Tag: mlc election 2021

  • ಅತಿಯಾದ ಆತ್ಮವಿಶ್ವಾಸದಿಂದ ಸೋಲು: ಕವಟಗಿಮಠ

    ಅತಿಯಾದ ಆತ್ಮವಿಶ್ವಾಸದಿಂದ ಸೋಲು: ಕವಟಗಿಮಠ

    ಬೆಳಗಾವಿ: ಬಿಜೆಪಿ ಪಕ್ಷದ ಸಮನ್ವಯದ ಕೊರತೆಯೇ ವಿಧಾನ ಪರಿಷತ್ ಚುನಾವಣೆ ಸೋಲಿಗೆ ಕಾರಣ ಎಂದು ಬಿಜೆಪಿ ನಯಕ ಮಹಾಂತೇಶ ಕವಟಗಿಮಠ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೋಡೌನ್‌ ಮೇಲೆ ಅಧಿಕಾರಿಗಳ ದಾಳಿ

    ಬೆಳಗಾವಿ ಪರಿಷತ್ ಸೋಲಿನ ಅವಲೋಕನ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಲ್ಲ ಪೋಸ್ಟ್ ಮಾರ್ಟಮ್ ಆಗಿದೆ ಇನ್ನೇನು ಮಾತನಾಡಬೇಕು. ಸಭೆಯಲ್ಲಿ ಎಲ್ಲಿ ತಪ್ಪಾಗಿದೆ ಎನ್ನುವ ಬಗ್ಗೆ ರಾಜ್ಯಾಧ್ಯಕ್ಷರು ವಿವರ ಪಡೆದುಕೊಂಡಿದ್ದಾರೆ. ಯಾರ ಬಗ್ಗೆಯೂ ಶಿಸ್ತು ಕ್ರಮದ ಬಗ್ಗೆ ಚರ್ಚೆಯಾಗಿಲ್ಲ ಎಂದರು. ಇದನ್ನೂ ಓದಿ: ಶಾಂತಿ ಕದಡುವುದೇ ನಾಡದ್ರೋಹಿ ಕಾಂಗ್ರೆಸ್ ಉದ್ದೇಶ – ಕೈ ವಿರುದ್ಧ ಬಿಜೆಪಿ ಟ್ವೀಟ್ ದಾಳಿ

    ಪಕ್ಷೇತರರ ಅಭ್ಯರ್ಥಿಯಿಂದ ಸೋಲಾಯ್ತು ಎಂದು ನಾನು ಹೇಳೋಕೆ ಆಗಲ್ಲ. ಪ್ರಥಮ ಪಾಶಸ್ತ್ಯದ ಮತ ಕೇಳೋದರಲ್ಲಿ ವಿಫಲವಾಗಿದ್ದೇವೆ ಎನ್ನುವುದು ಕಷ್ಟ. ಆದರೆ ಅತಿಯಾದ ಆತ್ಮವಿಶ್ವಾಸ ಸೋಲಿಗೆ ಕಾರಣವಾಯ್ತು. ಅಂತರಿಕವಾಗಿ ಸಾಕಷ್ಟು ಚರ್ಚೆಯಾಗಿದೆ. ಈ ಬಗ್ಗೆ ಎಲ್ಲ ಹೇಳೋಕೆ ಆಗೋದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

  • ಬಿಜೆಪಿ, ಜೆಡಿಎಸ್ ಒಳ ಒಪ್ಪಂದ – ಎಚ್‍ಡಿಕೆ ಸುಳ್ಳೇಶ್ವರ ಎಂದ ಎಂಎಲ್‍ಸಿ ರವಿ

    ಬಿಜೆಪಿ, ಜೆಡಿಎಸ್ ಒಳ ಒಪ್ಪಂದ – ಎಚ್‍ಡಿಕೆ ಸುಳ್ಳೇಶ್ವರ ಎಂದ ಎಂಎಲ್‍ಸಿ ರವಿ

    ರಾಮನಗರ: ಈ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ಬೆಂಗಳೂರು ಗ್ರಾಮಾಂತರ ನೂತನ ಎಂಎಲ್‍ಸಿ ಎಸ್.ರವಿ ಹೇಳಿದರು.

    ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಬಸವರಾಜ ಬೊಮ್ಮಾಯಿ ಮತ್ತು ಕುಮಾರಸ್ವಾಮಿಯರ ನಡುವೆ ಬೆಂಗಳೂರು ಗ್ರಾಮಾಂತರದಲ್ಲಿ ಒಳ ಒಪ್ಪಂದವಾಗಿತ್ತು. ಎಂಟಿಬಿ ನಾಗರಾಜ್ ರವರೇ ಈ ಒಳ ಒಪ್ಪಂದವನ್ನು ಅನುಷ್ಠಾನ ಮಾಡಿದ್ದರು ಎಂದು ಕಿಡಿಕಾರಿದರು. ಇದನ್ನೂ ಓದಿ: ಯುವತಿಯ ಒಂದು ದೂರಿಗೆ 1 ಸಾವಿರ ಪೊಲೀಸರು ತನಿಖೆ ಮಾಡಿದ್ರು!

    ಈ ಒಪ್ಪಂದ ಚನ್ನಪಟ್ಟಣದಲ್ಲಿ ಅದು ಸಫಲವಾಗಲಿಲ್ಲ. ಚನ್ನಪಟ್ಟಣದ ಬಿಜೆಪಿ ಸದಸ್ಯರು ನಮಗೆ ಮತ ನೀಡಿದ್ದಾರೆ. ಹೆಚ್‍ಡಿಕೆ ವಿರೋಧಕ್ಕೆ ನಮಗೆ ಮತ ನೀಡಿದ್ದಾರೆ. ನಾನು ಕರ್ನಾಟಕ ಪ್ರವಾಸೋದ್ಯಮ ಪರಿಸರ ಮತ್ತು ಪರಿಸರ ಇಲಾಖೆ ಸಚಿವ ಯೋಗೇಶ್ವರ್ ಗೆ ಬೆಂಬಲ ಕೇಳಿರಲಿಲ್ಲ ಎಂದರು.

    ಯೋಗೆಶ್ವರ್ ಖಾಸಗಿ ಕಾರ್ಯಕ್ರಮದಲ್ಲಿ ಸಿಕ್ಕಿದ್ದಾಗ ಮಾತನಾಡಿದ್ದೆ ಅಷ್ಟೇ. ಆದರೆ ನಮಗೆ ಚನ್ನಪಟ್ಟಣದಲ್ಲಿ ಬಿಜೆಪಿ ಮತ ಸಿಕ್ಕಿದೆ. ಇನ್ನು ಕಾಂಗ್ರೆಸ್, ಬಿಜೆಪಿ ಒಳ ಒಪ್ಪಂದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಸುಳ್ಳೇಶ್ವರ ಹಾಗಾಗಿ ಹೇಳಿರಬಹುದು ಅಷ್ಟೇ. ಜೆಡಿಎಸ್ ಪಕ್ಷ ಯಾರ ಜೊತೆಗಾದರೂ ಹೋಗಲಿದೆ. ಆದರೆ ಕಾಂಗ್ರೆಸ್ ಬಿಜೆಪಿ ಎಂದಿಗೂ ಒಂದಾಗಲೂ ಸಾಧ್ಯವಿಲ್ಲ ಎಂದು ನುಡಿದರು. ಇದನ್ನೂ ಓದಿ: ಪ.ಬಂಗಾಳದಲ್ಲಿ 7 ವರ್ಷದ ಬಾಲಕನಿಗೆ ಓಮಿಕ್ರಾನ್‌ ಸೋಂಕು- ತೆಲಂಗಾಣದಲ್ಲೂ 2 ಪ್ರಕರಣ ದೃಢ

    ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಹಣದ ಹೊಳೆಯನ್ನೇ ಹರಿಸಿದ್ದಾರೆ. ಆದರೆ ಚುನಾಯಿತ ಪ್ರತಿನಿಧಿಗಳು ನಮ್ಮ ಕೈಹಿಡಿದಿದ್ದಾರೆ. ಮುಂದಿನ ದಿನಗಳಲ್ಲಿ ರಾಮನಗರ ಜಿಲ್ಲೆ ಹಾಗೂ ಅಕ್ಕ ಪಕ್ಕದಲ್ಲಿಯೂ ಕಾಂಗ್ರೆಸ್ ಹವಾ ಇರಲಿದೆ ಎಂದರು.

