Tag: MLA. Tweet

  • ಮಾಧ್ಯಮದ ಮೇಲೆ ಸಿದ್ದರಾಮಯ್ಯ ಮುನಿಸು

    ಮಾಧ್ಯಮದ ಮೇಲೆ ಸಿದ್ದರಾಮಯ್ಯ ಮುನಿಸು

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ಮಾಧ್ಯಮಗಳ ಮೇಲೆ ಮುನಿಸಿಕೊಂಡಿದ್ದಾರೆ.

    ಸಿದ್ದರಾಮಯ್ಯ ಅವರಿಗೆ ಆಪ್ತರಾಗಿದ್ದ ಶಾಸಕರು ರಾಜೀನಾಮೆ ನೀಡಿ ಶಾಕ್ ನೀಡಿದ್ದಾರೆ ಎಂಬ ಸುದ್ದಿ ಮಾಧ್ಯಮದಲ್ಲಿ ಪ್ರಸಾರವಾಗುತ್ತಿತ್ತು. ಈ ವರದಿಯನ್ನು ನೋಡಿದ ಸಿದ್ದರಾಮಯ್ಯ ಅವರು ಟ್ವೀಟ್ ಮಾಡುವ ಮೂಲಕ ತಮ್ಮ ಮುನಿಸನ್ನು ಹೊರ ಹಾಕಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ರಾಜೀನಾಮೆ ನೀಡಿರುವ ಶಾಸಕರು ಮಾತ್ರವಲ್ಲ, ಕಾಂಗ್ರೆಸ್‍ನ ಎಲ್ಲ 78 ಶಾಸಕರೂ ನನಗೆ ಆಪ್ತರಾಗಿದ್ದಾರೆ. ಅವರು ನಮ್ಮ ಪಕ್ಷದ ಬಹಳಷ್ಟು ನಾಯಕರಿಗೂ ಆಪ್ತರಾಗಿದ್ದಾರೆ. ಮಾಧ್ಯಮಗಳು ಸೆಲೆಕ್ಟಿವ್ ಆಗಿ ಈ ಶಾಸಕರು ನನ್ನ ಆಪ್ತರು ಎಂದು ಹೇಳುತ್ತಿರುವುದು ಸರಿ ಅಲ್ಲ. ಇದರಿಂದ ನನ್ನ ಮನಸ್ಸಿಗೆ ನೋವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

    ರಾಜೀನಾಮೆ ಕೊಟ್ಟ ಕೈ ಶಾಸಕರು:
    * ರಾಮಲಿಂಗಾ ರೆಡ್ಡಿ- ಬಿಟಿಎಂ ಲೇ ಔಟ್
    * ರಮೇಶ್ ಜಾರಕಿಹೊಳಿ- ಗೋಕಾಕ್
    * ಎಸ್.ಟಿ ಸೋಮಶೇಖರ್- ಯಶವಂತಪುರ
    * ಪ್ರತಾಪ್ ಗೌಡ ಪಾಟೀಲ್- ಮಸ್ಕಿ
    * ಬಿ.ಸಿ ಪಾಟೀಲ್- ಹಿರೇಕೆರೂರು
    * ಮಹೇಶ್ ಕುಮಟಳ್ಳಿ- ಅಥಣಿ
    * ಭೈರತಿ ಬಸವರಾಜ್- ಕೆ.ಆರ್ ಪುರಂ
    * ಶಿವರಾಂ ಹೆಬ್ಬಾರ್- ಯಲ್ಲಾಪುರ
    * ಮುನಿರತ್ನ- ರಾಜರಾಜೇಶ್ವರಿ ನಗರ
    * ರೋಷನ್ ಬೇಗ್- ಶಿವಾಜಿನಗರ
    * ಎಂಟಿಬಿ ನಾಗರಾಜ್- ಹೊಸಕೋಟೆ
    * ಸುಧಾಕರ್- ಚಿಕ್ಕಬಳ್ಳಾಪುರ