Tag: MLC polls

  • ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ – ಕಾಂಗ್ರೆಸ್‌, ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು

    ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ – ಕಾಂಗ್ರೆಸ್‌, ಮೈತ್ರಿ ಅಭ್ಯರ್ಥಿಗಳಿಗೆ ಗೆಲುವು

    ಬೆಂಗಳೂರು: ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ (Teachers Constituency) ಕಾಂಗ್ರೆಸ್ ಅಭ್ಯರ್ಥಿಗಳು (Congress Candidates) ಗೆಲುವು ದಾಖಲಿಸಿದ್ದಾರೆ.

    ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಮೋಜಿಗೌಡ 11,841 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಡಿ.ಟಿ ಶ್ರೀನಿವಾಸ್ 11,700ಕ್ಕೂ ಅಧಿಕ ಪ್ರಾಶಸ್ತ್ಯ ಮತಗಳನ್ನು ಪಡೆದು ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಅಭ್ಯರ್ಥಿಗಳ ಗೆಲುವನ್ನು ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದ್ದಾರೆ.

    ಮೈತ್ರಿ ಅಭ್ಯರ್ಥಿಗೂ ಗೆಲುವು:
    ಇನ್ನೂ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಧನಂಜಯ್ ಸರ್ಜಿಗೆ ಭರ್ಜರಿ ಗೆಲುವಾಗಿದೆ. 37,627 ಮತಗಳನ್ನು ಪಡೆದುಕೊಂಡಿರುವ ಸರ್ಜಿ 6,935 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಇದನ್ನೂ ಓದಿ: ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ; ಮೈತ್ರಿ ಅಭ್ಯರ್ಥಿಗೆ ಮೊದಲ ಪ್ರಾಶಸ್ತ್ಯದ ಮತಗಳಲ್ಲೇ ಭರ್ಜರಿ ಗೆಲುವು

    ಇನ್ನೂ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರಘುಪತಿ ಭಟ್ 7,039 ಮತಗಳನ್ನ ಪಡೆದುಕೊಂಡರೇ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ 13,516 ಮತಗಳನ್ನ ಪಡೆದು ಸೋಲು ಕಂಡಿದ್ದಾರೆ. ಇದನ್ನೂ ಓದಿ: ಜೂನ್ 4ರಂದು ಷೇರುಪೇಟೆ ಮಹಾಪತನ ದೇಶದ ಅತಿದೊಡ್ಡ ಹಗರಣ: ರಾಹುಲ್ ಗಾಂಧಿ

    ಸಿಎಂ ಸಿದ್ದರಾಮಯ್ಯ ತವರಿನಲ್ಲಿ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ಇತ್ತೀಚೆಗಷ್ಟೇ ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಗುರುವಾರವೂ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಸೋತಿದ್ದರು. ಇದೀಗ ನೈರುತ್ಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

  • ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ

    ರಾಜ್ಯಸಭಾ ಚುನಾವಣೆಯ ಬಳಿಕ MVA ಸರ್ಕಾರಕ್ಕೆ ಮತ್ತೆ ಶಾಕ್ – ಬಿಜೆಪಿಯ ಐವರು ಆಯ್ಕೆ

    ಮುಂಬೈ: ರಾಜ್ಯಸಭಾ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ ಸರ್ಕಾರಕ್ಕೆ ಶಾಕ್ ನೀಡಿದ್ದ ಬಿಜೆಪಿ ಈಗ ವಿಧಾನ ಪರಿಷತ್ ಚುನಾವಣೆಯಲ್ಲೂ ಶಾಕ್ ನೀಡಿದೆ. ಬಿಜೆಪಿ ತನ್ನ 5ನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದ್ದರಿಂದ ಮಹಾರಾಷ್ಟ್ರದಲ್ಲಿ ಈಗ ರಾಜಕೀಯ ಚಟುವಟಿಕೆ ಬಿರುಸಾಗಿದೆ.

    ಶಿವಸೇನೆಯ 56 ಶಾಸಕರ ಪೈಕಿ 4 ಶಾಸಕರು ಅಡ್ಡಮತದಾನ ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸದಸ್ಯರ ಪೈಕಿ 285 ಶಾಸಕರು ಮತದಾನ ಮಾಡಲು ಅರ್ಹತೆ ಪಡೆದಿದ್ದರು. ವಿಧಾನ ಸಭೆಯಲ್ಲಿ ಬಿಜೆಪಿ 106 ಶಾಸಕರ ಬಲವನ್ನು ಹೊಂದಿದೆ. ಆದರೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ 133 ಮತಗಳು ಬಿದ್ದಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಯೋಗ ದಿನ: ನಾಡಿನ ಜನತೆಗೆ ಯೋಗದ ಪ್ರಾಮುಖ್ಯತೆ ಸಾರಿದ ಗಣ್ಯರು

    ಶಿವಸೇನೆ 56 ಶಾಸಕರ ಬೆಂಬಲವನ್ನು ಹೊಂದಿದ್ದು 52 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ 44 ಶಾಸಕರ ಬಲವನ್ನು ಹೊಂದಿದ್ದು 41 ಮತಗಳನ್ನು ಪಡೆದಿದೆ. ಆದರೆ ಎನ್‌ಸಿಪಿ 53 ಶಾಸಕರ ಬಲವನ್ನು ಹೊಂದಿದ್ದು 57 ಮಂದಿ ವೋಟ್ ಹಾಕಿದ್ದಾರೆ.

    ಬಿಜೆಪಿ ಪರವಾಗಿ ಶಿವಸೇನೆ ಮತ್ತು ಪಕ್ಷೇತರರು ಮತ ಚಲಾಯಿಸಿದ್ದರಿಂದ ಐವರು ಪರಿಷತ್‌ಗೆ ಆಯ್ಕೆ ಆಗಿದ್ದಾರೆ. ಶಿವಸೇನೆ ಮತ್ತು ಎನ್‌ಸಿಪಿಯ ಇಬ್ಬರು ಮತ್ತು ಕಾಂಗ್ರೆಸ್‌ನ ಒಬ್ಬರು ರಾಜ್ಯಸಭೆಗೆ ಆಯ್ಕೆ ಆಗಿದ್ದಾರೆ. ಇದನ್ನೂ ಓದಿ: ಚುನಾವಣೆ ಪ್ರಚಾರಕ್ಕೆ ಮಕ್ಕಳ ಬಳಕೆ – ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಪತ್ರ ಬರೆದ ಎನ್‌ಸಿಪಿಸಿಆರ್

    bjP

    ಪರಿಷತ್‌ಗೆ ಆಯ್ಕೆಯಾಗಲು ಅಭ್ಯರ್ಥಿ ಕನಿಷ್ಠ 26 ಮತಗಳನ್ನು ಪಡೆಯಬೇಕಿತ್ತು. ಬಿಜೆಪಿ ತನಗೆ ಬಹುಮತ ಇಲ್ಲದೇ ಇದ್ದರೂ 5ನೇ ಅಭ್ಯರ್ಥಿಯನ್ನು ಇಳಿಸಿದ್ದರೆ ಎಂವಿಎ ಸರ್ಕಾರ 6ನೇ ಅಭ್ಯರ್ಥಿಯನ್ನು ಇಳಿಸಿತ್ತು. ಹೀಗಿದ್ದರೂ ಬಿಜೆಪಿ ಅಡ್ಡ ಮತದಾನ ಮತ್ತು ಪಕ್ಷೇತರ ಶಾಸಕರನ್ನು ಸೆಳೆಯುವ ಮೂಲಕ 5 ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿತ್ತು.

    Live Tv