Tag: MLC

  • MLC Nomination | ಮೇಲ್ಮನೆ ಸದಸ್ಯರಾಗಿ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರು ನಾಮನಿರ್ದೇಶನ

    MLC Nomination | ಮೇಲ್ಮನೆ ಸದಸ್ಯರಾಗಿ ರಮೇಶ್‌ಬಾಬು, ಆರತಿ ಕೃಷ್ಣ ಸೇರಿ ನಾಲ್ವರು ನಾಮನಿರ್ದೇಶನ

    ಬೆಂಗಳೂರು: ವಿಧಾನ ಪರಿಷತ್‌ನಲ್ಲಿ (Legislative Council) ಹಲವು ತಿಂಗಳಿಂದ ಖಾಲಿ ಇದ್ದ ಸ್ಥಾನಗಳಿಗೆ ನಾಲ್ವರನ್ನು ನಾಮನಿರ್ದೇಶನ (MLC Nomination) ಮಾಡಿ ರಾಜ್ಯ ಸರ್ಕಾರ ಭಾನುವಾರ (ಇಂದು) ಅಧಿಕೃತ ಆದೇಶ ಹೊರಡಿಸಿದೆ. ನಾಲ್ಕು ಎಂಎಲ್‌ಸಿ ಸ್ಥಾನಗಳ ನಾಮನಿರ್ದೇಶನ ಅನುಮೋದಿಸಿ ರಾಜ್ಯಪಾಲರು (Governor) ಅಂಕಿತ ಹಾಕಿದ್ದಾರೆ.

    ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು (Ramesh Babu), ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ (Aarthi Krishna), ಹಿರಿಯ ಪತ್ರಕರ್ತ ಕೆ.ಶಿವಕುಮಾರ್‌ (K Shivakumar) ಮತ್ತು ದಲಿತ ಮುಖಂಡ ಎಫ್‌.ಹೆಚ್‌ ಜಕ್ಕಪ್ಪನವರ್ ಅವರನ್ನ ನಾಮ ನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ರೋಹಿತ್‌ ಬಳಿಕ 25 ವರ್ಷದ ಗಿಲ್‌ ಟೀಂ ಇಂಡಿಯಾಕ್ಕೆ ಕ್ಯಾಪ್ಟನ್‌?

    ಮೂವರು 6 ವರ್ಷಗಳ ಅವಧಿಗೆ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದ್ರೆ ರಮೇಶ್‌ ಬಾಬು ಅವರ ಅಧಿಕಾರ ಅವಧಿ 2026ರ ಜುಲೈ 21ರ ವರೆಗೆ ಮಾತ್ರ ಇರಲಿದೆ. ಇದನ್ನೂ ಓದಿ: ಪ್ರತಾಪ್ ಸಿಂಹನನ್ನ ಬಿಜೆಪಿ ಕಿತ್ತು ಬಿಸಾಕಿದೆ, ಬದುಕಿದ್ದೀನಿ ಅಂತ ತೋರಿಸಿಕೊಳ್ಳೋಕೆ ಪ್ರಯತ್ನ: ಡಿಕೆಶಿ ಟಾಂಗ್

    ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದ ಕಾಂಗ್ರೆಸ್‌ ಯು.ಬಿ. ವೆಂಕಟೇಶ್ ಮತ್ತು ಪ್ರಕಾಶ್ ಕೆ. ರಾಥೋಡ್ ಅವರ ಅವಧಿ 2024ರ ಅಕ್ಟೋಬರ್‌ನಲ್ಲಿ ಮತ್ತು ಜೆಡಿಎಸ್‌ನ ಕೆ.ಎ ತಿಪ್ಪೇಸ್ವಾಮಿ ಅವರ ಅವಧಿ 2025ರ ಜನವರಿ ವೇಳೆಗೆ ಮುಕ್ತಾಯಗೊಂಡಿತ್ತು. ಉಪ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಿ.ಪಿ. ಯೋಗೇಶ್ವ‌ರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಸ್ಥಾನಗಳು ಖಾಲಿಯಾಗಿದ್ದವು. 7 ತಿಂಗಳ ಹಗ್ಗ ಜಗ್ಗಾಟದ ಬಳಿಕ ಸರ್ಕಾರ ನಾಮ ನಿರ್ದೇಶನ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಇದನ್ನೂ ಓದಿ: ಬ್ಯಾಲೆಟ್ ಪೇಪರ್ = ಬೋಗಸ್ ವೋಟಿಂಗ್; ಬ್ಯಾಲೆಟ್ ಪೇಪರ್ = ಬೂತ್ ಕ್ಯಾಪ್ಚರಿಂಗ್: ಅಶೋಕ್ ಟೀಕೆ

  • ಪರಿಷತ್ ನೂತನ ಸದಸ್ಯರಾಗಿ 17 ಜನ ಪ್ರಮಾಣ ವಚನ ಸ್ವೀಕಾರ – ಸಿಎಂ ಕಾಲಿಗೆ ನಮಸ್ಕರಿಸಿದ ಸಿ.ಟಿ ರವಿ

    ಪರಿಷತ್ ನೂತನ ಸದಸ್ಯರಾಗಿ 17 ಜನ ಪ್ರಮಾಣ ವಚನ ಸ್ವೀಕಾರ – ಸಿಎಂ ಕಾಲಿಗೆ ನಮಸ್ಕರಿಸಿದ ಸಿ.ಟಿ ರವಿ

    – ಅಲ್ಲಾ ಹೆಸರಿನಲ್ಲಿ ಬಲ್ಕಿಸ್ ಬಾನು ಪ್ರಮಾಣ ವಚನ ಸ್ವೀಕಾರ

    – ಸಿ.ಟಿ ರವಿಗೆ ಕಿವಿ ಹಿಂಡಿ, ಬೆನ್ನು ತಟ್ಟಿದ ಸಿದ್ದರಾಮಯ್ಯ

    ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನೂತನವಾಗಿ ಆಯ್ಕೆಯಾದ 17 ಮಂದಿ ವಿಧಾನ ಪರಿಷತ್ ಸದಸ್ಯರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.

    ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ನೂತನ ಶಾಸಕರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಶಿಕ್ಷಕ ಮತ್ತು ಪದವೀಧರ ಕ್ಷೇತ್ರದಿಂದ ಆಯ್ಕೆಯಾದ 17 ಜನ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: Parliament Session: ಸಂಸದರಾಗಿ ಮೋದಿ, ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹತಾಬ್ ಪ್ರಮಾಣ ವಚನ ಸ್ವೀಕಾರ

    ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ ಅವರು, ನೂತನ ಪರಿಷತ್ ಸದಸ್ಯರನ್ನ ಮಾತನಾಡಿಸಿ ಕುಶಲೋಪರಿ ವಿಚಾರಿಸಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಕಾನೂನು ಸಚಿವ ಹೆಚ್.ಕೆ ಪಾಟೀಲ್ ವೇದಿಕೆಯಲ್ಲಿದ್ದರು. ಇದನ್ನೂ ಓದಿ: ಸ್ಫೋಟಕ ಟ್ವಿಸ್ಟ್‌ – ಸೂರಜ್ ರೇವಣ್ಣ ಪರ ದೂರು ನೀಡಿದ್ದ ದೂರುದಾರನೇ ನಾಪತ್ತೆ‌!

    ಅಲ್ಲಾ ಹೆಸರಿನಲ್ಲಿ ಬಲ್ಕಿಸ್ ಬಾನು ಪ್ರಮಾಣ ವಚನ ಸ್ವೀಕಾರ:
    ನೂತನ ಪರಿಷತ್ ಸದಸ್ಯರಾದ ಬೋಸರಾಜು, ಗೋವಿಂದರಾಜ್ (ಕಾಂಗ್ರೆಸ್), ಐವಾನ್ ಡಿಸೋಜ (ಕಾಂಗ್ರೆಸ್), ಜವರಾಯಿಗೌಡ (ಜೆಡಿಎಸ್), ಎಂ.ಜಿ. ಮೂಳೆ (ಬಿಜೆಪಿ), ಯತೀಂದ್ರ ಸಿದ್ದರಾಮಯ್ಯ (ಕಾಂಗ್ರೆಸ್), ಸಿ.ಟಿ ರವಿ (ಬಿಜೆಪಿ), ರವಿಕುಮಾರ್ (ಬಿಜೆಪಿ), ವಸಂತ್ ಕುಮಾರ್ (ಕಾಂಗ್ರೆಸ್), ಡಾ.ಚಂದ್ರಶೇಖರ ಪಾಟೀಲ್ (ಕಾಂಗ್ರೆಸ್ ಪದವೀಧರ ಕ್ಷೇತ್ರ) ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಇನ್ನೂ ಜಯದೇವ್ ಗುತ್ತೇದಾರ್ (ಕಾಂಗ್ರೆಸ್) ಬುದ್ದ, ಬಸವ, ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಬಲ್ಕಿಸ್ ಬಾನು (ಕಾಂಗ್ರೆಸ್) ಅಲ್ಲಾ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

    ಸಿಎಂ ಕಾಲಿಗೆ ಬಿದ್ದ ಸಿ.ಟಿ ರವಿ:
    ಇನ್ನೂ ಸಮಾರಂಭದಲ್ಲಿ, ಪರಿಷತ್ ನೂತನ ಸದಸ್ಯನಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಟಿ ರವಿ ಬಳಿಕ ಸಿಎಂ ಕಾಲಿಗೆ ನಮಸ್ಕರಿಸಿದರು. ಇದೇ ವೇಳೆ ನಗುಮೊಗದಿಂದಲೇ ಸಿ.ಟಿ ರವಿ ಬೆನ್ನು ತಟ್ಟಿ, ಕಿವಿ ಹಿಂಡಿ ಬೀಳ್ಕೊಟ್ಟರು. ಸಿ.ಟಿ ರವಿ ಪ್ರತಿಜ್ಞಾವಿಧಿ ಸ್ವೀಕಾರದ ವೇಳೆ ಅಭಿಮಾನಿಗಳು ಶಿಳ್ಳೆ ಚಪ್ಪಾಳೆ ಮಳೆಗರೆದರು. `ಜೈ ಶ್ರೀರಾಮ್’ ಘೋಷಣೆ ಕೂಗಿದರು. ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಕೇಸ್‌ – ಪ್ರತ್ಯೇಕ ತನಿಖೆ ಆರಂಭಿಸಿದ ED

  • ಕೆಡಿಪಿ ಸಭೆಯಲ್ಲಿ ಭರ್ಜರಿ ನಿದ್ದೆ ಮಾಡಿದ ಎಂಎಲ್‌ಸಿ ವಸಂತ ಕುಮಾರ್‌

    ಕೆಡಿಪಿ ಸಭೆಯಲ್ಲಿ ಭರ್ಜರಿ ನಿದ್ದೆ ಮಾಡಿದ ಎಂಎಲ್‌ಸಿ ವಸಂತ ಕುಮಾರ್‌

    ರಾಯಚೂರು: ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ನೂತನ ವಿಧಾನಪರಿಷತ್ ಸದಸ್ಯ ವಸಂತ್ ಕುಮಾರ್ (Vasanath Kumar) ಭರ್ಜರಿ ನಿದ್ದೆ ಮಾಡಿ ಸುದ್ದಿಯಾಗಿದ್ದಾರೆ.

    ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್‌ ಪಾಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಅಧಿಕಾರಿಗಳ ಸಭೆಯಲ್ಲಿ ಮುಂದಿನ ಸಾಲಿನಲ್ಲೇ ಕುಳಿತಿದ್ದ ನೂತನ ಕಾಂಗ್ರೆಸ್‌ ಪರಿಷತ್‌ ಸದಸ್ಯ (Congress MLC) ಎ.ವಸಂತ ಕುಮಾರ್ ಕೆಲಕಾಲ ನಿದ್ದೆಗೆ ಜಾರಿದ್ದರು. ಇದನ್ನೂ ಓದಿ: ದರ್ಶನ್ ಕೊಲೆ ಮಾಡೋ ವ್ಯಕ್ತಿ ಅಲ್ಲ : ಮದ್ದೂರು ಎಂಎಲ್‌ಎ ಉದಯ್‌ ಗೌಡ ಸರ್ಟಿಫಿಕೇಟ್‌

     

    ಕುಡಿಯುವ ನೀರಿನ ಸಮಸ್ಯೆ, ಅತಿವೃಷ್ಟಿ, ಬೀಜ ಮತ್ತು ರಸಗೊಬ್ಬರ ದಾಸ್ತಾನು ಬೇಡಿಕೆ ಪೂರೈಕೆ ಕುರಿತು ಬಿಸಿ ಬಿಸಿ ಚರ್ಚೆ ನಡೆಯುತ್ತಿರುವಾಗ ಎ.ವಸಂತ ಕುಮಾರ್‌ ಸಭೆಯನ್ನೇ ಮರೆತುಬಿಟ್ಟು ಸಭೆಯಲ್ಲಿ ನಿದ್ದೆ ಮಾಡಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ದರ್ಶನ್ ಅಭಿಮಾನಿ – ಮಹಿಳೆ ವಿರುದ್ಧ ಮಂಡ್ಯದಲ್ಲಿ ದೂರು!

    ಸಭೆಯಲ್ಲಿ ಶಾಸಕರಾದ ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ, ಡಾ.ಶಿವರಾಜ್ ಪಾಟೀಲ್, ಹಂಪಯ್ಯ ನಾಯಕ್, ಸಂಸದ ಜಿ.ಕುಮಾರ್ ನಾಯಕ್ ಸೇರಿ ಹಲವರು ಭಾಗವಹಿಸಿದ್ದರು.

    ಬಿತ್ತನೆ ಬೀಜ, ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

     

  • ಡಾ. ಯತೀಂದ್ರಗೆ ಎಂಎಲ್‍ಸಿ ಟಿಕೆಟ್ ಫಿಕ್ಸ್

    ಡಾ. ಯತೀಂದ್ರಗೆ ಎಂಎಲ್‍ಸಿ ಟಿಕೆಟ್ ಫಿಕ್ಸ್

    ಮೈಸೂರು: ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರಗೆ (Dr.Yathindra Siddaramaiah) ಎಂಎಲ್‍ಸಿ ಟಿಕೆಟ್ ಸಿಗೋದು ಫಿಕ್ಸ್ ಆಗಿದೆ. ಈ ವಿಚಾರವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.

    ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೆಗೌಡ ಪರ ಪ್ರಚಾರಕ್ಕೆ ಯತೀಂದ್ರ ಅವರು ಟಿ ನರಸೀಪುರಕ್ಕೆ ಆಗಮಿಸಿದ್ದರು. ಈ ವೇಳೆ ಶಾಲೆಗೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಶಿಕ್ಷಕಿ ಮನವಿ ಮಾಡಿಕೊಂಡರು.

    ಈ ವೇಳೆ ನಾನು ಎಂಎಲ್ ಸಿ ಆಗಿ ಶಾಸಕನಾಗ್ತೀನಿ. ಶಾಸಕರ ಅನುದಾನದಲ್ಲಿ ಹಣ ಹಾಕುತ್ತೇನೆ. ನಮ್ಮ ತಂದೆಯವರ ಕ್ಷೇತ್ರಕ್ಕೆ ಶಾಲೆ ಬರೋ ಕಾರಣ ಅವರ ಬಳಿ ಮಾತನಾಡಿ ಅವರಿಂದಲೂ ಅನುದಾನ ಕೊಡಿಸ್ತೇನೆ ಎಂದು ಯತೀಂದ್ರ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಮೂಲಕ ಯತೀಂದ್ರ ತಾವು ಎಂಎಲ್ ಸಿ ಆಗೋದರ ಬಗ್ಗೆ ಸುಳಿವು ನೀಡಿದರು. ಇದನ್ನೂ ಓದಿ: ಶನಿವಾರ 57 ಸ್ಥಾನಗಳಿಗೆ ಕೊನೇ ಹಂತದ ಚುನಾವಣೆ – ಕಣದಲ್ಲಿರುವ ಘಟಾನುಘಟಿಗಳು ಯಾರು?

  • ಚುನಾವಣೆ ಸಮಯದಲ್ಲಿ ಬಿಜೆಪಿಗೆ ಶಾಕ್- ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ.ನಂಜುಂಡಿ ರಾಜೀನಾಮೆ

    ಚುನಾವಣೆ ಸಮಯದಲ್ಲಿ ಬಿಜೆಪಿಗೆ ಶಾಕ್- ವಿಧಾನ ಪರಿಷತ್ ಸ್ಥಾನಕ್ಕೆ ಕೆ.ಪಿ.ನಂಜುಂಡಿ ರಾಜೀನಾಮೆ

    – ಬುಧವಾರ ಕಾಂಗ್ರೆಸ್ ಸೇರ್ಪಡೆ

    ಹುಬ್ಬಳ್ಳಿ: ಚುನಾವಣೆಯ ಸಮಯದಲ್ಲಿ ಬಿಜೆಪಿಗೆ (BJP) ಮತ್ತೊಂದು ಆಘಾತ ಎದುರಾಗಿದ್ದು, ವಿಧಾನ ಪರಿಷತ್ ಸ್ಥಾನಕ್ಕೆ (MLC) ಕೆ.ಪಿ.ನಂಜುಂಡಿ (KP Nanjundi) ರಾಜೀನಾಮೆ ನೀಡಿದ್ದಾರೆ.

    ಬಿಜೆಪಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕೆ.ಪಿ.ನಂಜುಂಡಿ ಸಭಾಪತಿ ಬಸವರಾಜ ಹೊರಟ್ಟಿಯವರ ಹುಬ್ಬಳ್ಳಿಯ ಗೃಹ ಕಚೇರಿಗೆ ತೆರಳಿ ರಾಜೀನಾಮೆ (Resignation) ನೀಡಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಅಂಗೀಕಾರ ಮಾಡಿದ್ದು, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿರುವುದಾಗಿ ನಂಜುಂಡಿ ಹೇಳಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ.ಪಿ.ನಂಜುಂಡಿ ವಿಶ್ವಕರ್ಮ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಇದನ್ನೂ ಓದಿ: ರಾಜ್ಯ ಕ್ಯಾಂಪೇನ್‍ಗೆ ಪ್ರಿಯಾಂಕಾ ಗಾಂಧಿ- ಬೆಂಗಳೂರು, ಚಿತ್ರದುರ್ಗದಲ್ಲಿ ಪ್ರಚಾರ

    ರಾಜೀನಾಮೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಂಜುಂಡಿ, ಬಿಜೆಪಿ ಕಾರ್ಯಕರ್ತರಿಗೆ, ಪಕ್ಷದ ಮುಖಂಡರಿಗೆ ಧನ್ಯವಾದ ತಿಳಿಸುವೆ. ರಾಜಕೀಯ ನನ್ನ ವೃತ್ತಿ ಅಲ್ಲಾ. ನನ್ನ ಸಮಾಜದ ಉಳಿವಿಗಾಗಿ ನಾನು ರಾಜಕೀಯಕ್ಕೆ ಬಂದಿದ್ದೆ. ಹಿಂದುಳಿದ ವರ್ಗಗಳ ಧ್ವನಿಯಾಗಿ ನನ್ನನ್ನು ಬಳಸಿಕೊಳ್ಳುತ್ತಾರೆ ಎಂದು ಬಿಜೆಪಿ ಸೇರಿದ್ದೆ. ಬರೀ ಎಂಎಲ್‌ಸಿ ಮಾಡಿದರೆ ನಮ್ಮ ಸಮಾಜ ಉದ್ಧಾರ ಆಗಲ್ಲ. ನಮ್ಮ ಸಮಾಜಕ್ಕೆ ಏನೂ ಮಾಡಿಲ್ಲ. ಎಂಎಲ್‌ಸಿ ಎನ್ನುವುದು ಗೌರವ ಅಧಿಕಾರ ಅಲ್ಲಾ. ಎಂಎಲ್‌ಸಿ ಮಾಡಿದರೆ ಸಮಾಜಕ್ಕೆ ಎಲ್ಲಾ ಸಿಗುತ್ತೆ ಎನ್ನುವುದು ತಪ್ಪು. ನಾನು ಮೋದಿ ಬಗ್ಗೆ, ಪಕ್ಷದ ಬಗ್ಗೆ ಏನೂ ಮಾತನಾಡಲ್ಲ. ಆದರೆ ಪಕ್ಷದಲ್ಲಿ ನನ್ನನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಬರಪರಿಹಾರ ಬಿಡುಗಡೆ – ಇಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಪ್ರತಿಭಟನೆ

    ಬಿಜೆಪಿ ಅಧಿಕಾರದಲ್ಲಿದ್ದಾಗ ನನಗೆ ಸಚಿವ ಸ್ಥಾನ ನೀಡಬೇಕಿತ್ತು. ನನಗೆ ಅರ್ಹತೆ ಇತ್ತು. ನಾಳೆ (ಬುಧವಾರ) ಬೆಳಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯ ನಡೆಯಲಿದೆ. ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆ ಆಗುವೆ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಮಧ್ಯರಾತ್ರಿ ವಿಶ್ವವಿಖ್ಯಾತ ಐತಿಹಾಸಿಕ ಕರಗೋತ್ಸವಕ್ಕೆ ವಿದ್ಯುಕ್ತ ಚಾಲನೆ

  • ಸೂರಜ್ ರೇವಣ್ಣಗೆ ಬಿಗ್ ರಿಲೀಫ್ – ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ

    ಸೂರಜ್ ರೇವಣ್ಣಗೆ ಬಿಗ್ ರಿಲೀಫ್ – ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾ

    ನವದೆಹಲಿ: ಎಂಎಲ್‌ಸಿ (MLC) ಸೂರಜ್ ರೇವಣ್ಣಗೆ (Suraj Revanna) ಬಿಗ್ ರಿಲೀಫ್ ದೊರೆತಿದ್ದು, ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ.

