Tag: MLA’s son

  • ಕಳಪೆ ಕಾಮಗಾರಿ ಪ್ರಶ್ನಿಸಿದ ಜನರಿಗೆ ಶಾಸಕ ಲಮಾಣಿ ಪುತ್ರ ಅವಾಜ್!

    ಕಳಪೆ ಕಾಮಗಾರಿ ಪ್ರಶ್ನಿಸಿದ ಜನರಿಗೆ ಶಾಸಕ ಲಮಾಣಿ ಪುತ್ರ ಅವಾಜ್!

    ಗದಗ: ರಸ್ತೆ ಕಾಮಗಾರಿ ಗುಣಮಟ್ಟ ಕಳಪೆಯಾಗಿದೆ, ಸರಿಪಡಿಸಿ ಎಂದು ಕಾಮಗಾರಿ ತಡೆದ ಸಾರ್ವಜನಿಕರಿಗೆ ಶಾಸಕ ಲಮಾಣಿ ಪುತ್ರ ಲಕ್ಷ್ಮೇಶ್ವರ ಪಟ್ಟಣದಲ್ಲಿ ಅವಾಜ್ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

    ಲಕ್ಷ್ಮೇಶ್ವರ ಪಟ್ಟಣದ ಬಸ್ ನಿಲ್ದಾಣದಿಂದ ಗದಗ ನಾಕಾವರೆಗೆ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಒಳ್ಳೆ ಕಾಮಗಾರಿ ಮಾಡಿ ಎಂದು ಸ್ಥಳಿಯರು ಪ್ರತಿಭಟಿಸಿ ಸ್ಥಗಿತಗೊಳಿಸಿದ್ದರು.

    ಈ ವಿಚಾರ ತಿಳಿದು ಗುತ್ತಿಗೆದಾರರ ಬೆಂಗಾವಲಾಗಿ ಬಂದ ಶಾಸಕರ ಪುತ್ರ ಮಹೇಶ ಲಮಾಣಿ ಜನರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಅಂಬೇಡ್ಕರ್ ಸೇನಾ ಸಮಿತಿಯಿಂದ ಸಾರ್ವಜನಿಕರು ರಸ್ತೆ ತಡೆದು, ಜೆಸಿಬಿ ಅಡ್ಡನಿಲ್ಲಿಸಿ ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿ ಮಹೇಶ ಲಮಾಣಿ ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv