ಇದ್ದು ಕೂಲಿ ಮಾಡುವವನಿಗೂ ಸ್ವಾಭಿಮಾನ ಇದೆ. ಎದುರಿಗೆ ಕರೆದು ಬಯ್ಯುವುದೇ ಬೇರೆ ಮಾಧ್ಯಮಗಳ ಮುಂದೆ ಹೇಳುವುದೇ ಬೇರೆ. ಅವರು ನಾಲಿಗೆ ಬಿಗಿಹಿಡಿದು ಮಾತನಾಡಿದರೆ ಸೂಕ್ತ ಎಂದರು.

    ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುತ್ತಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರೇ ವೇದಿಕೆಯಲ್ಲಿ ಹೇಳಿದ್ದಾರೆ. ನಮ್ಮ ಪುಟ್ಟಣ್ಣ ನಮ್ಮ ಪಾರ್ಟಿಯಿಂದ ನಿಲ್ಲುತ್ತಾರೆ ಎಂದು ಸಿಎಂ ಹೇಳಿದ್ದಾರೆ. ಅವರ ಬಳಿ ನಂಬಿಕೆ ಉಳಿಸಿಕೊಳ್ಳುವ ಶಕ್ತಿ ನಮಗೆ ಭಗವಂತ ಕೊಡಬೇಕು. ಈಗಾಗಲೇ ಯಾರ್ಯಾರು ನಂಬಿಕೆ ಕಳೆದುಕೊಂಡವರು ಕುಸಿದಿದ್ದಾರೆ. ಕುಸಿಯುತ್ತಾ ಇದ್ದಾರೆ ಅದನ್ನ ನೋಡುತ್ತಿದ್ದೀರಿ. ಮೋದಿ ಹಾಗೂ ಯಡಿಯೂರಪ್ಪ ನೇತೃತ್ವದ ನಾಯಕತ್ವ ಒಪ್ಪಿಕೊಂಡಿದ್ದೇನೆ ನೂರಕ್ಕೆ ನೂರರಷ್ಟು ಬಿಜೆಪಿಯಿಂದ ಸ್ಪರ್ಧಿಸಿ, ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.