    ದೂರುದಾರ ವಕೀಲ ದೇವರಾಜೇಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಇದನ್ನೂ ಓದಿ: ಅಮಿತ್ ಶಾ ಭೇಟಿಯಾದ ಸಿಎಂ – ಬರ ಪರಿಹಾರ ಬಿಡುಗಡೆಗೆ ಆಗ್ರಹ

    ಲೋಕಸಭೆ ಚುನಾವಣೆಯಲ್ಲಿ ಅಕ್ರಮ ನಡೆಸಿದ್ದ ಆರೋಪದಡಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಾಗಿತ್ತು. ಚುನಾವಣಾ ಅಕ್ರಮದ ಕಾರಣಕ್ಕೆ ಸೂರಜ್ ರೇವಣ್ಣ ಅವರನ್ನು ಎಂಎಲ್‌ಸಿ ಸ್ಥಾನದಿಂದ ವಜಾಗೊಳಿಸಲು ಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿತ್ತು. ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠದಿಂದ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: ಇಲ್ಲಿಯವರೆಗೆ ಸಿಕ್ಕಿರಲಿಲ್ಲ, ಮೋದಿಗೆ ಖರ್ಗೆ ಮ್ಯಾಚ್‌ ಆಗಬಲ್ಲ ನಾಯಕ – ಸತೀಶ್‌ ಜಾರಕಿಹೊಳಿ

  • ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡ್ತೀನಿ: ಈಶ್ವರಪ್ಪಗೆ ಬಿಜೆಪಿ MLC ಆಯನೂರು ಮಂಜುನಾಥ್‌ ಸವಾಲ್‌

    ರಾಜೀನಾಮೆ ಕೊಟ್ಟು ಸ್ಪರ್ಧೆ ಮಾಡ್ತೀನಿ: ಈಶ್ವರಪ್ಪಗೆ ಬಿಜೆಪಿ MLC ಆಯನೂರು ಮಂಜುನಾಥ್‌ ಸವಾಲ್‌

    ಶಿವಮೊಗ್ಗ: ಚುನಾವಣೆ ಹೊತ್ತಲ್ಲೇ ಬಿಜೆಪಿಗೆ (BJP) ಮತ್ತೊಂದು ಶಾಕ್‌ ಎದುರಾಗಿದೆ. ಆಯನೂರು ಮಂಜುನಾಥ್ (Ayanur Manjunath) ಅವರು ವಿಧಾನ ಪರಿಷತ್ ಸದಸ್ಯ (MLC) ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು.

    ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಆಯನೂರು ಮಂಜುನಾಥ್, ಸದ್ಯದಲ್ಲಿಯೇ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಿಧಾನಸಭಾ ಚುನಾವಣೆಯಲ್ಲಿ (Assembly Election) ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.

    ಶಿವಮೊಗ್ಗ (Shivamogga) ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಛೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟ ಮಾಡಿದ್ದೇನೆ. ಪಕ್ಷದ ವೇದಿಕೆಯಲ್ಲೂ ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೆಟ್ ಸಿಗುವ ಲಕ್ಷಣ ಕಂಡುಬಂದಿಲ್ಲ. ಅವರವರ ಮಕ್ಕಳ ಹೆಸರು ಓಡಾಡುತ್ತಿದೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ನನ್ನ ಬಗ್ಗೆ ಯಕಶ್ಚಿತ್ ಮಾತನಾಡಿದ ಈಶ್ವರಪ್ಪ, ಅವರಾಗಲಿ, ಅವರ ಮಗನಾಗಲಿ ಸ್ಪರ್ಧೆ ಮಾಡಲಿ. ಈ ಬಾರಿ ಅವರು ಚುನಾವಣಾ ಅಖಾಡಕ್ಕೆ ಬರಬೇಕು ಎಂದು ಸವಾಲು ಹಾಕಿದರು.

    ನಿಮಗೆ ಅಷ್ಟೊಂದು ಪ್ರಭಾವ ಇದ್ದರೆ ನಿಮ್ಮ ಮಗನನ್ನು ನಿಲ್ಲಿಸಿಕೊಂಡು ಗೆಲ್ಲಿಸಿ ನಿಮ್ಮ ಪ್ರಭಾವ ತೋರಿಸಿ. ಎಲ್ಲಿಯೂ ನೀವು ಗೌರವದಿಂದ ನಡೆದುಕೊಂಡಿಲ್ಲ. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು, ಹಾಗಾಗಿ ಪಾಪ ಶಾಸಕ ಸ್ಥಾನಕ್ಕೆ ಸ್ಪರ್ಧಿಸಲ್ಲ ನೀವು. ಅಧಿಕಾರದ ಹಪಾಹಪಿ ಇದೆ ನಿಮಗೆ. ಮಂತ್ರಿ ಸ್ಥಾನಕ್ಕಾಗಿ ಸದನಕ್ಕೆ ಹೋಗಲಿಲ್ಲ. ಜಿಲ್ಲಾ ಮಂತ್ರಿಯಾಗಿದ್ದವರು ನೀವು ಅದಕ್ಕೆ ತಕ್ಕ ಗೌರವ ಉಳಿಸಿಕೊಂಡಿದ್ದೀರಾ ಎಂದು ಈಶ್ವರಪ್ಪ ವಿರುದ್ಧ ಕಿಡಿಕಾರಿದರು.

    ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಜಿಲ್ಲೆಗೆ ಬಂದಾಗ ಸ್ವಾಗತ ಮಾಡಿದ್ದೀರಾ? ಯಡಿಯೂರಪ್ಪ ಅವರಿಗೆ ಸದಾ ಅಪಮಾನ ಮಾಡಿದ್ದೀರಾ. ತಾವು ಅರ್ಹತೆ ಕಳೆದುಕೊಂಡಿದ್ದೀರಾ. ತಮಗೆ ಅರ್ಹತೆ, ಶಕ್ತಿ ಇದ್ದರೆ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಿ. ನಿಮ್ಮ ಗೋಡೌನ್‍ನಲ್ಲಿರುವ ಎಣಿಕೆ ಮೆಷಿನ್ ಸೀಜ್ ಆಗಿದ್ದರೆ ಹೊಸ ಮೆಷಿನ್ ತರಿಸಿಕೊಳ್ಳಿ. ಕಾರ್ಪೋರೇಟರ್‌ಗಳು ನಿಮ್ಮ ಕುಟುಂಬದ ಹಿಡಿತದಲ್ಲಿ ನರಳುತ್ತಿದ್ದಾರೆ. ಕಾರ್ಯಕರ್ತರು ನೀವೊಬ್ಬರಾದರೂ ಅವರ ವಿರುದ್ಧ ಧ್ವನಿ ಎತ್ತಿದ್ದೀರಾ, ನೀವು ಸ್ಪರ್ಧೆ ಮಾಡಿ ನಾವು ನಿಮ್ಮ ಜೊತೆ ಇರ್ತೀವಿ ಅಂದಿದ್ದಾರೆ ಎಂದರು. ಇದನ್ನೂ ಓದಿ: ಶಾಸಕರ ಪುತ್ರನ ಕಾರನ್ನು ತಪಾಸಣೆ ಮಾಡದೆ ಬಿಟ್ಟು ಕಳಿಸಿದ ಚೆಕ್ ಪೋಸ್ಟ್ ಸಿಬ್ಬಂದಿ

    ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ, ಇಷ್ಟೊಂದು ಸೀರೆ ತರಿಸುವಂತಹ ವ್ಯಾಪಾರಿ ಶಿವಮೊಗ್ಗದಲ್ಲಿ ಯಾರು ಇಲ್ಲ. ಈಗಾಗಲೇ ವಾರ್ಡ್‍ಗಳಲ್ಲಿ ಹಣ ಡಿಪಾಸಿಟ್ ಮಾಡಿದ್ದಾರೆ. ಶಿವಮೊಗ್ಗದಲ್ಲಿ ಅಭಿವೃದ್ಧಿ ಆಗಿರೋದು ಯಡಿಯೂರಪ್ಪ, ರಾಘವೇಂದ್ರ ಅವರಿಂದ. ನೀವೇನು ಮಾಡಿದ್ದೀರಾ ಹೇಳಿ, 32 ವರ್ಷದ ರಾಜಕಾರಣದಲ್ಲಿ ನೀವು ಮಾಡಿದ್ದು ಏನಿಲ್ಲ. ನೀವು ಪ್ರಚೋದನೆಯಿಂದ ಮಾತನಾಡಿದ್ದು ಅಷ್ಟೇ. ಈ ಬಾರಿ ಇಂತಹ ಶೈಲಿ ನಡೆಯಲು ಬಿಡುವುದಿಲ್ಲ. ನೀವು ಶಾಸಕರಾಗಿದ್ದಾಗ ಕ್ಷೇತ್ರದ ಜನರ ಬಗ್ಗೆ ಮಾತನಾಡಿದ್ದು ಇದ್ದರೆ ತೋರಿಸಿ. ಕ್ಷೇತ್ರದಲ್ಲಿ ಸಂಘಟನೆ ಪ್ರಬಲವಾಗಿದೆ. ಕಾರ್ಯಕರ್ತರ ಹೆಗಲ ಮೇಲೆ ಕೈಯಿಟ್ಟು ಅಧಿಕಾರ ಮಾಡಿದ್ದೀರಾ. ನಾನು ಅಖಾಡಕ್ಕೆ ಸಿದ್ಧನಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳಾ ಟೆಕ್ಕಿ ದುರ್ಮರಣ

  • ಎಂಎಲ್‍ಸಿ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ -ಸಾರ್ವಜನಿಕರಿಗೆ ಹಂಚಲು ತಂದಿದ್ದ ಸೀರೆಗಳು ಪತ್ತೆ

    ಎಂಎಲ್‍ಸಿ ಆರ್.ಶಂಕರ್ ಮನೆ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ -ಸಾರ್ವಜನಿಕರಿಗೆ ಹಂಚಲು ತಂದಿದ್ದ ಸೀರೆಗಳು ಪತ್ತೆ

    ಹಾವೇರಿ: ವಿಧಾನಪರಿಷತ್ ಸದಸ್ಯ (MLC) ಆರ್.ಶಂಕರ್ ಅವರ ರಾಣೇಬೆನ್ನೂರಿನ (Ranebennur) ಬೀರಲಿಂಗೇಶ್ವರ ನಗರದ ಮನೆ ಮೇಲೆ ಮಂಗಳವಾರ ತಡರಾತ್ರಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು (Commercial Tax Department Officers) ದಾಳಿ ನಡೆಸಿದ್ದಾರೆ.

    ದಾಳಿಯ ವೇಳೆ ಗೃಹ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಗೆ ಹಂಚಲು ತಂದಿದ್ದ ವಸ್ತುಗಳು ಪತ್ತೆಯಾಗಿವೆ. ಶಂಕರ್ ಅವರ ಚಿತ್ರ ಇರುವ ಸೀರೆ ಬಾಕ್ಸ್, ತಟ್ಟೆ, ಲೋಟಾ, ಶಾಲಾ ಹಾಗೂ ಪದವಿ ಕಾಲೇಜು (College) ಮಕ್ಕಳಿಗೆ ಹಂಚಲು ತಂದಿದ್ದ ಸ್ಕೂಲ್ ಬ್ಯಾಗ್‍ಗಳನ್ನು (School bag) ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದನ್ನೂ ಓದಿ: ಸಹಜ ಸ್ಥಿತಿಗೆ ಮರಳಿದ ದಶಪಥ ಹೈವೇ ಟೋಲ್