    ಭವಿಷ್ಯದಲ್ಲಿ ಅನೇಕರು ಕಾಂಗ್ರೆಸ್ ಸೇರಲಿದ್ದಾರೆ. ಅದು ಯಾರು, ಯಾವ ಪಕ್ಷ ಎಂದು ಈಗಲೇ ಹೇಳಲಾಗಲ್ಲ. ಡಿಕೆ ಶಿವಕುಮಾರ್ ರವರ ನಾಯಕತ್ವ ನಂಬಿ ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

     

  • ಯಾರು ಯಾರನ್ನು ಸೋಲಿಸಿದರು ಅಂತಾ ಬೊಮ್ಮಾಯಿ ಹೇಳಬೇಕು – ಜಾರಕಿಹೊಳಿಗೆ ಡಿಕೆಶಿ ಟಾಂಗ್

    ಯಾರು ಯಾರನ್ನು ಸೋಲಿಸಿದರು ಅಂತಾ ಬೊಮ್ಮಾಯಿ ಹೇಳಬೇಕು – ಜಾರಕಿಹೊಳಿಗೆ ಡಿಕೆಶಿ ಟಾಂಗ್

    ಬೆಳಗಾವಿ: ಸಿಡಿ ಪ್ರಕರಣ ಮುಂದಿಟ್ಟುಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.

    ಚುನಾವಣೆ ಫಲಿತಾಂಶ ಬಳಿಕ ಡಿಕೆಶಿ ಜೊತೆಗೆ ಓಪನ್ ವಾರ್ ಆಗಲಿ ಎಂದಿದ್ದ ರಮೇಶ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ನಗರದ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರು ಯಾರನ್ನು ಸೋಲಿಸಿದರು ಅಂತಾ ಬೊಮ್ಮಾಯಿ ಹೇಳಬೇಕು ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ‘ಸುಶಾಂತ್ ಸ್ಟಾರ್ ಅಲ್ಲ’ ಎಂದು ಸಿನಿಮಾ ಮಾಡಲು ನಿರ್ಮಾಪಕರು ಮುಂದೆ ಬಂದಿರಲಿಲ್ಲ: ಅಭಿಷೇಕ್ ಕಪೂರ್

    ಸ್ವಯಂಕೃತ ಅಪರಾಧವನ್ನು ಬಿಜೆಪಿಯವರು ಮಾಡಿಕೊಂಡಿದ್ದಾರೆ. ಬೇಕಾಗಿತ್ತು ಮಾಡಿಕೊಂಡಿದ್ದಾರೆ, ಒಳ್ಳೆಯದಾಗಲಿ ಬಹಿರಂಗ ವಾರ್ ಅಥವಾ ಯಾವ ವಾರ್ ಅವರನ್ನೇ ಕೇಳಿ. ಸಿಡಿ ಪ್ರಕರಣದಲ್ಲಿ ಬಿಚ್ಚಿದ್ದು ಮಾಡಿದ್ದು ನಾವೆಲ್ಲ ನೋಡಿದ್ದೇವೆ. ಕಾಂಗ್ರೆಸ್ ಪಕ್ಷದ ಪರ ಬಿಜೆಪಿ ಸೇರಿದಂತೆ ಎಲ್ಲ ಪಕ್ಷದವರು ಮತ ಚಲಾಯಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕುರಿಗಳಂತೆ ಕರೆತಂದು ಮತ ಹಾಕಿಸಿಕೊಂಡು ಗೆಲುವು ಸಾಧಿಸಿದ್ದಾರೆ: ಮಂಥರ್ ಗೌಡ ವಾಗ್ದಾಳಿ

    ಕಾಂಗ್ರೆಸ್ ಪಕ್ಷದ ಮುಖಂಡರ ಒಗ್ಗಟ್ಟು ಈ ಗೆಲುವಿಗೆ ಕಾರಣ. ಸಾಮೂಹಿಕ ನಾಯಕತ್ವದಲ್ಲಿ ವಿಧಾನಸಭೆ ಚುನಾವಣೆಗೆ ಹೋಗುತ್ತೇವೆ. ರಾಜ್ಯದ ಎಲ್ಲ ಜನ ಬದಲಾವಣೆ ಬಯಸುತ್ತಿದ್ದಾರೆ. ಕಾಂಗ್ರೆಸ್ ಇನ್ನೂ ಎರಡು ಮೂರು ಸ್ಥಾನಗಳಲ್ಲಿ ಗೆಲ್ಲಬೇಕಿತ್ತು ಎಂದು ಹೇಳಿದ್ದಾರೆ.

  • ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಉತ್ತರ ಸಿಕ್ಕಿದೆ: ಚಲುವರಾಯಸ್ವಾಮಿ

    ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಉತ್ತರ ಸಿಕ್ಕಿದೆ: ಚಲುವರಾಯಸ್ವಾಮಿ

    ಮಂಡ್ಯ: ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇನೆ ಎಂದಿದ್ದ ಬಿಎಸ್‍ವೈಗೆ ಈ ಚುನಾವಣೆ ಉತ್ತರ ನೀಡಿದೆ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಹೇಳಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷ ಮಂಡ್ಯ ಕಾಂಗ್ರೆಸ್‍ಗೆ ಕರಾಳವಾಗಿತ್ತು. ಪಂಚಾಯಿತಿಯಲ್ಲೂ ಸಹ ಜೆಡಿಎಸ್‍ಗಿಂತಲೂ ನಾವು ಕಡಿಮೆ ಇದ್ದೆವು. ಎಂಎಲ್‍ಸಿ ಚುನಾವಣೆಯಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ದಿನೇಶ್ ಗೂಳಿಗೌಡರ ಗೆಲುವು ನಮ್ಮ ಒಗ್ಗಟ್ಟಿನ ಫಲಿತಾಂಶ ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಪತ್ನಿಯ ಸಾವಿನ ಸುದ್ದಿ ತಿಳಿದು ನೇಣಿಗೆ ಶರಣಾದ ಪತಿ

    ನಮಗೆ ಯಾವುದೇ ಅಧಿಕಾರ ಇಲ್ಲದ ಸಮಯದಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಇದು ಮಂಡ್ಯ ಜಿಲ್ಲೆಯ ಸ್ವಾಭಿಮಾನದ ಗೆಲುವಾಗಿದೆ. ಈ ಗೆಲುವು ಪ್ರಥಮ ಹೆಜ್ಜೆ, ಇದನ್ನು ಜವಬ್ದಾರಿಯನ್ನಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ, ಜೆಡಿಎಸ್ ರೈತ ಸಂಘದ ಸದಸ್ಯರು ನಮ್ಮನ್ನ ಬೆಂಬಲಿಸಿದ್ದಾರೆ ಅವರಿಗೆಲ್ಲ ಕೃತಜ್ಞತೆ ಎಂದು ನುಡಿದರು. ಇದನ್ನೂ ಓದಿ: ಅಭ್ಯರ್ಥಿ ರವಿ ಮದ್ದು ಗುಂಡೇಟು ತಿಂದವ್ರೆ: ಡಿಕೆಶಿ

    ಎಲ್ಲರೂ ಒಟ್ಟಾಗಿ ಜೆಡಿಎಸ್ ಸೋಲಿಸಿದ್ದು ತಪ್ಪಾ? ರಾಜ್ಯದಲ್ಲಿ ಬಿಜೆಪಿಗೆ ಸಹಕರಿಸುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳಿದ್ದರು. ನಾವು ಎಲ್ಲೂ ಯಾರನ್ನು ಬೆಂಬಲ ಕೇಳಿರಲಿಲ್ಲ. ಬಿಜೆಪಿಯಲ್ಲೂ ಕೆಲವರು ನಮ್ಮ ಅಣ್ಣ ತಮ್ಮಂದಿರು ನಮಗೆ ಸಹಕರಿಸಿದ್ದಾರೆ ಅವರಿಗೆ ಧನ್ಯವಾದ ಎಂದರು.

  • ವಿಧಾನ ಪರಿಷತ್ ಚುನಾವಣೆ – ಯಾರು ಎಲ್ಲಿ ಗೆದ್ದಿದ್ದಾರೆ?

    ವಿಧಾನ ಪರಿಷತ್ ಚುನಾವಣೆ – ಯಾರು ಎಲ್ಲಿ ಗೆದ್ದಿದ್ದಾರೆ?

    ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‍ನ 25 ಸ್ಥಾನಗಳಿಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿ 11 ಸ್ಥಾನಗಳನ್ನು ಗೆದ್ದುಕೊಂಡಿದೆ.