    ಹಾವೇರಿ ಉಪವಿಭಾಗಧಿಕಾರಿ ದಾಖಲೆ ಪತ್ರ, ಬಿಲ್ ಮತ್ತು ಸ್ಟಾಕ್ ಚೆಕ್‍ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಶಂಕರ್, ಯಾರದ್ದೋ ಕುಮ್ಮಕ್ಕಿನಿಂದ ಈ ದಾಳಿ ನಡೆದಿದೆ. ನಾನು ದುಡಿದ ಹಣವನ್ನು ಸಮಾಜ ಸೇವೆಗೆ (Social service) ಬಳಕೆ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಗುರುವಾರ ರಾಜ್ಯಾದ್ಯಂತ 60 ಸಾವಿರ KPTCL ನೌಕರರಿಂದ ಮುಷ್ಕರ

  • ಟಿಕೆಟ್ ಸಿಗದ ನಿಷ್ಠರಿಗೆ MLC ನಿಗಮ ಮಂಡಳಿ ಸ್ಥಾನ: ಡಿ.ಕೆ ಶಿವಕುಮಾರ್

    ಟಿಕೆಟ್ ಸಿಗದ ನಿಷ್ಠರಿಗೆ MLC ನಿಗಮ ಮಂಡಳಿ ಸ್ಥಾನ: ಡಿ.ಕೆ ಶಿವಕುಮಾರ್

    ಬೆಂಗಳೂರು: ಟಿಕೆಟ್ ಸಿಗದ ನಿಷ್ಠಾವಂತರಿಗೆ ವಿಧಾನ ಪರಿಷತ್ ಸ್ಥಾನ, ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ಕೊಡುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ತಿಳಿಸಿದ್ದಾರೆ.

    ಬೆಳಗಾವಿಯಲ್ಲಿ ಟಿಕೆಟ್‍ಗಾಗಿ ಸಿದ್ದರಾಮಯ್ಯ (Siddaramaiah) ಮುಂದೆ ಗಲಾಟೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಪಕ್ಷದಲ್ಲಿ ಎಲ್ಲಾ ಕಡೆ ಆಕಾಂಕ್ಷಿಗಳು ಇದ್ದಾರೆ. 1,200 ಜನ ಟಿಕೆಟ್‍ಗೆ ಅರ್ಜಿ ಹಾಕಿದ್ದಾರೆ. ಟಿಕೆಟ್ ಕೇಳೋದ್ರಲ್ಲಿ ತಪ್ಪೇನೂ ಇಲ್ಲ. ಯಾರಿಗೆ ಟಿಕೆಟ್ ಕೊಡಬೇಕು ಅಂತ ಪಾರ್ಟಿ ತೀರ್ಮಾನ ಮಾಡುತ್ತೆ ಎಂದರು.

    ಮಾರ್ಚ್ 7, 8ಕ್ಕೆ ಸ್ಕ್ರಿನಿಂಗ್ ಕಮಿಟಿ ಸಭೆ ಇದೆ. ಈಗಾಗಲೇ ಅನೇಕ ಬಾರಿ ಚರ್ಚೆ ಆಗಿದೆ. ಸಹಜವಾಗಿ ಆಕ್ರೋಶದಿಂದ ಗಲಾಟೆ ಮಾಡ್ತಾರೆ. ಎಲ್ಲರೂ ಒಟ್ಟಾಗಿ ಒಗ್ಗಟ್ಟಾಗಿ ಚುನಾವಣೆ ಮಾಡ್ತೀವಿ. ಯಾವ ಗಲಾಟೆಗೂ ಅವಕಾಶ ಕೊಡೊದಿಲ್ಲ ಅಂತ ತಿಳಿಸಿದರು. ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಕ್ಸಮರ – ದಂಗಾದ ಸುಧಾಕರ್

    ಟಿಕೆಟ್ (Election Ticket) ವಿಚಾರವಾಗಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ. ಯಾವುದೇ ಗಲಾಟೆ ಇಲ್ಲ. ಯಾವ ರೀತಿ ಅದನ್ನ ಹ್ಯಾಂಡಲ್ ಮಾಡಬೇಕು ಅದನ್ನ ನಾವು ಮಾಡ್ತೀವಿ. ಪಕ್ಷದಲ್ಲಿ ಶಿಸ್ತು ಮುಖ್ಯ. ಒಂದು ಕ್ಷೇತ್ರಕ್ಕೆ ಒಂದೇ ಟಿಕೆಟ್ ಕೊಡೊಕೆ ಸಾಧ್ಯ. ಎರಡು, ಮೂರು ಟಿಕೆಟ್ ಕೊಡೋಕೆ ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: ಸಚಿವ ಅಶ್ವಥ್ ನಾರಾಯಣ್, ಸಂಸದ ಡಿ.ಕೆ.ಸುರೇಶ್ ಏಕವಚನದಲ್ಲೇ ವಾಕ್ಸಮರ – ದಂಗಾದ ಸುಧಾಕರ್

    ಕಾಂಗ್ರೆಸ್ (Congress) ಸರ್ಕಾರ ಗ್ಯಾರಂಟಿ ಬಂದೇ ಬರುತ್ತದೆ. ಟಿಕೆಟ್ ವಂಚಿತರಿಗೆ ನಿಗಮ ಮಂಡಳಿ ಅಧ್ಯಕ್ಷರು, ಎಂಎಲ್‍ಸಿ ಮಾಡ್ತೀವಿ. ಎಲ್ಲಾ ಪಕ್ಷದಲ್ಲಿ ಮಾಡಿದ ಹಾಗೆ ನಮ್ಮ ಪಕ್ಷದಲ್ಲೂ ಮಾಡ್ತೀವಿ. 20 ಜನರನ್ನ ಎಂಎಲ್‍ಸಿ ಮಾಡಬಹುದು, 150 ಬೋರ್ಡ್ ಛೇರ್ಮನ್ ಮಾಡಲು ಅವಕಾಶ ಇದೆ. ಯಾರಿಗೆ ಟಿಕೆಟ್ ಸಿಗೊಲ್ಲವೋ ಅವರಿಗೆ ಅಲ್ಲಿ ಸ್ಥಾನ ಕೊಡ್ತೀವಿ. ಪ್ರಾಮಾಣಿವಾಗಿ ಕೆಲಸ ಮಾಡೋರಿಗೆ, ಪಕ್ಷದ ಕೆಲಸ ಮಾಡೋರಿಗೆ, ಶಿಸ್ತಿನಿಂದ ದುಡಿಯೋರಿಗೆ ಕೊಡ್ತೀವಿ ಎಂದರು.

    ಟಿಕೆಟ್ ಆಕಾಂಕ್ಷಿಗಳ ಜೊತೆ ಒನ್ ಟು ಒನ್ ಮಾತಾಡುತ್ತಿದ್ದೇವೆ. ಈಗಾಗಲೇ ಮಾತುಕತೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಮಾತಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ನಾಯಕರು ಮಾತಾಡ್ತಾರೆ. ಸಂಧಾನ ಸಭೆಗಳನ್ನು ಮಾಡ್ತಿದ್ದೇವೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ತಿದ್ದೇವೆ. ಎಲ್ಲರು ಒಟ್ಟು ಸೇರಿದ್ರೆ ಒಳ್ಳೆ ರಿಸಲ್ಟ್ ಬರುತ್ತದೆ ಎಂದು ತಿಳಿಸಿದರು.

  • ಅಪಘಾತವಾದ್ರೂ ಆಸ್ಪತ್ರೆಗೆ ಸೇರಿಸಲು ಹಿಂದೇಟು – ನಿನ್ಯಾವ ಸೀಮೆ MLC ಎಂದು ರವಿಕುಮಾರ್‌ಗೆ ಕ್ಲಾಸ್

    ಅಪಘಾತವಾದ್ರೂ ಆಸ್ಪತ್ರೆಗೆ ಸೇರಿಸಲು ಹಿಂದೇಟು – ನಿನ್ಯಾವ ಸೀಮೆ MLC ಎಂದು ರವಿಕುಮಾರ್‌ಗೆ ಕ್ಲಾಸ್

    ಕೋಲಾರ: ವಿಧಾನ ಪರಿಷತ್ ಸದಸ್ಯ (MLC) ಹಾಗೂ ಬಿಜೆಪಿ (BJP) ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರವಿಕುಮಾರ್ (Ravikumar) ಅವರ ಕಾರು ಬೈಕ್‌ವೊಂದಕ್ಕೆ ಡಿಕ್ಕಿ ಹೊಡೆದಿರುವ ಘಟನೆ ಕೋಲಾರದ (Kolar) ತಾಲ್ಲೂಕಿನ ಲಕ್ಷ್ಮೀ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ-75 (National Highway) ರಲ್ಲಿ ನಡೆದಿದೆ.

    ಘಟನೆಯಲ್ಲಿ ಹೊಸಕೋಟೆ ತಾಲ್ಲೂಕಿನ ಗೋಪಾಲ್(45) ಗಾಯಗೊಂಡಿದ್ದಾರೆ. ಆದ್ರೆ, ಗಾಯಳುವನ್ನು ಆಸ್ಪತ್ರೆಗೆ ಸೇರಿಸಲು ಹಿಂದೇಟು ಹಾಕಿದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಎಂಎಲ್‌ಸಿ ರವಿಕುಮಾರ್‌ಗೆ ಫುಲ್‌ಕ್ಲಾಸ್ ತೆಗೆದುಕೊಂಡಿದ್ದಾರೆ. ನೀನ್ಯಾವ ಸೀಮೆ ಎಂಎಲ್‌ಸಿ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ: ರೂಪೇಶ್ ಶೆಟ್ಟಿ ಮನೆಯಿಂದ ಮದುವೆ ಪ್ರಪೋಸಲ್ ಬಂದರೆ ಸಾನ್ಯ ಉತ್ತರವೇನು?

    ಹೊಸಕೋಟೆ ತಾಲ್ಲೂಕಿನ ಶಿವನಾಪುರ ಗ್ರಾಮದ ಗೋಪಾಲ್, ಬೈಕ್‌ನಲ್ಲಿ ಕೋಲಾರಕ್ಕೆ ತೆರಳುತ್ತಿದ್ದರು. ಅದೇ ಮಾರ್ಗವಾಗಿ ಎಂಎಲ್‌ಸಿ ರವಿಕುಮಾರ್ ಕೋಲಾರಕ್ಕೆ ಆಗಮಿಸುತ್ತಿದ್ದ ವೇಳೆ ಅಪಘಾತ (Road Accident) ಸಂಭವಿಸಿದೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ (Hospital) ಸೇರಿಸಲು ಹಿಂದೇಟು ಹಾಕಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಪರಿಚಿತ ವ್ಯಕ್ತಿ ನೀಡಿದ ಚಾಕ್ಲೆಟ್ ಸೇವಿಸಿ 17 ವಿದ್ಯಾರ್ಥಿಗಳು ಅಸ್ವಸ್ಥ- ಆರೋಪಿಗಾಗಿ ಹುಡುಕಾಟ

    ಸ್ಥಳೀಯರ ಆಕ್ರೋಶ ಕಂಡು ಎಂಎಲ್‌ಸಿ ರವಿಕುಮಾರ್ ದಂಗಾಗಿದ್ದಾರೆ. ನಂತರ ಸ್ಥಳಕ್ಕೆ ವೇಮಗಲ್ ಪೋಲೀಸರು ಭೇಟಿ ನೀಡಿ ಸ್ಥಳೀಯರನ್ನ ಸಮಾಧಾನಪಡಿಸಿದ್ದಾರೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೇಮಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

    Live Tv
    [brid partner=56869869 player=32851 video=960834 autoplay=true]