    ಕಾಂಗ್ರೆಸ್ 11 ಸ್ಥಾನಗಳನ್ನು ಗೆದ್ದಿದ್ದರೆ, ಜೆಡಿಎಸ್ ಮಾತ್ರ 2 ಸ್ಥಾನಕ್ಕಷ್ಟೇ ಸೀಮಿತವಾಗಿದೆ. ಇನ್ನು ಬೆಳಗಾವಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಗೆಲುವು ಸಾಧಿಸಿದ್ದಾರೆ. ಇದನ್ನೂ ಓದಿ: ಕೈ ನಾಯಕರು, ಕಾರ್ಯಕರ್ತರ ಪಾದವನ್ನು ಮುಟ್ಟಿ ಧನ್ಯವಾದ ತಿಳಿಸುತ್ತೇನೆ: ಹೆಬ್ಬಾಳ್ಕರ್

    ಬಿಜೆಪಿ ಗೆದ್ದ ಕ್ಷೇತ್ರಗಳು
    ಕೊಡಗು – ಸುಜಾ ಕುಶಾಲಪ್ಪ, ಬೆಂಗಳೂರು- ಗೋಪಿನಾಥ್ ರೆಡ್ಡಿ, ಚಿತ್ರದುರ್ಗ- ಕೆ.ಎಸ್.ನವೀನ್, ಉತ್ತರ ಕನ್ನಡ- ಗಣಪತಿ ಉಳ್ವೇಕರ್, ಬಳ್ಲಾರಿ- ವೈ.ಎಂ.ಸತೀಶ, ಚಿಕ್ಕಮಗಳೂರು- ಎಂ.ಕೆ.ಅರುಣ್, ಕಲಬುರ್ಗಿ- ಬಿ.ಜೆ.ಪಾಟೀಲ್, ದಕ್ಷಿಣ ಕನ್ನಡ (ದ್ವಿಸದಸ್ಯ)- ಕೋಟ ಶ್ರೀನಿವಾಸ್ ಪೂಜಾರಿ, ಧಾರವಾಡ (ದ್ವಿಸದಸ್ಯ)- ಪ್ರದೀಪ್ ಶೆಟ್ಟರ್, ವಿಜಯಪುರ (ದ್ವಿಸದಸ್ಯ)- ಪಿ.ಎಚ್.ಪೂಜಾರ.

    ಕಾಂಗ್ರೆಸ್ ಗೆದ್ದ ಕ್ಷೇತ್ರಗಳು
    ಬೀದರ್- ಭೀಮಾರಾವ್ ಪಾಟೀಲ್, ಮಂಡ್ಯ- ದಿನೇಶ್ ಗೂಳೀಗೌಡ, ರಾಯಚೂರು- ಶರಣವ ಬಯ್ಯಾಪುರ, ಬೆಂಗಳೂರು ಗ್ರಾಮಾಂತರ- ಎಂ.ಎಸ್.ರವಿ, ಧಾರವಾಡ (ದ್ವಿಸದಸ್ಯ)- ಸಲೀಂ ಅಹಮ್ಮದ್, ದಕ್ಷಿಣ ಕನ್ನಡ (ದ್ವಿಸದಸ್ಯ)- ಮಂಜುನಾಥ್ ಭಂಡಾರಿ, ಬೆಳಗಾವಿ (ದ್ವಿಸದಸ್ಯ)- ಚನ್ನರಾಜ ಹಟ್ಟಿಹೊಳಿ, ವಿಜಯಪುರ (ದ್ವಿಸದಸ್ಯ)- ಸುನೀಲ್‍ಗೌಡ ಪಾಟೀಲ, ತುಮಕೂರು- ರಾಜೇಂದ್ರ ರೇವಣ್ಣ, ಮೈಸೂರು (ದ್ವಿಸದಸ್ಯ)-ಡಾ.ಡಿ.ತಿಮ್ಮಯ್ಯ ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

    ಜೆಡಿಎಸ್ ಗೆದ್ದ ಕ್ಷೇತ್ರ
    ಹಾಸನ – ಸೂರಜ್ ರೇವಣ್ಣ, ಮೈಸೂರು-ಚಾಮರಾಜನಗರ(ದ್ವಿಸದಸ್ಯ) – ಮಂಜೇಗೌಡ

    ಪಕ್ಷೇತರರು ಗೆದ್ದ ಕ್ಷೇತ್ರ
    ಬೆಳಗಾವಿ (ದ್ವಿಸದಸ್ಯ)- ಲಖನ್ ಜಾರಕಿಹೊಳಿ